Connect with us

ಸಿನೆಮಾ

Toxic-ಯಶ್‌ ಅಭಿನಯದ ‘ಟಾಕ್ಸಿಕ್’ ಸ್ಟಾರ್‌ಗಳ ಸಂಭಾವನೆ ಲೀಕ್; ಕಲಾವಿದರಿಗೆ ಸಿಕ್ಕ ಮೊತ್ತ ಕೇಳಿದ್ರೆ ದಂಗಾಗ್ತೀರಾ..!

Published

on

Ad Widget

Ad Widget

Ad Widget

Ad Widget

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ (Toxic) ಸದ್ಯ ಇಡೀ ಭಾರತೀಯ ಚಿತ್ರರಂಗದ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಧೂಳೆಬ್ಬಿಸಿದ್ದು, ಈಗ ಚಿತ್ರದ ಕಲಾವಿದರ ಬೃಹತ್ ಮೊತ್ತದ ಸಂಭಾವನೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ (Toxic) ಸದ್ಯ ಇಡೀ ಭಾರತೀಯ ಚಿತ್ರರಂಗದ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಧೂಳೆಬ್ಬಿಸಿದ್ದು, ಈಗ ಚಿತ್ರದ ಕಲಾವಿದರ ಬೃಹತ್ ಮೊತ್ತದ ಸಂಭಾವನೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Ad Widget

Ad Widget alt="Ad Widget"/>

Ad Widget

ಯಶ್ ಅವರಿಗೆ ₹50 ಕೋಟಿ ಸಂಭಾವನೆ?
‘ಟಾಕ್ಸಿಕ್’ ಚಿತ್ರದಲ್ಲಿ ‘ರಾಯಾ’ ಎಂಬ ಖಡಕ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಯಶ್, ಈ ಚಿತ್ರಕ್ಕಾಗಿ ಸುಮಾರು ₹50 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಯಶ್ ಈ ಚಿತ್ರಕ್ಕೆ ಕೇವಲ ನಟನಷ್ಟೇ ಅಲ್ಲದೆ, ಸಹ-ಬರಹಗಾರ ಮತ್ತು ನಿರ್ಮಾಪಕರಾಗಿಯೂ ಜವಾಬ್ದಾರಿ ಹಂಚಿಕೊಂಡಿರುವುದು ವಿಶೇಷ.

Ad Widget

Ad Widget <> Ad Widget

ಲೇಡಿ ಸೂಪರ್‌ಸ್ಟಾರ್ ನಯನತಾರಾಗಿಂತ ಕಿಯಾರಾ ಅಡ್ವಾಣಿಗೆ ಹೆಚ್ಚು ಪೇಮೆಂಟ್?
ಸಂಭಾವನೆ ವಿಚಾರದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ‘ನಾಡಿಯಾ’ ಪಾತ್ರಧಾರಿ ಕಿಯಾರಾ ಅಡ್ವಾಣಿ ₹15 ಕೋಟಿ ಸಂಭಾವನೆ ಪಡೆದಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ (ಗಂಗಾ ಪಾತ್ರ) ಅವರು ₹12 ರಿಂದ ₹18 ಕೋಟಿ ನಡುವೆ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದ್ದು, ಕಿಯಾರಾ ಅವರ ಸಂಭಾವನೆ ನಯನತಾರಾಗಿಂತಲೂ ಹೆಚ್ಚಿರಬಹುದು ಎಂಬ ಚರ್ಚೆ ನಡೆಯುತ್ತಿದೆ.

ಕನ್ನಡಿಗರ ನೆಚ್ಚಿನ ರುಕ್ಕಿಣಿ ವಸಂತ್ ಕಮಾಯಿ ಎಷ್ಟು?
‘ಸಪ್ತ ಸಾಗರದಾಚೆ ಎಲ್ಲೋ’ ಖ್ಯಾತಿಯ ರುಕ್ಕಿಣಿ ವಸಂತ್ ಈ ಚಿತ್ರದಲ್ಲಿ ‘ಮೆಲಿಸಾ’ ಎಂಬ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರಿಗೆ ಸುಮಾರು ₹3 ರಿಂದ ₹5 ಕೋಟಿ ಸಂಭಾವನೆ ನೀಡಲಾಗಿದೆ ಎಂದು ವರದಿಯಾಗಿದೆ.

Ad Widget

Ad Widget

ಇತರೆ ತಾರೆಯರ ಸಂಭಾವನೆ ವಿವರ:
ಹುಮಾ ಖುರೇಷಿ (ಎಲಿಜಬೆತ್ ಪಾತ್ರ): ₹2 ರಿಂದ ₹3 ಕೋಟಿ.
ತಾರಾ ಸುತಾರಿಯಾ (ರೆಬೆಕಾ ಪಾತ್ರ): ₹2 ರಿಂದ ₹3 ಕೋಟಿ.

ಈ ಎಲ್ಲಾ ಮೊತ್ತಗಳು ಚಿತ್ರರಂಗದ ಮೂಲಗಳಿಂದ ಬಂದ ವರದಿಗಳಾಗಿದ್ದು, ಚಿತ್ರತಂಡ ಅಥವಾ ನಟರಿಂದ ಅಧಿಕೃತವಾಗಿ ದೃಢಪಟ್ಟಿಲ್ಲ. ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗೋನ್-ಅಪ್ಸ್’ ಇದೇ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.

Ad Widget
Click to comment

Leave a Reply

ಸಿನೆಮಾ

Dawood-‘ಧುರಂಧರ್ ‘ ನಲ್ಲಿ ದಾವೂದ್ ನ ತೋರಿಸಿದ ರೀತಿ ವಾಸ್ತವವಲ್ಲ…! ಮೋಸ್ಟ್ ವಾಂಟೆಡ್ ಪಾತಕಿ ಈಗ ಹೇಗಿದ್ದಾನೆ ಗೊತ್ತೇ..? ಮಾಜಿ FBI ಅಧಿಕಾರಿ ಹೇಳಿದ್ದೇನೂ..?

Published

on

Ad Widget

Ad Widget

Ad Widget

Ad Widget

‘ಧುರಂಧರ್’ ಸಿನಿಮಾದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಾ ಹಾಸಿಗೆ ಹಿಡಿದಿರುವ ವೃದ್ಧನಂತೆ ಚಿತ್ರಿಸಲಾಗಿರುವ ದಾವೂದ್, ವಾಸ್ತವದಲ್ಲಿ ಇನ್ನೂ ಸಕ್ರಿಯನಾಗಿದ್ದು ತನ್ನ ಅಪರಾಧ ಜಾಲವನ್ನು ಮುನ್ನಡೆಸುತ್ತಿದ್ದಾನೆ ಎಂದು ಅಮೆರಿಕದ ಮಾಜಿ ಎಫ್‌ಬಿಐ ಅಧಿಕಾರಿ ಕಮ್ರಾನ್ ಫರೀದಿ ಇಂಡಿಯಾ ಟುಡೇಗೆ ನೀಡಿದ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Ad Widget

Ad Widget

Ad Widget

Ad Widget

ನವದೆಹಲಿ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟಗಳ ಬಳಿಕ ಭಾರತದಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎನ್ನಲಾದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬದುಕು ಇಂದಿಗೂ ನಿಗೂಢವಾಗಿದೆ. ಕಳೆದ ಹಲವು ವರ್ಷಗಳಿಂದ ಆತನ ಯಾವುದೇ ಅಧಿಕೃತ ಛಾಯಾಚಿತ್ರ ಸಾರ್ವಜನಿಕವಾಗಿ ಲಭ್ಯವಾಗಿಲ್ಲ. ಇದೀಗ ದಾವೂದ್‌ನ ಡಿ-ಕಂಪನಿಯೊಳಗೆ ರಹಸ್ಯವಾಗಿ ಕಾರ್ಯನಿರ್ವಹಿಸಿದ್ದಾಗಿ ಹೇಳಿಕೊಂಡಿರುವ ಅಮೆರಿಕದ ಮಾಜಿ ಎಫ್‌ಬಿಐ ಅಧಿಕಾರಿ ಕಮ್ರಾನ್ ಫರೀದಿ, ಡಾನ್‌ನ ವೈಯಕ್ತಿಕ ಜೀವನ, ಭದ್ರತಾ ವ್ಯವಸ್ಥೆ ಹಾಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆಗಿನ ಸಂಪರ್ಕದ ಕುರಿತು ಹಲವು ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

Ad Widget

Ad Widget alt="Ad Widget"/>

Ad Widget

‘ಧುರಂಧರ್’ ಸಿನಿಮಾದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಾ ಹಾಸಿಗೆ ಹಿಡಿದಿರುವ ವೃದ್ಧನಂತೆ ಚಿತ್ರಿಸಲಾಗಿರುವ ದಾವೂದ್, ವಾಸ್ತವದಲ್ಲಿ ಇನ್ನೂ ಸಕ್ರಿಯನಾಗಿದ್ದು ತನ್ನ ಅಪರಾಧ ಜಾಲವನ್ನು ಮುನ್ನಡೆಸುತ್ತಿದ್ದಾನೆ ಎಂಬುದು ಫರೀದಿ ಅವರ ಪ್ರಮುಖ ಹೇಳಿಕೆ. ಇಂಡಿಯಾ ಟುಡೇಗೆ ನೀಡಿದ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಅವರು ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

Ad Widget

Ad Widget <> Ad Widget

ಧುರಂಧರ್ ಸಿನಿಮಾದ ದಾವೂದ್‌ಗೂ ನೈಜ ವ್ಯಕ್ತಿಗೂ ವ್ಯತ್ಯಾಸ!
‘ಧುರಂಧರ್’ ಚಿತ್ರದಲ್ಲಿ ‘ಬಡೇ ಸಾಹಬ್’ ಎಂದು ಉಲ್ಲೇಖಿಸಲಾಗಿರುವ ದಾವೂದ್ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾನೆ. ಆದರೆ, ದಾವೂದ್ ಜೊತೆ ಹಲವು ಪಾರ್ಟಿ ಹಾಗೂ ವ್ಯವಹಾರಿಕ ಸಭೆಗಳಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿಕೊಂಡಿರುವ ಫರೀದಿ, ಆತ ಇಂದಿಗೂ ತನ್ನ ಅಪರಾಧ ಜಾಲದ ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮಾದಕವಸ್ತು ವ್ಯಾಪಾರದ ಮೇಲೂ ದಾವೂದ್ ನಿಗಾ ಇರಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಪಾಕಿಸ್ತಾನದ ಭದ್ರತಾ ವಲಯದಲ್ಲಿ ಆತನನ್ನು ‘ಬಡೇ ಸಾಹಬ್’ ಅಥವಾ ‘ಬಡೆ ವಾಲೆ’ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.

Ad Widget

Ad Widget

ಕರಾಚಿಯ ಕ್ಲಿಫ್ಟನ್‌ನಲ್ಲೇ ಡಾನ್ ವಾಸ!
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾದರೂ ದಾವೂದ್ ತನ್ನ ವಾಸಸ್ಥಳವನ್ನು ಬದಲಿಸಿಲ್ಲ. ಕರಾಚಿಯ ಅತ್ಯಂತ ಬಿಗಿ ಭದ್ರತೆಯ ಕ್ಲಿಫ್ಟನ್ ಪ್ರದೇಶದಲ್ಲಿ ಕುಟುಂಬದ ಸದಸ್ಯರೊಂದಿಗೆ ವಾಸಿಸುತ್ತಿದ್ದಾನೆ ಎಂದು ಫರೀದಿ ಹೇಳಿಕೊಂಡಿದ್ದಾರೆ.

ಆದರೆ, ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾದ ಸಂದರ್ಭಗಳಲ್ಲಿ ಆತ ಇಸ್ಲಾಮಾಬಾದ್ ಸೇರಿದಂತೆ ಮೂರು ಸುರಕ್ಷಿತ ಅಡಗುತಾಣಗಳಿಗೆ ಸ್ಥಳಾಂತರಗೊಳ್ಳುತ್ತಾನೆ ಎಂದು ತಿಳಿಸಿದ್ದಾರೆ.

ದಾವೂದ್ ನಿವಾಸದ ಕೆಳಗೆ ರಹಸ್ಯ ಸುರಂಗವಿದೆ ಎಂಬ ವದಂತಿಯನ್ನು ತಳ್ಳಿಹಾಕಿರುವ ಅವರು, ಮನೆಯ ಹಿಂಭಾಗದಿಂದ ಜನಸಂದಣಿ ಹೆಚ್ಚಿರುವ ದರ್ಗಾವೊಂದಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ನಿರ್ಗಮನ ಮಾರ್ಗವಿದೆ ಎಂದು ಹೇಳಿದ್ದಾರೆ.

ಡಿ-ಕಂಪನಿಯೊಳಗೆ ನುಸುಳಿದ್ದೇಗೆ?
ದಾವೂದ್‌ನ ಅಪರಾಧ ಜಾಲದೊಳಗೆ ತಾನು ಹೇಗೆ ಪ್ರವೇಶಿಸಿದೆ ಎಂಬುದನ್ನೂ ಫರೀದಿ ವಿವರಿಸಿದ್ದಾರೆ. 1995ರಲ್ಲಿ ಎಫ್‌ಬಿಐಗೆ ಸೇರ್ಪಡೆಯಾಗಿದ್ದ ತಮಗೆ 2009ರಲ್ಲಿ ದಾವೂದ್ ಗ್ಯಾಂಗ್‌ನೊಳಗೆ ರಹಸ್ಯವಾಗಿ ನುಸುಳುವ ಜವಾಬ್ದಾರಿ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಈ ಕಾರ್ಯಾಚರಣೆಗಾಗಿ ರಷ್ಯಾದ ಮಾಫಿಯಾ ಸದಸ್ಯನಂತೆ ಗುರುತಿಸಿಕೊಂಡು, ತಮ್ಮ ಪಾಕಿಸ್ತಾನಿ ಮೂಲವನ್ನು ಮರೆಮಾಚಿದ್ದಾಗಿ ತಿಳಿಸಿದ್ದಾರೆ. ದಾವೂದ್‌ನ ಆಪ್ತ ಸಹಚರ ಜಬೀರ್ ಮೊತಿವಾಲಾ ಮೂಲಕ ಆತನಿಗೆ ಪರಿಚಯವಾಗಿತ್ತು ಎಂದಿದ್ದಾರೆ.

2018ರಲ್ಲಿ ಲಂಡನ್‌ನಲ್ಲಿ ಜಬೀರ್ ಮೊತಿವಾಲಾ ಬಂಧನಕ್ಕೂ ತಾನೇ ಕಾರಣ ಎಂದು ಫರೀದಿ ಹೇಳಿಕೊಂಡಿದ್ದಾರೆ. ಕರಾಚಿಯಲ್ಲಿ ಡಿ-ಕಂಪನಿಗಾಗಿ ಹವಾಲಾ ಹಣಕಾಸು ವ್ಯವಹಾರಗಳನ್ನು ಸ್ಥಾಪಿಸಲು ಸಹಾಯ ಮಾಡಿದ್ದಾಗಿಯೂ ತಿಳಿಸಿದ್ದಾರೆ. ದಾವೂದ್‌ನ ಸಹೋದರ ಅನೀಸ್ ಇಬ್ರಾಹಿಂ ಪುತ್ರ ಅಲಿ ಕಾಸ್ಕರ್ ತಮ್ಮ ಮಾಹಿತಿಯ ಪ್ರಮುಖ ಮೂಲವಾಗಿದ್ದ ಎಂದು ಹೇಳಿದ್ದಾರೆ.

ರಾತ್ರಿ 10ರ ಬಳಿಕವೇ ಹೊರಗೆ ಬರುವ ಡಾನ್!
ದಾವೂದ್‌ನ ದಿನಚರಿಯ ಕುರಿತು ಮಾತನಾಡಿರುವ ಫರೀದಿ, ಆತ ಹಗಲು ಹೊತ್ತಿನಲ್ಲಿ ಮನೆಯಿಂದ ಹೊರಬರುವುದಿಲ್ಲ ಎಂದು ತಿಳಿಸಿದ್ದಾರೆ. ರಾತ್ರಿ 10 ಗಂಟೆಯ ಬಳಿಕ ಹೊರಗೆ ಬಂದು, ಮುಂಜಾನೆ ಫಜರ್ ಪ್ರಾರ್ಥನೆಗೂ ಮುನ್ನ ಮನೆಗೆ ಮರಳುತ್ತಾನೆ. ಈ ಕಾರಣದಿಂದ ಆತನನ್ನು ‘ರಾತ್ ಕಾ ಬಾದ್‌ಶಾ’ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.

ದಾವೂದ್‌ಗೆ ದಿನದ 24 ಗಂಟೆಯೂ ಬಿಗಿ ಭದ್ರತೆ ಇರುತ್ತದೆ. ಸುಮಾರು 35ರಿಂದ 45 ಮಂದಿ ಭದ್ರತಾ ಸಿಬ್ಬಂದಿ ಆತನ ಸುತ್ತಲೂ ಕಾವಲು ಕಾಯುತ್ತಾರೆ. ಅವರ ಬಳಿ ಎಕೆ-47 ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿರುತ್ತವೆ ಎಂದು ಫರೀದಿ ಆರೋಪಿಸಿದ್ದಾರೆ.

ದಾವೂದ್‌ನ ಭದ್ರತಾ ವ್ಯವಸ್ಥೆಯನ್ನು ಛೋಟಾ ಶಕೀಲ್ ನಿರ್ವಹಿಸುತ್ತಾನೆ. ಆತ ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದು, ಪ್ರತಿ ಶುಕ್ರವಾರ ಆ ಸಂಸ್ಥೆಯ ಕೇಂದ್ರ ಕಚೇರಿಗೆ ತೆರಳಿ ಭದ್ರತಾ ವರದಿಗಳನ್ನು ಪಡೆಯುತ್ತಾನೆ ಎಂದು ಫರೀದಿ ಹೇಳಿದ್ದಾರೆ.

ದಾವೂದ್ ಮತ್ತು ಛೋಟಾ ಶಕೀಲ್ ದುಬೈನಿಂದ ತರಿಸಿಕೊಂಡಿರುವ ಗುಂಡು ನಿರೋಧಕ ವಾಹನಗಳಲ್ಲಿ ಸಂಚರಿಸುತ್ತಾರೆ. ಬಾಂಬ್, ರಾಕೆಟ್ ಹಾಗೂ ಸ್ನೈಪರ್ ದಾಳಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಈ ವಾಹನಗಳಿಗಿದೆ ಎಂದು ತಿಳಿಸಿದ್ದಾರೆ.

ಐಎಸ್‌ಐ, ಲಷ್ಕರ್ ಜೊತೆ ನಂಟಿನ ಆರೋಪ
ದಾವೂದ್ ಪಾಕಿಸ್ತಾನದ ಐಎಸ್‌ಐ ಆಶ್ರಯದಲ್ಲಿದ್ದಾನೆ ಎಂದು ಫರೀದಿ ನೇರ ಆರೋಪ ಮಾಡಿದ್ದಾರೆ. ಲಷ್ಕರ್-ಎ-ತೊಯ್ಬಾ ಸಂಘಟನೆ ಹಾಗೂ 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಹಫೀಜ್ ಸಯೀದ್ ಜೊತೆ ದಾವೂದ್‌ಗೆ ನಿಕಟ ವ್ಯವಹಾರಿಕ ಸಂಪರ್ಕವಿದೆ ಎಂದೂ ಹೇಳಿದ್ದಾರೆ.

1993ರ ಮುಂಬೈ ಸ್ಫೋಟ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಟೈಗರ್ ಮೆಮನ್ ಬಗ್ಗೆಯೂ ಮಾತನಾಡಿರುವ ಅವರು, ಮೆಮನ್ ಹೆಚ್ಚು ಹೊರಗೆ ಸಂಚರಿಸುವುದಿಲ್ಲ ಎಂದಿದ್ದಾರೆ. ಇದೇ ವೇಳೆ, ಅನೀಸ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ನಡುವೆ ಗ್ಯಾಂಗ್‌ನ ನಿಯಂತ್ರಣ ಹಾಗೂ ಉತ್ತರಾಧಿಕಾರದ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಆರೋಪಿಸಿದ್ದಾರೆ.

ಐಷಾರಾಮಿ ಜೀವನ, ಕೊಕೇನ್ ಸೇವನೆ, ಎರಡನೇ ಮದುವೆ!
ಧಾರ್ಮಿಕ ವ್ಯಕ್ತಿಯಂತೆ ತನ್ನನ್ನು ಬಿಂಬಿಸಿಕೊಳ್ಳುವ ದಾವೂದ್ ಖಾಸಗಿ ಬದುಕಿನಲ್ಲಿ ಐಷಾರಾಮಿ ಜೀವನ ನಡೆಸುತ್ತಾನೆ ಎಂದು ಫರೀದಿ ಆರೋಪಿಸಿದ್ದಾರೆ. ಮುಜ್ರಾ ನೃತ್ಯ ಕಾರ್ಯಕ್ರಮಗಳನ್ನು ವೀಕ್ಷಿಸುವ ಆಸಕ್ತಿ ಹೊಂದಿದ್ದಾನೆ. ಹಿಂದೆ ಮದ್ಯ ಸೇವಿಸುತ್ತಿದ್ದ ಆತ ಇದೀಗ ಕೊಕೇನ್ ಸೇವನೆಗೆ ಹೆಚ್ಚು ಒಲವು ತೋರಿದ್ದಾನೆ ಎಂದು ಹೇಳಿದ್ದಾರೆ.

ದಾವೂದ್‌ಗಾಗಿ ತಾನೇ ಮದ್ಯ ಖರೀದಿಸಿದ್ದಾಗಿ ಹಾಗೂ ಸುಮಾರು 1.78 ಲಕ್ಷ ರೂಪಾಯಿ ಮೌಲ್ಯದ ದುಬಾರಿ ಮದ್ಯದ ಬಾಟಲಿಯನ್ನು ಆತ ತರಿಸಿಕೊಂಡಿದ್ದಾಗಿ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಕರಾಚಿಯ ’22 ಜಮ್ಮಮಾ’ ಎಂಬ ಅತ್ಯಂತ ಬಿಗಿ ಭದ್ರತೆಯ, ಶಬ್ದ ನಿರೋಧಕ ಕಟ್ಟಡದಲ್ಲಿ ದಾವೂದ್ ಪಾಕಿಸ್ತಾನದ ಅಧಿಕಾರಿಗಳು ಮತ್ತು ಉದ್ಯಮಿಗಳೊಂದಿಗೆ ಸಭೆ ನಡೆಸುತ್ತಾನೆ ಎಂದಿದ್ದಾರೆ.

ಒಂದು ಸಂದರ್ಭದಲ್ಲಿ ತನ್ನ ಸಹಾಯಕನಿಗೆ ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ನಲ್ಲಿ ಉದ್ಯೋಗ ಕೊಡಿಸುವ ಸಲುವಾಗಿ ದಾವೂದ್ ಮಧ್ಯರಾತ್ರಿಯಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಕರೆ ಮಾಡಿದ್ದನ್ನು ನೋಡಿದ್ದೇನೆ ಎಂದೂ ಫರೀದಿ ಹೇಳಿಕೊಂಡಿದ್ದಾರೆ.

ಇದಲ್ಲದೆ, ದಾವೂದ್ ಪಾಕಿಸ್ತಾನದಲ್ಲಿ ಎರಡನೇ ಮದುವೆಯಾಗಿದ್ದಾನೆ ಎಂಬ ಮಾಹಿತಿಯನ್ನೂ ಅವರು ಬಹಿರಂಗಪಡಿಸಿದ್ದಾರೆ. ಆಯೇಷಾ ಭಾಭಿ ಎಂದು ಕರೆಯಲಾಗುವ ಈ ಮಹಿಳೆ ದಾವೂದ್‌ಗಿಂತ ಸುಮಾರು 20 ವರ್ಷ ಚಿಕ್ಕವಳು. ಆಕೆ ಕರಾಚಿಯಲ್ಲಿ ಕಪ್ಪು ಬಣ್ಣದ ಮರ್ಸಿಡಿಸ್ ಕಾರಿನಲ್ಲಿ ಸಂಚರಿಸುತ್ತಾಳೆ ಎಂದು ತಿಳಿಸಿದ್ದಾರೆ.

2023ರಲ್ಲಿ ದಾವೂದ್‌ನ ಸಹೋದರಿ ಹಸೀನಾ ಪಾರ್ಕರ್ ಪುತ್ರ ಅಲಿಶಾ ಪಾರ್ಕರ್ ಕೂಡ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂದೆ ಇದೇ ರೀತಿಯ ಮಾಹಿತಿ ನೀಡಿದ್ದ ಎನ್ನಲಾಗಿದೆ. ಮೊದಲ ಪತ್ನಿ ಮೆಹಜಬೀನ್ ಜೊತೆಗಿನ ವಿವಾಹ ಸಂಬಂಧ ಮುಂದುವರಿದಿರುವಾಗಲೇ ದಾವೂದ್ ಪಾಕಿಸ್ತಾನದ ಪಠಾಣ್ ಸಮುದಾಯದ ಮಹಿಳೆಯನ್ನು ಎರಡನೇ ಮದುವೆಯಾಗಿದ್ದಾನೆ ಎಂದು ಅಲಿಶಾ ಹೇಳಿದ್ದ.

ದಾವೂದ್ ಜೊತೆಗಿದ್ದ ಮುಂಬೈನ ಫಕೀರ!
ದಾವೂದ್ ಪಾಕಿಸ್ತಾನಕ್ಕೆ ತೆರಳುವಾಗ ಮುಂಬೈ ಮೂಲದ ‘ಇಸ್ಲಾಂ ಬಾಬಾ’ ಎಂಬ ಫಕೀರನನ್ನೂ ತನ್ನೊಂದಿಗೆ ಕರೆದೊಯ್ದಿದ್ದ ಎಂದು ಫರೀದಿ ತಿಳಿಸಿದ್ದಾರೆ. ಡಿ-ಕಂಪನಿಯ ಯಾವುದೇ ಕಾರ್ಯಾಚರಣೆ ಆರಂಭಿಸುವ ಮೊದಲು ಈ ಫಕೀರನ ಅನುಮತಿ ಪಡೆಯಲಾಗುತ್ತದೆ ಎಂಬ ಕುತೂಹಲಕಾರಿ ವಿಚಾರವನ್ನೂ ಅವರು ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ, ದಶಕಗಳಿಂದ ನಿಗೂಢವಾಗಿರುವ ದಾವೂದ್ ಇಬ್ರಾಹಿಂನ ವೈಯಕ್ತಿಕ ಬದುಕು, ಭದ್ರತಾ ವ್ಯವಸ್ಥೆ ಹಾಗೂ ಅಪರಾಧ ಜಾಲದ ಕುರಿತು ಕಮ್ರಾನ್ ಫರೀದಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ, ಸಂದರ್ಶನದಲ್ಲಿ ಅವರು ನೀಡಿರುವ ಮಾಹಿತಿಗಳಿಗೆ ಸ್ವತಂತ್ರ ದೃಢೀಕರಣ ಲಭ್ಯವಾಗಿರುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಈ ಹೇಳಿಕೆಗಳನ್ನು ದೃಢಪಟ್ಟ ಅಧಿಕೃತ ಮಾಹಿತಿಯೆಂದು ಪರಿಗಣಿಸಲಾಗದು.

Ad Widget
Continue Reading

ಸಿನೆಮಾ

Arjun Sarja-ಪುತ್ರಿ ಐಶ್ವರ್ಯಾ ವಿರುದ್ಧ ಅವಹೇಳನಕಾರಿ ವರದಿ: ಮಾಧ್ಯಮಗಳ ವಿರುದ್ಧ ಸಿಡಿದೆದ್ದ ಅರ್ಜುನ್ ಸರ್ಜಾ; ಅಧಿಕೃತ ದೂರು ದಾಖಲು

Published

on

Ad Widget

Ad Widget

Ad Widget

Ad Widget

ಹಿರಿಯ ಪುತ್ರಿ ಐಶ್ವರ್ಯಾ ಅವರ ವೈಯಕ್ತಿಕ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಧಾರರಹಿತ ಮತ್ತು ಅವಹೇಳನಕಾರಿ ಆರೋಪಗಳ ವಿರುದ್ಧ ಬಹುಭಾಷಾ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಅಧಿಕೃತ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಚೆನ್ನೈ: ಹಿರಿಯ ಪುತ್ರಿ ಐಶ್ವರ್ಯಾ ಅವರ ವೈಯಕ್ತಿಕ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಧಾರರಹಿತ ಮತ್ತು ಅವಹೇಳನಕಾರಿ ಆರೋಪಗಳ ವಿರುದ್ಧ ಬಹುಭಾಷಾ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಅಧಿಕೃತ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

Ad Widget

Ad Widget alt="Ad Widget"/>

Ad Widget

ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿಯ ವಿವಾಹ ಸಮಾರಂಭದಲ್ಲಿ ಅಳಿಯ ಉಮಾಪತಿ ರಾಮಯ್ಯ ಅವರು ಹೆಚ್ಚಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ, ಐಶ್ವರ್ಯಾ ಮತ್ತು ಉಮಾಪತಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಕೆಲವು ಆನ್‌ಲೈನ್ ಪೋರ್ಟಲ್‌ಗಳಲ್ಲಿ ಪ್ರಕಟವಾಗಿದ್ದವು. ಇದರ ಬೆನ್ನಲ್ಲೇ ಕೆಲವು ಮಾಧ್ಯಮಗಳು ಐಶ್ವರ್ಯಾ ಅವರನ್ನು ಮದ್ಯವ್ಯಸನಿ ಎಂದು ಬಿಂಬಿಸುವ ವರದಿಗಳನ್ನೂ ಪ್ರಸಾರ ಮಾಡಿದ್ದವು.

Ad Widget

Ad Widget <> Ad Widget

ಈ ವರದಿಗಳ ವಿರುದ್ಧ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅರ್ಜುನ್ ಸರ್ಜಾ, ವ್ಯಕ್ತಿಯ ಗೌರವ ಮತ್ತು ಘನತೆಯ ವಿಚಾರದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಖಡಕ್ ಸಂದೇಶ ನೀಡಿದ್ದಾರೆ.

“ಕಲಾವಿದರ ಸಾರ್ವಜನಿಕ ಜೀವನದಲ್ಲಿ ಊಹಾಪೋಹಗಳು ಮತ್ತು ಟೀಕೆಗಳು ಸಹಜ. ಆದರೆ ಊಹಾಪೋಹಗಳಿಗೂ ಉದ್ದೇಶಪೂರ್ವಕವಾಗಿ ಆಧಾರರಹಿತ ಆರೋಪಗಳನ್ನು ಹರಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಾರ್ವಜನಿಕ ವಿಮರ್ಶೆಯ ಹೆಸರಿನಲ್ಲಿ ಕಟ್ಟುಕಥೆಗಳನ್ನು ಸೃಷ್ಟಿಸಲು ಅಥವಾ ವ್ಯಕ್ತಿಯ ಚಾರಿತ್ರ್ಯವಧೆ ಮಾಡಲು ಯಾರಿಗೂ ಅಧಿಕಾರವಿಲ್ಲ. ಯಾವುದೇ ಆಧಾರವಿಲ್ಲದೆ ಮಹಿಳೆಯೊಬ್ಬರನ್ನು ಮದ್ಯವ್ಯಸನಿ ಎಂದು ಕರೆಯುವುದು ಅತ್ಯಂತ ಬೇಜವಾಬ್ದಾರಿಯುತ ಮತ್ತು ಸ್ವೀಕಾರಾರ್ಹವಲ್ಲದ ವರ್ತನೆ” ಎಂದು ಅವರು ಕಿಡಿಕಾರಿದ್ದಾರೆ.

Ad Widget

Ad Widget

ಮೌನವನ್ನು ಒಪ್ಪಿಗೆ ಎಂದು ಭಾವಿಸಬೇಡಿ
ತಂದೆಯಾಗಿ ಪುತ್ರಿಯ ವಿರುದ್ಧದ ಇಂತಹ ಆರೋಪಗಳನ್ನು ಸಹಿಸಿಕೊಂಡು ಮೌನವಾಗಿರಲು ಸಾಧ್ಯವಿಲ್ಲ ಎಂದು ಅರ್ಜುನ್ ಸರ್ಜಾ ಸ್ಪಷ್ಟಪಡಿಸಿದ್ದಾರೆ.

“ಮೌನವೇ ಅತ್ಯಂತ ಘನತೆಯ ಪ್ರತಿಕ್ರಿಯೆ ಎಂದು ನಾವು ನಂಬಿದ್ದೇವೆ. ಆದರೆ ನಮ್ಮ ಮೌನವನ್ನು ಒಪ್ಪಿಗೆ ಎಂದು ಭಾವಿಸಬಾರದು. ತಪ್ಪು ಮಾಹಿತಿಯನ್ನು ಪದೇಪದೆ ಹರಡಲು ಅವಕಾಶ ನೀಡಲೂ ಸಾಧ್ಯವಿಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಮುಂದಾಗಿದ್ದೇವೆ” ಎಂದು ತಿಳಿಸಿದ್ದಾರೆ.

ಇದು ಕೇವಲ ತಮ್ಮ ಪುತ್ರಿಗೆ ಸಂಬಂಧಿಸಿದ ವಿಚಾರವಲ್ಲ. ಮಹಿಳೆಯರ ಘನತೆಗೆ ಧಕ್ಕೆ ಉಂಟಾದಾಗ ಹಾಗೂ ಅವರ ವೈಯಕ್ತಿಕ ಆಯ್ಕೆಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿದಾಗ ಎದುರಾಗುವ ನೋವಿನ ವಿಚಾರವೂ ಹೌದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕುಟುಂಬದ ಬೆಂಬಲವಿಲ್ಲದ ಮಹಿಳೆಯರಿಗೆ ಇಂತಹ ಆರೋಪಗಳು ಮತ್ತಷ್ಟು ನೋವುಂಟುಮಾಡಬಹುದು. ಯಾವುದೇ ಮಹಿಳೆ ಇಂತಹ ಪರಿಸ್ಥಿತಿಯನ್ನು ಏಕಾಂಗಿಯಾಗಿ ಎದುರಿಸುವಂತಾಗಬಾರದು ಅಥವಾ ತನ್ನ ಜೀವನಶೈಲಿಯನ್ನು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಾರದು ಎಂದು ಅರ್ಜುನ್ ಸರ್ಜಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Ad Widget
Continue Reading

ಸಿನೆಮಾ

Ramya Krishnan-ಪತಿಯಿಂದ ದೂರವಿದ್ದರೂ ದಾಂಪತ್ಯ ಗಟ್ಟಿಯಾಗಿದೆ..! ವಿಚ್ಛೇದನ ವದಂತಿಗೆ ರಮ್ಯಾ ಕೃಷ್ಣನ್ ಸ್ಪಷ್ಟನೆ

Published

on

Ad Widget

Ad Widget

Ad Widget

Ad Widget

ತೆಲುಗು ಚಿತ್ರರಂಗದ ಖ್ಯಾತ ನಟಿ ರಮ್ಯಾ ಕೃಷ್ಣನ್ ಮತ್ತು ನಿರ್ದೇಶಕ ಕೃಷ್ಣ ವಂಶಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ನಟಿ ರಮ್ಯಾ ಕೃಷ್ಣನ್ ಸ್ಪಷ್ಟನೆ ನೀಡಿದ್ದು, ತಮ್ಮ ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ತೆಲುಗು ಚಿತ್ರರಂಗದ ಖ್ಯಾತ ನಟಿ ರಮ್ಯಾ ಕೃಷ್ಣನ್ ಮತ್ತು ನಿರ್ದೇಶಕ ಕೃಷ್ಣ ವಂಶಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ನಟಿ ರಮ್ಯಾ ಕೃಷ್ಣನ್ ಸ್ಪಷ್ಟನೆ ನೀಡಿದ್ದು, ತಮ್ಮ ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ.

Ad Widget

Ad Widget alt="Ad Widget"/>

Ad Widget

ವೃತ್ತಿಪರ ಕಾರಣಗಳಿಂದಾಗಿ ತಾವು ಮತ್ತು ಪತಿ ಕೃಷ್ಣ ವಂಶಿ ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದೇವೆ. ಆದರೆ, ಇದರಿಂದ ತಮ್ಮ ಸಂಬಂಧಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Ad Widget

Ad Widget <> Ad Widget

ಇತ್ತೀಚೆಗೆ ‘ರಾ ಟಾಕ್ಸ್ ವಿತ್ ವಿಕೆ’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ರಮ್ಯಾ ಕೃಷ್ಣನ್, “ನಾವಿನ್ನೂ ದಂಪತಿಯಾಗಿಯೇ ಇದ್ದೇವೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆ ಬೇರೆ ನಗರಗಳಲ್ಲಿ ಸಂತೋಷದಿಂದ ವಾಸಿಸುತ್ತಿದ್ದೇವೆ. ನಮ್ಮ ವೃತ್ತಿಜೀವನದ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಹೇಳಿದ್ದಾರೆ.

ಮಗನ ಆರೋಗ್ಯಕ್ಕಾಗಿ ಬೇರೆ ನಗರಗಳಲ್ಲಿ ವಾಸ!
ತಮ್ಮ ಕುಟುಂಬದ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದ ರಮ್ಯಾ ಕೃಷ್ಣನ್, ಹೈದರಾಬಾದ್‌ನಿಂದ ಚೆನ್ನೈಗೆ ಪ್ರತಿ 15 ದಿನಗಳಿಗೊಮ್ಮೆ ಚಿತ್ರೀಕರಣಕ್ಕಾಗಿ ಪ್ರಯಾಣಿಸಬೇಕಾಗುತ್ತಿತ್ತು. ಈ ನಿರಂತರ ಪ್ರಯಾಣವು ಮಗನ ಆರೋಗ್ಯದ ಮೇಲೆ ಪರಿಣಾಮ ಬೀರಲು ಆರಂಭಿಸಿತ್ತು ಎಂದು ತಿಳಿಸಿದ್ದಾರೆ.

Ad Widget

Ad Widget

“ನಾನು ಪ್ರತಿ ಬಾರಿ ನಗರದಿಂದ ಹೊರಟಾಗಲೂ ನನ್ನ ಮಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ. ಹೀಗಾಗಿ, ಆತನ ಆರೋಗ್ಯದ ದೃಷ್ಟಿಯಿಂದ ಚೆನ್ನೈನಲ್ಲಿರುವ ಶಾಲೆಗೆ ಸೇರಿಸಲು ನಿರ್ಧರಿಸಿದೆವು. ಅಂದಿನಿಂದ ನಾವು ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದೇವೆ. ಈ ವ್ಯವಸ್ಥೆಯು ನಮ್ಮ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಅಲ್ಲದೆ, ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನೂ ಕಡಿಮೆ ಮಾಡಿದೆ” ಎಂದು ರಮ್ಯಾ ವಿವರಿಸಿದ್ದಾರೆ.

2003ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ರಮ್ಯಾ ಕೃಷ್ಣನ್ ಮತ್ತು ಕೃಷ್ಣ ವಂಶಿ ಅವರು 2003ರ ಜೂನ್ 12ರಂದು ವಿವಾಹವಾಗಿದ್ದರು. 2005ರ ಫೆಬ್ರುವರಿಯಲ್ಲಿ ಈ ದಂಪತಿಗೆ ಪುತ್ರ ರಿತ್ವಿಕ್ ವಂಶಿ ಜನಿಸಿದ್ದಾನೆ.

ಇವರಿಬ್ಬರೂ ಮೊದಲ ಬಾರಿಗೆ 1998ರಲ್ಲಿ ಬಿಡುಗಡೆಯಾದ ತೆಲುಗಿನ ರೊಮ್ಯಾಂಟಿಕ್ ಕಾಮಿಡಿ-ಥ್ರಿಲ್ಲರ್ ಸಿನಿಮಾ ‘ಚಂದ್ರಲೇಖಾ’ದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

‘ರಾಕಾ’ ಸಿನಿಮಾದಲ್ಲಿ ರಮ್ಯಾ ಕೃಷ್ಣನ್
ಸದ್ಯ ರಮ್ಯಾ ಕೃಷ್ಣನ್ ಅವರು ನಿರ್ದೇಶಕ ಅಟ್ಲಿ ಅವರ ಬಹುನಿರೀಕ್ಷಿತ ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ ‘ರಾಕಾ’ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕಣೆ ನಟನೆಯ ಈ ಸಿನಿಮಾ 2027ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇದರ ಜೊತೆಗೆ, ಮಂಚು ಮನೋಜ್ ಮತ್ತು ಮಾರಿಯಾ ರಯಾಬೊಶಪ್ಯಾ ನಟನೆಯ ‘ಡೇವಿಡ್ ರೆಡ್ಡಿ’ ಸಿನಿಮಾದಲ್ಲೂ ರಮ್ಯಾ ಕೃಷ್ಣನ್ ಅಭಿನಯಿಸುತ್ತಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!