ಶೈಕ್ಷಣಿಕ
ವಿದ್ಯಾಮಾತಾದ ಮುಕುಟಕ್ಕೆ ಮತ್ತೊಂದು ಗರಿಮೆ; ಪ್ರತಿಷ್ಠಿತ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಕೀರ್ತನ್ ಕೆ.ಪಿ. ಭಾರತೀಯ ವಾಯುಸೇನೆಗೆ ಆಯ್ಕೆ; ಪರಿಶ್ರಮಕ್ಕೆ ತಕ್ಕ ಪ್ರತಿಫಲ ಪಡೆದ ಗ್ರಾಮೀಣ ಪ್ರತಿಭೆ
ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಕೀರ್ತನ್ ಕೆ.ಪಿ.ರವರು ಭಾರತೀಯ ವಾಯುಸೇನೆಯ ನೇಮಕಾತಿಯ ನೇಮಕಾತಿ ಪ್ರಕ್ರಿಯೆಗಳಲ್ಲಿ ಉತ್ತೀರ್ಣರಾಗಿ ಆಯ್ಕೆಗೊಂಡಿರುತ್ತಾರೆ.
ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಕೀರ್ತನ್ ಕೆ.ಪಿ.ರವರು ಭಾರತೀಯ ವಾಯುಸೇನೆಯ ನೇಮಕಾತಿಯ ನೇಮಕಾತಿ ಪ್ರಕ್ರಿಯೆಗಳಲ್ಲಿ ಉತ್ತೀರ್ಣರಾಗಿ ಆಯ್ಕೆಗೊಂಡಿರುತ್ತಾರೆ.
ಹಲವಾರು ಸೇನಾ ನೇಮಕಾತಿಗಳು ಸೇರಿದಂತೆ ವಿವಿಧ ಸಶಸ್ತ್ರ ಪಡೆಗಳ ನೇಮಕಾತಿಗಳ ಆಯ್ಕೆ ಪ್ರಕ್ರಿಯೆಗಳಿಗೆ ತರಬೇತಿ ನೀಡುತ್ತಿರುವ ವಿದ್ಯಾಮಾತಾ ಅಕಾಡೆಮಿಯ ಯಶಸ್ವೀ ಪಯಣನಕ್ಕೆ ಮತ್ತೊಂದು ಬಹುದೊಡ್ಡ ಯಶಸ್ಸು ದೊರಕಿದ್ದು ನಿರಂತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಕೀರ್ತನ್ ರವರ ಸಾಧನೆ ಸಾಕ್ಷಿಯಾಗಿದೆ,
ವಿದ್ಯಾಮಾತಾ ಅಕಾಡೆಮಿಯು ನೀಡಿದ ನಿರಂತರ ತರಬೇತಿ ಪಡೆದ ಇವರು ಈಗಾಗಲೇ ಭಾರತೀಯ ಸೇನೆಯ ಅಗ್ನಿಪಥ್ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸದ್ಯದಲ್ಲೇ ನಡೆಯುವ ದೈಹಿಕ ಸದೃಢತೆ ಪರೀಕ್ಷೆಗೆ ಅರ್ಹತೆ ಗಳಿಸಿರುವುದು ಗಮನಾರ್ಹ ವಿಷಯವಾಗಿದೆ.
ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಹಿರೆಬಂಡಾಡಿಯ ಕಂಡಲಾಜೆ ನಿವಾಸಿಗಳಾದ ಪದ್ಮಯ್ಯ ಗೌಡ ಮತ್ತು ಪುಷ್ಪಲತಾ ದಂಪತಿಗಳ ಪುತ್ರರಾದ ಕೀರ್ತನ್ ರವರ ಸಾಧನೆಗೆ ಸಂಸ್ಥೆಯ ಆಡಳಿತ ನಿರ್ದೇಶಕರು ” ಕೀರ್ತನ್ ರವರ ಸಾಧನೆಯು ಇನ್ನಷ್ಟು ಅಭ್ಯರ್ಥಿಗಳು ರಕ್ಷಣಾ ಪಡೆಗಳಿಗೆ ಸೇರುವ ಕನಸುಗಳು ಈಡೇರಲಿ ಎಂದು ಅಕಾಡೆಮಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಶೈಕ್ಷಣಿಕ
ವಿವೇಕಾನಂದ ಸೆಂಟ್ರಲ್ ಸ್ಕೂಲ್ ಆಡಳಿತ ಮಂಡಳಿಗೆ ನೂತನ ಸಾರಥ್ಯ: ಅಧ್ಯಕ್ಷರಾಗಿ ವಿಷ್ಣುಪ್ರಸಾದ್ ಸಿ, ಸಂಚಾಲಕರಾಗಿ ರವಿನಾರಾಯಣ ಎಂ , ಕೋಶಾಧಿಕಾರಿಯಾಗಿ ಸಿಎ ದೀಪಕ್ ಕೆ ಆಯ್ಕೆ

ಪುತ್ತೂರು: ವಿವೇಕಾನಂದ ಸೆಂಟ್ರಲ್ ಸ್ಕೂಲ್ನ ಆಡಳಿತ ಮಂಡಳಿಯ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮ ನಡೆಯಿತು. ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವಿಷ್ಣುಪ್ರಸಾದ್ ಸಿ, ಸಂಚಾಲಕರಾಗಿ ರವಿನಾರಾಯಣ ಎಂ ಹಾಗೂ ಕೋಶಾಧಿಕಾರಿಯಾಗಿ ಸಿಎ ದೀಪಕ್ ಕೆ ಜವಾಬ್ದಾರಿ ಸ್ವೀಕರಿಸಿದರು. ಡಾ. ಅಮೃತಾ ಕೃಷ್ಣ ಪ್ರಸಾದ್, ಪ್ರೀತಿ ಎಸ್. ಶೆಣೈ, ಶುಭದಾ ಜಿ. ಭಟ್, ಪಿ. ಗೋವಿಂದ ರಾಜ್, ರಾಧಾಕೃಷ್ಣ ಬಿ. ಹಾಗೂ ಶಾರದಾ ಶೆಟ್ಟಿ ಪಿ ಸಮಿತಿಯ ಇತರ ಸದಸ್ಯರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ. ಅವರು ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಖಜಾಂಚಿ ಸಂತೋಷ್ ಬೋನಂತಾಯ, ನಿರ್ದೇಶಕರಾದ ರವೀಂದ್ರ ರೈ, ರಮೇಶ್ಚಂದ್ರ ನಾಯಕ್, ಸಂಘದ ಸಿಇಒ ಲಕ್ಷ್ಮೀಪ್ರಸಾದ್, ನಿಕಟಪೂರ್ವ ಆಡಳಿತ ಮಂಡಳಿ ಅಧ್ಯಕ್ಷೆ ವಾಸಂತಿ ಭಟ್, ಸಂಚಾಲಕ ಭರತ್ ಪೈ, ಸದಸ್ಯರಾದ ಶಂಕರಿ ಭಟ್, ಪ್ರೀತಿ ಶೆಣೈ, ಸಂಸ್ಥೆಯ ಪ್ರಾಂಶುಪಾಲೆ ಸಿಂಧು, ಉಪಪ್ರಾಂಶುಪಾಲೆ ಶ್ರೀದೇವಿ ಕೆ. ಹೆಗಡೆ, ಅಧ್ಯಾಪಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು ನೂತನ ಸಮಿತಿಗೆ ಶುಭ ಹಾರೈಸಿದರು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ. ಮಾತನಾಡಿ, ಸಂಸ್ಥೆಯ ಎಲ್ಲ ಅಧ್ಯಾಪಕರು ಮತ್ತು ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.
ನಿಕಟಪೂರ್ವ ಆಡಳಿತ ಮಂಡಳಿಯ ಅಧ್ಯಕ್ಷೆ ಹಾಗೂ ಸಂಚಾಲಕರು ಮಾತನಾಡಿ, ಕಳೆದ ಏಳು ವರ್ಷಗಳಲ್ಲಿ ಸಂಸ್ಥೆ ಬೆಳೆದು ಬಂದ ಹಾದಿಯನ್ನು ಸ್ಮರಿಸಿ, ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನೂತನ ತಂಡಕ್ಕೆ ಶುಭ ಹಾರೈಸಿದರು.
ನೂತನ ಅಧ್ಯಕ್ಷ ವಿಷ್ಣುಪ್ರಸಾದ್ ಸಿ ಮಾತನಾಡಿ, ನಿರ್ದಿಷ್ಟ ಗುರಿ ಮತ್ತು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ನೂತನ ಸಂಚಾಲಕ ರವಿನಾರಾಯಣ ಎಂ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ವಿವೇಕಾನಂದ ವಿದ್ಯಾವರ್ಧಕ ಸಂಘದ ತಂಡದೊಂದಿಗೆ ಕಾರ್ಯನಿರ್ವಹಿಸಿದ ಅನುಭವವಿದೆ. ವೈಯಕ್ತಿಕವಾಗಿ ಈ ಜವಾಬ್ದಾರಿಗೆ ಬಂದಿಲ್ಲ; ಸಂಘಟಿತ ವ್ಯವಸ್ಥೆಯ ಭಾಗವಾಗಿ ಬಂದಿದ್ದೇನೆ. ಎಲ್ಲರ ಆಲೋಚನೆ ಹಾಗೂ ಯೋಜನೆಗಳನ್ನು ಸಮನ್ವಯಗೊಳಿಸಿಕೊಂಡು, ಸಂಸ್ಥೆಯ ಗೌರವಕ್ಕೆ ಧಕ್ಕೆಯಾಗದಂತೆ ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿ ಸಂಸ್ಥೆಯನ್ನು ಮತ್ತಷ್ಟು ಬೆಳೆಸುವ ಗುರಿ ಹೊಂದಿದ್ದೇವೆ. ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಅನುಭವದ ಹಿನ್ನೆಲೆಯ ನೂತನ ಸಾರಥಿಗಳು
ಅಧ್ಯಕ್ಷ ವಿಷ್ಣುಪ್ರಸಾದ್ ಸಿ:
1966ರ ಮೇ 30ರಂದು ಜನಿಸಿದ ವಿಷ್ಣುಪ್ರಸಾದ್ ಸಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿದ್ದಾರೆ. 1987ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಅವರು, ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಹಾಗೂ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. 2010ರಿಂದ ವಿವೇಕಾನಂದ ಶಿಕ್ಷಣ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದು, ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅನುಭವ ಹೊಂದಿದ್ದಾರೆ.
ಸಂಚಾಲಕ ರವಿನಾರಾಯಣ ಎಂ:
ವಿವೇಕಾನಂದ ಶಿಶುಮಂದಿರದ ಕಾರ್ಯದರ್ಶಿಯಾಗಿ, ಕನ್ನಡ ಮಾಧ್ಯಮ ಶಾಲೆಯ ಸಂಚಾಲಕರಾಗಿ ಹಾಗೂ ಕಳೆದ ಐದು ವರ್ಷಗಳಿಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಸುಮಾರು 30 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಮೈತ್ರಿ ಎಲೆಕ್ಟ್ರಿಕ್ ಕಂಪನಿಯನ್ನು ಆರಂಭಿಸಿ, ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಣಮಟ್ಟದ ವ್ಯವಹಾರದ ಮೂಲಕ ಗುರುತಿಸಿಕೊಂಡಿದ್ದಾರೆ.
ಕೋಶಾಧಿಕಾರಿ ಸಿಎ ದೀಪಕ್ ಕೆ:
ಪುತ್ತೂರಿನ ಸಿಎ ದಾಮೋದರ ನಾಯಕ್ ಕೆ. ಮತ್ತು ದಿವ್ಯಾ ಡಿ. ನಾಯಕ್ ಅವರ ಪುತ್ರರಾದ ದೀಪಕ್ ಕೆ ಅವರು ಬಿಕಾಂ, ಡಿಐಎಸ್ಎ ಪದವಿಯೊಂದಿಗೆ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. 2012ರ ಮೇ ತಿಂಗಳ ಸಿಎ ಇಂಟರ್ಮೀಡಿಯೇಟ್ (ಐಪಿಸಿಸಿ) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 47ನೇ ರ್ಯಾಂಕ್ ಗಳಿಸಿದ್ದಾರೆ. ಪುತ್ತೂರಿನ ಎಂ/ಎಸ್ ದಾಮೋದರ್ ಆ್ಯಂಡ್ ಕೋ ಸಂಸ್ಥೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ವೃತ್ತಿ ನಿರ್ವಹಿಸುತ್ತಿದ್ದು, ಸಿಎಸ್ ಅಂತಿಮ ಹಂತದ ಅಧ್ಯಯನ ಮುಂದುವರಿಸಿದ್ದಾರೆ. ಮಂಗಳೂರು ಐಸಿಎಐ ಶಾಖೆಯಲ್ಲಿ ಐಸಿಐಟಿಎಸ್ಎಸ್ ಮತ್ತು ಎಐಸಿಐಟಿಎಸ್ಎಸ್ ತರಬೇತಿಗಳಿಗೆ ಅರೆಕಾಲಿಕ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಶೈಕ್ಷಣಿಕ
Vivekananda Autonomous College Puttur Rank Holders 2026: ವಿವೇಕಾನಂದ ಸ್ವಾಯತ್ತ ಕಾಲೇಜಿನ ಸ್ನಾತಕ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ರ್ಯಾಂಕ್ ಪಟ್ಟಿ ಪ್ರಕಟ

Vivekananda Autonomous College Puttur Rank Holders 2026: ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಒಟ್ಟು 10 ರ್ಯಾಂಕ್ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
2023-26ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಎಂಟು ರ್ಯಾಂಕ್ಗಳನ್ನು ಗಳಿಸಿದ್ದಾರೆ. ಬಿ.ಎ ವಿಭಾಗದಲ್ಲಿ ವಾಮನ ಆಚಾರ್ಯ ಮತ್ತು ಸುಮಿತಾ ದಂಪತಿಯ ಪುತ್ರಿ ಸುಮನಾ (95.41%) ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಬಿಎಸ್ಸಿ ವಿಭಾಗದಲ್ಲಿ ಜಿ. ಪುರುಷೋತ್ತಮ ಪ್ರಭು ಮತ್ತು ಜಿ. ವಿದ್ಯಾ ಪ್ರಭು ದಂಪತಿಯ ಪುತ್ರಿ ಅನುಶ್ರೀ ಜಿ. ಪ್ರಭು (96.38%) ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ಬಿಬಿಎ ವಿಭಾಗದಲ್ಲಿ ಪ್ರದೀಪ್ ಮತ್ತು ಗೀತಾ ಬಿ. ದಂಪತಿಯ ಪುತ್ರಿ ಅನುಶ್ರೀ (94.21%) ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಬಿಕಾಂ ವಿಭಾಗದಲ್ಲಿ ರಾಮಚಂದ್ರ ವಿ. ಮತ್ತು ವಾಣಿ ರಾಮಚಂದ್ರ ದಂಪತಿಯ ಪುತ್ರಿ ಶರಣ್ಯ ವಿ.ಆರ್. (98.79%) ಪ್ರಥಮ ರ್ಯಾಂಕ್ ಗಳಿಸಿದರೆ, ಶ್ರೀಪತಿ ವಿ. ಮತ್ತು ವೀಣಾ ಶ್ರೀಪತಿ ದಂಪತಿಯ ಪುತ್ರಿ ಸಿಂಧೂರ ವಿ.ಎಸ್. (98.29%) ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.
ಬಿಸಿಎ ವಿಭಾಗದಲ್ಲಿ ಜಯರಾಮ ಹೆಗ್ಡೆ ಮತ್ತು ಗಾಯತ್ರಿ ದೇವಿ ಪಿ. ದಂಪತಿಯ ಪುತ್ರಿ ಮಹಿ ಜೆ. ಹೆಗ್ಡೆ (96.13%) ಪ್ರಥಮ ರ್ಯಾಂಕ್, ಗೋವಿಂದ ಪ್ರಸಾದ್ ಮತ್ತು ವಿದ್ಯಾ ದಂಪತಿಯ ಪುತ್ರ ಶ್ರೀನಿಧಿ ಎ. (95.3%) ದ್ವಿತೀಯ ರ್ಯಾಂಕ್ ಹಾಗೂ ಶೇಖರ ಪೂಜಾರಿ ಮತ್ತು ಸುಮಿತ್ರ ಬಿ.ಕೆ. ದಂಪತಿಯ ಪುತ್ರಿ ಸಮೃದ್ಧಿ (94.96%) ತೃತೀಯ ರ್ಯಾಂಕ್ ಗಳಿಸಿದ್ದಾರೆ.
ಇನ್ನು 2024-26ನೇ ಸಾಲಿನ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿಯೂ ಕಾಲೇಜಿನ ವಿದ್ಯಾರ್ಥಿಗಳು ಎರಡು ಪ್ರಥಮ ರ್ಯಾಂಕ್ಗಳನ್ನು ಪಡೆದುಕೊಂಡಿದ್ದಾರೆ.
ಎಂ.ಕಾಂ ವಿಭಾಗದಲ್ಲಿ ರಘು ಮತ್ತು ಸುನಿತಾ ದಂಪತಿಯ ಪುತ್ರ ಪವನ್ ರಾಜ್ (9.05 ಸಿಜಿಪಿಎ) ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಎಂ.ಎ. ಜೆಎಂಸಿ ವಿಭಾಗದಲ್ಲಿ ವೆಂಕಟರಮಣ ಭಟ್ ಬಿ. ಮತ್ತು ಗುಣಶ್ರೀ ದಂಪತಿಯ ಪುತ್ರಿ ಪಂಚಮಿ ಕುಮಾರಿ ಬಿ. (8.09 ಸಿಜಿಪಿಎ) ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಶ್ರೀಕೃಷ್ಣ ಗಣರಾಜ ಭಟ್ ಎಸ್. ಹಾಗೂ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರಕಾಶ್ ಕುಮಾರ್ ಪಿ. ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಶೈಕ್ಷಣಿಕ
Vitla-ವಿಟ್ಲ: ನಾಲೆಡ್ಜ್ ಹಬ್ ವತಿಯಿಂದ ಆನ್ ಲೈನ್ ನಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿ
ವಿಟ್ಲ ನಾಲೆಡ್ಜ್ ಹಬ್ ವತಿಯಿಂದ ಆನ್ ಲೈನ್ ನಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿ ಪ್ರಾರಂಭಿಸಲಾಗಿದ್ದು ಈಗಾಗಲೇ ಇದರ ನೋಂದಾವಣೆ ಪ್ರಾರಂಭಗೊಂಡಿರುತ್ತದೆ. ಮನೆಯಲ್ಲಿಯೇ ಕುಳಿತುಕೊಂಡು ಅತೀ ಕಡಿಮೆ ಫೀಸ್ ಮತ್ತು ಕಡಿಮೆ ಅವಧಿಯಲ್ಲಿ ಇಂಗ್ಲೀಷ್ ಸರಳವಾಗಿ ಮಾತನಾಡಬಹುದು.
ವಿಟ್ಲ: ವಿಟ್ಲ ನಾಲೆಡ್ಜ್ ಹಬ್ ವತಿಯಿಂದ ಆನ್ ಲೈನ್ ನಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿ ಪ್ರಾರಂಭಿಸಲಾಗಿದ್ದು ಈಗಾಗಲೇ ಇದರ ನೋಂದಾವಣೆ ಪ್ರಾರಂಭಗೊಂಡಿರುತ್ತದೆ.
ಮನೆಯಲ್ಲಿಯೇ ಕುಳಿತುಕೊಂಡು ಅತೀ ಕಡಿಮೆ ಫೀಸ್ ಮತ್ತು ಕಡಿಮೆ ಅವಧಿಯಲ್ಲಿ ಇಂಗ್ಲೀಷ್ ಸರಳವಾಗಿ ಮಾತನಾಡಬಹುದು.
ವಿದ್ಯಾರ್ಥಿಗಳು, ವಿವಿಧ ಉದ್ಯೋಗದಲ್ಲಿರುವವರು, ವಿದೇಶದಲ್ಲಿರುವವರು ಈ ಕೋರ್ಸ್ ಗೆ ತಾವು ಇರುವ ಸ್ಥಳದಲ್ಲಿ ಇದ್ದುಕೊಂಡು ಆನ್ ಲೈನ್ ಮೂಲಕ ಇಂಗ್ಲೀಷ್ ಮಾತನಾಡಲು ಕಳಿಯಬಹುದು.
ಅನುಭವಿ ಶಿಕ್ಷಕರು ಗೂಗುಲ್ ಮೀಟ್ ಮೂಲಕ ದಿನಕ್ಕೆ ಒಂದು ಗಂಟೆ ಇಂಗ್ಲೀಷ್ ಕಲಿಸಿಕೊಡುತ್ತಾರೆ. ಶೇ. 100 ಫಲಿತಾಂಶ ಇದರಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9980205258ನ್ನು ಸಂಪರ್ಕಿಸಬಹುದು.
-
ಅಪರಾಧ20 hours agoMangalore-ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ಅಪಹರಣ..! ಹಿಂದೂ ಯುವಕ ಲವ್ ಆರೋಪ – ವಿಡಿಯೋ ವೈರಲ್ : ತನಿಖೆಗೆ ಕಮಿಷನರ್ ಸೂಚನೆ
-
ರಾಜಕೀಯ19 hours agoBJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
-
ಬಿಗ್ ನ್ಯೂಸ್18 hours agoHigh Court-Social Media ಅಕೌಂಟ್ ಇದ್ದ ಮಾತ್ರಕ್ಕೆ ಮನಸ್ಸಿಗೆ ಬಂದಿದ್ದನ್ನೆಲ್ಲ ಪೋಸ್ಟ್ ಮಾಡುವ Free Licence ಇಲ್ಲ : ಬೆಳ್ತಂಗಡಿಯ ಮೋಹನ್ ಬೋಳಂಗಡಿ – ಶುಭಾ ರೈ ವಿರುದ್ಧ ದಾಖಲಾದ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಎಚ್ಚರಿಕೆ
-
ನಿಧನ ವಾರ್ತೆ18 hours agoSavitri Devi-ಸಿಎಂ ಯೋಗಿ ಆದಿತ್ಯನಾಥ್ ತಾಯಿ ಸಾವಿತ್ರಿ ದೇವಿ ನಿಧನ
-
ದಕ್ಷಿಣ ಕನ್ನಡ17 hours ago
Ashok janamana 2026 : ಪುತ್ತೂರಿನಲ್ಲಿ ಅದ್ದೂರಿ ‘ಅಶೋಕ ಜನಮನ-2026’ ಸಂಭ್ರಮಕ್ಕೆ ಕ್ಷಣಗಣನೆ ! ಬಿ.ಕೆ. ಹರಿಪ್ರಸಾದ್, ಕೃಷ್ಣ ಬೈರೇಗೌಡ, ಯು.ಟಿ. ಖಾದರ್ ಸಹಿತ ರಾಜಕೀಯ, ಧಾರ್ಮಿಕ ಗಣ್ಯರ ಸಮಾಗಮ
-
ಅಪರಾಧ17 hours agoMangalore-ಮಂಗಳೂರು: ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಮನೆ ಮಾಲೀಕನ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ, ಮತ್ತೊಬ್ಬ ಖುಲಾಸೆ
-
ಬಿಗ್ ನ್ಯೂಸ್22 hours agoMuraleedhar Rai-ಮೆಸ್ಕಾಂ ನಿರ್ದೇಶಕರಾಗಿ ಮುರಳೀಧರ ರೈ ಮಠಂತಬೆಟ್ಟು ಸರ್ಕಾರದಿಂದ ನೇಮಕ
-
ಮಂಗಳೂರು18 hours agoSavanuru Cooperative Society-ʻಅತ್ಯುತ್ತಮ ವಿವಿಧೋದ್ದೇಶ ಸಹಕಾರ ಸಂಘʼಪ್ರಶಸ್ತಿಯ ಗರಿ ಮುಡಿಗೇರಿಸಿಕೊಂಡ ‘ಆದರ್ಶ ವಿವಿಧೋದ್ದೇಶ ಸಹಕಾರ ಸಂಘ’; ಸವಣೂರು ಸೀತಾರಾಮ ರೈ ಅವರಿಗೆ ಜಿ.ಟಿ. ದೇವೇಗೌಡರಿಂದ ಪ್ರಶಸ್ತಿ ಪ್ರಧಾನ















