Connect with us

ವರದಿಗಳು

ಇತಿಹಾಸ ಪ್ರಸಿದ್ಧ ಶರವೂರು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರ: ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಉದ್ಯಮಿ ಕೊಡುಗೈ ದಾನಿ ಕನ್ಯಾನ ಸದಾಶಿವ ಶೆಟ್ಟಿ – ಅಧ್ಯಕ್ಷರಾಗಿ ಎಂ.ಗೋಪಾಲಕೃಷ್ಣ ಪಡ್ಡಿಲ್ಲಾಯ

Published

on



Ad Widget

Ad Widget

Ad Widget

Ad Widget

ಕಡಬ: ರಾಜ್ಯದಲ್ಲಿ ಆದಾಯದಲ್ಲಿ ನಂ.1 ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವಿರುವ ಕಡಬ ತಾಲೂಕಿನ ಮತ್ತೊಂದು ‘ಎ’ ದರ್ಜೆಯ ದೇವಸ್ಥಾನವಾದ ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಎಂ.ಗೋಪಾಲಕೃಷ್ಣ ಪಡ್ಡಿಲ್ಲಾಯ ಆಯ್ಕೆಯಾಗಿದ್ದು, ಪ್ರಖ್ಯಾತ ಉದ್ಯಮಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಗೌರವಾಧ್ಯಕ್ಷರಾಗಿದ್ದಾರೆ.

Ad Widget

Ad Widget

Ad Widget

Ad Widget

ಹಲವು ದೇಶಗಳಿಗೆ ರಾಸಾಯನಿಕ ಗೊಬ್ಬರ ಹಾಗೂ ಔಷಧಗಳನ್ನು ಉತ್ಪಾದಿಸಿ, ಪೂರೈಕೆ ಮಾಡುವ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯನ್ನು ಹುಟ್ಟುಹಾಕಿದ ಯಶಸ್ವಿ ಕೈಗಾರಿಕೋದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸದಾಶಿವ ಶೆಟ್ಟಿಯವರು ಕೇರಳದ ಮಧೂರು ದೇವಸ್ಥಾನ ಬ್ರಹ್ಮಕಲಶೋತ್ಸವದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರತಿಷ್ಠಿತ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.)ನ ಗೌರವಾಧ್ಯಕ್ಷರೂ ಆಗಿರುವ ಸದಾಶಿವ ಶೆಟ್ಟಿಯವರು ತುಳುನಾಡಿನ ಎಲ್ಲಾ ದೈವ ದೇವಸ್ಥಾನಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತನ್ನಿಂದಾದ ಸಹಕಾರ ಮಾಡಿರುವ ಮಹಾನ್ ವ್ಯಕ್ತಿತ್ವ.

Ad Widget

Ad Widget

Ad Widget alt="Ad Widget"/>

Ad Widget

ಶರವೂರು ದೇವಸ್ಥಾನದ ರಾಜಗೋಪುರ ಹಾಗೂ ಮಹಾದ್ವಾರದ ಶಿಲಾನ್ಯಾಸ ಕೂಡ ಇವರ ಅಮೃತ ಹಸ್ತದಿಂದಲೇ ನೆರವೇರಿರುತ್ತದೆ.ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಒಬ್ಬ ಖ್ಯಾತ ಉದ್ಯಮಿ, ದಾನಿ ಮತ್ತು ಸಮಾಜ ಸೇವಕರಾಗಿದ್ದು, ಇವರು ಕಾಸರಗೋಡು ಜಿಲ್ಲೆಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಲ್ಲಿ, ವಿಶೇಷವಾಗಿ ಶಿಲಾಮಯ ಮಹಾದ್ವಾರ ನಿರ್ಮಾಣಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡುವ ಮೂಲಕ ಪ್ರಮುಖ ಪಾತ್ರ ವಹಿಸಿದ್ದರು.

Ad Widget

Ad Widget <> Ad Widget

ಇದೀಗ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆಯಲಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಗೂ ಆಯ್ಕೆಯಾಗಿದ್ದಾರೆ. ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಕಡಬ ತಾಲೂಕಿನಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿರೋದು ಇದೇ ಮೊದಲು.



Ad Widget

ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಧ್ಯಕ್ಷರಾಗಿ ಯಂ.ಗೋಪಾಲಕೃಷ್ಣ ಪಡ್ಡಿಲ್ಲಾಯ : ಯಂ.ಗೋಪಾಲಕೃಷ್ಣ ಪಡ್ಡಿಲ್ಲಾಯ ರವರು 2005 ರಿಂದ 2011 ರ ತನಕ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ, 2007 ರಲ್ಲಿ ಶರವೂರಿನ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ನೇತೃತ್ವವನ್ನು ಕೂಡ ವಹಿಸಿದ್ದರು.ಉದ್ಯಮಿಯಾಗಿರುವ ಯಂ ಗೋಪಾಲಕೃಷ್ಣ ಪಡ್ಡಿಲ್ಲಾಯ ರವರು ಆಲಂಕಾರಿನ ದೇವಿಪ್ರಸಾದ್ ಹಾರ್ಡ್ ವೇರ್ ನ ಮಾಲಕರಾಗಿ ಅನೇಕ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮುಖಂಡರಾಗಿ, ಆಲಂಕಾರು ಆಯ್ಯಪ್ಪ ಭಜನಾ ಮಂದಿರದ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಆಲಂಕಾರು ಗ್ರಾಮದ ತೋಟಂತ್ತಿಲ ಎಂಬಲ್ಲಿ ವಾಸವಾಗಿದ್ದಾರೆ.

Ad Widget

Ad Widget

“ಹಿರಿಯರೂ, ಮಾರ್ಗದರ್ಶಕರೂ, ಆತ್ಮೀಯರೂ ಆದ ಡಾ. ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರು ನಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷರಾಗಿ ಒಪ್ಪಿಕೊಂಡಿರುವುದು ನಮಗೆಲ್ಲರಿಗೂ ಅಪಾರ ಸಂತೋಷ ಹಾಗೂ ಮಹತ್ತರ ಗೌರವದ ವಿಷಯವಾಗಿದೆ.ನಮ್ಮ ದೇವಸ್ಥಾನದ ರಾಜಗೋಪುರ ಹಾಗೂ ಮಹಾದ್ವಾರದ ಶಿಲಾನ್ಯಾಸ ಅವರ ಅಮೃತಹಸ್ತದಿಂದ ನೆರವೇರಿದ್ದು, ದೇವಾಲಯದ ಜೀರ್ಣೋದ್ಧಾರದ ಕಾರ್ಯಗಳಲ್ಲಿ ಅವರು ಸದಾ ನಮಗೆ ಅಮೂಲ್ಯವಾದ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ.ಅಂತಹ ಮಹನೀಯ ವ್ಯಕ್ತಿ ನಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷರಾಗಿರುವುದು ನಮಗೆಲ್ಲರಿಗೂ ಅತ್ಯಂತ ಗೌರವ ಮತ್ತು ಹೆಮ್ಮೆಯ ಸಂಗತಿಯಾಗಿದೆ.

ಹಾಗೆಯೇ ಶ್ರೀ ಗೋಪಾಲಕೃಷ್ಣ ಪಡ್ಡಿಲ್ಲಾಯರು, ದೇವಾಲಯದ ಜೀರ್ಣೋದ್ಧಾರ ಕಾರ್ಯದ ಹಿಂದೆ ನಿಂತಿರುವ ಪ್ರಮುಖ ಪ್ರೇರಕಶಕ್ತಿ. ಬ್ರಹ್ಮಕಲಶೋತ್ಸವದಂತಹ ಮಹತ್ವದ ಧಾರ್ಮಿಕ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದ ಅನುಭವ ಹೊಂದಿರುವ ಅವರು, ದೇವಾಲಯದ ಭವಿಷ್ಯವನ್ನು ದೂರದೃಷ್ಟಿಯಿಂದ ಆಲೋಚಿಸಿ, ಜೀರ್ಣೋದ್ಧಾರದ ಅಗತ್ಯವನ್ನು ಮೊದಲೇ ಗುರುತಿಸಿ, ಈ ಮಹತ್ತರ ಕಾರ್ಯಕ್ಕೆ ಸ್ವತಃ ಮುಂದಾಳತ್ವ ವಹಿಸಿದವರು.ಈ ಇಬ್ಬರು ಶ್ರೇಷ್ಠ ನಾಯಕರ ಮಾರ್ಗದರ್ಶನದಲ್ಲಿ ಬ್ರಹ್ಮಕಲಶೋತ್ಸವವು ಅತ್ಯಂತ ವಿಜೃಂಭಣೆಯಿಂದ ಹಾಗೂ ಸುವ್ಯವಸ್ಥಿತವಾಗಿ ನಡೆಯಲಿದೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ”

ಡಾ. ಹೇಮಂತ್ ರೈ ಮನವಳಿಕೆಗುತ್ತು,ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಶ್ರೀ ಕ್ಷೇತ್ರ ಶರವೂರು

“ಶ್ರೀ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ರಾವ್ ನಗ್ರಿ:

ಮುಂಬರುವ ಬ್ರಹ್ಮಕಲಶೋತ್ಸವವು ದೇವಸ್ಥಾನ ಮತ್ತು ಸಮಸ್ತ ಭಕ್ತರಿಗೆ ಒಂದು ಪವಿತ್ರ ಹಾಗೂ ಐತಿಹಾಸಿಕ ಮಹತ್ವ ಹೊಂದಿದ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಅದನ್ನು ಅತ್ಯಂತ ಭಕ್ತಿಭಾವ, ಶಿಸ್ತು ಹಾಗೂ ಸಮೂಹ ಸಹಕಾರದೊಂದಿಗೆ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಪ್ರಖ್ಯಾತ ಉದ್ಯಮಿ, ಡಾ. ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಒಪ್ಪಿಕೊಂಡಿರುವುದು ದೇವಸ್ಥಾನಕ್ಕೆ ಮಹತ್ತರ ಶಕ್ತಿ ಮತ್ತು ಹೆಮ್ಮೆಯ ವಿಷಯವಾಗಿದ್ದು, ಅವರ ಅಪಾರ ಅನುಭವ, ಮಾರ್ಗದರ್ಶನ ಮತ್ತು ಧಾರ್ಮಿಕ ನಿಷ್ಠೆ ದೇವಸ್ಥಾನದ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕಾರ್ಯಗಳಿಗೆ ಸದಾ ಪ್ರೇರಣೆಯಾಗಿದೆ ಎಂದು ಅವರು ಪ್ರಶಂಸಿಸಿದರು.

ಸುಬ್ರಹ್ಮಣ್ಯ ರಾವ್ ನಗ್ರಿ

ಹಾಗೆಯೇ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಗೋಪಾಲಕೃಷ್ಣ ಪಡ್ಡಿಲ್ಲಾಯರು ತಮ್ಮ ದೂರದೃಷ್ಟಿ, ನಾಯಕತ್ವ ಮತ್ತು ಸಮರ್ಪಣೆಯಿಂದ ಈ ಮಹತ್ವದ ಧಾರ್ಮಿಕ ಕಾರ್ಯದ ಹೊಣೆ ಹೊತ್ತಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಗೌರವಾಧ್ಯಕ್ಷರು ಹಾಗೂ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಬ್ರಹ್ಮಕಲಶೋತ್ಸವವು ಅತ್ಯಂತ ವಿಜೃಂಭಣೆಯಿಂದ, ಸುವ್ಯವಸ್ಥಿತವಾಗಿ ಹಾಗೂ ಆತ್ಮಿಕವಾಗಿ ಸಾರ್ಥಕವಾಗಿ ನೆರವೇರುವುದೆಂಬ ಸಂಪೂರ್ಣ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

Ad Widget

ಅಂತರ ರಾಜ್ಯ

Blackmail-ದೋಸೆಯಲ್ಲಿ ಸತ್ತ ಇಲಿ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ದೂರು ನೀಡಿದ್ದ ಮಹಿಳೆಯಿಂದಲೇ ₹25 ಲಕ್ಷಕ್ಕೆ ಬ್ಲ್ಯಾಕ್‌ಮೇಲ್..!

Published

on



Ad Widget

Ad Widget

Ad Widget

Ad Widget

ಮುಂಬೈನ ಬೊರಿವಲಿ ಪ್ರದೇಶದ ಹೋಟೆಲ್‌ವೊಂದರಲ್ಲಿ ಮೈಸೂರು ಮಸಾಲೆ ದೋಸೆಯಲ್ಲಿ ಸತ್ತ ಇಲಿ ಪತ್ತೆಯಾದ ಪ್ರಕರಣಕ್ಕೆ ಇದೀಗ ಅಚ್ಚರಿಯ ತಿರುವು ಸಿಕ್ಕಿದೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ವೈರಲ್ ಮಾಡುವುದಾಗಿ ಬೆದರಿಸಿ ಹೋಟೆಲ್ ಮಾಲೀಕರಿಂದ ₹25 ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ, ದೂರು ನೀಡಿದ್ದ ಮಹಿಳೆಯನ್ನೇ ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

ಮುಂಬೈ: ಮುಂಬೈನ ಬೊರಿವಲಿ ಪ್ರದೇಶದ ಹೋಟೆಲ್‌ವೊಂದರಲ್ಲಿ ಮೈಸೂರು ಮಸಾಲೆ ದೋಸೆಯಲ್ಲಿ ಸತ್ತ ಇಲಿ ಪತ್ತೆಯಾದ ಪ್ರಕರಣಕ್ಕೆ ಇದೀಗ ಅಚ್ಚರಿಯ ತಿರುವು ಸಿಕ್ಕಿದೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ವೈರಲ್ ಮಾಡುವುದಾಗಿ ಬೆದರಿಸಿ ಹೋಟೆಲ್ ಮಾಲೀಕರಿಂದ ₹25 ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ, ದೂರು ನೀಡಿದ್ದ ಮಹಿಳೆಯನ್ನೇ ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಸೆ.24ರಂದು ಮಾನ್ಸಿ ಎಂಬ ಮಹಿಳೆ ತನ್ನ ಮಗುವಿನೊಂದಿಗೆ ಇಬ್ಬರು ಪುರುಷರ ಜತೆ ಬೊರಿವಲಿಯ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಮೈಸೂರು ಮಸಾಲೆ ದೋಸೆ ಆರ್ಡರ್ ಮಾಡಿದ್ದರು. ದೋಸೆ ತಿನ್ನುವ ಸಂದರ್ಭದಲ್ಲಿ ಅದರೊಳಗೆ ಸತ್ತ ಸಣ್ಣ ಇಲಿ ಪತ್ತೆಯಾಗಿದೆ ಎಂದು ಅವರು ಆರೋಪಿಸಿದ್ದರು.

Ad Widget

Ad Widget <> Ad Widget

ಮಾನ್ಸಿ ಅವರ ಹೇಳಿಕೆಯಂತೆ, ಅವರ ಸಹೋದರ ದೋಸೆಯ ಕೆಲವು ಭಾಗಗಳನ್ನು ಸೇವಿಸಿದ ಬಳಿಕ ಅದರೊಳಗೆ ಸತ್ತ ಇಲಿ ಇರುವುದನ್ನು ಗಮನಿಸಿದ್ದರು. ಇದರಿಂದ ಆಘಾತಗೊಂಡ ಅವರು ವಾಂತಿ ಮಾಡಿಕೊಂಡಿದ್ದರು. ಬಳಿಕ ಮಾನ್ಸಿ ಬೊರಿವಲಿ ಪೊಲೀಸ್ ಠಾಣೆಗೆ ಕರೆ ಮಾಡಿ ಘಟನೆ ಕುರಿತು ದೂರು ನೀಡಿದ್ದರು.



Ad Widget

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ಸೆ.28ರಂದು ಹೋಟೆಲ್‌ನ ಪರವಾನಗಿಯನ್ನು ಅಮಾನತುಗೊಳಿಸಿತ್ತು. ಇದರಿಂದ ಹೋಟೆಲ್ ಮುಚ್ಚುವ ಪರಿಸ್ಥಿತಿ ಎದುರಾಗಿತ್ತು.

Ad Widget

Ad Widget

₹25 ಲಕ್ಷಕ್ಕೆ ಬ್ಲ್ಯಾಕ್‌ಮೇಲ್
ವಿಡಿಯೋ ವೈರಲ್ ಆದ ಬಳಿಕ ಹೋಟೆಲ್ ಮಾಲೀಕರಿಗೆ ಬೆದರಿಕೆ ಕರೆಗಳು ಬರಲಾರಂಭಿಸಿದ್ದವು. ವಿಡಿಯೋವನ್ನು ಮತ್ತಷ್ಟು ವೈರಲ್ ಮಾಡುವುದಾಗಿ ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಸಿ ₹25 ಲಕ್ಷ ನೀಡುವಂತೆ ಒತ್ತಾಯಿಸಲಾಗಿತ್ತು ಎನ್ನಲಾಗಿದೆ.

ನಿರಂತರ ಬೆದರಿಕೆ ಮತ್ತು ಮಾನಸಿಕ ಕಿರುಕುಳದಿಂದಾಗಿ ಹೋಟೆಲ್ ಮಾಲೀಕರು ₹6 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ₹1 ಲಕ್ಷವನ್ನು ಮುಂಗಡವಾಗಿ ನಗದು ರೂಪದಲ್ಲಿ ನೀಡಿದ್ದರು.

ಹಣ ಪಡೆಯುವ ವೇಳೆ ರೆಡ್‌ಹ್ಯಾಂಡ್ ಆಗಿ ಬಂಧನ
ಸೆ.29ರಂದು ಹೋಟೆಲ್ ಮಾಲೀಕರು ಬೊರಿವಲಿ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಬಲೆ ಬೀಸಿ, ಮತ್ತಷ್ಟು ಹಣ ಪಡೆಯಲು ಮಹಿಳೆಯನ್ನು ಕರೆಸಿಕೊಂಡಿದ್ದರು. ಹಣ ಸ್ವೀಕರಿಸುತ್ತಿದ್ದ ವೇಳೆ ಪೊಲೀಸರು ಆಕೆಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ತನಿಖೆ ವೇಳೆ ಬಂಧಿತ ಮಹಿಳೆ ಬೇರೆ ಯಾರೂ ಅಲ್ಲ, ದೋಸೆಯಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂದು ದೂರು ನೀಡಿದ್ದ ಮಾನ್ಸಿ ಅಮಿತ್ ಎಂಬುದು ಬೆಳಕಿಗೆ ಬಂದಿದೆ. ಅವರು ಬೊರಿವಲಿಯ ಗೋರೆಗಾಂವ್ ಪ್ರದೇಶದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದು, ಬ್ಲ್ಯಾಕ್‌ಮೇಲ್‌ನಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿಸಿದ್ದಾರೆ.

Ad Widget
Continue Reading

ಅಂತರ ರಾಜ್ಯ

Premananda Ashram-ಪ್ರೇಮಾನಂದ ಆಶ್ರಮದ ಶಿಷ್ಯನ ಸಾವು ಪ್ರಕರಣಕ್ಕೆ ಟ್ವಿಸ್ಟ್: ರಕ್ತದ ಕಲೆ, ಸಿಸಿಟಿವಿ ದೃಶ್ಯಗಳ ಪರಿಶೀಲನೆ

Published

on



Ad Widget

Ad Widget

Ad Widget

Ad Widget

ಪ್ರೇಮಾನಂದ ಮಹಾರಾಜರ ಆಶ್ರಮದಲ್ಲಿ ಶಿಷ್ಯ ರಸಿಕ್ ದುಲಾರಿ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಪ್ರಕರಣದ ತನಿಖೆಯನ್ನು ಮಥುರಾ ಪೊಲೀಸರು ಚುರುಕುಗೊಳಿಸಿದ್ದಾರೆ. ಸೆ.25ರಂದು ನಡೆದ ಈ ಘಟನೆ ಆರಂಭದಲ್ಲಿ ಆತ್ಮಹತ್ಯೆ ಎಂದು ಪೊಲೀಸರು ಪರಿಗಣಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಗಳು ಹಾಗೂ ತನಿಖೆಯಲ್ಲಿ ಸಿಕ್ಕಿರುವ ಕೆಲವು ಮಾಹಿತಿಗಳಿಂದ ಪ್ರಕರಣವು ಅನೂಹ್ಯ ತಿರುವು ಪಡೆದಿದೆ.

Ad Widget

Ad Widget

Ad Widget

Ad Widget

ಮಥುರಾ: ಪ್ರೇಮಾನಂದ ಮಹಾರಾಜರ ಆಶ್ರಮದಲ್ಲಿ ಶಿಷ್ಯ ರಸಿಕ್ ದುಲಾರಿ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಪ್ರಕರಣದ ತನಿಖೆಯನ್ನು ಮಥುರಾ ಪೊಲೀಸರು ಚುರುಕುಗೊಳಿಸಿದ್ದಾರೆ. ಸೆ.25ರಂದು ನಡೆದ ಈ ಘಟನೆ ಆರಂಭದಲ್ಲಿ ಆತ್ಮಹತ್ಯೆ ಎಂದು ಪೊಲೀಸರು ಪರಿಗಣಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಗಳು ಹಾಗೂ ತನಿಖೆಯಲ್ಲಿ ಸಿಕ್ಕಿರುವ ಕೆಲವು ಮಾಹಿತಿಗಳಿಂದ ಪ್ರಕರಣವು ಅನೂಹ್ಯ ತಿರುವು ಪಡೆದಿದೆ.

Ad Widget

Ad Widget

Ad Widget alt="Ad Widget"/>

Ad Widget

ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 85 ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ರಸಿಕ್ ಅವರ ಕುಟುಂಬಸ್ಥರು, ಸ್ನೇಹಿತರು ಹಾಗೂ ಹಳೆಯ ಪರಿಚಯಸ್ಥರಿಂದಲೂ ಮಾಹಿತಿ ಪಡೆಯಲಾಗುತ್ತಿದೆ. ಆಶ್ರಮಕ್ಕೆ ಸೇರುವ ಮುನ್ನ ಅವರ ಜೀವನ ಹೇಗಿತ್ತು, ಬಳಿಕ ಅವರ ನಡೆ-ನುಡಿಯಲ್ಲಿ ಯಾವುದೇ ಬದಲಾವಣೆಯಾಗಿತ್ತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Ad Widget

Ad Widget <> Ad Widget

ಆಶ್ರಮಕ್ಕೆ ಸೇರುವವರ ವೈಯಕ್ತಿಕ ಮೊಬೈಲ್‌ಗಳನ್ನು ಪಡೆದುಕೊಂಡು, ಬದಲಿಗೆ ಆಶ್ರಮದ ವ್ಯವಸ್ಥೆಯಲ್ಲಿರುವ ಮೊಬೈಲ್ ಮತ್ತು ಸಿಮ್ ನೀಡಲಾಗುತ್ತಿತ್ತು ಎನ್ನಲಾಗಿದೆ. ಹೀಗೆ ಮೊಬೈಲ್ ಬದಲಾಯಿಸುವ ಅಗತ್ಯ ಏನಿತ್ತು, ಆ ಮೊಬೈಲ್‌ಗಳ ಬಳಕೆಯ ಮೇಲೆ ಯಾರಾದರೂ ನಿಗಾ ಇಡುತ್ತಿದ್ದರೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.



Ad Widget

ಆಶ್ರಮದಲ್ಲಿದ್ದವರು ಕುಟುಂಬದವರು ಹಾಗೂ ಸ್ನೇಹಿತರನ್ನು ಎಷ್ಟು ಬಾರಿ ಸಂಪರ್ಕಿಸುತ್ತಿದ್ದರು ಎಂಬುದನ್ನೂ ತನಿಖೆ ನಡೆಸಲಾಗುತ್ತಿದೆ. ರಸಿಕ್ ಅವರ ಹಳೆಯ ಮೊಬೈಲ್, ಹೊಸ ಸಿಮ್, ಕರೆಗಳ ವಿವರ ಹಾಗೂ ಸಂದೇಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Ad Widget

Ad Widget

ಸಾವಿಗೂ ಮುನ್ನ ಏನಾಗಿತ್ತು?

ರಸಿಕ್ ಕೊಠಡಿಯಿಂದ ಹೊರಬಂದಾಗಲೇ ಅವರ ಬಟ್ಟೆಯಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದವು ಎಂದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ ಎನ್ನಲಾಗಿದೆ. ನಂತರ ಅವರು ನಾಲ್ಕನೇ ಮಹಡಿಯ ಮೇಲ್ಛಾವಣಿಗೆ ತೆರಳಿದ್ದಾರೆ. ಅಲ್ಲಿ ಕೆಲಕಾಲ ಕುಳಿತುಕೊಂಡು, ಬಳಿಕ ಮಲಗಿದ್ದರು. ನಂತರ ಎದ್ದು ನಿಂತ ಕೆಲವೇ ಕ್ಷಣಗಳಲ್ಲಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.

ರಸಿಕ್ ಅವರ ದೇಹದಲ್ಲಿ, ವಿಶೇಷವಾಗಿ ತೊಡೆಸಂಧಿ ಭಾಗದಲ್ಲಿ ಗಂಭೀರ ಗಾಯವಾಗಿರುವುದು ತನಿಖೆಯಲ್ಲಿ ಗಮನಕ್ಕೆ ಬಂದಿದೆ. ಈ ಗಾಯ ಹೇಗೆ ಉಂಟಾಯಿತು ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಯಾವುದೇ ಮಾನಸಿಕ ಒತ್ತಡ ಅಥವಾ ಖಿನ್ನತೆಯಿಂದ ಬಳಲುತ್ತಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಕುರಿತು ಅವರು ಕುಟುಂಬದವರು ಅಥವಾ ಸ್ನೇಹಿತರ ಬಳಿ ಏನಾದರೂ ಹೇಳಿಕೊಂಡಿದ್ದರೇ ಎಂಬುದನ್ನು ಪೊಲೀಸರು ತಿಳಿದುಕೊಳ್ಳುತ್ತಿದ್ದಾರೆ.

ಇದಲ್ಲದೆ, ಸಾವಿಗೂ ಮುನ್ನ ಅವರು ಮದ್ಯ, ಮಾದಕ ವಸ್ತು ಅಥವಾ ಇತರ ಯಾವುದೇ ಮನಸ್ಸಿನ ಮೇಲೆ ಪರಿಣಾಮ ಬೀರುವ ವಸ್ತು ಸೇವಿಸಿದ್ದರೇ ಎಂಬುದನ್ನು ತಿಳಿಯಲು ಅವರ ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸಿಸಿಟಿವಿ ದೃಶ್ಯಗಳು, ಮೊಬೈಲ್ ದಾಖಲೆ, ವೈದ್ಯಕೀಯ ವರದಿ ಹಾಗೂ ವಿಚಾರಣೆ ವೇಳೆ ಸಿಕ್ಕ ಮಾಹಿತಿಗಳನ್ನು ಆಧರಿಸಿ ರಸಿಕ್ ಅವರ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪೊಲೀಸರು ಪತ್ತೆಹಚ್ಚಲು ಮುಂದಾಗಿದ್ದಾರೆ.

Ad Widget
Continue Reading

ಅಂತರ ರಾಜ್ಯ

Jnanesh kumar-ವಿಪಕ್ಷಗಳ ರಾಜೀನಾಮೆ ಒತ್ತಾಯದ ನಡುವೆ ಜ್ಞಾನೇಶ್ ಕುಮಾರ್ ಛತ್ತೀಸ್‌ಗಢ ಭೇಟಿ ಮುಂದೂಡಿಕೆ

Published

on



Ad Widget

Ad Widget

Ad Widget

Ad Widget

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಅವರು ಕೈಗೊಳ್ಳಬೇಕಿದ್ದ ಎರಡು ದಿನಗಳ ಛತ್ತೀಸ್‌ಗಢ ಭೇಟಿಯನ್ನು ಮುಂದೂಡಲಾಗಿದೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಅವರು ಕೈಗೊಳ್ಳಬೇಕಿದ್ದ ಎರಡು ದಿನಗಳ ಛತ್ತೀಸ್‌ಗಢ ಭೇಟಿಯನ್ನು ಮುಂದೂಡಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಅಕ್ಟೋಬರ್ 7 ಮತ್ತು 8ರಂದು ಜ್ಞಾನೇಶ್ ಕುಮಾರ್ ಅವರು ಛತ್ತೀಸ್‌ಗಢಕ್ಕೆ ಭೇಟಿ ನೀಡಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಈ ಭೇಟಿಯನ್ನು ಮುಂದೂಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Ad Widget

Ad Widget <> Ad Widget

ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡಿಸುವ ಸಾಧ್ಯತೆ ಇದೆ ಎಂಬ ವದಂತಿಗಳು ಹರಿದಾಡುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಇದೇ ವೇಳೆ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ.



Ad Widget

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳ ಆಕ್ರೋಶ
ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ (SIR) ಹಾಗೂ ಅರ್ಜಿ ನಮೂನೆ-6ರಲ್ಲಿನ ಮಾರ್ಪಾಡು ಸೇರಿದಂತೆ ಹಲವು ವಿಚಾರಗಳಲ್ಲಿ ಚುನಾವಣಾ ಆಯೋಗ ಟೀಕೆಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ವಿಪಕ್ಷಗಳು ಒತ್ತಾಯಿಸುತ್ತಿವೆ.

Ad Widget

Ad Widget

ದೇವಾಲಯ, ಜಲಪಾತಗಳಿಗೆ ಭೇಟಿ ನೀಡಬೇಕಿತ್ತು
ಎರಡು ದಿನಗಳ ಛತ್ತೀಸ್‌ಗಢ ಪ್ರವಾಸದ ವೇಳೆ ಜ್ಞಾನೇಶ್ ಕುಮಾರ್ ಅವರು ದಾಂತೇವಾಡದಲ್ಲಿರುವ ದಾಂತೇಶ್ವರಿ ದೇವಾಲಯ, ಬಸ್ತಾರ್‌ನ ಚಿತ್ರಕೋಟೆ ಜಲಪಾತ ಹಾಗೂ ಕಬೀರ್ ಧಾಮ್ ಜಿಲ್ಲೆಯ ಭೋರಂಡಿಯೊ ದೇವಾಲಯಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು.

ಈ ಭೇಟಿಯ ಹಿನ್ನೆಲೆಯಲ್ಲಿ ಛತ್ತೀಸ್‌ಗಢ ಸರ್ಕಾರವು ಜ್ಞಾನೇಶ್ ಕುಮಾರ್ ಅವರಿಗೆ ರಾಜ್ಯ ಅತಿಥಿಯ ಗೌರವ ನೀಡಲು ನಿರ್ಧರಿಸಿತ್ತು. ಅವರನ್ನು ಸ್ವಾಗತಿಸುವುದು ಹಾಗೂ ಭದ್ರತಾ ವ್ಯವಸ್ಥೆ ಕೈಗೊಳ್ಳಲು ರಾಯ್‌ಪುರ ಜಿಲ್ಲಾಡಳಿತ, ಪೊಲೀಸರು ಮತ್ತು ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣ ಪ್ರಾಧಿಕಾರಗಳು ಸಿದ್ಧತೆ ಆರಂಭಿಸಿದ್ದವು. ಇದೀಗ ಭೇಟಿಯನ್ನು ಮುಂದೂಡಲಾಗಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading