Connect with us

ಬಿಗ್ ನ್ಯೂಸ್

Vikram Sood | ಟ್ರಂಪ್ ತಾನಾಡಿದ್ದೇ ಕಾನೂನು ಅಂತ ವರ್ತಿಸ್ತಿದ್ದಾರೆ : ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ – ರಷ್ಯಾ-ಭಾರತ- ಚೀನಾ ಸೇರಿದ್ರೆ ಬಲಾಢ್ಯ ಶಕ್ತಿಯಾಗಲಿದೆ : ಚೀನಾ ಜೊತೆ ಪಾಕ್ ನ ಕಂಪೇರ್ ಮಾಡಬಾರದು : ಈಗಿನ ಸನ್ನಿವೇಶ ಬಳಸಿಕೊಳ್ಳದಿದ್ದರೆ ಮುಂದೆಂದೂ ಮೇಲೇಲಾರೆವು : ಲಿಟ್ ಫೆಸ್ಟ್ ನಲ್ಲಿ ಮಾಜಿ ‘ರಾ’ ಮುಖ್ಯಸ್ಥ ವಿಕ್ರಮ್ ಸೂದ್ : ರಾಹುಲ್ ಗಾಂಧಿ ಹೇಳಿ ಟ್ರೋಲ್ ಆಗಿದ್ದ ಹೇಳಿಕೆಯನ್ನೇ ಪುನರುಚ್ಛರಿಸಿದ ‘ರಾ’ ಚೀಫ್..!

Published

on

Ad Widget

Ad Widget

Ad Widget

Ad Widget

ಮಂಗಳೂರು, ಜ.10 : ಪಾಕಿಸ್ತಾನ, ಚೀನಾ, ಅಮೆರಿಕದ ಬಾಂಧವ್ಯ ವಿಚಾರದಲ್ಲಿ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್ Vikram Sood ಮಾತನಾಡಿದ್ದು, ಸದ್ಯದ ಸನ್ನಿವೇಶದಲ್ಲಿ ವೈರಿ ರಾಷ್ಟ್ರ ಎಂದುಕೊಂಡಿರುವ ಚೀನಾ ಜೊತೆಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದು ಒಳ್ಳೆಯದು, ಆ ರೀತಿಯ ಸಂಬಂಧ ಸಾಧಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಇದೇ ಹೇಳಿಕೆ ನೀಡಿ ಅದು ಭಾರಿ ಟ್ರೋಲ್ ಆಗಿತ್ತು. ಇದೇ ಹೇಳಿಕೆಯನ್ನು ಮಾಜಿ ‘ರಾ’ ಚೀಫ್ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರಿನಲ್ಲಿ ನಡೆದ ಲಿಟ್ ಫೆಸ್ಟ್ ಎಂಟನೇ ಆವೃತ್ತಿಯಲ್ಲಿ ಗ್ರೇಟ್ ಪವರ್ ಗೇಮ್ಸ್- ವೆಸ್ಟರ್ನ್ ಡಿಕ್ಲೈನ್ ಟು ಈಸ್ಟರ್ನ್ ಎಸೆಂಟ್ ಎಂಬ ವಿಚಾರದಲ್ಲಿ ನಡೆದ ಗೋಷ್ಟಿಯಲ್ಲಿ ಮಾತನಾಡಿದರು. ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಿಂದಾಗಿರುವ ಜಾಗತಿಕ ವೈಪರೀತ್ಯಗಳ ನಡುವೆ ಭಾರತ ಸಮತೋಲಿತ ಹೆಜ್ಜೆ ಇಡಬೇಕಾಗಿದೆ. ಅದರಲ್ಲೂ ಚೀನಾ ಜೊತೆಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದು ಬಹುಮುಖ್ಯವಾಗಿದೆ ಎಂದರು.

Ad Widget

Ad Widget alt="Ad Widget"/>

Ad Widget

ಹಾಲಿ ಸನ್ನಿವೇಶದ ಬಗ್ಗೆ ಮಾತನಾಡಿದ ಅವರು, ಅಮೆರಿಕ ಮತ್ತು ಚೀನಾ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಭಾರತವನ್ನು ಆರ್ಥಿಕವಾಗಿ ಕಂಗೆಡಿಸುವುದೇ ಅವರ ಉದ್ದೇಶ. ಯಾವುದೇ ರಾಷ್ಟ್ರ ಕೂಡ ಇತರರಿಗೆ ಪುಕ್ಕಟೆಯಾಗಿ ಏನನ್ನೂ ಕೊಡುವುದಿಲ್ಲ. ಅಂತಾರಾಷ್ಟ್ರೀಯ ಆಡಳಿತದಲ್ಲಿ ನಾವು ಗಮನಿಸಬೇಕಾದ್ದು ಏನಂದ್ರೆ, ಯಾವುದೇ ದೇಶವಾದ್ರೂ ಆರ್ಥಿಕ ಸಾಮರ್ಥ್ಯ, ಸೇನಾಬಲ ಮತ್ತು ಅದಕ್ಕೆ ತಕ್ಕಂತೆ ಶಕ್ತಿಯನ್ನು ಹೊಂದಿರುವುದು. ನನ್ನ ಗ್ರೇಟ್ ಪವರ್ ಗೇಮ್ಸ್ ಪುಸ್ತಕದ ಒಂದನೇ ಚಾಪ್ಟರ್ ಆರ್ಥಿಕ ಶಕ್ತಿಯಿಂದ ಜಗತ್ತನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಹೇಳುತ್ತದೆ.

Ad Widget

Ad Widget <> Ad Widget

ಚೀನಾ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಅಮೆರಿಕದಲ್ಲಿದ್ದ ಆ ಶಕ್ತಿಯನ್ನು ತನ್ನತ್ತ ಸೆಳೆದುಬಿಟ್ಟಿದೆ. ಉತ್ಪಾದನೆಯಲ್ಲಿ ಚೀನಾ ಈಗ ಜಾಗತಿಕ ಶಕ್ತಿಯಾಗಿ ಬೆಳೆದು ನಿಂತಿದೆ. ಇದರ ನಡುವೆ, ಗಾಳಿಗೆ ಸಿಲುಕಿದ್ದು ಯುಕ್ರೇನ್, ಆನಂತರ ಇಸ್ರೇಲ್, ಈಗ ವೆನಿಜುವೆಲಾ. ಸದ್ಯಕ್ಕೆ ಇಡೀ ಜಗತ್ತನ್ನು ಆಕರ್ಷಿಸುವ ರೀತಿಯ ಪಾಲಿಸಿ ನಮ್ಮಲ್ಲಿದೆ. ಆರ್ಥಿಕವಾಗಿ, ಭೌಗೋಳಿಕವಾಗಿ, ಸೈದ್ಧಾಂತಿಕವಾಗಿ ಮತ್ತು ಧಾರ್ಮಿಕವಾಗಿ ನಮ್ಮದೇ ಆಗಿರುವ ಒಂದು ಸಿದ್ಧ ಮಾದರಿ ಇದೆ. ನಮ್ಮಲ್ಲಿಯೂ ಎಲ್ಲ ಸಮಸ್ಯೆಯನ್ನೂ ಪರಿಹರಿಸಬಲ್ಲ ನಾಯಕರಿದ್ದಾರೆ.

ಅಮೆರಿಕದ ಅಧ್ಯಕ್ಷರನ್ನು ಉಲ್ಲೇಖಿಸುತ್ತ ಅವರೀಗ ಅಂತಾರಾಷ್ಟ್ರೀಯ ಕಾನೂನನ್ನು ಪಾಲಿಸುತ್ತಿಲ್ಲ. ವೆನಿಜುವೆಲಾ ಬಳಿಕ ಗ್ರೀನ್ ಲ್ಯಾಂಡ್, ಯುರೋಪನ್ನು ಫಿನಿಶ್ ಮಾಡುವ ರೀತಿ ಮಾತನಾಡುತ್ತಿದ್ದಾರೆ. ತಾನು ಆಡಿದ್ದೇ ಕಾನೂನು ಅನ್ನುವ ರೀತಿ ಮಾಡುತ್ತಿದ್ದಾರೆ. ಅಂಥ ಮನುಷ್ಯನ ಜೊತೆಗೆ ಮಾತನಾಡುವುದೇನಿದೆ ಎಂದು ಪ್ರಶ್ನಿಸಿದ ವಿಕ್ರಮ್ ಸೂದ್, ಅದರ ಬದಲು ನಮ್ಮ ಜೊತೆಗೆ ನಿಲ್ಲುವ ನೂರಾರು ರಾಷ್ಟ್ರಗಳಿವೆ, ನ್ಯೂಕ್ಲಿಯರ್ ಪವರ್, ದೊಡ್ಡ ಆರ್ಮಿ ಇದ್ದಷ್ಟಕ್ಕೆ ಯುದ್ಧ ಗೆಲ್ಲುವುದಕ್ಕಾಗುವುದಿಲ್ಲ. ಹೀಗಾಗಿ ಸದ್ಯದ ಸನ್ನಿವೇಶದಲ್ಲಿ ಭಾರತ ಚೀನಾದ ಜೊತೆಗೆ ಒಳ್ಳೆಯ ಸಂಬಂಧ ಕಾಯ್ದುಕೊಳ್ಳಬೇಕಿದೆ ಎಂದರು.

Ad Widget

Ad Widget

ಜಾಗತಿಕ ಯುದ್ಧದ ಬಳಿಕ ಅಮೆರಿಕವು ವಿಯೆಟ್ನಾಮ್ ಪರವಾಗಿ ನಿಂತು ಅದನ್ನು ಮೂಲೆಗುಂಪು ಮಾಡಿತ್ತು. ಆನಂತರ ಅಫ್ಘಾನಿಸ್ತಾನದಲ್ಲಿ ಶಾಂತಿ ಕಾಪಾಡುತ್ತೇನೆಂದು ಹೇಳಿ ಅಲ್ಲಿಯೂ ನೆಲಸಮ ಮಾಡಿತ್ತು. ಈಗ ಉಕ್ರೇನ್ ಜೊತೆಗೆ ನಿಂತು ಅದನ್ನೂ ಅವರದೇ ನೆಲದಲ್ಲೇ ಸಾಯುವಂತೆ ಮಾಡುತ್ತಿದೆ. ಇಂಥವರನ್ನು ಯಾರೀಗ ನಂಬುತ್ತಾರೆ, ನಾವು ಅಮೆರಿಕವನ್ನು ನಂಬಬೇಕೋ ಅಥವಾ ಚೀನಾವನ್ನು ನಂಬುವುದು ಒಳ್ಳೆಯದೋ ಎಂದು ಪುನರ್ ಚಿಂತಿಸುವುದಕ್ಕಿದು ಸಕಾಲ. ಚೀನಾ ಯಾವತ್ತಿದ್ದರೂ ನಮ್ಮ ನೆರೆಯ ರಾಷ್ಟ್ರ ಎನ್ನುವುದನ್ನು ಅಲ್ಲಗಳೆಯಲು ಆಗದು. ಚೀನಾ, ರಷ್ಯಾ, ಭಾರತ ಜೊತೆಗೂಡಿದರೆ ಅತಿ ದೊಡ್ಡ ಶಕ್ತಿಯಾಗಲು ಸಾಧ್ಯ. ಇದ್ಯಾವುದೂ ಒಂದು ರಾತ್ರಿಗೆ ಆಗಿ ಹೋಗುವುದಲ್ಲ. ಆದರೆ ಪಾಕಿಸ್ತಾನದ ಜೊತೆ ಚೀನಾವನ್ನು ಹೋಳಿಕೆ ಮಾಡಬಾರದು. ಪಾಕಿಸ್ತಾನದ ಜೊತೆಗೆ ಯಾವುದೇ ಮಾತುಕತೆ, ಸಂಬಂಧ ಸರಿಪಡಿಸುವುದು ಅಗತ್ಯವಿಲ್ಲ. ಮುಸ್ಲಿಮೇತರರನ್ನು ಗುರಿಯಾಗಿಸಿ ಯುದ್ಧ ನಡೆಸಿದರೂ ಅವೆಲ್ಲವೂ ನಮ್ಮ ಪ್ರಾಬಲ್ಯದ ಮುಂದೆ ನಗಣ್ಯ ಎಂದು ಹೇಳಿದರು.

ನಮ್ಮದು ಸಮರ್ಥ ರಾಷ್ಟ್ರವಾಗಬೇಕಿದ್ದರೆ ಸಮರ್ಥ ಸರಕಾರ ಇರಬೇಕು, ಸಮರ್ಥ ವಿಪಕ್ಷವೂ ಇರಬೇಕು. ನಾವೀಗ ಎಲ್ಲದರಲ್ಲೂ ಸಾಮರ್ಥ್ಯ ವೃದ್ಧಿಸಿಕೊಂಡಿದ್ದೇವೆ, ನಾವು ಬಾಲಾಕೋಟ್, ಉರಿ ದಾಳಿ ಮತ್ತು ಆಪರೇಶನ್ ಸಿಂಧೂರ್ ಮೂಲಕ ಅದನ್ನು ತೋರಿಸಿದ್ದೇವೆ. 2001, 2006 ಅಥವಾ 2008ರ ರೀತಿಯ ದಾಳಿಗಳು ಇನ್ನೆಂದೂ ಮರುಕಳಿಸಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಬದಲಾಗಿದ್ದೇವೆ. ನಮ್ಗೆ ಗಂಭೀರ ಪೆಟ್ಟು ಬಿದ್ದ ಸಂದರ್ಭದಲ್ಲಿ ಅದಕ್ಕಿಂತ ಸಮರ್ಥ ಮರುದಾಳಿಯೂ ಅಗತ್ಯ ಎಂದು ಹೇಳಿದ ವಿಕ್ರಮ್ ಸೂದ್, ಈಗಿನ ಸನ್ನಿವೇಶ ಎಲ್ಲ ವಿಚಾರದಲ್ಲೂ ಸಕಾರಾತ್ಮಕವಾಗಿದ್ದು ಅದನ್ನು ಬಳಸಿಕೊಂಡು ಯುರೋಪ್, ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಜೊತೆಗೆ ಸಂಬಂಧ ಬೆಳೆಸಬೇಕಿದೆ. ಈಗಿನ ಸನ್ನಿವೇಶವನ್ನು ನಾವು ಬಳಸಿಕೊಳ್ಳದಿದ್ದರೆ ಮುಂದೆ ಯಾವತ್ತೂ ಮೇಲೇಳಲು ಸಾಧ್ಯವಿಲ್ಲ. ಡೆಮೋಗ್ರಫಿ ಈಗ ನಮ್ಮ ಕಡೆಗಿದೆ ಎನ್ನುವುದನ್ನು ಅರಿತುಕೊಂಡು ಮುಂದೆ ಸಾಗಬೇಕಿದೆ ಎಂದು ವಿಕ್ರಮ್ ಸೂದ್ ಹೇಳಿದರು. ಡಾ.ಶ್ರೀಪರ್ಣಾ ಪಾಠಕ್ ಸೆಷನ್ ನಡೆಸಿಕೊಟ್ಟರು.

Ad Widget
Click to comment

Leave a Reply

ಮಂಗಳೂರು

Mangalore-ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು: ಮನೆಯವರ ಜೊತೆ ತೆರಳಲು ಯುವತಿ ನಕಾರ..!

Published

on

Ad Widget

Ad Widget

Ad Widget

Ad Widget

ಮಂಗಳೂರಿನ ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜು ಆವರಣದಿಂದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮಹೀಂದ್ರಾ ಥಾರ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೇರಳಂನಲ್ಲಿ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದು, ಮನೆಯವರ ಜೊತೆ ತೆರಳಲು ತನಗೆ ಇಷ್ಟವಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.

Ad Widget

Ad Widget

Ad Widget

Ad Widget

ಮಂಗಳೂರು: ಮಂಗಳೂರಿನ ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜು ಆವರಣದಿಂದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮಹೀಂದ್ರಾ ಥಾರ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೇರಳಂನಲ್ಲಿ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದು, ಮನೆಯವರ ಜೊತೆ ತೆರಳಲು ತನಗೆ ಇಷ್ಟವಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.

Ad Widget

Ad Widget alt="Ad Widget"/>

Ad Widget

ಏನಿದು ಪ್ರಕರಣ?
ನ.19ರ ಗುರುವಾರ ಸಂಜೆ ಕಾಲೇಜು ಆವರಣದಿಂದ ಕರೆದೊಯ್ಯಲ್ಪಟ್ಟ ಯುವತಿ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಮೂಲದವರಾಗಿದ್ದು, ದೇರಳಕಟ್ಟೆಯ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದೆ.

Ad Widget

Ad Widget <> Ad Widget

ಯುವತಿ ಮಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವ್ಯಾಸಂಗ ಮಾಡುತ್ತಿರುವ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಚಾರ ತಿಳಿದ ಯುವತಿಯ ಪೋಷಕರು ಹಾಗೂ ಸಂಬಂಧಿಕರು ಕಾಲೇಜು ಆವರಣಕ್ಕೆ ಆಗಮಿಸಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಎಳೆದೊಯ್ದು ಮಹೀಂದ್ರಾ ಥಾರ್ ವಾಹನದಲ್ಲಿ ಕರೆದೊಯ್ದಿದ್ದರು. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಘಟನೆಯ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೇರಳಂನ ಸಂಬಂಧಿಕರ ಮನೆಯಲ್ಲಿದ್ದ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮಂಗಳೂರಿಗೆ ಕರೆತಂದಿದ್ದಾರೆ.

Ad Widget

Ad Widget

ಮನೆಯವರ ಜೊತೆ ಹೋಗಲು ನಿರಾಕರಣೆ
ಪೊಲೀಸರು ರಕ್ಷಿಸಿದ ಬಳಿಕ ಯುವತಿಯ ಹೇಳಿಕೆ ದಾಖಲಿಸಿದ್ದು, ತನ್ನ ಪೋಷಕರು ಅಥವಾ ಮನೆಯವರ ಜೊತೆ ಹೋಗಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ ಎನ್ನಲಾಗಿದೆ. ಯುವತಿ ವಯಸ್ಕಳಾಗಿರುವುದರಿಂದ ತಾನು ಎಲ್ಲಿ ವಾಸಿಸಬೇಕು ಎಂಬುದನ್ನು ನಿರ್ಧರಿಸುವ ಕಾನೂನುಬದ್ಧ ಹಕ್ಕು ಆಕೆಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ವೈದ್ಯಕೀಯ ತಪಾಸಣೆಯ ಬಳಿಕ ಯುವತಿಯ ಇಚ್ಛೆಯ ಸ್ಥಳಕ್ಕೆ ಅಥವಾ ಸಾಂತ್ವನ ಕೇಂದ್ರಕ್ಕೆ ಪೊಲೀಸ್ ರಕ್ಷಣೆಯಲ್ಲಿ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 140(3) ಮತ್ತು 126ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ವಿಚಾರಣೆಗೆ ಕರೆಸಲಾಗಿದೆ. ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯಿರುವ ಅಪರಾಧವಾಗಿರುವ ಹಿನ್ನೆಲೆಯಲ್ಲಿ ಬಿಎನ್‌ಎಸ್‌ಎಸ್ ಅಡಿಯಲ್ಲಿ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದೆ.

Ad Widget
Continue Reading

ಅಂತರ ರಾಜ್ಯ

Former CBI officer-ಅಧಿಕಾರ, ಹಣ, ಐಷಾರಾಮಿ ಬದುಕಿಗೆ ಗುಡ್‌ಬೈ; ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ಮಾಜಿ ಸಿಬಿಐ ಅಧಿಕಾರಿ..!

Published

on

Ad Widget

Ad Widget

Ad Widget

Ad Widget

ಉನ್ನತ ಸರ್ಕಾರಿ ಹುದ್ದೆ, ಕೈತುಂಬಾ ಸಂಬಳ, ಕಾರು, ಬಂಗಲೆಯಂತಹ ಐಷಾರಾಮಿ ಸೌಲಭ್ಯಗಳಿದ್ದರೂ ನೆಮ್ಮದಿ ಸಿಗದ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ದಳದ (ಸಿಬಿಐ) ಮಾಜಿ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ಪ್ರತಿಷ್ಠಿತ ಹುದ್ದೆಗೆ ರಾಜೀನಾಮೆ ನೀಡಿ ಸನ್ಯಾಸ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಅರಣ್ಯದ ಗುಹೆಗಳಲ್ಲಿ ಸರಳ ಜೀವನ ನಡೆಸುತ್ತಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

Ad Widget

Ad Widget

Ad Widget

Ad Widget

ನವದೆಹಲಿ: ಉನ್ನತ ಸರ್ಕಾರಿ ಹುದ್ದೆ, ಕೈತುಂಬಾ ಸಂಬಳ, ಕಾರು, ಬಂಗಲೆಯಂತಹ ಐಷಾರಾಮಿ ಸೌಲಭ್ಯಗಳಿದ್ದರೂ ನೆಮ್ಮದಿ ಸಿಗದ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ದಳದ (ಸಿಬಿಐ) ಮಾಜಿ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ಪ್ರತಿಷ್ಠಿತ ಹುದ್ದೆಗೆ ರಾಜೀನಾಮೆ ನೀಡಿ ಸನ್ಯಾಸ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಅರಣ್ಯದ ಗುಹೆಗಳಲ್ಲಿ ಸರಳ ಜೀವನ ನಡೆಸುತ್ತಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

Ad Widget

Ad Widget alt="Ad Widget"/>

Ad Widget

ಆಧುನಿಕ ಜಗತ್ತಿನ ಸಕಲ ಸೌಕರ್ಯಗಳಿಂದ ದೂರವಾಗಿ ಗುಹೆಗಳಲ್ಲಿ ವಾಸಿಸುತ್ತಿರುವ ಮಾಜಿ ಅಧಿಕಾರಿಯು, ತಮ್ಮ ಆಧ್ಯಾತ್ಮಿಕ ಪಯಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅರಣ್ಯದ ವಾತಾವರಣದಲ್ಲಿ ಬದುಕಲು ಆರಂಭಿಸಿದ ಬಳಿಕ ಜೀವನದ ನೈಜ ಅರ್ಥ ಹಾಗೂ ನೆಮ್ಮದಿಯ ಮಹತ್ವ ಅರಿವಾಯಿತು ಎಂದು ಅವರು ಹೇಳಿದ್ದಾರೆ.

Ad Widget

Ad Widget <> Ad Widget

ಸಿಬಿಐ ಇನ್ಸ್‌ಪೆಕ್ಟರ್ ಹುದ್ದೆ ದೊರೆತ ಆರಂಭದಲ್ಲಿ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ ಎಂದು ಭಾವಿಸಿದ್ದ ಅವರು, ಕಾಲಕ್ರಮೇಣ ಆ ವ್ಯವಸ್ಥೆಯೊಳಗೆ ಮಾನಸಿಕ ಒತ್ತಡ ಅನುಭವಿಸಲಾರಂಭಿಸಿದರು. ಕಾನೂನು ಪಾಲನೆಯ ಹೆಸರಿನಲ್ಲಿ ಜನರೊಂದಿಗೆ ಕಠಿಣವಾಗಿ ಹಾಗೂ ಒರಟಾಗಿ ವರ್ತಿಸಬೇಕಾದ ಪರಿಸ್ಥಿತಿ ತಮ್ಮ ಸ್ವಭಾವಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಹಣ, ಮನೆ, ಕಾರು ಸೇರಿದಂತೆ ಎಲ್ಲ ಸೌಲಭ್ಯಗಳಿದ್ದರೂ ಮನಸ್ಸಿಗೆ ಬೇಕಾದ ನೆಮ್ಮದಿ ಮತ್ತು ಸ್ವಾತಂತ್ರ್ಯ ಸಿಗುತ್ತಿಲ್ಲ ಎಂಬ ಅರಿವಾದ ಬಳಿಕ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದರು.

ನಂತರ ಹಲವು ರಾಜ್ಯಗಳಲ್ಲಿ ಸಂಚರಿಸಿದ ಅವರು, ಕೊನೆಗೆ ಮಧ್ಯಪ್ರದೇಶದ ಓಂಕಾರೇಶ್ವರದ ಸಮೀಪ ನರ್ಮದಾ ನದಿ ತೀರಕ್ಕೆ ತಲುಪಿದರು. ಅಲ್ಲಿ ಸರಳ ಜೀವನ ಆರಂಭಿಸಿ, ಚಪ್ಪಲಿ ಇಲ್ಲದೆ, ಮಲಗಲು ಚಾಪೆಯನ್ನೂ ಬಳಸದೆ, ದೊರೆಯುವ ಆಹಾರವನ್ನು ಸೇವಿಸುತ್ತಾ ಧ್ಯಾನ ಮತ್ತು ದೇವಿಯ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.

Ad Widget

Ad Widget

ಬಳಿಕ ಬೆಟ್ಟದ ಮೇಲಿರುವ ದೇವಸ್ಥಾನವೊಂದರಲ್ಲಿ ಸಾಧುಗಳೊಂದಿಗೆ ಕೆಲವು ವರ್ಷಗಳನ್ನು ಕಳೆದರು. ಈ ಸಂದರ್ಭದಲ್ಲಿ ಗ್ರಾಮದ ಮಕ್ಕಳಿಗೆ ಪ್ರಕೃತಿಯೊಂದಿಗೆ ಬೆರೆಯುವ ಪಾಠವನ್ನೂ ಕಲಿಸಿದರು. ಸದ್ಯ ದಟ್ಟ ಅರಣ್ಯದ ಗುಹೆಗಳಲ್ಲಿ ವಾಸಿಸುತ್ತಿರುವ ಅವರು, ಒಲೆಯ ಮೇಲೆ ಅಡುಗೆ ಮಾಡಿಕೊಂಡು ಧ್ಯಾನದಲ್ಲಿ ಕಾಲ ಕಳೆಯುತ್ತಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ಅವರ ಅಭಿಪ್ರಾಯವೇನು?
ಸಮಾಜದಲ್ಲಿನ ಭ್ರಷ್ಟಾಚಾರದ ಕುರಿತು ಮಾತನಾಡಿರುವ ಮಾಜಿ ಅಧಿಕಾರಿ, ಭ್ರಷ್ಟಾಚಾರದ ಬೀಜ ಮನೆಯಲ್ಲಿಯೇ ಬಿತ್ತನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪೋಷಕರು ತಮ್ಮ ಮಕ್ಕಳನ್ನು ನೆರೆಹೊರೆಯವರ ಶ್ರೀಮಂತಿಕೆಯೊಂದಿಗೆ ಹೋಲಿಕೆ ಮಾಡುವುದು ಮಕ್ಕಳಲ್ಲಿ ಹಣ ಮತ್ತು ಐಷಾರಾಮಿ ಜೀವನದ ಮೇಲಿನ ಅತಿಯಾದ ಆಸೆ ಬೆಳೆಸುತ್ತದೆ. ಇಂತಹ ಮನೋಭಾವದಲ್ಲಿ ಬೆಳೆಯುವ ಮಕ್ಕಳು ಮುಂದೆ ಜಿಲ್ಲಾಧಿಕಾರಿ, ವೈದ್ಯ ಅಥವಾ ಎಂಜಿನಿಯರ್‌ನಂತಹ ಉನ್ನತ ಸ್ಥಾನಕ್ಕೇರಿದರೂ ಸಮಾಜವನ್ನು ಶೋಷಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಆದ್ದರಿಂದ ಮಕ್ಕಳನ್ನು ಐಎಎಸ್, ಐಪಿಎಸ್ ಅಧಿಕಾರಿಗಳನ್ನಾಗಿ ಅಥವಾ ಸನ್ಯಾಸಿಗಳನ್ನಾಗಿ ರೂಪಿಸುವುದಕ್ಕಿಂತ ಮೊದಲು ಅವರನ್ನು ಉತ್ತಮ ಮನುಷ್ಯರನ್ನಾಗಿ ಬೆಳೆಸುವುದು ಪೋಷಕರ ಆದ್ಯತೆಯಾಗಬೇಕು ಎಂದು ಸಲಹೆ ನೀಡಿದ್ದಾರೆ.

ಕೇವಲ ಬಟ್ಟೆ ಅಥವಾ ವೇಷ ಬದಲಾಯಿಸಿಕೊಳ್ಳುವುದರಿಂದ ಸನ್ಯಾಸಿಯಾಗಲು ಸಾಧ್ಯವಿಲ್ಲ. ತಾನು ಮಾಡುವ ಕೆಲಸದಲ್ಲಿ ಸಂಪೂರ್ಣ ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವ ಹೊಂದಿರುವುದೇ ನಿಜವಾದ ಪವಿತ್ರತೆ ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ.

Ad Widget
Continue Reading

ಬಿಗ್ ನ್ಯೂಸ್

Bail rejected-ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್’ ಪ್ರಕರಣ: ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿ 6 ಮಂದಿಯ ಜಾಮೀನು ಅರ್ಜಿ ವಜಾ

Published

on

Ad Widget

Ad Widget

Ad Widget

Ad Widget

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಚಿತ್ರೀಕರಣ ಹಾಗೂ ಅದನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಚಿತ್ರೀಕರಣ ಹಾಗೂ ಅದನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗಿದೆ.

Ad Widget

Ad Widget alt="Ad Widget"/>

Ad Widget

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ನಡೆಸಲಾಗಿದೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ವಿಡಿಯೋ ಕುರಿತು ಸಿದ್ದರಾಮಯ್ಯ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಂದ್ರ ಅಪರಾಧ ವಿಭಾಗ (CCB) ಪೊಲೀಸರು ತನಿಖೆ ಕೈಗೊಂಡಿದ್ದರು.

Ad Widget

Ad Widget <> Ad Widget

ಪ್ರಕರಣದ ತನಿಖೆಯ ಭಾಗವಾಗಿ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ, ಕಾಂಗ್ರೆಸ್‌ನಿಂದ ಉಚ್ಚಾಟಿತರಾಗಿರುವ ಕೃಪಾ ಆಳ್ವಾ, ಪ್ರಜ್ವಲ್ ಪ್ರಸಾದ್, ಚಂದನ್ ಎಚ್.ಎಸ್., ಕೆ.ವಿ. ಪ್ರಶಾಂತ್ ಕುಮಾರ್ ಹಾಗೂ ವಿನೋದ್ ಕುಮಾರ್ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಆರು ಮಂದಿ ಆರೋಪಿಗಳು ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಗಳ ವಿಚಾರಣೆ ನಡೆಯುವವರೆಗೆ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

Ad Widget

Ad Widget

ಆದರೆ, ನವೆಂಬರ್ 20ರಂದು ವಿಚಾರಣೆ ಪೂರ್ಣಗೊಳಿಸಿದ 66ನೇ ಸಿಸಿಎಚ್ ನ್ಯಾಯಾಲಯ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ. ಈ ಹಿಂದೆ ಮಧ್ಯಂತರ ರಕ್ಷಣೆ ನೀಡುವಾಗ, ಅಂತಿಮವಾಗಿ ನಿರೀಕ್ಷಣಾ ಜಾಮೀನು ದೊರೆಯದಿದ್ದಲ್ಲಿ ತನಿಖಾಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು ಎನ್ನಲಾಗಿದೆ.

ಇದೀಗ ಜಾಮೀನು ಅರ್ಜಿಗಳು ವಜಾಗೊಂಡಿರುವುದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಿದ್ದು, ಇಲ್ಲವಾದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಎದುರಾಗಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!