ಅಂತರ ರಾಜ್ಯ
Country’s wealth-ಭಾರತದ ಟಾಪ್ 5 ಶ್ರೀಮಂತರ ಆಸ್ತಿ 400% ಹೆಚ್ಚಳ: ಶೇ.1ರಷ್ಟು ಕುಬೇರರ ಬಳಿಯೇ ಇದೆ ದೇಶದ ಶೇ.40ರಷ್ಟು ಸಂಪತ್ತು..!
ಭಾರತದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಕಂದಕ ವಸಾಹತುಶಾಹಿ ಕಾಲದಷ್ಟೇ ಭೀಕರವಾಗಿದೆ ಎಂಬ ಆಘಾತಕಾರಿ ಅಂಶವೊಂದು ‘ವೆಲ್ತ್ ಟ್ರ್ಯಾಕರ್ ಇಂಡಿಯಾ 2026’ ವರದಿಯಿಂದ ಬಹಿರಂಗವಾಗಿದೆ. ‘ಸೆಂಟರ್ ಫಾರ್ ಫೈನಾನ್ಸಿಯಲ್ ಅಕೌಂಟೇಬಿಲಿಟಿ ಆ್ಯಂಡ್ ಟ್ಯಾಕ್ಸ್ ದಿ ಟಾಪ್’ ಅಭಿಯಾನವು ಬುಧವಾರ ಬಿಡುಗಡೆ ಮಾಡಿದ ಈ ವರದಿಯು, ದೇಶದ ಸಂಪತ್ತು ಕೆಲವೇ ಕೆಲವು ವ್ಯಕ್ತಿಗಳ ಕೈಯಲ್ಲಿ ಹೇಗೆ ಕೇಂದ್ರೀಕೃತವಾಗಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ಹೊಸದಿಲ್ಲಿ: ಭಾರತದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಕಂದಕ ವಸಾಹತುಶಾಹಿ ಕಾಲದಷ್ಟೇ ಭೀಕರವಾಗಿದೆ ಎಂಬ ಆಘಾತಕಾರಿ ಅಂಶವೊಂದು ‘ವೆಲ್ತ್ ಟ್ರ್ಯಾಕರ್ ಇಂಡಿಯಾ 2026’ ವರದಿಯಿಂದ ಬಹಿರಂಗವಾಗಿದೆ. ‘ಸೆಂಟರ್ ಫಾರ್ ಫೈನಾನ್ಸಿಯಲ್ ಅಕೌಂಟೇಬಿಲಿಟಿ ಆ್ಯಂಡ್ ಟ್ಯಾಕ್ಸ್ ದಿ ಟಾಪ್’ ಅಭಿಯಾನವು ಬುಧವಾರ ಬಿಡುಗಡೆ ಮಾಡಿದ ಈ ವರದಿಯು, ದೇಶದ ಸಂಪತ್ತು ಕೆಲವೇ ಕೆಲವು ವ್ಯಕ್ತಿಗಳ ಕೈಯಲ್ಲಿ ಹೇಗೆ ಕೇಂದ್ರೀಕೃತವಾಗಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.
2019 ಮತ್ತು 2025ರ ನಡುವೆ ಭಾರತದ ಐದು ಅತ್ಯಂತ ಶ್ರೀಮಂತ ಕುಟುಂಬಗಳ ಸಂಪತ್ತು ಶೇ.400ರಷ್ಟು ಏರಿಕೆಯಾಗಿದೆ ಎಂದು ಲಾಭೋದ್ದೇಶವಿಲ್ಲದ ಸಂಸ್ಥೆ ‘ಸೆಂಟರ್ ಫಾರ್ ಫೈನಾನ್ಸಿಯಲ್ ಅಕೌಂಟೇಬಿಲಿಟಿ ಆ್ಯಂಡ್ ಟ್ಯಾಕ್ಸ್ ದಿ ಟಾಪ್’ ಅಧ್ಯಯನ ವರದಿ ತಿಳಿಸಿದೆ.
‘ವೆಲ್ತ್ ಟ್ರ್ಯಾಕರ್ ಇಂಡಿಯಾ 2026’ ಶೀರ್ಷಿಕೆಯ ವರದಿಯು ದೇಶದ 1,688 ಅತಿ ಶ್ರೀಮಂತ ವ್ಯಕ್ತಿಗಳ (1,000 ಕೋಟಿ ರೂ.ಗೂ ಹೆಚ್ಚಿನ ನಿವ್ವಳ ಮೌಲ್ಯ ಹೊಂದಿರುವವರು) ಮೇಲೆ ಪ್ರಗತಿಪರ ಸಂಪತ್ತು ತೆರಿಗೆಯನ್ನು ವಿಧಿಸುವುದರಿಂದ ಕಲ್ಯಾಣ ಕಾರ್ಯಕ್ರಮಗಳಿಗಾಗಿ 10 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಸಂಗ್ರಹಿಸಬಹುದು ಎಂದೂ ಹೇಳಿದೆ.
ಭಾರತದಲ್ಲಿ ವಸಾಹತುಶಾಹಿ ಯುಗಕ್ಕೆ ಹೋಲಿಸಬಹುದಾದ ಅಸಮಾನತೆಯಿದೆ. ದೇಶದಲ್ಲಿಯ ಶೇ.1ರಷ್ಟು ಅತ್ಯಂತ ಶ್ರೀಮಂತರು ಶೇ.40ರಷ್ಟು ರಾಷ್ಟ್ರೀಯ ಸಂಪತ್ತಿನ ಮೇಲೆ ನಿಯಂತ್ರಣ ಹೊಂದಿದ್ದಾರೆ ಎಂದು ವರದಿಯು ತಿಳಿಸಿದೆ.
ದೇಶದಲ್ಲಿಯ ಅತ್ಯಂತ ಶ್ರೀಮಂತರ ಒಟ್ಟು ಸಂಪತ್ತು 166 ಲಕ್ಷ ಕೋಟಿ ರೂ.ಗಳನ್ನು ಮೀರಿದ್ದು, ಇದು ಭಾರತದ ಜಿಡಿಪಿಯ ಸುಮಾರು ಶೇ.50ರಷ್ಟಿದೆ ಎಂದು ವರದಿಯು ಬೆಟ್ಟು ಮಾಡಿದೆ.
1,000 ಕೋಟಿ ರೂ.ಗೂ ಹೆಚ್ಚಿನ ಸಂಪತ್ತು ಹೊಂದಿರುವ 1,688 ಅತ್ಯಂತ ಶ್ರೀಮಂತ ಕುಟುಂಬಗಳ ಮೇಲೆ ಶೇ.2ರಿಂದ ಶೇ.6ರಷ್ಟು ಪ್ರಗತಿಪರ ತೆರಿಗೆ ಮತ್ತು ಹೆಚ್ಚುವರಿಯಾಗಿ ಮೂರನೇ ಒಂದು ಭಾಗದಷ್ಟು ಉತ್ತರಾಧಿಕಾರ ತೆರಿಗೆಯನ್ನು ವಿಧಿಸುವುದರಿಂದ ದೇಶವು ವಾರ್ಷಿಕವಾಗಿ ಕಲ್ಯಾಣ ಯೋಜನೆಗಳಿಗೆ 10.6 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿರುವ ವರದಿಯು, ಆರೋಗ್ಯ ಮತ್ತು ಶಿಕ್ಷಣ ವೆಚ್ಚವನ್ನು ತಲಾ ಜಿಡಿಪಿಯ ಶೇ.1ರಷ್ಟು ಹೆಚ್ಚಿಸುವುದು ಮತ್ತು ವೃದ್ಧರಿಗೆ ಮಾಸಿಕ 12,000 ರೂ.ಗಳ ಪಿಂಚಣಿ ಒದಗಿಸುವುದು ಇದರ ಪ್ರಯೋಜನಗಳಲ್ಲಿ ಸೇರಬಹುದು ಎಂದು ಹೇಳಿದೆ.
2019 ಮತ್ತು 2025ರ ನಡುವೆ ಅಂಬಾನಿಯವರ ಸಂಪತ್ತು ಶೇ.153ರಷ್ಟು ಏರಿಕೆಯಾಗಿದೆ ಎಂದು ಹೇಳಿರುವ ವರದಿಯು, ಈ ಅವಧಿಯಲ್ಲಿ ಅವರಿಂದ ಶೇ.2ರಷ್ಟು ಸಂಪತ್ತು ತೆರಿಗೆಯನ್ನು ಸಂಗ್ರಹಿಸಿದ್ದರೆ ಮೂರು ವರ್ಷಗಳವರೆಗೆ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಗಳನ್ನು ಪೂರೈಸಬಹುದಿತ್ತು ಎಂದು ತಿಳಿಸಿದೆ.
ಇದೇ ಅವಧಿಯಲ್ಲಿ ಅದಾನಿಯವರ ಸಂಪತ್ತು ಶೇ.625ರಷ್ಟು ಏರಿಕೆಯಾಗಿದ್ದು, ಅವರಿಗೆ ಶೇ.2ರಷ್ಟು ಸಂಪತ್ತು ತೆರಿಗೆಯನ್ನು ವಿಧಿಸಿದರೆ ಇಡೀ ದೇಶದಲ್ಲಿ ಎರಡು ವರ್ಷಗಳ ಕಾಲ ಪ್ರಾಥಮಿಕ ಆರೋಗ್ಯ ಸೇವೆಗೆ ಹಣಕಾಸು ಒದಗಿಸಬಹುದು ಮತ್ತು – ವಾಯುಮಾಲಿನ್ಯದಿಂದ ತೀವ್ರ ಪೀಡಿತ ಸುಮಾರು ಎಂಟು ಕೋಟಿ ಕುಟುಂಬಗಳಿಗೆ ಉಚಿತ ವಾಯು ಶುದ್ದೀಕರಣ ಯಂತ್ರಗಳನ್ನು ಸಹ ಪೂರೈಸಬಹುದು ಎಂದು ಹೇಳಿದೆ.
ಅಧ್ಯಯನವು ಕಲ್ಯಾಣ ಕಾರ್ಯಕ್ರಮಕ್ಕಾಗಿ ತನ್ನ ಹೂಡಿಕೆಗಳನ್ನು ಹೆಚ್ಚಿಸಲು ಸಂಪನ್ಮೂಲಗಳು ಲಭ್ಯವಿಲ್ಲ ಎಂಬ ಸರಕಾರದ ಹೇಳಿಕೆಯ ಪೊಳ್ಳುತನವನ್ನು ಬಯಲಿಗೆಳೆದಿದೆ. ಸರಕಾರವು ಕಾರ್ಪೊರೇಟ್ ಸಂಸ್ಥೆಗಳಿಗೆ ತೆರಿಗೆ ವಿಧಿಸುತ್ತದೆಯಾದರೂ ಇಂದು ಕಷ್ಟಪಟ್ಟು ದುಡಿಯುವ ವ್ಯಕ್ತಿಗಳು ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಗಿಂತ ಹೆಚ್ಚು ತೆರಿಗೆಯನ್ನುಪಾವತಿಸುತ್ತಿರುವುದು ತೀವ್ರ ಕಳವಳಕಾರಿಯಾಗಿದೆ ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರ ಸರಕಾರವು ಕಳೆದ 11 ವರ್ಷಗಳಲ್ಲಿ 19.6 ಲಕ್ಷ ಕೋಟಿ ರೂ.ಗಳ ಸಾಲಗಳನ್ನು ರೈಟ್ ಆಫ್ ಮಾಡಿರುವುದನ್ನೂ ವರದಿಯು ಬೆಟ್ಟು ಮಾಡಿದೆ.
ಅಂತರ ರಾಜ್ಯ
Rahul Gandhi-‘45 FIR ನನಗೆ ಪದಕವಿದ್ದಂತೆ, 100 FIR ನನ್ನ ಗುರಿ’-ರಾಹುಲ್ ಗಾಂಧಿ
ತಮ್ಮ ವಿರುದ್ಧ ದಾಖಲಾಗಿರುವ 45 ಎಫ್‌ಐಆರ್‌ಗಳ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರತಿಕ್ರಿಯಿಸಿದ್ದು, ಪ್ರತಿಯೊಂದು ಎಫ್‌ಐಆರ್ ಕೂಡ ತಮಗೆ ಒಂದು ಪದಕದಂತೆ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ 100 ಎಫ್‌ಐಆರ್‌ಗಳು ದಾಖಲಾಗುವುದು ತಮ್ಮ ಗುರಿ ಎಂದೂ ಅವರು ಹೇಳಿದ್ದಾರೆ.
ಹೊಸದಿಲ್ಲಿ, ಅ.7: ತಮ್ಮ ವಿರುದ್ಧ ದಾಖಲಾಗಿರುವ 45 ಎಫ್‌ಐಆರ್‌ಗಳ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರತಿಕ್ರಿಯಿಸಿದ್ದು, ಪ್ರತಿಯೊಂದು ಎಫ್‌ಐಆರ್ ಕೂಡ ತಮಗೆ ಒಂದು ಪದಕದಂತೆ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ 100 ಎಫ್‌ಐಆರ್‌ಗಳು ದಾಖಲಾಗುವುದು ತಮ್ಮ ಗುರಿ ಎಂದೂ ಅವರು ಹೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧವೂ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು. ಅವರ ಕಾರ್ಯವೈಖರಿ ಹಾಗೂ ಅಧೀನ ಅಧಿಕಾರಿಗಳೊಂದಿಗಿನ ಭಿನ್ನಮತದ ಕುರಿತು ಪ್ರತಿಪಕ್ಷಗಳು ಪ್ರಶ್ನೆಗಳನ್ನು ಎತ್ತುತ್ತಿರುವ ಹಿನ್ನೆಲೆಯಲ್ಲಿ ರಾಹುಲ್, ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ದೆಹಲಿಯ ಜಂತರ್ ಮಂತರ್‌ನಲ್ಲಿ ದಿಢೀರ್ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ ಅವರು, ಜ್ಞಾನೇಶ್ ಕುಮಾರ್ ಅವರನ್ನು ‘ಅಕ್ರಮ ಚುನಾವಣಾ ಆಯೋಗದ ಮುಖ್ಯಸ್ಥ’ ಎಂದು ಆರೋಪಿಸಿದರು.
“ನಾವು ಜಂತರ್ ಮಂತರ್‌ಗೆ ತೆರಳಿ ಒಟ್ಟಾಗಿ ಕುಳಿತು, ಕುಮಾರ್ ಈ ದೇಶದ ಕಾನೂನುಬದ್ಧ ಚುನಾವಣಾ ಆಯುಕ್ತರಲ್ಲ ಎಂಬುದನ್ನು ದೇಶಕ್ಕೆ ತಿಳಿಸುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧವೂ ಅವರು ಆರೋಪಗಳನ್ನು ಮಾಡಿದರು. ಈ ಮೂವರು ಜ್ಞಾನೇಶ್ ಕುಮಾರ್ ಅವರೊಂದಿಗೆ ಸೇರಿ ದೇಶದ ಪ್ರಜಾಪ್ರಭುತ್ವವನ್ನು ನಾಶಗೊಳಿಸಿದ್ದಾರೆ ಎಂದು ರಾಹುಲ್ ಗಾಂಧಿ ದೂರಿದರು.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳ ಕುರಿತು ಮಾತನಾಡಿದ ಅವರು, “ನನ್ನ ವಿರುದ್ಧ 45 ಎಫ್‌ಐಆರ್‌ಗಳಿವೆ. 100 ಎಫ್‌ಐಆರ್‌ಗಳನ್ನು ಹೊಂದುವುದು ನನ್ನ ಗುರಿ. ಪ್ರತಿಯೊಂದು ಎಫ್‌ಐಆರ್ ನನಗೆ ಪದಕವಿದ್ದಂತೆ” ಎಂದು ಹೇಳಿದರು.
ಇದೇ ವೇಳೆ, ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಪಕ್ಷಗಳ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಮಂಗಳವಾರ ಪ್ರತಿಪಕ್ಷಗಳ ನಾಯಕರು ದಿನವಿಡೀ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ರಾಹುಲ್ ಗಾಂಧಿ ಅವರನ್ನು ವಶಕ್ಕೆ ಪಡೆದಿದ್ದರು. ಚುನಾವಣಾ ಆಯುಕ್ತರು ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಸುವುದಾಗಿ ಕಾಂಗ್ರೆಸ್ ತಿಳಿಸಿದೆ.
ಮತ್ತೊಂದೆಡೆ, ‘ಮತ ಕಳವು’ ಆರೋಪಕ್ಕೆ ಸಂಬಂಧಿಸಿ ದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಪ್ರತಿಭಟನಾ ಜಾಥಾ ನಡೆಸಲು ಮುಂದಾದ ಆಮ್ ಆದ್ಮಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬ್ಯಾರಿಕೇಡ್‌ಗಳ ಮೂಲಕ ತಡೆದರು.
ನಿಧನ ವಾರ್ತೆ
Nana Patekar-ವ್ಯವಸ್ಥೆಯ ವಿರುದ್ಧದ ಧ್ವನಿಗೆ ರೂಪ ನೀಡಿದ, ತನ್ನ ಡೈಲಾಗ್ ನಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ಅಭಿಜಾತ ಕಲಾವಿದ ನಾನಾಪಾಟೇಕರ್ ಇನ್ನಿಲ್ಲ
ಭಾರತೀಯ ಚಿತ್ರರಂಗದ ಹಿರಿಯ ನಟ ಹಾಗೂ ದಿಗ್ಗಜ ಕಲಾವಿದ ನಾನಾ ಪಾಟೇಕರ್ (75) ಅವರು ಗುರುವಾರ ಬೆಳಗ್ಗೆ ಗೋವಾದ ತಮ್ಮ ನಿವಾಸದಲ್ಲಿ ತೀವ್ರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿ ಚಿತ್ರರಂಗ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಭಾರತೀಯ ಚಿತ್ರರಂಗದ ಹಿರಿಯ ನಟ ಹಾಗೂ ದಿಗ್ಗಜ ಕಲಾವಿದ ನಾನಾ ಪಾಟೇಕರ್ (75) ಅವರು ಗುರುವಾರ ಬೆಳಗ್ಗೆ ಗೋವಾದ ತಮ್ಮ ನಿವಾಸದಲ್ಲಿ ತೀವ್ರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿ ಚಿತ್ರರಂಗ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಗೋವಾದ ಡೊನಾ ಪೌಲಾದಲ್ಲಿರುವ ನಿವಾಸದಲ್ಲಿ ನಾನಾ ಪಾಟೇಕರ್ ಅವರು ಬೆಳಗಿನ ಜಾವ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಸುಮಾರು 45 ನಿಮಿಷಗಳ ಕಾಲ ಸತತ ಸಿಪಿಆರ್ ನೀಡಿ ಜೀವ ಉಳಿಸಲು ಪ್ರಯತ್ನಿಸಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ. ಬಳಿಕ ಬೆಳಗ್ಗೆ ಸುಮಾರು 5.20ಕ್ಕೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ. ಶೇಖರ್ ಸಾಳ್ಕರ್ ಅವರು ನಾನಾ ಪಾಟೇಕರ್ ಅವರನ್ನು ಉಳಿಸಲು ವೈದ್ಯಕೀಯ ತಂಡ ಸತತ ಪ್ರಯತ್ನ ನಡೆಸಿತ್ತು ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೆಡಿಕೋ-ಲೀಗಲ್ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗುವ ನಿರೀಕ್ಷೆಯಿದೆ.
ನಾನಾ ಪಾಟೇಕರ್ ಅವರು ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯ, ಗಂಭೀರ ಸಂಭಾಷಣೆ ಶೈಲಿ ಮತ್ತು ವಿಭಿನ್ನ ಪಾತ್ರಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಭಾರತೀಯ ಸಿನಿಮಾರಂಗಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.
‘ಪರಿಂದಾ’, ‘ಕ್ರಾಂತಿವೀರ’, ‘ಅಬ್ ತಕ್ ಛಪ್ಪನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿನ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ‘ವೆಲ್‌ಕಮ್’ ಚಿತ್ರದ ಉದಯ್ ಶೆಟ್ಟಿ ಪಾತ್ರದ ಮೂಲಕ ಹಾಸ್ಯಪ್ರಧಾನ ಅಭಿನಯದಲ್ಲೂ ಅವರು ಪ್ರೇಕ್ಷಕರ ಮನ ಗೆದ್ದಿದ್ದರು. ಕನ್ನಡದಲ್ಲಿಯೂ ಅವರು ‘ಯಕ್ಷ’ ಸಿನಿಮಾದಲ್ಲಿ ನಟಿಸಿದ್ದರು.
ಬಹುಮುಖ ಪ್ರತಿಭೆಯ ನಾನಾ ಪಾಟೇಕರ್ ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗದ ಪ್ರಮುಖ ಕಲಾವಿದರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
ಅಂತರ ರಾಜ್ಯ
Blackmail-ದೋಸೆಯಲ್ಲಿ ಸತ್ತ ಇಲಿ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ದೂರು ನೀಡಿದ್ದ ಮಹಿಳೆಯಿಂದಲೇ ₹25 ಲಕ್ಷಕ್ಕೆ ಬ್ಲ್ಯಾಕ್‌ಮೇಲ್..!
ಮುಂಬೈನ ಬೊರಿವಲಿ ಪ್ರದೇಶದ ಹೋಟೆಲ್‌ವೊಂದರಲ್ಲಿ ಮೈಸೂರು ಮಸಾಲೆ ದೋಸೆಯಲ್ಲಿ ಸತ್ತ ಇಲಿ ಪತ್ತೆಯಾದ ಪ್ರಕರಣಕ್ಕೆ ಇದೀಗ ಅಚ್ಚರಿಯ ತಿರುವು ಸಿಕ್ಕಿದೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ವೈರಲ್ ಮಾಡುವುದಾಗಿ ಬೆದರಿಸಿ ಹೋಟೆಲ್ ಮಾಲೀಕರಿಂದ ₹25 ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ, ದೂರು ನೀಡಿದ್ದ ಮಹಿಳೆಯನ್ನೇ ಪೊಲೀಸರು ಬಂಧಿಸಿದ್ದಾರೆ.
ಮುಂಬೈ: ಮುಂಬೈನ ಬೊರಿವಲಿ ಪ್ರದೇಶದ ಹೋಟೆಲ್‌ವೊಂದರಲ್ಲಿ ಮೈಸೂರು ಮಸಾಲೆ ದೋಸೆಯಲ್ಲಿ ಸತ್ತ ಇಲಿ ಪತ್ತೆಯಾದ ಪ್ರಕರಣಕ್ಕೆ ಇದೀಗ ಅಚ್ಚರಿಯ ತಿರುವು ಸಿಕ್ಕಿದೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ವೈರಲ್ ಮಾಡುವುದಾಗಿ ಬೆದರಿಸಿ ಹೋಟೆಲ್ ಮಾಲೀಕರಿಂದ ₹25 ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ, ದೂರು ನೀಡಿದ್ದ ಮಹಿಳೆಯನ್ನೇ ಪೊಲೀಸರು ಬಂಧಿಸಿದ್ದಾರೆ.
ಸೆ.24ರಂದು ಮಾನ್ಸಿ ಎಂಬ ಮಹಿಳೆ ತನ್ನ ಮಗುವಿನೊಂದಿಗೆ ಇಬ್ಬರು ಪುರುಷರ ಜತೆ ಬೊರಿವಲಿಯ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಮೈಸೂರು ಮಸಾಲೆ ದೋಸೆ ಆರ್ಡರ್ ಮಾಡಿದ್ದರು. ದೋಸೆ ತಿನ್ನುವ ಸಂದರ್ಭದಲ್ಲಿ ಅದರೊಳಗೆ ಸತ್ತ ಸಣ್ಣ ಇಲಿ ಪತ್ತೆಯಾಗಿದೆ ಎಂದು ಅವರು ಆರೋಪಿಸಿದ್ದರು.
ಮಾನ್ಸಿ ಅವರ ಹೇಳಿಕೆಯಂತೆ, ಅವರ ಸಹೋದರ ದೋಸೆಯ ಕೆಲವು ಭಾಗಗಳನ್ನು ಸೇವಿಸಿದ ಬಳಿಕ ಅದರೊಳಗೆ ಸತ್ತ ಇಲಿ ಇರುವುದನ್ನು ಗಮನಿಸಿದ್ದರು. ಇದರಿಂದ ಆಘಾತಗೊಂಡ ಅವರು ವಾಂತಿ ಮಾಡಿಕೊಂಡಿದ್ದರು. ಬಳಿಕ ಮಾನ್ಸಿ ಬೊರಿವಲಿ ಪೊಲೀಸ್ ಠಾಣೆಗೆ ಕರೆ ಮಾಡಿ ಘಟನೆ ಕುರಿತು ದೂರು ನೀಡಿದ್ದರು.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ಸೆ.28ರಂದು ಹೋಟೆಲ್‌ನ ಪರವಾನಗಿಯನ್ನು ಅಮಾನತುಗೊಳಿಸಿತ್ತು. ಇದರಿಂದ ಹೋಟೆಲ್ ಮುಚ್ಚುವ ಪರಿಸ್ಥಿತಿ ಎದುರಾಗಿತ್ತು.
₹25 ಲಕ್ಷಕ್ಕೆ ಬ್ಲ್ಯಾಕ್‌ಮೇಲ್
ವಿಡಿಯೋ ವೈರಲ್ ಆದ ಬಳಿಕ ಹೋಟೆಲ್ ಮಾಲೀಕರಿಗೆ ಬೆದರಿಕೆ ಕರೆಗಳು ಬರಲಾರಂಭಿಸಿದ್ದವು. ವಿಡಿಯೋವನ್ನು ಮತ್ತಷ್ಟು ವೈರಲ್ ಮಾಡುವುದಾಗಿ ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಸಿ ₹25 ಲಕ್ಷ ನೀಡುವಂತೆ ಒತ್ತಾಯಿಸಲಾಗಿತ್ತು ಎನ್ನಲಾಗಿದೆ.
ನಿರಂತರ ಬೆದರಿಕೆ ಮತ್ತು ಮಾನಸಿಕ ಕಿರುಕುಳದಿಂದಾಗಿ ಹೋಟೆಲ್ ಮಾಲೀಕರು ₹6 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ₹1 ಲಕ್ಷವನ್ನು ಮುಂಗಡವಾಗಿ ನಗದು ರೂಪದಲ್ಲಿ ನೀಡಿದ್ದರು.
ಹಣ ಪಡೆಯುವ ವೇಳೆ ರೆಡ್‌ಹ್ಯಾಂಡ್ ಆಗಿ ಬಂಧನ
ಸೆ.29ರಂದು ಹೋಟೆಲ್ ಮಾಲೀಕರು ಬೊರಿವಲಿ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಬಲೆ ಬೀಸಿ, ಮತ್ತಷ್ಟು ಹಣ ಪಡೆಯಲು ಮಹಿಳೆಯನ್ನು ಕರೆಸಿಕೊಂಡಿದ್ದರು. ಹಣ ಸ್ವೀಕರಿಸುತ್ತಿದ್ದ ವೇಳೆ ಪೊಲೀಸರು ಆಕೆಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ತನಿಖೆ ವೇಳೆ ಬಂಧಿತ ಮಹಿಳೆ ಬೇರೆ ಯಾರೂ ಅಲ್ಲ, ದೋಸೆಯಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂದು ದೂರು ನೀಡಿದ್ದ ಮಾನ್ಸಿ ಅಮಿತ್ ಎಂಬುದು ಬೆಳಕಿಗೆ ಬಂದಿದೆ. ಅವರು ಬೊರಿವಲಿಯ ಗೋರೆಗಾಂವ್ ಪ್ರದೇಶದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದು, ಬ್ಲ್ಯಾಕ್‌ಮೇಲ್‌ನಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿಸಿದ್ದಾರೆ.
-
Uncategorized14 hours ago
ಪುತ್ತೂರು : ಬಾಡಿಗೆ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಯುವಕ ಸಾವು
-
ಮಂಗಳೂರು19 hours agoAuto passengers-ದಕ್ಷಿಣ ಕನ್ನಡದಲ್ಲಿ ಆಟೊ ಪ್ರಯಾಣಿಕರಿಗೆ ಮತ್ತೊಂದು ದರ ಏರಿಕೆ ಶಾಕ್: ಇಲ್ಲಿದೆ ಪರಿಷ್ಕೃತ ರೇಟ್ ಕಾರ್ಡ್
-
Uncategorized16 hours ago
Puttur Court retaining wall collapse : ಹತ್ತು ತಿಂಗಳ ಹಿಂದಷ್ಟೇ ಉದ್ಘಾಟನೆ; ಪುತ್ತೂರು ಹೊಸ ನ್ಯಾಯಾಲಯದ ತಡೆಗೋಡೆ ಕುಸಿತ- ಕಾಮಗಾರಿಯ ಗುಣಮಟ್ಟದ ಬಗ್ಗೆ ಚರ್ಚೆ
-
ಅಂತರ ರಾಜ್ಯ18 hours agoBlackmail-ದೋಸೆಯಲ್ಲಿ ಸತ್ತ ಇಲಿ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ದೂರು ನೀಡಿದ್ದ ಮಹಿಳೆಯಿಂದಲೇ ₹25 ಲಕ್ಷಕ್ಕೆ ಬ್ಲ್ಯಾಕ್‌ಮೇಲ್..!
-
ಉದ್ಯೋಗ19 hours agoPuttur-Salesನಿಂದ Technicianವರೆಗೆ; ಪುತ್ತೂರಿನ ಶ್ರೀ ತಿರುಮಲಾ TVSನಲ್ಲಿ ಭರ್ಜರಿ Job Opening
-
ಅಂತರ ರಾಜ್ಯ23 hours agoಕಾಸರಗೋಡು: ಆರ್‌ಎಸ್‌ಎಸ್ ವಕ್ತಾರರ ಭಾಗವಹಿಸುವಿಕೆ ವಿರೋಧಿಸಿ ಪ್ರತಿಭಟನೆ; ಘರ್ಷಣೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಗಾಯ
-
ಬಿಗ್ ನ್ಯೂಸ್18 hours agoPuttur-ಪುತ್ತೂರು : ಕೋಟಿ- ಚೆನ್ನಯ KSRTC ಬಸ್ ನಿಲ್ದಾಣದ ನಿಲ್ದಾಣಾಧಿಕಾರಿಯಾಗಿ ಕೆ. ಭಾಸ್ಕರ ಶೆಟ್ಟಿ ಬಜನಿಗುತ್ತು ಪದೋನ್ನತಿ
-
ಸ್ಥಳೀಯ23 hours agoBeltangadi-ಬೆಳ್ತಂಗಡಿ: ಚಾಲಕನ ಸಮಯಪ್ರಜ್ಞೆ; ಬಸ್ನಲ್ಲಿ ಅಸ್ವಸ್ಥಗೊಂಡ ಮಹಿಳೆ ಅಪಾಯದಿಂದ ಪಾರು


















