Connect with us

ಸ್ಥಳೀಯ

Sharavuru-ಆಲಂಕಾರು: ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೃಢಕಲಶಾಭಿಷೇಕ ಮತ್ತು ಅಭಿನಂದನಾ ಸಭೆ

Published

on



Ad Widget

Ad Widget

Ad Widget

Ad Widget

ಆಲಂಕಾರಿನ ಪ್ರಸಿದ್ಧ ಸೀಮಾ ದೇವಸ್ಥಾನವಾದ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವದ ಯಶಸ್ಸಿನ ಹಿನ್ನೆಲೆಯಲ್ಲಿ, ದೃಢಕಲಶ ಮತ್ತು ಅಭಿನಂದನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

Ad Widget

Ad Widget

Ad Widget

Ad Widget

ಆಲಂಕಾರು: ಇಲ್ಲಿನ ಐತಿಹಾಸಿಕ ಸೀಮಾ ದೇವಸ್ಥಾನವಾದ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 25 ರಿಂದ ಏಪ್ರಿಲ್ 2 ರವರೆಗೆ ನಡೆದ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವದ ಯಶಸ್ಸಿನ ಸವಿನೆನಪಿಗಾಗಿ, ಇತ್ತೀಚೆಗೆ ದೃಢಕಲಶ ಮತ್ತು ಅಭಿನಂದನಾ ಸಭೆಯನ್ನು ವಿಜೃಂಭಣೆಯಿಂದ ನಡೆಸಲಾಯಿತು.

Ad Widget

Ad Widget

Ad Widget alt="Ad Widget"/>

Ad Widget

ಕ್ಷೇತ್ರದ ತಂತ್ರಿಗಳಾದ ವೇ.ಮೂ. ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಮೇ 22ರ ಶುಕ್ರವಾರ ದೇವಸ್ಥಾನದಲ್ಲಿ ದೃಢಕಲಶ ವಿಧಿವಿಧಾನಗಳು ನೆರವೇರಿದವು. ಬಳಿಕ ನಡೆದ ಸಭೆಯ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಭಕ್ತರ ಅಚಲ ನಂಬಿಕೆ ಹಾಗೂ ಊರ-ಪರವೂರ ಜನರ ರಾಜಕೀಯ ರಹಿತ ಸಹಕಾರದಿಂದ ಸುಂದರವಾದ ದೇಗುಲ ನಿರ್ಮಾಣಗೊಂಡಿದೆ. ಪ್ರತಿಯೊಬ್ಬರೂ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡ ಫಲವಾಗಿ ಈ ಪುಣ್ಯಕಾರ್ಯ ಸುಸೂತ್ರವಾಗಿ ನೆರವೇರಿದೆ,” ಎಂದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

Ad Widget

Ad Widget <> Ad Widget

ನಂತರ ದೇವಸ್ಥಾನದ ಗರ್ಭಗುಡಿ, ನಮಸ್ಕಾರ ಮಂಟಪ,ಧ್ವಜಸ್ತಂಭ, ರಾಜಗೋಪುರ, ತೀರ್ಥಭಾವಿ, ಒಳಾಂಗಣ ಕ್ಕೆ ಕಲ್ಲುಹಾಸುವಿಕೆ, ಮಹಾದ್ವಾರದ ಬಾಗಿಲು, ಗರ್ಭಗುಡಿಯ ಬಾಗಿಲಿಗೆ ಬೆಳ್ಳಿ, ಹಿತ್ತಾಲೆ, ಬೆಳ್ಳಿಯ ಉತ್ಸವ ಮೂರ್ತಿ, ಭದ್ರಕಾಳಿ ಪ್ರಭಾವಳಿ, ಪುಷ್ಪರಥ, ಪಲ್ಲಕಿ, ಕಂಪ್ಯೂಟರ್, ಮರದ ಮೇಸ್ತ್ರಿಗಳು, ಲೈಟಿಂಗ್, ಪ್ಯಾಬ್ರಿಕೇಶನ್, ಲಾಕರ್ ವ್ಯವಸ್ಥೆ, ತುಳಸಿಕಟ್ಟೆ, ಗ್ರಾನೈಟ್, ಸೇರಿದಂತೆ ಹಲವು ಮಂದಿಗೆ, ವ್ಯವಸ್ಥಾಪನ ಸಮಿತಿ, ಅಭಿವೃದ್ಧಿ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ 5 ಲಕ್ಷಕಿಂತಲೂ ಅಧಿಕ ಮೊತ್ತದ ದೇಣಿಗೆ ನೀಡಿದವರಿಗೆ, ದೇವಸ್ಥಾನದ ಆರ್ಚಕರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ, ಬ್ರಹ್ಮಕಲಶೋತ್ಸವದ ಸ್ವಾಗತ ಸಮಿತಿ, ಅರ್ಥಿಕ ಸಮಿತಿ, ಸಭಾಕಾರ್ಯಕ್ರಮ, ವೈದಿಕ ಸಮಿತಿ, ಕಾರ್ಯಾಲಯ ಸಮಿತಿ, ಮಾಹಿತಿ ಕೇಂದ್ರ ವಿಭಾಗ, ಪ್ರಚಾರ ಸಮಿತಿ, ಆರೋಗ್ಯ ಸಮಿತಿ, ಪತ್ರಿಕಾ ಮಾಧ್ಯಮ ಸಮಿತಿ, ಹೊರೆಕಾಣಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ನೀರಾವರಿ ಸಮಿತಿ, ಆಲಂಕಾರ ಸಮಿತಿ, ಬೈಲುವಾರು ಸಮಿತಿಗಳ ಅಧ್ಯಕ್ಷರು, ಆಮಂತ್ರಣ ಪತ್ರಿಕೆ ಸಮಿತಿ, ಆಹಾರ ಸಮಿತಿ, ಸ್ವಯಂ ಸೇವಕರ ಸಮಿತಿ, ವೇದಿಕೆ ನಿರ್ಮಾಣ ಸಮಿತಿ, ಸಂತೆ ನಿರ್ವಹಣೆ ಸಮಿತಿ, ಉಗ್ರಾಣ ಸಮಿತಿ, ಮಹಿಳಾ ಸಮಿತಿ, ರಕ್ಷಣಾ ವಿಭಾಗ ಸಮಿತಿ, ಪಾನೀಯ ವ್ಯವಸ್ಥೆ, ಚಪ್ಪರ ಸಮಿತಿ, ಸ್ವಚ್ಚತಾ ಸಮಿತಿ, ವಿದ್ಯುತ್ ಸಮಿತಿ, ಆಸನ ಸಮಿತಿ, ಭಜನಾ ನಿರ್ವಹಣಾ ಸಮಿತಿ, ವಾಹನ ನಿಲುಗಡೆ ಸಮಿತಿಗಳನ್ನು ಮಾಡಿ ಪ್ರತಿ ಸಮಿತಿಗಳಿಗೆ ಪ್ರದಾನ ಸಂಚಾಲಕರು, ಸಂಚಾಲಕರುಗಳಿಗೆ, ಪರಿಚಾರಕ ವರ್ಗ, ದೇವಸ್ಥಾನಕ್ಕೆ ಸಂಬಂಧ ಪಟ್ಟ ಮನೆತನದ ಸೇವಾಕರ್ತರಿಗೆ, ದೈವ ನರ್ತಕರಿಗೆ, ದೈವದ ಪರಿಚಾರಕ ವರ್ಗದವರಿಗೆ ಕ್ಷೇತ್ರದ ವತಿಯಿಂದ ಶಾಲು ಸ್ಮರಣಿಕೆ, ಪ್ರಸಾದ ನೀಡಿ ಗೌರವಿಸಿದರು.



Ad Widget

ಅವರ ಸೇವೆಗಳನ್ನು ಸಭೆ ಗುಣಗಾನವನ್ನು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ. ಹೇಮಂತ್ ರೈ ಮನವಳಿಕೆಗುತ್ತು ತಿಳಿಸಿ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನ ಸಮಗ್ರ ಜೀರ್ಣೋದ್ಧಾರ ಕೆಲಸ ಕಾರ್ಯಗಳು ನಡೆಯುವ ಸಂಧರ್ಭದಲ್ಲಿ ಶ್ರೀ ದೇವಿಯೇ ನೆಲೆನಿಂತು ಎಲ್ಲಾ ಕೆಲಸ ಕಾರ್ಯಗಳನ್ನು ಸುಸೂತ್ರವಾಗಿ, ಯಾವೂದೇ ವಿಘ್ನಗಳು ಸಂಭವಿಸದ ರೀತಿಯಲ್ಲಿ ನಡೆಸಿರುವುದೇ ಶರವೂರು ಕ್ಷೇತ್ರದ ಕಾರಣಿಕವಾಗಿದ್ದು, ಬ್ರಹ್ಮಕಲಶೋತ್ಸವ ನಡೆದು ಶ್ರೀ ದೇವಿಯ ರಥೋತ್ಸವದ ಸಮಯದಲ್ಲಿ ದುರ್ಗಾಪರಮೇಶ್ವರಿ ದೇವಿ ರಥವೇರಿದ ಕ್ಷಣಮಾತ್ರದಲ್ಲಿ ಸಣ್ಣ ತುಂತುರು ಮಳೆ ಅಭಿಷೇಕದ ತರ ಚಿಮ್ಮಿರುವುದೇ ಸಮಗ್ರ ಜೀರ್ಣೋದ್ದಾರದಿಂದ ದುರ್ಗಾಪರಮೇಶ್ವರಿ ಅಮ್ಮನವರು ಸಂತುಷ್ಟರಾಗಿದ್ದಾರೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದು ತಿಳಿಸಿ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಸಹಕರಿಸಿದ ಎಲ್ಲಾ ಭಕ್ತ ಜನತೆಗೆ ಅಭಿನಂದನೆ ಸಲ್ಲಿಸಿದರು.

Ad Widget

Ad Widget

ಬ್ರಹ್ಮಕಲಶೋತ್ಸವ ಸಮಿತಿಯ ಪ್ರದಾನ ಕಾರ್ಯದರ್ಶಿ, ಅಭಿವೃದ್ಧಿ ಸಮಿತಿಯ ಸಹಕಾರ್ಯದರ್ಶಿ ಮುತ್ತಪ್ಪ ಪೂಜಾರಿ ನೈಯ್ಯಲ ರವರು ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಲೆಕ್ಕಾಚಾರವನ್ನು ಸಭೆಗೆ ಮಂಡಿಸಿದರು.

ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ದಾಮೋದರ ಗೌಡ ಕಕೈ, ಸ್ಮರಣ ಸಂಚಿಕೆ ಸಮಿತಿಯ ಗೌರವ ಸಂಪಾದಕರಾದ ಎ.ಕೃಷ್ಣಪ್ಪ ಪೂಜಾರಿ ಎಣ್ಣೆತ್ತೋಡಿ, ಕಡಬ ಉಪತಹಶೀಲ್ದಾರಾದ ಗೋಪಾಲ.ಕೆ ಯವರು ಸಂದರ್ಬೋಚ್ಚಿತವಾಗಿ ಮಾತನಾಡಿ ದೃಡ ಕಲಶದ ಮಹತ್ವದ ಬಗ್ಗೆ ತಿಳಿಸಿದರು. ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಧಾಕೃಷ್ಣ ರೈ ಪರಾರಿಗುತ್ತು ಸ್ವಾಗತಿಸಿ,ಅಭಿವೃದ್ಧಿ ಸಮಿತಿ ಸದಸ್ಯ ಸದಾನಂದ ಕುಮಾರ್ ಮಡ್ಕೊಟ್ಟು ಕಾರ್ಯಕ್ರಮ ನಿರೂಪಿಸಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸೇಸಪ್ಪ ಪೂಜಾರಿ ಧನ್ಯವಾದ ಸಮರ್ಪಿಸಿದರು.

Ad Widget
Click to comment

Leave a Reply

ರಾಜಕೀಯ

Sanjeev Mathandur-ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯ; ‘ಷಡ್ಯಂತ್ರ, ಭ್ರಷ್ಟಾಚಾರದ ಶಂಕೆ’ – ಸಂಜೀವ ಮಠಂದೂರು

Published

on



Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗುತ್ತಿದ್ದು, ಇದರ ಹಿಂದೆ ಷಡ್ಯಂತ್ರ ಹಾಗೂ ಭ್ರಷ್ಟಾಚಾರದ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಸಮಗ್ರ ಹಾಗೂ ಕೂಲಂಕಷ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗುತ್ತಿದ್ದು, ಇದರ ಹಿಂದೆ ಷಡ್ಯಂತ್ರ ಹಾಗೂ ಭ್ರಷ್ಟಾಚಾರದ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಸಮಗ್ರ ಹಾಗೂ ಕೂಲಂಕಷ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಅ.8ರಂದು ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2025-26ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಂಬತ್ತು ತಾಲೂಕುಗಳ ರೈತರು ಒಟ್ಟು ₹294.26 ಕೋಟಿ ವಿಮಾ ಮೊತ್ತ ಪಾವತಿಸಿದ್ದಾರೆ. ಆದರೆ ಸುಮಾರು ₹840 ಕೋಟಿ ಪರಿಹಾರ ಬರಬೇಕಿದ್ದು, ವಾಸ್ತವವಾಗಿ ರೈತರಿಗೆ ಎಷ್ಟು ಮೊತ್ತ ವಿತರಿಸಲಾಗಿದೆ ಎಂಬುದನ್ನು ಸರಕಾರ ಹಾಗೂ ವಿಮಾ ಕಂಪನಿಗಳು ಅಂಕಿ-ಅಂಶಗಳ ಸಹಿತ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

Ad Widget

Ad Widget <> Ad Widget

ರೈತರು ಪಾವತಿಸಿದ ವಿಮಾ ಮೊತ್ತಕ್ಕೆ ಅನುಗುಣವಾಗಿ ಎಷ್ಟು ಪರಿಹಾರ ನೀಡಲಾಗಿದೆ? ಗ್ರಾಮದಿಂದ ಗ್ರಾಮಕ್ಕೆ ಪರಿಹಾರ ಮೊತ್ತದಲ್ಲಿ ವ್ಯತ್ಯಾಸವಾಗಲು ಕಾರಣವೇನು? ಯಾವ ವೈಜ್ಞಾನಿಕ ಮಾನದಂಡದ ಆಧಾರದಲ್ಲಿ ಪರಿಹಾರ ನಿಗದಿಪಡಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.



Ad Widget

ಟರ್ಮ್‌ಶೀಟ್ ಬದಲಾದ ಬಳಿಕ ಸಮಸ್ಯೆ

Ad Widget

Ad Widget

2023-24ನೇ ಸಾಲಿನವರೆಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಪರಿಹಾರ ವಿತರಣೆಯಲ್ಲಿ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಸಮಸ್ಯೆ ಇರಲಿಲ್ಲ. ಆದರೆ ಬಳಿಕ ಟರ್ಮ್‌ಶೀಟ್ ಬದಲಾವಣೆಯಾದ ನಂತರ ಸಮಸ್ಯೆಗಳು ಆರಂಭವಾಗಿವೆ ಎಂದು ಮಠಂದೂರು ಆರೋಪಿಸಿದರು.

ಒಂದೇ ತಾಲೂಕು, ಹೋಬಳಿ ಹಾಗೂ ಒಂದೇ ರೀತಿಯ ಭೌಗೋಳಿಕ ಪರಿಸ್ಥಿತಿಯಲ್ಲಿರುವ ಗ್ರಾಮಗಳ ನಡುವೆ ಪರಿಹಾರ ಮೊತ್ತದಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿದೆ. ಕೆಲವೆಡೆ ಕೇವಲ 100 ಮೀಟರ್ ಅಂತರದಲ್ಲಿರುವ ರೈತರಿಗೂ ₹10 ಸಾವಿರದಿಂದ ₹15 ಸಾವಿರದವರೆಗೆ ವ್ಯತ್ಯಾಸವಾಗುತ್ತಿದೆ. ಪಂಚಾಯಿತಿಯಿಂದ ಪಂಚಾಯಿತಿಗೆ, ಗ್ರಾಮದಿಂದ ಗ್ರಾಮಕ್ಕೆ ಪರಿಹಾರ ಬದಲಾಗುತ್ತಿರುವುದರ ಹಿಂದಿನ ಕಾರಣವನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರಕಾರವೂ ವಿಮಾ ಮೊತ್ತದ ಶೇ.20ರಷ್ಟು ಪಾಲು ಪಾವತಿಸುತ್ತಿರುವುದರಿಂದ ವಿಮಾ ಕಂಪನಿಗಳ ಕಾರ್ಯವೈಖರಿ ಕುರಿತು ರಾಜ್ಯ ಸರಕಾರವೇ ತನಿಖೆ ನಡೆಸಬೇಕು. ರೈತರಿಗೆ ಅನ್ಯಾಯವಾಗುತ್ತಿದ್ದರೂ ಸರಕಾರ ಕಣ್ಮುಚ್ಚಿ ಕುಳಿತಿದೆ ಎಂದು ಅವರು ಆರೋಪಿಸಿದರು.

274 ಗ್ರಾಮ ಪಂಚಾಯಿತಿಗಳ ಪೈಕಿ 231 ಮಳೆ ಮಾಪಕ ಮಾತ್ರ ಕಾರ್ಯನಿರ್ವಹಣೆ

ಬಿಜೆಪಿ ಸತ್ಯಶೋಧನ ಸಮಿತಿ ಜಿಲ್ಲೆಯ ಒಂಬತ್ತು ತಾಲೂಕುಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಹಲವು ಕಡೆ ಮಳೆ ಮಾಪಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಕಂಡುಬಂದಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಬಳಿಕ ಕೆಲವು ಮಳೆ ಮಾಪಕಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ 274 ಗ್ರಾಮ ಪಂಚಾಯಿತಿಗಳಲ್ಲಿ ಮಳೆ ಮಾಪಕಗಳನ್ನು ಅಳವಡಿಸಲಾಗಿದ್ದು, 231 ಮಾತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. 20 ಹೋಬಳಿ ಮಟ್ಟದಲ್ಲಿ ಉಷ್ಣಾಂಶ ಮಾಪಕಗಳಿವೆ. ಮಳೆ ಹಾಗೂ ಉಷ್ಣಾಂಶದ ದಾಖಲೆಗಳ ಆಧಾರದಲ್ಲಿ ಟರ್ಮ್‌ಶೀಟ್ ಪ್ರಕಾರ ವಿಮಾ ಪರಿಹಾರ ನಿರ್ಧರಿಸಲಾಗುತ್ತದೆ ಎಂದು ವಿವರಿಸಿದರು.

‘ಗ್ರಾಮಕ್ಕೊಂದು ಮಾನದಂಡ ಸಲ್ಲ’

ತಾಲೂಕಿನ ಎಲ್ಲ ಗ್ರಾಮಗಳ ರೈತರಿಗೆ ಒಂದೇ ಮಾನದಂಡದಲ್ಲಿ ವಿಮಾ ಪರಿಹಾರ ನೀಡಬೇಕು. ಒಂದು ಗ್ರಾಮಕ್ಕೆ ಗರಿಷ್ಠ ಪರಿಹಾರ ನೀಡಲು ಅನ್ವಯಿಸುವ ಮಾನದಂಡವಿದ್ದರೆ, ಅದೇ ಮಾನದಂಡವನ್ನು ಇತರ ಗ್ರಾಮಗಳಿಗೂ ಅನ್ವಯಿಸಬೇಕು. ಪಂಚಾಯಿತಿ, ಹೋಬಳಿ ಹಾಗೂ ಗ್ರಾಮವಾರು ಪ್ರತ್ಯೇಕ ಮಾನದಂಡಗಳಿಂದ ಪರಿಹಾರ ನೀಡಿದರೆ ರೈತರು ಬೆಳೆ ವಿಮಾ ಯೋಜನೆಯ ಮೇಲಿನ ವಿಶ್ವಾಸ ಕಳೆದುಕೊಳ್ಳಲಿದ್ದಾರೆ ಎಂದು ಮಠಂದೂರು ಹೇಳಿದರು.

2025-26ನೇ ಸಾಲಿನಲ್ಲಿ ರೈತರು ಶೇ.5, ರಾಜ್ಯ ಸರಕಾರ ಶೇ.20 ಹಾಗೂ ಕೇಂದ್ರ ಸರಕಾರ ಶೇ.10ರಷ್ಟು ಪಾಲನ್ನು ಪಾವತಿಸಿವೆ. ಜಿಲ್ಲೆಯ ರೈತರಿಂದ ₹42.03 ಕೋಟಿ, ಕೇಂದ್ರದಿಂದ ₹84.07 ಕೋಟಿ ಹಾಗೂ ರಾಜ್ಯದಿಂದ ₹168.14 ಕೋಟಿ ಸೇರಿದಂತೆ ಒಟ್ಟು ₹294.26 ಕೋಟಿ ವಿಮಾ ಮೊತ್ತ ಪಾವತಿಯಾಗಿದೆ ಎಂದರು.

ರೈತರು ಪ್ರತಿ ಹೆಕ್ಟೇರ್ ಅಡಿಕೆಗೆ ₹6,475 ಹಾಗೂ ಕಾಳುಮೆಣಸಿಗೆ ₹2,377ರಂತೆ ವಿಮಾ ಮೊತ್ತ ಪಾವತಿಸಿದ್ದಾರೆ. ಆದರೆ ಬಜತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ₹45 ಸಾವಿರ ವಿಮಾ ಮೊತ್ತ ಪಾವತಿಸಿದ್ದರೂ ಕೆಲ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಕನಿಷ್ಠ ₹10,800 ಮಾತ್ರ ಪರಿಹಾರ ದೊರೆತಿದೆ. ಅದೇ ಪ್ರದೇಶದ ಕೆಲವು ರೈತರ ಖಾತೆಗೆ ₹51,824 ಪರಿಹಾರ ಜಮೆಯಾಗಿರುವುದಾಗಿ ಅವರು ತಿಳಿಸಿದರು.

‘ರಾಜ್ಯ ಸರಕಾರ ರೈತ ವಿರೋಧಿ’

ಅಡಿಕೆ ಬೆಳೆಗಾರರು ವಿಮಾ ಮೊತ್ತ ಪಾವತಿಸಿದರೂ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ. ಮತ್ತೊಂದೆಡೆ ಅಡಿಕೆ ಧಾರಣೆಯಲ್ಲೂ ಕುಸಿತವಾಗಿದೆ. ಹಿಂದಿನ ಅವಧಿಯಲ್ಲಿ ರೈತರಿಗೆ ದೊರೆಯುತ್ತಿದ್ದ ಕಿಸಾನ್ ಸನ್ಮಾನ್ ಹಾಗೂ ವಿದ್ಯಾನಿಧಿ ಯೋಜನೆಗಳನ್ನು ಈಗಿನ ಸರಕಾರ ಸ್ಥಗಿತಗೊಳಿಸಿದೆ. ರೈತರಿಗೆ ಒಂದಲ್ಲೊಂದು ರೀತಿಯಲ್ಲಿ ತೊಂದರೆ ನೀಡುತ್ತಿರುವ ರಾಜ್ಯ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಮಠಂದೂರು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಹಾಗೂ ರೈತ ಮೋರ್ಚಾ ಅಧ್ಯಕ್ಷ ಶರತ್ನಂದ ಬೈಪಾಡಿತ್ತಾಯ ಉಪಸ್ಥಿತರಿದ್ದರು.

Ad Widget
Continue Reading

ಮಂಗಳೂರು

Mangaluru-ಬೆಳೆ ವಿಮೆ ಅನ್ಯಾಯ ಆರೋಪ: ಅ.9ರಂದು ಮಂಗಳೂರಿನಲ್ಲಿ ರೈತರ ಬೃಹತ್ ಹಕ್ಕೊತ್ತಾಯ | ಸಹಕಾರ ಭಾರತಿ – ಬಿಜೆಪಿ ಬೆಂಬಲ

Published

on



Ad Widget

Ad Widget

Ad Widget

Ad Widget

ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಹಕಾರ ಭಾರತಿ ಹಾಗೂ ಬಿಜೆಪಿ ನೇತೃತ್ವದಲ್ಲಿ ಅ.9ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಟೌನ್‌ಹಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ.

Ad Widget

Ad Widget

Ad Widget

Ad Widget

ಮಂಗಳೂರು: ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಹಕಾರ ಭಾರತಿ ಹಾಗೂ ಬಿಜೆಪಿ ನೇತೃತ್ವದಲ್ಲಿ ಅ.9ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಮಂಗಳೂರಿನ ಟೌನ್‌ಹಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಬೆಳೆ ವಿಮೆ ಯೋಜನೆಯಡಿ ರೈತರಿಗೆ ಸೂಕ್ತ ಪರಿಹಾರ ದೊರೆಯದಿರುವುದು ಸೇರಿದಂತೆ ವಿಮೆ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಭೆಯಲ್ಲಿ ಧ್ವನಿ ಎತ್ತಲಾಗುತ್ತದೆ.

Ad Widget

Ad Widget <> Ad Widget

ಬೆಳೆ ವಿಮೆ ಯೋಜನೆಯಡಿ ರೈತರಿಗೆ ನ್ಯಾಯಯುತ ಪರಿಹಾರ ದೊರೆಯಬೇಕು ಹಾಗೂ ವಿಮೆ ಪಾವತಿಯಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.



Ad Widget

ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರು ಸೇರಿದಂತೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಳೆ ವಿಮೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಹಕ್ಕೊತ್ತಾಯ ಮಂಡಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Continue Reading

ಶಿಕ್ಷಣ

Philomena-ಸಂತ ಫಿಲೋಮಿನಾ ಪ. ಪೂ ಕಾಲೇಜಿನಲ್ಲಿ ಕನ್ನಡ ಭಾಷಾ ಕಾರ್ಯಾಗಾರ

Published

on



Ad Widget

Ad Widget

Ad Widget

Ad Widget

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಅ 7 ರಂದು ಭಾಷಣ ಕಲೆ, ಕವನ ರಚನೆ, ಕಥಾ ರಚನೆ, ಕಾರ್ಯಕ್ರಮ ನಿರೂಪಣೆ ಹಾಗೂ ಪತ್ರಿಕಾ ವರದಿಯ ಕುರಿತು ಕಾರ್ಯಾಗಾರವು ಕಾಲೇಜು ಸಭಾಂಗಣದಲ್ಲಿ ನಡೆಯಿತು.

Ad Widget

Ad Widget

Ad Widget

Ad Widget

ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಅ 7 ರಂದು ಭಾಷಣ ಕಲೆ, ಕವನ ರಚನೆ, ಕಥಾ ರಚನೆ, ಕಾರ್ಯಕ್ರಮ ನಿರೂಪಣೆ ಹಾಗೂ ಪತ್ರಿಕಾ ವರದಿಯ ಕುರಿತು ಕಾರ್ಯಾಗಾರವು ಕಾಲೇಜು ಸಭಾಂಗಣದಲ್ಲಿ ನಡೆಯಿತು.

Ad Widget

Ad Widget

Ad Widget alt="Ad Widget"/>

Ad Widget

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಸುಳ್ಯದ ಸಾಹಿತಿ ಹಾಗೂ ಡಿಜಿಟಲ್ ಆರ್ಟ್ ನ ಉದಯ ಭಾಸ್ಕರ್ ಮಾತನಾಡಿ, ಸಾಹಿತ್ಯವು ನಮ್ಮೊಳಗಿನಿಂದ ಅಭಿವ್ಯಕ್ತಿಗೊಳ್ಳುವ ಮಾಧ್ಯಮ. ಸಾಹಿತ್ಯ ಲೋಕದ ಬರಹಗಳು ಮನುಷ್ಯನ ಕಲ್ಪನೆ ಮತ್ತು ಚಿಂತನೆಗಳ ಫಲಶ್ರುತಿ. ಸಾಹಿತಿಗೆ ಮುಖ್ಯವಾಗಿ ಶಬ್ದ ಸಂಪತ್ತು ಇರಬೇಕು. ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

Ad Widget

Ad Widget <> Ad Widget

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಪ್ರತಿಯೊಂದು ಭಾಷೆಗೂ ಸಮಾನ ಗೌರವವನ್ನು ನೀಡುವುದು ಅತ್ಯಂತ ಅಗತ್ಯವಿದ್ದು, ವಿವಿಧ ಭಾಷೆಗಳನ್ನು ಕಲಿಯುವುದರಿಂದ ನಮ್ಮ ಯೋಚನಾ ಶಕ್ತಿ ವೃದ್ಧಿಸುತ್ತದೆ. ಕನ್ನಡ ಒಂದು ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಕನ್ನಡವನ್ನು ಕಲಿಯುವುದರ ಜೊತೆಗೆ, ಕನ್ನಡ ಭಾಷೆಯ ಅಭಿವೃದ್ಧಿಗೆ ನಿಮ್ಮ ಕೊಡುಗೆಗಳನ್ನು ನೀಡಬೇಕೆಂದು ತಿಳಿಸಿದರು.



Ad Widget

ವೇದಿಕೆಯಲ್ಲಿ ಕನ್ನಡ ಸಂಘದ ನಿರ್ದೇಶಕರಾದ ಉಷಾ ಎ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ವರ್ಗ  ಉಪಸ್ಥಿತರಿದ್ದರು.

Ad Widget

Ad Widget

ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ಸಿಂಚನ ಸ್ವಾಗತಿಸಿ, ಗೌತಮ್ ವಂದಿಸಿ, ಗ್ರೀಷ್ಮ ಕಾರ್ಯಕ್ರಮ ನಿರೂಪಿಸಿದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading