Connect with us

ಬಿಗ್ ನ್ಯೂಸ್

Pavithra Gowda-ಜೈಲಿನಲ್ಲಿ ನೈಜೀರಿಯ ಮೂಲದ ಆರೋಪಿಗಳಿಂದ ಸಮಸ್ಯೆ..! ಪವಿತ್ರಾ ಗೌಡ ಬ್ಯಾರಕ್ ಬದಲಾವಣೆ ಅರ್ಜಿ ವಜಾ

Published

on



Ad Widget

Ad Widget

Ad Widget

Ad Widget

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಅವರು ಬ್ಯಾರಕ್ ಬದಲಾವಣೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಅವರು ಬ್ಯಾರಕ್ ಬದಲಾವಣೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಅದನ್ನು ತಿರಸ್ಕರಿಸಿ ಆದೇಶ ಹೊರಡಿಸಿದೆ. ಇದೇ ಪ್ರಕರಣದ ಇತರ ಆರೋಪಿಗಳಾದ ಅನುಕುಮಾರ್ ಮತ್ತು ಜಗದೀಶ್ ಸಲ್ಲಿಸಿದ್ದ ಅರ್ಜಿಗಳನ್ನೂ ನ್ಯಾಯಾಲಯ ವಜಾಗೊಳಿಸಿದೆ.

Ad Widget

Ad Widget <> Ad Widget

ಬ್ಯಾರಕ್‌ನಲ್ಲಿ ಸಮಸ್ಯೆ ಆಗುತ್ತಿದೆ ಎಂದಿದ್ದ ಪವಿತ್ರಾ ಗೌಡ
ತಮ್ಮ ಬ್ಯಾರಕ್‌ನಲ್ಲಿರುವ ನೈಜೀರಿಯಾ ಮೂಲದ ಆರೋಪಿಗಳಿಂದ ಸಮಸ್ಯೆ ಉಂಟಾಗುತ್ತಿದೆ. ತಮ್ಮ ಉಡುಪುಗಳನ್ನು ಇತರ ಆರೋಪಿಗಳೂ ಬಳಸುತ್ತಿರುವುದರಿಂದ ತೊಂದರೆಯಾಗುತ್ತಿದೆ. ಹೀಗಾಗಿ, ಪ್ರಸ್ತುತ ಬ್ಯಾರಕ್‌ನಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಪವಿತ್ರಾ ಗೌಡ ಅರ್ಜಿಯಲ್ಲಿ ತಿಳಿಸಿದ್ದರು.



Ad Widget

ಜೈಲಿನಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಲು ನ್ಯಾಯಾಧೀಶರ ಸಮಿತಿಯೇ ಭೇಟಿ ನೀಡಬೇಕು ಎಂದು ಮನವಿ ಮಾಡಿದ್ದ ಅವರು, ತಮ್ಮ ಬ್ಯಾರಕ್ ಬದಲಾವಣೆಗೆ ಅನುಮತಿ ನೀಡಬೇಕು ಹಾಗೂ ಪ್ರತ್ಯೇಕ ಆರೋಗ್ಯ ತಪಾಸಣೆಗೆ ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.

Ad Widget

Ad Widget

ಆದರೆ, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.

Ad Widget
Click to comment

Leave a Reply

ಅಂತರ ರಾಜ್ಯ

WhatsApp-ಜ.1ರಿಂದ ಹೊಸ ನಿಯಮ ಜಾರಿ? ಮೊಬೈಲ್‌ನಲ್ಲಿ ಸಿಮ್ ಇದ್ದರೆ ಮಾತ್ರ ವಾಟ್ಸ್‌ಆ್ಯಪ್ ಕಾರ್ಯನಿರ್ವಹಣೆ..!

Published

on



Ad Widget

Ad Widget

Ad Widget

Ad Widget

ವಾಟ್ಸ್‌ಆ್ಯಪ್, ಟೆಲಿಗ್ರಾಂ ಸೇರಿದಂತೆ ಮೆಸೇಜಿಂಗ್ ಆ್ಯಪ್‌ಗಳ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಲು ಮುಂದಾಗಿದೆ ಎಂಬ ವರದಿಗಳು ಪ್ರಕಟವಾಗಿವೆ. ಈ ನಿಯಮದ ಪ್ರಕಾರ, ಮೆಸೇಜಿಂಗ್ ಆ್ಯಪ್‌ಗಳು ಕಾರ್ಯನಿರ್ವಹಿಸಲು ಸಂಬಂಧಿತ ಮೊಬೈಲ್ ಸಂಖ್ಯೆಯ ಸಕ್ರಿಯ ಸಿಮ್ ಕಾರ್ಡ್ ಸಾಧನದಲ್ಲಿರುವುದು ಕಡ್ಡಾಯವಾಗಲಿದೆ ಎಂದು ಹೇಳಲಾಗಿದೆ. ಈ ನಿಯಮವು 2027ರ ಜನವರಿ 1ರಿಂದ ಜಾರಿಗೆ ಬರಲಿದೆ ಎಂಬ ಮಾಹಿತಿ ವರದಿಯಲ್ಲಿ ಉಲ್ಲೇಖವಾಗಿದೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ: ವಾಟ್ಸ್‌ಆ್ಯಪ್, ಟೆಲಿಗ್ರಾಂ ಸೇರಿದಂತೆ ಮೆಸೇಜಿಂಗ್ ಆ್ಯಪ್‌ಗಳ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಲು ಮುಂದಾಗಿದೆ ಎಂಬ ವರದಿಗಳು ಪ್ರಕಟವಾಗಿವೆ. ಈ ನಿಯಮದ ಪ್ರಕಾರ, ಮೆಸೇಜಿಂಗ್ ಆ್ಯಪ್‌ಗಳು ಕಾರ್ಯನಿರ್ವಹಿಸಲು ಸಂಬಂಧಿತ ಮೊಬೈಲ್ ಸಂಖ್ಯೆಯ ಸಕ್ರಿಯ ಸಿಮ್ ಕಾರ್ಡ್ ಸಾಧನದಲ್ಲಿರುವುದು ಕಡ್ಡಾಯವಾಗಲಿದೆ ಎಂದು ಹೇಳಲಾಗಿದೆ. ಈ ನಿಯಮವು 2027ರ ಜನವರಿ 1ರಿಂದ ಜಾರಿಗೆ ಬರಲಿದೆ ಎಂಬ ಮಾಹಿತಿ ವರದಿಯಲ್ಲಿ ಉಲ್ಲೇಖವಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಈ ಸಂಬಂಧ ಡಿಸೆಂಬರ್ 31ರೊಳಗೆ ಬಳಕೆದಾರರ ಖಾತೆಗಳನ್ನು ಸಕ್ರಿಯ ಸಿಮ್ ಕಾರ್ಡ್‌ಗಳೊಂದಿಗೆ ಸಂಯೋಜಿಸಲು ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.

Ad Widget

Ad Widget <> Ad Widget

ಸೈಬರ್ ವಂಚನೆ ತಡೆಗೆ ಕ್ರಮ
ಹೆಚ್ಚುತ್ತಿರುವ ಸೈಬರ್ ವಂಚನೆಗಳು, ಫಿಶಿಂಗ್ ಹಾಗೂ ಭಾರತೀಯ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ನಡೆಸಲಾಗುತ್ತಿರುವ ಡಿಜಿಟಲ್ ಅರೆಸ್ಟ್‌ನಂತಹ ವಂಚನೆಗಳನ್ನು ನಿಯಂತ್ರಿಸುವುದು ಈ ಕ್ರಮದ ಉದ್ದೇಶ ಎನ್ನಲಾಗಿದೆ. ಟೆಲಿಕಾಂ ಕ್ಷೇತ್ರದಲ್ಲಿ ಸೈಬರ್ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿಯೂ ಈ ನಿಯಮ ಮಹತ್ವದ್ದಾಗಿದೆ ಎಂದು ವರದಿ ತಿಳಿಸಿದೆ.



Ad Widget

ಯಾರ ಮೇಲೆ ಪರಿಣಾಮ ಬೀರಬಹುದು?
ಸಂಬಂಧಿತ ಮೊಬೈಲ್ ಸಂಖ್ಯೆಯ ಸಿಮ್ ಕಾರ್ಡ್ ಇಲ್ಲದೆಯೇ ವೈ-ಫೈ ಮೂಲಕ ವಾಟ್ಸ್‌ಆ್ಯಪ್ ಅಥವಾ ಟೆಲಿಗ್ರಾಂ ಬಳಸುತ್ತಿರುವವರಿಗೆ ಈ ನಿಯಮದಿಂದ ತೊಂದರೆಯಾಗುವ ಸಾಧ್ಯತೆಯಿದೆ.

Ad Widget

Ad Widget

ಅದೇ ರೀತಿ, ಒಂದಕ್ಕಿಂತ ಹೆಚ್ಚು ಸಾಧನಗಳಲ್ಲಿ ಮೆಸೇಜಿಂಗ್ ಆ್ಯಪ್‌ಗಳನ್ನು ಬಳಸುವವರು ಹಾಗೂ ಆಗಾಗ್ಗೆ ಸಿಮ್ ಕಾರ್ಡ್ ಬದಲಾಯಿಸುವವರ ಬಳಕೆಯ ಮೇಲೂ ಪರಿಣಾಮ ಬೀರಬಹುದು.

Ad Widget
Continue Reading

ಬಿಗ್ ನ್ಯೂಸ್

High Court-ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಕೋಮು ದ್ವೇಷದ ಹಣೆಪಟ್ಟಿ ಕಟ್ಟುವಂತಿಲ್ಲ – ಪ್ರಕರಣ ದಾಖಲಾದ ಮಾತ್ರಕ್ಕೆ ಬಂಧನ ಅಗತ್ಯವಿಲ್ಲ : ಪುರುಷರಕಟ್ಟೆ ಘಟನೆ ಸಂಬಂಧಿಸಿದಂತೆ ಹೈಕೋರ್ಟ್‌ನಿಂದ ಪೊಲೀಸರಿಗೆ 6 ಮಾರ್ಗಸೂಚಿ

Published

on



Ad Widget

Ad Widget

Ad Widget

Ad Widget

ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳ ವಿರುದ್ಧ ದೂರು ಬಂದಾಗ, ಅದರಲ್ಲಿ ಅಪರಾಧದ ಅಗತ್ಯ ಅಂಶಗಳಿವೆಯೇ ಎಂಬುದನ್ನು ಪೊಲೀಸರು ಪರಿಶೀಲಿಸಬೇಕು. ಕೇವಲ ಟೀಕೆ ಅಥವಾ ಭಿನ್ನಾಭಿಪ್ರಾಯವನ್ನು ಕೋಮು ದ್ವೇಷ ಪ್ರಚೋದನೆಯ ಅಪರಾಧವೆಂದು ಯಾಂತ್ರಿಕವಾಗಿ ಪರಿಗಣಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳ ವಿರುದ್ಧ ದೂರು ಬಂದಾಗ, ಅದರಲ್ಲಿ ಅಪರಾಧದ ಅಗತ್ಯ ಅಂಶಗಳಿವೆಯೇ ಎಂಬುದನ್ನು ಪೊಲೀಸರು ಪರಿಶೀಲಿಸಬೇಕು. ಕೇವಲ ಟೀಕೆ ಅಥವಾ ಭಿನ್ನಾಭಿಪ್ರಾಯವನ್ನು ಕೋಮು ದ್ವೇಷ ಪ್ರಚೋದನೆಯ ಅಪರಾಧವೆಂದು ಯಾಂತ್ರಿಕವಾಗಿ ಪರಿಗಣಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಇಂತಹ ಪ್ರಕರಣಗಳ ನಿರ್ವಹಣೆ ಹಾಗೂ ಬಂಧನಕ್ಕೆ ಸಂಬಂಧಿಸಿದಂತೆ ಪೊಲೀಸರು ಅನುಸರಿಸಬೇಕಾದ ಆರು ಅಂಶಗಳ ಮಾರ್ಗಸೂಚಿಯನ್ನೂ ನ್ಯಾಯಾಲಯ ಪ್ರಕಟಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಪುತ್ತೂರಿನ ಪುರುಷರಕಟ್ಟೆಯಲ್ಲಿ ಜುಲೈ 8ರಂದು ಯುವತಿಯೊಬ್ಬರನ್ನು ಹಿಂಬಾಲಿಸಿ ಚಾಕು ತೋರಿಸಿ ಬೆದರಿಸಲಾಗಿದೆ ಎಂಬ ಶೀರ್ಷಿಕೆ ಸುದ್ದಿಯನ್ನು ಮರುಹಂಚಿಕೊಂಡಿದ್ದ ಎಕ್ಸ್ ಖಾತೆ ‘ಕರ್ನಾಟಕ ಪೋರ್ಟ್ ಪೊಲೀಯೋ’ ನಿರ್ವಾಹಕ ಸಂದೀಪ್ ಕುಮಾರ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸಿ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

Ad Widget

Ad Widget <> Ad Widget

ಅಭಿವ್ಯಕ್ತಿಯ ಸ್ವರೂಪ ಪರಿಶೀಲನೆ ಅಗತ್ಯ
ಅರ್ಜಿದಾರರು ಹೊಸದಾಗಿ ಯಾವುದೇ ಘಟನೆಯನ್ನು ಸೃಷ್ಟಿಸಿ ಪ್ರಕಟಿಸಿರಲಿಲ್ಲ. ಈಗಾಗಲೇ ವರದಿಯಾಗಿದ್ದ ಘಟನೆಯನ್ನು ಕಾನೂನು ಮತ್ತು ಸುವ್ಯವಸ್ಥೆಯ ಕುರಿತ ಆತಂಕದೊಂದಿಗೆ ಮರುಹಂಚಿಕೊಂಡಿದ್ದರು. ಆ ಪೋಸ್ಟ್‌ನಲ್ಲಿ ಕೋಮು ದ್ವೇಷ ಸೃಷ್ಟಿಸುವ ಅಪರಾಧದ ಅಗತ್ಯ ಅಂಶಗಳು ಕಂಡುಬರುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.



Ad Widget

ಕಾನೂನು ಬಂಧನಕ್ಕೆ ಅಧಿಕಾರ ನೀಡಿದರೂ, ಅದನ್ನು ಬಳಸಲು ವಾಸ್ತವಾಂಶಗಳ ಆಧಾರದಲ್ಲಿ ಸಮಂಜಸವಾದ ಮತ್ತು ಸಾಂವಿಧಾನಿಕವಾಗಿ ಸಮರ್ಥಿಸಬಹುದಾದ ಕಾರಣಗಳಿರಬೇಕು ಎಂದು ನ್ಯಾಯಾಲಯ ಹೇಳಿದೆ.

Ad Widget

Ad Widget

ಏಳು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ ಬಂಧನ ಅಗತ್ಯವಿಲ್ಲದಿದ್ದರೆ ಸಾಮಾನ್ಯವಾಗಿ ನೋಟಿಸ್ ನೀಡುವ ಪ್ರಕ್ರಿಯೆ ಅನುಸರಿಸಬೇಕು. ನೋಟಿಸ್ ಪಾಲಿಸದಿದ್ದರೂ ಬಂಧನ ಸ್ವಯಂಚಾಲಿತವಾಗಿ ಅನಿವಾರ್ಯವಾಗುವುದಿಲ್ಲ. ಬಂಧನದ ಅಗತ್ಯವನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ಅದಕ್ಕೆ ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಒಂದೇ ಘಟನೆಗೆ ಏಳು ಎಫ್‌ಐಆರ್‌: ಹೈಕೋರ್ಟ್ ಕಳವಳ
ಒಂದೇ ಘಟನೆ ಅಥವಾ ಬಹುತೇಕ ಒಂದೇ ರೀತಿಯ ಸಾಮಾಜಿಕ ಜಾಲತಾಣದ ಅಭಿವ್ಯಕ್ತಿಗೆ ಸಂಬಂಧಿಸಿ ಸರಣಿ ಪ್ರಕರಣಗಳನ್ನು ದಾಖಲಿಸುವ ಪ್ರವೃತ್ತಿಯ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

ಒಂದೇ ಘಟನೆಗೆ ಸಂಬಂಧಿಸಿದಂತೆ ಒಂದೇ ಪೊಲೀಸ್ ಠಾಣೆಯಲ್ಲಿ ಏಳು ಪ್ರಕರಣಗಳು ದಾಖಲಾಗಿರುವುದನ್ನು ಗಮನಿಸಿದ ನ್ಯಾಯಪೀಠ, ಅಪರಾಧದ ಅಗತ್ಯ ಅಂಶಗಳಿಲ್ಲದಿದ್ದರೂ ಒಂದೇ ವರದಿಗೆ ಸಂಬಂಧಿಸಿ ಪದೇಪದೇ ಪ್ರಕರಣ ದಾಖಲಿಸಿರುವುದನ್ನು ಆಕ್ಷೇಪಿಸಿದೆ.

ದೂರಿನಲ್ಲಿ ದಂಡನಾ ಕಾನೂನಿನ ಸೆಕ್ಷನ್‌ಗಳ ಭಾಷೆಯನ್ನು ಉಲ್ಲೇಖಿಸಿರುವುದಷ್ಟೇ ಅಪರಾಧ ಸಾಬೀತುಪಡಿಸಲು ಸಾಕಾಗುವುದಿಲ್ಲ. ಆರೋಪಿತ ಅಪರಾಧವನ್ನು ರೂಪಿಸುವ ನಿರ್ದಿಷ್ಟ ವಾಸ್ತವಾಂಶಗಳಿರಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 353(2) ಅನ್ವಯಿಸುವ ಮೊದಲು ಹೇಳಿಕೆ ಅಥವಾ ವರದಿಯ ಸ್ವರೂಪ, ಅದರಲ್ಲಿ ಅಗತ್ಯ ಅಪರಾಧಿಕ ಉದ್ದೇಶವಿದೆಯೇ ಮತ್ತು ವಿವಿಧ ಗುಂಪುಗಳು ಅಥವಾ ಸಮುದಾಯಗಳ ನಡುವಿನ ಸಂಬಂಧದ ಮೇಲೆ ಅದರ ಪರಿಣಾಮವೇನು ಎಂಬುದನ್ನು ಪರಿಶೀಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಪೊಲೀಸರಿಗೆ ಹೈಕೋರ್ಟ್‌ನ ಆರು ಮಾರ್ಗಸೂಚಿಗಳು

  1. ಅಪರಾಧದ ಅಗತ್ಯ ಅಂಶಗಳ ಪರಿಶೀಲನೆ: ಸಾಮಾಜಿಕ ಜಾಲತಾಣದ ಪೋಸ್ಟ್, ಹೇಳಿಕೆ ಅಥವಾ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ದೂರು ಬಂದಾಗ, ಆರೋಪಗಳನ್ನು ಇದ್ದಂತೆಯೇ ಪರಿಗಣಿಸಿದರೂ ಸಂಬಂಧಿತ ಅಪರಾಧದ ಅಗತ್ಯ ಅಂಶಗಳು ಕಂಡುಬರುತ್ತವೆಯೇ ಎಂಬುದನ್ನು ಪೊಲೀಸರು ಪರಿಶೀಲಿಸಬೇಕು.
  2. ಒಂದೇ ಘಟನೆಗೆ ಪುನರಾವರ್ತಿತ ಎಫ್‌ಐಆರ್ ಬೇಡ: ಒಂದೇ ಘಟನೆ, ವ್ಯವಹಾರ ಅಥವಾ ಬಹುತೇಕ ಒಂದೇ ರೀತಿಯ ಸಾಮಾಜಿಕ ಜಾಲತಾಣದ ಅಭಿವ್ಯಕ್ತಿಗೆ ಸಂಬಂಧಿಸಿ ಈಗಾಗಲೇ ಪ್ರಕರಣ ದಾಖಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ದೂರುದಾರರು ಬೇರೆ ಎಂಬ ಒಂದೇ ಕಾರಣಕ್ಕೆ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎಫ್‌ಐಆರ್ ದಾಖಲಿಸಬಾರದು.
  3. ಅಗತ್ಯವಿದ್ದಲ್ಲಿ ಪ್ರಾಥಮಿಕ ವಿಚಾರಣೆ: ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 173(3) ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪುಗಳ ಪ್ರಕಾರ ಪ್ರಾಥಮಿಕ ವಿಚಾರಣೆ ನಡೆಸಲು ಅವಕಾಶವಿರುವ ಪ್ರಕರಣಗಳಲ್ಲಿ ಅದರ ಅಗತ್ಯವನ್ನು ಪರಿಗಣಿಸಬೇಕು. ವಿಚಾರಣೆಯನ್ನು ಕಾನೂನಿನ ಷರತ್ತುಗಳು, ಅನುಮತಿ ಮತ್ತು ನಿಗದಿತ ಕಾಲಮಿತಿಗೆ ಅನುಗುಣವಾಗಿ ನಡೆಸಬೇಕು.
  4. ಬಿಎನ್‌ಎಸ್ ಸೆಕ್ಷನ್ 353(2) ಅನ್ವಯಿಸುವ ಮೊದಲು ನಿರ್ದಿಷ್ಟ ಪರಿಶೀಲನೆ: ಆಕ್ಷೇಪಿತ ಹೇಳಿಕೆ, ವದಂತಿ ಅಥವಾ ವರದಿಯಲ್ಲಿ ಈ ಸೆಕ್ಷನ್ ಅನ್ವಯಿಸಲು ಅಗತ್ಯವಾದ ಉದ್ದೇಶ ಹಾಗೂ ಸಂಬಂಧಿತ ಗುಂಪು ಅಥವಾ ಸಮುದಾಯಗಳಿಗೆ ಸಂಬಂಧಿಸಿದ ಅಂಶಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು.
  5. ಎಫ್‌ಐಆರ್ ಮತ್ತು ಬಂಧನ ಪ್ರತ್ಯೇಕ ನಿರ್ಧಾರಗಳು: ಪ್ರಕರಣ ದಾಖಲಿಸುವುದು ಮತ್ತು ಬಂಧಿಸುವುದು ಎರಡು ಪ್ರತ್ಯೇಕ ಕ್ರಮಗಳಾಗಿವೆ. ಬಂಧನದ ಸಂದರ್ಭದಲ್ಲಿ ಬಿಎನ್‌ಎಸ್‌ಎಸ್ ಸೆಕ್ಷನ್ 35ರ ಷರತ್ತುಗಳು ಹಾಗೂ ಸುಪ್ರೀಂ ಕೋರ್ಟ್‌ನ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಂಧನಕ್ಕೆ ಅಗತ್ಯವಾದ ಕಾನೂನು ಷರತ್ತುಗಳು ಈಡೇರದಿದ್ದರೆ ಸೆಕ್ಷನ್ 35(3)ರ ಅಡಿಯಲ್ಲಿ ನೋಟಿಸ್ ನೀಡುವ ಪ್ರಕ್ರಿಯೆ ಅನುಸರಿಸಬೇಕು.
  6. ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಸೂಚನೆ: ಪ್ರಕರಣ ದಾಖಲಿಸುವಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಮತ್ತು ಅನಗತ್ಯ ಬಂಧನ ತಡೆಯುವ ನಿಯಮಗಳ ಕುರಿತು ಸೂಕ್ತ ಆಡಳಿತಾತ್ಮಕ ಸೂಚನೆಗಳನ್ನು ಎಲ್ಲ ಸಂಬಂಧಿತ ಪೊಲೀಸ್ ಅಧಿಕಾರಿಗಳಿಗೆ ತಲುಪಿಸುವುದನ್ನು ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು ಖಚಿತಪಡಿಸಿಕೊಳ್ಳಬೇಕು.

ಸಾಮಾಜಿಕ ಜಾಲತಾಣದ ಅಭಿವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಾಗ ಕಾನೂನಿನ ನಿಬಂಧನೆಗಳನ್ನು ಪಾಲಿಸುವುದರ ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅನಗತ್ಯ ಬಂಧನದಿಂದ ರಕ್ಷಣೆ ನೀಡುವ ಸಾಂವಿಧಾನಿಕ ತತ್ವಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಸಂದೇಶವನ್ನು ಹೈಕೋರ್ಟ್‌ನ ಈ ಆದೇಶ ನೀಡಿದೆ.

Ad Widget
Continue Reading

ಬಿಗ್ ನ್ಯೂಸ್

Kripa Alva-ಸ್ಟಿಂಗ್ ಆಪರೇಷನ್‌ ಪ್ರಕರಣ: ಕೃಪಾ ಆಳ್ವಾಗೆ ಕಾಂಗ್ರೆಸ್‌ನಿಂದ ನೋಟಿಸ್ ಸಾಧ್ಯತೆ

Published

on



Ad Widget

Ad Widget

Ad Widget

Ad Widget

ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ವಕ್ತಾರೆ ಕೃಪಾ ಆಳ್ವಾ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಕಾರಣ ಕೇಳಿ ನೋಟಿಸ್ ಜಾರಿಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸುಳಿವು ನೀಡಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು, ಅ. 23: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ವಕ್ತಾರೆ ಕೃಪಾ ಆಳ್ವಾ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಕಾರಣ ಕೇಳಿ ನೋಟಿಸ್ ಜಾರಿಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸುಳಿವು ನೀಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್‌ನಲ್ಲಿ ಕಾಂಗ್ರೆಸ್‌ನವರು ಯಾರಾದರೂ ಭಾಗಿಯಾಗಿರುವುದು ಕಂಡುಬಂದರೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು. ಈಗಾಗಲೇ ವೀಡಿಯೊಗಳು ಬಹಿರಂಗವಾಗಿದ್ದು, ಕೃಪಾ ಆಳ್ವಾ ಅವರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಿರುವುದಾಗಿ ಹೇಳಿದ ಅವರು, ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

Ad Widget

Ad Widget <> Ad Widget

ಪುತ್ತೂರು ಟಿಕೆಟ್‌ ವಿಚಾರಕ್ಕೆ ಸ್ಟಿಂಗ್ ಆಪರೇಷನ್‌ ಲಿಂಕ್‌?



Ad Widget

ಸ್ಟಿಂಗ್ ಆಪರೇಷನ್ ಪ್ರಕರಣದ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರವೂ ಮುನ್ನೆಲೆಗೆ ಬಂದಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಪ್ರಸ್ತಾಪಿಸಿ, ಸಿದ್ದರಾಮಯ್ಯ ಅವರ ಮೊದಲ ಆಡಳಿತಾವಧಿಯಲ್ಲಿ ಕೃಪಾ ಆಳ್ವಾ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು ಎಂದು ಹೇಳಿದ್ದರು. ಇದೇ ವೇಳೆ, ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್‌ನಲ್ಲಿ ಕೃಪಾ ಆಳ್ವಾ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು.

Ad Widget

Ad Widget

ಇದಕ್ಕೆ ಸಂಬಂಧಿಸಿದಂತೆ, ಮೈಸೂರಿನಲ್ಲಿ ಗುರುವಾರ ಮಾತನಾಡಿದ್ದ ಸಚಿವ ಯತೀಂದ್ರ ಸಿದ್ದರಾಮಯ್ಯ, ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಸಿದ್ದರಾಮಯ್ಯ ಅವರನ್ನು ಬ್ಲ್ಯಾಕ್‌ಮೇಲ್ ಮಾಡುವ ಪ್ರಯತ್ನ ನಡೆದಿತ್ತು ಎಂದು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಪುತ್ತೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‌ನ ಮಹಿಳಾ ರಾಜಕಾರಣಿಯೊಬ್ಬರು ಭಾಗಿಯಾಗಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದ್ದರು.

ಇದರ ಬೆನ್ನಲ್ಲೇ, ಸ್ಟಿಂಗ್ ಆಪರೇಷನ್ ಹಿಂದೆ ಕೃಪಾ ಆಳ್ವಾ ಮತ್ತು ರಾಕೇಶ್ ಶೆಟ್ಟಿ ಅವರ ಪಾತ್ರದ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿರುವುದು ಪ್ರಕರಣದ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಸ್ಟಿಂಗ್ ಆಪರೇಷನ್ ಪ್ರಕರಣವು ಇದೀಗ ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲೂ ಚರ್ಚೆಗೆ ಕಾರಣವಾಗಿದ್ದು, ಕೃಪಾ ಆಳ್ವಾ ಅವರಿಗೆ ಅಧಿಕೃತವಾಗಿ ನೋಟಿಸ್ ಜಾರಿಯಾಗುತ್ತದೆಯೇ ಮತ್ತು ಪಕ್ಷ ಮುಂದಿನ ಹಂತದಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading