Uncategorized
ಅ.6: ಮಂಗಳೂರಿನ ಪುರಭವನದಲ್ಲಿ ‘ಲವ್ ಜಿಹಾದ್ ಮತ್ತು ಮತಾಂತರ: ಪ್ರಚಾರ ಮತ್ತು ವಾಸ್ತವ’ ಪುಸ್ತಕ ಬಿಡುಗಡೆ
ಎಂ.ಜಿ. ಹೆಗಡೆ ಅವರು ರಚಿಸಿರುವ ‘ಲವ್ ಜಿಹಾದ್ ಮತ್ತು ಮತಾಂತರ: ಪ್ರಚಾರ ಮತ್ತು ವಾಸ್ತವ’ ಪುಸ್ತಕ ಅ.6ರಂದು ಮಂಗಳೂರಿನ ಪುರಭವನದಲ್ಲಿ ಬಿಡುಗಡೆಯಾಗಲಿದೆ. ಸಂಜೆ 3.30ಕ್ಕೆ ದಾಖಲೆಗಳ ಪ್ರದರ್ಶನ ಉದ್ಘಾಟನೆಯಾಗಲಿದ್ದು, ಸಂಜೆ 5.30ಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಮಂಗಳೂರು: ಎಂ.ಜಿ. ಹೆಗಡೆ ಅವರು ರಚಿಸಿರುವ ‘ಲವ್ ಜಿಹಾದ್ ಮತ್ತು ಮತಾಂತರ: ಪ್ರಚಾರ ಮತ್ತು ವಾಸ್ತವ’ ಪುಸ್ತಕ ಅ.6ರಂದು ಮಂಗಳೂರಿನ ಪುರಭವನದಲ್ಲಿ ಬಿಡುಗಡೆಯಾಗಲಿದೆ.
14 ಜಿಲ್ಲೆಗಳ 350 ಪೊಲೀಸ್ ಠಾಣೆಗಳು ಹಾಗೂ ಗೃಹ ಇಲಾಖೆಯಿಂದ RTI ಮೂಲಕ ಪಡೆದ ದಾಖಲೆಗಳನ್ನು ಒಳಗೊಂಡಿರುವ ಈ ಕೃತಿಯ ಬಿಡುಗಡೆ ಕಾರ್ಯಕ್ರಮದ ಜೊತೆಗೆ ದಾಖಲೆಗಳ ಪ್ರದರ್ಶನವೂ ನಡೆಯಲಿದೆ.
ಅ.6ರಂದು ಸಂಜೆ 3.30ಕ್ಕೆ ದಾಖಲೆಗಳ ಪ್ರದರ್ಶನ ಉದ್ಘಾಟನೆಯಾಗಲಿದ್ದು, ಸಂಜೆ 5.30ಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಸಂಜೆ 3.30ಕ್ಕೆ ‘ಶರ ಸೇತು ಬಂಧನ’ ತಾಳಮದ್ದಳೆ ನಡೆಯಲಿದೆ. ಕವಿ ಹಟ್ಟಿಯಂಗಡಿ ರಾಮಭಟ್ಟ ಅವರ ಕೃತಿಗೆ ಬಲಿಪ ಶಿವಶಂಕರ ಭಟ್ಟ ಅವರು ಭಾಗವತರಾಗಿ, ಕಾರ್ಕಳದ ರವಿರಾಜ್ ಜೈನ್ ಮದ್ದಳೆ ವಾದಕರಾಗಿ ಹಾಗೂ ಬೆಳುವಾಯಿಯ ಎಂ. ದೇವಾನಂದ ಭಟ್ಟ ಚೆಂಡೆ ವಾದಕರಾಗಿ ಭಾಗವಹಿಸಲಿದ್ದಾರೆ.
Uncategorized
Dharmasthala-28ನೇ ವರ್ಷದ ಭಜನಾ ಕಮ್ಮಟದ ಉಪನ್ಯಾಸ ಕಾರ್ಯಕ್ರಮ: ಸಾಮರಸ್ಯದ ಸಂಕೇತವೇ ಈ ಭಜನೆ : ಪ್ರೊ. ಪವನ್ ಕಿರಣಕೆರೆ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅ.02, ಶುಕ್ರವಾರದಂದು ನಡೆದ 28ನೇ ವರ್ಷದ ಭಜನಾ ಕಮ್ಮಟದ ಐದನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕ ನೆಲೆಯಲ್ಲಿ ಆಸೆಮ್ಸ್ ಶಿಕ್ಷಣ ಸಂಸ್ಥೆ ಕಲ್ಮಾಡಿ, ಉಡುಪಿ ಇಲ್ಲಿನ ಪ್ರಾಂಶುಪಾಲ ಪ್ರೊ. ಪವನ್ ಕಿರಣಕೆರೆ ಮಾತನಾಡಿದರು.

ಧರ್ಮಸ್ಥಳ, ಅ.02 : ಯಾವುದೇ ಮತ ಪಂಥಗಳ ತಾರತಮ್ಯವಿಲ್ಲದೆ ಸಾಮರಸ್ಯದಿಂದ ದೇವರನ್ನು ಸ್ಮರಿಸುವ ಏಕೈಕ ಮಾರ್ಗವೇ ಭಜನೆಯಾಗಿದ್ದು, ಇಡೀ ಸಮಾಜಕ್ಕೆ ಸಾಮರಸ್ಯವನ್ನು ಸಾರುವ ಕಾರ್ಯವನ್ನು ಈ ಭಜನಾ ಕಮ್ಮಟ ಮಾಡುತ್ತಿದೆ ಎಂದು ಪ್ರಸಂಗಕರ್ತರು, ಅರ್ಥಧಾರಿಗಳು ಹಾಗೂ ಆಸೆಮ್ಸ್ ಶಿಕ್ಷಣ ಸಂಸ್ಥೆ ಕಲ್ಮಾಡಿ, ಉಡುಪಿ ಇಲ್ಲಿನ ಪ್ರಾಂಶುಪಾಲ ಪ್ರೊ. ಪವನ್ ಕಿರಣಕೆರೆ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅ.02, ಶುಕ್ರವಾರದಂದು ನಡೆದ 28ನೇ ವರ್ಷದ ಭಜನಾ ಕಮ್ಮಟದ ಐದನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕ ನೆಲೆಯಲ್ಲಿ ಮಾತನಾಡಿದರು.
ಮನುಷ್ಯನ ಮನಸ್ಸಿನಲ್ಲಿರುವ ಅಸೂಯೆ, ಮತ್ಸರಗಳೇ ದುಃಖದ ಮೂಲವಾಗಿದ್ದು, ಅವೆಲ್ಲವನ್ನೂ ಕಳೆಯಲು ಭಜನೆ ಹಾಗೂ ಆಧ್ಯಾತ್ಮದಿಂದ ಮಾತ್ರ ಸಾಧ್ಯ. ಸುಖದಲ್ಲಿ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಎಲ್ಲವನ್ನೂ ಸಮಚಿತ್ತವಾಗಿ ಸ್ವೀಕರಿಸುವ ಮೂಲಕ ಸಾಮರಸ್ಯದ ಬದುಕನ್ನು ಭಜನೆಯಿಂದ ಕಂಡುಕೊಳ್ಳಬಹುದಾಗಿದೆ. ಭಗವಂತನ ದೃಷ್ಟಿಯಲ್ಲಿ ಭಕ್ತಿಗೆ ಪ್ರಾಧಾನ್ಯತೆಯೇ ಹೊರತು ಯಾವುದೇ ಆಡಂಬರದ ಆಚರಣೆಗಳಿಗಲ್ಲ. ಭಗವಂತನನ್ನು ಒಲಿಸಿಕೊಳ್ಳಲು ಶ್ರದ್ಧೆಯೇ ಅತ್ಯಂತ ಉತ್ತಮ ಹಾದಿಯಾಗಿದೆ ಎಂದು ಎಲ್ಲಾ ಶಿಬಿರಾರ್ಥಿಗಳಿಗೆ ಭೋದಿಸಿದರು.
ರಾಜ್ಯಾದ್ಯಂತ ಎಲ್ಲಾ ಭಕ್ತರನ್ನು ಒಗ್ಗೂಡಿಸಿ ಎಲ್ಲರ ಮಾನಸಿಕ ಶುದ್ಧತೆಯನ್ನು ಕಾಪಾಡುವ ಮೂಲಕ ಭಜನಾ ಕಮ್ಮಟವು ಅತಿ ಮುಖ್ಯ ಪಾತ್ರ ವಹಿಸಿದ್ದು, ಈ ಕಮ್ಮಟವನ್ನು ಪರ್ವವಾಗಿಸುವಲ್ಲಿ ಕಾರಣಿಭೂತರಾದ ಹೆಗ್ಗಡೆ ದಂಪತಿಗಳ ಪರಿಶ್ರಮ ಬಲು ದೊಡ್ಡದು ಎಂದು ಶ್ಲಾಘಿಸಿದರು.
Uncategorized
SIT Report-ಧರ್ಮಸ್ಥಳ ಎಸ್ಐಟಿ ವರದಿ : ಪೊಲೀಸ್ ಠಾಣೆಯಲ್ಲಿ 1480 UDR – ಪಂಚಾಯತ್ ನ ದಾಖಲೆಯಲ್ಲಿ 1510…! ಎಸ್ಐಟಿ ಗೆ 73 ದೂರು ದಾಖಲು..!
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅಸಹಜ ಸಾವುಗಳ ಸಂಖ್ಯೆಯಲ್ಲಿ ಪೊಲೀಸ್ ಠಾಣೆಯಲ್ಲಿಯ ದಾಖಲೆಗೂ ಇತರೆ ದಾಖಲೆಗಳಿಗೂ ವ್ಯತ್ಯಾಸ ಇರುವುದನ್ನು ಪತ್ತೆ ಹಚ್ಚಿದೆ.
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅಸಹಜ ಸಾವುಗಳ ಸಂಖ್ಯೆಯಲ್ಲಿ ಪೊಲೀಸ್ ಠಾಣೆಯಲ್ಲಿಯ ದಾಖಲೆಗೂ ಇತರೆ ದಾಖಲೆಗಳಿಗೂ ವ್ಯತ್ಯಾಸ ಇರುವುದನ್ನು ಪತ್ತೆ ಹಚ್ಚಿದೆ.
1998ರಿಂದ 2014ರ ಅವಧಿಯಲ್ಲಿ ಬೆಳ್ತಂಗಡಿ ಠಾಣೆ ವ್ಯಾಪ್ತಿಯಲ್ಲಿ 1,480 ಅಸ್ವಾಭಾವಿಕ ಸಾವು ಸಂಭವಿಸಿದ ಕುರಿತು ಠಾಣೆಯಲ್ಲಿ ಮಾಹಿತಿ ಇದೆ. ಆದರೆ, ಬೆಳ್ತಂಗಡಿ ಠಾಣೆ, ರಾಜ್ಯ ಅಪರಾಧ ದಾಖಲಾತಿ ಘಟಕ ಹಾಗೂ ಧರ್ಮಸ್ಥಳ ಗ್ರಾಮ ಪಂಚಾಯಿತಿಯ ದಾಖಲಾತಿಗಳಿಂದ ಕಲೆ ಹಾಕಿರುವ ಮಾಹಿತಿ ಪ್ರಕಾರ ಈ ಅವಧಿಯಲ್ಲಿ ಠಾಣಾ ವ್ಯಾಪ್ತಿಯಲ್ಲಿ 1,510 ಅಸಹಜ ಸಾವುಗಳು ಸಂಭವಿಸಿರುವುದು ಗೊತ್ತಾಗಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
“ಎಸ್‌ಐಟಿ ಇದುವರೆಗೆ ಕೈಗೊಂಡಿರುವ ವಿಚಾರಣೆ ಹಾಗೂ ತನಿಖಾ ಪ್ರಗತಿಯ ಸಮಗ್ರ ವರದಿಯನ್ನು ಪೊಲೀಸ್ ಮಹಾನಿರ್ದೇಶಕರ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ (2026ರ ಮಾರ್ಚ್ 24ರಂದು) ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ’ ಎಂದು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಆಗಸ್ಟ್ 31ರಂದು ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್ ಸಂಸ್ಥೆಯ ಅಧ್ಯಕ್ಷೆ ಬೆಂಗಳೂರಿನ ಜ್ಯೋತಿ ಎ. ಅವರು ಮಾಹಿತಿ ಹಕ್ಕಿನಡಿ ಕೋರಿದ್ದ ಅರ್ಜಿಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಇದೇ 15ರಂದು ಉತ್ತರ ನೀಡಿದ್ದು, ಅದರಲ್ಲಿ ಎಸ್‌ಐಟಿ ಸರ್ಕಾರಕ್ಕೆ ಸಲ್ಲಿಸಿದ ವರದಿಯ ಪ್ರತಿಯನ್ನು ಹಂಚಿಕೊಂಡಿದೆ. ತನಿಖೆಗೆ ಸಂಬಂಧಿಸಿದ ಕೆಲ ಪ್ರಮುಖ ವಿವರಗಳು ಅದರಲ್ಲಿದ್ದು, ಅದರ ಪ್ರತಿ ಲಭ್ಯವಾಗಿದೆ.
‘ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಶೋಧನೆ ನಡೆಸಿದ ವೇಳೆ ಸಿಕ್ಕ 7 ತಲೆಬುರುಡೆ ಹಾಗೂ ಮಾನವ ಶರೀರದ ಅಸ್ಥಿಪಂಜರಗಳನ್ನು ತಜ್ಞರ ಅಭಿಪ್ರಾಯಕ್ಕಾಗಿ ಕಳುಹಿಸಿ, ಅವು ಪುರುಷನದ್ದೇ ಅಥವಾ ಮಹಿಳೆಯದ್ದೇ? ಸಾವಿಗೆ ಕಾರಣವಾದ ಅಂಶಗಳ ಕುರಿತ ಅಭಿಪ್ರಾಯಗಳನ್ನು ಕೋರಲಾಗಿತ್ತು. ಲಭ್ಯ ಸಾಕ್ಷ್ಯಗಳನ್ನು ಆಧರಿಸಿ ರಕ್ತ ಸಂಬಂಧಿಕರ ಪತ್ತೆಹಚ್ಚಿ ಪ್ರಕರಣದ ತನಿಖೆ ನಡೆಸಲಾಗಿದೆ’ ಎಂದು ಎಸ್‌ಐಟಿ ತಿಳಿಸಿದೆ.
‘ಸ್ಥಳೀಯ ಠಾಣೆಗಳು, ಹೊರಠಾಣೆ ದಾಖಲೆಗಳು, ಉಪವಿಭಾಗಾಧಿಕಾರಿ ಕಚೇರಿ, ಗ್ರಾಮ ಪಂಚಾಯಿತಿ, ಡಿಸಿಆರ್‌ಬಿ, ಎಸ್‌ಸಿಆರ್‌ಬಿ ಹಾಗೂ ದೇವಸ್ಥಾನ ಟ್ರಸ್ಟ್‌ನ ಮಾಹಿತಿ ಕಚೇರಿ ಇತ್ಯಾದಿ ವಿವಿಧ ಮೂಲಗಳಿಂದ ಲಭ್ಯವಾದ ಅಸಹಜ ಸಾವು ಪ್ರಕರಣಗಳು, ಕಾಣೆಯಾದ ಪ್ರಕರಣಗಳು, ಕೊಲೆ ಪ್ರಕರಣಗಳು ಮುಂತಾದ ಮಾಹಿತಿ ಆಧರಿಸಿ ಇನ್ನೂ ವಿಚಾರಣೆ ನಡೆಸಲಾಗುತ್ತಿದೆ. ಮಾಹಿತಿ ಸಂಗ್ರಹಿಸುವ, ಸಮಗ್ರಗೊಳಿಸುವ, ವಿಶ್ಲೇಷಿಸುವ ಪ್ರಕ್ರಿಯೆ ಜಾರಿಯಲ್ಲಿದೆ’ ಎಂದು ಹೇಳಿದೆ.
‘ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2002ರಲ್ಲಿ ಸಂಭವಿಸಿದ್ದ ಪ್ರಕರಣದಲ್ಲಿ ಹುಡುಗಿಯ ಅಸ್ವಾಭಾವಿಕ ಮರಣ ಪ್ರಕರಣ ಕಾನೂನು ಪ್ರಕ್ರಿಯೆಗೆ ಒಳಪಟ್ಟಿರುವುದು ಕಂಡುಬಂದಿದೆ. ಧರ್ಮಸ್ಥಳ ಪೊಲೀಸ್ ಠಾಣೆ ಹತ್ತಿರ ರಸ್ತೆ ಬದಿಯಲ್ಲಿ ಮುಖಕ್ಕೆ ಆ್ಯಸಿಡ್ ಹಾಕಿ ಕೊಲೆ ಮಾಡಲಾದ ಸ್ಥಿತಿಯಲ್ಲಿ ಸಿಕ್ಕಿದ್ದ ಹೆಂಗಸಿನ ಮೃತದೇಹವನ್ನೂ ನಾನು ಹೂತುಹಾಕಿರುತ್ತೇನೆ ಎಂದು ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಿರುವುದಾಗಿ ದೂರು ನೀಡಿದ್ದ ವ್ಯಕ್ತಿ (ಚಿನ್ನಯ್ಯ) ತಿಳಿಸಿದ್ದ. 2009ರ ಸೆ. 18ರಂದು ಕೆ.ಬಿ.ವೀರಪ್ಪ ಮಲೆಕುಡಿಯ ದೂರು ನೀಡಿದ್ದ ಪ್ರಕರಣ ಇದಾಗಿದ್ದು, ಅದೂ ಕಾನೂನು ಪ್ರಕ್ರಿಯೆಗೆ ಒಳಪಟ್ಟಿತ್ತು’ ಎಂದು ಎಸ್‌ಐಟಿ ಹೇಳಿದೆ.
‘ದೂರುದಾರ ಚಿನ್ನಯ್ಯನ ಹೇಳಿಕೆಗೆ ಸೀಮಿತವಾಗಿ ತನಿಖೆ ನಡೆಸದೇ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗಿದೆ. ಎಸ್‌ಐಟಿ ರಚನೆಯ ಉದ್ದೇಶದಂತೆ ಧರ್ಮಸ್ಥಳ ಮತ್ತು ಉಜಿರೆ ಗ್ರಾಮಗಳಲ್ಲಿ 1998ರಿಂದ 2014ರವರೆಗೆ ಆಗಿರುವ ಅಸಹಜ ಮರಣ ಪ್ರಕರಣಗಳು, ಮಹಿಳೆಯರ ನಾಪತ್ತೆ ಪ್ರಕರಣಗಳು ಇತ್ಯಾದಿ ಕುರಿತು ಲಭ್ಯ ದಾಖಲೆಗಳಿಂದ ಮಾಹಿತಿ ಕಲೆಹಾಕಿ ವಿಚಾರಣೆಯನ್ನು ನಡೆಸಲಾಗುತ್ತಿದೆ. ಎಸ್‌ಐಟಿ ಇದುವರೆಗೆ 73 ದೂರು ಅರ್ಜಿಗಳನ್ನು ಸ್ವೀಕರಿಸಿದ್ದು, ಈ ಬಗ್ಗೆಯೂ ಎಲ್ಲಾ ಆಯಾಮಗಳಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗಿದೆ’ ಎಂದು ಎಸ್‌ಐಟಿ ಸ್ಪಷ್ಟಪಡಿಸಿದೆ.
‘ಮಹಿಳೆ ಕೊಲೆ ಪ್ರಕರಣದ ಶವ ಪರೀಕ್ಷೆ ವರದಿ ಲಭ್ಯವಿಲ್ಲ’
2010ರ ಏ.4ರಂದು ಬೆಳಿಗ್ಗೆ 6.50ರಿಂದ ಏ.6ರ ಬೆಳಿಗ್ಗೆ 6.30ರ ನಡುವೆ ಧರ್ಮಸ್ಥಳದ ಶರಾವತಿ ವಸತಿ ಗೃಹದ ಕೊಠಡಿ ಸಂಖ್ಯೆ 246ರಲ್ಲಿ ನರಸಿಂಹ ರಾಜು ಎಂದು ವಸತಿ ಗೃಹದ ದಾಖಲೆಗಳಲ್ಲಿ ಹೆಸರು ನೀಡಿರುವ ವ್ಯಕ್ತಿಯೊಬ್ಬ ಅಪರಿಚಿತ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ, ಕುತ್ತಿಗೆಯನ್ನು ಒತ್ತಿ ಕೊಲೆ ಮಾಡಿದ್ದಾನೆ ಎಂದು ರಜತಗಿರಿ ವಸತಿ ಗೃಹದ ವ್ಯವಸ್ಥಾಪಕ ಸುರೇಂದ್ರ ಬಳ್ಳಾಲ್ 2010ರ ಏ. 6ರಂದು ದೂರು ನೀಡಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ಈ ಬಗ್ಗೆ ಶವ ಪರೀಕ್ಷೆ ನಡೆಸಲಾಗಿದೆ ಎಂದು ಠಾಣಾ ದಾಖಲೆಗಳಲ್ಲಿ ನಮೂದಿಸಲಾಗಿದೆ. ಆದರೆ, ಶವ ಪರೀಕ್ಷೆಯ ವರದಿಯು ದಾಖಲೆಗಳಲ್ಲಿ ಲಭ್ಯವಿಲ್ಲದೇ ಇರುವುದರಿಂದ ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಎಸ್‌ಐಟಿ, ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಿದೆ.
“ಬಾಲಕಿ ಶವ ದಫನ ಅಂಕಿ ಅಂಶದಲ್ಲಿ ವ್ಯತ್ಯಾಸ’
‘ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಅಣೆಕಟ್ಟೆ ಬಳಿ 2003ರ ಸೆ. 3ರಂದು ನೇತ್ರಾವತಿ ನದಿಯಲ್ಲಿ 35ರಿಂದ 45 ವರ್ಷದ ಅಪರಿಚಿತ ವ್ಯಕ್ತಿಯ ಶವದೊಂದಿಗೆ 10ರಿಂದ 12 ವರ್ಷದ ಹುಡುಗಿಯ ಶವ ಪತ್ತೆಯಾದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ‘ಆಕಸ್ಮಿಕವಾಗಿ ನದಿ ನೀರಿನಲ್ಲಿ ಮುಳುಗಿ ಸಾವು’ ಪ್ರಕರಣ ದಾಖಲಾಗಿದೆ. ಕಾನೂನು ರೀತಿಯ ಕ್ರಮ ಜರುಗಿಸಿದ ಬಗ್ಗೆ ಮತ್ತು ಮೃತದೇಹಗಳನ್ನು ದಫನ ಮಾಡಿರುವ ಬಗ್ಗೆ ಠಾಣೆಯ ದಾಖಲಾತಿಗಳಲ್ಲಿ ನಮೂದಿಸಲಾಗಿದೆ. ಈ ಪ್ರಕರಣ ಸಂಬಂಧ ಪೊಲೀಸ್ ಠಾಣೆಯ ಯುಡಿಆರ್ ನೋಂದಣಿಯಲ್ಲಿರುವ ದಫನದ ವಿವರಗಳು ಮತ್ತು ಗ್ರಾಮ ಪಂಚಾಯಿತಿ ನಿರ್ವಹಿಸಿರುವ ದಫನ ದಾಖಲೆಗಳಲ್ಲಿರುವ ಅಂಕಿ-ಅಂಶಗಳ ನಡುವೆ ವ್ಯತ್ಯಾಸ ಕಂಡುಬಂದಿದೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂಬ ಅಂಶ ಎಸ್‌ಐಟಿ ವರದಿಯಲ್ಲಿದೆ.
Uncategorized
Philomena-ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವತಿಯಿಂದ ಸಮಾಜಕಾರ್ಯ ಕ್ಷೇತ್ರಗಳ ಕುರಿತು ಜ್ಞಾನ ಹಂಚಿಕೆ ಕಾರ್ಯಕ್ರಮ
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವತಿಯಿಂದ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳಿಗಾಗಿ ‘ಸಮಾಜಕಾರ್ಯದ ಕ್ಷೇತ್ರಗಳು’ ಕುರಿತು ಜ್ಞಾನ ಹಂಚಿಕೆ ಕಾರ್ಯಕ್ರಮವು ಗುರುವಾರ ಕಾಲೇಜಿನ ಪಿಜಿ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.

ಪುತ್ತೂರು, ಸೆ. 29: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವತಿಯಿಂದ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳಿಗಾಗಿ ‘ಸಮಾಜಕಾರ್ಯದ ಕ್ಷೇತ್ರಗಳು’ ಕುರಿತು ಜ್ಞಾನ ಹಂಚಿಕೆ ಕಾರ್ಯಕ್ರಮವು ಗುರುವಾರ ಕಾಲೇಜಿನ ಪಿಜಿ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.
ಚೈಲ್ಡ್ ಪ್ರೊಟೆಕ್ಷನ್ ಆ್ಯಂಡ್ ಡೆವಲಪ್‌ಮೆಂಟ್ ಪ್ರೊಫೆಷನಲ್ ಹಾಗೂ ಚೈಲ್ಡ್‌ಫಂಡ್ ಇಂಡಿಯಾದ ಫೀಲ್ಡ್ ಆಫೀಸರ್–ಪ್ರೋಗ್ರಾಮ್ಸ್ ಸಿದ್ಧಾಂತ್ ಪಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳ ಹಕ್ಕುಗಳು, ನೀತಿ ಪ್ರತಿಪಾದನೆ, ಮಾನವ ಕಳ್ಳಸಾಗಣೆ ತಡೆ, ಆನ್‌ಲೈನ್ ಸುರಕ್ಷತೆ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ತಮ್ಮ ವೃತ್ತಿಪರ ಅನುಭವವನ್ನು ಅವರು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಚೈಲ್ಡ್‌ಫಂಡ್ ಇಂಡಿಯಾದಲ್ಲಿನ ತಮ್ಮ ಅನುಭವ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (KSCPCR) ಸಹಯೋಗದಲ್ಲಿ ನಡೆದ OSEAC ಯೋಜನೆಯ ಅನುಭವಗಳನ್ನು ಆಧರಿಸಿ ಮಕ್ಕಳ ರಕ್ಷಣಾ ವ್ಯವಸ್ಥೆ, ಆನ್‌ಲೈನ್ ಸುರಕ್ಷತೆ ಹಾಗೂ ವಿವಿಧ ಪಾಲುದಾರ ಸಂಸ್ಥೆಗಳ ನಡುವಿನ ಸಹಯೋಗದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಮಾಜಕಾರ್ಯದ ವಿವಿಧ ಕ್ಷೇತ್ರಗಳು ಹಾಗೂ ಮಕ್ಕಳ ರಕ್ಷಣಾ ಕಾರ್ಯವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದ ಅವರು, ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸುವಲ್ಲಿ ಸಾಮೂಹಿಕ ಕಾರ್ಯಾಚರಣೆ ಹಾಗೂ ವಿವಿಧ ಪಾಲುದಾರರ ಸಕ್ರಿಯ ಭಾಗವಹಿಸುವಿಕೆಯ ಅಗತ್ಯವನ್ನು ಒತ್ತಿಹೇಳಿದರು. ಮಕ್ಕಳ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದು, ಆನ್‌ಲೈನ್ ಸುರಕ್ಷತೆಯನ್ನು ಉತ್ತೇಜಿಸುವುದು ಹಾಗೂ ಶೋಷಣೆಯನ್ನು ತಡೆಗಟ್ಟುವಲ್ಲಿ ಸಮಾಜಕಾರ್ಯಕರ್ತರ ಪಾತ್ರವನ್ನು ಅವರು ವಿವರಿಸಿದರು. ತಮ್ಮ ವೃತ್ತಿಜೀವನದ ಅನುಭವಗಳಲ್ಲಿನ ನೈಜ ಉದಾಹರಣೆಗಳನ್ನೂ ಹಂಚಿಕೊಂಡರು.
ಮಕ್ಕಳ ರಕ್ಷಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಹಾಗೂ ಕಾನೂನು ಸೇವಾ ಪ್ರಾಧಿಕಾರಗಳ ನಡುವೆ ಸಮನ್ವಯ ಅಗತ್ಯವಿದೆ ಎಂದು ಸಿದ್ಧಾಂತ್ ಪಿ. ಹೇಳಿದರು.
ಇದರೊಂದಿಗೆ ಕಾರ್ಯಕ್ರಮ ವಿನ್ಯಾಸ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ, ಸಮುದಾಯ ಸಜ್ಜುಗೊಳಿಸುವಿಕೆ ಹಾಗೂ ಯುವಜನರ ತೊಡಗಿಸಿಕೊಳ್ಳುವಿಕೆ ಮುಂತಾದ ವೃತ್ತಿಪರ ಸಮಾಜಕಾರ್ಯದಲ್ಲಿ ಪ್ರಮುಖವಾಗಿರುವ ಪ್ರಾಯೋಗಿಕ ಅಂಶಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡಲಾಯಿತು.
ಮಕ್ಕಳು ಘನತೆ ಮತ್ತು ಸುರಕ್ಷತೆಯೊಂದಿಗೆ ಬೆಳೆಯಲು ಹಾಗೂ ತಮ್ಮ ಸಾಮರ್ಥ್ಯವನ್ನು ವಿಕಸನಗೊಳಿಸಿಕೊಳ್ಳಲು ಅನುಕೂಲಕರ ವಾತಾವರಣವನ್ನು ನಿರ್ಮಿಸುವುದೇ ಮಕ್ಕಳ ರಕ್ಷಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಎಂಎಸ್‌ಡಬ್ಲ್ಯು ವಿಭಾಗದ ಸಂಯೋಜಕಿ ಶ್ರೀಮಣಿ ಸ್ವಾಗತಿಸಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಪ್ರತಿಭಾ ವಂದಿಸಿದರು. ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
-
ನಿಧನ ವಾರ್ತೆ22 hours agoKadaba-ಕಡಬ : ಹೆದ್ದಾರಿಯಲ್ಲಿ ದಿಢೀರ್ ಪ್ರತ್ಯಕ್ಷವಾದ ಕಡವೆ; ಕಾರಿಗೆ ಡಿಕ್ಕಿ, ಸ್ಥಳದಲ್ಲೇ ಸಾವು
-
ಬಿಗ್ ನ್ಯೂಸ್16 hours agoArshia Khan-ನವರಾತ್ರಿಗೆ ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ಮಿಂಚಲಿರುವ ವಿಟ್ಲದ ಅರ್ಷಿಯಾ ಖಾನ್
-
ಪುತ್ತೂರು13 hours ago
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್ಮ್ಯಾನ್ ಮೃತ್ಯು
-
ಅಪರಾಧ23 hours ago
Vittal Police raid :ಕೋಳಿ ಅಂಕಕ್ಕೆ ವಿಟ್ಲ ಪೊಲೀಸ್ ದಾಳಿ – ನಾಲ್ವರು ವಶಕ್ಕೆ
-
ಅಂತರ ರಾಜ್ಯ19 hours agoECI-ಮುಖ್ಯ ಚುನಾವಣ ಆಯುಕ್ತ ವಿರುದ್ಧ ದೇಶಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ‘ಬಿಟ್ಟು ಹೋದವರ ಹೆಸರು ಸೇರ್ಪಡೆಗೆ ಅಭಿಯಾನ’…! 20 ರಾಜ್ಯಗಳಲ್ಲಿ ಕೈಬಿಟ್ಟ 13 ಕೋಟಿ ಮತದಾರರ ಮರುಸೇರ್ಪಡೆಗೆ ಆಯೋಗ ಅವಕಾಶ
-
ಮಂಗಳೂರು16 hours agoCM-ಒಂದು ಅಭಿನಂದನೆಯೂ ಇಲ್ಲ ಎಂದು ಕ್ರೀಡಾಪಟುವಿನಿಂದ ಬೇಸರ ವ್ಯಕ್ತವಾದ ಕೂಡಲೇ ಪೂವಮ್ಮಗೆ ಕರೆ ಮಾಡಿದ ಸಿಎಂ..! ಏನೂ ಹೇಳಿದ್ರು ಗೊತ್ತೇ..?
-
ಬಿಗ್ ನ್ಯೂಸ್15 hours agoNagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
-
ರಾಜ್ಯ19 hours agoTemperature-ಹಿಂಗಾರು ಮಳೆ ಇಳಿಮುಖ, ಬಿಸಿಲು ಏರುಮುಖ; ಕರ್ನಾಟಕಕ್ಕೆ ಹವಾಮಾನ ಎಚ್ಚರಿಕೆ..!


















