Connect with us

Uncategorized

ಯುವ ಕಾಂಗ್ರೇಸಿನ ʼಹಸ್ತಲಾಘವʼ ಕಾರ್ಯಕ್ರಮಕ್ಕೆ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷರಿಂದ ತಡೆ | ಏನಿದರ ಒಳಗುಟ್ಟು ಇಲ್ಲಿದೆ ಸಂಪೂರ್ಣ ಮಾಹಿತಿ

Published

on

Ad Widget

Ad Widget

Ad Widget

Ad Widget

 ತನ್ನ ಅಂತರಿಕ ಕಲಹ, ಭಿನ್ನಮತಗಳಿಗೆ ಕುಖ್ಯಾತಿಗಳಿಸಿರುವ ಪುತ್ತೂರು ಕಾಂಗ್ರೇಸ್‌ ಅದನ್ನು ಮತ್ತಷ್ಟು ವಿಸ್ತರಿಸುವ ಸೂಚನೆಯನ್ನು ರವಾನಿಸುತ್ತಿದೆ. ಪುತ್ತೂರು ಬ್ಲಾಕ್‌  ಯುವ ಕಾಂಗ್ರೇಸ್‌ ವತಿಯಿಂದ ಜೂ. 26 ರಂದು ಆಯೋಜಿಸಲಾಗಿರುವ ಹಸ್ತ ಲಾಘವ ಕಾರ್ಯಕ್ರಮವು  ಪುತ್ತೂರು ಬ್ಲಾಕ್‌ ಕಾಂಗ್ರೇಸ್‌ ಮಾತೃ ಘಟಕದ ಕೆಂಗಣ್ಣಿಗೆ ಗುರಿಯಾಗಿದ್ದು ಅದನ್ನು ನಿಲ್ಲಿಸಲು ಕಳುಹಿಸಿದ ಮೆಮೊ ಮತ್ತೊಮ್ಮೆ ಭಿನ್ನಮತ ಸ್ಫೋಟಿಸಲು ಕಾರಣವಾಗಿದೆ. ಪಕ್ಷದ ಅಂತರಿಕ ವಿಷಯವಾಗಬೇಕಿದ್ದ ಈ ಮೆಮೊ ಮಾಧ್ಯಮಗಳಿಗೆ ಲೀಕ್‌ ಆಗುವ ಮೂಲಕ ಕಾಂಗ್ರೇಸ್‌ ಕಾರ್ಯಕರ್ತರ ಹಾಗು ನಾಯಕರಿಗೆ ಇರಿಸುಮುರಿಸು ಉಂಟಾಗಿದ್ದು, ಪಕ್ಷದ ಪ್ರತಿಷ್ಟೆಗೆ ಪೆಟ್ಟಾಗಿದೆ.

Ad Widget

Ad Widget

Ad Widget

Ad Widget

 ಜೂ 26 ರಂದು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯದಲ್ಲಿರುವ ಅಕ್ಷಯ ಕಾಂಪ್ಲೆಕ್ಸ್ ಸಭಾಂಗಣದಲ್ಲಿ  ಆರ್ಯಾಪು ಜಿಲ್ಲಾ ಪಂಚಾಯತ್ ಕ್ಷೇತ್ರದ ಜನಪ್ರತಿನಿಧಿಗಳ, ನಾಯಕರ ಹಾಗೂ ಕಾರ್ಯಕರ್ತರ ‘ಹಸ್ತಲಾಘವ….ಇದು ಕೈ ಕಾರ್ಯಕರ್ತರ ಸ್ನೇಹ ಸಮಾಗಮ’ ಎಂಬ ಕಾರ್ಯಕ್ರಮವನ್ನು   ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್ ವತಿಯಿಂದ   ಆಯೋಜಿಸಿದ್ದು ಇದು ವಿವಾದಕ್ಕೆ ಕಾರಣವಾಗಿದೆ.

Ad Widget

Ad Widget alt="Ad Widget"/>

Ad Widget

ಜೂ 12 ರಂದು ಭಾನುವಾರ ಈ ಸಭೆಯನ್ನು ರದ್ದುಪಡಿಸುವಂತೆ ಪುತ್ತೂರು ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷರಾದ ಎಂ. ಬಿ. ವಿಶ್ವನಾಥ ರೈಯವರು ಪುತ್ತೂರು ಬ್ಲಾಕ್‌  ಯುವ ಕಾಂಗ್ರೇಸ್‌ ಅಧ್ಯಕ್ಷ ಶ್ರೀ ಪ್ರಸಾದ್‌ ಅವರಿಗೆ ನೊಟೀಸ್‌ ಕಳುಹಿಸಿದ್ದಾರೆ. ನೊಟೀಸ್‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ . ಈ ನೋಟಿಸನ್ನು ಎಂ. ಬಿ. ವಿಶ್ವನಾಥ ರೈಯವರು ವಾಟ್ಸಪ್‌ ಮೂಲಕ ತನಗೆ ಕಳುಹಿಸಿರುವುದನ್ನು ಶ್ರೀ ಪ್ರಸಾದ್‌ ನಿಖರ ನ್ಯೂಸಿಗೆ ಖಚಿತ ಪಡಿಸಿದ್ದಾರೆ

Ad Widget

Ad Widget <> Ad Widget

ನೋಟಿಸ್‌ ನಲ್ಲಿ ಏನಿದೆ ?

ನೊಟೀಸ್‌

ತಾವು ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಯುವಕರನ್ನು ಸಂಘಟಿಸಿ ಪಕ್ಷವನ್ನು ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೊಂದಿರುತ್ತೀರಿ. ಆದರೆ,  ಜೂ 26.ರಂದು  ತಾವು ಆರ್ಯಾಪು ಜಿಲ್ಲಾ ಪಂಚಾಯತ್ ಕ್ಷೇತ್ರದ ಜನಪ್ರತಿನಿಧಿಗಳ, ನಾಯಕರ ಹಾಗೂ ಕಾರ್ಯಕರ್ತರ ಸಭೆಯನ್ನು ‘ಹಸ್ತಲಾಘವʼ  ಎಂಬ ಹೆಸರಿನಲ್ಲಿ ಕರೆದಿರುತ್ತೀರಿ. ಪಕ್ಷದ ಕಾರ್ಯಕರ್ತರ, ಜನಪ್ರತಿನಿಧಿಗಳ ಹಾಗೂ ನಾಯಕರ ಸಭೆ ಕರೆಯುವರೇ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಅದರ ಉನ್ನತ ಸಮಿತಿಗಳಿಗೆ ಮಾತ್ರ ಅವಕಾಶವಿದ್ದು ಯುವ ಕಾಂಗ್ರೆಸ್ ಈ ಸಭೆಯನ್ನು ಕರೆದಿರುವುದು ತಮ್ಮ ವ್ಯಾಪ್ತಿಯನ್ನು ಮೀರಿ ಕಾರ್ಯ ನಿರ್ವಹಿಸುವುದಾಗಿದೆ. ಮತ್ತು ಇದು ಪಕ್ಷದ ನಡವಳಿಕೆ ಮತ್ತು ನಿಯಮಗಳ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ತಾವು ‘ಹಸ್ತಲಾಘವ ಸಭೆʼ ಯನ್ನು ತಕ್ಷಣ ರದ್ದುಪಡಿಸಬೇಕೆಂದು ಈ ಮೂಲಕ ಸೂಚಿಸುತ್ತೇನೆ ಎಂದು ವಿಶ್ವನಾಥ ರೈ ಯವರು ಶ್ರೀ ಪ್ರಸಾದ್‌ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Ad Widget

Ad Widget
ಕಾರ್ಯಕ್ರಮ ಸಾಮಾಜಿಕ ಜಾಲತಾಣದ ಪ್ರಮೋಷನ್‌

ಮುಂದುವರಿದು ಅವರು  “ ಯುವ ಕಾಂಗ್ರೆಸ್ ಪರಿಧಿಯಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳನ್ನು ನಮ್ಮೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರುವಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡಲು ಬದ್ಧರಾಗಿರುತ್ತೇವೆ” ಎಂದು ಬರೆದಿದ್ದಾರೆ.

ಪತ್ರದ ಪ್ರತಿ ಕೆಪಿಸಿಸಿ ಅಧ್ಯಕ್ಷರಿಗೆ ರವಾನೆ :

ಶ್ರೀ ಪ್ರಸಾದ್‌ ರವರಿಗೆ ನೀಡಿರುವ ಪತ್ರದ ಯಥಾ ಪ್ರತಿಯನ್ನು ಕೆಪಿಸಿಸಿ ಅಧ್ಯಕ್ಷರಿಗೆ, ಕಾರ್ಯಾಧ್ಯಕ್ಷರಿಗೆ, ಡಿಸಿಸಿ ಅಧ್ಯಕ್ಷರಿಗೆ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರಿಗೆ ವಿಶ್ವನಾಥ ರೈ ರವಾನಿಸಿದ್ದಾರೆ.

ಯುವ ಕಾಂಗ್ರೇಸ್‌ ಅಧ್ಯಕ್ಷ  ಶ್ರೀ ಪ್ರಸಾದ್ ರವರಿಗೆ ಪುತ್ತೂರು ಕಾಂಗ್ರೇಸ್ಸಿನ ಭಿನ್ನ ಗುಂಪಿನ ನಾಯಕ ಹಾಗೂ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರ ಕಡು ವಿರೋಧಿ  ಕಾವು  ಹೇಮನಾಥ ಶೆಟ್ಟಿಯವರು ರಾಜಕೀಯವಾಗಿ ಗಾಡ್‌ ಫಾದರ್‌. ಪುತ್ತೂರಿನ ಉಳಿದೆಲ್ಲಾ ಕಾಂಗ್ರೇಸ್‌ ಪದಾಧಿಕಾರಿಗಳು ನೇಮಕಗೊಂಡಿದ್ದಾರೆ, ಶ್ರೀ ಪ್ರಸಾದ್‌ ಅವರು ಯುವ ಕಾಂಗ್ರೇಸ್‌ ಅಧ್ಯಕ್ಷ  ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರು.

ಹಸ್ತ ಲಾಘವ ಕಾರ್ಯಕ್ರಮ ಆಯೋಜಿಸುವ ಬಗ್ಗೆ   ಶ್ರೀ ಪ್ರಸಾದ್ ರವರು ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಎಂ. ಬಿ, ವಿಶ್ವನಾಥ ಶೆಟ್ಟಿಯವರ ಅನುಮತಿ ಕೋರಿದ್ದು ಅದಕ್ಕೆ ಅವರು ಒಪ್ಪಿಗೆ ಸೂಚಿಸಿದರು. ಬಳಿಕ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರಿಗೂ ತಿಳಿಸಿದ್ದು ಅವರು ಬ್ಲಾಕ್‌ ಅಧ್ಯಕ್ಷರ ಅನುಮತಿ ಪಡೆದು ಸಭೆ ನಡೆಸುವಂತೆ ಸೂಚಿಸಿದ್ದಾರೆ.   ಆ ಬಳಿಕ ಶ್ರೀ ಪ್ರಸಾದ್‌ ಕಾರ್ಯಕ್ರಮ ಆಯೋಜಿಸಿದ್ದಾರೆ. ಮೂಲಗಳ ಪ್ರಕಾರ ಆ ಕ್ರಾರ್ಯಕ್ರಮದ ಪ್ರಮೋಷನ್‌ ನಿಮಿತ್ತ ಅವರು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟ ಪೋಸ್ಟರ್‌ ಗಳು ಬ್ಲಾಕ್‌ ಕಾಂಗ್ರೇಸ್ಸಿನ ಕೆಂಗಣ್ಣಿಗೆ ಗುರಿಯಾಗಿದೆ.

ಕಾರ್ಯಕ್ರಮ ನಡೆಸುವ ಬಗ್ಗೆ ಮಾಹಿತಿ ನೀಡಿದಾಗ, ಆರ್ಯಾಪು ಜಿ.ಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಯುವ ಕಾಂಗ್ರೇಸ್‌ ಕಾರ್ಯಕರ್ತರನ್ನು ಸಂಘಟಿಸುವ ದೃಷ್ಟಿಯಿಂದ  ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೇ ಪ್ರಮೋಷನ್‌ ಪೋಸ್ಟರ್‌ ಗಳಲ್ಲಿ  ಜಿಲ್ಲಾ ಪಂಚಾಯತ್ ಕ್ಷೇತ್ರದ ಜನಪ್ರತಿನಿಧಿಗಳ, ನಾಯಕರ ಹಾಗೂ ಕಾರ್ಯಕರ್ತರ ಕಾರ್ಯಕ್ರಮ ಎಂದು ಹೇಳಲಾಗಿದೆ. ಯುವ ಕಾಂಗ್ರೇಸ್ಸಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರದ ಜನಪ್ರತಿನಿಧಿಗಳ, ನಾಯಕರ, ಮಾತೃ ಘಟಕದ ( parent body) ಕಾರ್ಯಕರ್ತರ ಕಾರ್ಯಕ್ರಮ ನಡೆಸಲು ಪಕ್ಷದ ಸಂವಿಧಾನದ ಪ್ರಕಾರ ಅವಕಾಶವಿಲ್ಲ. ಅದು ಯುವ ಕಾಂಗ್ರೇಸ್ಸಿನ ಕಾರ್ಯವ್ಯಾಪ್ತಿಯಲ್ಲಿಲ್ಲ  ಎನ್ನುವುದು ಎಂಬಿ. ವಿಶ್ವನಾಥ ರೈಯವರ ವಾದ . ಹೀಗಾಗಿಯೇ ನಾನು ಮೆಮೊ ನೀಡಿದ್ದೇನೆ. ಅಲ್ಲದೇ ಮೆಮೊ ನೀಡುವ ಮೊದಲು ಜಿಲ್ಲಾಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಅವರ ಸೂಚನೆಯಂತೆ ಮೆಮೊ ರವಾನಿಸಲಾಗಿದೆ ಎಂದು ಹೇಳಿದರು.

ಆದರೇ ಶ್ರೀ ಪ್ರಸಾದ್‌ ಪ್ರಕಾರ ಈ ಕಾರ್ಯಕ್ರಮದ ರೂಪುರೇಷೆ ಇನ್ನು ಸಿದ್ದವಾಗಿಲ್ಲ. ವೇದಿಕೆಯಲ್ಲಿ ಯಾರನ್ನು ಕೂರಿಸುವುದು ಇತ್ಯಾದಿ ಬಗ್ಗೆ ನಿಗದಿಯಾಗಿರಲಿಲ್ಲ. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ,  ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷರಾದ, ಎಂಬಿ ವಿಶ್ವನಾಥ ರೈ ಕೆಪಿಸಿಸಿ ಸಂಯೋಜಕರಾದ ಹೇಮನಾಥ ಶೆಟ್ಟಿ ಮತ್ತಿತ್ತರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಇನ್ನು ಕಾರ್ಯವ್ಯಾಪ್ತಿ ಮೀರಿ ಜನಪ್ರತಿನಿಧಿಗಳನ್ನು, ಹಿರಿಯ ನಾಯಕರನ್ನು ಕರೆದ ಬಗ್ಗೆ ಪ್ರಶ್ನಿಸಿದಾಗ, ಕ್ಷೇತ್ರದ ಪಕ್ಷಕ್ಕೆ ಸಂಬಂಧಪಟ್ಟ ನಾಯಕರನ್ನು  ಜನಪ್ರತಿನಿಧಿಗಳನ್ನು ಪಕ್ಷದ ಕಾರ್ಯಕ್ರಮಕ್ಕೆ ಕರೆಯುವುದು ಸತ್ಸಂಪ್ರದಾಯ. ಉತ್ತಮ ನಡವಳಿಕೆಯ ಭಾಗವಾಗಿ ಅವರನ್ನು ಕರೆಯಲಾಗಿದೆ. ಕೇವಲ ಶಿಷ್ಟಚಾರ ಪಾಲಿಸಿದಕ್ಕೆ ಕಾರ್ಯಕ್ರಮ ರದ್ದು ಪಡಿಸಲು ಸೂಚಿಸಲಾಗಿದೆ ಎಂದರು

ಈ ಬಗ್ಗೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರಲ್ಲಿ ನಿಖರ ನ್ಯೂಸ್‌ ಮಾತನಾಡಿಸಿದ್ದು “ ಶ್ರೀ ಪ್ರಸಾದ್‌ ಒಳ್ಳೆ ಹುಡುಗ. ಆದರೇ ಯಾರದೋ ಚಿತಾವಣೆಗೆ ಒಳಗಾಗಿ ತನ್ನ ಕಾರ್ಯವ್ಯಾಪ್ತಿ ಮೀರಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಚಿತಾವಣೆ ಮಾಡುವವರು ಕಳೆದ 30 ವರ್ಷಗಳಿಂದ ಇದೇ ಕಾರ್ಯವನ್ನು ಮಾಡುತ್ತಿದ್ದಾರೆ. ನಿಯಮ ಮೀರಿ ಮಾಡುತ್ತಿರುವ ಕಾರ್ಯಕ್ರಮವನ್ನು ನಿಲ್ಲಿಸುವ ಉದ್ದೇಶದಿಂದ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷರಾದ ಎಂ. ಬಿ . ವಿಶ್ವನಾಥ ರೈ ಗಳು ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಅವರ ಗಮನಕ್ಕೆ ತಂದು ಒಂದು ಮೆಮೋ ಕೊಟ್ಟಿದ್ದಾರಷ್ಟೆ . ಅದು ಅಂತರಿಕವಾಗಿ ಪಕ್ಷದಲ್ಲಿರುವ ವ್ಯವಸ್ಥೆ.  ಇದು ತಪ್ಪು ಎಂದು ಶ್ರೀ ಪ್ರಸಾದ್‌ ಗೆ ಕಾಣಿಸಿದರೇ, ಅವರು ಇದನ್ನು ನನ್ನ ಗಮನಕ್ಕೂ, ಜಿಲ್ಲಾಧ್ಯಕ್ಷರ ಗಮನಕ್ಕೂ ತರಬಹುದಿತ್ತು. ಆದರೇ ಅವರು ಅದನ್ನು ಮಾಡದೇ ಮಾಧ್ಯಮಗಳ ಮುಂದೆ ಹೋಗಿ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ. ಹೀಗೆ ಒಂದು ತಪ್ಪು ಆದಾಗ ಅದನ್ನು ತಿದ್ದಿಕೊಳ್ಳುವ ಬದಲು ಅವರು ಎರಡೆರಡು ತಪ್ಪು ಮಾಡಿದ್ದಾರೆ. ಹೀಗೆ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಪ್ರತಿ ಬಾರಿ ಚುನಾವಣೆ ಹತ್ತಿರ ಬಂದಾಗ ಪಕ್ಷದಲ್ಲಿ ಭಿನ್ನಮತ ಸ್ಪೋಟಗೊಳ್ಳುವುದು ಯಾಕೇ ಎಂದು ವರದಿಗಾರ ಪ್ರಶ್ನಿಸಿದಾಗ “ ಕಳೆದ 30 ವರ್ಷಗಳಿಂದ ಒಬ್ಬ ವ್ಯಕ್ತಿ ಇದನ್ನು ಮಾಡುತ್ತಿದ್ದಾರೆ. ಪಕ್ಷದ ಒಳಗೆ ಕಾರ್ಯನಿರ್ವಹಿಸುವಾಗ ʼ ನಾನು ʼ  ಎನ್ನದೇ ʼನಾವುʼ ಎಂಬ ಭಾವದಲ್ಲಿ ಕೆಲಸ ಮಾಡಬೇಕು . ಯಾರಿಗಾದರೂ ಪಕ್ಷ ಅಂದರೇ ನಾನು ಎಂದು ಅನಿಸಿಬಿಟ್ಟರೇ ಅದು ಅವರ ಅದ:ಪತನ. ಪುತ್ತೂರಿನಲ್ಲಿ ಆಗುತ್ತಿರುವುದು ಅದೇ  ಎಂದು ತಿಳಿಸಿದರು.

ಭಿನ್ನಮತಕ್ಕೆ ಕಾವು…!

ಕಾವು ಹೇಮನಾಥ ಶೆಟ್ಟಿಯವರು ಶ್ರೀ ಪ್ರಸಾದ್‌ ಮೂಲಕ ಪಕ್ಷದಲ್ಲಿ ಭಿನ್ನಮತಕ್ಕೆ ಕಾವು ನೀಡಲೆಂದೆ ʼ ಹಸ್ತ ಲಾಘವʼ  ಕಾರ್ಯಕ್ರಮ  ಆಯೋಜಿಸಿದ್ದಾರೆ. ಅದಕ್ಕಾಗಿಯೇ ಜನ ಪ್ರತಿನಿಧಿಗಳ ಹಾಗೂ ಹಿರಿಯ ನಾಯಕರ ಸಭೆ ಎಂದು ಅದನ್ನು  ಬಿಂಬಿಸಲಾಗುತ್ತಿದೆ ಎಂಬ ಸುದ್ದಿ ಎಂ. ಬಿ. ವಿಶ್ವನಾಥ ರೈಗಳ ಕಿವಿಗೆ ತಲುಪಿದ ಕಾರಣ ಆ ಸಭೆಯನ್ನು ರದ್ದುಗೊಳಿಸುವಂತೆ ಸೂಚಿಸಿದ್ದಾರೆ ಎಂದು ಎಂ ,ಬಿ . ವಿಶ್ವನಾಥ ರೈಗಳ ಅತ್ಯಾಪ್ತ ಮೂಲಗಳು ತಿಳಿಸಿದ್ದಾರೆ. ಅಲ್ಲದೇ ಪಕ್ಷ ಒಂದು ಚೌಕಟ್ಟಿನ ಒಳಗಡೆ ಕಾರ್ಯನಿರ್ವಹಿಸಬೇಕು ಅಶಿಸ್ತನ್ನು ಯಾವುದೇ ಕಾರಣಕ್ಕೆ ಸಹಿಸಲು ಸಾಧ್ಯವಿಲ್ಲ. ಪಕ್ಷ ಪುತ್ತೂರಿನಲ್ಲಿ ಅಧೋಗತಿಗೆ ತಲುಪಲು ಭಿನ್ನಮತವನ್ನು ಕಠಿಣ ಕ್ರಮಗಳ ಮೂಲಕ ನಿಯಂತ್ರಿಸದಿರುವುದು ಪ್ರಮುಖ ಕಾರಣ ಎಂಬ ನಿಲುವಿಗೆ ಬಂದಿರುವುದಾಗಿಯೂ ಮೂಲಗಳು ತಿಳಿಸಿವೆ

Ad Widget
Click to comment

Leave a Reply

Uncategorized

Philomena-ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಾಗಾರ

Published

on

Ad Widget

Ad Widget

Ad Widget

Ad Widget

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು  ಕಾಲೇಜು ಸಭಾಂಗಣದಲ್ಲಿ  ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.

Ad Widget

Ad Widget

Ad Widget

Ad Widget

ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು  ಕಾಲೇಜು ಸಭಾಂಗಣದಲ್ಲಿ  ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.

Ad Widget

Ad Widget alt="Ad Widget"/>

Ad Widget

ಸಂಪನ್ಮೂಲ ವ್ಯಕ್ತಿಗಳಾಗಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ವಂದನ ಶಂಕರ್ ಮಾತನಾಡಿ, ಪಿ ಯು ಸಿ ನಂತರದ ಅವಕಾಶಗಳು, ಇಂಜಿನಿಯರಿಂಗ್ ವಿಭಾಗಗಳಲ್ಲಿ ಇರುವ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿದರು.

Ad Widget

Ad Widget <> Ad Widget

ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಚೇತನ್ ಮಾತನಾಡಿ, ಮಾದಕ ವಸ್ತುಗಳು ಹಾಗೂ ದೂಮಪಾನದ ವ್ಯಸನ ನಮ್ಮ ನೆನಪಿನ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗೆಯೇ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ನಮ್ಮ ಏಕಾಗ್ರತೆಯನ್ನು ಭಂಗ ಗೊಳಿಸುತ್ತದೆ ಎಂದು ಹೇಳಿದರು.

ವೃತ್ತಿ ಮಾರ್ಗದರ್ಶನ ವಿಭಾಗದ ನಿರ್ದೇಶಕರಾದ ರವಿಪ್ರಸಾದ್ ಬಿ. ಜಿ ನಿರಂಜನ್ ಜಿ. ಯು, ಕವಿತಾ ಕೆ ಹಾಗೂ ಕಾಲೇಜಿನ ಬೋಧಕ /ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Ad Widget

Ad Widget

ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿ ಮೊಹಮ್ಮದ್ ಶಯಾನ್ ಅಬ್ಬಾಸ್ ಸ್ವಾಗತಿಸಿ, ವಂದಿಸಿ,
ಕಾರ್ಯಕ್ರಮವನ್ನು ನಿರೂಪಿಸಿದರು.

Ad Widget
Continue Reading

Uncategorized

ಹಿರಿಯ ಸಹಕಾರಿ ಧುರೀಣ ಕೆ.ಕೆ. ನಾರಾಯಣ ಚಳ್ಳಂಗಾರು ನಿಧನ

Published

on

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಕಲ್ಮಡ್ಕ: ತಾಲೂಕಿನ ಹಿರಿಯ ಸಹಕಾರಿ ಧುರೀಣ, ಸಾಮಾಜಿಕ ಮುಖಂಡ, ಬಹುಮುಖ ಚಿಂತಕ ಕಲ್ಮಡ್ಕ ಗ್ರಾಮದ ಚಳ್ಳಂಗಾರು ಕೆ.ಕೆ. ನಾರಾಯಣ (88) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾದರು.

Ad Widget

Ad Widget alt="Ad Widget"/>

Ad Widget

ಮಂಡಲ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ತಮ್ಮ ಅವಧಿಯಲ್ಲಿ ಗ್ರಾಮದಲ್ಲಿ ಅಭಿವೃದ್ಧಿಯ ಹೊಸ ಶಕೆಗೆ ನಾಂದಿ ಹಾಡಿದ್ದರು. ಕಲ್ಮಡ್ಕ ಸಹಕಾರಿ ಸಂಘದ ನಿರ್ದೇಶಕರಾಗಿ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಅವರು, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದರು. ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು.

Ad Widget

Ad Widget <> Ad Widget

ಕಲ್ಮಡ್ಕ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ವಿಶೇಷ ಶ್ರಮ ವಹಿಸಿದ್ದ ಅವರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಅರ್ಥಧಾರಿಯಾಗಿ ಕಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ನಾರಾಯಣ ಅವರು, ಸಂಗಮ ಕಲಾ ಸಂಘದ ನಿರ್ದೇಶಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಉತ್ತಮ ಓದುಗ ಹಾಗೂ ವಿಮರ್ಶಕರಾಗಿದ್ದ ಅವರು ಸಾಹಿತ್ಯ, ಕಲೆ, ಸಹಕಾರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಮೃತರು ಪತ್ನಿ ಸುಬ್ಬಮ್ಮ, ಪುತ್ರಿಯರಾದ ವಿದ್ಯಾ, ಜಯಶ್ರೀ, ದೀಪಿಕಾ, ಪುತ್ರ, ಕ್ಯಾಂಪ್ಕೋ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ನ್ಯಾಯವಾದಿ ಮುರಳಿಕೃಷ್ಣ ಚಳ್ಳಂಗಾರು, ಸೊಸೆ ರಮ್ಯಾ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Continue Reading

Uncategorized

ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ- ಆಟೋ ರಿಕ್ಷಾಗಳಿಗೆ ಸ್ಟಿಕ್ಕ‌ರ್ ಅಭಿಯಾನಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಚಾಲನೆ

Published

on

Ad Widget

Ad Widget

Ad Widget

Ad Widget

ಪುತ್ತೂರು: ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಪ್ರಚಾರಾರ್ಥ ಆಟೋ ರಿಕ್ಷಾಗಳಿಗೆ ಸ್ಟಿಕ್ಕ‌ರ್ ಅಭಿಯಾನಕ್ಕೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಆ‌ರ್.ಅಶೋಕ್ ಅವರು ಚಾಲನೆ ನೀಡಿದರು.

Ad Widget

Ad Widget

Ad Widget

Ad Widget

ನ.19ರಂದು ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣದ ಬಳಿ ವೀರಾಂಜನೇಯ ಕ್ಷೇತ್ರದಲ್ಲಿ ನಡೆಯುವ ಪಂಚಮುಖಿ ಆಂಜನೇಯ ಹವನದ ಸ್ಟಿಕ್ಕರ್ ಅನ್ನು ಆಟೋ ರಿಕ್ಷಾಗಳಿಗೆ ಅಂಟಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.

Ad Widget

Ad Widget alt="Ad Widget"/>

Ad Widget

ಆಟೋ ರಿಕ್ಷಾಗಳ ಎದುರಿನ ಮತ್ತು ಹಿಂಬದಿಯ ಭಾಗಕ್ಕೆ ತಾವೆ ಸ್ವತಃ ಸ್ಟಿಕ್ಕರ್ ಅಂಟಿಸಿ ಎಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

Ad Widget

Ad Widget <> Ad Widget

ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪಂಚಮುಖಿ ಆಂಜನೇಯ ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿ ಸುನಿಲ್ ದಡ್ಡು, ಯಾಗ ಸಮಿತಿಯ ಪ್ರಮುಖರಾದ ಶ್ಯಾಮ ಸುದರ್ಶನ್ ಹೊಸಮೂಲೆ, ಜಯಂತ ಶೆಟ್ಟಿ ಕಂಬಳತ್ತಡ್ಕ, ಶ್ರೀಧ‌ರ್ ತೆಂಕಿಲ ಸಹಿತ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!