Connect with us

ಶಿಕ್ಷಣ

Vivekananda-ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ: ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

Published

on



Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಂಗಳೂರು ಇದರ ವತಿಯಿಂದ ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಆಶ್ರಯದಲ್ಲಿ ಸೆಕ್ರೆಟ್ ಹಾರ್ಟ್ ಕಾಲೇಜು ಮಡಂತ್ಯಾರು ಇದರ ಒಳಾಂಗಣ ಕ್ರೀಡಾಂಗಣದಲ್ಲಿ ಸಪ್ಟೆಂಬರ್ 3 ರಂದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14ರ ಮತ್ತು 17ರ ವಯೋಮಾನದ ಶಾಲಾ ಬಾಲಕ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಜರುಗಿತ್ತು.

Ad Widget

Ad Widget

Ad Widget

Ad Widget

ಪಂದ್ಯಾಟದಲ್ಲಿ ಪುತ್ತೂರು ತಾಲೂಕಿನ 17ರ ವಯೋಮಾನದ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ತಂಡಗಳು ಪ್ರತಿನಿಧಿಸಿ ಭಾಗವಹಿಸಿದ್ದವು. ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ದಕ್ಷಿಣ ಕನ್ನಡ ಜಿಲ್ಲೆಯನ್ನು ಚಾಮರಾಜ ನಗರದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಮೈಸೂರು ವಿಭಾಗ ಮಟ್ಟದ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಲಿರುವರು.

Ad Widget

Ad Widget

Ad Widget alt="Ad Widget"/>

Ad Widget

17 ವಯೋಮಾನದ ಬಾಲಕರ ವಿಭಾಗದಲ್ಲಿ ಈಶಾನ್ ಕೆ 10ನೇ ತರಗತಿ (ನಾರಾಯಣ ಮೂರ್ತಿ ಮತ್ತು ಪ್ರೇಮಲತಾ ದಂಪತಿಗಳ ಪುತ್ರ) ಜಶ್ ಹೆಚ್ ಬಿ 9ನೇ ತರಗತಿ (ಹೇಮಚಂದ್ರ ಬಿ ಮತ್ತು ಶುಭಶ್ರೀ ದಂಪತಿಗಳ  ಪುತ್ರ). ಆದ್ಯನ್ ಆರ್ ಒಂಬತ್ತನೇ ತರಗತಿ (ಎ ರಂಜಿತ್ ಮತ್ತು ವತ್ಸಲ ದಂಪತಿಗಳ ಪುತ್ರ) ಹಾಗೂ 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಆರ್ ಅನ್ವಿಕ ರಾಜ್ 8ನೇ ತರಗತಿ (ರಾಜೇಶ್ ಎ ಮತ್ತು ಯಶಸ್ವಿನಿ ದಂಪತಿಗಳ ಪುತ್ರಿ). ಸಾನ್ವಿ ಆನಂದ್ ಒಂಬತ್ತನೇ ತರಗತಿ (ಆನಂದ ಮತ್ತು ವಾಣಿಶ್ರೀ ಎನ್ ದಂಪತಿಗಳ ಪುತ್ರಿ). ಹಿಮಶ್ರೀ 9ನೇ ತರಗತಿ (ಮೋಹನ್ ಗೌಡ ಮತ್ತುಮೋಹಿನಿ ಕೆ ದಂಪತಿಗಳ ಪುತ್ರಿ) ಇವರುಗಳು ಭಾಗವಹಿಸಿದ್ದರು

Ad Widget

Ad Widget <> Ad Widget

ಇದರಲ್ಲಿ ಆರ್ ಅನ್ವಿಕರಾಜ್, ಇಶಾನ್ ಕೆ ಮತ್ತು ಜಶ್ ಎಚ್ ಬಿ ಇವರು ವಿಭಾಗ ಮಟ್ಟದ ಪಂದ್ಯಾಟಕ್ಕೆ  ಆಯ್ಕೆಯಾಗಿರುತ್ತಾರೆ ಎಂದು ಶಾಲೆಯ ಮುಖ್ಯ ಗುರುಗಳಾದ ಸತೀಶ್ ಕುಮಾರ್ ರೈ ಅವರು ತಿಳಿಸಿರುತ್ತಾರೆ



Ad Widget
Ad Widget
Click to comment

Leave a Reply

ಶಿಕ್ಷಣ

Philomena-ಸಂತ ಫಿಲೋಮಿನಾ ಕಾಲೇಜು : 35 ವರ್ಷಗಳ ಬಳಿಕ ಮತ್ತೆ ಒಂದಾದ 1991ರ ಬಿ.ಎಸ್ಸಿ. ಬ್ಯಾಚ್; ನೆನಪು, ನಂಟು ಮತ್ತು ಗುರು-ಗೌರವದ ಭಾವಪೂರ್ಣ ಸಂಗಮ

Published

on



Ad Widget

Ad Widget

Ad Widget

Ad Widget

ಕಾಲ ಐದು ದಶಕಗಳತ್ತ ಸಾಗಿದರೂ, ಕಾಲೇಜಿನ ಆವರಣದಲ್ಲಿ ಕಳೆದ ಯೌವನದ ದಿನಗಳ ನೆನಪುಗಳು ಮಾತ್ರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅಂತಹ ಸುವರ್ಣ ನೆನಪುಗಳನ್ನು ಮತ್ತೊಮ್ಮೆ ಜೀವಂತಗೊಳಿಸಿದ ಅಪೂರ್ವ ಕ್ಷಣಕ್ಕೆ ಸಂತ ಫಿಲೋಮಿನಾ ಕಾಲೇಜು ಸಾಕ್ಷಿಯಾಯಿತು. 1991ರ ಬಿ.ಎಸ್ಸಿ. ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳು 35 ವರ್ಷಗಳ ಬಳಿಕ ತಮ್ಮ ಎರಡನೇ ಪುನರ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮಕ್ಕಾಗಿ ರವಿವಾರ ಪಿಜಿ ಸೆಮಿನಾರ್ ಹಾಲ್‌ನಲ್ಲಿ ಸೇರಿ, ಹಳೆಯ ಸ್ನೇಹ, ಗೌರವ ಮತ್ತು ಆತ್ಮೀಯತೆಯನ್ನು ಮರುಕಳಿಸಿದರು.

Ad Widget

Ad Widget

Ad Widget

Ad Widget

ಪುತ್ತೂರು, ಅ.4: ಕಾಲ ಐದು ದಶಕಗಳತ್ತ ಸಾಗಿದರೂ, ಕಾಲೇಜಿನ ಆವರಣದಲ್ಲಿ ಕಳೆದ ಯೌವನದ ದಿನಗಳ ನೆನಪುಗಳು ಮಾತ್ರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅಂತಹ ಸುವರ್ಣ ನೆನಪುಗಳನ್ನು ಮತ್ತೊಮ್ಮೆ ಜೀವಂತಗೊಳಿಸಿದ ಅಪೂರ್ವ ಕ್ಷಣಕ್ಕೆ ಸಂತ ಫಿಲೋಮಿನಾ ಕಾಲೇಜು ಸಾಕ್ಷಿಯಾಯಿತು. 1991ರ ಬಿ.ಎಸ್ಸಿ. ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳು 35 ವರ್ಷಗಳ ಬಳಿಕ ತಮ್ಮ ಎರಡನೇ ಪುನರ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮಕ್ಕಾಗಿ ರವಿವಾರ ಪಿಜಿ ಸೆಮಿನಾರ್ ಹಾಲ್‌ನಲ್ಲಿ ಸೇರಿ, ಹಳೆಯ ಸ್ನೇಹ, ಗೌರವ ಮತ್ತು ಆತ್ಮೀಯತೆಯನ್ನು ಮರುಕಳಿಸಿದರು.

Ad Widget

Ad Widget

Ad Widget alt="Ad Widget"/>

Ad Widget

ಅತ್ಯಂತ ಸುಂದರ ಹಾಗೂ ಮನೋಜ್ಞವಾಗಿ ನಡೆದ ಈ ಪುನರ್ಮಿಲನ ಕಾರ್ಯಕ್ರಮದಲ್ಲಿ 1991ರ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಾ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವೃತ್ತಿ ಹಾಗೂ ಸಾಮಾಜಿಕ ಬದುಕಿನಲ್ಲಿ ವಿವಿಧ ಉನ್ನತ ಸ್ಥಾನಗಳನ್ನು ಅಲಂಕರಿಸಿರುವ ಅವರು, ಕಾಲೇಜಿನ ಆವರಣದಲ್ಲಿ ಮತ್ತೆ ವಿದ್ಯಾರ್ಥಿಗಳಂತೆಯೇ ಬೆರೆತು, ತಮ್ಮ ಸುವರ್ಣ ದಿನಗಳನ್ನು ನೆನಪಿಸಿಕೊಂಡರು.

Ad Widget

Ad Widget <> Ad Widget

ಕಾಲೇಜಿನ ಪ್ರಾಂಶುಪಾಲರಾದ ರೆ.ಡಾ. ಆಂಟನಿ ಪ್ರಕಾಶ್ ಮೊಂತೆರೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.



Ad Widget

ಅವರು ಮಾತನಾಡಿ, “ಕಾಲೇಜು ಬದುಕಿತ್ತು; ಬದುಕುತ್ತಿದೆ; ಮುಂದೆಯೂ ಬದುಕಲಿದೆ. ಆದರೆ ಅದಕ್ಕಿಂತ ಮುಖ್ಯವಾದುದು ಪ್ರೀತಿ, ಗೌರವ ಮತ್ತು ಸದ್ಭಾವನೆ. ನಿಮ್ಮಂತಹ ಹಿರಿಯ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸದ್ಭಾವನೆಯಿಂದಲೇ ಕಾಲೇಜು ನಿರಂತರವಾಗಿ ಬೆಳೆಯುತ್ತಿದೆ,” ಎಂದು ಹೇಳಿ, ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅತ್ಯಂತ ಶಿಸ್ತಿನಿಂದ ಹಾಗೂ ಸಮಯಪಾಲನೆಯೊಂದಿಗೆ ಸಂಘಟಿಸಿರುವುದನ್ನು ಶ್ಲಾಘಿಸಿದ ಅವರು, ಅವರ ಶಿಸ್ತು ಮತ್ತು ಸಮಯ ನಿರ್ವಹಣೆಯ ಸೂಕ್ಷ್ಮತೆಯು ಯಾರಿಗಾದರೂ ಮಾದರಿಯಾಗಬಲ್ಲದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Ad Widget

Ad Widget

ಕಾಲೇಜಿನ ಅಭಿವೃದ್ಧಿಗೆ ₹2 ಲಕ್ಷ ಕೊಡುಗೆ- ನೆನಪಿನಿಂದ ನಂಟಿಗೆ, ನಂಟಿನಿಂದ ಕೊಡುಗೆಗೆ
ಪುನರ್ಮಿಲನವು ಕೇವಲ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಕಾರ್ಯಕ್ರಮವಾಗಿ ಉಳಿಯದೆ, ತಾವು ಕಲಿತ ಸಂಸ್ಥೆಯ ಮೇಲಿನ ಋಣ ತೀರಿಸುವ ಸಾರ್ಥಕ ಸಂದರ್ಭವಾಗಿಯೂ ಪರಿಣಮಿಸಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 1991ರ ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳು ಒಟ್ಟಾಗಿ ₹2 ಲಕ್ಷವನ್ನು ಕಾಲೇಜಿನ ಅಭಿವೃದ್ಧಿ ಕಾರ್ಯಗಳಿಗಾಗಿ ದೇಣಿಗೆಯಾಗಿ ನೀಡಿದರು.ತಾವು ವಿದ್ಯಾಭ್ಯಾಸ ಪಡೆದ ಸಂಸ್ಥೆಯ ಅಭಿವೃದ್ಧಿಗೆ ದಶಕಗಳ ಬಳಿಕವೂ ಕೈಜೋಡಿಸಿದ ಹಿರಿಯ ವಿದ್ಯಾರ್ಥಿಗಳ ಈ ಕೊಡುಗೆ ಕಾಲೇಜಿನ ಮೇಲಿನ ಅವರ ಪ್ರೀತಿ, ಕೃತಜ್ಞತೆ ಹಾಗೂ ಸದ್ಭಾವನೆಯ ಪ್ರತೀಕವಾಗಿ ಮೂಡಿಬಂತು.

ವೃತ್ತಿ ಸಾಧನೆಗೆ ಗೌರವ
ಹಿರಿಯ ವಿದ್ಯಾರ್ಥಿಗಳ ವೃತ್ತಿಪರ ಸಾಧನೆಗಳನ್ನೂ ಕಾರ್ಯಕ್ರಮದಲ್ಲಿ ಗುರುತಿಸಲಾಯಿತು. ಡಾ. ಗಿರೀಶ್ ಭಟ್ ಅಜಕ್ಕಳ ಹಾಗೂ ಶ್ರೀ ನವೀನ್ ಕುಮಾರ್ ಅವರನ್ನು ಅವರ ವೃತ್ತಿಪರ ಸಾಧನೆಗಳಿಗಾಗಿ ಗೌರವಿಸಲಾಯಿತು. ವೃತ್ತಿಜೀವನದಲ್ಲಿನ ಸಾಧನೆಗಳು ಹಾಗೂ ಪ್ರಗತಿಯನ್ನು ಗುರುತಿಸಿ ವಿವಿಧ ಗೌರವಗಳನ್ನು ನೀಡಿ ಅಭಿನಂದಿಸಲಾಯಿತು. ರೈಲ್ವೆ ಉದ್ಯೋಗದಲ್ಲಿನ ಪದೋನ್ನತಿಯೂ ಸೇರಿದಂತೆ ವೃತ್ತಿಪರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳ ಯಶಸ್ಸನ್ನು ಕಾರ್ಯಕ್ರಮದಲ್ಲಿ ಮೆಚ್ಚುಗೆಯಿಂದ ಸ್ಮರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ವಾಣಿ ಹಾಗೂ ಡಾ. ಚಂದ್ರಶೇಖರ್ ಕೆ ಜಿ ಪ್ರಾರ್ಥನೆ ನೆರವೇರಿಸಿದರು. ಡಾ. ಕೃಷ್ಣಪ್ರಭಾ ಕಾರ್ಯಕ್ರಮ ನಿರ್ವಹಿಸಿದರು. ಶಿವಕುಮಾರ್ ಸ್ವಾಗತಿಸಿದರು. ಶಿವನಾಥ ರೈ ಮೆಗಿನಗುತ್ತು ಪ್ರಾಸ್ತಾವಿಕ ನುಡಿಗಳ ಮೂಲಕ ಕಾರ್ಯಕ್ರಮದ ಆಶಯವನ್ನು ವಿವರಿಸಿದರು.

ಡಾ. ಗಿರೀಶ್ ಭಟ್ ಅಜಕ್ಕಳ ವಂದಿಸಿದರು.

ನೆನಪುಗಳೊಂದಿಗೆ ಮತ್ತೆ ವಿದ್ಯಾರ್ಥಿಗಳಾದ ಹಿರಿಯ ವಿದ್ಯಾರ್ಥಿಗಳು
ಇತ್ತೀಚಿನ ವರ್ಷಗಳಲ್ಲಿ ಕಾಲೇಜಿನ ವಿವಿಧ ಬ್ಯಾಚ್‌ಗಳ ಹಿರಿಯ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳನ್ನು ಒಗ್ಗೂಡಿಸಿಕೊಂಡು ಕಾಲೇಜಿಗೆ ಭೇಟಿ ನೀಡುತ್ತಿರುವುದು ಗಮನಾರ್ಹವಾಗಿದೆ. ಇಂತಹ ಪುನರ್ಮಿಲನಗಳು ಕೇವಲ ಭೇಟಿಗೆ ಸೀಮಿತವಾಗದೆ, ಹಳೆಯ ಸುವರ್ಣ ನೆನಪುಗಳನ್ನು ಮರುಕಳಿಸುವ, ಸ್ನೇಹದ ನಂಟನ್ನು ಗಟ್ಟಿಗೊಳಿಸುವ ಹಾಗೂ ತಾವು ಬೆಳೆದ ಸಂಸ್ಥೆಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಪುನಃ ಜೋಡಿಸುವ ವೇದಿಕೆಗಳಾಗಿವೆ.

ವೃತ್ತಿ ಮತ್ತು ಸಾಮಾಜಿಕ ಜೀವನದಲ್ಲಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ಕಾಲೇಜಿನ ಆವರಣಕ್ಕೆ ಕಾಲಿಟ್ಟ ಕ್ಷಣ ಅವರು ತಮ್ಮ ಹುದ್ದೆ, ಸ್ಥಾನಮಾನಗಳನ್ನು ಮರೆತು ಮತ್ತೆ ತಮ್ಮ ಕಾಲೇಜು ದಿನಗಳ ವಿದ್ಯಾರ್ಥಿಗಳಾಗಿ, ಸ್ನೇಹಿತರಾಗಿ, ಸಹಪಾಠಿಗಳಾಗಿ ಬೆರೆತದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.

ಒಂದು ಋಣಸ್ಮರಣೆ; ಗುರುಗಳಿಗೆ ಭಾವಪೂರ್ಣ ಗುರುವಂದನೆ
ಪ್ರೊ. ಅಣ್ಣಾಜಿರಾವ್ | ಪ್ರೊ. ಹರಿನಾರಾಯಣ ಮಾಡಾವು | ಪ್ರೊ. ವಿಷ್ಣು ಭಟ್ | ಡಾ. ಎ.ಪಿ. ರಾಧಾಕೃಷ್ಣ | ಡಾ. ಕೃಷ್ಣಕುಮಾರ್ | ಪ್ರೊ. ಗಣೇಶ್ ಭಟ್ | ಪ್ರೊ. ಬಾಲಕೃಷ್ಣ | ಪ್ರೊ. ವಸಂತಿ | ಪ್ರೊ. ಇಟಾ ಡಿಸೋಜಾ
1991ರ ಬಿ.ಎಸ್ಸಿ. ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು ತಮ್ಮ ಬದುಕಿಗೆ ಜ್ಞಾನ ಮತ್ತು ದಿಕ್ಕು ನೀಡಿದ ಈ ಗುರುಗಳನ್ನು ಏಲಕ್ಕಿ ಹಾರ, ಸರಸ್ವತಿ ವಿಗ್ರಹ, ಶಾಲು ಹಾಗೂ ಹಣ್ಣುಗಳನ್ನು ನೀಡಿ ಗುರುವಂದನೆಯೊಂದಿಗೆ ಸನ್ಮಾನಿಸಿದರು.

ಗುರುವಂದನೆ ಸ್ವೀಕರಿಸಲು ಅನಾರೋಗ್ಯ ಮತ್ತು ವಯೋಸಹಜ ಕಾರಣಗಳಿಗೆ ಸಮಾರಂಭಕ್ಕೆ ಬರಲಾಗದ ಪ್ರೊ. ಲಕ್ಷ್ಮಿನಾರಾಯಣ ಕಡಂಬಳಿತ್ತಾಯ, ಪ್ರೊ.ಕೇಶವ ಭಟ್,ಪ್ರೊ.ಕಾನ್ಸೆಪ್ಟ ಲೋಬೋ, ಪ್ರೊಸಿರಿಲ್ ಮಥಿಯಾಸ್ ಅವರ ನಿವಾಸಗಳಿಗೇ ಹುಡುಕಿಕೊಂಡು ಹೋದ ಹಿರಿಯ ವಿದ್ಯಾರ್ಥಿಗಳು ಅಲ್ಲಿಯೇ ಗುರುವಂದನೆ ಸಲ್ಲಿಸಿ ಕೃತಾರ್ಥರಾದದ್ದು ವಿಶೇಷವಾಗಿತ್ತು.

ಇದು ಕೇವಲ ಸನ್ಮಾನವಾಗಿರದೆ, ತಮ್ಮ ಬದುಕಿಗೆ ಜ್ಞಾನ, ಶಿಸ್ತು, ಮೌಲ್ಯ ಮತ್ತು ದಿಕ್ಕು ನೀಡಿದ ಗುರುಗಳೆಡೆಗೆ ಹಳೆಯ ವಿದ್ಯಾರ್ಥಿಗಳು ಸಲ್ಲಿಸಿದ ಕೃತಜ್ಞತೆಯ ಸಂಕೇತವಾಗಿತ್ತು. ಕಾಲೇಜು ದಿನಗಳಲ್ಲಿ ಶಿಕ್ಷಕರಿಂದ ಪಡೆದ ಮಾರ್ಗದರ್ಶನವನ್ನು ಹಲವು ದಶಕಗಳ ಬಳಿಕವೂ ಸ್ಮರಿಸಿ ಗೌರವ ಸಲ್ಲಿಸಿದ ಕ್ಷಣವು ಕಾರ್ಯಕ್ರಮಕ್ಕೆ ವಿಶೇಷ ಭಾವನಾತ್ಮಕ ಸ್ಪರ್ಶ ನೀಡಿತು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಡಾ ಕೃಷ್ಣಪ್ರಭಾ, ರಾಜ್ಯ ಮಾಹಿತಿ ಆಯುಕ್ತ ಬದ್ರುದ್ದೀನ್ ಮಾಣಿ, ಶಿವನಾಥ ರೈ ಮೆಗಿನಗುತ್ತು, ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಹಾಗೂ ವಾಲೇರಿಯನ್ ಡಿಸೋಜಾ ಪ್ರಮುಖ ಪಾತ್ರ ವಹಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಪೊನ್ನಪ್ಪ ಅಡ್ಲ್ಯಾಬ್ಸ್, ಕಾಲೇಜಿನ ಪಿಆರ್‌ಒ ಡಾ. ಭಾರತಿ ಎಸ್. ರೈ, ಉಪಕುಲಸಚಿವ (ಶೈಕ್ಷಣಿಕ) ವಿಪಿನ್ ನಾಯಕ್, ಎನ್‌ಸಿಸಿ ನೌಕಾ ವಿಭಾಗದ ಸಬ್ ಲೆಫ್ಟಿನೆಂಟ್ ತೇಜಸ್ವಿ ಭಟ್, ಉಪಕುಲಸಚಿವ (ಮೌಲ್ಯಮಾಪನ) ಅಭಿಷೇಕ್ ಸುವರ್ಣ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಹರ್ಷಿತ್ ಕುಮಾರ್ ಉಪಸ್ಥಿತರಿದ್ದರು.

Ad Widget
Continue Reading

ಶಿಕ್ಷಣ

Vivekananda-ವಿವೇಕಾನಂದ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಗಳಿಂದ ಚಾರಣ ಹಾಗೂ ಸ್ವಚ್ಛತಾ ಅಭಿಯಾನ

Published

on



Ad Widget

Ad Widget

Ad Widget

Ad Widget

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಇದರ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ಅಕ್ಟೋಬರ್ 3ರಂದು ಪರ್ಲಡ್ಕ ಮಾರ್ಗವಾಗಿ ಬಿರುಮಲೆ ಬೆಟ್ಟಕ್ಕೆ ಒಂದು ದಿನದ ಚಾರಣ ಕಾರ್ಯಕ್ರಮ ಹಾಗೂ ಸ್ವಚ್ಛತಾ ಅಭಿಯಾನ ನಡೆಯಿತು.

Ad Widget

Ad Widget

Ad Widget

Ad Widget

ಪುತ್ತೂರು, ಅ.3: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಇದರ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ಅಕ್ಟೋಬರ್ 3ರಂದು ಪರ್ಲಡ್ಕ ಮಾರ್ಗವಾಗಿ ಬಿರುಮಲೆ ಬೆಟ್ಟಕ್ಕೆ ಒಂದು ದಿನದ ಚಾರಣ ಕಾರ್ಯಕ್ರಮ ಹಾಗೂ ಸ್ವಚ್ಛತಾ ಅಭಿಯಾನ ನಡೆಯಿತು.

Ad Widget

Ad Widget

Ad Widget alt="Ad Widget"/>

Ad Widget

ಸಾಹಸ ಚಟುವಟಿಕೆಯೊಂದಿಗೆ ಪರಿಸರ ಜಾಗೃತಿ ಮತ್ತು ಸಮಾಜ ಸೇವೆಯನ್ನು ಸಂಯೋಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

Ad Widget

Ad Widget <> Ad Widget

ಕಾರ್ಯಕ್ರಮದ ಅಂಗವಾಗಿ ರೋವರ್ಸ್ ಮತ್ತು ರೇಂಜರ್ಸ್ಗಳು ಚಾರಣದ ಮಾರ್ಗದುದ್ದಕ್ಕೂ ಸ್ವಚ್ಛತಾ ಅಭಿಯಾನವನ್ನು ಕೈಗೊಂಡರು. ಪ್ರವಾಸಿಗರು ಹಾಗೂ ಸಾರ್ವಜನಿಕರು ಎಸೆದಿದ್ದ ಪ್ಲಾಸ್ಟಿಕ್ ಬಾಟಲಿಗಳು, ಕವರ್‌ಗಳು, ಆಹಾರದ ಪ್ಯಾಕೆಟ್‌ಗಳು ಮತ್ತು ಇತರ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ವಿದ್ಯಾರ್ಥಿಗಳು ಸಂಗ್ರಹಿಸಿ, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.



Ad Widget

ಅಲ್ಲದೆ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಹಾಗೂ ನೈಸರ್ಗಿಕ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಿದರು.

Ad Widget

Ad Widget

ವಿದ್ಯಾರ್ಥಿಗಳಲ್ಲಿ ದೈಹಿಕ ಕ್ಷಮತೆ, ತಂಡದ ಮನೋಭಾವ, ಶಿಸ್ತು, ನಾಯಕತ್ವ, ಪರಿಸರ ಸಂರಕ್ಷಣೆಯ ಜವಾಬ್ದಾರಿ ಹಾಗೂ ಸಮಾಜ ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿನ ರೇಂಜರ್ ಲೀಡರ್‌ಗಳಾದ ದಿವ್ಯಶ್ರೀ ಜಿ. ಮತ್ತು ದೀಪಿಕಾ ಎಸ್. ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

Ad Widget
Continue Reading

ಶಿಕ್ಷಣ

Vivekananda-ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

Published

on



Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಕಬಕ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿರುತ್ತಾರೆ.

Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಕಬಕ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು.

Ad Widget

Ad Widget

Ad Widget alt="Ad Widget"/>

Ad Widget

ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿರುತ್ತಾರೆ.

Ad Widget

Ad Widget <> Ad Widget

ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಕಿಶನ್ ಕೆ ವೈ, ತ್ರಿಶಿಕ್ ಕೆ. ಗೌಡ , ಯಶ್ವಿತ್ ಗೌಡ, ಪವನ್ ಕುಮಾರ್, ಮೋಕ್ಷಿತ್ ಕೆ.ಜೆ, ಅನ್ವಿತ್ ಎಸ್ .ಪಿ, ನಿದೀಶ್ ಶೆಟ್ಟಿ, ಮನ್ವಂತ್ ದ್ವಿತೀಯ ಪಿಯುಸಿ ಪ್ರಣಮ್ ಪಿ ಶೆಟ್ಟಿ ,ಚಿಂತನ್ ಕೆ, ಕೆ ಆರ್ ದಿಶಾಂತ್ ಹಾಗೂ ಬಾಲಕಿಯರ ತಂಡದಲ್ಲಿ ಪ್ರಥಮ ಪಿಯುಸಿ ವಿನ್ಯಾ ರೈ, ಸೃಷ್ಟಿ ಎಸ್. ಆರ್. ರೈ, ವೀಕ್ಷಾ ಬಿ. ಆರ್, ಧರಣಿ ಕೆ. ಟಿ, ಶ್ರಾವ್ಯ, ಕೆ. ಸುಶಾನಿ, ಸಿ. ಎಸ್. ಚಿನ್ಮಯ್ ಗೌಡ, ಪಾವನಿ ಕೆ. ವಸಿಷ್ಠ, ಸಾನ್ವಿ ಎಸ್, ತನ್ವಿ ದ್ವಿತೀಯ ಪಿಯುಸಿ ಧನ್ವಿ ಎ. ಆರ್ ಭಾಗವಹಿಸಿರುತ್ತಾರೆ.



Ad Widget

ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading