Connect with us

ಮೈಸೂರು

Yatindra-ಸ್ಟಿಂಗ್‌ ಆಪರೇಷನ್‌ಗೆ ಪುತ್ತೂರು ಟಿಕೆಟ್‌ ಲಿಂಕ್‌! ರಾಜ್ಯ ಮಾದ್ಯಮಗಳಲ್ಲಿ ಪ್ರಕಟವಾಗುವ ಮೊದಲೇ 15 ದಿನಗಳ ಹಿಂದೆಯೇ ನಿಖರ ನ್ಯೂಸ್‌ ನಲ್ಲಿ ಪ್ರಕಟವಾಗಿತ್ತು EXCLUSIVE ವರದಿ; ಈಗ ಯತೀಂದ್ರ ಹೇಳಿಕೆಯಿಂದ ಮತ್ತೆ ಸಂಚಲನ!

Published

on



Ad Widget

Ad Widget

Ad Widget

Ad Widget

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಸ್ಟಿಂಗ್‌ ಆಪರೇಷನ್‌ ಪ್ರಕರಣಕ್ಕೂ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿಚಾರಕ್ಕೂ ನಂಟಿದೆ ಎಂಬ ಮಹತ್ವದ ಸುಳಿವನ್ನು ನಿಖರ ನ್ಯೂಸ್‌ ಸುಮಾರು 15 ದಿನಗಳ ಹಿಂದೆಯೇ ತನ್ನ EXCLUSIVE ವರದಿಯಲ್ಲಿ ಬಹಿರಂಗಪಡಿಸಿತ್ತು. ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಪ್ರಕರಣದ ರಾಜಕೀಯ ಆಯಾಮವನ್ನು ಮತ್ತೆ ಮುನ್ನೆಲೆಗೆ ತಂದಿದೆ.

Ad Widget

Ad Widget

Ad Widget

Ad Widget
ನಿಖರ ನ್ಯೂಸ್‌ ನಲ್ಲಿ ಅ 8 ರಂದು ಪ್ರಕಟವಾಗಿದ ವರದಿಯ screenshot

ಮೈಸೂರು/ಪುತ್ತೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಸ್ಟಿಂಗ್‌ ಆಪರೇಷನ್‌ ಪ್ರಕರಣಕ್ಕೂ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿಚಾರಕ್ಕೂ ನಂಟಿದೆ ಎಂಬ ಮಹತ್ವದ ಸುಳಿವನ್ನು ನಿಖರ ನ್ಯೂಸ್‌ ಸುಮಾರು 15 ದಿನಗಳ ( ಅ.8ರಂದು) ಹಿಂದೆಯೇ ತನ್ನ EXCLUSIVE ವರದಿಯಲ್ಲಿ ಬಹಿರಂಗಪಡಿಸಿತ್ತು. ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಪ್ರಕರಣದ ರಾಜಕೀಯ ಆಯಾಮವನ್ನು ಮತ್ತೆ ಮುನ್ನೆಲೆಗೆ ತಂದಿದೆ.

Ad Widget

Ad Widget

Ad Widget alt="Ad Widget"/>

Ad Widget

ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಸ್ಟಿಂಗ್‌ ಆಪರೇಷನ್‌ ಕುರಿತು ಹೇಳಿಕೆ ನೀಡಿದ ಬೆನ್ನಲ್ಲೇ, ಈ ಪ್ರಕರಣದ ಹಿಂದೆ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿಚಾರದ ನಂಟಿರುವ ಸಾಧ್ಯತೆಯನ್ನು ನಿಖರ ನ್ಯೂಸ್‌ ತನ್ನ ವರದಿಯಲ್ಲಿ ಪ್ರಸ್ತಾಪಿಸಿತ್ತು. ರಾಜ್ಯದ ರಾಜಕೀಯ ವಲಯದಲ್ಲಿ ಪ್ರಕರಣ ತೀವ್ರ ಚರ್ಚೆಗೆ ಬರುವ ಮೊದಲೇ ಪ್ರಕಟವಾಗಿದ್ದ ಈ ವರದಿ ಇದೀಗ ಮತ್ತೊಮ್ಮೆ ಗಮನ ಸೆಳೆಯುತ್ತಿದೆ.ಅಲ್ಲದೇ ರಾಜ್ಯ ಹಾಗೂ ರಾಷ್ಟ್ರದ ಯಾವುದೇ ಸುದ್ದಿ ವಾಹಿನಿಗಳು ಈ ಸುದ್ದಿಯನ್ನು ಬಿತ್ತರಿಸುವ ಮೊದಲೇ ನಿಖರ ನ್ಯೂಸ್‌ ಈ ಕುರಿತ ವರದಿಯನ್ನು ಪ್ರಕಟಿಸಿತ್ತು

Ad Widget

Ad Widget <> Ad Widget

15 ದಿನಗಳ ಹಿಂದೆಯೇ ನಿಖರ ನ್ಯೂಸ್‌ ನೀಡಿತ್ತು ಮಹತ್ವದ ಸುಳಿವು!‌



Ad Widget

ಈ ಕೆಳಗಿನ ವರದಿಯನ್ನೂ ಓದಿ

Ad Widget

Ad Widget

Sting Operation | ಸ್ಟಿಂಗ್‌ ಆಪರೇಷನ್‌ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್‌’ ಸದ್ದು..?


ಸ್ಟಿಂಗ್‌ ಆಪರೇಷನ್‌ ಪ್ರಕರಣದ ಹಿಂದೆ ಮಾಧ್ಯಮ ಕ್ಷೇತ್ರದ ಪ್ರಭಾವಿ ವ್ಯಕ್ತಿಯೊಬ್ಬರು ಹಾಗೂ ಅರೆಕಾಲಿಕ ಮಹಿಳಾ ರಾಜಕಾರಣಿಯೊಬ್ಬರ ಪಾತ್ರವಿರುವ ಸಾಧ್ಯತೆಯನ್ನು ನಿಖರ ನ್ಯೂಸ್‌ ತನ್ನ EXCLUSIVE ವರದಿಯಲ್ಲಿ ಉಲ್ಲೇಖಿಸಿತ್ತು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದ ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪಕ್ಷವೊಂದರ ರಾಜ್ಯದ ಪ್ರಭಾವಿ ಮತ್ಸದಿ ರಾಜಕಾರಣಿಯೊಬ್ಬರನ್ನು ಬ್ಯಾಕ್‌ ಮೇಲ್‌ ಮಾಡುವ ಯತ್ನ ನಡೆದಿರಬಹುದೆಂಬ ಮಾಹಿತಿಯನ್ನೂ ಯಾರ ಹೆಸರನ್ನು ಪ್ರತ್ಯಕ್ಷವಾಗಿ ಉಲ್ಲೇಕಿಸದೇ ನಿಖರ ನ್ಯೂಸ್‌ ವರದಿ ಪ್ರಕಟಿಸಿತ್ತು
ವಿಶೇಷವಾಗಿ, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಪುತ್ತೂರಿನ ರಾಜಕೀಯ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿದ್ದ ಮಹಿಳಾ ರಾಜಕಾರಣಿಯೊಬ್ಬರ ವಿಚಾರವನ್ನು ವರದಿ ಪ್ರಸ್ತಾಪಿಸಿತ್ತು. ಹೀಗೆ, ರಾಜ್ಯಮಟ್ಟದಲ್ಲಿ ಸಂಚಲನ ಮೂಡಿಸಿದ ಪ್ರಕರಣದ ಹಿಂದೆ ಈ ರಾಜಕಾರಣಿಯ ನಂಟಿರಬಹುದೆಂಬ ಸಾಧ್ಯತೆಯನ್ನು ನಿಖರ ನ್ಯೂಸ್‌ ಮೊದಲೇ ಓದುಗರ ಮುಂದಿಟ್ಟಿತ್ತು.
“ಸ್ಟಿಂಗ್‌ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ” — ಯತೀಂದ್ರ ಸ್ಫೋಟಕ ಹೇಳಿಕೆ
ಮೈಸೂರಿನಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಹಿಳೆಯೊಬ್ಬರು ಭಾಗಿಯಾಗಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ತಂದೆಯವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಬಂಧಿಸಿ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಸೂಚಿಸಿದ್ದಾರೆ. ಸರ್ಕಾರದ ತನಿಖೆಯ ಮೇಲೆ ನಂಬಿಕೆಯಿದ್ದು, ತನಿಖೆ ಸರಿಯಾಗಿ ನಡೆಯದಿದ್ದರೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಲಾಗುವುದು ಎಂದೂ ಹೇಳಿದ್ದಾರೆ.

ಸ್ಟಿಂಗ್‌ ಆಪರೇಷನ್‌ ಮೂಲಕ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯಲು, ಅವರ ರಾಜಕೀಯ ಘನತೆಗೆ ಧಕ್ಕೆ ತರಲು ಹಾಗೂ ಬ್ಲ್ಯಾಕ್‌ಮೇಲ್‌ ಮಾಡಲು ಪ್ರಯತ್ನಿಸಲಾಗಿದೆ ಎಂಬುದು ಯತೀಂದ್ರ ಅವರ ಪ್ರಮುಖ ಆರೋಪವಾಗಿದೆ.

ಪುತ್ತೂರು ಟಿಕೆಟ್‌ ಆಕಾಂಕ್ಷಿ ಮಹಿಳೆಯ ವಿಚಾರ ಮತ್ತೆ ಚರ್ಚೆಯಲ್ಲಿ!
ಸ್ಟಿಂಗ್‌ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾದ ಮಹಿಳೆಯೊಬ್ಬರು ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು ಎಂಬ ಮಾಹಿತಿ ಪ್ರಕರಣದ ರಾಜಕೀಯ ನಂಟಿನ ಕುರಿತು ಚರ್ಚೆಗೆ ಕಾರಣವಾಗಿದೆ. ಇದೇ ಅಂಶವನ್ನು ನಿಖರ ನ್ಯೂಸ್‌ ತನ್ನ ಹಿಂದಿನ ವರದಿಯಲ್ಲಿ ಪ್ರಸ್ತಾಪಿಸಿತ್ತು.
ಇದೀಗ ಯತೀಂದ್ರ ಸಿದ್ದರಾಮಯ್ಯ ಅವರು ಪ್ರಕರಣದಲ್ಲಿ ಕಾಂಗ್ರೆಸ್‌ನ ಮಹಿಳೆಯೊಬ್ಬರ ಪಾತ್ರದ ಬಗ್ಗೆ ಹೇಳಿಕೆ ನೀಡಿರುವುದು, ಈ ಹಿಂದೆ ವರದಿಯಲ್ಲಿ ಎತ್ತಲಾಗಿದ್ದ ಪ್ರಶ್ನೆಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಆದರೆ, ಸ್ಟಿಂಗ್‌ ಆಪರೇಷನ್‌ಗೂ ಪುತ್ತೂರು ಟಿಕೆಟ್‌ ವಿಚಾರಕ್ಕೂ ನೇರ ಸಂಬಂಧವಿದೆಯೇ, ಅದರ ಹಿಂದೆ ರಾಜಕೀಯ ಉದ್ದೇಶವಿದೆಯೇ ಹಾಗೂ ಪ್ರಕರಣದಲ್ಲಿ ಯಾರ ಪಾತ್ರವಿದೆ ಎಂಬುದನ್ನು ತನಿಖೆಯೇ ಸ್ಪಷ್ಟಪಡಿಸಬೇಕಿದೆ. ಸದ್ಯಕ್ಕೆ ಈ ಕುರಿತು ಕೇಳಿಬರುತ್ತಿರುವ ಆರೋಪಗಳು ಮತ್ತು ಮಾಹಿತಿಗಳನ್ನು ದೃಢಪಟ್ಟ ಸತ್ಯವೆಂದು ಪರಿಗಣಿಸಲಾಗದು.

ಸಿದ್ದರಾಮಯ್ಯ ಅವರ ರಾಜಕೀಯ ಘನತೆಗೆ ಧಕ್ಕೆ ತರುವ ಯತ್ನವೇ?
“ಸಿದ್ದರಾಮಯ್ಯ ಅವರು 40 ವರ್ಷಗಳಿಂದ ಕಳಂಕವಿಲ್ಲದೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರ ಹೆಸರಿಗೆ ಮಸಿ ಬಳಿದು ರಾಜಕೀಯ ಪರಂಪರೆಯನ್ನು ಹಾಳುಮಾಡಿ ಬ್ಲ್ಯಾಕ್‌ಮೇಲ್‌ ಮಾಡುವ ಪ್ರಯತ್ನ ನಡೆದಿದೆ. ಸತ್ಯ ನಮ್ಮ ಕಡೆ ಇದೆ; ತನಿಖೆಯಿಂದ ಸತ್ಯ ಹೊರಬರಲಿದೆ” ಎಂಬ ಅರ್ಥದಲ್ಲಿ ಯತೀಂದ್ರ ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಟಿಂಗ್‌ ಆಪರೇಷನ್‌ ಹಿಂದೆ ಯಾರಿದ್ದಾರೆ, ಪಕ್ಷದವರೇ ಇದರಲ್ಲಿ ಭಾಗಿಯಾಗಿದ್ದಾರೆಯೇ ಅಥವಾ ಬೇರೆ ಯಾರಾದರೂ ಕೈವಾಡ ನಡೆಸಿದ್ದಾರೆಯೇ ಎಂಬುದು ತನಿಖೆಯಿಂದ ಬಹಿರಂಗವಾಗಬೇಕು ಎಂದು ಅವರು ಹೇಳಿದ್ದಾರೆ. ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಪಕ್ಷವನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ನಿಲುವನ್ನೂ ವ್ಯಕ್ತಪಡಿಸಿದ್ದಾರೆ.

ನಿಖರ ನ್ಯೂಸ್‌ ವರದಿ ಮತ್ತೆ ಮುನ್ನೆಲೆಗೆ
ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್‌ ಆಪರೇಷನ್‌ ಪ್ರಕರಣದ ಪುತ್ತೂರು ನಂಟನ್ನು ಸುಮಾರು 15 ದಿನಗಳ ಹಿಂದೆಯೇ ಪ್ರಸ್ತಾಪಿಸಿದ್ದ ನಿಖರ ನ್ಯೂಸ್‌ EXCLUSIVE ವರದಿ ಇದೀಗ ಮತ್ತೆ ಗಮನ ಸೆಳೆಯುತ್ತಿದೆ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಪ್ರಕರಣದ ರಾಜಕೀಯ ಆಯಾಮದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದ್ದರೂ, ವರದಿಯಲ್ಲಿನ ಎಲ್ಲ ಅಂಶಗಳು ದೃಢಪಟ್ಟಿವೆ ಎಂದು ಈಗಲೇ ತೀರ್ಮಾನಿಸಲು ಸಾಧ್ಯವಿಲ್ಲ.

ಪ್ರಕರಣದ ಹಿಂದೆ ಇರುವವರಾರು? ಪುತ್ತೂರು ಟಿಕೆಟ್‌ ವಿಚಾರಕ್ಕೂ ಸ್ಟಿಂಗ್‌ ಆಪರೇಷನ್‌ಗೂ ನಿಜವಾಗಿಯೂ ಸಂಬಂಧವಿದೆಯೇ? ಸಿದ್ದರಾಮಯ್ಯ ಅವರನ್ನು ಬ್ಲ್ಯಾಕ್‌ಮೇಲ್‌ ಮಾಡುವ ಯತ್ನ ನಡೆದಿದೆಯೇ? ಈ ಪ್ರಶ್ನೆಗಳಿಗೆ ತನಿಖೆಯ ಬಳಿಕವೇ ಸ್ಪಷ್ಟ ಉತ್ತರ ಸಿಗಬೇಕಿದೆ.

ರಾಜಕೀಯದ ತೆರೆಮರೆಯ ಬೆಳವಣಿಗೆಗಳ ಕುರಿತು ನಿಖರ ಮಾಹಿತಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಸುದ್ದಿಗಳನ್ನು ಓದುಗರ ಮುಂದಿಡುವ ನಿಖರ ನ್ಯೂಸ್‌, ಈ ಪ್ರಕರಣದ ಮುಂದಿನ ಬೆಳವಣಿಗೆಗಳ ಮೇಲೂ ಗಮನ ಹರಿಸಲಿದೆ.

Ad Widget
Click to comment

Leave a Reply

ಮೈಸೂರು

Mysuru-417 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್: ಮೈಸೂರು ದಸರಾ ಜಟ್ಟಿ ಕಾಳಗ ರದ್ದು; ಎಸಿಪಿ ವಿರುದ್ಧ ಜಟ್ಟಿಗಳ ಆಕ್ರೋಶ

Published

on



Ad Widget

Ad Widget

Ad Widget

Ad Widget

ಮೈಸೂರು ದಸರಾ ಇತಿಹಾಸದಲ್ಲಿ ಈ ಬಾರಿ ಇದೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾಗಿರುವುದಕ್ಕೆ ಜಟ್ಟಿಗಳ ತಪ್ಪು ಕಾರಣವಲ್ಲ, ಬದಲಾಗಿ ಅರಮನೆ ಪೊಲೀಸರು ಸಹಕರಿಸದೆ ವಿಳಂಬವಾಗಿ ಪ್ರವೇಶಕ್ಕೆ ಅವಕಾಶ ನೀಡಿದ್ದೇ ಕಾರಣ ಎಂದು ಜಟ್ಟಿಗಳು ಆರೋಪಿಸಿದ್ದಾರೆ.

Ad Widget

Ad Widget

Ad Widget

Ad Widget

ಮೈಸೂರು: ಮೈಸೂರು ದಸರಾ ಇತಿಹಾಸದಲ್ಲಿ ಈ ಬಾರಿ ಇದೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾಗಿರುವುದಕ್ಕೆ ಜಟ್ಟಿಗಳ ತಪ್ಪು ಕಾರಣವಲ್ಲ, ಬದಲಾಗಿ ಅರಮನೆ ಪೊಲೀಸರು ಸಹಕರಿಸದೆ ವಿಳಂಬವಾಗಿ ಪ್ರವೇಶಕ್ಕೆ ಅವಕಾಶ ನೀಡಿದ್ದೇ ಕಾರಣ ಎಂದು ಜಟ್ಟಿಗಳು ಆರೋಪಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲಾಜಿ ಜಟ್ಟಿ, ಕಾಳಗದಲ್ಲಿ ಪಾಲ್ಗೊಳ್ಳುವ ಎಲ್ಲ ಜಟ್ಟಿಗಳಿಗೂ ಬೆಳಗ್ಗೆ 8 ಗಂಟೆಯೊಳಗೆ ಅರಮನೆ ಪ್ರವೇಶಿಸಿ ಸ್ಥಳಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರಂತೆ ಪಾಸ್ ಪಡೆದು ಬೆಳಗ್ಗೆ 8 ಗಂಟೆಗೆ ಅರಮನೆಯ ಕರಿಕಲ್ ತೊಟ್ಟಿ ಬಳಿ ತಲುಪಿದ್ದೆವು. ಆದರೆ, ಸ್ಕ್ಯಾನಿಂಗ್ ಯಂತ್ರ ಬಂದಿಲ್ಲ, ಬೆಳಗ್ಗೆ 9.30ಕ್ಕೆ ಸ್ಕ್ಯಾನ್ ಮಾಡಲಾಗುತ್ತದೆ ಎಂದು ಹೇಳಿ ಪೊಲೀಸರು ನಮ್ಮನ್ನು ತಡೆದರು ಎಂದು ದೂರಿದರು.

Ad Widget

Ad Widget <> Ad Widget

“ವಜ್ರಮುಷ್ಠಿ ಕಾಳಗದಲ್ಲಿ ಪಾಲ್ಗೊಳ್ಳುವ ಜಟ್ಟಿಗಳಾಗಿರುವ ನಾವು ಮುಹೂರ್ತದ ಸಮಯಕ್ಕೆ ಸರಿಯಾಗಿ ಸ್ಥಳದಲ್ಲಿರಬೇಕಿತ್ತು. ಈ ಬಗ್ಗೆ ಪೊಲೀಸರಿಗೆ ಹಲವು ಬಾರಿ ಮನವಿ ಮಾಡಿದರೂ ಅರಮನೆ ಪ್ರವೇಶಿಸಲು ಅವಕಾಶ ನೀಡಲಿಲ್ಲ” ಎಂದು ಅವರು ಆರೋಪಿಸಿದರು.



Ad Widget

ಈ ಸಮಸ್ಯೆಯ ಬಗ್ಗೆ ಅರಮನೆ ಎಸಿಪಿ ಚಂದ್ರಶೇಖರ್ ಅವರಿಗೆ ದೂರವಾಣಿ ಕರೆ ಮಾಡಿ ವಿವರಿಸಿದರೂ ಅವರು ಸಹಾಯಕ್ಕೆ ಬರಲಿಲ್ಲ ಎಂದು ಬಾಲಾಜಿ ಜಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಬಾರಿ ಇಂತಹ ಪರಿಸ್ಥಿತಿ ಎದುರಾದಾಗ ರಾಜವಂಶಸ್ಥರೊಬ್ಬರು ಮಧ್ಯಪ್ರವೇಶಿಸಿ ನೆರವಾಗಿದ್ದರು. ಆದರೆ, ಈ ಬಾರಿ ಅಧಿಕಾರಿಗಳಿಂದ ಸಹಕಾರ ದೊರೆಯಲಿಲ್ಲ ಎಂದು ದೂರಿದರು.

Ad Widget

Ad Widget

ಸಿಸಿಟಿವಿ ದೃಶ್ಯ ಪರಿಶೀಲನೆಗೆ ಆಗ್ರಹ
ಮೈಸೂರು ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾಗಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಕಾರಣ ಎಂದು ಜಟ್ಟಿಗಳು ಆರೋಪಿಸಿದ್ದಾರೆ. ಅಂದು ನಡೆದ ಘಟನೆಯ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಸತ್ಯಾಂಶ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುವುದಾಗಿಯೂ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಟ್ಟಿಗಳಾದ ಮಾಧವ ಜಟ್ಟಿ, ಕೃಷ್ಣ ಜಟ್ಟಿ ಮತ್ತು ಬಲರಾಂ ಜಟ್ಟಿ ಉಪಸ್ಥಿತರಿದ್ದರು.

417 ವರ್ಷಗಳ ಐತಿಹಾಸಿಕ ಸಂಪ್ರದಾಯ
ಮೈಸೂರು ರಾಜವಂಶಸ್ಥರ ಕಾಲದಿಂದ ಸುಮಾರು 417 ವರ್ಷಗಳಿಂದ ನಡೆದುಕೊಂಡು ಬಂದಿರುವ ದಸರಾ ಸಂಪ್ರದಾಯದಲ್ಲಿ ವಿಜಯದಶಮಿ ಮೆರವಣಿಗೆಗೂ ಮುನ್ನ ವಜ್ರಮುಷ್ಠಿ ಜಟ್ಟಿ ಕಾಳಗಕ್ಕೆ ವಿಶೇಷ ಮಹತ್ವವಿದೆ. ಆದರೆ, ಈ ಬಾರಿ ಕಾಳಗದಲ್ಲಿ ಪಾಲ್ಗೊಳ್ಳಬೇಕಿದ್ದ ಜಟ್ಟಿಗಳಿಗೇ ಅರಮನೆ ಪ್ರವೇಶಿಸಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಕಾಳಗ ರದ್ದಾಗಿದೆ ಎಂದು ವರದಿಯಾಗಿದೆ.

ಜಟ್ಟಿ ಕಾಳಗ ನಡೆಯಬೇಕಿದ್ದ ಸಂದರ್ಭದಲ್ಲಿ ಜಟ್ಟಿಗಳು ಅರಮನೆ ಪ್ರವೇಶಕ್ಕಾಗಿ ಪೊಲೀಸರೊಂದಿಗೆ ವಾಗ್ವಾದ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಐದು ವರ್ಷಗಳ ಹಿಂದೆ ಕೋವಿಡ್ ಅವಧಿಯಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ನಿಧನರಾದ ಹಿನ್ನೆಲೆಯಲ್ಲಿ ವಜ್ರಮುಷ್ಠಿ ಕಾಳಗವನ್ನು ರದ್ದುಗೊಳಿಸಲಾಗಿತ್ತು. ಬಳಿಕ ಐದು ದಿನಗಳ ನಂತರ ಕಾಳಗ ನಡೆಸಲಾಗಿತ್ತು.

Ad Widget
Continue Reading

ಮೈಸೂರು

Sting operation-ಕೃಪಾ ಆಳ್ವಾ ಮತ್ತು ಪವರ್ ಟಿವಿ ರಾಕೇಶ್ ಶೆಟ್ಟಿಯಿಂದ ಸ್ಟಿಂಗ್ ಆಪರೇಷನ್ – ಸಿದ್ದರಾಮಯ್ಯ

Published

on



Ad Widget

Ad Widget

Ad Widget

Ad Widget

ಮೈಸೂರಿನಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಕೃಪಾ ಆಳ್ವಾ ಮತ್ತು ಪವರ್ ಟಿವಿಯ ರಾಕೇಶ್ ಶೆಟ್ಟಿ ಸೇರಿ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ ಎಂಬ ಆರೋಪವನ್ನು ಪ್ರಸ್ತಾಪಿಸಿದರು. ಈ ಸ್ಟಿಂಗ್‌ನಲ್ಲಿ ಸತ್ಯಾಂಶವಿಲ್ಲ. ರಾಕೇಶ್ ಶೆಟ್ಟಿ ಅವರೇ ಸ್ಟಿಂಗ್ ತಾವೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

Ad Widget

Ad Widget

Ad Widget

Ad Widget

ಮೈಸೂರು, ಅ.23: ತಮ್ಮ ವಿರುದ್ಧ ಪಿತೂರಿ ನಡೆಸುವ ಉದ್ದೇಶದಿಂದ ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಸೃಷ್ಟಿಸಲಾಗಿದೆ. ಇದು ಬ್ಲಾಕ್‌ಮೇಲ್ ಮಾಡುವ ಪ್ರಯತ್ನವಾಗಿದ್ದು, ಪ್ರಕರಣದ ಹಿಂದೆ ಯಾರಿದ್ದಾರೆ ಎಂಬ ಸತ್ಯ ಹೊರಬರಲೆಂದೇ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಹೇಳಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಮೈಸೂರಿನಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೃಪಾ ಆಳ್ವಾ ಮತ್ತು ಪವರ್ ಟಿವಿಯ ರಾಕೇಶ್ ಶೆಟ್ಟಿ ಸೇರಿ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ ಎಂಬ ಆರೋಪವನ್ನು ಪ್ರಸ್ತಾಪಿಸಿದರು. ಈ ಸ್ಟಿಂಗ್‌ನಲ್ಲಿ ಸತ್ಯಾಂಶವಿಲ್ಲ. ರಾಕೇಶ್ ಶೆಟ್ಟಿ ಅವರೇ ಸ್ಟಿಂಗ್ ತಾವೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದರು.

Ad Widget

Ad Widget <> Ad Widget

‘ಬ್ಲಾಕ್‌ಮೇಲ್ ಮಾಡುವ ಉದ್ದೇಶದಿಂದ ಸುಳ್ಳು ಪ್ರಕರಣ’
ನನ್ನ ವಿರುದ್ಧ ಪಿತೂರಿ ನಡೆಸಲು ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಬಳಸಿಕೊಳ್ಳಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ತಿಳಿಯಬೇಕು ಮತ್ತು ಸತ್ಯ ಹೊರಬರಬೇಕು ಎಂಬ ಉದ್ದೇಶದಿಂದಲೇ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.



Ad Widget

ಸುಳ್ಳು ಪ್ರಕರಣಕ್ಕೆ ಹೆಚ್ಚು ಪ್ರಚಾರ ಸಿಗಬಾರದು ಎಂಬ ಕಾರಣಕ್ಕೆ ಸಿವಿಲ್ ನ್ಯಾಯಾಲಯದ ಮೊರೆ ಹೋಗಿ ನಿರ್ಬಂಧಕಾಜ್ಞೆ ತಂದಿದ್ದೇನೆ. ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಆಗ ಇಂತಹ ಘಟನೆಗಳು ನಡೆದಿರಲಿಲ್ಲ. ಈಗ ಅಧಿಕಾರ ಕಳೆದುಕೊಂಡ ಬಳಿಕ ನನ್ನ ವಿರುದ್ಧ ಪಿತೂರಿ ನಡೆಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

Ad Widget

Ad Widget

‘ನನಗೆ ಯಾರ ಬೆಂಬಲವೂ ಬೇಕಿಲ್ಲ’
ಸ್ಟಿಂಗ್ ಪ್ರಕರಣದ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪರವಾಗಿ ಮಾತನಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಕುಮಾರಸ್ವಾಮಿ ನನ್ನ ಪರ ಇರುವುದರಿಂದ ಯಾರಿಗೆ ಏನು ಪ್ರಯೋಜನ? ಯಾರೂ ನನ್ನ ಪರ ಇರಬೇಕಾದ ಅಗತ್ಯವಿಲ್ಲ. ಈ ಪ್ರಕರಣ ಸುಳ್ಳು ಎಂಬ ಸತ್ಯ ಜನರಿಗೆ ತಿಳಿಯಬೇಕು” ಎಂದರು.

ತಮ್ಮ ವಿರುದ್ಧ ಕಳಂಕ ತರಲು ಪ್ರಯತ್ನಿಸಿದರೂ ಜನರು ಅದನ್ನು ನಂಬುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ತನಿಖೆ ನ್ಯಾಯಸಮ್ಮತವಾಗಿ ನಡೆಯಬೇಕು ಎಂದು ಒತ್ತಾಯಿಸಿದರು. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

‘ಸೆಪ್ಟೆಂಬರ್ 26ರಂದು ಪ್ರಕರಣ ನನ್ನ ಗಮನಕ್ಕೆ ಬಂದಿತ್ತು’
ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಸೆಪ್ಟೆಂಬರ್ 26ರಂದು ತಮ್ಮ ಗಮನಕ್ಕೆ ಬಂದಿತ್ತು. ಅಷ್ಟರಲ್ಲಾಗಲೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು ಎಂದು ಸಿದ್ದರಾಮಯ್ಯ ತಿಳಿಸಿದರು.

“ಏನೂ ನಡೆದೇ ಇಲ್ಲದಿರುವಾಗ ಬೇಸರ ಏಕೆ ಆಗಬೇಕು? ಸತ್ಯ ನನಗೆ ಗೊತ್ತಿದೆ. ಇದು ಸಂಪೂರ್ಣ ಸುಳ್ಳು ಪ್ರಕರಣ. ಅಧಿಕಾರ ಹೋದ ಬಳಿಕ ನನ್ನ ವಿರುದ್ಧ ಪಿತೂರಿ ನಡೆಸಲು ಪ್ರಯತ್ನಿಸಿದ್ದಾರೆ. ಅವರ ಉದ್ದೇಶ ಸಫಲವಾಗುವುದಿಲ್ಲ” ಎಂದು ಹೇಳಿದರು.

ದಸರಾ ಉಸ್ತುವಾರಿ ವಿಚಾರದಲ್ಲೂ ಪ್ರತಿಕ್ರಿಯೆ
ಮೈಸೂರು ದಸರಾ ಸಂದರ್ಭದಲ್ಲಿ ದಿನವೊಂದಕ್ಕೆ ಮೂವರು ಸಚಿವರಿಗೆ ಜವಾಬ್ದಾರಿ ನೀಡಿದ್ದ ವಿಚಾರವಾಗಿಯೂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ಉಸ್ತುವಾರಿ ವಹಿಸಿದ್ದ ಸಚಿವರು ಸರಿಯಾಗಿ ಮೈಸೂರಿಗೆ ಬರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಆ ರೀತಿಯ ವ್ಯವಸ್ಥೆಯ ಅಗತ್ಯವಿರಲಿಲ್ಲ ಎಂದರು. ಆದರೆ, ಮುಖ್ಯಮಂತ್ರಿ ಹಾಗೆ ನಿರ್ಧರಿಸಿದ್ದರು ಎಂದು ತಿಳಿಸಿದರು.

ದಸರಾ ಆಚರಣೆಗೆ ಸಂಬಂಧಿಸಿದಂತೆ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ತಾನು ಯಾವುದೇ ಸಲಹೆ ನೀಡಿರಲಿಲ್ಲ. ಅವರೇ ಎಲ್ಲವನ್ನೂ ನಿರ್ವಹಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರಾದ ಬಿ.ಜೆ. ವಿಜಯ್‌ಕುಮಾರ್ ಮತ್ತು ಶಿವಣ್ಣ ಉಪಸ್ಥಿತರಿದ್ದರು.

Ad Widget
Continue Reading

ಮೈಸೂರು

Mysuru-ಮೈಸೂರು ದಸರಾ ಲೈಟಿಂಗ್ ವೀಕ್ಷಣೆಗೆ 10 ದಿನ ವಿಸ್ತರಣೆ: ಡಿ.ಕೆ. ಶಿವಕುಮಾರ್ ಘೋಷಣೆ

Published

on



Ad Widget

Ad Widget

Ad Widget

Ad Widget

ಮೈಸೂರು ದಸರಾ ಅಂಗವಾಗಿ ನಗರದಾದ್ಯಂತ ಅಳವಡಿಸಿರುವ ಆಕರ್ಷಕ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಲು ಸಾರ್ವಜನಿಕರಿಂದ ಭಾರೀ ಬೇಡಿಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಲೈಟಿಂಗ್ ವೀಕ್ಷಣೆಯ ಅವಧಿಯನ್ನು ಈ ಬಾರಿ 10 ದಿನ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ಮೈಸೂರು ದಸರಾ ಅಂಗವಾಗಿ ನಗರದಾದ್ಯಂತ ಅಳವಡಿಸಿರುವ ಆಕರ್ಷಕ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಲು ಸಾರ್ವಜನಿಕರಿಂದ ಭಾರೀ ಬೇಡಿಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಲೈಟಿಂಗ್ ವೀಕ್ಷಣೆಯ ಅವಧಿಯನ್ನು ಈ ಬಾರಿ 10 ದಿನ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಲೈಟಿಂಗ್ ವೀಕ್ಷಿಸಲು ಪ್ರತಿದಿನ ಲಕ್ಷಕ್ಕೂ ಹೆಚ್ಚು ಜನರು ಆಗಮಿಸುತ್ತಿದ್ದಾರೆ. ರಾತ್ರಿ 11 ಗಂಟೆಯ ಬಳಿಕ ತಾನೂ ತೆರಳಿ ದೀಪಾಲಂಕಾರವನ್ನು ವೀಕ್ಷಿಸಿರುವುದಾಗಿ ತಿಳಿಸಿದರು. ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಿ ವೀಕ್ಷಣೆಯ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದರು.

Ad Widget

Ad Widget <> Ad Widget

ದಸರಾ ರೀಲ್ಸ್ ಮಾಡಿದರೆ ಬಹುಮಾನ..!
ಮೈಸೂರು ದಸರಾ ಕಾರ್ಯಕ್ರಮಗಳ ವಿಶೇಷ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವವರಿಗೆ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ಕಲ್ಪಿಸಿದೆ. ದಸರಾ ಆರಂಭದಿಂದ ಕೊನೆಯವರೆಗಿನ ಕಾರ್ಯಕ್ರಮಗಳಲ್ಲಿ ಜನರಿಗೆ ಇಷ್ಟವಾದ ಸಂಗತಿಗಳನ್ನು ರೀಲ್ಸ್ ಮೂಲಕ ಹಂಚಿಕೊಳ್ಳಬಹುದು. ಇಂತಹ ರೀಲ್ಸ್‌ಗಳಲ್ಲಿ 100 ಅತ್ಯುತ್ತಮ ರೀಲ್ಸ್‌ಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.



Ad Widget

ರೀಲ್ಸ್‌ಗಳನ್ನು ಪ್ರಕಟಿಸುವವರು ಕಡ್ಡಾಯವಾಗಿ ‘ಮೈಸೂರು ದಸರಾ-2026’ ಎಂಬ ಟ್ಯಾಗ್ ಬಳಸಬೇಕು ಎಂದು ಅವರು ಸೂಚಿಸಿದರು.

Ad Widget

Ad Widget

ಈ ಬಾರಿಯ ದಸರಾವನ್ನು ಅಭಿನವ ಶ್ರೀಗಳು ಉದ್ಘಾಟಿಸಿದ್ದು, ವಿವಿಧ ಕಾರ್ಯಕ್ರಮಗಳು ಜನರ ಗಮನ ಸೆಳೆಯುತ್ತಿವೆ ಎಂದು ತಿಳಿಸಿದರು.

ಕಂಬಳ ವೀಕ್ಷಣೆಗೆ ಜನಸಾಗರ
ಮೈಸೂರು ದಸರಾ ಸಂಭ್ರಮದ ನಡುವೆ ಕಂಬಳ ಸ್ಪರ್ಧೆಗೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಂಬಳದಲ್ಲಿ ಭಾಗವಹಿಸಲು ಸುಮಾರು 3,000 ಜನರು ಆಗಮಿಸಿದ್ದು, ಲಕ್ಷಾಂತರ ಜನರು ಸ್ಪರ್ಧೆಯನ್ನು ವೀಕ್ಷಿಸುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ದಸರಾ ದೀಪಾಲಂಕಾರದ ವೀಕ್ಷಣಾ ಅವಧಿ ವಿಸ್ತರಣೆ ಹಾಗೂ ಅತ್ಯುತ್ತಮ ರೀಲ್ಸ್‌ಗಳಿಗೆ ಪ್ರಶಸ್ತಿ ನೀಡುವ ನಿರ್ಧಾರದಿಂದ ಈ ಬಾರಿಯ ದಸರಾ ಸಂಭ್ರಮ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading