ಪುತ್ತೂರು
SR Builders ನ ಮಾಲಕರಾದ ಯುವ ಉದ್ಯಮಿ ಶಿವಪ್ರಸಾದ್ ಇಜ್ಜಾವುರವರಿಗೆ ಕನ್ನಡಪ್ರಭ – ಏಷ್ಯಾನೆಟ್ ಸುವರ್ಣ ನ್ಯೂಸ್ ‘ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ’ ಪ್ರಧಾನ
ಪುತ್ತೂರು: ದರ್ಬೆಯ ಶ್ರೀರಾಮ ಸೌಧ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಎಸ್‌ಆರ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆಯ ಮಾಲಕ, ಯುವ ಉದ್ಯಮಿ ಶಿವಪ್ರಸಾದ್ ಇಜ್ಞಾವು ಅವರಿಗೆ ಮಾಧ್ಯಮ ರಂಗದ ಅಗ್ರಗಣ್ಯ ಸಂಸ್ಥೆಗಳಾದ ‘ಕನ್ನಡ ಪ್ರಭ’ ಹಾಗೂ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ವತಿಯಿಂದ ಪ್ರತಿಷ್ಠಿತ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ 2026ನ್ನು ಸೆ.26ರಂದು ಸಂಜೆ ಬೆಂಗಳೂರಿನ ತಾಜ್ ಯಶವಂತಪುರದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನ ಮಾಡಲಾಗಿದೆ.
ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹಮದ್, ಮಾಜಿ ಮುಖ್ಯಮಂತ್ರಿ ಲೋಕಸಭಾ ಸದಸ್ಯರಾದ ಜಗದೀಶ್ ಶೆಟ್ಟರ್, ಚಲನಚಿತ್ರ ನಟಿ ಬೃಂದಾ ಆಚಾರ್ಯ, ಪರ್ವ ಗ್ರೂಪ್ ಸಂಸ್ಥಾಪಕ ನೀಲೇಶ್ ಎಚ್.ಪಿ., ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣನ್ಯೂಸ್‌ನ ಸಮೂಹ ಸಂಪಾದಕೀಯ ನಿರ್ದೇಶಕರಾದ ರವಿ ಹೆಗಡೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಶಿವಪ್ರಸಾದ್ ಇಜ್ಜಾವು ಅವರು ಪತ್ನಿ, ಮಕ್ಕಳೊಂದಿಗೆ ಪ್ರಶಸ್ತಿ ಸ್ವೀಕರಿಸಿದರು.
ಸಾಧನೆಯ ಪಥದಲ್ಲಿ ಯಶಸ್ವಿ ಯುವ ಉದ್ಯಮಿ:ಕಡಬ ತಾಲೂಕಿನ ಹಳೆನೇರಂಕಿ ಗ್ರಾಮದ ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದ ಶಿವಪ್ರಸಾದ್ ಇಜ್ಜಾವು ಅವರು, ಮಾಧವಾಚಾರ್ಯ ಹಾಗೂ ಶಶಿಕಲಾ ಎಂ. ಆಚಾರ್ಯ ದಂಪತಿಯ ಪುತ್ರ. ಇವರ ಅಜ್ಜ ಇಜ್ಜಾವು ಸುಬ್ರಾಯರು ಊರಿನ ಗಣ್ಯರಾಗಿ ತುರ್ತು ಪರಿಸ್ಥಿತಿಯಲ್ಲಿ ಜೈಲು ಅನುಭವಿಸಿದ ಧೀಮಂತ ವ್ಯಕ್ತಿಯಾಗಿದ್ದರೆ, ತಂದೆ ಮಾಧವ ಆಚಾರ್ಯರು ಧಾರ್ಮಿಕ ಹಾಗೂ ಜ್ಯೋತಿಷ್ಯ ಮಾರ್ಗದರ್ಶಕರಾಗಿದ್ದಾರೆ.
ಪೇಜಾವರ ಶ್ರೀಗಳು ಕಟ್ಟಿ ಬೆಳೆಸಿದ ಶ್ರೀರಾಮಕುಂಜೇಶ್ವರ ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು, ಪುತ್ತೂರಿನ ವಿವೇಕಾನಂದ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಹಾಗೂ ಮಂಗಳೂರಿನ ಕರಾವಳಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ B.E (ಮೆಕ್ಯಾನಿಕಲ್ ಇಂಜಿನಿಯರಿಂಗ್) ಪದವಿ ಪಡೆದಿದ್ದಾರೆ.
ವೃತ್ತಿಪರ ನೈಪುಣ್ಯತೆ ಹಾಗೂ ಪ್ರಮುಖ ಯೋಜನೆಗಳು: ಕಳೆದ 7 ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಇವರು, ಪುತ್ತೂರಿನ ಶ್ರೀರಾಮ ಸೌಧ ವಾಣಿಜ್ಯ ಸಂಕೀರ್ಣದಲ್ಲಿ ಕೇಂದ್ರ ಕಚೇರಿ ಹೊಂದಿರುವ SR Builders & Developers ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.ಇವರು ‘ಅನಘ ವಸತಿ ಸಂಕೀರ್ಣ’ (ಬ್ಲಾಕ್ A, B, C), ‘ಅನಘ ಬಲ್ನಾಡು’, ಮೂರ ದಲ್ಲಿ ‘ಅದ್ವಿತ್ ಲೇಔಟ್’ ಹಾಗೂ ಉಪ್ಪಿನಂಗಡಿಯ ‘ಅನಯ ಲೇಔಟ್’ ಸೇರಿದಂತೆ ಒಟ್ಟು 6 ಬೃಹತ್ ಲೇಔಟ್ ಯೋಜನೆಗಳನ್ನು ಪೂರ್ಣಗೊಳಿಸಿದ್ದು,ಈವರೆಗೆ ಸುಮಾರು 300 ಸೈಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ , 40ಕ್ಕೂ ಹೆಚ್ಚು ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಗ್ರಾಹಕರ ಅಪಾರ ನಂಬಿಕೆಯನ್ನು ಗಳಿಸಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಜಲಸಂರಕ್ಷಣೆ ಹಾಗೂ ತಂತ್ರಜ್ಞಾನದ ಮಾದರಿ:ತಮ್ಮ ಇಂಜಿನಿಯರಿಂಗ್ ಜ್ಞಾನವನ್ನು ಕೃಷಿ ಕ್ಷೇತ್ರದಲ್ಲೂ ಅತ್ಯಂತ ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿರುವ ಇವರು, ತಮ್ಮ ಸುಮಾರು 20 ಎಕರೆ ಕೃಷಿ ಭೂಮಿಗೆ 5 ಲಕ್ಷ ಲೀಟರ್ ಸಾಮರ್ಥ್ಯದ ಬೃಹತ್ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ.ಗುರುತ್ವಾಕರ್ಷಣ ಬಲವನ್ನು (Gravity) ಬಳಸಿಕೊಂಡು, ಹನಿ ನೀರಾವರಿ (Drip Irrigation) ಪದ್ಧತಿಯ ಮೂಲಕ ಸುಮಾರು 8,000 ಗಿಡಗಳಿಗೆ ನೀರುಣಿಸುವ ವಿಶಿಷ್ಟ ಜಲಸಂರಕ್ಷಣಾ ವ್ಯವಸ್ಥೆಯನ್ನು ರೂಪಿಸಿದ್ದಾರೆ.
ಜೊತೆಗೆ ಆಳುಗಳ ಕೊರತೆ ನೀಗಿಸಲು ಯಾಂತ್ರೀಕೃತ ಕೃಷಿ ಮಾದರಿಯನ್ನು ಅಳವಡಿಸಿಕೊಂಡಿದ್ದಾರೆ.
ಸಾಮಾಜಿಕ ಕಳಕಳಿ:ಪೇಜಾವರ ಮಠಾಧೀಶರ ವಿದ್ಯಾಸಂಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನ ಹೊಂದಿರುವ ಇವರು, ಊರಿನ ದೇವಾಲಯ, ವಿದ್ಯಾಲಯಗಳ ಅಭಿವೃದ್ಧಿ ಹಾಗೂ ಬಡವರ ಕಷ್ಟಗಳಿಗೆ ಸ್ಪಂದಿಸುವ ಸಮಾಜಮುಖಿ ಚಿಂತಕರಾಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಈ ಹಿಂದೆ ‘ಶಿವಳ್ಳಿ ಶ್ರೀ ಉದ್ಯಮ ಪ್ರಶಸ್ತಿ’ ಹಾಗೂ ‘ಆದರ್ಶ ಕೃಷಿಕ ಪ್ರಶಸ್ತಿ’ಗಳು ಲಭಿಸಿವೆ.
ಇಂಜಿನಿಯರಿಂಗ್ ಶಿಕ್ಷಣದ ತಾಂತ್ರಿಕ ಜ್ಞಾನವನ್ನು ಕಟ್ಟಡ ನಿರ್ಮಾಣ ಕ್ಷೇತ್ರವಲ್ಲದೆ ಕೃಷಿ ಕ್ಷೇತ್ರದ ಜಲಸಂರಕ್ಷಣೆಗೂ ಸಮರ್ಥವಾಗಿ ಬಳಸಿ, ಉದ್ಯಮಶೀಲತೆಯಲ್ಲಿ ಹೊಸ ಮಾದರಿ ಸೃಷ್ಟಿಸಿರುವ ಶ್ರೀ ಶಿವಪ್ರಸಾದ್ ಇಜ್ಜಾವು ಅವರಿಗೆ ಈ ಪ್ರತಿಷ್ಠಿತ ‘ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ’ ಒಲಿದಿರುವುದು ಪುತ್ತೂರು ಕ್ಷೇತ್ರಕ್ಕೆ ಹಾಗೂ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ಮಂಗಳೂರು
Bantwal rape case verdict ಮಂಗಳೂರು: ಮಹಿಳೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ : ಆರೋಪಿಗೆ 10 ವರ್ಷ ಜೈಲು, ₹54 ಸಾವಿರ ದಂಡ

ಬಂಟ್ವಾಳ: ಮಹಿಳೆಗೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿ , ಜೀವ ಬೆದರಿಕೆ ಹಾಕಿದ ಅಪರಾಧಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ₹54 ಸಾವಿರ ದಂಡ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
Bantwal rape case verdict: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರಲ್ಲಿ ಈ ಘಟನೆ ನಡೆದಿತ್ತು. ಸಂತ್ರಸ್ತ ಮಹಿಳೆಯ ಮನೆಯ ನೆರೆಮನೆಯ ನಿವಾಸಿಯಾಗಿದ್ದ ಅನಿಲ್ ಎಂಬಾತ ಮಹಿಳೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಲ್ಲದೆ, ಜೀವ ಬೆದರಿಕೆಯನ್ನೂ ಹಾಕಿದ್ದ ಎಂದು ಆರೋಪಿಸಲಾಗಿತ್ತು. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 92/2021ರಂತೆ ಭಾರತೀಯ ದಂಡ ಸಂಹಿತೆಯ ಕಲಂ 376, 448, 323, 504 ಹಾಗೂ 506ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಅಂದಿನ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಅವರು ಆರೋಪಿಯನ್ನು ಪತ್ತೆಹಚ್ಚಿದ್ದರು. ಬಳಿಕ ಪ್ರಕರಣದ ತನಿಖಾಧಿಕಾರಿಗಳಾಗಿದ್ದ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರು ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಿತನ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ರಾಜೇಶ ಮಾರುತಿ ಕಾಮಟೆ ಅವರು ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ₹54,000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಮೋತಿಲಾಲ ಚೌಧರಿ ಅವರು ಸರ್ಕಾರದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು.
ಶಿಕ್ಷಣ
Puttur-ಪುತ್ತೂರಿನ ಸುಪ್ರಜಾ ರಾವ್ ಗೆ ರಾಜ್ಯೋತ್ಸವ ಸಾಧಕ ಪುರಸ್ಕಾರ
ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಕಲ್ಕೂರ ಪ್ರತಿಷ್ಠಾನ(ರಿ) ಕನ್ನಡ ರಾಜ್ಯೋತ್ಸವದ ಅಂಗವಾಗಿ ನ 20 ರಂದು ಮಂಗಳೂರಿನ ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯ ಸಭಾಭವನದಲ್ಲಿ ನಡೆದ ರಾಜ್ಯೋತ್ಸವ ಸಂದೇಶ – ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಪುತ್ತೂರಿನ ಸುಪ್ರಜಾ ರಾವ್ ಗೆ ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಪುತ್ತೂರು: ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಕಲ್ಕೂರ ಪ್ರತಿಷ್ಠಾನ(ರಿ) ಕನ್ನಡ ರಾಜ್ಯೋತ್ಸವದ ಅಂಗವಾಗಿ ನ 20 ರಂದು ಮಂಗಳೂರಿನ ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯ ಸಭಾಭವನದಲ್ಲಿ ನಡೆದ ರಾಜ್ಯೋತ್ಸವ ಸಂದೇಶ – ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಪುತ್ತೂರಿನ ಸುಪ್ರಜಾ ರಾವ್ ಗೆ
ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಇವರು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ನ ಪ್ರಾಧ್ಯಾಪಕರಾದ ಡಾ.ಪ್ರಶಾಂತ್ ರಾವ್ ಹಾಗೂ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸುಮನಾ ರಾವ್ ದಂಪತಿಗಳ ಪುತ್ರಿಯಾಗಿದ್ದು, ಪ್ರಸಕ್ತ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.
ಕಾರ್ಯಕ್ರಮಗಳು
Puttur-ಪುತ್ತೂರಿನಲ್ಲಿ ‘ಸಾಮರಸ್ಯದ ತುಡರ್’ ಕಾರ್ಯಕ್ರಮ: ಮಹಾಲಿಂಗೇಶ್ವರ ದೇವಸ್ಥಾನದಿಂದ ಮನೆಮನೆಗೆ ದೀಪದ ಬೆಳಕು
ಸಾಮರಸ್ಯ ವೇದಿಕೆ ಪುತ್ತೂರು ಜಿಲ್ಲೆ ಹಾಗೂ ಸಾಮರಸ್ಯ ವೇದಿಕೆ ಪುತ್ತೂರು ನಗರ ಘಟಕದ ವತಿಯಿಂದ ‘ಸಾಮರಸ್ಯದ ತುಡರ್’ ಕಾರ್ಯಕ್ರಮ ನಡೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಉರಿಯುತ್ತಿದ್ದ ದೀಪದಿಂದ ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶದ ಉಪೇಕ್ಷಿತ ಬಂಧುಗಳು ತಂದ ದೀಪಗಳನ್ನು ದೇವಸ್ಥಾನದ ಅರ್ಚಕರು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪುತ್ತೂರು: ಸಾಮರಸ್ಯ ವೇದಿಕೆ ಪುತ್ತೂರು ಜಿಲ್ಲೆ ಹಾಗೂ ಸಾಮರಸ್ಯ ವೇದಿಕೆ ಪುತ್ತೂರು ನಗರ ಘಟಕದ ವತಿಯಿಂದ ‘ಸಾಮರಸ್ಯದ ತುಡರ್’ ಕಾರ್ಯಕ್ರಮ ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಉರಿಯುತ್ತಿದ್ದ ದೀಪದಿಂದ ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶದ ಉಪೇಕ್ಷಿತ ಬಂಧುಗಳು ತಂದ ದೀಪಗಳನ್ನು ದೇವಸ್ಥಾನದ ಅರ್ಚಕರು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ದೇವಸ್ಥಾನದಲ್ಲಿ ಬೆಳಗಿಸಿದ ದೀಪವನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶಗಳ ಸುತ್ತಮುತ್ತಲಿನ ಮನೆಗಳಲ್ಲಿ ದೀಪ ಬೆಳಗಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಸಾಮರಸ್ಯ ಸಂಯೋಜಕ ರವೀಂದ್ರ, ಜಿಲ್ಲಾ ಸಾಮರಸ್ಯ ಸಂಯೋಜಕ ಶ್ರೀಕುಮಾರ್ ಸುಬ್ರಹ್ಮಣ್ಯ, ದಾಮೋದರ ಪಾಟಲಿ, ಅಪ್ಪಯ್ಯ ಮಣಿಯಾಣಿ, ರಮೇಶ್ ಪ್ರಭು, ಸಂತೋಷ್ ಬೊನಂತಾಯ, ರಮೇಶ್ ನೆಗಳಗುಳಿ, ದಯಾನಂದ ಬೋಲ್ವಾರ್, ಸಚಿನ್ ಶೆಣೈ, ರಮೇಶ್ ಉರ್ಲಾಂಡಿ, ಅಶೋಕ್ ಬ್ರಹ್ಮನಗರ ಸೇರಿದಂತೆ ಪ್ರಮುಖರು ಹಾಗೂ ಮಾತೆಯರು ಉಪಸ್ಥಿತರಿದ್ದರು.
-
ಮಂಗಳೂರು22 hours agoMangalore-ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು: ಮನೆಯವರ ಜೊತೆ ತೆರಳಲು ಯುವತಿ ನಕಾರ..!
-
ಅಂತರ ರಾಜ್ಯ21 hours agoArrested-14ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿ ಅಪಹರಣಕಾರರ ಬೇಡಿಕೆಯಂತೆ 25ಲಕ್ಷ ರೂ ನೀಡಿದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಮಹತ್ವದ ತಿರುವು..!
-
ಕಾರ್ಯಕ್ರಮಗಳು22 hours agoPuttur-ಪುತ್ತೂರಿನಲ್ಲಿ ‘ಸಾಮರಸ್ಯದ ತುಡರ್’ ಕಾರ್ಯಕ್ರಮ: ಮಹಾಲಿಂಗೇಶ್ವರ ದೇವಸ್ಥಾನದಿಂದ ಮನೆಮನೆಗೆ ದೀಪದ ಬೆಳಕು
-
ದಕ್ಷಿಣ ಕನ್ನಡ16 hours ago
Puttur Medical College : ಮೆಡಿಕಲ್ ಕಾಲೇಜು ಆರಂಭಕ್ಕೆ ಪುತ್ತೂರು ಸಜ್ಜು; ಪ್ಲಾನ್ “ಬಿ” ಗೆ ವೇಗ; ಮೂಲಸೌಕರ್ಯ ಪರಿಶೀಲಿಸಿದ ತಜ್ಞರ ತಂಡ – ನವೆಂಬರ್ 30ರೊಳಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ
-
Uncategorized23 hours agoPhilomena-ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಾಗಾರ
-
ಶಿಕ್ಷಣ21 hours agoPuttur-ಪುತ್ತೂರಿನ ಸುಪ್ರಜಾ ರಾವ್ ಗೆ ರಾಜ್ಯೋತ್ಸವ ಸಾಧಕ ಪುರಸ್ಕಾರ
-
ಶಿಕ್ಷಣ23 hours agoPhilomena-ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನೂತನ ಹೆಚ್ಚುವರಿ ಕಟ್ಟಡದ ಉದ್ಘಾಟನೆ
-
ಮಂಗಳೂರು17 hours ago
Bantwal rape case verdict ಮಂಗಳೂರು: ಮಹಿಳೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ : ಆರೋಪಿಗೆ 10 ವರ್ಷ ಜೈಲು, ₹54 ಸಾವಿರ ದಂಡ















