Connect with us

ಹಾಸನ

Hassan | ಹಾಸನ : ಹೆಲ್ಮೆಟ್ ಧರಿಸದೆ ಕಾಲೇಜ್ ವಿದ್ಯಾರ್ಥಿನಿಯರ ನೈಟ್ ಬುಲೆಟ್ ರೈಡ್ – ಹಂಪ್ಸ್ ಗೋಚರಿಸದೆ ಅಪಘಾತ – 23ರ ಯುವತಿ ಸಾವು – ನವವಿವಾಹಿತೆ ಗಂಭೀರ

Published

on

Ad Widget

Ad Widget

Ad Widget

Ad Widget

ಹಾಸನ: ಹಾಸನದ (Hassan) ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದ ಭೀಕರ ಬೈಕ್ ಅಪಘಾತದಲ್ಲಿ ಯುವತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗೆಳತಿಯ ಸ್ಥಿತಿ ಗಂಭೀರವಾಗಿದೆ.

Ad Widget

Ad Widget

Ad Widget

Ad Widget

​ಘಟನೆಯ ವಿವರ:
ನಗರದ ಸತ್ಯಮಂಗಲ ಬಡಾವಣೆಯ ನಿವಾಸಿ ಪ್ರಿಯಾ (23) ಮೃತ ಪಟ್ಟ ದುರ್ದೈವಿ. ಇವರು ಖಾಸಗಿ ಕಾಲೇಜಿನಲ್ಲಿ ಎಂಸಿಎ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದರು. ಇವರೊಂದಿಗೆ ಪ್ರಯಾಣಿಸುತ್ತಿದ್ದ ಗೆಳತಿ ಸ್ವಾತಿ (24) ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳು ಸ್ವಾತಿ ಅವರಿಗೆ ಕಳೆದ ನವೆಂಬರ್‌ನಲ್ಲಿಷ್ಟೇ ವಿವಾಹವಾಗಿತ್ತು ಎಂದು ತಿಳಿದುಬಂದಿದೆ.

Ad Widget

Ad Widget alt="Ad Widget"/>

Ad Widget

​ಅಪಘಾತಕ್ಕೆ ಕಾರಣ:
ಮೂಲಗಳ ಪ್ರಕಾರ, ಯುವತಿಯರಿಬ್ಬರು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ನಲ್ಲಿ ರೈಡ್‌ಗೆ ತೆರಳಿದ್ದರು. ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದಾಗ, ಮುಂದಿದ್ದ ಹಂಪ್ಸ್ (ವೇಗ ನಿಯಂತ್ರಕ) ಗಮನಿಸದೆ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಇಬ್ಬರೂ ರಸ್ತೆ ಮೇಲೆ ಅಪ್ಪಳಿಸಿದ್ದಾರೆ.

Ad Widget

Ad Widget <> Ad Widget

​ಹೆಲ್ಮೆಟ್ ಧರಿಸಿರಲಿಲ್ಲ:
ಅಪಘಾತದ ಸಮಯದಲ್ಲಿ ಇಬ್ಬರೂ ಯುವತಿಯರು ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಪ್ರಿಯಾ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

​

Click to comment

Leave a Reply

ಬಿಗ್ ನ್ಯೂಸ್

ICC President-ಜಯ್ ಶಾ‌ಗೆ ಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮತ್ತೊಂದು ಇನಿಂಗ್ಸ್..! ಅವಿರೋಧ ಆಯ್ಕೆ

Published

on

Ad Widget

Ad Widget

Ad Widget

Ad Widget

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಅಧ್ಯಕ್ಷರಾಗಿ ಜಯ್ ಶಾ ಎರಡನೇ ಅವಧಿಗೆ ಮರುನೇಮಕಗೊಂಡಿದ್ದಾರೆ. ಈ ಮೂಲಕ ಅವರು 2030ರ ಡಿಸೆಂಬರ್‌ವರೆಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಐಸಿಸಿ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ದೇಶಕರೊಬ್ಬರು ಜಯ್ ಶಾ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಿದರು. ಇದಕ್ಕೆ ಯಾವುದೇ ವಿರೋಧ ವ್ಯಕ್ತವಾಗದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾದರು.

Ad Widget

Ad Widget

Ad Widget

Ad Widget

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಅಧ್ಯಕ್ಷರಾಗಿ ಜಯ್ ಶಾ ಎರಡನೇ ಅವಧಿಗೆ ಮರುನೇಮಕಗೊಂಡಿದ್ದಾರೆ. ಈ ಮೂಲಕ ಅವರು 2030ರ ಡಿಸೆಂಬರ್‌ವರೆಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

Ad Widget

Ad Widget alt="Ad Widget"/>

Ad Widget

ಬಾಲಿಯಲ್ಲಿ ಸೋಮವಾರ ನಡೆದ ಐಸಿಸಿ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ದೇಶಕರೊಬ್ಬರು ಜಯ್ ಶಾ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಿದರು. ಇದಕ್ಕೆ ಯಾವುದೇ ವಿರೋಧ ವ್ಯಕ್ತವಾಗದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾದರು.

Ad Widget

Ad Widget <> Ad Widget

ಜಯ್ ಶಾ ಅವರ ಮೊದಲ ಮೂರು ವರ್ಷಗಳ ಅಧಿಕಾರಾವಧಿ ಮುಂದಿನ ವರ್ಷ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಆಡಳಿತದಲ್ಲಿ ನಿರಂತರತೆ ಕಾಯ್ದುಕೊಳ್ಳುವ ಉದ್ದೇಶದಿಂದ ಅವರ ಅಧಿಕಾರಾವಧಿಯನ್ನು ವಿಸ್ತರಿಸಲು ಐಸಿಸಿ ನಿರ್ಧರಿಸಿದೆ.

2024ರ ಆಗಸ್ಟ್‌ನಲ್ಲಿ ಐಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಜಯ್ ಶಾ, ಅದೇ ವರ್ಷದ ಡಿಸೆಂಬರ್‌ನಲ್ಲಿ ಗ್ರೆಗ್ ಬಾರ್ಕ್ಲೆ ಅವರಿಂದ ಅಧಿಕಾರ ವಹಿಸಿಕೊಂಡಿದ್ದರು.

Ad Widget

Ad Widget

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ಗೆ ಆದ್ಯತೆ
ಜಾಗತಿಕ ಮಟ್ಟದಲ್ಲಿ ಕ್ರಿಕೆಟ್‌ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುವುದು ಐಸಿಸಿಯ ಪ್ರಮುಖ ಗುರಿಯಾಗಿದೆ. 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಮತ್ತೆ ಸೇರ್ಪಡೆಯಾಗುತ್ತಿರುವುದು ಈ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಇದರಿಂದ ಕ್ರಿಕೆಟ್‌ ಅನ್ನು ಹೊಸ ಪ್ರೇಕ್ಷಕರಿಗೆ ಪರಿಚಯಿಸುವುದರ ಜೊತೆಗೆ ಯುವ ಆಟಗಾರರು ಹಾಗೂ ಅಭಿಮಾನಿಗಳನ್ನು ಆಕರ್ಷಿಸಲು ಉತ್ತಮ ಅವಕಾಶ ದೊರೆಯಲಿದೆ ಎಂದು ಜಯ್ ಶಾ ಅಭಿಪ್ರಾಯಪಟ್ಟಿದ್ದಾರೆ.

ಇದರೊಂದಿಗೆ, ದೀರ್ಘಾವಧಿಯ ಕ್ರಿಕೆಟ್ ಸ್ಪರ್ಧೆಗಳ ಕಾರ್ಯಕ್ರಮವನ್ನು ವಿಸ್ತರಿಸುವುದಾಗಿ ಐಸಿಸಿ ಇತ್ತೀಚೆಗೆ ಘೋಷಿಸಿದೆ. ಹೆಚ್ಚಿನ ರಾಷ್ಟ್ರಗಳಿಗೆ ಕ್ರಿಕೆಟ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವುದು ಹಾಗೂ ಕ್ರೀಡೆಯ ಬೆಳವಣಿಗೆಗೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ.

ಮಹಿಳಾ ಕ್ರಿಕೆಟ್‌ಗೆ ನಿರಂತರ ಬೆಂಬಲ ನೀಡುವುದು ಮತ್ತು ಸದಸ್ಯ ರಾಷ್ಟ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕ್ರಿಕೆಟ್‌ನ ತಳಹದಿಯನ್ನು ಮತ್ತಷ್ಟು ಬಲಪಡಿಸಲು ಐಸಿಸಿ ಬದ್ಧವಾಗಿದೆ.

ಜಯ್ ಶಾ ಹೇಳಿದ್ದೇನು?
ಎರಡನೇ ಅವಧಿಗೆ ಆಯ್ಕೆಯಾದ ಕುರಿತು ಪ್ರತಿಕ್ರಿಯಿಸಿರುವ ಜಯ್ ಶಾ, ಐಸಿಸಿ ಆಡಳಿತ ಮಂಡಳಿ ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

‘ಐಸಿಸಿ ಅಧ್ಯಕ್ಷನಾಗಿ ಸೇವೆ ಸಲ್ಲಿಸುವುದು ದೊಡ್ಡ ಜವಾಬ್ದಾರಿಯಾಗಿದೆ. ನನ್ನ ಮೇಲೆ ನಿರಂತರ ನಂಬಿಕೆ ಮತ್ತು ಬೆಂಬಲ ವ್ಯಕ್ತಪಡಿಸಿದ ಪ್ರತಿಯೊಬ್ಬ ನಿರ್ದೇಶಕರಿಗೂ ಹೃದಯಪೂರ್ವಕ ಧನ್ಯವಾದಗಳು. ವಿಶ್ವದಾದ್ಯಂತ ಕ್ರಿಕೆಟ್‌ನ ಹಿತಾಸಕ್ತಿಗಳನ್ನು ಮುನ್ನಡೆಸಲು ಸದಸ್ಯ ರಾಷ್ಟ್ರಗಳೊಂದಿಗೆ ಕೈಜೋಡಿಸಿ ಕೆಲಸ ಮಾಡಲು ಬದ್ಧನಾಗಿದ್ದೇನೆ’ ಎಂದು ತಿಳಿಸಿದ್ದಾರೆ.

‘ಕ್ರಿಕೆಟ್ ಇತಿಹಾಸದ ಅತ್ಯಂತ ಮಹತ್ವದ ಮತ್ತು ರೋಚಕ ಹಂತಕ್ಕೆ ನಾವು ಪ್ರವೇಶಿಸುತ್ತಿದ್ದೇವೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗುತ್ತಿರುವುದು ನಮ್ಮ ಕ್ರೀಡೆಯನ್ನು ಹೊಸ ಪ್ರೇಕ್ಷಕರಿಗೆ ಪರಿಚಯಿಸಲು ಹಾಗೂ ಹೊಸ ಪೀಳಿಗೆಯ ಆಟಗಾರರು ಮತ್ತು ಅಭಿಮಾನಿಗಳಿಗೆ ಸ್ಫೂರ್ತಿ ನೀಡಲು ಅದ್ಭುತ ಅವಕಾಶವಾಗಿದೆ’ ಎಂದು ಹೇಳಿದ್ದಾರೆ.

ಕ್ರಿಕೆಟ್‌ನ ಎಲ್ಲ ಪಾಲುದಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಕ್ರೀಡೆಗೆ ಇನ್ನಷ್ಟು ಬಲಿಷ್ಠ ಭವಿಷ್ಯ ರೂಪಿಸುವ ಅಗತ್ಯವಿದೆ ಎಂದೂ ಜಯ್ ಶಾ ತಿಳಿಸಿದ್ದಾರೆ.

Ad Widget
Continue Reading

ಅಪರಾಧ

Hasana-ಲಕ್ಷಾಂತರ ರೂಪಾಯಿ ಚಿನ್ನಾಭರಣ ಧರಿಸಿದ್ದ ವಿವಾಹಿತ ಮಹಿಳೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಸಾವಿನ ನಾಟಕವಾಡಿ ಪ್ರಿಯಕರನ ಜತೆ ಪರಾರಿಗೆ ಯತ್ನ

Published

on

Ad Widget

Ad Widget

Ad Widget

Ad Widget

ಪ್ರಿಯಾಂಕ (29) ಎಂಬ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದ್ದು, ಸಾವಿನ ನಾಟಕವಾಡಿ ಪ್ರಿಯಕರನೊಂದಿಗೆ ಜೀವನ ಆರಂಭಿಸಲು ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ.

Ad Widget

Ad Widget

Ad Widget

Ad Widget

ಹಾಸನ, ಫೆ.14: ಪ್ರಿಯಾಂಕ (29) ಎಂಬ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದ್ದು, ಸಾವಿನ ನಾಟಕವಾಡಿ ಪ್ರಿಯಕರನೊಂದಿಗೆ ಜೀವನ ಆರಂಭಿಸಲು ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ.

Ad Widget

Ad Widget alt="Ad Widget"/>

Ad Widget

ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಲ್ಕೆರೆ ಸಮೀಪ ನಡೆದಿತ್ತು. ಕೆರೆ ಬಳಿ ವ್ಯಾನಿಟಿ ಬ್ಯಾಗ್, ಚಪ್ಪಲಿ ಹಾಗೂ ಬಟ್ಟೆಗಳು ಪತ್ತೆಯಾಗಿದ್ದರಿಂದ ದುಷ್ಕರ್ಮಿಗಳು ಕೊಲೆ ಮಾಡಿ ಚಿನ್ನಾಭರಣ ದೋಚಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಪ್ರಕರಣ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿತ್ತು.

Ad Widget

Ad Widget <> Ad Widget

ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಯಲಿಯೂರು ಗ್ರಾಮದ ನಿವಾಸಿಯಾಗಿರುವ ಪ್ರಿಯಾಂಕ, ಫೆಬ್ರವರಿ 12ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಬಂಧಿಕರ ಮದುವೆಗೆ ಬಂದಿದ್ದಳು. ಬಳಿಕ ಆಕೆ ಕಾಣೆಯಾಗಿದ್ದರಿಂದ ಕುಟುಂಬಸ್ಥರು ಆತಂಕಗೊಂಡಿದ್ದರು.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಶವ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಸ್ಥಳೀಯರು ಹಾಗೂ ಕುಟುಂಬಸ್ಥರಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Ad Widget

Ad Widget

ಆದರೆ ತನಿಖೆ ವೇಳೆ ಚಕಿತಗೊಳಿಸುವ ಸಂಗತಿ ಬೆಳಕಿಗೆ ಬಂದಿದೆ. ಪ್ರಿಯಾಂಕ ಜೀವಂತವಾಗಿದ್ದು, ತಾನು ಕೊಲೆಯಾಗಿರುವಂತೆ ಬಿಂಬಿಸಲು ಪೂರ್ವಯೋಜಿತವಾಗಿ ನಾಟಕ ರೂಪಿಸಿದ್ದಳು ಎಂಬುದು ತಿಳಿದುಬಂದಿದೆ. ಬಿಹಾರ ಮೂಲದ ವ್ಯಕ್ತಿಯೊಬ್ಬನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಆಕೆ, ಆತನೊಂದಿಗೆ ಸಂಸಾರ ನಡೆಸುವ ಉದ್ದೇಶದಿಂದಲೇ ಕುಟುಂಬದಿಂದ ದೂರವಾಗಲು ಈ ಯೋಜನೆ ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಪ್ರಿಯಾಂಕ ತನ್ನ ಪ್ರಿಯಕರನೊಂದಿಗೆ ಕುಣಿಗಲ್‌ನಲ್ಲಿ ಪತ್ತೆಯಾಗಿದ್ದು, ಪೊಲೀಸರ ವಶದಲ್ಲಿದ್ದಾಳೆ. ಪ್ರಕರಣದ ಮುಂದಿನ ಕಾನೂನು ಕ್ರಮಗಳ ಬಗ್ಗೆ ತನಿಖೆ ಮುಂದುವರಿದಿದೆ. ಈ ಘಟನೆ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ನಾಪತ್ತೆ ಪ್ರಕರಣಗಳ ತನಿಖೆಯಲ್ಲಿ ಪೊಲೀಸರ ಎಚ್ಚರಿಕೆಗೆ ಮತ್ತೊಂದು ಉದಾಹರಣೆಯಾಗಿ ಪರಿಣಮಿಸಿದೆ.

Ad Widget
Continue Reading

ಕ್ರೈಂ

New Year’s Eve-ಹೊಸ ವರ್ಷದ ಮಧ್ಯರಾತ್ರಿ ಪ್ರಿಯತಮೆಯಿಂದ ಪ್ರಿಯಕರನಿಗೆ ಚಾಕು ಇರಿತ :ಪ್ರಿಯಕರನ ಸ್ಥಿತಿ ಗಂಭೀರ

Published

on

Ad Widget

Ad Widget

Ad Widget

Ad Widget

ಹಾಸನ ನಗರದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ ಗೇಟ್‌ನಲ್ಲಿ ಹೊಸ ವರ್ಷದ ತಡರಾತ್ರಿ ಪ್ರಿಯಕರನಿಗೆ ಪ್ರಿಯತಮೆಯಿಂದ ಚಾಕು ಇರಿತ ನಡೆದ ಘಟನೆ ನಡೆದಿದೆ.

Ad Widget

Ad Widget

Ad Widget

Ad Widget

ಹಾಸನ ನಗರದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ ಗೇಟ್‌ನಲ್ಲಿ ಹೊಸ ವರ್ಷದ ತಡರಾತ್ರಿ ಪ್ರಿಯಕರನಿಗೆ ಪ್ರಿಯತಮೆಯಿಂದ ಚಾಕು ಇರಿತ ನಡೆದ ಘಟನೆ ನಡೆದಿದೆ.

Ad Widget

Ad Widget alt="Ad Widget"/>

Ad Widget

ಮನುಕುಮಾರ್ (25) ಪ್ರೇಯಸಿಯಿಂದ ಚಾಕು ಇರಿತಕ್ಕೊಳಗಾದ ಪ್ರಿಯಕರ.

Ad Widget

Ad Widget <> Ad Widget

ಹಾಸನ ತಾಲ್ಲೂಕಿನ ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ ಹಾಗೂ ಭವಾನಿ ಇಬ್ಬರು ಪ್ರೀತಿಸುತ್ತಿದ್ದರು.ಇಬ್ಬರೂ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು.

ಘಟನೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!