ಶಿಕ್ಷಣ
Ambika-ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ರೂಪುಗೊಂಡ ವಿದ್ಯಾರ್ಥಿ ಉದ್ಯಮಿಗಳು; ಇನ್ನೂರಿಪ್ಪತ್ತು ಮಕ್ಕಳ ಮೂವತ್ತನಾಲ್ಕು ಸ್ಟಾಲ್‌ಗಳಿಗೆ ಸಾವಿರಾರು ಮಂದಿ ಖರೀದಿದಾರರು!
ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆ ತನ್ನ ವಿದ್ಯಾರ್ಥಿಗಳಲ್ಲಿ ವಾಣಿಜ್ಯ ವ್ಯವಹಾರ ಜ್ಞಾನ ತುಂಬುವ ಹಿನ್ನೆಲೆಯಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಂಡಿತ್ತು. ಅದುವೇ ಬಝಾರ್ ಫೆಸ್ಟಿವಲ್.
ಪುತ್ತೂರು: ಸಾಮಾನ್ಯವಾಗಿ ಶಾಲಾ ಕಾಲೇಜುಗಳಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಪ್ರಾಯೋಗಿಕ ಕಲಿಕೆ ನಡೆಯುತ್ತಿರುತ್ತದೆ. ವಿದ್ಯಾರ್ಥಿಗಳಿಂದ ವೈಜ್ಞಾನಿಕ ಅನ್ವೇಷಣೆಗಳು, ವಿನೂತನ ಸಾಧ್ಯತೆಗಳ ಅನಾವರಣಗಳೂ ಕಾಣಸಿಗುತ್ತವೆ. ಆದರೆ ಕಲೆ, ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಾಯೋಗಿಕ ಅನುಭವ ಪಡೆಯುವ ಸಾಧ್ಯತೆಗಳು ಕಡಿಮೆ.

ಆದರೆ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆ ತನ್ನ ವಿದ್ಯಾರ್ಥಿಗಳಲ್ಲಿ ವಾಣಿಜ್ಯ ವ್ಯವಹಾರ ಜ್ಞಾನ ತುಂಬುವ ಹಿನ್ನೆಲೆಯಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಂಡಿತ್ತು. ಅದುವೇ ಬಝಾರ್ ಫೆಸ್ಟಿವಲ್. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವ ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಅರ್ಧ ದಿನ ವ್ಯಾಪಾರ ವಹಿವಾಟು ನಡೆಸುವಂತೆ ಕರೆ ನೀಡಿತ್ತು. ಪರಿಣಾಮವಾಗಿ ಶಾಲೆಯ ಎದುರಿನ ವಿಶಾಲವಾದ ಶ್ರೀ ಶಂಕರ ಸಭಾಭವನದಲ್ಲಿ ಭರ್ತಿ ಮೂವತ್ತನಾಲ್ಕು ಭಿನ್ನ ಭಿನ್ನ ವ್ಯಾಪಾರ ಕೇಂದ್ರಗಳು ತಲೆ ಎತ್ತಿ ನಿಂತಿದ್ದವು.

ಮನೆಯಲ್ಲೇ ತಯಾರಿಸಿದ ಹೋಳಿಗೆ, ಅತಿರಸ, ಜಾಮೂನು, ತಂಬಿಟ್ಟುವಡೆ, ಗೋಧಿ ಉಂಟೆ, ಡ್ರೆöÊಫ್ರುಟ್ಸ್, ಮಿಕ್ಸರ್‌ಗಳ ಸ್ಟಾಲ್‌ಗಳು ಒಂದೆಡೆಯಾದರೆ ಬಿಸಿ ಬಿಸಿ ಬಜ್ಜಿ, ಮಸಾಲಪುರಿ, ಪಾನಿಪುರಿ, ಚರುಂಬುರಿಯೇ ಮೊದಲಾದ ಸ್ಟಾಲ್‌ಗಳು ಮತ್ತೊಂದೆಡೆ ನೆರೆದವರನ್ನು ಕೈಬೀಸಿ ಕರೆಯುತ್ತಿದ್ದವು. ಇನ್ನು ಮಜ್ಜಿಗೆ, ವಿವಿಧ ಬಗೆಯ ಜ್ಯೂಸ್, ರೆಡಿಮೇಡ್ ತಂಪುಪಾನೀಯಗಳೇ ಮೊದಲಾದ ಪಾನೀಯಗಳು ಆಗಮಿಸಿದವರ ಬಾಯಾರಿಕೆಯನ್ನು ತಣಿಸುತ್ತಿದ್ದವು. ಜತೆಗೆ ಮಹಿಳೆಯರ ಕಿವಿ, ಮೂಗಿನ ಆಭರಣಗಳು, ಪುಸ್ತಕಗಳು, ಕೀ ಪಂಚ್‌ಗಳು ಬಿಡುವಿಲ್ಲದೆ ಬಿಕರಿಯಾದವು. ಅಲಂಕಾರಿಕ ಕೈ ಕುಸುರಿಗಳು, ಟೇಬಲ್ ಡೆಕರೇಟಿವ್ ವಸ್ತುಗಳೇ ಮೊದಲಾದವುಗಳು ಜನಮನ ಸೆಳೆದವು. ಹರಿವೆ, ಬಸಳೆ, ಪಡುವಲಕಾಯಿಯಂತಹ ಹಸುರು ತರಕಾರಿಗಳು ಕ್ಷಣಾರ್ಧದಲ್ಲಿ ಮಾರಾಟವಾಗಿ ವಿದ್ಯಾರ್ಥಿ ಉದ್ಯಮಿಗಳ ಮೊಗದಲ್ಲಿ ವಿಜಯದ ನಗು ತರಿಸಿತು. ಪುನರ್ಪುಳಿ, ಹುಣಸೆಹಣ್ಣು, ಎಳೆನೀರಿನ ಜ್ಯೂಸ್‌ಗಳು, ಐಸ್ ಕ್ರೀಂಗಳು ನೆರೆದವರ ದಾಹಕ್ಕೆ ತಂಪನ್ನಿತ್ತವು. ತನ್ಮಧ್ಯೆ ನಿಗದಿತ ಸಂಖ್ಯೆಗೆ ಹಣ ಹೂಡಿ ಲೂಡೋ ಕಾಯಿನ್‌ನಲ್ಲಿ ಅದೇ ಸಂಖ್ಯೆ ಬಂದರೆ ಹಣ ದುಪ್ಪಟ್ಟು ಪಡೆಯುವ ಆಟ ಹಲವರ ಅದೃಷ್ಟ ಪರೀಕ್ಷೆ ನಡೆಸಿತು.
ಅಚ್ಚರಿಯ ಸಂಗತಿಯೆಂದರೆ ಕೆಲವು ವ್ಯಾಪಾರ ಕೇಂದ್ರಗಳ ಆದಾಯ ಐದಾರು ಸಾವಿರವನ್ನೂ ಮೀರಿಸಿತ್ತು! ಅಂದಹಾಗೆ ಲಾಭ ನಷ್ಟ ಏನೇ ಇದ್ದರೂ ಅದು ಸ್ಟಾಲ್ ಇಟ್ಟ ವಿದ್ಯಾರ್ಥಿ ಉದ್ಯಮಿಗಳಿಗೇ! ಸ್ಟಾಲ್‌ನಲ್ಲಿ ಉಳಿಕೆಯಾದ ವಸ್ತುಗಳ ಹೊಣೆಯೂ ಅವರದ್ದೇ. ಒಂದೆರಡು ಸ್ಟಾಲ್‌ಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಸ್ಟಾಲ್‌ಗಳು ಭರ್ಜರಿ ಆದಾಯಗಳಿಸಿದವು. ಲಾಭ ಗಳಿಸಿದವರಿಗೆ ಯಾವ ವ್ಯವಹಾರ ಲಾಭ ತರುತ್ತದೆ ಎಂಬ ಜ್ಞಾನ ನೀಡಿದರೆ, ನಷ್ಟ ಅನುಭವಿಸಿದವರಿಗೆ ತಾವೇಕೆ ಸೋತೆವು ಎಂಬ ಆತ್ಮ ವಿಮರ್ಶೆ ಮಾಡಿಕೊಳ್ಳುವ ಅವಕಾಶ ದೊರಕಿತು.

‘ಮಕ್ಕಳಲ್ಲಿ ಉದ್ಯಮ ಶೀಲತೆಯ ಕಲ್ಪನೆ ಬೆಳೆಯಬೇಕು. ಸ್ವಂತ ವ್ಯವಹಾರ. ಸ್ಟಾಟ್ ಅಪ್ ಮಾಡುವ ಮನಸ್ಥಿತಿ ಎಳೆಯ ಹಂತದಿಂದಲೇ ಬೆಳೆಯಬೇಕು. ವಿದೇಶದ ಯಾವುದೋ ಕಂಪೆನಿಗೆ ಹೋಗಿ ಶರಣಾಗುವ ಬದಲು ತಾನೇ ಸ್ವಯಂ ಉದ್ಯಮ ನಿರ್ಮಿಸಿ ಹತ್ತಾರು ಜನರಿಗೆ ಉದ್ಯೋಗದಾತ ಎನಿಸುವ ಕಲ್ಪನೆ ಮಕ್ಕಳಲ್ಲಿ ಬಂದರೆ ಮುಂದೆ ಅದು ನೂತನ ಉದ್ಯಮಗಳಿಗೆ ತಳಹದಿಯಾಗಬಹುದು. ನಮ್ಮ ದೇಶವನ್ನು ಪ್ರೀತಿಸುವ ಟಾಟಾರಂತಹ ದೇಶಪ್ರೇಮಿ ಉದ್ಯಮಿಗಳನ್ನು, ಸಂಸ್ಥೆಗಳನ್ನು ಹುಟ್ಟುಹಾಕುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದು ಎಂಬುದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅವರ ಮಾತು.
ತೆರೆಮರೆಯ ಸಿದ್ಧತೆ:
ಈ ಕಾರ್ಯಕ್ರಮ ಆಯೋಜನೆಯಲ್ಲಿ ಆಡಳಿತ ಮಂಡಳಿಯ ಜತೆಗೆ ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ಹೆತ್ತವರ ಉತ್ಸಾಹವೂ ಪ್ರಮುಖ ಪಾತ್ರ ವಹಿಸಿತ್ತು. ಆರನೆಯ ತರಗತಿಯಿಂದ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಸ್ಟಾಲ್ ನಡೆಸುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಕನಿಷ್ಟ ಮೂರರಿಂದ ಗರಿಷ್ಟ ಐದು ಜನ ವಿದ್ಯಾರ್ಥಿಗಳನ್ನೊಳಗೊಂಡ ಸ್ಟಾಲ್ ರೂಪಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಅದರನ್ವಯ ವಿದ್ಯಾರ್ಥಿಗಳೇ ತಮ್ಮ ತಮ್ಮ ತಂಡವನ್ನು ರೂಪಿಸಿಕೊಂಡು, ತಮ್ಮದೇ ಯೋಜನೆಯ ಸ್ಟಾಲ್ ನಡೆಸುವುದಕ್ಕೆ ಸಿದ್ಧರಾಗಿ ನಿಂತಿದ್ದರು. ಕೆಲವರು ತಾವೇ ಮನೆಯಲ್ಲಿ ಸಿದ್ಧಪಡಿಸಿದ ವಸ್ತುಗಳ ಸ್ಟಾಲ್ ಅನ್ನು ಸಿದ್ಧಗೊಳಿಸಿದರೆ ಮತ್ತೆ ಕೆಲವರು ವಸ್ತುಗಳನ್ನು ಬೇರೆಡೆಯಿಂದ ತಂದು ವ್ಯಾಪಾರಕ್ಕೆ ಅಣಿಯಾಗಿದ್ದರು. ಹೀಗೆ ಒಟ್ಟು 220 ಮಂದಿ ವಿದ್ಯಾರ್ಥಿಗಳು ಸೇರಿಕೊಂಡು 34 ಸ್ಟಾಲ್ ಅನ್ನು ರೂಪಿಸಿ ವ್ಯಾಪಾರಕ್ಕೆ ಅಣಿಯಾಗಿದ್ದರು. ಆಯಾ ಸ್ಟಾಲ್‌ಗಳ ಮೇಲ್ವಿಚಾರಣೆಗೆ ಶಿಕ್ಷಕ ವೃಂದದವರೂ ಇದ್ದು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಈ ಸ್ಟಾಲ್ ವೀಕ್ಷಣೆ ಹಾಗೂ ಖರೀದಿಗಾಗಿ ಅಂಬಿಕಾ ವಿದ್ಯಾಲಯ ಅಲ್ಲದೆ ಅಂಬಿಕಾ ಪದವಿಪೂರ್ವ, ಪದವಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ವೃಂದ, ಹೆತ್ತವರು ಮಾತ್ರವಲ್ಲದೆ ಸಮಾಜದ ಮಂದಿ ಭಾಗಿಯಾದದ್ದು ವಿಶೇಷವೆನಿಸಿತು. ಅಂತಿಮವಾಗಿ, ವ್ಯವಹಾರವೆಲ್ಲಾ ಮುಗಿದು, ದಿನದ ಕೊನೆಯಲ್ಲಿ ಲೆಕ್ಕಕ್ಕೆ ಕುಳಿತಾಗ ಒಂದು ಲಕ್ಷಕ್ಕೂ ಮೀರಿದ ವ್ಯಾಪಾರ ನಡೆದದ್ದು ಕಂಡು ಬಂತು!
‘ಈ ‘ಬಝಾರ್ ಫೆಸ್ಟ್’ ಮಾಡುವಲ್ಲಿ ಹೆತ್ತವರ ಸಹಕಾರ ದೊಡ್ಡದು. ಮಕ್ಕಳಿಗೆ ಹಣಕಾಸಿನ ವ್ಯವಸ್ಥೆಯನ್ನು ಮಾಡುವ ಮೂಲಕ ಯೋಜನೆಯನ್ನು ಬೆಂಬಲಿಸಿದ್ದಾರೆ. ಹಾಗಾಗಿಯೇ ಕಾರ್ಯಕ್ರಮ ಅತ್ಯಂತ ತೃಪ್ತಿದಾಯಕವಾಗಿ ನಡೆದಿದೆ. ಅಂತೆಯೇ ಆಡಳಿತ ಮಂಡಳಿ ಹಾಗೂ ಶಿಕ್ಷಕ ಶಿಕ್ಷಕೇತರ ಬಳಗದ ಸಹಯೋಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆ. ವ್ಯಾಪಾರ ಹೇಗಿರುತ್ತದೆ, ಲಾಭ ನಷ್ಟ ಹೇಗಾಗುತ್ತದೆ, ವಿವಿಧ ಬಗೆಯ ಮಾಲಿಕತ್ವಗಳ ಕಲ್ಪನೆ ಈ ಕಾರ್ಯಕ್ರಮದಿಂದ ಮಕ್ಕಳಿಗೆ ಅರಿವಾಗಿದೆ’ ಎನ್ನುವುದು ಪ್ರಾಂಶುಪಾಲೆ ಮಾಲತಿ ಡಿ ಅವರ ಮಾತುಗಳು.
ಬಝಾರ್ ಫೆಸ್ಟ್ ನಮಗೆ ಒಳ್ಳೆಯ ಅನುಭವ ನೀಡಿದೆ. ಹಣದ ವ್ಯವಹಾರ ಹೇಗೆ ನಡೆಯುತ್ತದೆ, ಉತ್ತಮ ವ್ಯಾಪಾರ ಹೇಗೆ ಮಾಡಬಹುದು ಎಂಬುದಷ್ಟೇ ಅಲ್ಲದೆ ನಮ್ಮ ವ್ಯವಹಾರಕ್ಕೆ ಪ್ರಚಾರ ಹೇಗೆ ಮಾಡಬೇಕು ಎಂಬ ಕಲ್ಪನೆಯನ್ನೂ ಈ ಫೆಸ್ಟ್ ನಮ್ಮಲ್ಲಿ ತುಂಬಿದೆ – ಸುಧನ್ವ ಕೆ. ಏಳನೇ ತರಗತಿ ವಿದ್ಯಾರ್ಥಿ
ಬಝಾರ್ ಫೆಸ್ಟ್ ವ್ಯಾಪಾರೋದ್ಯಮದ ಸಾಧ್ಯಾಸಾಧ್ಯತೆಗಳನ್ನು ನಮಗೆ ಕಲಿಸಿಕೊಟ್ಟಿದೆ. ಜತೆಗೆ ಪರಸ್ಪರ ಸಹಕಾರದೊಂದಿಗೆ ಹೇಗೆ ವ್ಯಾಪಾರ ನಡೆಸಬಹುದು ಎಂಬ ಅನುಭವವನ್ನೂ ನೀಡಿದೆ. ಇದೊಂದು ಅತ್ಯುತ್ತಮ ಅವಕಾಶ. – ಮನಸ್ವಿ, ಎಂಟನೆ ತರಗತಿ ವಿದ್ಯಾರ್ಥಿನಿ
ಶಿಕ್ಷಣ
Philomena-ಮಂಗಳೂರು ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್ ಕೂಟದಲ್ಲಿ ಫಿಲೋಮಿನಾ ಕಾಲೇಜಿನ ಕ್ರೀಡಾಪಟುಗಳ ಸಾಧನೆ
ಮಂಗಳೂರಿನ ಅಜ್ಜರಕಾಡಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನ. 11ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಅಥ್ಲೆಟಿಕ್ಸ್ ಕೂಟದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದು, ಮಹಿಳಾ ತಂಡವು ಸಮಗ್ರವಾಗಿ ಐದನೇ ಹಾಗೂ ಪುರುಷರ ತಂಡವು ಏಳನೇ ಸ್ಥಾನ ಪಡೆದಿದೆ.
ಪುತ್ತೂರು, ನ. 20: ಮಂಗಳೂರಿನ ಅಜ್ಜರಕಾಡಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನ. 11ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಅಥ್ಲೆಟಿಕ್ಸ್ ಕೂಟದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದು, ಮಹಿಳಾ ತಂಡವು ಸಮಗ್ರವಾಗಿ ಐದನೇ ಹಾಗೂ ಪುರುಷರ ತಂಡವು ಏಳನೇ ಸ್ಥಾನ ಪಡೆದಿದೆ.
ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ನಿಹಾಲ್ ಪೋಲ್ ವಾಲ್ಟ್‌ನಲ್ಲಿ ಬೆಳ್ಳಿ ಪದಕ ಗಳಿಸಿದರೆ, ತೃತೀಯ ಬಿಎಸ್ಸಿಯ ರಿತೀಶ್ ಡಿಸ್ಕಸ್ ಥ್ರೋ ಹಾಗೂ ಶಾಟ್‌ಪುಟ್‌ನಲ್ಲಿ ತಲಾ ಕಂಚಿನ ಪದಕ ಪಡೆದರು. ದ್ವಿತೀಯ ಬಿಸಿಎಯ ಆಶ್ರಯ್ ಹಾಗೂ ಪ್ರಥಮ ಬಿಕಾಂನ ನಿಶ್ಚಿತ್ 4×400 ಮೀಟರ್ ಮಿಶ್ರ ರಿಲೇಯಲ್ಲಿ ಕಂಚಿನ ಪದಕ ಪಡೆದ ತಂಡದ ಸದಸ್ಯರಾಗಿದ್ದರು.
ಮಹಿಳಾ ವಿಭಾಗದಲ್ಲಿ ತೃತೀಯ ಬಿಕಾಂನ ಅಮೃತಾ ಹೈಜಂಪ್‌ನಲ್ಲಿ ಕಂಚಿನ ಪದಕ ಗಳಿಸಿದರೆ, ತೃತೀಯ ಬಿಕಾಂನ ಪೃಥ್ವಿ ಹ್ಯಾಮರ್ ಥ್ರೋದಲ್ಲಿ ಕಂಚಿನ ಪದಕ ಪಡೆದರು. ದ್ವಿತೀಯ ಬಿಎಯ ಕೃತಿ 4×400 ಮೀಟರ್ ಮಿಶ್ರ ರಿಲೇಯಲ್ಲಿ ಕಂಚಿನ ಪದಕ ಪಡೆದ ತಂಡದ ಸದಸ್ಯೆಯಾಗಿದ್ದರು. ಪ್ರಥಮ ಬಿಎಯ ಜೀವಿತಾ ಲಾಂಗ್ ಜಂಪ್ ಹಾಗೂ 4×400 ಮೀಟರ್ ಮಿಶ್ರ ರಿಲೇಯಲ್ಲಿ ತಲಾ ಕಂಚಿನ ಪದಕ ಗಳಿಸಿದರು.
ಕ್ರೀಡಾಪಟುಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ದೈಹಿಕ ಶಿಕ್ಷಣ ವಿಭಾಗ ಅಭಿನಂದನೆ ಸಲ್ಲಿಸಿದ್ದು, ಪದಕ ವಿಜೇತರು ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಕ್ರೀಡಾಪಟುಗಳು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.
ಶಿಕ್ಷಣ
Narendra-ಪುತ್ತೂರಿನ ನರೇಂದ್ರ ಪದವಿ ಪೂರ್ವ ಕಾಲೇಜಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರವೀಶ ನಾಯಕ್ ಬಿ.ಸಿ., ಸಂಚಾಲಕರಾಗಿ ಚೇತನ್ ನಾಯಕ್ ಜವಾಬ್ದಾರಿ ಸ್ವೀಕಾರ
ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಪ್ರತಿಷ್ಠಿತ ಘಟಕ ಸಂಸ್ಥೆಗಳಲ್ಲಿ ಒಂದಾಗಿರುವ ತೆಂಕಿಲದ ನರೇಂದ್ರ ಪದವಿ ಪೂರ್ವ ಕಾಲೇಜಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಮತ್ತು ಜವಾಬ್ದಾರಿ ಸ್ವೀಕಾರ ಸಮಾರಂಭವು ನ.19 ರಂದು ಕಾಲೇಜಿನ ಆಡಳಿತ ಮಂಡಳಿಯ ಕಚೇರಿಯಲ್ಲಿ ಜರುಗಿತು.
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಪ್ರತಿಷ್ಠಿತ ಘಟಕ ಸಂಸ್ಥೆಗಳಲ್ಲಿ ಒಂದಾಗಿರುವ ತೆಂಕಿಲದ ನರೇಂದ್ರ ಪದವಿ ಪೂರ್ವ ಕಾಲೇಜಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಮತ್ತು ಜವಾಬ್ದಾರಿ ಸ್ವೀಕಾರ ಸಮಾರಂಭವು ನ.19 ರಂದು ಕಾಲೇಜಿನ ಆಡಳಿತ ಮಂಡಳಿಯ ಕಚೇರಿಯಲ್ಲಿ ಜರುಗಿತು.
ಪುತ್ತೂರಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇಲ್ಲಿ ಕರ್ತವ್ಯ ನಿರ್ವಹಿಸಿ ಉಪ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತ ರಾದ ರವೀಶ ನಾಯಕ್ ಬಿ.ಸಿ. ಇವರು ಕಾಲೇಜಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ವಕೀಲರಾದ ಚೇತನ್ ನಾಯಕ್ ಸಂಚಾಲಕರಾಗಿ, ವಕೀಲರಾದ ಅರುಣ್ ಬಿ.ಕೆ. ಕೋಶಾಧಿಕಾರಿಗಳಾಗಿ, ಹಾಗೂ ಸದಸ್ಯರುಗಳಾಗಿ ಚಾರ್ಟರ್ಡ್ ಅಕೌಂಟೆಂಟ್ ಆದ ಶಿವಕುಮಾರ್
ಹಿಳ್ಳೆಮನೆ, ಅಶ್ವಿನಿ ಕೃಷ್ಣ ಮುಳಿಯ, ಸತ್ಯನಾರಾಯಣ ಬಿ., ಶುಭಾ ಅಡಿಗ, ರಮೇಶ್ ನಾಯಕ್ ಕೆ., ಗೊಲೆಕ್ಸ್ ಕ್ಯಾಟಲ್ ಫೀಡ್ಸ್ ನೈತಾಡಿ ಇದರ ಮಾಲಕರಾದ ಕೃಷ್ಣ ಮೋಹನ್ ಪಿ.ಎಸ್. ಜವಾಬ್ದಾರಿ ಸ್ವೀಕರಿಸಿದರು.
ಇವರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ‍್ಯದರ್ಶಿಗಳಾದ ವಿಜಯನಾರಾಯಣ ಕೆ.ಎಮ್. ದೀಪ ಪ್ರದಾನ ಮಾಡುವ ಮೂಲಕ ಜವಾಬ್ದಾರಿ ಪ್ರದಾನ ಮಾಡಿದರು. ಜೊತೆ ಕರ‍್ಯದರ್ಶಿಗಳಾದ ಭರತ್
ಪೈ, ಕೋಶಾಧಿಕಾರಿಗಳಾದ ಸಂತೋಷ ಬಿ., ನಿರ್ದೇಶಕರಾದ ಮಹಾಕ್ಷ್ಮಿ ಕೆ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯ, ನಿಕಟಪೂರ್ವ ಸಂಚಾಲಕರಾದ ಸಂತೋಷ ಬಿ., ಕೋಶಾಧಿಕಾರಿಗಳಾದ ಸಂಪತ್
ಕುಮಾರ್ , ಸದಸ್ಯರಾದ ಉಮೇಶ್ ನಾಯಕ್, ಮೋಹಿನಿ ದಿವಾಕರ, ಸೂರ್ಯನಾಥ ಆಳ್ವ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶಾನ್ ಭಾಗ್ , ಎಲ್ಲಾ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ನಿರ್ಗಮಿತ ಸಮಿತಿಯ ಪದಾಧಿಕಾರಿಗಳು ದೀಪ ಜ್ಯೋತಿಯನ್ನು ಹಸ್ತಾಂತರಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ಉಪಸ್ಥಿತರಿದ್ದು ನೂತನ ಸಮಿತಿಗೆ ಶುಭ ಹಾರೈಸಿದರು.
ನಿರ್ಗಮಿತ ಸಮಿತಿಯ ಪದಾಧಿಕಾರಿಗಳು ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.ನೂತನ ಸಮಿತಿಯ ಅಧ್ಯಕ್ಷರು, ಸಂಚಾಲಕರು ಮುಂದಿನ ದಿನಗಳಲ್ಲಿ ಸಂಸ್ಥೆಯ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಶ್ರಮಿಸುವ ಎಂದು ಎಲ್ಲರ ಸಹಕಾರವನ್ನು ಕೋರಿದರು.
ಶಿಕ್ಷಣ
Vivekananda-ಸದ್ದಿಲ್ಲದೆ ಸಾಹಿತ್ಯ ಸೇವೆಗೈಯ್ಯುತ್ತಿದೆ ಪುಸ್ತಕ ಅವಲೋಕನ ಬಳಗ
ಈ ಬಾರಿಯ ಕನ್ನಡ ರಾಜ್ಯೋತ್ಸವವು ಅನೇಕ ಓದುಗ ಮತ್ತು ಬರೆಹಗಾರರಿಗೆ
ವಿಶೇಷವಾದುದು. ಪುಸ್ತಕ ಅವಲೋಕನ – ಓದುಬರಹದ ಸುತ್ತಮುತ್ತ ಎಂಬ
ಹೆಸರಿನ ಫೇಸ್ ಬುಕ್ ಬಳಗವೊಂದು ನವೆಂಬರ್ ಇಡೀ ತಿಂಗಳು ಪ್ರತಿದಿನವೂ ಒಬ್ಬೊಬ್ಬ ಲೇಖಕರ ಕುರಿತು ಪುಸ್ತಕ ಪರಿಚಯ ಅಭಿಯಾನವನ್ನು ನಡೆಸುತ್ತಿದೆ.
ಈ ಬಾರಿಯ ಕನ್ನಡ ರಾಜ್ಯೋತ್ಸವವು ಅನೇಕ ಓದುಗ ಮತ್ತು ಬರೆಹಗಾರರಿಗೆ
ವಿಶೇಷವಾದುದು. ಪುಸ್ತಕ ಅವಲೋಕನ – ಓದುಬರಹದ ಸುತ್ತಮುತ್ತ ಎಂಬ
ಹೆಸರಿನ ಫೇಸ್ ಬುಕ್ ಬಳಗವೊಂದು ನವೆಂಬರ್ ಇಡೀ ತಿಂಗಳು ಪ್ರತಿದಿನವೂ ಒಬ್ಬೊಬ್ಬ
ಲೇಖಕರ ಕುರಿತು ಪುಸ್ತಕ ಪರಿಚಯ ಅಭಿಯಾನವನ್ನು ನಡೆಸುತ್ತಿದೆ.
ಗುಂಪಿನ ನಿರ್ವಾಹಕರಾದ ವೀಣಾ ನಾಯಕ್ ಮತ್ತು ವಸಂತ ಗಣೇಶ್ ಅವರ ಕನ್ನಡಪರ ಮನಸ್ಸಿನ ಬಹಳ ದೊಡ್ಡ ಯೋಜನೆಯಿದು. ಮೂವತ್ತು ದಿನಕ್ಕೆ ಮೂವತ್ತು ಸಾಹಿತಿಗಳ ಪಟ್ಟಿಯನ್ನು ಮೊದಲೇ
ನೀಡಲಾಗಿದ್ದು ನವೋದಯ ಪೂರ್ವ, ನವೋದಯದಿಂದ ತೊಡಗಿ ಇತ್ತೀಚಿನವರೆಗಿನ ಪ್ರಮುಖ ಸಾಹಿತಿಗಳು, ಎಲೆಮರೆಯ ಕಾಯಿಯಂತಿದ್ದ ಸಾಧಕ ಸಾಹಿತಿಗಳ ಮತ್ತು ಪ್ರಮುಖ ಅನುವಾದ ಸಾಹಿತಿಗಳ ಪರಿಚಯ ಮತ್ತು ಅವರ ಕೃತಿಗಳನ್ನು ಅವಲೋಕಿಸುವ ಅಭಿಯಾನವಿದು.
ಪಂಜೆ ಮಂಗೇಶರಾವ್, ರಾಶಿ, ವಂಶಿ, ವ್ಯಾಸರಾವ್ ನಿಂಜೂರ್, ಕೆರೂರು ವಾಸುದೇವಾಚಾರ್ಯ, ಶ್ರೀರಂಗ, ಗಳಗನಾಥ, ಆಲೂರ ವೆಂಕಟರಾವ್, ಕಮಲಾ ಹಂಪನ, ಕುವೆಂಪು, ಮೊಗಳ್ಳಿ ಗಣೇಶ್, ಸುಬ್ರಾಯ ಚೊಕ್ಕಾಡಿ, ವೀರ ಕೇಸರಿ ಸೀತಾರಾಮಶಾಸ್ತ್ರಿ, ಗೌರೀಶ್ ಕಾಯ್ಕಿಣಿ, ಎಸ್.ವಿ.ಪಿ., ವಿವೇಕ ಶಾನಭಾಗ, ಡಾ. ಸಿ.ಆರ್. ಚಂದ್ರಶೇಖರ್, ಡಿ.ವಿ.ಜಿ, ಸಂತೋಷ ಕುಮಾರ ಮೆಹೆಂದಳೆ ಹೀಗೆ ಸಾಹಿತ್ಯದ
ಬೇರೆಬೇರೆ ಕಾಲಘಟ್ಟದ ಮೂವತ್ತು ಜನ ಅಪೂರ್ವ ಸಾಹಿತಿ, ಕವಿಗಳ ಪರಿಚಯ
ನಡೆಯುತ್ತಿದೆ. ದಿನಂಪ್ರತಿ ಈ ಬಳಗದ ಸುಮಾರು 40 – 45 ರಷ್ಟು ಸದಸ್ಯರು
ಆಯಾ ಕವಿಗಳ, ಕೃತಿಗಳ ಕುರಿತು ಪರಿಚಯಾತ್ಮಕ ಲೇಖನಗಳನ್ನು ಬರೆಯುತ್ತಿರುವುದು ಗಮನಾರ್ಹವಾದುದು.
2021 ರಲ್ಲಿ ರಚನೆಯಾದ ಈ ಫೇಸ್ ಬುಕ್ ಬಳಗವು ಯಶಸ್ವಿಯಾಗಿ ಆರು ವರ್ಷಗಳನ್ನು ಪೂರೈಸುತ್ತಿದ್ದು ನಾಡಿನ ಅನೇಕ ಗಣ್ಯಾತಿಗಣ್ಯರನ್ನು, ಹಿರಿಯ ಸಾಹಿತಿಗಳನ್ನು ಸೇರಿದಂತೆ 21,600 ಕ್ಕಿಂತಲೂ ಹೆಚ್ಚು ಸದಸ್ಯರನ್ನು ಒಳಗೊಂಡು ಸಕ್ರಿಯವಾಗಿ ಸಾಹಿತ್ಯ ಚಟುವಟಿಕೆಗಳನ್ನು ನಿರಂತರ ನಡೆಸಿಕೊಂಡು ಬರುತ್ತಿದೆ. ಉಮಾಶಂಕರ್ ಟಿ.ಆರ್. ಅವರು ಸಂಸ್ಥಾಪಕರಾಗಿ, ನಿರ್ವಾಹಕರಾಗಿ (ಅಡ್ಮಿನ್)
ಆರಂಭಗೊಳಿಸಿದ ಈ ಪುಸ್ತಕ ಬಳಗವು ಪ್ರಸ್ತುತ ಉಮಾಶಂಕರ್ ಟಿ. ಆರ್. (ಸಂಸ್ಥಾಪಕರು ಮತ್ತು ಮುಖ್ಯ ನಿರ್ವಾಹಕರು), ದೇವಿಶ್ರೀ ಪ್ರಸಾದ್, ವೀಣಾ ನಾಯಕ್, ವಸಂತ ಗಣೇಶ್, ಶಶಿ ಶಂಕರ್, ಪವಿತ್ರ ಹೆತ್ತೂರು ಈ ಆರು ಜನ ನಿರ್ವಾಹಕರನ್ನು ಒಳಗೊಂಡು ಕಾರ್ಯ ನಿರ್ವಹಿಸುತ್ತಿದೆ.
ಪುಸ್ತಕದ ಕುರಿತಾಗಿಯೇ ಚರ್ಚೆಗಳು ನಡೆಯುವ, ಪುಸ್ತಕದ ಓದು ಮತ್ತು ಬರೆಹಕ್ಕಷ್ಟೇ ಇರುವಂತಹ ಈ ಬಳಗದಲ್ಲಿ ಕನ್ನಡದ ವಿವಿಧ ಕೃತಿಗಳ ಕುರಿತು ರಸಪ್ರಶ್ನೆ, ಪದಬಂಧ ಇತ್ಯಾದಿ ಸ್ಪರ್ಧೆಗಳು ಕೂಡ ನಡೆಯುತ್ತವೆ. ವಿವಿಧ ವಸ್ತುಗಳನ್ನು ನೀಡಿ ಬರೆಯಿಸುವ ಲೇಖನ ಅಭಿಯಾನಗಳು ಕೂಡ ಸಾಕಷ್ಟು
ನಡೆಯುತ್ತವೆ. ಸದಸ್ಯರು ತಾವು ಓದಿದ ಪುಸ್ತಕದ ಪರಿಚಯವನ್ನು ಮಾಡುವ, ವಿಮರ್ಶಾತ್ಮಕ ಲೇಖನಗಳನ್ನು ಪೋಸ್ಟ್ ಮಾಡುವ ಮೂಲಕ ಸ್ವಾರಸ್ಯಕರ ಚರ್ಚೆಯನ್ನು ನಡೆಸುತ್ತಿದ್ದಾರೆ. ಡಾ. ನಾ. ಮೊಗಸಾಲೆ, ಚಿತ್ರಲೇಖಾ ಶಶೀಂದ್ರನ್, ಲಕ್ಷ್ಮಣ ಕೌಂಟೆ, ವಿಠಲ ಶೆಣೈ, ರಮೇಶ್ ಶೆಟ್ಟಿಗಾರ, ಮನೋಹರ ಪೈ, ಪಾರ್ವತಿ ಐತಾಳ, ಉಷಾ ನರಸಿಂಹನ್ ಮೊದಲಾದ ಲೇಖಕರು ಸ್ವತಃ ಈ ಚರ್ಚೆಯಲ್ಲಿ
ಭಾಗವಹಿಸುತ್ತಿರುವುದು ಸಾಹಿತ್ಯದ ವಿಚಾರ ವಿನಿಮಯಕ್ಕೆ ಪೂರಕವಾಗಿದೆ. ಗುಂಪಿನ
ಸದಸ್ಯರ ನಡುವೆ ಪುಸ್ತಕಗಳ ವಿನಿಮಯವೂ ನಡೆಯುತ್ತದೆ. ಒಬ್ಬರು ಪರಿಚಯಿಸಿದ ಪುಸ್ತಕವು ಕುತೂಹಲ ಮೂಡಿಸಿ ಅನೇಕರು ಆ ಪುಸ್ತಕವನ್ನು
ಖರೀದಿಸಲು ಪ್ರೇರಣೆ ನೀಡಿದೆ. ಇದರಿಂದ ಲೇಖಕರ ವೈಯಕ್ತಿಕ ಪರಿಚಯವೂ
ಆದದ್ದಿದೆ. ತನ್ಮೂಲಕ ಲೇಖಕರಿಗೂ ಪ್ರೇರಣೆ ದೊರಕಿದಂತಾಗಿದೆ.
ಲೇಖನಗಳನ್ನು ಬರೆದವರಿಗೆ, ಸ್ಪರ್ಧೆಯಲ್ಲಿ ವಿಜೇತರಾದವರಿಗೆ, ಪ್ರತಿ ತಿಂಗಳು ಅತ್ಯುತ್ತಮ ಲೇಖನ ಬರೆದವರಿಗೆ ಪುಸ್ತಕಗಳನ್ನೇ ಬಹುಮಾನವಾಗಿ ನೀಡುವ ವಿಶಿಷ್ಟ ಯೋಜನೆ ಇಲ್ಲಿದೆ. ಈ ಬಳಗದ ಸದಸ್ಯರಲ್ಲೇ ಕೆಲವರು ಪ್ರಾಯೋಜಕತ್ವವನ್ನು ವಹಿಸಿಕೊಂಡು ಪ್ರತಿ ವರ್ಷವೂ ನಿಗದಿತ ಮೊತ್ತವನ್ನು ಈ
ಬಳಗಕ್ಕೆ ಪುಸ್ತಕ ಬಹುಮಾನ ನೀಡಲೆಂದು ನೀಡುವವರಿದ್ದಾರೆ. ಸ್ವತಃ ಲೇಖಕರೂ ತಮ್ಮ ಪುಸ್ತಕಗಳನ್ನು ಪ್ರಾಯೋಜಿಸುವ ಅವಕಾಶ ಇಲ್ಲಿದ್ದು ಅನೇಕರು ತಮ್ಮ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ನೀಡಿರುತ್ತಾರೆ. ಅಲ್ಲದೆ, ಅನೇಕ ವಿಶೇಷ ಅಭಿಯಾನಗಳಲ್ಲಿ ನಗದು ಬಹುಮಾನವನ್ನೂ ನೀಡಿ
ಪ್ರೊತ್ಸಾಹಿಸಲಾಗುತ್ತಿದೆ. ಬಹುಮಾನದ ಮೊತ್ತವನ್ನು ವಿಜೇತರಿಗೆ ನೀಡುವ ಜವಾಬ್ದಾರಿಯನ್ನು, ಬಹುಮಾನದ ಪುಸ್ತಕಗಳನ್ನು ವಿಳಾಸ ಬರೆದು ಅಚ್ಚುಕಟ್ಟಾಗಿ ಅಂಚೆ ಮುಖೇನ (ಅಂಚೆ ವೆಚ್ಚವನ್ನು ಸೇರಿಸಿ) ಬರೆಹಗಾರರಿಗೆ ತಲುಪಿಸುವ ಏರ್ಪಾಡನ್ನು ಬಳಗದ ಹಿರಿಯ ನಿರ್ವಾಹಕಿ ವೀಣಾ ನಾಯಕ್ ಅವರು ಮಾಡಿಕೊಂಡು ಬರುತ್ತಿದ್ದಾರೆ.
ಬರೆಹಗಾರರ ಆಸಕ್ತಿ ಮತ್ತು ಅಭಿರುಚಿಯನ್ನು ಗುರುತಿಸಿ ಅಂತಹ ಪುಸ್ತಕವನ್ನೆ ಬಹುಮಾನ ರೂಪದಲ್ಲಿ ಕಳುಹಿಸುವುದು ಅವರ ವೈಶಿಷ್ಟ್ಯವಾಗಿದೆ. ಹಾಗೆ ನೀಡುವ ಪುಸ್ತಕದ ಒಳಪುಟದಲ್ಲಿ ಅಭಿಯಾನದ
ಹೆಸರು ಮತ್ತು ಪ್ರಾಯೋಜಕರ ಮಾಹಿತಿ ಇದ್ದು ಅದೊಂದು ದಾಖಲೆಯಾಗಿ ಸದಾ
ನೆನಪಿನಲ್ಲಿ ಉಳಿಯುವಂತಿದೆ. ಪ್ರತಿಯೊಬ್ಬರು ನೀಡಿದ ಹಣಕ್ಕೆ ಲೆಕ್ಕಾಚಾರ
ಇಡುತ್ತಾರಾದರೂ ಯಾವುದೇ ರೀತಿಯ ಹಣಕಾಸಿನ ಲೆಕ್ಕಾಚಾರದ ಚರ್ಚೆ ಇಲ್ಲಿ
ನಡೆಯುವುದಿಲ್ಲ. ಕಡಿಮೆಯಾದ ಮೊತ್ತವನ್ನು ಅಡ್ಮಿನ್ ಅವರೇ ಭರಿಸುವುದೂ ಇದೆ.
ಲೇಖನಗಳನ್ನು ಬರೆದವರೆಲ್ಲರಿಗೂ ಪುಸ್ತಕ ಬಹುಮಾನ ನೀಡುವ ಪತ್ರವನ್ನು ಕೂಡ ನೀಡಲಾಗುತ್ತಿದೆ. ಅಭಿನಂದನಾ ಪತ್ರವು ಅಭಿಯಾನದ ಹೆಸರು, ಪ್ರಾಯೋಜಕರ ಮತ್ತು ಬಹುಮಾನ ವಿಜೇತರ ಭಾವಚಿತ್ರವನ್ನು ಒಳಗೊಂಡ ದಾಖಲೆಯಾಗಿ ರೂಪುಗೊಂಡು ಒಳ್ಳೆಯ ನೆನಪಾಗಿ, ಸಂಭ್ರಮವನ್ನು
ಹೆಚ್ಚಿಸುವಂತಿದೆ.
ಕನ್ನಡ ಪುಸ್ತಕಗಳ ಓದು ಮತ್ತು ಬರೆವಣಿಗೆಗೆ ಪ್ರೇರಣೆ ಮತ್ತು ಪ್ರೋತ್ಸಾಹ ಕೊಡುವುದು ಈ ಅಭಿಯಾನಗಳ ಉದ್ದೇಶವಾಗಿದ್ದು ಅನೇಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬರೆವಣಿಗೆಯ ಕೌಶಲವನ್ನು ಪಡೆಯುತ್ತಿರುವುದು ಈ ಬಳಗದ ಸಾಧನೆಯಾಗಿದೆ. ಗುಂಪಿನ ಸದಸ್ಯರೇ
ಪರಸ್ಪರ ಸಹಕಾರವನ್ನು ನೀಡುವ ಮೂಲಕ ಮುನ್ನಡೆಯುತ್ತಿರುವ ಈ ಫೇಸ್
ಬುಕ್ ಬಳಗವು ಸಾಮಾಜಿಕ ಜಾಲತಾಣವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು
ಎಂಬುದಕ್ಕೆ ಸಾಕ್ಷಿಯಾಗಿದೆ.
ಫೇಸ್ ಬುಕ್ ಎಂಬುದು ಇಲ್ಲಿ ಬುಕ್ ಫೇಸ್ ಆಗಿದೆ. ಬಹಳಷ್ಟು ಜನ ಮಹಿಳೆಯರು ಓದಿ
ಬರೆಯುತ್ತಿದ್ದಾರೆ. ಯುವ ತಲೆಮಾರಿಗೆ ಪುಸ್ತಕ ಓದುವ ಹವ್ಯಾಸವನ್ನು ದಾಟಿಸುವ, ಓದಿದ್ದನ್ನು ಬರೆಯುವ ಕೌಶಲ ಬೆಳೆಸುವ ನಿಟ್ಟಿನಲ್ಲಿ ಈ ಪುಸ್ತಕ ಅವಲೋಕನ ಬಳಗವು ಕೊಡುಗೆಯನ್ನು ನೀಡುತ್ತಿದೆ. ಯಾವುದೇ ಹೊಗಳಿಕೆ, ಪ್ರತಿಫಲದ ನಿರೀಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಕನ್ನಡದ ಸೇವೆಯನ್ನು
ಮಾಡುತ್ತಿರುವ ಪುಸ್ತಕ ಅವಲೋಕನ ಬಳಗದ ಎಲ್ಲ ನಿರ್ವಾಹಕರಿಗೆ ಅಭಿನಂದನೆಗಳು. ಸಹಕರಿಸುತ್ತಿರುವ ಸದಸ್ಯರಿಗೆ ಶುಭಾಶಯಗಳು. ಈ ಬಳಗ ಇನ್ನಷ್ಟು ಚೈತನ್ಯಪೂರ್ಣವಾಗಿ, ಲವಲವಿಕೆಯಿಂದ ಮುಂದುವರಿಯಲಿ.
ಡಾ. ಗೀತಾ ಕುಮಾರಿ ಟಿ.
ಕನ್ನಡ ಸಹಾಯಕ ಪ್ರಾಧ್ಯಾಪಕಿ
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ),
ಪುತ್ತೂರು
-
ಅಪರಾಧ21 hours agoMangalore-ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ಅಪಹರಣ..! ಹಿಂದೂ ಯುವಕ ಲವ್ ಆರೋಪ – ವಿಡಿಯೋ ವೈರಲ್ : ತನಿಖೆಗೆ ಕಮಿಷನರ್ ಸೂಚನೆ
-
ರಾಜಕೀಯ20 hours agoBJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
-
ಬಿಗ್ ನ್ಯೂಸ್19 hours agoHigh Court-Social Media ಅಕೌಂಟ್ ಇದ್ದ ಮಾತ್ರಕ್ಕೆ ಮನಸ್ಸಿಗೆ ಬಂದಿದ್ದನ್ನೆಲ್ಲ ಪೋಸ್ಟ್ ಮಾಡುವ Free Licence ಇಲ್ಲ : ಬೆಳ್ತಂಗಡಿಯ ಮೋಹನ್ ಬೋಳಂಗಡಿ – ಶುಭಾ ರೈ ವಿರುದ್ಧ ದಾಖಲಾದ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಎಚ್ಚರಿಕೆ
-
ನಿಧನ ವಾರ್ತೆ19 hours agoSavitri Devi-ಸಿಎಂ ಯೋಗಿ ಆದಿತ್ಯನಾಥ್ ತಾಯಿ ಸಾವಿತ್ರಿ ದೇವಿ ನಿಧನ
-
ದಕ್ಷಿಣ ಕನ್ನಡ18 hours ago
Ashok janamana 2026 : ಪುತ್ತೂರಿನಲ್ಲಿ ಅದ್ದೂರಿ ‘ಅಶೋಕ ಜನಮನ-2026’ ಸಂಭ್ರಮಕ್ಕೆ ಕ್ಷಣಗಣನೆ ! ಬಿ.ಕೆ. ಹರಿಪ್ರಸಾದ್, ಕೃಷ್ಣ ಬೈರೇಗೌಡ, ಯು.ಟಿ. ಖಾದರ್ ಸಹಿತ ರಾಜಕೀಯ, ಧಾರ್ಮಿಕ ಗಣ್ಯರ ಸಮಾಗಮ
-
ಅಪರಾಧ18 hours agoMangalore-ಮಂಗಳೂರು: ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಮನೆ ಮಾಲೀಕನ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ, ಮತ್ತೊಬ್ಬ ಖುಲಾಸೆ
-
ಬಿಗ್ ನ್ಯೂಸ್23 hours agoMuraleedhar Rai-ಮೆಸ್ಕಾಂ ನಿರ್ದೇಶಕರಾಗಿ ಮುರಳೀಧರ ರೈ ಮಠಂತಬೆಟ್ಟು ಸರ್ಕಾರದಿಂದ ನೇಮಕ
-
ಮಂಗಳೂರು19 hours agoSavanuru Cooperative Society-ʻಅತ್ಯುತ್ತಮ ವಿವಿಧೋದ್ದೇಶ ಸಹಕಾರ ಸಂಘʼಪ್ರಶಸ್ತಿಯ ಗರಿ ಮುಡಿಗೇರಿಸಿಕೊಂಡ ‘ಆದರ್ಶ ವಿವಿಧೋದ್ದೇಶ ಸಹಕಾರ ಸಂಘ’; ಸವಣೂರು ಸೀತಾರಾಮ ರೈ ಅವರಿಗೆ ಜಿ.ಟಿ. ದೇವೇಗೌಡರಿಂದ ಪ್ರಶಸ್ತಿ ಪ್ರಧಾನ















