Uncategorized
Nikhra Special Story : ಹೆಚ್ಚುತ್ತಿದೆ ಗ್ಯಾಸ್ ಗೀಸರ್ʼನಲ್ಲಿ ವಿಷಾನಿಲ ಸೋರಿಕೆಯಿಂದ ಸಾವುಗಳು | ವಿಷಾನಿಲ ಉತ್ಪತ್ತಿ ಹೇಗೆ ? ಬಳಕೆಯ ಹಾಗೂ ಅಳವಡಿಕೆಯ ವೇಳೆ ವಹಿಸಲೇಬೇಕಾದ ಸುರಕ್ಷಿತ ಕ್ರಮಗಳ ಮಾಹಿತಿ
ಗ್ಯಾಸ್ ಗೀಸರ್‌ಗಳಲ್ಲಿ ವಿಷಾನಿಲ ಉತ್ಪತಿಯಾಗಿ ಅದರ ಸೋರಿಕೆಯಿಂದ ಸಾವುಗಳು ಸಂಭವಿಸುವ ಘಟನೆಗಳು ಇತ್ತೀಚೆಗೆ ರಾಜ್ಯದಲ್ಲಿ ಅಗಾಗ ವರದಿಯಾಗುತ್ತಿದೆ. ಅ.24 ರಂದು ಒಂದೇ ದಿನ ರಾಜ್ಯದ ಎರದು ಪ್ರಸಿದ್ದ ಪ್ರವಾಸಿ ಕೆಂದ್ರಗಳ ಹೋಮ್ ಸ್ಟೇ ಗಳಲ್ಲಿ ಇಬ್ಬರು ಯುವತಿಯರು ಮೃತಪಟ್ಟಿದ್ದಾರೆ. ಇದಕ್ಕೆ ಆ ಹೋಮ್ ಸ್ಟೇ ಗಳಲ್ಲಿ ಅಳವಡಿಸಿದ ಗ್ಯಾಸ್ ಗೀಸರ್ ಗಳಲ್ಲಿ ವಿಷಾನಿಲ ಸೋರಿಕೆಯಾದದ್ದೇ ಕಾರಣ ಎಂದು ಹೇಳಲಾಗುತ್ತಿದೆ.
ಮೊದಲ ಪ್ರಕರಣ ದಕ್ಷಿಣ ಭಾರತದ ಕಾಶ್ಮೀರ, ಪ್ರವಾಸಿಗರ ಸ್ವರ್ಗ ಎನಿಸಿಕೊಂಡ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ತನ್ನ ಮೂವರು ಗೆಳತಿಯರ ಜತೆ ಇಲ್ಲಿಗೆ ಟೂರ್ ಗೆ ಬಂದಿದ್ದ 24 ರ ಹರೆಯದ ಬಳ್ಳಾರಿ ತೋರಣಗಲ್ ನಿವಾಸಿ ವಿಘ್ನೇಶ್ವರಿ ಈಶ್ವರನ್ ಮೃತ ಯುವತಿ. ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಬಾತ್ ರೂಮ್ ಗೆ ತೆರಳಿದ್ದ ಈಕೆ ಹೊರಬಾರದ್ದನ್ನು ಗಮನಿಸಿದ ಗೆಳತಿಯರು ಒಳಗೆ ಹೋಗಿ ನೋಡಿದಾಗ ಅಲ್ಲಿ ಆಕೆ ಕುಸಿದು ಬಿದ್ದಿರುವುದು ಕಂಡು ಬಂದಿದೆ.
ಇನ್ನೊಂದು ಪ್ರಕರಣ ರಾಜ್ಯದ ಮತ್ತೊಂದು ಖ್ಯಾತ ಪ್ರವಾಸಿ ತಾಣ ಚಿಕ್ಕಮಗಳೂರಿನಲ್ಲಿ ನಡೆದಿದ್ದು, ನಗರದ ಹೊರವಲಯ ಲಕ್ಷ್ಮೀಪುರದ ಹೋಮ್ ಸ್ಟೇಯಲ್ಲಿ ಸಾವು ಸಂಭವಿಸಿದೆ. ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ವನಿತಾ ಇಲ್ಲಿ ಮೃತಪಟ್ಟ ಮಹಿಳೆ. ಈಕೆ ತುಮಕೂರು ನಿವಾಸಿ ಪತಿ ಹರ್ಷಿತ್ ಜತೆ ಪ್ರವಾಸಕ್ಕೆ ಅಗಮಿಸಿದ್ದರು. ಈಕೆಯೂ ಸ್ನಾನಕ್ಕೆ ತೆರಳಿದ ವೇಳೆ ಸ್ನಾನಗೃಹದಲ್ಲಿ ಕುಸಿದು ಬಿದ್ದಿದ್ದರು. ತುಂಬಾ ಹೊತ್ತಾದರೂ ಸ್ನಾನ ಗೃಹದಿಂದ ಆಕೆ ಹೊರ ಬಾರದ ಹಿನ್ನಲೆಯಲ್ಲಿ ಪತಿ ಒಳಗೆ ಹೋಗಿ ನೋಡಿದಾಗ ವನಿತಾ ಅಸ್ವಸ್ಥಗೊಂಡು ಬಿದ್ದಿದ್ದರು.

ಇದೇ ರೀತಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆಯಲ್ಲಿ ಕೆಲ ತಿಂಗಳುಗಳ ಹಿಂದೆ ನಡೆದಿತ್ತು. ಅಲ್ಲಿ 26 ವರ್ಷದ ಯುವಕ ಇಜಾಜ್ ಅಹ್ಮದ್ ಗ್ಯಾಸ್ ಗೀಸರ್ ನ ವಿಷಾನಿಲಕ್ಕೆ ಬಲಿಯಾಗಿದ್ದರು. ತಿಂಗಳುಗಳ ಹಿಂದೆ ಬೆಂಗಳೂರಿನ ವೈದಕೀಯ ವಿದ್ಯಾರ್ಥಿನಿ 24ರ ಹರೆಯದ ಸಂಪದ ತನ್ನ ಮನೆಯ ಬಾತ್ ರೂಮ್ ನಲ್ಲಿ ಸ್ನಾನಕ್ಕೆಂದು ತೆರಳಿದವಳು ಅಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಳು.
ಏನಿದು ವಿಷಾನಿಲ ?
ಬ್ರುಫೇನ್ ಮತ್ತು ಪ್ರೊಫೇನ್ ಎಂಬ ಉರುವಾಕಗಳನ್ನು ಗ್ಯಾಸ್ ಗೀಸರ್ನಲ್ಲಿನ ಹೀಟರ್ಗೆ ಎಲ್ ಪಿಜಿಯೊಂದಿಗೆ ಸಂಪರ್ಕ ಮಾಡಲಾಗಿರುತ್ತದೆ. ನೀರು ಬೇಗ ಬಿಸಿಯಾಗಲು ಇವೆರಡು ಉರುವಕಗಳು ಉರಿಯುವಂತೆ ಮಾಡಲಾಗುತ್ತದೆ. ಇದು ಅಮ್ಲಜನಕ ಹೆಚ್ಚು ಲಭ್ಯ ಇರುವ ಸ್ಥಳದಲ್ಲಿ ಉರಿದಾಗ ಕಾರ್ಬನ್ ಡೈ ಅಕ್ಸೈಡ್ ಉತ್ಪತ್ತಿಯಾಗುತ್ತಾದೆ .ಅದರೇ ಅಮ್ಲಜನಕ ಕಡಿಮೆ ಇರುವಲ್ಲಿ ಗೀಸರ್ ಬಳಕೆಯಾದಗ ಬ್ರುಫೇನ್ ಮತ್ತು ಪ್ರೊಫೇನ್ ಗಳು ಪೂರ್ಣ ಪ್ರಮಾನದಲ್ಲಿ ಉರಿಯದೇ ವಿಷಕಾರಿ ಕಾರ್ಬನ್ ಮಾನಾಕ್ಷೈಡ್ ಉತ್ಪತ್ತಿಯಾಗುತ್ತದೆ. ಇದು ವಿಷಾನಿಲವಾಗಿದೆ.

ಈ ವಿಷಾನಿಲಕ್ಕೆ ಯಾವುದೇ ವಾಸನೆಯಾಗಲಿ, ಬಣ್ಣವಾಗಲಿ ಇರೋದಿಲ್ಲ. ಹಾಗಾಗಿ ಇದು ಹೊರಹೊಮ್ಮುವುದು ಬಳಕೆದಾರನಿಗೆ ಗೊತ್ತೇ ಅಗುವುದಿಲ್ಲ. ಸರಿಯಾದ ಅಮ್ಲಜನಕ ಸಿಗದೇ ಗೀಸರ್ ಪೂರ್ಣ ಪ್ರಮಾಣದಲ್ಲಿ ಉರಿಯದೇ ಅರ್ಧದಷ್ಟೇ ಉರಿಯುವುದೇ ವಿಷಾನಿಲ ಉತ್ಪತಿಯಾಗುತ್ತಿರುವ ಮುನ್ಸೂಚನೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರಷ್ಟೇ ಇದರಿಂದ ಬಚವಾಗಬಹುದು. ಅಲ್ಲದೇ ಬಾತ್ ರೂಮಿನ ನೆಲದ ಭಾಗದಿಂದ ವಿಷಾನಿಲ ತುಂಬಲು ಶುರುವಾಗಿ ಮೆಲ್ಬಾಗಕ್ಕೆ ಪಸರಿಸುತ್ತದೆ. ಹೀಗಾಗಿ ಕುಳಿತು ಸ್ನಾನ ಮಾಡುವವರಲ್ಲಿ ಇದು ಬೇಗ ಪರಿಣಾಮ ಭೀರುತದೆ. ಈ ವಿಷಾನಿಲವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿದರೂ ಆಯಾಸ, ತಲೆ ಸುತ್ತು ಬರುವುದು, ತಲೆ ನೋವು, ಫಿಡ್ಸ್ ಇತ್ಯಾದಿ ಬಂದು ಸೇವಿಸಿದಾತ ಅಲ್ಲಿಯೇ ಕುಸಿದು ಬೀಳುತ್ತಾನೆ. ಬಳಿಕ ಇದಕ್ಕೆ ಚಿಕಿತ್ಸೆ ಲಭಿಸಿದರೂ ಗುಣಮುಖವಾಗುವ ಸಾಧ್ಯತೆ ಅತ್ಯಲ್ಪ.

ಸ್ನಾನದ ವೇಳೆ ವಹಿಸಬೇಕಾದ ಮನ್ನೆಚ್ಚರಿಕೆಗಳು
- ಗ್ಯಾಸ್ ಗೀಸರ್ ಬಳಸುವ ಬಾತ್ ರೂಮ್ ನಲ್ಲಿ ವಿಶಾಲವಾದ ಕಿಟಕಿಗಳು ಕಡ್ಡಾಯವಾಗಿರಬೇಕು
- ಗೀಸರ್ ಬಳಸುವ ವೇಳೆ ಈ ಕಿಟಕಿಗಳನ್ನು ತೆರೆದಿಡಲೇಬೇಕು. ಯಾವುದೇ ಸಂದರ್ಭದಲ್ಲೂ ಕಿಟಕಿಯನ್ನು ಮುಚ್ಚಿ ಗ್ಯಾಸ್ ಗೀಸರ್ ಅನ್ ಮಾಡಲೇಬಾರದು.
- ಸ್ನಾನಕ್ಕೆ ಬೇಕಾದಷ್ಟು ನೀರು ಸಂಗ್ರಹಿಸಿದ ಕೂಡಲೇ ಗೀಸರ್ ಅಫ್ ಮಾಡಬೇಕು3 ಕಿಟಕಿ ಮುಚ್ಚಲೆಬೇಕು ಎಂಬ ಅನಿವಾರ್ಯತೆಯಿದ್ದರೇ ಸ್ನಾನಕ್ಕಿಳಿಯುವ ಮೊದಲೇ ಕಿಟಕಿ ತೆರೆದಿಟ್ಟು ಗ್ಯಾಸ್ ಗೀಸರ್ ಅನ್ ಮಾಡಿ ಸಾಕಷ್ಟು ಬಿಸಿ ನೀರು ಸಂಗ್ರಹಿಸಿ ಗೀಸರ್ ಅಪ್ ಮಾಡಿ ಕಿಟಕಿ ಮುಚ್ಚಬೇಕು
- ಬಾತ್ ರೂಮ್ ಗೆ ಕಿಟಕಿ ಇಲ್ಲದಿದ್ದ ಸಂದರ್ಭ ಅದರ ಬಾಗಿಲು ತೆರೆದಿಟ್ಟು ಗೀಸರ್ ಅನ್ ಮಾಡಿ ಸಾಕಷ್ಟು ನೀರು ಸಂಗ್ರಹಿಸಿ ಗೀಸರ್ ಅಪ್ ಮಾಡಿ ,ಒಂದಷ್ಟು ಹೊತ್ತು ಬಾಗಿಲನ್ನು ತೆರೆದಿಟ್ಟು ಬಳಿಕ ಸ್ನಾನಕ್ಕೆ ತೆರಳಬೇಕು.
ಬಾತ್ ರೂಮ್ ಗೆ ಗ್ಯಾಸ್ ಗೀಸರ್ ಅಳವಡಿಸುವ ವೇಳೆ ವಹಿಸಬೇಕಾದ ಎಚ್ಚರಿಕೆಗಳು
- ಬಾತ್ ರೂಮ್ ವೆಂಟಿಲೇಟರ್ ಚೆನ್ನಾಗಿರಬೇಕು
- ಗೀಸರ್ ಎತ್ತರದಲ್ಲಿ ಅಳವಡಿಸಬೇಕು.
- ಚಿಕ್ಕ ಸೈಜಿನ ಬಾತ್ ರೂಮ್ ಗಳಿಗೆ ಗೀಸರ್ ಸೂಕ್ತವಲ್ಲ
- ನುರಿತ ಟೆಕ್ನಿಷಿಯನ್ ಬಳಿ ಸರ್ವಿಸ್ ಮಾಡಿಸುತ್ತಿರಬೇಕು
- ಬಾತ್ ರೂಮ್ ಒಳಗಡೆ ಕಾರ್ಬನ್ ಮಾನಾಕ್ಷೈಡ್ ಪತ್ತೆ ಹಚ್ಚುವ ಸಾಧನ ಅಳವಡಿಕೆ ಒಳ್ಳೆಯದು
Uncategorized
Philomena-ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಾಗಾರ
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು ಕಾಲೇಜು ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು ಕಾಲೇಜು ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ವಂದನ ಶಂಕರ್ ಮಾತನಾಡಿ, ಪಿ ಯು ಸಿ ನಂತರದ ಅವಕಾಶಗಳು, ಇಂಜಿನಿಯರಿಂಗ್ ವಿಭಾಗಗಳಲ್ಲಿ ಇರುವ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಚೇತನ್ ಮಾತನಾಡಿ, ಮಾದಕ ವಸ್ತುಗಳು ಹಾಗೂ ದೂಮಪಾನದ ವ್ಯಸನ ನಮ್ಮ ನೆನಪಿನ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗೆಯೇ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ನಮ್ಮ ಏಕಾಗ್ರತೆಯನ್ನು ಭಂಗ ಗೊಳಿಸುತ್ತದೆ ಎಂದು ಹೇಳಿದರು.

ವೃತ್ತಿ ಮಾರ್ಗದರ್ಶನ ವಿಭಾಗದ ನಿರ್ದೇಶಕರಾದ ರವಿಪ್ರಸಾದ್ ಬಿ. ಜಿ ನಿರಂಜನ್ ಜಿ. ಯು, ಕವಿತಾ ಕೆ ಹಾಗೂ ಕಾಲೇಜಿನ ಬೋಧಕ /ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Uncategorized
ಹಿರಿಯ ಸಹಕಾರಿ ಧುರೀಣ ಕೆ.ಕೆ. ನಾರಾಯಣ ಚಳ್ಳಂಗಾರು ನಿಧನ

ಕಲ್ಮಡ್ಕ: ತಾಲೂಕಿನ ಹಿರಿಯ ಸಹಕಾರಿ ಧುರೀಣ, ಸಾಮಾಜಿಕ ಮುಖಂಡ, ಬಹುಮುಖ ಚಿಂತಕ ಕಲ್ಮಡ್ಕ ಗ್ರಾಮದ ಚಳ್ಳಂಗಾರು ಕೆ.ಕೆ. ನಾರಾಯಣ (88) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾದರು.
ಮಂಡಲ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ತಮ್ಮ ಅವಧಿಯಲ್ಲಿ ಗ್ರಾಮದಲ್ಲಿ ಅಭಿವೃದ್ಧಿಯ ಹೊಸ ಶಕೆಗೆ ನಾಂದಿ ಹಾಡಿದ್ದರು. ಕಲ್ಮಡ್ಕ ಸಹಕಾರಿ ಸಂಘದ ನಿರ್ದೇಶಕರಾಗಿ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಅವರು, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದರು. ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು.
ಕಲ್ಮಡ್ಕ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ವಿಶೇಷ ಶ್ರಮ ವಹಿಸಿದ್ದ ಅವರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಅರ್ಥಧಾರಿಯಾಗಿ ಕಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ನಾರಾಯಣ ಅವರು, ಸಂಗಮ ಕಲಾ ಸಂಘದ ನಿರ್ದೇಶಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಉತ್ತಮ ಓದುಗ ಹಾಗೂ ವಿಮರ್ಶಕರಾಗಿದ್ದ ಅವರು ಸಾಹಿತ್ಯ, ಕಲೆ, ಸಹಕಾರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಮೃತರು ಪತ್ನಿ ಸುಬ್ಬಮ್ಮ, ಪುತ್ರಿಯರಾದ ವಿದ್ಯಾ, ಜಯಶ್ರೀ, ದೀಪಿಕಾ, ಪುತ್ರ, ಕ್ಯಾಂಪ್ಕೋ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ನ್ಯಾಯವಾದಿ ಮುರಳಿಕೃಷ್ಣ ಚಳ್ಳಂಗಾರು, ಸೊಸೆ ರಮ್ಯಾ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Uncategorized
ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ- ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಚಾಲನೆ

ಪುತ್ತೂರು: ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಪ್ರಚಾರಾರ್ಥ ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಚಾಲನೆ ನೀಡಿದರು.
ನ.19ರಂದು ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ವೀರಾಂಜನೇಯ ಕ್ಷೇತ್ರದಲ್ಲಿ ನಡೆಯುವ ಪಂಚಮುಖಿ ಆಂಜನೇಯ ಹವನದ ಸ್ಟಿಕ್ಕರ್ ಅನ್ನು ಆಟೋ ರಿಕ್ಷಾಗಳಿಗೆ ಅಂಟಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.
ಆಟೋ ರಿಕ್ಷಾಗಳ ಎದುರಿನ ಮತ್ತು ಹಿಂಬದಿಯ ಭಾಗಕ್ಕೆ ತಾವೆ ಸ್ವತಃ ಸ್ಟಿಕ್ಕರ್ ಅಂಟಿಸಿ ಎಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪಂಚಮುಖಿ ಆಂಜನೇಯ ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿ ಸುನಿಲ್ ದಡ್ಡು, ಯಾಗ ಸಮಿತಿಯ ಪ್ರಮುಖರಾದ ಶ್ಯಾಮ ಸುದರ್ಶನ್ ಹೊಸಮೂಲೆ, ಜಯಂತ ಶೆಟ್ಟಿ ಕಂಬಳತ್ತಡ್ಕ, ಶ್ರೀಧರ್ ತೆಂಕಿಲ ಸಹಿತ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.















