ಕಾರ್ಯಕ್ರಮಗಳು
Seetarama Rai couple-ಸವಣೂರಿನ ಶಿಕ್ಷಣ ಕ್ರಾಂತಿಯ ಹರಿಕಾರ ಸೀತಾರಾಮ ರೈ ದಂಪತಿಯ ವೈವಾಹಿಕ ಜೀವನದ ‘ಸ್ವರ್ಣ ಸಂಭ್ರಮ’; ಮೇ 23ರಂದು ‘ಸೀತಾ-ಕಸ್ತೂರಿ ಕಲ್ಯಾಣ’..!
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು ಹಾಗೂ ಸವಣೂರಿನ ಶಿಕ್ಷಣ ಕ್ರಾಂತಿಯ ಹರಿಕಾರರೆಂದೇ ಪ್ರಸಿದ್ಧರಾದ ಕೆ. ಸೀತಾರಾಮ ರೈ ಮತ್ತು ಕಸ್ತೂರಿಕಲಾ ಎಸ್. ರೈ ದಂಪತಿ ತಮ್ಮ ವೈವಾಹಿಕ ಜೀವನದ 50ನೇ ವಸಂತಕ್ಕೆ ಕಾಲಿರಿಸುತ್ತಿದ್ದಾರೆ. ಈ ಸುಸಂದರ್ಭವನ್ನು ಸ್ಮರಣೀಯವಾಗಿಸಲು ‘ಸೀತಾ-ಕಸ್ತೂರಿ ಕಲ್ಯಾಣ’ ಎಂಬ ವಿಶೇಷ ಸಂಭ್ರಮಾಚರಣೆಯನ್ನು ಮೇ 23ರಂದು ಸವಣೂರಿನ ಅವರ ಸ್ವಗೃಹ ‘ರಶ್ಮಿ ನಿವಾಸ’ದಲ್ಲಿ ಆಯೋಜಿಸಲಾಗಿದೆ.
ಪುತ್ತೂರು: ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು ಹಾಗೂ ಸವಣೂರಿನ ಶಿಕ್ಷಣ ಕ್ರಾಂತಿಯ ಹರಿಕಾರರೆಂದೇ ಪ್ರಸಿದ್ಧರಾದ ಕೆ. ಸೀತಾರಾಮ ರೈ ಮತ್ತು ಕಸ್ತೂರಿಕಲಾ ಎಸ್. ರೈ ದಂಪತಿ ತಮ್ಮ ವೈವಾಹಿಕ ಜೀವನದ 50ನೇ ವಸಂತಕ್ಕೆ ಕಾಲಿರಿಸುತ್ತಿದ್ದಾರೆ. ಈ ಸುಸಂದರ್ಭವನ್ನು ಸ್ಮರಣೀಯವಾಗಿಸಲು ‘ಸೀತಾ-ಕಸ್ತೂರಿ ಕಲ್ಯಾಣ’ ಎಂಬ ವಿಶೇಷ ಸಂಭ್ರಮಾಚರಣೆಯನ್ನು ಮೇ 23ರಂದು ಸವಣೂರಿನ ಅವರ ಸ್ವಗೃಹ ‘ರಶ್ಮಿ ನಿವಾಸ’ದಲ್ಲಿ ಆಯೋಜಿಸಲಾಗಿದೆ.
ಧಾರ್ಮಿಕ ಕಾರ್ಯಕ್ರಮಗಳು (ಮೇ 22):
ಸಂಭ್ರಮಾಚರಣೆಯ ಅಂಗವಾಗಿ ಮೇ 22ರಂದು ಬೆಳಿಗ್ಗೆ 8 ಗಂಟೆಯಿಂದ ಮಾಲೆಂಗಲ್ಲು ವಿಜಯಕುಮಾರ್ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಶಿವಕುಮಾರ್ ಭಟ್ ಎಡಮಂಗಲ ಅವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ವೇದಮೂರ್ತಿ ಶ್ರೀವತ್ಸ ಕೆದಿಲಾಯ ಮತ್ತು ವೆಂಕಟೇಶ ಶಾಸ್ತ್ರೀ ಅವರು ಉಪಸ್ಥಿತರಿರಲಿದ್ದಾರೆ.
ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮ (ಮೇ 23):
ಸಂಗೀತ ಸೌರಭ: ಅಪರಾಹ್ನ 3 ಗಂಟೆಗೆ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ‘ಸಂಗೀತ ಗಾನ ಸಂಭ್ರಮ’ ಜರುಗಲಿದೆ.
ಸಭಾ ಕಾರ್ಯಕ್ರಮ: ಸಂಜೆ 5:30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸೀತಾರಾಮ ರೈ ದಂಪತಿಯನ್ನು ಅಭಿನಂದಿಸಲಾಗುವುದು.
ದಿವ್ಯ ಸಾನ್ನಿಧ್ಯ: ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ ಹಾಗೂ ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ.
ಗೌರವ ಅತಿಥಿಗಳು: ಮಂಗಳೂರಿನ ಎ.ಜೆ. ಶೆಟ್ಟಿ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸನ್ಮಾನ ನೆರವೇರಿಸಲಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಮತ್ತು ಶಾಸಕಿ ಭಾಗೀರಥಿ ಮುರುಳ್ಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಶೇಷ ಸನ್ಮಾನ:
ಇದೇ ವೇದಿಕೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಪಟ್ಲ ಸತೀಶ್ ಶೆಟ್ಟಿ, ಕಂಬಳ ಉದ್ಯೋಷಕ ಎತ್ತೂರು ರಾಜೀವ್ ಶೆಟ್ಟಿ ಮತ್ತು ಚಲನಚಿತ್ರ ನಿರ್ಮಾಪಕ ರವಿ ರೈ ಕಳಸ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ದಂಪತಿಯ ಮಕ್ಕಳಾದ ರಶ್ಮಿ ಎ. ಶೆಟ್ಟಿ, ಮಹೇಶ್ ರೈ ಸವಣೂರು, ಡಾ. ರಾಜೇಶ್ ರೈ ಸವಣೂರು ಹಾಗೂ ಮೊಮ್ಮಕ್ಕಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಳೀಯ
Dharmasthala-ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ; ಹೆಗ್ಗಡೆಯವರ ಸೇವೆ-ಸಾಧನೆ ವಿಶ್ವಮಾನ್ಯವಾಗಿದೆ-ರಾಘವೇಂದ್ರ ಶ್ರೀನಿವಾಸ ಭಟ್
ಶನಿವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿ.ಇ.ಒ. ರಾಘವೇಂದ್ರ ಶ್ರೀನಿವಾಸ ಭಟ್ ಮಾತನಾಡಿದರು.
ಉಜಿರೆ: ಧರ್ಮಸ್ಥಳದ ಭವ್ಯ ಇತಿಹಾಸ ಮತ್ತು ಪರಂಪರೆಗನುಗುಣವಾಗಿ ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧದಾನ ಎಂಬ ಚತುರ್ವಿಧ ದಾನ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವದಿಂದ ಸಾತ್ವಿಕತ್ಯಾಗದೊಂದಿಗೆ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಾ ಸಮಾಜದ ಸರ್ವರ ಕಲ್ಯಾಣಕ್ಕಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸೇವಾಕಾರ್ಯ ಹಾಗೂ ಸಾಧನೆ ಆದರ್ಶ ಹಾಗೂ ಅನುಕರಣೀಯವಾಗಿದ್ದು ವಿಶ್ವಮಾನ್ಯವಾಗಿದೆ ಎಂದು ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿ.ಇ.ಒ. ರಾಘವೇಂದ್ರ ಶ್ರೀನಿವಾಸ ಭಟ್ ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇವರ್ಧಂತ್ಯುತ್ಸವ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು.
ಸಮಾಜಮುಖಿ ಚಿಂತನೆಯೊಂದಿಗೆ, ಧರ್ಮದ ತಳಹದಿಯಲ್ಲಿ ಮಾನವೀಯಮೌಲ್ಯಗಳೊಂದಿಗೆ ವಿಶೇಷವಾಗಿ ಮಹಿಳಾ ಸಬಲೀಕರಣಕ್ಕಾಗಿ ಹಾಗೂ ಅಸಹಾಯಕರಿಗೆ ಅಭಯದಾನದೊಂದಿಗೆ ಹೆಗ್ಗಡೆಯವರು ಮಾಡುತ್ತಿರುವ ಸಮಾಜಮುಖಿ ಸೇವಾಕಾರ್ಗಯಳು ಅಪೂರ್ವವಾಗಿದ್ದು ಅವರಿಗೆ “ರಾಜರ್ಷಿ” ಬಿರುದು ಅನ್ವರ್ಥಕವೂ, ಅರ್ಥಪೂರ್ಣವು ಆಗಿದೆ ಎಂದರು.
ಧರ್ಮಸ್ಥಳಕ್ಕೂ ಕರ್ಣಾಟಕ ಬ್ಯಾಂಕ್‌ಗೂ ಇರುವ ಅವಿನಾಭಾವ ಸಂಬಂಧವನ್ನು ಸ್ಮರಿಸಿದ ಅವರು ಹೆಗ್ಗಡೆಯವರು ಹಾಗೂ ಸಹೋದರರಾದ ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ನಿರ್ದೇಶಕರಾಗಿ ಬ್ಯಾಂಕ್‌ನ ಪ್ರಗತಿಗೆ ನೀಡಿದ ಸಹಕಾರ ಮತ್ತು ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸಿದರು.
ವಿಧಾನಪರಿಷತ್‌ನ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭಾಶಂಸನೆ ಮಾಡಿ ರಾಜಯೋಗಿಯಾಗಿಯೂ, ಕರ್ಮಯೋಗಿಯಾಗಿಯೂ ಸಮಾಜಕ್ಕಾಗಿ ಹೆಗ್ಗಡೆಯವರು ಮಾಡುತ್ತಿರುವ ಸೇವೆಯನ್ನು ಕೃತಜ್ಞತೆಯೊಂದಿಗೆ ಉಪಕಾರಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಸಂಸೆ ಹೊಸನೆಲ ಎಸ್ಟೇಟ್‌ನ ಪ್ರಬಂಧಕ ಶ್ರೀವರ್ಮ ಸೇರಿದಂತೆ ೨೬ ಮಂದಿ ಹಿರಿಯ ನೌಕರರÀನ್ನು ಹೆಗ್ಗಡೆಯವರು ಸನ್ಮಾನಿಸಿದರು.
ಡಾ. ಪವನ್ ಬರೆದ “ಮುಹೂರ್ತ ಪದವೀ” ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಹೆಗ್ಗಡೆಯವರ ಹೊಸ ಯೋಜನೆಗಳು:
ಶ್ರವಣಬೆಳಗೊಳದಲ್ಲಿ ವಿದ್ಯಾರ್ಥಿನಿ ನಿಲಯ ನಿರ್ಮಾಣ, ಉಜಿರೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಕ್ರೀಡಾವಸತಿ ನಿಲಯ, ಉಜಿರೆಯಲ್ಲಿ ನರ್ಸಿಂಗ್ ಕಾಲೇಜು ಮತ್ತು ಫಿಸಿಯೋಥೆರಪಿ ಕಾಲೇಜು ಪ್ರಾರಂಭ, ಶಿಕ್ಷಣ ಸಂಸ್ಥೆಗಳ ಹಳೇಕಟ್ಟಡಗಳ ನವೀಕರಣ, ಉಜಿರೆಯಲ್ಲಿ ಸಿಂಥೆಟಿಕ್ ಟ್ರಾಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಫಲಾನುಭವಿಗಳ ಅನುಕೂಲಕ್ಕಾಗಿ ಎ.ಟಿ.ಎಂ. ಬಳಕೆ, ಉಜಿರೆ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ, ಕೆರೆಗಳ ಪುನಶ್ಚೇತನ, ಎಸ್.ಡಿ.ಎಂ. ಆಸ್ಪತ್ರೆ, ಉಜಿರೆಯಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಸೌಲಭ್ಯ ಆರಂಭ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಉಜಿರೆಯಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು ₹.11.00 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ (Cath Lab) ಸೌಲಭ್ಯವನ್ನು ಪ್ರಾರಂಭಿಸಲಾಗುತ್ತದೆ. ಈ ಸೌಲಭ್ಯದ ಮೂಲಕ ಹೃದಯ ಸಂಬAಧಿ ಕಾಯಿಲೆಗಳ ತಪಾಸಣೆ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಆಂಜಿಯೋಗ್ರಾಮ್ (Angiogram) ಮತ್ತು ಆಂಜಿಯೋಪ್ಲಾಸ್ಟಿ (Angioplasty) ಸೇವೆಗಳು ಸ್ಥಳೀಯವಾಗಿಯೇ ಲಭ್ಯವಾಗಲಿದ್ದು ಯೋಜನೆಗಳನ್ನು ಸದ್ಯದಲ್ಲೇ ಅನುಷ್ಠಾನಗೊಳಿಸಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು.
ಅಲ್ಲದೆ ಭಾನುವಾರ/ಸೋಮವಾರಗಳಲ್ಲಿ ಧರ್ಮಸ್ಥಳಕ್ಕೆ ಬಂದು ಚಿಕಿತ್ಸೆಗಾಗಿ ನೆರವು ಕೋರಿದವರಿಗೆ ಸೂಕ್ತ ಸಹಾಯ ನೀಡಲಾಗುತ್ತದೆ.
ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿರುವ ಆಯುರ್ವೇದ ಆಸ್ಪತ್ರೆ ಹಾಗೂ ಧರ್ಮಸ್ಥಳ, ಪರೀಕ ಮತ್ತು ಬೆಂಗಳೂರಿನಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳಲ್ಲಿ ಪಾರಂಪರಿಕ ಚಿಕಿತ್ಸಾ ಪದ್ಧತಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೆಗ್ಗಡೆಯವರು ತಿಳಿಸಿದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾಹರ್ಷೇಂದ್ರ ಕುಮಾರ್, ಶ್ರದ್ಧಾಅಮಿತ್ ಮತ್ತು ಡಿ. ಶ್ರೇಯಸ್ ಕುಮಾರ್ ಉಪಸ್ಥಿತರಿದ್ದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮೂಡಬಿದ್ರೆ ಇದ್ದರು.
ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಸತೀಶ್ಚಂದ್ರ ಸ್ವಾಗತಿಸಿದರು. ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ರಾವ್ ಧನ್ಯವಾದವಿತ್ತರು.
ಪದ್ಮಶ್ರೀ ಆರ್. ಜೈನ್ ಮತ್ತು ದಿವ್ಯ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮಗಳು
Puttur Deepothsava-ಪುತ್ತೂರು ದೀಪೋತ್ಸವ 2026ಕ್ಕೆ ಸಿದ್ಧತೆ ಚುರುಕು; ಅ.26ರಂದು ಲೋಗೋ, ಆಮಂತ್ರಣ ಪತ್ರಿಕೆ ಬಿಡುಗಡೆ..!
ಧಾರ್ಮಿಕ ಶ್ರದ್ಧೆಯ ಬೆಳಕು, ಸಾಂಸ್ಕೃತಿಕ ವೈಭವದ ಮೆರುಗು ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರಲು ಸಜ್ಜಾಗುತ್ತಿರುವ ಪುತ್ತೂರು ದೀಪೋತ್ಸವ 2026ಕ್ಕೆ ಪೂರ್ವಸಿದ್ಧತೆಗಳು ಆರಂಭಗೊಂಡಿವೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಈ ಸಂಭ್ರಮದ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡುವ ನಿಟ್ಟಿನಲ್ಲಿ ಅಕ್ಟೋಬರ್ 26ರಂದು ದೀಪೋತ್ಸವದ ಲೋಗೋ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ.
ಪುತ್ತೂರು: ಧಾರ್ಮಿಕ ಶ್ರದ್ಧೆಯ ಬೆಳಕು, ಸಾಂಸ್ಕೃತಿಕ ವೈಭವದ ಮೆರುಗು ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರಲು ಸಜ್ಜಾಗುತ್ತಿರುವ ಪುತ್ತೂರು ದೀಪೋತ್ಸವ 2026ಕ್ಕೆ ಪೂರ್ವಸಿದ್ಧತೆಗಳು ಆರಂಭಗೊಂಡಿವೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಈ ಸಂಭ್ರಮದ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡುವ ನಿಟ್ಟಿನಲ್ಲಿ ಅಕ್ಟೋಬರ್ 26ರಂದು ದೀಪೋತ್ಸವದ ಲೋಗೋ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ.
ಪುತ್ತೂರಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ನಡೆಯಲಿರುವ ದೀಪೋತ್ಸವವು ಧಾರ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ಸೊಬಗನ್ನು ಒಗ್ಗೂಡಿಸುವ ಉದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ ದೀಪೋತ್ಸವದ ಲೋಗೋ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ.
ಅ. 26ರಂದು ಬೆಳಗ್ಗೆ 10ಕ್ಕೆ ಕಾರ್ಯಕ್ರಮ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಅಕ್ಟೋಬರ್ 26ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಪುತ್ತೂರು ದೀಪೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶಾಸಕ ಅಶೋಕ್ ಕುಮಾರ್ ರೈ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಸಮಿತಿಯ ಉಪಾಧ್ಯಕ್ಷ ಕರುಣಾಕರ ರೈ ದೇರ್ಲ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎಲುಬು ತಜ್ಞ ಡಾ. ಅಜಯ್ ಅವರು ದೀಪೋತ್ಸವದ ಲೋಗೋವನ್ನು ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಶಶಿಕುಮಾರ್ ರೈ ಬಾಲೊಟ್ಟು ಅವರು ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಲಿದ್ದಾರೆ.
ಧಾರ್ಮಿಕ ಪರಂಪರೆ, ಸಾಮರಸ್ಯದ ಸಂದೇಶ
ಧಾರ್ಮಿಕ ಪರಂಪರೆಯ ಸಂರಕ್ಷಣೆ, ಸಾಂಸ್ಕೃತಿಕ ವೈಭವದ ಅನಾವರಣ ಹಾಗೂ ಸಮಾಜದಲ್ಲಿ ಸಾಮರಸ್ಯದ ಭಾವನೆ ಬಲಪಡಿಸುವ ಆಶಯದೊಂದಿಗೆ ಪುತ್ತೂರು ದೀಪೋತ್ಸವ 2026 ಆಯೋಜನೆಗೊಳ್ಳುತ್ತಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ ದೀಪೋತ್ಸವದ ಪೂರ್ವಭಾವಿಯಾಗಿ ನಡೆಯುವ ಈ ಬಿಡುಗಡೆ ಸಮಾರಂಭವು ಮುಂದಿನ ಕಾರ್ಯಕ್ರಮಗಳ ಸಿದ್ಧತೆಗೆ ಮಹತ್ವದ ಹೆಜ್ಜೆಯಾಗಲಿದೆ.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೀಪೋತ್ಸವದ ಸಿದ್ಧತೆಗಳಿಗೆ ಪ್ರೋತ್ಸಾಹ ನೀಡುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಸ್ಥಳೀಯ
Dharmasthala-ಧರ್ಮಸ್ಥಳದಲ್ಲಿ ಛದ್ಮವೇಷ ಸ್ಪರ್ಧೆ: ವೈವಿಧ್ಯಮಯ ವೇಷಭೂಷಣಗಳೊಂದಿಗೆ ಗಮನ ಸೆಳೆದ ಸ್ಪರ್ಧಿಗಳು
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವದ ಅಂಗವಾಗಿ ಧರ್ಮಸ್ಥಳದಲ್ಲಿ ಆಯೋಜಿಸಲಾದ ಛದ್ಮವೇಷ ಸ್ಪರ್ಧೆಯು ವೈವಿಧ್ಯಮಯ ವೇಷಭೂಷಣಗಳು ಹಾಗೂ ಆಕರ್ಷಕ ಅಭಿನಯಗಳೊಂದಿಗೆ ಗಮನ ಸೆಳೆಯಿತು.

ಧರ್ಮಸ್ಥಳ, ಅ. 24: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವದ ಅಂಗವಾಗಿ ಧರ್ಮಸ್ಥಳದಲ್ಲಿ ಆಯೋಜಿಸಲಾದ ಛದ್ಮವೇಷ ಸ್ಪರ್ಧೆಯು ವೈವಿಧ್ಯಮಯ ವೇಷಭೂಷಣಗಳು ಹಾಗೂ ಆಕರ್ಷಕ ಅಭಿನಯಗಳೊಂದಿಗೆ ಗಮನ ಸೆಳೆಯಿತು.
ಸ್ಪರ್ಧಿಗಳು ವಿಭಿನ್ನ ಪಾತ್ರಗಳಿಗೆ ಜೀವ ತುಂಬುವ ಮೂಲಕ ತಮ್ಮ ಸೃಜನಶೀಲತೆ, ಕಲಾತ್ಮಕ ಕೌಶಲ ಹಾಗೂ ಅಭಿನಯ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸಾಂಪ್ರದಾಯಿಕ, ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಸಂದೇಶಗಳನ್ನು ಸಾರುವ ವೈವಿಧ್ಯಮಯ ವೇಷಗಳು ಸ್ಪರ್ಧೆಯ ಪ್ರಮುಖ ಆಕರ್ಷಣೆಯಾಗಿದ್ದವು.
ಛದ್ಮವೇಷ ಸ್ಪರ್ಧೆಯು ಕೇವಲ ಮನರಂಜನೆಗೆ ಸೀಮಿತವಾಗದೆ, ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಸಾರುವ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವ ಅರ್ಥಪೂರ್ಣ ವೇದಿಕೆಯಾಗಿ ಮೂಡಿಬಂತು. ಸ್ಪರ್ಧಿಗಳ ಕಲ್ಪನಾಶಕ್ತಿ, ಕಲಾತ್ಮಕ ಅಭಿವ್ಯಕ್ತಿ ಹಾಗೂ ವಿಭಿನ್ನ ಪಾತ್ರಗಳನ್ನು ಜೀವಂತವಾಗಿ ಚಿತ್ರಿಸುವ ಪ್ರಯತ್ನಗಳು ಕಾರ್ಯಕ್ರಮದ ವಿಶೇಷತೆಯಾಗಿದ್ದವು.
ಸ್ಪರ್ಧೆಯ ವಿಜೇತರು
ಪ್ರಾಥಮಿಕ ಶಾಲಾ ವಿಭಾಗ: ಪ್ರಥಮ ಸ್ಥಾನ – ನಿಹಿರಾ ಮತ್ತು ಬಳಗ; ದ್ವಿತೀಯ ಸ್ಥಾನ – ಅವನಿ ಎಸ್. ಶೆಟ್ಟಿ.
ಪ್ರೌಢಶಾಲಾ ವಿಭಾಗ: ಪ್ರಥಮ ಸ್ಥಾನ – ಕೀರ್ತಿ ಮತ್ತು ಬಳಗ; ದ್ವಿತೀಯ ಸ್ಥಾನ – ಶ್ರಾವ್ಯ ಮತ್ತು ಬಳಗ.
ಮಹಿಳಾ ವಿಭಾಗ: ಪ್ರಥಮ ಸ್ಥಾನ – ಖರ್ಚು ಉಗ್ರಾಣ ಮತ್ತು ಬಳಗ; ದ್ವಿತೀಯ ಸ್ಥಾನ – ಪ್ರೇರಣಾ ತಂಡ.
ಸೀನಿಯರ್ ವಿಭಾಗ: ಪ್ರಥಮ ಸ್ಥಾನ – ಜನಾರ್ದನ ಮತ್ತು ಬಳಗ; ದ್ವಿತೀಯ ಸ್ಥಾನ – ಎಸ್.ಕೆ.ಡಿ.ಆರ್.ಡಿ.ಪಿ. ಬಳಗ.
ಸೂಪರ್ ಸೀನಿಯರ್ ವಿಭಾಗ: ಪ್ರಥಮ ಸ್ಥಾನ – ರಂಗಶಿವ ಮತ್ತು ಬಳಗ; ದ್ವಿತೀಯ ಸ್ಥಾನ – ಸಾಮರ್‌ಸೆಟ್.
-
ಸ್ಥಳೀಯ11 hours agoKukke-ಕುಕ್ಕೆ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆಯ ದಿಟ್ಟಂ ಬದಲಾವಣೆಗೆ ವಿರೋಧ: ಪ್ರತ್ಯೇಕ ಸಂಕಲ್ಪ ಮರುಜಾರಿಗೆ ಪ್ರಸನ್ನ ದರ್ಬೆ ಆಗ್ರಹ; ಸಾಮೂಹಿಕ ಸಂಕಲ್ಪ ಪದ್ಧತಿ ಕೈಬಿಡದಿದ್ದರೆ ನ್ಯಾಯಬದ್ಧ ಹೋರಾಟದ ಎಚ್ಚರಿಕೆ
-
ಮಂಗಳೂರು7 hours agoYogesh-ಸೌಜನ್ಯ ಪ್ರಕರಣದ ಮರುತನಿಖೆಯಲ್ಲಿ ಬಿಗ್ ಡೆವಲಪ್’ಮೆಂಟ್; ಸೌಜನ್ಯ ಹೋರಾಟಗಾರರ ‘ಕೆಂಗಣ್ಣಿಗೆ’ ಗುರಿಯಾಗಿದ್ದ ಎಸೈ ಯೋಗೇಶ್ ನನ್ನು ವಿಚಾರಣೆಗೆ ಕರೆದ ಎಸ್ಐಟಿ – ಹೊರ ಬರುತ್ತಾ ಸತ್ಯ ?
-
ಸ್ಥಳೀಯ10 hours agoVenoor-ವೇಣೂರು: ಯುವತಿಗೆ ಲೈಂಗಿಕ ಕಿರುಕುಳ ಆರೋಪ: 61 ವರ್ಷದ ವ್ಯಕ್ತಿ ಪೊಲೀಸ್ ವಶಕ್ಕೆ
-
ಸಿನೆಮಾ10 hours agoVijay and Rashmika-ಮದುವೆಯಾಗಿ ಕೆಲವೇ ತಿಂಗಳು… ವಿಜಯ್–ರಶ್ಮಿಕಾ ನಡುವೆ ಎಲ್ಲವೂ ಸರಿಯಿಲ್ಲವೇ?
-
ಸ್ಥಳೀಯ10 hours agoCoconut-ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ: ಕೊಬ್ಬರಿ ಬೆಲೆ ಹೈ ಜಂಪ್! – ಎಳನೀರಿಗೂ ರೇಟ್ ಹೈಕ್
-
ನಿಧನ ವಾರ್ತೆ9 hours agoKota-ಕೋಟ ಜಂಕ್ಷನ್ನಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಯಾಗಿ ಸೈಕಲ್ ಸವಾರ ಆರೆಸ್ಸೆಸ್ ಮುಖಂಡ ಸಾವು
-
ನಿಧನ ವಾರ್ತೆ4 hours agoPuttur-ಪುತ್ತೂರು: ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ನವವಿವಾಹಿತೆ ಸಾವು
-
ಮೈಸೂರು10 hours agoPramodadevi Odeyar-ಮೈಸೂರು ದಸರಾ: ಸರ್ಕಾರಿ ಇಲಾಖೆಗಳ ನಡೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ: ಸರ್ಕಾರಕ್ಕೆ ಉಚ್ಚ ನ್ಯಾಯಾಲಯದ ಮೊರೆ ಹೋಗುವ ಎಚ್ಚರಿಕೆ..!


















