ಸ್ಥಳೀಯ
Venoor-ವೇಣೂರು: ಯುವತಿಗೆ ಲೈಂಗಿಕ ಕಿರುಕುಳ ಆರೋಪ: 61 ವರ್ಷದ ವ್ಯಕ್ತಿ ಪೊಲೀಸ್ ವಶಕ್ಕೆ
ಪರಿಶಿಷ್ಟ ಜಾತಿಗೆ ಸೇರಿದ ಯುವತಿಯೊಬ್ಬರಿಗೆ ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 61 ವರ್ಷದ ವ್ಯಕ್ತಿಯ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವೇಣೂರು: ಪರಿಶಿಷ್ಟ ಜಾತಿಗೆ ಸೇರಿದ ಯುವತಿಯೊಬ್ಬರಿಗೆ ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 61 ವರ್ಷದ ವ್ಯಕ್ತಿಯ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸ್ ಮಾಹಿತಿಯ ಪ್ರಕಾರ, ಅ.24ರಂದು ಮಧ್ಯಾಹ್ನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ದ್ವಿಚಕ್ರ ವಾಹನದಲ್ಲಿ ಬಂದ ಬೆಳ್ತಂಗಡಿ ತಾಲೂಕಿನ ವೇಣೂರು ನಿವಾಸಿ ಸೈಯ್ಯದ್ ಮಹಮ್ಮದ್ ಇಸಾಕ್ ಎಂಬಾತ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ಮಾತನಾಡಿ, ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.
ಈ ದೂರಿನ ಆಧಾರದಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 73/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 75(1)(ii), 75(1)(iv), 79 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ಮಂಗಳೂರು
Yogesh-ಸೌಜನ್ಯ ಪ್ರಕರಣದ ಮರುತನಿಖೆಯಲ್ಲಿ ಬಿಗ್ ಡೆವಲಪ್’ಮೆಂಟ್; ಸೌಜನ್ಯ ಹೋರಾಟಗಾರರ ‘ಕೆಂಗಣ್ಣಿಗೆ’ ಗುರಿಯಾಗಿದ್ದ ಎಸೈ ಯೋಗೇಶ್ ನನ್ನು ವಿಚಾರಣೆಗೆ ಕರೆದ ಎಸ್‌ಐಟಿ – ಹೊರ ಬರುತ್ತಾ ಸತ್ಯ ?
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. 2012ರಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿದ್ದ ಯೋಗೇಶ್ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. 2012ರಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿದ್ದ ಯೋಗೇಶ್ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
ಸೌಜನ್ಯ ತನಿಖೆಯನ್ನು ಹಾದಿ ತಪ್ಪಿಸಿದ್ದೆ ಆಗಿನ ತನಿಖಾಧಿಕಾರಿ ಯೋಗೀಶ್ ಎಂದು ಸೌಜನ್ಯ ಹೋರಾಟಗಾರರು ನಿರಂತರವಾಗಿ ಹೇಳುತ್ತ ಬಂದಿದ್ದರು. ಅಲ್ಲದೇ ಈ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಲಯ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಕೂಡ ತನಿಖೆ ನಡೆಸಿದ ರೀತಿಯ ಬಗ್ಗೆ ಅಸಮ್ಮತಿ ಸೂಚಿಸಿತ್ತು
ಪ್ರಕರಣದ ತನಿಖೆಯ ಆರಂಭಿಕ ಹಂತದಲ್ಲೇ ಸಾಕ್ಷ್ಯ ನಾಶ ಮಾಡಲಾಗಿದೆ ಎಂದು ಸೌಜನ್ಯ ಅವರ ಪೋಷಕರು ಕೂಡ ಅಂದಿನ ತನಿಖಾಧಿಕಾರಿ ಯೋಗೇಶ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಇದೀಗ ಅವರನ್ನು ವಿಚಾರಣೆಗೆ ಕರೆಯಿಸಿದ್ದು, ಈ ವಾರದೊಳಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ಪೀಠವು ಪ್ರಕರಣದ ಸಮಗ್ರ ಮರುತನಿಖೆ ನಡೆಸುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಗಳನ್ನು ಹೊಸ ತನಿಖಾ ತಂಡದಲ್ಲಿ ಸೇರಿಸಿಕೊಳ್ಳಬಾರದು ಎಂಬ ಕಟ್ಟುನಿಟ್ಟಿನ ಸೂಚನೆಯನ್ನೂ ನ್ಯಾಯಾಲಯ ನೀಡಿದೆ ಎನ್ನಲಾಗಿದೆ.
ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಲು ಗಡುವು
ಪ್ರಕರಣದ ಮರುತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಗಡುವು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆಯನ್ನು ಚುರುಕುಗೊಳಿಸಿದ್ದು, ಹಿಂದಿನ ತನಿಖೆಯ ವಿವಿಧ ಅಂಶಗಳ ಪರಿಶೀಲನೆ ನಡೆಸುತ್ತಿದೆ.
ಅಂದಿನ ತನಿಖಾಧಿಕಾರಿ ಯೋಗೇಶ್ ಅವರಿಗೆ ನೀಡಿರುವ ವಿಚಾರಣೆಯ ಸೂಚನೆ ಪ್ರಕರಣದ ಮುಂದಿನ ತನಿಖೆಯ ದೃಷ್ಟಿಯಿಂದ ಕುತೂಹಲ ಮೂಡಿಸಿದೆ. 14 ವರ್ಷಗಳಿಂದ ಸೌಜನ್ಯಳ ನ್ಯಾಯದ ಕೂಗು ಜಿಲ್ಲೆ ಹಾಗೂ ರಾಜ್ಯದಲ್ಲಿ ಅನುರಣಿಸುತ್ತಲೇ ಇದೆ.
ಸ್ಥಳೀಯ
Vidyamata Academy-UGC-NET & KSET, 2026 ಪರೀಕ್ಷೆಗೆ ಪೂರ್ವ ಸಿದ್ದತಾ ತರಬೇತಿ ಪ್ರಾರಂಭಿಸಿದ ವಿದ್ಯಾಮಾತಾ ಅಕಾಡೆಮಿ
ಕಳೆದ ಹಲವು ವರ್ಷಗಳಿಂದ ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಮತ್ತು ಸರಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿಯು 2026ನೇ ಸಾಲಿನ ರಾಷ್ಟ್ರೀಯ ಅರ್ಹತಾ ಪರೀಕ್ಷೆ 2026(NET) ಯ ಪರೀಕ್ಷೆಯನ್ನು ಸರಕಾರವು ಡಿಸೆಂಬರ್ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಿದೆ. ಇದಕ್ಕೆ ಪೂರಕವಾಗಿ ವಿದ್ಯಾಮಾತಾ ಅಕಾಡೆಮಿಯು ಆನ್ಲೈನ್ ಮೂಲಕ ಪೂರ್ವ ಸಿದ್ದತಾ ತರಬೇತಿಯನ್ನು ಪ್ರಾರಂಭಿಸಿದ್ದು, ಈ ಕುರಿತು ಈಗಾಗಲೇ ದಾಖಲಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಅರ್ಜಿ ಸಲ್ಲಿಸಿರುವ ಮತ್ತು ಅರ್ಜಿ ಸಲ್ಲಿಸಲು ಉದ್ದೇಶಿಸಿರುವ ಅಭ್ಯರ್ಥಿಗಳು ಈ ತರಗತಿಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಕಳೆದ ಹಲವು ವರ್ಷಗಳಿಂದ ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಮತ್ತು ಸರಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿಯು 2026ನೇ ಸಾಲಿನ ರಾಷ್ಟ್ರೀಯ ಅರ್ಹತಾ ಪರೀಕ್ಷೆ 2026(NET) ಯ ಪರೀಕ್ಷೆಯನ್ನು ಸರಕಾರವು ಡಿಸೆಂಬರ್ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಿದೆ, ಇದಕ್ಕೆ ಪೂರಕವಾಗಿ ವಿದ್ಯಾಮಾತಾ ಅಕಾಡೆಮಿಯು ಆನ್ಲೈನ್ ಮೂಲಕ ಪೂರ್ವ ಸಿದ್ದತಾ ತರಬೇತಿಯನ್ನು ಪ್ರಾರಂಭಿಸಿದ್ದು, ಈ ಕುರಿತು ಈಗಾಗಲೇ ದಾಖಲಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಅರ್ಜಿ ಸಲ್ಲಿಸಿರುವ ಮತ್ತು ಅರ್ಜಿ ಸಲ್ಲಿಸಲು ಉದ್ದೇಶಿಸಿರುವ ಅಭ್ಯರ್ಥಿಗಳು ಈ ತರಗತಿಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಹಲವು ವರ್ಷಗಳಿಂದ NET &KSET ಅರ್ಹತಾ ಪರೀಕ್ಷೆಯಲ್ಲಿ ಅಮೋಘ ಸಾಧನೆ ಮಾಡುತ್ತಿರುವ ವಿದ್ಯಾಮಾತಾ ಅಕಾಡೆಮಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(KARTET), ಶಿಕ್ಷಕರ ನೇಮಕಾತಿ,ರಾಷ್ಟ್ರೀಯ ಅರ್ಹತಾ ಪರೀಕ್ಷೆ ಹಾಗೂ ಇತರೆ ಶಿಕ್ಷಕರ ನೇಮಕಾತಿ, ಉಪನ್ಯಾಸಕರ ನೇಮಕಾತಿಗೆ ಸಂಬಂದಿಸಿದ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಾ ಬಂದಿರುವ ವಿದ್ಯಾಮಾತಾ ಅಕಾಡೆಮಿಯ 800ಕ್ಕೂ ಅಧಿಕ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ತರಬೇತಿಯು ಆನ್ಲೈನ್ ಲೈವ್ ಮೂಲಕ ನಡೆಯಲಿದ್ದು,ರಾತ್ರಿ ಸಮಯ 8 ರಿಂದ 10 ರವರೆಗೆ ನಡೆಯಲಿದೆ, ಆಸಕ್ತ ಅಭ್ಯರ್ಥಿಗಳು ಪುತ್ತೂರಿನ ಎಪಿಯಂಸಿ ರಸ್ತೆಯಲ್ಲಿರುವ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಹಾಗೂ ದಾಖಲಾತಿಯನ್ನು ಪಡೆದುಕೊಳ್ಳಲು ಸಂಸ್ಥೆಯ ಕಛೇರಿಯನ್ನು ಖುದ್ದಾಗಿ ಅಥವಾ ಕರೆಯ ಮೂಲಕ ಪಡೆದುಕೊಳ್ಳಲು ವಿದ್ಯಾಮಾತಾ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
PH: 99451 82516
ಶಿಕ್ಷಣ
Vivekananda-ವಿವೇಕಾನಂದ ಕಾಲೇಜಿನಲ್ಲಿ ಯಕ್ಷ ದೀಕ್ಷಾ ಪ್ರದಾನ ಮತ್ತು ಯಕ್ಷ ಗೌರವ ಸಮರ್ಪಣೆ
ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜು ಇಲ್ಲಿನ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷರಂಜಿನಿ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ನಡೆದ ಯಕ್ಷ ದೀಕ್ಷಾ ಪ್ರದಾನ ಮತ್ತು ಯಕ್ಷ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ಹಾಗೂ ಯಕ್ಷಗಾನ ಕಲಾವಿದ ನಾ. ಕಾರಂತ ಪೆರಾಜೆ ಮಾತನಾಡಿದರು.
ಯಕ್ಷಗಾನ ಕೇವಲ ಮನರಂಜನಾ ಕಲೆಯಲ್ಲ, ಅದು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಾಧ್ಯಮವಾಗಿದೆ. ಕರ್ನಾಟಕದಲ್ಲಿ ಕನ್ನಡವನ್ನು ಅತ್ಯಂತ ಶುದ್ಧವಾಗಿ ಪ್ರಕಟಪಡಿಸುವ ಕಾರ್ಯ ನಮ್ಮ ಕರಾವಳಿ ಭಾಗದಲ್ಲಿ ಯಕ್ಷಗಾನದಿಂದ ಆಗುತ್ತಿದೆ. ಒಬ್ಬ ಕಲಾವಿದನನ್ನು ಕೇಂದ್ರೀಕೃತ ಮಾಡುವುದೇ ಯಕ್ಷಗಾನದ ಕಲೆ ಎಂದು ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ಹಾಗೂ ಯಕ್ಷಗಾನ ಕಲಾವಿದ ನಾ. ಕಾರಂತ ಪೆರಾಜೆ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜು ಇಲ್ಲಿನ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷರಂಜಿನಿ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ನಡೆದ ಯಕ್ಷ ದೀಕ್ಷಾ ಪ್ರದಾನ ಮತ್ತು ಯಕ್ಷ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಜೀವನದಲ್ಲಿ ಶಿಸ್ತು ರೂಪುಗೊಳ್ಳುತ್ತದೆ ಮತ್ತು ಭವಿಷ್ಯದ ದಾರಿಯನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಹಿರಿಯರಿಂದ ಪ್ರಸಾದದ ರೂಪದಲ್ಲಿ ದೀಕ್ಷೆಯನ್ನು ಪಡೆದರೆ ಮುಂದೆ ಆ ಕ್ಷೇತ್ರದಲ್ಲಿ ಒಬ್ಬ ಉತ್ತಮ ಕಲಾವಿದನಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಆದ್ದರಿಂದ ಯಕ್ಷಗಾನದ ಮೂಲಭೂತ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ .ಕೆ.ಎನ್ ಮಾತನಾಡಿ, ವಿವೇಕಾನಂದ ಕಾಲೇಜು ಯಕ್ಷಗಾನ, ಭರತನಾಟ್ಯ, ಸಂಗೀತ ಮುಂತಾದ ಕಲಾಪ್ರಕಾರಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಸಮರ್ಥವಾದಂತಹ ಯಕ್ಷಗಾನ ಕಲೆಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವ ನಿಟ್ಟಿನಲ್ಲಿ ಅದನ್ನು ಉಳಿಸುತ್ತಾ, ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ಹಾಗೂ ಯಕ್ಷಗಾನ ಕಲಾವಿದ ನಾ. ಕಾರಂತ ಪೆರಾಜೆಯವರಿಗೆ ಯಕ್ಷ ಗೌರವ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್.ಎಸ್, ಕಾಲೇಜಿನ ವಿಶೇಷಾಧಿಕಾರಿ (ಆಡಳಿತ) ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮನಮೋಹನ ಎಮ್, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ವಿಜಯಸರಸ್ವತಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯಕ್ಷರಂಜಿನಿಯ ಸಂಯೋಜಕ ಗೋವಿಂದ ರಾಜ್ ಶರ್ಮಾ ಸ್ವಾಗತಿಸಿ, ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸ್ಪೂರ್ತಿ.ಎಸ್ ವಂದಿಸಿ, ಕನ್ನಡ ವಿಭಾಗದ ಉಪನ್ಯಾಸಕ ಮಧುಕುಮಾರ್ ನಿರೂಪಿಸಿದರು.
-
ಅಪರಾಧ23 hours ago
Mangaluru Bike Theft Case: ಐಷಾರಾಮಿ ಜೀವನಕ್ಕಾಗಿ ಬೈಕ್ ಕಳವು! KTM, ಬುಲೆಟ್ ಸೇರಿ 6 ಬೈಕ್ ವಶ; 7 ಮಂದಿ ಪೊಲೀಸರ ವಶಕ್ಕೆ
-
ಸ್ಥಳೀಯ4 hours agoKukke-ಕುಕ್ಕೆ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆಯ ದಿಟ್ಟಂ ಬದಲಾವಣೆಗೆ ವಿರೋಧ: ಪ್ರತ್ಯೇಕ ಸಂಕಲ್ಪ ಮರುಜಾರಿಗೆ ಪ್ರಸನ್ನ ದರ್ಬೆ ಆಗ್ರಹ; ಸಾಮೂಹಿಕ ಸಂಕಲ್ಪ ಪದ್ಧತಿ ಕೈಬಿಡದಿದ್ದರೆ ನ್ಯಾಯಬದ್ಧ ಹೋರಾಟದ ಎಚ್ಚರಿಕೆ
-
ಸುಳ್ಯ20 hours ago
Kukke Subrahmanya: ಕುಕ್ಕೆ ಕ್ಷೇತ್ರದಲ್ಲಿ ಜನಜಾತ್ರೆ; ಎಲ್ಲೆಡೆ ಭಕ್ತರ ದಂಡು, ಪಾರ್ಕಿಂಗ್ಗೂ ಜಾಗವಿಲ್ಲ!
-
ಸಿನೆಮಾ3 hours agoVijay and Rashmika-ಮದುವೆಯಾಗಿ ಕೆಲವೇ ತಿಂಗಳು… ವಿಜಯ್–ರಶ್ಮಿಕಾ ನಡುವೆ ಎಲ್ಲವೂ ಸರಿಯಿಲ್ಲವೇ?
-
ಸ್ಥಳೀಯ3 hours agoCoconut-ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ: ಕೊಬ್ಬರಿ ಬೆಲೆ ಹೈ ಜಂಪ್! – ಎಳನೀರಿಗೂ ರೇಟ್ ಹೈಕ್
-
ನಿಧನ ವಾರ್ತೆ2 hours agoKota-ಕೋಟ ಜಂಕ್ಷನ್ನಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಯಾಗಿ ಸೈಕಲ್ ಸವಾರ ಆರೆಸ್ಸೆಸ್ ಮುಖಂಡ ಸಾವು
-
ಮೈಸೂರು3 hours agoPramodadevi Odeyar-ಮೈಸೂರು ದಸರಾ: ಸರ್ಕಾರಿ ಇಲಾಖೆಗಳ ನಡೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ: ಸರ್ಕಾರಕ್ಕೆ ಉಚ್ಚ ನ್ಯಾಯಾಲಯದ ಮೊರೆ ಹೋಗುವ ಎಚ್ಚರಿಕೆ..!
-
ಸ್ಥಳೀಯ3 hours agoVirendra Heggade-ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ದತ್ತಾತ್ರೇಯ ಹೊಸಬಾಳೆ; ವೀರೇಂದ್ರ ಹೆಗ್ಗಡೆಯವರಿಗೆ ಶುಭ ಹಾರೈಕೆ


















