Connect with us

ಅಂತರ ರಾಜ್ಯ

Sonam Wangchuk-17 ನೇ ದಿನಕ್ಕೆ ತಲುಪಿದ ಸೋನಂ ವಾಂಗ್ಚುಕ್ ಉಪವಾಸ ಹೋರಾಟ : ಇನ್ನೆರಡು ದಿನ ಕಳೆದರೆ ಅಪಾಯ..!

Published

on

Ad Widget

Ad Widget

Ad Widget

Ad Widget

ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಕಳೆದ 17 ದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಅಮರಣಾಂತಿಕ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡಿದೆ. ಅವರ ಜೀವ ಉಳಿಸಲು ತಕ್ಷಣ ವೈದ್ಯಕೀಯ ಚಿಕಿತ್ಸೆ ಮತ್ತು ಬಲವಂತವಾಗಿ ದ್ರವ ಆಹಾರ ನೀಡುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ.

Ad Widget

Ad Widget

Ad Widget

Ad Widget

ನವದೆಹಲಿ: ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಕಳೆದ 17 ದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಅಮರಣಾಂತಿಕ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡಿದೆ. ಅವರ ಜೀವ ಉಳಿಸಲು ತಕ್ಷಣ ವೈದ್ಯಕೀಯ ಚಿಕಿತ್ಸೆ ಮತ್ತು ಬಲವಂತವಾಗಿ ದ್ರವ ಆಹಾರ ನೀಡುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ.

Ad Widget

Ad Widget alt="Ad Widget"/>

Ad Widget

ಯಾರು ಈ ಸೋನಂ ವಾಂಗ್ಚುಕ್?
ಲಡಾಖ್ ಮೂಲದ ಸಾಮಾಜಿಕ ಹೋರಾಟಗಾರರಾದ ಸೋನಂ ವಾಂಗ್ಚುಕ್ ಅವರು ಅಮೀರ್ ಖಾನ್ ಅಭಿನಯದ ಪ್ರಸಿದ್ಧ ‘3 ಇಡಿಯಟ್ಸ್’ ಚಲನಚಿತ್ರದ ‘ಫುನ್‌ಸುಖ್ ವಾಂಗ್ಡು’ ಪಾತ್ರಕ್ಕೆ ನಿಜ ಜೀವನದ ಸ್ಫೂರ್ತಿಯಾಗಿದ್ದವರು. ಸದ್ಯ ಅವರು ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ, ನೀಟ್ ಪರೀಕ್ಷಾ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿದ್ದಾರೆ.

Ad Widget

Ad Widget <> Ad Widget

ಜೀವಕ್ಕೆ ಎದುರಾಗಿದೆ ಅಪಾಯ:
ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ರಾಕೇಶ್ ಕುಮಾರ್ ಸೈನಿ ಸಲ್ಲಿಸಿರುವ ಈ ಅರ್ಜಿಯು ವಾಂಗ್ಟುಕ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಉಪವಾಸ ಮುಂದುವರಿದರೆ ಮುಂದಿನ ಎರಡು ದಿನಗಳಲ್ಲಿ ಅವರ ಜೀವಕ್ಕೆ ತೀವ್ರ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ಎಚ್ಚರಿಸಲಾಗಿದೆ.

ಬಲವಂತದ ಆಹಾರಕ್ಕೆ ಮನವಿ:
ವಾಂಗ್ಚುಕ್ ಅವರ ಆರೋಗ್ಯದ ಮಾನದಂಡಗಳು ಕುಸಿದಿದ್ದು, ಅವರಿಗೆ ಏನಾದರೂ ಅನಾಹುತ ಸಂಭವಿಸಿದರೆ ಅದು ಇಡೀ ದೇಶಕ್ಕೆ ಮತ್ತು ಜಗತ್ತಿಗೆ ದೊಡ್ಡ ಅವಮಾನವಾಗಲಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. “ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ, ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು, ವಿಟಮಿನ್‌ಗಳು ಮತ್ತು ಖನಿಜಾಂಶಗಳನ್ನು ಒಳಗೊಂಡ ದ್ರವ ಆಹಾರವನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಬಲವಂತವಾಗಿ ನೀಡಬೇಕು” ಎಂದು ಕೋರ್ಟ್‌ಗೆ ಮನವಿ ಮಾಡಲಾಗಿದೆ.

Ad Widget

Ad Widget

ಸೋನಂ ವಾಂಗ್ಚುಕ್ ಅವರ ಈ ಹೋರಾಟವು ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಹೈಕೋರ್ಟ್ ಈ ಅರ್ಜಿಯ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

Ad Widget
Click to comment

Leave a Reply

ಅಂತರ ರಾಜ್ಯ

Punjab election-6 ವರ್ಷಗಳ ಬಳಿಕ ಮತ್ತೆ ಒಂದಾದ ಬಿಜೆಪಿ–ಅಕಾಲಿದಳ; 2027ರ ಪಂಜಾಬ್ ಚುನಾವಣೆಗೆ ಮೈತ್ರಿ ಘೋಷಣೆ

Published

on

Ad Widget

Ad Widget

Ad Widget

Ad Widget

ಪಂಜಾಬ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಆರು ವರ್ಷಗಳ ಬಳಿಕ ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ಮತ್ತೆ ಮೈತ್ರಿ ಮಾಡಿಕೊಂಡಿವೆ. 2027ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಸ್ಪರ್ಧಿಸುವುದಾಗಿ ಘೋಷಿಸಿವೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಪಂಜಾಬ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಆರು ವರ್ಷಗಳ ಬಳಿಕ ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ಮತ್ತೆ ಮೈತ್ರಿ ಮಾಡಿಕೊಂಡಿವೆ. 2027ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಸ್ಪರ್ಧಿಸುವುದಾಗಿ ಘೋಷಿಸಿವೆ.

Ad Widget

Ad Widget alt="Ad Widget"/>

Ad Widget

ಹೊಸದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮೈತ್ರಿಯನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಹಾಗೂ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಉಪಸ್ಥಿತರಿದ್ದರು.

Ad Widget

Ad Widget <> Ad Widget

ಗುರುಪುರಬ್ ದಿನದಂದೇ ಮೈತ್ರಿ ಘೋಷಣೆ ಹೊರಬಿದ್ದಿರುವುದು ರಾಜಕೀಯವಾಗಿ ವಿಶೇಷ ಮಹತ್ವ ಪಡೆದಿದೆ. ಈ ಹಿಂದೆ ಎರಡೂ ಪಕ್ಷಗಳ ಮೈತ್ರಿ ಮುರಿದುಬೀಳಲು ಕಾರಣವಾದ ಘಟನೆಗಳಿಗೂ ಗುರುಪುರಬ್ ದಿನಕ್ಕೂ ಸಾಂಕೇತಿಕ ಸಂಬಂಧವಿದೆ ಎನ್ನಲಾಗಿದ್ದು, ಇದೀಗ ಆರು ವರ್ಷಗಳ ಬಳಿಕ ಮತ್ತೆ ಎರಡೂ ಪಕ್ಷಗಳು ಒಂದಾಗಿವೆ.

Ad Widget
Continue Reading

ಅಂತರ ರಾಜ್ಯ

Sreejit Ravi-ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಮಲಯಾಳಂ ನಟ ಶ್ರೀಜಿತ್ ರವಿಗೆ 1 ವರ್ಷ ಜೈಲು

Published

on

Ad Widget

Ad Widget

Ad Widget

Ad Widget

ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ನಟ ಶ್ರೀಜಿತ್ ರವಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತ್ರಿಶೂರ್ ನ್ಯಾಯಾಲಯ ತೀರ್ಪು ನೀಡಿದೆ.

Ad Widget

Ad Widget

Ad Widget

Ad Widget

ತ್ರಿಶೂರ್: ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ನಟ ಶ್ರೀಜಿತ್ ರವಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತ್ರಿಶೂರ್ ನ್ಯಾಯಾಲಯ ತೀರ್ಪು ನೀಡಿದೆ.

Ad Widget

Ad Widget alt="Ad Widget"/>

Ad Widget

2022ರಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಶೂರ್‌ನ ಫಾಸ್ಟ್‌ಟ್ರ್ಯಾಕ್ ವಿಶೇಷ ನ್ಯಾಯಾಲಯ-11ರ ನ್ಯಾಯಾಧೀಶೆ ರಮ್ಯಾ ಮೆನನ್ ಅವರು, ಪೋಕ್ಸೋ ಕಾಯ್ದೆಯ ಸೆಕ್ಷನ್ 12 ಹಾಗೂ ಭಾರತೀಯ ದಂಡ ಸಂಹಿತೆ (IPC) 1860ರ ಸೆಕ್ಷನ್ 509ರ ಅಡಿಯಲ್ಲಿ ಶ್ರೀಜಿತ್ ರವಿ ಅವರನ್ನು ದೋಷಿ ಎಂದು ಘೋಷಿಸಿದ್ದಾರೆ.

Ad Widget

Ad Widget <> Ad Widget

2022ರ ಜುಲೈ 4ರಂದು ಇಬ್ಬರು ಅಪ್ರಾಪ್ತ ಬಾಲಕಿಯರು ಶಾಲೆಯಿಂದ ತ್ರಿಶೂರ್‌ನ ಅರನಟ್ಟುಕರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ಗೆ ಮರಳುತ್ತಿದ್ದ ವೇಳೆ ಘಟನೆ ನಡೆದಿತ್ತು. ಪ್ರಾಸಿಕ್ಯೂಷನ್ ಪ್ರಕಾರ, ಶ್ರೀಜಿತ್ ರವಿ ಕಾರಿನಲ್ಲಿ ಬಾಲಕಿಯರನ್ನು ಹಿಂಬಾಲಿಸಿ, ಅಪಾರ್ಟ್‌ಮೆಂಟ್‌ನ ಕಾರು ನಿಲುಗಡೆ ಪ್ರದೇಶದಲ್ಲಿ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದರು.

ವಿಚಾರಣೆ ವೇಳೆ ಬಾಲಕಿಯರು ನ್ಯಾಯಾಲಯದಲ್ಲಿ ಶ್ರೀಜಿತ್ ರವಿಯನ್ನು ಗುರುತಿಸಿದ್ದರು. ಆದರೆ, ಚಲನಚಿತ್ರ ನಟನಾಗಿದ್ದರೂ ಬಾಲಕಿಯರು ಆತನ ಹೆಸರನ್ನು ಗುರುತಿಸಲು ವಿಫಲರಾಗಿದ್ದಾರೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ನಟನ ಪರ ವಕೀಲರು ಗುರುತಿಸುವಿಕೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದರು.

Ad Widget

Ad Widget

ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಬಾಲಕಿಯರು ಆರೋಪಿಯನ್ನು ಗುರುತಿಸಿದ್ದು, ಅವರ ದೈಹಿಕ ಚಹರೆಯ ಬಗ್ಗೆಯೂ ಸ್ಪಷ್ಟವಾಗಿ ವಿವರಿಸಿದ್ದಾರೆ ಎಂದು ತಿಳಿಸಿದೆ.

ಪೊಲೀಸ್ ತನಿಖೆಯಲ್ಲಿನ ಕೆಲವು ಲೋಪಗಳ ಬಗ್ಗೆಯೂ ನ್ಯಾಯಾಲಯ ಗಮನ ಸೆಳೆದಿದೆ. ವಿಶೇಷವಾಗಿ, ಘಟನೆ ನಡೆದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸದಿರುವುದನ್ನು ಉಲ್ಲೇಖಿಸಿದೆ. ಆದರೆ, ತನಿಖೆಯಲ್ಲಿನ ಇಂತಹ ಲೋಪಗಳು ಬಾಲಕಿಯರು ನೀಡಿದ ಸಾಕ್ಷ್ಯಗಳ ವಿಶ್ವಾಸಾರ್ಹತೆಯನ್ನು ಕುಗ್ಗಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Ad Widget
Continue Reading

ಅಂತರ ರಾಜ್ಯ

Trisha-ವಿಜಯ್ ಸಿಎಂ ಬೆನ್ನಲ್ಲೇ ತ್ರಿಷಾ ರಾಜಕೀಯ ಎಂಟ್ರಿಗೆ ಸಿದ್ಧತೆ? ‘ಜಯಲಲಿತಾ ಉತ್ತರಾಧಿಕಾರಿ’ ಎಂದ ಅಭಿಮಾನಿಗಳು..!

Published

on

Ad Widget

Ad Widget

Ad Widget

Ad Widget

ದಳಪತಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಖ್ಯಾತ ನಟಿ ತ್ರಿಷಾ ಕೃಷ್ಣನ್ ಕೂಡ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ವಿಜಯ್ ಮತ್ತು ತ್ರಿಷಾ ಸಾರ್ವಜನಿಕ ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲಾ ಅವರಿಬ್ಬರ ನಡುವಿನ ಸಂಬಂಧದ ಕುರಿತು ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ತ್ರಿಷಾ ಅವರ ರಾಜಕೀಯ ಪ್ರವೇಶದ ಬಗ್ಗೆಯೂ ಅಭಿಮಾನಿಗಳ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ.

Ad Widget

Ad Widget

Ad Widget

Ad Widget

ಚೆನ್ನೈ: ದಳಪತಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಖ್ಯಾತ ನಟಿ ತ್ರಿಷಾ ಕೃಷ್ಣನ್ ಕೂಡ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ವಿಜಯ್ ಮತ್ತು ತ್ರಿಷಾ ಸಾರ್ವಜನಿಕ ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲಾ ಅವರಿಬ್ಬರ ನಡುವಿನ ಸಂಬಂಧದ ಕುರಿತು ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ತ್ರಿಷಾ ಅವರ ರಾಜಕೀಯ ಪ್ರವೇಶದ ಬಗ್ಗೆಯೂ ಅಭಿಮಾನಿಗಳ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ.

Ad Widget

Ad Widget alt="Ad Widget"/>

Ad Widget

ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ಅವರ ಆಪ್ತ ಸ್ನೇಹಿತೆ ಎಂದೇ ಗುರುತಿಸಿಕೊಂಡಿರುವ ತ್ರಿಷಾ ಕೂಡ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ. ಈ ನಿರೀಕ್ಷೆಯೊಂದಿಗೆ ಅಭಿಮಾನಿಗಳ ಗುಂಪೊಂದು ‘ಇಳಯ ಪುರಟ್ಟಿ ತಲೈವಿ ತ್ರಿಷಾ’ ಹೆಸರಿನಲ್ಲಿ ಹೊಸ ವೇದಿಕೆಯನ್ನು ಆರಂಭಿಸಿದೆ.

Ad Widget

Ad Widget <> Ad Widget

ಸಾರ್ವಜನಿಕ ಹಿತಾಸಕ್ತಿ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ತ್ರಿಷಾ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಕರೆತರುವ ಪ್ರಯತ್ನ ನಡೆಸುವುದಾಗಿ ಸಂಘಟನೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ತ್ರಿಷಾ ಕೂಡ ರಾಜಕೀಯ ಪಯಣ ಆರಂಭಿಸಿದರೆ ತಮಿಳುನಾಡಿನ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂಬ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

ಜಯಲಲಿತಾ ಹಾದಿಯಲ್ಲಿ ತ್ರಿಷಾ?
ಅಭಿಮಾನಿಗಳು ತ್ರಿಷಾ ಅವರಿಗೆ ‘ಇಳಯ ಪುರಟ್ಟಿ ತಲೈವಿ’ (ಯುವ ಕ್ರಾಂತಿಕಾರಿ ನಾಯಕಿ) ಎಂಬ ಬಿರುದನ್ನೂ ನೀಡಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ನಾಯಕಿ ದಿವಂಗತ ಜೆ. ಜಯಲಲಿತಾ ಅವರನ್ನು ‘ಪುರಟ್ಟಿ ತಲೈವಿ’ (ಕ್ರಾಂತಿಕಾರಿ ನಾಯಕಿ) ಎಂದು ಕರೆಯಲಾಗುತ್ತಿತ್ತು. ಇದೇ ಹಿನ್ನೆಲೆಯಲ್ಲಿ ತ್ರಿಷಾ ಅವರಿಗೂ ಅಂತಹದ್ದೇ ಬಿರುದು ನೀಡಿ, ಜಯಲಲಿತಾ ಅವರ ಉತ್ತರಾಧಿಕಾರಿ ಎಂಬಂತೆ ಬಿಂಬಿಸಲಾಗುತ್ತಿದೆ.

Ad Widget

Ad Widget

ಜಯಲಲಿತಾ ಅವರ ವ್ಯಕ್ತಿತ್ವ ಮತ್ತು ಆಡಳಿತ ಶೈಲಿಯನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳು, ತಮಿಳುನಾಡಿಗೆ ಅವರಂತಹ ನಾಯಕಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಪ್ರತಿಯೊಂದು ಬೆಳವಣಿಗೆಯ ಬಗ್ಗೆಯೂ ಜಯಲಲಿತಾ ಮಾಹಿತಿ ಹೊಂದಿದ್ದರು. ಸರಕಾರಿ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ನಿರಂತರ ನಿಗಾ ಇರಿಸುತ್ತಿದ್ದರು ಎಂದು ಸಂಘಟನೆಯ ಪ್ರಕಟಣೆಯಲ್ಲಿ ಹೇಳಲಾಗಿದೆ.

ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದ ಜಯಲಲಿತಾ ಅವರ ಆಡಳಿತ ಶೈಲಿಯನ್ನು ಉಲ್ಲೇಖಿಸಿರುವ ಅಭಿಮಾನಿಗಳು, ತ್ರಿಷಾ ಅವರಲ್ಲೂ ಅಂತಹ ನಾಯಕತ್ವದ ಗುಣಗಳಿವೆ ಎಂದು ಪ್ರತಿಪಾದಿಸಿದ್ದಾರೆ.

ವಿಜಯ್-ತ್ರಿಷಾ ಜೋಡಿಯಿಂದ ಹೊಸ ರಾಜಕೀಯ ಅಧ್ಯಾಯ?
ವಿಜಯ್ ನೇತೃತ್ವದ ಟಿವಿಕೆ ಸರಕಾರದ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಅಭಿಮಾನಿಗಳು, ತ್ರಿಷಾ ಕೂಡ ರಾಜಕೀಯ ಪ್ರವೇಶಿಸಿದರೆ ಜಯಲಲಿತಾ ಅವರ ಆಡಳಿತವನ್ನು ಹೋಲುವ ಉತ್ತಮ ಆಡಳಿತವನ್ನು ತಮಿಳುನಾಡಿನಲ್ಲಿ ಕಾಣಬಹುದು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ತ್ರಿಷಾ ಅವರ ವ್ಯಕ್ತಿತ್ವ ಜಯಲಲಿತಾ ಅವರನ್ನು ಹೋಲುತ್ತದೆ. ವಿವಿಧ ಸಂದರ್ಭಗಳಲ್ಲಿ ಅವರ ಗುಣಗಳನ್ನು ಗಮನಿಸಿದ್ದೇವೆ. ಅವರ ಆಪ್ತರಿಗೂ ಈ ವಿಚಾರ ತಿಳಿದಿದೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.

ಈ ಅಭಿಯಾನದ ಮೊದಲ ಹೆಜ್ಜೆಯಾಗಿ ‘ಇಳಯ ಪುರಟ್ಟಿ ತಲೈವಿ ತ್ರಿಷಾ ಪೇರವೈ’ ಎಂಬ ಸಂಘಟನೆಯನ್ನು ಆರಂಭಿಸಲಾಗಿದೆ. ಈ ವೇದಿಕೆಯ ಮೂಲಕ ಸಾರ್ವಜನಿಕ ಹಿತಾಸಕ್ತಿ ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿ, ಆ ಮೂಲಕ ತ್ರಿಷಾ ಅವರ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸುವುದು ಅಭಿಮಾನಿಗಳ ಉದ್ದೇಶವಾಗಿದೆ.

ಆದರೆ, ತ್ರಿಷಾ ಅವರು ರಾಜಕೀಯ ಪ್ರವೇಶಿಸುವ ಕುರಿತು ಈವರೆಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಹೀಗಾಗಿ ಸದ್ಯಕ್ಕೆ ಇದು ಅಭಿಮಾನಿಗಳ ಮಟ್ಟದಲ್ಲಿ ನಡೆಯುತ್ತಿರುವ ಅಭಿಯಾನ ಮತ್ತು ನಿರೀಕ್ಷೆಯಷ್ಟೇ ಆಗಿದೆ.

ಈ ಹಿಂದೆ ಟಿವಿ ಸಂದರ್ಶನವೊಂದರಲ್ಲಿ ತಮಾಷೆಯಾಗಿ ಮುಂದೆ ತಾನು ತಮಿಳುನಾಡಿನ ಮುಖ್ಯಮಂತ್ರಿಯಾಗುವುದಾಗಿ ತ್ರಿಷಾ ಹೇಳಿದ್ದ ವಿಡಿಯೊ ಕೂಡ ವಿಜಯ್ ಮುಖ್ಯಮಂತ್ರಿಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿತ್ತು.

ಗಮನಾರ್ಹವೆಂದರೆ, ಜಯಲಲಿತಾ ಕೂಡ ಆರಂಭದಲ್ಲಿ ನಟಿಯಾಗಿಯೇ ಜನಪ್ರಿಯತೆ ಗಳಿಸಿದ್ದರು. ಬಳಿಕ 1982ರಲ್ಲಿ ಎಂ.ಜಿ. ರಾಮಚಂದ್ರನ್ ಅವರ ಎಐಎಡಿಎಂಕೆ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶಿಸಿ, 1991ರಲ್ಲಿ ಮೊದಲ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ತ್ರಿಷಾ ಅವರ ರಾಜಕೀಯ ಪ್ರವೇಶದ ಕುರಿತು ಅಭಿಮಾನಿಗಳಲ್ಲಿ ಮೂಡಿರುವ ಕುತೂಹಲ ತಮಿಳುನಾಡಿನ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!