ಅಪರಾಧ
Vitla-ವಿಟ್ಲ: ಮಲ್ಲಿಗೆ ಕೃಷಿಗೆ ಸಾಲ ಹಾಗೂ ಸಬ್ಸಿಡಿ ಹಣ ಕೊಡಿಸುವುದಾಗಿ ಪರಿಚಯಸ್ಥೆಯಿಂದ ಮಹಿಳೆಗೆ 70 ಲಕ್ಷ ರೂ. ವಂಚನೆ
ಮಲ್ಲಿಗೆ ಕೃಷಿಗೆ ಸರ್ಕಾರದಿಂದ ಸಾಲ ಹಾಗೂ ಸಬ್ಸಿಡಿ ಹಣ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಬರೋಬ್ಬರಿ 70 ಲಕ್ಷ ರೂಪಾಯಿ ವಂಚಿಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಟ್ಲ: ಮಲ್ಲಿಗೆ ಕೃಷಿಗೆ ಸರ್ಕಾರದಿಂದ ಸಾಲ ಹಾಗೂ ಸಬ್ಸಿಡಿ ಹಣ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಬರೋಬ್ಬರಿ 70 ಲಕ್ಷ ರೂಪಾಯಿ ವಂಚಿಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಕಡಂಬು ನಿವಾಸಿ ಬೀನಾ ರೋಡ್ರಿಗಸ್ (55) ಎಂಬವರು ಈ ಬಗ್ಗೆ ದೂರು ನೀಡಿದ್ದು, ಆರೋಪಿ ಫಿಲೋಮಿನಾ ಡಿ ಸೋಜಾ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಆರೋಪಿ ಫಿಲೋಮಿನಾ ಡಿ ಸೋಜಾ ಅವರು ಬೀನಾ ಅವರಿಗೆ ಪರಿಚಯಸ್ಥರಾಗಿದ್ದರು. 2024ರ ಅಕ್ಟೋಬರ್ ತಿಂಗಳಲ್ಲಿ ಬೀನಾ ಅವರನ್ನು ಸಂಪರ್ಕಿಸಿದ ಆರೋಪಿ, ತಾನು ಮಲ್ಲಿಗೆ ಕೃಷಿಗಾಗಿ ಸರ್ಕಾರದಿಂದ ಸಾಲ ಪಡೆಯುತ್ತಿದ್ದು, ಅದರಲ್ಲಿ ಹೆಚ್ಚಿನ ಸಬ್ಸಿಡಿ ಹಣ ಸಿಗುತ್ತದೆ. ಆ ಸಬ್ಸಿಡಿ ಹಣದಲ್ಲಿ ನಿಮಗೂ ಪಾಲು ನೀಡುತ್ತೇನೆ ಎಂದು ನಂಬಿಸಿದ್ದರು. ಇದಕ್ಕಾಗಿ ಅರ್ಜಿ ಸಲ್ಲಿಸಲು ಆರಂಭದಲ್ಲಿ 30,000 ರೂ. ಕಟ್ಟಬೇಕೆಂದು ತಿಳಿಸಿ, ದಿನಾಂಕ 03-10-2024 ರಂದು ಬೀನಾ ಅವರ ಮನೆಯಲ್ಲಿ ನಗದು ಹಣವನ್ನು ಪಡೆದಿದ್ದರು.
ತದನಂತರ, ಜಿಲ್ಲಾಧಿಕಾರಿಯವರ ಸೂಚನೆಯ ಮೇರೆಗೆ ಉದ್ಯೋಗ ಖಾತರಿಯಲ್ಲಿ 10 ಲಕ್ಷ ರೂ. ಕಟ್ಟಿದರೆ, ಹೆಚ್ಚುವರಿಯಾಗಿ 10 ಲಕ್ಷ ಸಾಲ ಸಿಗಲಿದ್ದು, ಅದರಲ್ಲಿ 75% ಸಾಲ ಮನ್ನಾ ಆಗುತ್ತದೆ ಎಂದು ಆರೋಪಿ ನಂಬಿಸಿದ್ದರು. ಅಲ್ಲದೆ, ಪಡೆದ ಸಾಲಕ್ಕೆ ಬಡ್ಡಿ ಮತ್ತು ಸಬ್ಸಿಡಿ ಹಣವನ್ನು ವಾಪಸ್ ನೀಡುವುದಾಗಿ ಭರವಸೆ ನೀಡಿದ್ದರು.
ಆರೋಪಿಯ ಮಾತು ನಂಬಿದ ಬೀನಾ ಅವರು, ದಿನಾಂಕ 03-10-2024 ರಿಂದ 19-11-2025 ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 70,00,000/- (ಎಪ್ಪತ್ತು ಲಕ್ಷ) ರೂಪಾಯಿ ಹಣವನ್ನು ನೀಡಿದ್ದಾರೆ. ಆದರೆ ಆರೋಪಿ ಹಣವನ್ನೂ ಹಿಂತಿರುಗಿಸದೇ, ಸಬ್ಸಿಡಿಯನ್ನೂ ಕೊಡಿಸದೇ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 176/2025, ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ: 318(2), 318(4) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಅಂತರ ರಾಜ್ಯ
Sreejit Ravi-ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಮಲಯಾಳಂ ನಟ ಶ್ರೀಜಿತ್ ರವಿಗೆ 1 ವರ್ಷ ಜೈಲು
ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ನಟ ಶ್ರೀಜಿತ್ ರವಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತ್ರಿಶೂರ್ ನ್ಯಾಯಾಲಯ ತೀರ್ಪು ನೀಡಿದೆ.
ತ್ರಿಶೂರ್: ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ನಟ ಶ್ರೀಜಿತ್ ರವಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತ್ರಿಶೂರ್ ನ್ಯಾಯಾಲಯ ತೀರ್ಪು ನೀಡಿದೆ.
2022ರಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಶೂರ್ನ ಫಾಸ್ಟ್ಟ್ರ್ಯಾಕ್ ವಿಶೇಷ ನ್ಯಾಯಾಲಯ-11ರ ನ್ಯಾಯಾಧೀಶೆ ರಮ್ಯಾ ಮೆನನ್ ಅವರು, ಪೋಕ್ಸೋ ಕಾಯ್ದೆಯ ಸೆಕ್ಷನ್ 12 ಹಾಗೂ ಭಾರತೀಯ ದಂಡ ಸಂಹಿತೆ (IPC) 1860ರ ಸೆಕ್ಷನ್ 509ರ ಅಡಿಯಲ್ಲಿ ಶ್ರೀಜಿತ್ ರವಿ ಅವರನ್ನು ದೋಷಿ ಎಂದು ಘೋಷಿಸಿದ್ದಾರೆ.
2022ರ ಜುಲೈ 4ರಂದು ಇಬ್ಬರು ಅಪ್ರಾಪ್ತ ಬಾಲಕಿಯರು ಶಾಲೆಯಿಂದ ತ್ರಿಶೂರ್ನ ಅರನಟ್ಟುಕರದಲ್ಲಿರುವ ತಮ್ಮ ಅಪಾರ್ಟ್ಮೆಂಟ್ಗೆ ಮರಳುತ್ತಿದ್ದ ವೇಳೆ ಘಟನೆ ನಡೆದಿತ್ತು. ಪ್ರಾಸಿಕ್ಯೂಷನ್ ಪ್ರಕಾರ, ಶ್ರೀಜಿತ್ ರವಿ ಕಾರಿನಲ್ಲಿ ಬಾಲಕಿಯರನ್ನು ಹಿಂಬಾಲಿಸಿ, ಅಪಾರ್ಟ್ಮೆಂಟ್ನ ಕಾರು ನಿಲುಗಡೆ ಪ್ರದೇಶದಲ್ಲಿ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದರು.
ವಿಚಾರಣೆ ವೇಳೆ ಬಾಲಕಿಯರು ನ್ಯಾಯಾಲಯದಲ್ಲಿ ಶ್ರೀಜಿತ್ ರವಿಯನ್ನು ಗುರುತಿಸಿದ್ದರು. ಆದರೆ, ಚಲನಚಿತ್ರ ನಟನಾಗಿದ್ದರೂ ಬಾಲಕಿಯರು ಆತನ ಹೆಸರನ್ನು ಗುರುತಿಸಲು ವಿಫಲರಾಗಿದ್ದಾರೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ನಟನ ಪರ ವಕೀಲರು ಗುರುತಿಸುವಿಕೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದರು.
ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಬಾಲಕಿಯರು ಆರೋಪಿಯನ್ನು ಗುರುತಿಸಿದ್ದು, ಅವರ ದೈಹಿಕ ಚಹರೆಯ ಬಗ್ಗೆಯೂ ಸ್ಪಷ್ಟವಾಗಿ ವಿವರಿಸಿದ್ದಾರೆ ಎಂದು ತಿಳಿಸಿದೆ.
ಪೊಲೀಸ್ ತನಿಖೆಯಲ್ಲಿನ ಕೆಲವು ಲೋಪಗಳ ಬಗ್ಗೆಯೂ ನ್ಯಾಯಾಲಯ ಗಮನ ಸೆಳೆದಿದೆ. ವಿಶೇಷವಾಗಿ, ಘಟನೆ ನಡೆದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸದಿರುವುದನ್ನು ಉಲ್ಲೇಖಿಸಿದೆ. ಆದರೆ, ತನಿಖೆಯಲ್ಲಿನ ಇಂತಹ ಲೋಪಗಳು ಬಾಲಕಿಯರು ನೀಡಿದ ಸಾಕ್ಷ್ಯಗಳ ವಿಶ್ವಾಸಾರ್ಹತೆಯನ್ನು ಕುಗ್ಗಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಂತರ ರಾಜ್ಯ
FIR-ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ: ಬಿಗ್ ಬಾಸ್ ವಿಜೇತ ಮುತ್ತುಕುಮಾರನ್ ವಿರುದ್ಧ ಇನ್ಫ್ಲುಯೆನ್ಸರ್ ವಹಿದಾ ದೂರು – ಎಫ್ಐಆರ್ ದಾಖಲು..!
ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ‘ಬಿಗ್ ಬಾಸ್ ತಮಿಳು ಸೀಸನ್-8’ರ ವಿಜೇತ ಮುತ್ತುಕುಮಾರನ್ ಜಗದೀಶನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೆನ್ನೈ: ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ‘ಬಿಗ್ ಬಾಸ್ ತಮಿಳು ಸೀಸನ್-8’ರ ವಿಜೇತ ಮುತ್ತುಕುಮಾರನ್ ಜಗದೀಶನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ಫ್ಲುಯೆನ್ಸರ್ ವಹಿದಾ ಅಖ್ದರ್ (Wahidha Akdhar) ನೀಡಿದ ದೂರಿನ ಆಧಾರದಲ್ಲಿ ಚೆನ್ನೈನ ವಿರುಗಂಬಾಕ್ಕಂ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 69ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಮುತ್ತುಕುಮಾರನ್ ಅವರಿಗೆ ಶೀಘ್ರದಲ್ಲೇ ಸಮನ್ಸ್ ಜಾರಿ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇದೇ ವೇಳೆ, ತಮ್ಮ ವಿರುದ್ಧ ದೂರು ನೀಡಿರುವ ವಹಿದಾ ವಿರುದ್ಧವೇ ಮುತ್ತುಕುಮಾರನ್ ಪ್ರತಿದೂರು ದಾಖಲಿಸಿದ್ದಾರೆ. ವಹಿದಾ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಏನಿದು ಪ್ರಕರಣ?
‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ಇನ್ಸ್ಟಾಗ್ರಾಮ್ ಮೂಲಕ ಮುತ್ತುಕುಮಾರನ್ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತ್ತು ಎಂದು ವಹಿದಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ದೈಹಿಕ ಸಂಪರ್ಕ ಬೆಳೆಸುವ ಮೊದಲು ಮುತ್ತುಕುಮಾರನ್ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆದರೆ, ನಂತರ ಮದುವೆಯಾಗಲು ನಿರಾಕರಿಸಿದ್ದಾರೆ ಎಂಬುದು ವಹಿದಾ ಅವರ ಆರೋಪವಾಗಿದೆ.
ಈ ಸಂಬಂಧ ವಹಿದಾ ಮೊದಲು ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಬಳಿಕ ದೂರನ್ನು ವಿರುಗಂಬಾಕ್ಕಂ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಅಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಿಎನ್ಎಸ್ ಸೆಕ್ಷನ್ 69ರ ಅಡಿಯಲ್ಲಿ, ಅತ್ಯಾಚಾರದ ವ್ಯಾಪ್ತಿಗೆ ಬಾರದಿದ್ದರೂ ಮದುವೆಯಾಗುವ ಸುಳ್ಳು ಭರವಸೆ ಸೇರಿದಂತೆ ವಂಚನೆಯ ಮಾರ್ಗಗಳ ಮೂಲಕ ದೈಹಿಕ ಸಂಪರ್ಕ ಬೆಳೆಸುವುದಕ್ಕೆ ಸಂಬಂಧಿಸಿದ ಅಪರಾಧವನ್ನು ಪರಿಗಣಿಸಲಾಗುತ್ತದೆ.
ನವೆಂಬರ್ 9ರಂದು ವಹಿದಾ ಅವರು ಮುತ್ತುಕುಮಾರನ್ ಜೊತೆಗಿನ ಸಂಬಂಧದ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡ ಬಳಿಕ ಈ ವಿಚಾರ ಬಹಿರಂಗವಾಗಿತ್ತು. ಇಬ್ಬರೂ ಜೊತೆಯಾಗಿರುವ ವಿಡಿಯೊವನ್ನು ಪ್ರಕಟಿಸಿದ್ದ ಅವರು, ಮುತ್ತುಕುಮಾರನ್ ನೀಡಿದ್ದ ಭರವಸೆಗಳ ಬಗ್ಗೆ ಪ್ರಶ್ನಿಸಿದ್ದರು. ತಮ್ಮ ಪೋಸ್ಟ್ನಲ್ಲಿ, “ನೀನು ಹೇಳಿದ್ದೆಲ್ಲವೂ ನಿನಗೆ ಕೇವಲ ತಮಾಷೆಯಾಗಿತ್ತು” ಎಂದು ಬರೆದುಕೊಂಡಿದ್ದರು.
ಇದರ ಬೆನ್ನಲ್ಲೇ ವಹಿದಾ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಗಳೂ ಪ್ರಕಟವಾಗಿದ್ದವು. ಈ ಪ್ರಕರಣದ ಕುರಿತು ಹಿರಿಯ ಗೀತರಚನೆಕಾರ ತಾಮರೈ ಕೂಡ ಫೇಸ್ಬುಕ್ನಲ್ಲಿ ಪ್ರತಿಕ್ರಿಯಿಸಿದ್ದು, ಮುತ್ತುಕುಮಾರನ್ ಅವರನ್ನು ಟೀಕಿಸಿ, ಆರೋಪಗಳ ಬಗ್ಗೆ ತಮ್ಮ ಕಡೆಯ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ.
ನಟ ವಿಜಯ್ ಸೇತುಪತಿ ನಿರೂಪಣೆಯ ‘ಬಿಗ್ ಬಾಸ್ ತಮಿಳು ಸೀಸನ್-8’ರಲ್ಲಿ ಸ್ಪರ್ಧಿಸುವ ಮೂಲಕ ಮುತ್ತುಕುಮಾರನ್ ಜನಪ್ರಿಯತೆ ಗಳಿಸಿದ್ದರು. 2025ರ ಜನವರಿ 19ರಂದು ನಡೆದ ಫಿನಾಲೆಯಲ್ಲಿ ಅವರು ಕಾರ್ಯಕ್ರಮದ ವಿಜೇತರಾಗಿ ಹೊರಹೊಮ್ಮಿದ್ದರು.
ನಟ ವಿಜಯ್ ಸೇತುಪತಿ ನಿರೂಪಣೆಯ ‘ಬಿಗ್ ಬಾಸ್ ತಮಿಳು ಸೀಸನ್ 8’ರಲ್ಲಿ ಭಾಗವಹಿಸುವ ಮೂಲಕ ಮುತ್ತುಕುಮಾರನ್ ಅಪಾರ ಜನಪ್ರಿಯತೆ ಗಳಿಸಿದ್ದರು. ಜನವರಿ 19, 2025ರಂದು ನಡೆದ ಫಿನಾಲೆಯಲ್ಲಿ ಅವರು ಶೋನ ವಿಜೇತರಾಗಿ ಹೊರಹೊಮ್ಮಿದ್ದರು.
ಅಪರಾಧ
Mangalore-Big Breaking:ಮಂಗಳೂರು: ಕದ್ರಿ ಯುದ್ಧ ಸ್ಮಾರಕದಲ್ಲಿರುವ ಟಿ-55 ಟ್ಯಾಂಕ್ ಮೇಲೆ ಹತ್ತಿ ಯುವಕರ ಹುಚ್ಚಾಟ; ವಿಡಿಯೋ ವೈರಲ್, ಸಾರ್ವಜನಿಕರ ಆಕ್ರೋಶ
ಮಂಗಳೂರು ನಗರದ ಕದ್ರಿ ಯುದ್ಧ ಸ್ಮಾರಕದ ಬಳಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿರುವ ಯುದ್ಧ ಟ್ಯಾಂಕ್ ಮೇಲೆ ಹತ್ತಿ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರು: ನಗರದ ಕದ್ರಿ ಯುದ್ಧ ಸ್ಮಾರಕದ ಬಳಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿರುವ ಯುದ್ಧ ಟ್ಯಾಂಕ್ ಮೇಲೆ ಹತ್ತಿ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರು ಸರ್ಕೀಟ್ ಹೌಸ್ ಮುಂಭಾಗದ ಕದ್ರಿ ಯುದ್ಧ ಸ್ಮಾರಕದ ಬಳಿ 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿದ್ದ ಟಿ-55 ಯುದ್ಧ ಟ್ಯಾಂಕ್ನ್ನು ಸಾರ್ವಜನಿಕರ ವೀಕ್ಷಣೆಗಾಗಿ ಎತ್ತರದ ವೇದಿಕೆಯಲ್ಲಿ ಇರಿಸಲಾಗಿದೆ.
ರಾತ್ರಿ ವೇಳೆ ಇಬ್ಬರು ಯುವಕರು ಟ್ಯಾಂಕ್ ಮೇಲೆ ಹತ್ತಿ, ಅದರ ಹ್ಯಾಚ್ ತೆರೆದು ಒಳಗೆ ಪ್ರವೇಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ತಮ್ಮ ಕಿಡಿಗೇಡಿತನದ ವರ್ತನೆಯನ್ನು ವಿಡಿಯೋ ಮಾಡಿಕೊಂಡಿರುವ ಯುವಕರು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ.
ದೇಶದ ಯುದ್ಧ ಇತಿಹಾಸ ಹಾಗೂ ಸೈನಿಕರ ಶೌರ್ಯ, ತ್ಯಾಗದ ಸಂಕೇತವಾಗಿ ಇರಿಸಲಾಗಿರುವ ಟ್ಯಾಂಕ್ ಬಳಿ ಯುವಕರು ಇಂತಹ ವರ್ತನೆ ತೋರಿರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-
ಬಿಗ್ ನ್ಯೂಸ್21 hours agoBantwal-ಬಂಟ್ವಾಳ: ತಂದೆ ಗದರಿಸಿದ್ದಕ್ಕೆ ಮನೆ ಬಿಟ್ಟ ಬ್ಯಾಂಕ್ ಉದ್ಯೋಗಿ ಯುವತಿ ನಾಪತ್ತೆ..!
-
ಸ್ಥಳೀಯ21 hours agoBank-ಚಿನ್ನದ ಬೆಲೆ ಕುಸಿತದ ಎಫೆಕ್ಟ್: ಗೋಲ್ಡ್ ಲೋನ್ ಪಡೆದವರಿಗೆ ಬ್ಯಾಂಕ್ಗಳಿಂದ ಶಾಕ್; ಒಡವೆ ಹರಾಜಿನ ಎಚ್ಚರಿಕೆ..!
-
ಮಂಗಳೂರು22 hours agoPugasarum-ಅಡಕೆ, ವೀಳ್ಯದೆಲೆಯ ‘ಪೂಗಸಾರಂ’ನಿಂದ ಕ್ಯಾನ್ಸರ್ ಬೆಳವಣಿಗೆಗೆ ಕಡಿವಾಣ? ಮಂಗಳೂರಿನ ವಿಜ್ಞಾನಿಗಳ ಸಂಶೋಧನೆಯಲ್ಲಿ ಮಹತ್ವದ ಅಂಶ ಪತ್ತೆ..!
-
Uncategorized13 hours ago
ಫುತ್ತೂರು : ಗುತ್ತಿಗೆದಾರರ ಸಹಾಯಕಿಗೆ ಲೈಂಗಿಕ ದೌರ್ಜನ್ಯ, ವಿಡಿಯೋ ಚಿತ್ರೀಕರಣ , ಕಾರು ಹತ್ತಿಸಲು ಯತ್ನ ಆರೋಪ; ಮೆಸ್ಕಾಂ ಸಿಬ್ಬಂದಿ ವಿರುದ್ಧ ಕೇಸ್
-
ನಿಧನ ವಾರ್ತೆ18 hours agoBabu Gowda-ಧರ್ಮಸ್ಥಳ: ದಿ. ಸೌಜನ್ಯ ಅಜ್ಜ ಪಾಂಗಳ ನಿವಾಸಿ ಬಾಬು ಗೌಡ ನಿಧನ
-
ಅಂತರ ರಾಜ್ಯ22 hours agoFIR-ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ: ಬಿಗ್ ಬಾಸ್ ವಿಜೇತ ಮುತ್ತುಕುಮಾರನ್ ವಿರುದ್ಧ ಇನ್ಫ್ಲುಯೆನ್ಸರ್ ವಹಿದಾ ದೂರು – ಎಫ್ಐಆರ್ ದಾಖಲು..!
-
ಮಂಗಳೂರು23 hours agoMangalore-ಮಂಗಳೂರು: ರಾತ್ರಿ 11:45ರಿಂದ ಬೆಳಗ್ಗೆ 5:30ರವರೆಗೆ ವ್ಯಾಪಾರ ನಿರ್ಬಂಧ; ಪೊಲೀಸ್ ಆಯುಕ್ತರಿಂದ ಹೊಸ ಆದೇಶ
-
ಸ್ಥಳೀಯ23 hours agoSubrahmanya-ಸುಬ್ರಹ್ಮಣ್ಯ: ಮನೆಗೆ ರಾತ್ರಿ ನಕ್ಸಲರ ಭೇಟಿ ಪ್ರಕರಣ: ಮಾಜಿ ನಕ್ಸಲರಾದ ರವೀಂದ್ರ, ಸುಂದರಿ, ದಿಶಾರಿಂದ ಸ್ಥಳ ಮಹಜರು















