Connect with us

ಸ್ಥಳೀಯ

Dharmasthala-ಧರ್ಮಸ್ಥಳ: ತನಗೆ ಜೀವಬೆದರಿಕೆ ಇದೆಯೆಂದು ಎಸ್‌ಐಟಿ ಮೆಟ್ಟಿಲೇರಿದ ಚಿನ್ನಯ್ಯ..!

Published

on



Ad Widget

Ad Widget

Ad Widget

Ad Widget

ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಹಿಂದೆ ಸಾಕ್ಷಿ ದೂರುದಾರನಾಗಿದ್ದು ಈಗ ಆರೋಪಿಯಾಗಿರುವ ಚಿನ್ನಯ್ಯ ಅವರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವಬೆದರಿಕೆ ಇದೆ ಎಂದು ವಿಶೇಷ ತನಿಖಾ ತಂಡಕ್ಕೆ (SIT) ದೂರು ನೀಡಿದ್ದಾರೆ.

Ad Widget

Ad Widget

Ad Widget

Ad Widget

ಬೆಳ್ತಂಗಡಿ: ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಹಿಂದೆ ಸಾಕ್ಷಿ ದೂರುದಾರನಾಗಿದ್ದು ಈಗ ಆರೋಪಿಯಾಗಿರುವ ಚಿನ್ನಯ್ಯ ಅವರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವಬೆದರಿಕೆ ಇದೆ ಎಂದು ವಿಶೇಷ ತನಿಖಾ ತಂಡಕ್ಕೆ (SIT) ದೂರು ನೀಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಜೂನ್ 15ರಂದು ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಪತ್ನಿ ರತ್ನಾ ಅವರೊಂದಿಗೆ ಆಗಮಿಸಿದ ಚಿನ್ನಯ್ಯ, ಗಿರೀಶ್ ಮಟ್ಟಣ್ಣವರ್ ಹಾಗೂ ಇತರರಿಂದ ತಮಗೆ ಪ್ರಾಣಾಪಾಯವಿದೆ ಎಂದು ದೂರಿದ್ದಾರೆ.
ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಗಿರೀಶ್ ಮಟ್ಟಣ್ಣವರ್ ಮತ್ತು ಯುನೈಟೆಡ್ ಮೀಡಿಯಾದ ಅಭಿಷೇಕ್ ಎಂಬುವವರು ಚಿನ್ನಯ್ಯ ಅವರ ಅಳಿಯ ಪುರುಷೋತ್ತಮ ಹಾಗೂ ಇತರರಿಗೆ ಪದೇ ಪದೇ ಕರೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

Ad Widget

Ad Widget <> Ad Widget

ಈ ಬೆಳವಣಿಗೆಯಿಂದಾಗಿ ಭಯಭೀತರಾಗಿರುವ ಚಿನ್ನಯ್ಯ, ತಮಗೆ ಮತ್ತು ತಮ್ಮ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು ಹಾಗೂ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮೂರು ಪುಟಗಳ ಸುದೀರ್ಘ ದೂರಿನಲ್ಲಿ ವಿನಂತಿಸಿದ್ದಾರೆ. ಚಿನ್ನಯ್ಯ ನೀಡಿದ ಈ ದೂರಿನ ಪ್ರತಿಯು ಪ್ರಸ್ತುತ ಮಾಧ್ಯಮಗಳಿಗೆ ಲಭ್ಯವಾಗಿದೆ.



Ad Widget
Ad Widget
Click to comment

Leave a Reply

ನಿಧನ ವಾರ್ತೆ

Uppinangadi-ಉಪ್ಪಿನಂಗಡಿ: ಸೇತುವೆ ಮೇಲೆ ಬೈಕ್, ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ನದಿಯಲ್ಲಿ ಶವವಾಗಿ ಪತ್ತೆ

Published

on



Ad Widget

Ad Widget

Ad Widget

Ad Widget

ಕುಮಾರಧಾರ ಹಳೆ ಸೇತುವೆ ಮೇಲೆ ಬೈಕ್ ಹಾಗೂ ಮೊಬೈಲ್ ಇಟ್ಟು ನಾಪತ್ತೆಯಾಗಿದ್ದ ಹಿರೇಬಂಡಾಡಿ ಗ್ರಾಮದ ಪೆರಾಬೆ ನಿವಾಸಿ ಮಾಧವ ಗೌಡ (44) ಅವರ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

Ad Widget

Ad Widget

Ad Widget

Ad Widget

ಉಪ್ಪಿನಂಗಡಿ: ಕುಮಾರಧಾರ ಹಳೆ ಸೇತುವೆ ಮೇಲೆ ಬೈಕ್ ಹಾಗೂ ಮೊಬೈಲ್ ಇಟ್ಟು ನಾಪತ್ತೆಯಾಗಿದ್ದ ಹಿರೇಬಂಡಾಡಿ ಗ್ರಾಮದ ಪೆರಾಬೆ ನಿವಾಸಿ ಮಾಧವ ಗೌಡ (44) ಅವರ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

Ad Widget

Ad Widget

Ad Widget alt="Ad Widget"/>

Ad Widget

ಆತೂರಿನಲ್ಲಿ ಇತ್ತೀಚೆಗಷ್ಟೇ ಟಯರ್ ಪಂಕ್ಚರ್ ಅಂಗಡಿ ಆರಂಭಿಸಿದ್ದ ಮಾಧವ ಗೌಡ ಅವರು ಅ.2ರಂದು ಮನೆಯಿಂದ ಅಂಗಡಿಗೆ ತೆರಳಿದ್ದರು. ಆದರೆ ಬಳಿಕ ಮನೆಗೆ ವಾಪಸ್ ಆಗದೆ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದಾಗ, ಅವರ ಬೈಕ್ ಮತ್ತು ಮೊಬೈಲ್ ಉಪ್ಪಿನಂಗಡಿಯ ಕುಮಾರಧಾರ ನದಿಯ ಹಳೆ ಸೇತುವೆ ಮೇಲೆ ಪತ್ತೆಯಾಗಿತ್ತು.

Ad Widget

Ad Widget <> Ad Widget

ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅ.4ರಂದು ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ದೋಣಿಯ ಮೂಲಕ ನದಿಯಲ್ಲಿ ಹುಡುಕಾಟ ನಡೆಸಿದ್ದರು. ಮಧ್ಯಾಹ್ನದಿಂದ ಸಂಜೆಯವರೆಗೆ ಶೋಧ ಕಾರ್ಯ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.



Ad Widget

ಇದೀಗ ಎರಡು ದಿನಗಳ ಬಳಿಕ ನೆಕ್ಕಿಲಾಡಿ ಗ್ರಾಮದ ಬೊಳ್ಳಾರ್ ಸಮೀಪ ನೇತ್ರಾವತಿ ನದಿಯಲ್ಲಿ ಮಾಧವ ಗೌಡ ಅವರ ಮೃತದೇಹ ಪತ್ತೆಯಾಗಿದೆ. ಅವರ ನಾಪತ್ತೆ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Continue Reading

ಸ್ಥಳೀಯ

B.Y. Vijayendra-ಬಣ ಕಿತ್ತಾಟ ಮುಂದುವರಿದರೆ ಗುಬ್ಬಿಯಲ್ಲಿ ನಾನೇ ಸ್ಪರ್ಧಿಸುತ್ತೇನೆ’: ಬಿ.ವೈ.ವಿಜಯೇಂದ್ರ

Published

on



Ad Widget

Ad Widget

Ad Widget

Ad Widget

ಗುಬ್ಬಿ ಕ್ಷೇತ್ರದ ಬಿಜೆಪಿಯ ಎರಡು ಬಣಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಮತ್ತೆ ಬಹಿರಂಗವಾಗಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಮ್ಮುಖದಲ್ಲೇ ಎರಡೂ ಬಣಗಳ ಬೆಂಬಲಿಗರು ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ಇದರಿಂದ ಅಸಮಾಧಾನಗೊಂಡ ವಿಜಯೇಂದ್ರ, ಇದೇ ರೀತಿಯ ಬಣ ಕಿತ್ತಾಟ ಮುಂದುವರಿದರೆ ಗುಬ್ಬಿ ಕ್ಷೇತ್ರದಲ್ಲಿ ತಾವೇ ಸ್ಪರ್ಧಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Ad Widget

Ad Widget

Ad Widget

Ad Widget

ಚೇಳೂರು (ತುಮಕೂರು), ಅ.4: ಗುಬ್ಬಿ ಕ್ಷೇತ್ರದ ಬಿಜೆಪಿಯ ಎರಡು ಬಣಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಮತ್ತೆ ಬಹಿರಂಗವಾಗಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಮ್ಮುಖದಲ್ಲೇ ಎರಡೂ ಬಣಗಳ ಬೆಂಬಲಿಗರು ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ಇದರಿಂದ ಅಸಮಾಧಾನಗೊಂಡ ವಿಜಯೇಂದ್ರ, ಇದೇ ರೀತಿಯ ಬಣ ಕಿತ್ತಾಟ ಮುಂದುವರಿದರೆ ಗುಬ್ಬಿ ಕ್ಷೇತ್ರದಲ್ಲಿ ತಾವೇ ಸ್ಪರ್ಧಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಚೇಳೂರಿನಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ದಡಿ ಆಯೋಜಿಸಿದ್ದ ಬೂತ್ ಮಟ್ಟದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ.

Ad Widget

Ad Widget <> Ad Widget

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಹಾಗೂ 2023ರ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ದಿಲೀಪ್ ಕುಮಾರ್ ಮಾತನಾಡುವ ವೇಳೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಹೆಸರುಗಳನ್ನು ಪ್ರಸ್ತಾಪಿಸಿದರು. ಬಳಿಕ ಜಿಪಂ ಮಾಜಿ ಸದಸ್ಯ ಚಂದ್ರಶೇಖರ್ ಬಾಬು ಮಾತನಾಡುವಾಗ ದಿಲೀಪ್ ಕುಮಾರ್ ಅವರ ಹೆಸರನ್ನು ಉಲ್ಲೇಖಿಸದಿರುವುದು ಕೆಲವು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಯಿತು.



Ad Widget

ಈ ವಿಚಾರಕ್ಕೆ ಸಂಬಂಧಿಸಿ ಎರಡೂ ಬಣಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ರಾಜ್ಯಾಧ್ಯಕ್ಷರ ಸಮ್ಮುಖದಲ್ಲೇ ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಕೆಲಕಾಲ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

Ad Widget

Ad Widget

ಬಳಿಕ ಮಾತನಾಡಿದ ಬಿ.ವೈ.ವಿಜಯೇಂದ್ರ, ಗುಬ್ಬಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪಕ್ಷದೊಳಗಿನ ಆಂತರಿಕ ಜಗಳ ಹಾಗೂ ಭಿನ್ನಾಭಿಪ್ರಾಯಗಳೇ ಅಡ್ಡಿಯಾಗುತ್ತಿವೆ ಎಂದು ಹೇಳಿದರು.

ಮುಖಂಡರು ಹಾಗೂ ಕಾರ್ಯಕರ್ತರು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಸಂಘಟನೆ ಮತ್ತು ಗೆಲುವಿನತ್ತ ಗಮನಹರಿಸಬೇಕು ಎಂದು ವಿಜಯೇಂದ್ರ ಸೂಚಿಸಿದರು. ಇದೇ ರೀತಿ ಬಣ ಕಿತ್ತಾಟ ಮುಂದುವರಿದರೆ ಗುಬ್ಬಿ ಕ್ಷೇತ್ರದಲ್ಲಿ ತಾವೇ ಸ್ಪರ್ಧಿಸುವ ಸಂದರ್ಭ ಬರಬಹುದು ಎಂದು ಅವರು ಎಚ್ಚರಿಕೆ ನೀಡಿದರು.

Ad Widget
Continue Reading

ಸ್ಥಳೀಯ

Uppinangadi-ಉಪ್ಪಿನಂಗಡಿ:ಕುಮಾರಧಾರಾ ಸೇತುವೆ ಮೇಲೆ ಬೈಕ್‌, ಮೊಬೈಲ್ ಪತ್ತೆ ಹಿನ್ನೆಲೆ; ನಾಪತ್ತೆಯಾದ ವ್ಯಕ್ತಿಗಾಗಿ ನದಿಯಲ್ಲಿ ಶೋಧ

Published

on



Ad Widget

Ad Widget

Ad Widget

Ad Widget

ನಾಪತ್ತೆಯಾಗಿದ್ದ ವ್ಯಕ್ತಿಯ ಬೈಕ್‌ ಹಾಗೂ ಮೊಬೈಲ್‌ ಕುಮಾರಧಾರಾ ಸೇತುವೆ ಮೇಲೆ ಪತ್ತೆಯಾದ ಹಿನ್ನೆಲೆಯಲ್ಲಿ, ಅವರ ಕುಟುಂಬದ ಮನವಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಕುಮಾರಧಾರಾ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.

Ad Widget

Ad Widget

Ad Widget

Ad Widget

ಉಪ್ಪಿನಂಗಡಿ, ಅ.4: ನಾಪತ್ತೆಯಾಗಿದ್ದ ವ್ಯಕ್ತಿಯ ಬೈಕ್‌ ಹಾಗೂ ಮೊಬೈಲ್‌ ಕುಮಾರಧಾರಾ ಸೇತುವೆ ಮೇಲೆ ಪತ್ತೆಯಾದ ಹಿನ್ನೆಲೆಯಲ್ಲಿ, ಅವರ ಕುಟುಂಬದ ಮನವಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಕುಮಾರಧಾರಾ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.

Ad Widget

Ad Widget

Ad Widget alt="Ad Widget"/>

Ad Widget

ಹಿರೇಬಂಡಾಡಿ ಗ್ರಾಮದ ಮಾಧವ ಗೌಡ ಅವರು ನಾಲ್ಕೈದು ದಿನಗಳ ಹಿಂದೆ ಮನೆಯಿಂದ ಆತೂರಿನಲ್ಲಿರುವ ತಮ್ಮ ಅಂಗಡಿಗೆ ತೆರಳುವುದಾಗಿ ಹೇಳಿ ಹೊರಟಿದ್ದರು. ಆದರೆ ಬಳಿಕ ಅವರು ಮನೆಗೆ ಮರಳಿರಲಿಲ್ಲ. ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಕುಮಾರಧಾರಾ ಸೇತುವೆ ಮೇಲೆ ಅವರ ಬೈಕ್‌, ಮೊಬೈಲ್‌ ಸೇರಿದಂತೆ ಕೆಲವು ವಸ್ತುಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು.

Ad Widget

Ad Widget <> Ad Widget

ಕುಟುಂಬಸ್ಥರ ಮನವಿ ಮೇರೆಗೆ ಪುತ್ತೂರು ಅಗ್ನಿಶಾಮಕ ದಳದ ಶಂಕರ್ ಅವರ ನೇತೃತ್ವದ ತಂಡ ರವಿವಾರ ಕುಮಾರಧಾರಾ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಸುಮಾರು ನಾಲ್ಕು ಗಂಟೆಗಳ ಕಾಲ ಶೋಧ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ.



Ad Widget

ಶೋಧ ಕಾರ್ಯಕ್ಕೆ ದೋಣಿ ಸಮಸ್ಯೆ
ಉಪ್ಪಿನಂಗಡಿಯಲ್ಲಿ ಈ ಹಿಂದೆ ಎಲ್ಲ ಸಮಯದಲ್ಲೂ ಲಭ್ಯವಿದ್ದ ದೋಣಿಯನ್ನು ಸೇವೆಯಿಂದ ಹಿಂಪಡೆದ ಬಳಿಕ, ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನಾಲ್ಕು ತಿಂಗಳ ಅವಧಿಗೆ ಮಂಗಳೂರಿನಿಂದ ರಬ್ಬರ್‌ ದೋಣಿಯನ್ನು ತರಿಸಿ ಇರಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಅವಧಿ ಮುಗಿದ ಹಿನ್ನೆಲೆಯಲ್ಲಿ ರಬ್ಬರ್‌ ದೋಣಿಯನ್ನು ಮಂಗಳೂರಿಗೆ ವಾಪಸ್‌ ಕಳುಹಿಸಲಾಗಿತ್ತು.

Ad Widget

Ad Widget

ಈ ಹಿನ್ನೆಲೆಯಲ್ಲಿ ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ದೋಣಿ ಲಭ್ಯವಿರಲಿಲ್ಲ. ಬಳಿಕ ಪುತ್ತೂರಿನ ಕಚೇರಿಯಿಂದ ದೋಣಿಯನ್ನು ತರಿಸಿಕೊಂಡು ಶೋಧ ಕಾರ್ಯಾಚರಣೆ ನಡೆಸಬೇಕಾಯಿತು.

ಶೋಧ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಸಾರ್ವಜನಿಕರು ಹಾಗೂ ಕುತೂಹಲಿಗರು ಸೇತುವೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಜಮಾಯಿಸಿದ್ದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading