ಸ್ಥಳೀಯ
Shrikrishna-ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಶ್ರೀಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಅಹನಾ
ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಅಹನಾ ಎ., ಎನ್‌ಎಂಎಂಎಸ್ (NMMS) ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದು, ಪ್ರತಿಷ್ಠಿತ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.
ಪಟ್ಟೆ: ಇಲ್ಲಿನ ಶ್ರೀಕೃಷ್ಣ ವಿದ್ಯಾಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಅಹನಾ ಎ., ಎನ್‌ಎಂಎಂಎಸ್ (NMMS) ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದು, ಪ್ರತಿಷ್ಠಿತ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.
ಈಶ್ವರಮಂಗಲದ ನಿವಾಸಿಗಳಾದ ಅಶೋಕ ಎ. ಮತ್ತು ಯಶೋಧ ದಂಪತಿಯ ಪುತ್ರಿಯಾದ ಅಹನಾ, ತಮ್ಮ ಸಾಧನೆಯ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಶ್ರೀಕೃಷ್ಣ ವಿದ್ಯಾಸಂಸ್ಥೆಯು ಈಗಾಗಲೇ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಈಗ ಅಹನಾ ಅವರ ಈ ಸಾಧನೆ ಸಂಸ್ಥೆಯ ಮುಕುಟಕ್ಕೆ ಮತ್ತೊಂದು ಗರಿ ಸೇರಿಸಿದಂತಾಗಿದೆ.
ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಅಹನಾ ಅವರನ್ನು ಸಂಸ್ಥೆಯ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್, ಆಡಳಿತ ಮಂಡಳಿಯ ಸದಸ್ಯರು ಹಾಗೂ ಮುಖ್ಯ ಶಿಕ್ಷಕರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
ಬಿಗ್ ನ್ಯೂಸ್
Rakesh Shetty-ಸ್ಟಿಂಗ್ ಹೆಸರಿನಲ್ಲಿ ಜನಪ್ರತಿನಿಧಿಗಳ ಬ್ಲ್ಯಾಕ್‌ಮೇಲ್ ಆರೋಪ: ರಾಕೇಶ್ ಶೆಟ್ಟಿ ವಿರುದ್ಧ ಕ್ರಮಕ್ಕೆ ಒಳಾಡಳಿತ ಇಲಾಖೆಯಿಂದ ಡಿಜಿಪಿಗೆ ಪತ್ರ
ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಜನಪ್ರತಿನಿಧಿಗಳ ತೇಜೋವಧೆ ಮಾಡಿ, ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಆರೋಪ ಎದುರಿಸುತ್ತಿರುವ ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ ಹಾಗೂ ಸಂಸ್ಥೆಯ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ. ಎಂ.ಎ. ಸಲೀಂ ಅವರಿಗೆ ಸೂಚಿಸಿದ್ದಾರೆ.
ಬೆಂಗಳೂರು, ನ.23: ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಜನಪ್ರತಿನಿಧಿಗಳ ತೇಜೋವಧೆ ಮಾಡಿ, ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಆರೋಪ ಎದುರಿಸುತ್ತಿರುವ ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ ಹಾಗೂ ಸಂಸ್ಥೆಯ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ. ಎಂ.ಎ. ಸಲೀಂ ಅವರಿಗೆ ಸೂಚಿಸಿದ್ದಾರೆ.
ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕೇಶ್ ಶೆಟ್ಟಿ ಹಾಗೂ ಸುದ್ದಿವಾಹಿನಿಯ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ಬಾಬು ಸರ್ಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿದ್ದರು. ಈ ಮನವಿಯ ಬೆನ್ನಲ್ಲೇ ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಡಿಜಿಪಿಗೆ ಪತ್ರ ಬರೆದಿದ್ದಾರೆ.
ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಸಚಿವರು, ಆಡಳಿತ ಪಕ್ಷದ ಶಾಸಕರು ಹಾಗೂ ಪ್ರತಿಪಕ್ಷದ ಶಾಸಕರಿಗೆ ಹಣದ ಆಮಿಷವೊಡ್ಡಿ ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುವ ಮೂಲಕ ಜನಪ್ರತಿನಿಧಿಗಳ ಗೌರವಕ್ಕೆ ಧಕ್ಕೆ ತಂದು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಸುರೇಶ್‌ಬಾಬು ತಮ್ಮ ಪತ್ರದಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ರಾಕೇಶ್ ಶೆಟ್ಟಿ ಹಾಗೂ ಸುದ್ದಿವಾಹಿನಿಯ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದರು.
ಸುರೇಶ್‌ಬಾಬು ಪತ್ರದಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕೈಗೊಂಡ ಕ್ರಮಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಡಿಜಿಪಿಗೆ ನಿರ್ದೇಶನ ನೀಡಿದ್ದಾರೆ.
ಬಿಗ್ ನ್ಯೂಸ್
Railway-ರೈಲ್ವೆ ಗುಂಪು ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆ: ಬರ್ತ್‌ಗಳ ಸಂಖ್ಯೆಗೆ ಮಿತಿ ರದ್ದು, ಬೆಳಗ್ಗೆ 9ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ..!
ಮದುವೆ, ಪ್ರವಾಸ, ತೀರ್ಥಯಾತ್ರೆ, ಶೈಕ್ಷಣಿಕ ಪ್ರವಾಸ, ಕ್ರೀಡಾಕೂಟ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಗುಂಪಾಗಿ ರೈಲಿನಲ್ಲಿ ಪ್ರಯಾಣಿಸುವವರಿಗೆ ನೈಋತ್ಯ ರೈಲ್ವೆ (SWR) ಮಹತ್ವದ ಸಡಿಲಿಕೆ ನೀಡಿದೆ. ಗುಂಪು ಹಾಗೂ ಬೃಹತ್ ಟಿಕೆಟ್ ಕಾಯ್ದಿರಿಸುವಿಕೆಗೆ ಸಂಬಂಧಿಸಿದ ನಿಯಮಗಳನ್ನು ಪರಿಷ್ಕರಿಸಿದ್ದು, ಗುಂಪು ಬುಕಿಂಗ್‌ನಲ್ಲಿ ಬರ್ತ್‌ಗಳ ಸಂಖ್ಯೆಗೆ ಈ ಹಿಂದೆ ಇದ್ದ ನಿರ್ದಿಷ್ಟ ಮಿತಿಯನ್ನು ತೆಗೆದುಹಾಕಲಾಗಿದೆ.
ಬೆಂಗಳೂರು: ಮದುವೆ, ಪ್ರವಾಸ, ತೀರ್ಥಯಾತ್ರೆ, ಶೈಕ್ಷಣಿಕ ಪ್ರವಾಸ, ಕ್ರೀಡಾಕೂಟ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಗುಂಪಾಗಿ ರೈಲಿನಲ್ಲಿ ಪ್ರಯಾಣಿಸುವವರಿಗೆ ನೈಋತ್ಯ ರೈಲ್ವೆ (SWR) ಮಹತ್ವದ ಸಡಿಲಿಕೆ ನೀಡಿದೆ. ಗುಂಪು ಹಾಗೂ ಬೃಹತ್ ಟಿಕೆಟ್ ಕಾಯ್ದಿರಿಸುವಿಕೆಗೆ ಸಂಬಂಧಿಸಿದ ನಿಯಮಗಳನ್ನು ಪರಿಷ್ಕರಿಸಿದ್ದು, ಗುಂಪು ಬುಕಿಂಗ್‌ನಲ್ಲಿ ಬರ್ತ್‌ಗಳ ಸಂಖ್ಯೆಗೆ ಈ ಹಿಂದೆ ಇದ್ದ ನಿರ್ದಿಷ್ಟ ಮಿತಿಯನ್ನು ತೆಗೆದುಹಾಕಲಾಗಿದೆ.
2026ರ ನವೆಂಬರ್ 18ರಂದು ನೈಋತ್ಯ ರೈಲ್ವೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದರ ಅನ್ವಯ ಪ್ರಮುಖ ಕಾಯ್ದಿರಿಸುವಿಕೆ ಕೇಂದ್ರಗಳಲ್ಲಿ ಗುಂಪು ಬುಕಿಂಗ್‌ಗೆ ಬೆಳಗ್ಗೆ 9 ಗಂಟೆಯಿಂದ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಪ್ರಯಾಣಿಕರ ಮುಂಗಡ ಕಾಯ್ದಿರಿಸುವಿಕೆ ಆರಂಭವಾದ ಒಂದು ಗಂಟೆಯ ಬಳಿಕ ಈ ಸೌಲಭ್ಯ ಲಭ್ಯವಾಗಲಿದೆ.
ನವೆಂಬರ್ 19ರಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾದ ಸುತ್ತೋಲೆಯ ಪ್ರಕಾರ, ಮದುವೆ ಸಮಾರಂಭಗಳು, ಹಬ್ಬಗಳು, ಯಾತ್ರೆಗಳು, ಕ್ರೀಡಾ ತಂಡಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಇತರ ಸಮಾನ ಉದ್ದೇಶಗಳಿಗಾಗಿ ಗುಂಪಾಗಿ ಪ್ರಯಾಣಿಸುವವರು ನಿಲ್ದಾಣದ ಕಾಯ್ದಿರಿಸುವಿಕೆ ಕಚೇರಿಯಲ್ಲಿ ಬೃಹತ್ ಪ್ರಮಾಣದ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಈ ಸೌಲಭ್ಯ ಖಚಿತಗೊಂಡ (Confirmed), ಆರ್‌ಎಸಿ (RAC) ಹಾಗೂ ಕಾಯುವ ಪಟ್ಟಿಯ (Waitlisted) ಟಿಕೆಟ್‌ಗಳಿಗೂ ಅನ್ವಯಿಸುತ್ತದೆ.
ಗುಂಪು ಬುಕಿಂಗ್‌ಗೆ ಬರ್ತ್‌ಗಳ ಸಂಖ್ಯೆಯ ಮಿತಿ ಇಲ್ಲ
ಪರಿಷ್ಕೃತ ಮಾರ್ಗಸೂಚಿಯ ಪ್ರಮುಖ ಬದಲಾವಣೆಯೆಂದರೆ, ಗುಂಪು ಕಾಯ್ದಿರಿಸುವಿಕೆಯಲ್ಲಿ ಅನುಮತಿಸಲಾದ ಬರ್ತ್‌ಗಳು ಅಥವಾ ಆಸನಗಳ ಸಂಖ್ಯೆಗೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಈ ಹಿಂದೆ ಇದ್ದ ನಿರ್ದಿಷ್ಟ ಸಂಖ್ಯೆಯ ಮಿತಿಯನ್ನು ತೆಗೆದುಹಾಕಲಾಗಿದೆ. ಮಂಗಳೂರು ಸೇರಿದಂತೆ ಪ್ರಮುಖ ನಿಲ್ದಾಣಗಳ ಕಾಯ್ದಿರಿಸುವಿಕೆ ಅಧಿಕಾರಿಗಳಿಗೆ ಇಂತಹ ಗುಂಪು ಬುಕಿಂಗ್‌ಗಳನ್ನು ಅನುಮೋದಿಸುವ ಅಧಿಕಾರವನ್ನೂ ನೀಡಲಾಗಿದೆ.
ಗುಂಪು ಟಿಕೆಟ್‌ಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
- ಅಧಿಕಾರಿಗಳಿಗೆ ನೇರ ಅರ್ಜಿ: ಗುಂಪು ಬುಕಿಂಗ್‌ಗಾಗಿ ಅರ್ಜಿದಾರರು ಸಂಬಂಧಪಟ್ಟ ನಿಲ್ದಾಣದ ಮುಖ್ಯ ಕಾಯ್ದಿರಿಸುವಿಕೆ ಮೇಲ್ವಿಚಾರಕರು (CRS) ಅಥವಾ ನಿಲ್ದಾಣ ವ್ಯವಸ್ಥಾಪಕರಿಗೆ (SM) ನೇರವಾಗಿ ಅರ್ಜಿ ಸಲ್ಲಿಸಬೇಕು. ಇವರಿಗೆ ಗುಂಪು ಕಾಯ್ದಿರಿಸುವಿಕೆಯನ್ನು ಅನುಮೋದಿಸುವ ಅಧಿಕಾರ ನೀಡಲಾಗಿದೆ.
- ಪ್ರಯಾಣಿಕರ ಸಂಖ್ಯೆಗೆ ಮಿತಿ ಇಲ್ಲ: ಗುಂಪು ಬುಕಿಂಗ್‌ನಲ್ಲಿ ಬರ್ತ್ ಅಥವಾ ಆಸನಗಳ ಸಂಖ್ಯೆಗೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಎಲ್ಲಾ ಪ್ರಯಾಣ ದರ್ಜೆಗಳಲ್ಲೂ ಗುಂಪು ಕಾಯ್ದಿರಿಸುವಿಕೆ ಮಾಡಿಕೊಳ್ಳಬಹುದು.
- ಟ್ರಾವೆಲ್ ಏಜೆನ್ಸಿಗಳ ಮೂಲಕ ಅರ್ಜಿ ಸಲ್ಲಿಸುವಂತಿಲ್ಲ: ವಿದೇಶಿ ಪ್ರವಾಸಿಗರು ಹಾಗೂ ಅನಿವಾಸಿ ಭಾರತೀಯರ (NRI) ಪರವಾಗಿ ಸಲ್ಲಿಸುವ ಅರ್ಜಿಗಳನ್ನು ಹೊರತುಪಡಿಸಿ, ಇತರ ಗುಂಪು ಬುಕಿಂಗ್ ಅರ್ಜಿಗಳನ್ನು ಸ್ಥಳೀಯ ಪ್ರವಾಸ ಸಂಸ್ಥೆಗಳ ಮೂಲಕ ಸಲ್ಲಿಸಲು ಅವಕಾಶವಿಲ್ಲ. ಅರ್ಜಿದಾರರು ನೇರವಾಗಿ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಬೇಕು.
- ಪ್ರಯಾಣದ ಉದ್ದೇಶ ಕಡ್ಡಾಯ: ಗುಂಪು ಪ್ರಯಾಣದ ಉದ್ದೇಶವನ್ನು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಪ್ರಯಾಣದ ಉದ್ದೇಶವನ್ನು ತಿಳಿಸದಿದ್ದರೆ ಅನುಮತಿ ನೀಡಲಾಗುವುದಿಲ್ಲ.
- ಪ್ರಯಾಣಿಕರ ವಿವರ ಸಲ್ಲಿಕೆ: ಅರ್ಜಿ ಸಲ್ಲಿಸುವಾಗ ಗುಂಪಿನಲ್ಲಿರುವ ಎಲ್ಲಾ ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ, ವಿಳಾಸ ಹಾಗೂ ಪ್ರಯಾಣದ ಉದ್ದೇಶದ ವಿವರಗಳನ್ನು ಒದಗಿಸಬೇಕು.
- ಹಿಂತಿರುಗುವ ಪ್ರಯಾಣಕ್ಕೂ ಅವಕಾಶ: ಹಿಂದಿರುಗುವ ಪ್ರಯಾಣಕ್ಕೂ ಅದೇ ಕಾಯ್ದಿರಿಸುವಿಕೆ ಕಚೇರಿಯಲ್ಲಿ ಗುಂಪು ಬುಕಿಂಗ್‌ಗೆ ಅನುಮತಿ ಪಡೆಯಬಹುದು. ಆದರೆ, ಹಿಂದಿರುಗುವ ಪ್ರಯಾಣವನ್ನು ಪ್ರತ್ಯೇಕ ಕಾಯ್ದಿರಿಸುವಿಕೆಯಾಗಿ ಪರಿಗಣಿಸಲಾಗುತ್ತದೆ.
- ದಾಖಲೆಗಳ ನಿರ್ವಹಣೆ: ಅನುಮೋದಿಸಲಾದ ಎಲ್ಲಾ ಗುಂಪು ಬುಕಿಂಗ್‌ಗಳ ಪ್ರತ್ಯೇಕ ದಾಖಲೆ ಪುಸ್ತಕವನ್ನು ಮುಖ್ಯ ಕಾಯ್ದಿರಿಸುವಿಕೆ ಮೇಲ್ವಿಚಾರಕರು ಅಥವಾ ನಿಲ್ದಾಣ ವ್ಯವಸ್ಥಾಪಕರು ನಿರ್ವಹಿಸಬೇಕು. ಅರ್ಜಿ ನಮೂನೆ ಹಾಗೂ ಪ್ರಯಾಣಿಕರ ಪಟ್ಟಿಯ ಪ್ರತಿ ಪುಟಕ್ಕೂ ಮೊಹರು ಮತ್ತು ಸಹಿ ಹಾಕಬೇಕು.
- ದುರುಪಯೋಗ ತಡೆಯಲು ಎಚ್ಚರಿಕೆ
- ಗುಂಪು ಬುಕಿಂಗ್ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು ಬರ್ತ್‌ಗಳನ್ನು ಅಕ್ರಮವಾಗಿ ಕಾಯ್ದಿರಿಸುವುದಕ್ಕೆ ಅವಕಾಶ ನೀಡದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ನೈಜ ಗುಂಪು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದು ಹಾಗೂ ಕಾಯ್ದಿರಿಸುವಿಕೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡುವುದು ಈ ಪರಿಷ್ಕೃತ ನಿಯಮಗಳ ಉದ್ದೇಶವಾಗಿದೆ.
- ಉಪ ಮುಖ್ಯ ವಾಣಿಜ್ಯ ವ್ಯವಸ್ಥಾಪಕ (ಪ್ರಯಾಣಿಕರ ಸೇವೆಗಳು) ಪಿ. ಕಿರಣ್ ಕುಮಾರ್ ಅವರು ನವೆಂಬರ್ 18ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಈ ಹೊಸ ಮಾರ್ಗಸೂಚಿಗಳನ್ನು ವಿವರಿಸಿದ್ದಾರೆ. ಸಾಮಾನ್ಯ ಮುಂಗಡ ಕಾಯ್ದಿರಿಸುವಿಕೆ ಕೌಂಟರ್‌ಗಳು ಆರಂಭವಾದ ಒಂದು ಗಂಟೆಯ ಬಳಿಕ, ಅಂದರೆ ಬೆಳಗ್ಗೆ 9 ಗಂಟೆಯಿಂದ ಗುಂಪು ಕಾಯ್ದಿರಿಸುವಿಕೆಗಳನ್ನು ಸ್ವೀಕರಿಸಬಹುದು. ಪ್ರತ್ಯೇಕ ಗುಂಪು ಬುಕಿಂಗ್ ಕೌಂಟರ್ ಇದ್ದಲ್ಲಿ ಅಲ್ಲಿಯೇ ಅಥವಾ ಸಾಮಾನ್ಯ ಕೌಂಟರ್‌ಗಳ ಮೂಲಕವೂ ಅರ್ಜಿ ಸಲ್ಲಿಸಲು ವ್ಯವಸ್ಥೆ ಕಲ್ಪಿಸಬಹುದು ಎಂದು ಸೂಚಿಸಲಾಗಿದೆ.
ಸ್ಥಳೀಯ
Wedding-ಕ್ಯಾಸೆಟ್‌ಗಳ ಅಬ್ಬರವಿಲ್ಲ, ಡ್ಯಾನ್ಸ್‌ಗಳ ಹಂಗಿಲ್ಲ; ಅದ್ದೂರಿತನಕ್ಕೆ ಬ್ರೇಕ್ ಹಾಕಿ ಸರಳತೆಯಲ್ಲೇ ಮದುವೆ ಸಂಭ್ರಮ..!
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗಸಂಸ್ಥೆ “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ಸಿ.ಇ.ಒ. ಕೆ.ಎನ್. ಜನಾರ್ಧನ ಮತ್ತು ಉಷಾಜನಾರ್ಧನ ತಮ್ಮ ಎರಡನೆ ಪುತ್ರ ಕೆ.ಜೆ. ಸುದರ್ಶನ್ ಅವರ ಮದುವೆಯನ್ನು ದಿವ್ಯಾ ಜೊತೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ್ದು, ಸ್ಥಳೀಯ ಆಪ್ತರು, ಅಭಿಮಾನಿಗಳು ಹಾಗೂ ಸಿಬ್ಬಂದಿಯನ್ನು ಆದರದಿಂದ ಆಹ್ವಾನಿಸಿ ಬೆಳ್ತಂಗಡಿಯಲ್ಲಿರುವ ಮಂಜುನಾಥಸ್ವಾಮಿ ಕಲಾಭವನದಲ್ಲಿ ಭಾನುವಾರ ವಿವಾಹ ಸಂಭ್ರಮದ “ಸರಳ ಸ್ನೇಹಕೂಟ”ವನ್ನು ಅತ್ಯಂತ ಶಿಸ್ತುಬದ್ಧಾಗಿ ಆಯೋಜಿಸಿ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರರಾದರು.
ಉಜಿರೆ: ಕ್ಯಾಸೆಟ್‌ಗಳ ಅಬ್ಬರ, ಮೈಕಾಸುರನ ಹಾವಳಿಯಿಂದ ಶಬ್ದ ಮಾಲಿನ್ಯವಿಲ್ಲ. ಸಿನೆಮಾ ಹಾಡು, ಬ್ರೇಕ್‌ಡ್ಯಾನ್ಸ್ ಉಪಟಳವಿಲ್ಲ. ಅತ್ಯಂತ ಸರಳವಾಗಿ, ಶಿಸ್ತುಬದ್ಧವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗಸಂಸ್ಥೆ “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ಸಿ.ಇ.ಒ. ಕೆ.ಎನ್. ಜನಾರ್ಧನ ಮತ್ತು ಉಷಾಜನಾರ್ಧನ ತಮ್ಮ ಎರಡನೆ ಪುತ್ರ ಕೆ.ಜೆ. ಸುದರ್ಶನ್ ಅವರ ಮದುವೆಯನ್ನು ದಿವ್ಯಾ ಜೊತೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ್ದು, ಸ್ಥಳೀಯ ಆಪ್ತರು, ಅಭಿಮಾನಿಗಳು ಹಾಗೂ ಸಿಬ್ಬಂದಿಯನ್ನು ಆದರದಿಂದ ಆಹ್ವಾನಿಸಿ ಬೆಳ್ತಂಗಡಿಯಲ್ಲಿರುವ ಮಂಜುನಾಥಸ್ವಾಮಿ ಕಲಾಭವನದಲ್ಲಿ ಭಾನುವಾರ ವಿವಾಹ ಸಂಭ್ರಮದ “ಸರಳ ಸ್ನೇಹಕೂಟ”ವನ್ನು ಅತ್ಯಂತ ಶಿಸ್ತುಬದ್ಧಾಗಿ ಆಯೋಜಿಸಿ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರರಾದರು.
ಮದುಮಗ ಕೆ.ಜೆ. ಸುದರ್ಶನ್ ತಾಯಿ-ತಂದೆ ಬಗ್ಯೆ ಅಪಾರ ಗೌರವ, ಪ್ರೀತಿ-ವಿಶ್ವಾಸವನ್ನು ವ್ಯಕ್ತಪಡಿಸಿ ಅವರೇ ತನಗೆ ಪ್ರತ್ಯಕ್ಷ ದೇವರು ಎಂದು ಗೌರವ ಸಲ್ಲಿಸಿದರು.
ಕೆ.ಎನ್. ಜನಾರ್ಧನ ಮತ್ತು ಉಷಾಜನಾರ್ಧನ ಭಾವುಕರಾಗಿ ಆನಂದಭಾಷ್ಪ ಸುರಿಸಿದರು. ಇಂತಹ ಮಗನನ್ನು ಪಡೆದ ತಾವೇ ಭಾಗ್ಯವಂತರು ಎಂದು ಸಂತಸವ್ಯಕ್ತಪಡಿಸಿದರು.
ಉಷಾಜನಾರ್ಧನ ಗಣೇಶನ ಸ್ತುತಿಯನ್ನು ಸುಶ್ರಾವ್ಯವಾಗಿ ಹಾಡಿದರು. ಸೊಸೆಯನ್ನು ಕೂಡಾ ಮಗಳಂತೆ ಪ್ರೀತಿಯಿಂದ ನೋಡಿಕೊಳ್ಳುವುದಾಗಿ ತಿಳಿಸಿದರು.
ಹಿರಿಯ ದಂಪತಿ ಮತ್ತು ನವದಂಪತಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸಿ, ಗೌರವಿಸಿದರು. ಎಲ್ಲರಿಗೂ ಸರಳ, ಶುದ್ಧ ಹಾಗೂ ಶುಚಿ-ರುಚಿಯಾದ ಶಾಕಾಹಾರ ಭೋಜನ ನೀಡಿದರು.
ಉಜಿರೆ ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೇಟ್ನಾಯ, ಶಾಸಕ ಕೆ. ಹರೀಶ್ ಪೂಂಜ, ಮಾಜಿ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮೂಡಬಿದ್ರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮತ್ತು ರಶ್ಮಿತಾ ಜೈನ್ ನಾರಾವಿ ಸೇರಿದಂತೆ ಅನೇಕ ಗಣ್ಯರು, ಹಿರಿಯರು ಆಗಮಿಸಿ ನೂತನ ದಂಪತಿಗೆ ಶುಭ ಹಾರೈಸಿದರು.
-
ಸ್ಥಳೀಯ5 hours agoWedding-ಕ್ಯಾಸೆಟ್‌ಗಳ ಅಬ್ಬರವಿಲ್ಲ, ಡ್ಯಾನ್ಸ್‌ಗಳ ಹಂಗಿಲ್ಲ; ಅದ್ದೂರಿತನಕ್ಕೆ ಬ್ರೇಕ್ ಹಾಕಿ ಸರಳತೆಯಲ್ಲೇ ಮದುವೆ ಸಂಭ್ರಮ..!
-
ಬಿಗ್ ನ್ಯೂಸ್4 hours agoRailway-ರೈಲ್ವೆ ಗುಂಪು ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆ: ಬರ್ತ್‌ಗಳ ಸಂಖ್ಯೆಗೆ ಮಿತಿ ರದ್ದು, ಬೆಳಗ್ಗೆ 9ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ..!
-
ಶಿಕ್ಷಣ6 hours agoPhilomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮ
-
ಶಿಕ್ಷಣ6 hours agoScience Fair-ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಕೋಡ್ಕ್ರಾಫ್ಟ್ ವಿಜ್ಞಾನ ಮೇಳ-2026: ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ
-
ಬಿಗ್ ನ್ಯೂಸ್9 minutes agoRakesh Shetty-ಸ್ಟಿಂಗ್ ಹೆಸರಿನಲ್ಲಿ ಜನಪ್ರತಿನಿಧಿಗಳ ಬ್ಲ್ಯಾಕ್‌ಮೇಲ್ ಆರೋಪ: ರಾಕೇಶ್ ಶೆಟ್ಟಿ ವಿರುದ್ಧ ಕ್ರಮಕ್ಕೆ ಒಳಾಡಳಿತ ಇಲಾಖೆಯಿಂದ ಡಿಜಿಪಿಗೆ ಪತ್ರ















