Connect with us

ಸ್ಥಳೀಯ

Honeytrap-“ಬರ್ರಿ ಸಾರ್” ಎಂದು ಲೈಂಗಿಕ ಸಂಪರ್ಕ ನಡೆಸಿ ಹನಿ ಟ್ರ್ಯಾಪ್ – ಬ್ಯಾಂಕ್ ಮೆನೇಜರ್ ದೂರು; ಅಮ್ಮ ಮಗನ ಬಂಧನ

Published

on



Ad Widget

Ad Widget

Ad Widget

Ad Widget

ಎಳನೀರು ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬಳು ಬ್ಯಾಂಕ್ ವ್ಯವಸ್ಥಾಪಕರೊಬ್ಬರನ್ನು ಹನಿ ಟ್ರ್ಯಾಪ್ ಮಾಡಿ, ತನ್ನ ಮಗ ಮತ್ತು ನಕಲಿ ಪತ್ರಕರ್ತನೊಂದಿಗೆ ಸೇರಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ತಾಯಿ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

ವಿಜಯಪುರ: ಎಳನೀರು ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬಳು ಬ್ಯಾಂಕ್ ವ್ಯವಸ್ಥಾಪಕರೊಬ್ಬರನ್ನು ಹನಿ ಟ್ರ್ಯಾಪ್ ಮಾಡಿ, ತನ್ನ ಮಗ ಮತ್ತು ನಕಲಿ ಪತ್ರಕರ್ತನೊಂದಿಗೆ ಸೇರಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ತಾಯಿ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಡಿವೈಎಸ್‌ಪಿ ಕಚೇರಿ ಬಳಿ ಎಳನೀರು ಮಾರುತ್ತಿದ್ದ ಸುವರ್ಣ ಎಂಬ ಮಹಿಳೆ, ತನ್ನಲ್ಲಿಗೆ ಎಳನೀರು ಕುಡಿಯಲು ಬರುತ್ತಿದ್ದ ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್‌ಗೆ ನವೆಂಬರ್ 1 ರಂದು ಆಹ್ವಾನಿಸಿದ್ದಾಳೆ. ನಂತರ ಮ್ಯಾನೇಜರ್‌ನನ್ನು ತನ್ನ ಗೆಳತಿಯ ಮನೆಗೆ ಕರೆದುಕೊಂಡು ಹೋಗಿ ದೈಹಿಕ ಸಂಬಂಧ ಬೆಳೆಸಿದ್ದಾಳೆ. ಈ ವೇಳೆ ಆಪ್ತ ಕ್ಷಣಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಳು.

Ad Widget

Ad Widget <> Ad Widget

ನವೆಂಬರ್ 3 ರಂದು ಮಹಿಳೆ ಮ್ಯಾನೇಜರ್‌ಗೆ ಕರೆ ಮಾಡಿ, “ನಮ್ಮ ಖಾಸಗಿ ವಿಡಿಯೋವನ್ನು ಪತ್ರಕರ್ತರು ರೆಕಾರ್ಡ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಿ” ಎಂದು ಹೇಳಿದ್ದಾಳೆ. ಬಳಿಕ ಹೋಮ್‌ಗಾರ್ಡ್ ಮತ್ತು ತನ್ನ ಪರಿಚಯಸ್ಥರ ಮೂಲಕ ಮ್ಯಾನೇಜರ್‌ಗೆ ಕರೆ ಮಾಡಿಸಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು. ಈ ಕೃತ್ಯದಲ್ಲಿ ಮಹಿಳೆಯ ಮಗ ಕೂಡ ಭಾಗಿಯಾಗಿದ್ದ.



Ad Widget

ಈ ಬ್ಲಾಕ್‌ಮೇಲ್‌ಗೆ ಬೇಸತ್ತ ಬ್ಯಾಂಕ್ ಮ್ಯಾನೇಜರ್ ನವೆಂಬರ್ 12 ರಂದು ಇಂಡಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳಾದ ತಾಯಿ ಮತ್ತು ಮಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Click to comment

Leave a Reply

ಶಿಕ್ಷಣ

Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

Published

on



Ad Widget

Ad Widget

Ad Widget

Ad Widget

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಾಲೇಜು ಆಂತರಿಕ ದೂರು ಸಮಿತಿ, ಡಾಟಾ ಸೈನ್ಸ್ ಎಂಜಿನಿಯರಿಂಗ್ ವಿಭಾಗ, ಡಾಟಾ ಸೈನ್ಸ್ ವಿದ್ಯಾರ್ಥಿ ಸಂಘ, ಪೇರೆಂಟ್ ರಿಲೇಶನ್ ಸೆಲ್ ಮತ್ತು ಗ್ರೀವೆನ್ಸ್ ರೆಡ್ರೆಸ್ಸಲ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಪರದೆಯಿಂದ ಆತ್ಮದ ಕಡೆಗೆ: ಜೆನ್-ಜೀ ನಡವಳಿಕೆಗಳು, ಮಿತಿಗಳು ಮತ್ತು ಅದರಾಚೆಗಿನ ಆಯಾಮಗಳು ಈ ವಿಷಯದ ಬಗ್ಗೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರಿನ ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯ ವೃದ್ಧಾಪ್ಯ ರೋಗ ಮತ್ತು ಮಧುಮೇಹ ತಜ್ಞರಾದ ಡಾ. ಅನನ್ಯಲಕ್ಷ್ಮೀ ಸಂದೀಪ್ ಮಾತಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಲೈಂಗಿಕ ಕಿರುಕುಳ ಎನ್ನುವುದು ಕೇವಲ ದೈಹಿಕ ಸ್ಪರ್ಶಕ್ಕೆ ಸೀಮಿತವಾಗಿಲ್ಲ ಬದಲಾಗಿ ಆಶ್ಲೀಲ ಸಂದೇಶಗಳನ್ನು ಕಳುಹಿಸುವುದು, ಮಾತುಗಳನ್ನಾಡುವುದು ಅಥವಾ ಅಂತಹ ಯಾವುದೇ ರೀತಿಯ ವರ್ತನೆಗಳೂ ಕೂಡಾ ಇದರಲ್ಲಿ ಸೇರಿವೆ ಎಂದು ಪುತ್ತೂರಿನ ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯ ವೃದ್ಧಾಪ್ಯ ರೋಗ ಮತ್ತು ಮಧುಮೇಹ ತಜ್ಞರಾದ ಡಾ. ಅನನ್ಯಲಕ್ಷ್ಮೀ ಸಂದೀಪ್ ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಾಲೇಜು ಆಂತರಿಕ ದೂರು ಸಮಿತಿ, ಡಾಟಾ ಸೈನ್ಸ್ ಎಂಜಿನಿಯರಿಂಗ್ ವಿಭಾಗ, ಡಾಟಾ ಸೈನ್ಸ್ ವಿದ್ಯಾರ್ಥಿ ಸಂಘ, ಪೇರೆಂಟ್ ರಿಲೇಶನ್ ಸೆಲ್ ಮತ್ತು ಗ್ರೀವೆನ್ಸ್ ರೆಡ್ರೆಸ್ಸಲ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಪರದೆಯಿಂದ ಆತ್ಮದ ಕಡೆಗೆ: ಜೆನ್-ಜೀ ನಡವಳಿಕೆಗಳು, ಮಿತಿಗಳು ಮತ್ತು ಅದರಾಚೆಗಿನ ಆಯಾಮಗಳು ಈ ವಿಷಯದ ಬಗ್ಗೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾಡಿದರು.

Ad Widget

Ad Widget <> Ad Widget

ಇಂದಿನ ಪೀಳಿಗೆ, ಅವರ ಪೋಷಕರು, ಶಿಕ್ಷಕರ ನಡುವಿನ ವ್ಯತ್ಯಾಸ ಮತ್ತು ಜವಾಬ್ಧಾರಿಗಳ ಬಗ್ಗೆ ವಾಸ್ತವಿಕ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು ಯುವಜನತೆ ಪಾಲಿಸಬೇಕಾದ ಮತ್ತು ಪಾಲಿಸಬಾರದ ವಿಷಯಗಳ ಬಗ್ಗೆ ತಿಳಿಸಿದರು. ಒಬ್ಬರ ಸಾಮರ್ಥ್ಯವನ್ನು, ದೇಹದ ಆಕಾರವನ್ನು ಟೀಕಿಸುವುದು ಕೂಡಾ ಅಪರಾಧ. ಅಂತಹ ಸಂದರ್ಭದಲ್ಲಿ ಅದನ್ನು ಎದುರಿಸುವ, ಪ್ರತಿಕ್ರಿಯಿಸುವ ಬಗೆ ಮತ್ತು ದೂರು ಸಲ್ಲಿಸಬೇಕಾದ ಪ್ರಾಧಿಕಾರಗಳ ಬಗ್ಗೆ ತಿಳಿಸಿದರು. ನೀವು ಕೋಪಗೊಂಡಿದ್ದರೆ, ಅತಿಯಾದ ಉತ್ಸಾಹದಲ್ಲಿದ್ದರೆ ಅಥವಾ ಒತ್ತಡದಲ್ಲಿದ್ದರೆ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು 10 ನಿಮಿಷಗಳ ಕಾಲ ಮುಂದೂಡಿ. ಸಾಧ್ಯವಾದರೆ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮೊದಲು ಒಂದು ರಾತ್ರಿ ಚೆನ್ನಾಗಿ ಯೋಚಿಸಿ ಎಂದು ಹೇಳಿದರು.



Ad Widget

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ರಕ್ಷ.ಎಸ್.ಆರ್ ಮಾತನಾಡಿ ಮೊದಲು ಆಲಿಸಿ ನಂತರ ಮಾತನಾಡಿ, ಕೆಲವೊಮ್ಮೆ ಅಲ್ಲಿ ಉಪಸ್ಥಿತರಿದ್ದು ಮೌನವಾಗಿ ಆಲಿಸುವುದರಿಂದ ಜೀವನದಲ್ಲಿ ಹೆಚ್ಚಿನ ಪ್ರಯೋಜನಗಳಾಗುತ್ತದೆ ಎಂದರು. ಒಬ್ಬ ಉತ್ತಮ ಇಂಜಿನಿಯರ್ ಆಗುವ ಜತೆಯಲ್ಲಿ ದೇಶದ ಪ್ರಜ್ಞಾವಂತ ಪ್ರಜೆಯಾಗಿ ಎಂದು ನುಡಿದರು.
ಕಾಲೇಜು ಆಂತರಿಕ ದೂರು ಸಮಿತಿಯ ಅಧ್ಯಕ್ಷೆ ಡಾ.ಜೋತಿಮಣಿ.ಕೆ, ಡಾಟಾಸೈನ್ಸ್ ವಿಭಾಗ ಮುಖ್ಯಸ್ಥೆ ಪ್ರೊ.ರೂಪಾ.ಜಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Ad Widget

Ad Widget

ಡಾಟಾಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಗಗನ್‌ದೀಪ್ ಸ್ವಾಗತಿಸಿ, ನಿಹಾರಿಕಾ ಅತಿಥಿಗಳನ್ನು ಪರಿಚಯಿಸಿದರು. ಆಶ್ಲೇಷ್ ವಂದನಾರ್ಪಣೆಗೈದರು. ಶ್ರೇಯಾ ಎಮ್. ಕಾರ್ಯಕ್ರಮ ನಿರ್ವಹಿಸಿದರು.

Ad Widget
Continue Reading

ಶಿಕ್ಷಣ

Vivekananda-ವಿವೇಕಾನಂದ ಕಾಲೇಜಿನ ಎನ್ ಸಿ ಸಿ ವಿದ್ಯಾರ್ಥಿಗಳು ಸ್ಪೆಷಲ್ ನ್ಯಾಷನಲ್ ಇಂಟಿಗ್ರೇಷನ್ ಕ್ಯಾಂಪ್‌ಗೆ ಆಯ್ಕೆ

Published

on



Ad Widget

Ad Widget

Ad Widget

Ad Widget

ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)ದ ಎನ್.ಸಿ.ಸಿ ಘಟಕದ ತೃತೀಯ ಬಿಸಿಎ ವಿದ್ಯಾರ್ಥಿನಿ ಸಿಕ್ಯೂಎಂಎಸ್ ಬಿ.ಆಶಾಕಿರಣ್ ಮತ್ತು ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಸಿಪಿಎಲ್ ಎಸ್.ಎಂ ದರ್ಶನ್ ಇವರು ಸ್ಪೆಷಲ್ ನ್ಯಾಷನಲ್ ಇಂಟಿಗ್ರೇಷನ್ ಕ್ಯಾಂಪ್‌ನಲ್ಲಿ ಭಾಗವಹಿಸಲಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)ದ ಎನ್.ಸಿ.ಸಿ ಘಟಕದ ತೃತೀಯ ಬಿಸಿಎ ವಿದ್ಯಾರ್ಥಿನಿ ಸಿಕ್ಯೂಎಂಎಸ್ ಬಿ.ಆಶಾಕಿರಣ್ ಮತ್ತು ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಸಿಪಿಎಲ್ ಎಸ್.ಎಂ ದರ್ಶನ್ ಇವರು ಸ್ಪೆಷಲ್ ನ್ಯಾಷನಲ್ ಇಂಟಿಗ್ರೇಷನ್ ಕ್ಯಾಂಪ್‌ನಲ್ಲಿ ಭಾಗವಹಿಸಲಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಗುಜರಾತ್‌ನಲ್ಲಿ ಸ್ಪೆಷಲ್ ನ್ಯಾಷನಲ್ ಇಂಟಿಗ್ರೇಷನ್ ಕ್ಯಾಂಪ್ ನಡೆಯುತ್ತಿದ್ದು, ಈ ಕ್ಯಾಂಪ್‌ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ನವೆಂಬರ್ ೧ರಂದು ನಡೆಯುವ ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಗಣ್ಯ ವ್ಯಕ್ತಿಯಾಗಿ ಆಗಮಿಸಲಿದ್ದಾರೆ.

Ad Widget

Ad Widget <> Ad Widget

ಇವರಿಗೆ ಎನ್.ಸಿ.ಸಿ ಘಟಕದ ಮುಖ್ಯಸ್ಥ ಲೆ. ಭಾಮಿ ಅತುಲ್ ಶೆಣೈ ಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್.ಸಿ.ಸಿ ಘಟಕ, ಐಕ್ಯೂಎಸಿ ಘಟಕ, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿ ವೃಂದ ಶುಭಾಶಯಗಳನ್ನು ಕೋರುತ್ತಾರೆ.



Ad Widget
Ad Widget
Continue Reading

ಶಿಕ್ಷಣ

Vivekananda-ತಾಲೂಕು ಮಟ್ಟದ ಖೋ ಖೋ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Published

on



Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಖೋ ಖೋ ಪಂದ್ಯಾಟವು ನರೇಂದ್ರ ಪದವಿಪೂರ್ವ ಕಾಲೇಜು ಪುತ್ತೂರು ಇವರ ಸಹಯೋಗದಲ್ಲಿ ತೆಂಕಿಲ ಕ್ರೀಡಾಂಗಣದಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಹಾಗೂ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಖೋ ಖೋ ಪಂದ್ಯಾಟವು ನರೇಂದ್ರ ಪದವಿಪೂರ್ವ ಕಾಲೇಜು ಪುತ್ತೂರು ಇವರ ಸಹಯೋಗದಲ್ಲಿ ತೆಂಕಿಲ ಕ್ರೀಡಾಂಗಣದಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಹಾಗೂ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Ad Widget

Ad Widget

Ad Widget alt="Ad Widget"/>

Ad Widget

ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಶಶಾಂಕ್, ಚಂದನ್, ದಿಶಾಲ್ ಎ , ಉದಯ್ ಎಸ್ , ಥುಷನ್ ಎ , ತರುಣ್ ಎ ರೈ , ಪ್ರದ್ವಿತ್ ರೈ ಎಮ್ , ಯಶ್ವಿನ್ ಬಿ , ಜೀವಿತ್,ಎಸ್. ಡಿ ಮಸಲಿ , ಪ್ರಿಥ್ವಿರಾಜ್ ಜಿ . ದ್ವಿತೀಯ ಪಿಯುಸಿ ತರುಣ್ ಕುಮಾರ್ ಬಿ . ಆರ್ ,ದೇಶ್ಚಿತ್ ಎಸ್ ,ಘನಶ್ಯಾಮ್ ,ಲಿಖಿತ್ ,ಕೀರ್ತನ್,ಸತ್ವಿಕ್ , ಮಾನ್ವಿತ್ , ಬಾಲಕಿಯರ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿನಿಯರಾದ ಸಂಗೀತ ಎಸ್. ಎಮ್ , ವಿನ್ಯಾ ರೈ , ಶ್ವೇತಶ್ರೀ, ಭೂಮಿಕಾ, ವೃಷ್ಟಿ ರೈ , ನಿದೀಕ್ಷ ಎ , ಪ್ರಣಿತಾ ಕೆ , ಹರ್ಷಿಣಿ , ವಿದ್ಯಾ ಎಮ್ , ಎಚ್ . ಡಿ ಹೇಮಾದ್ರಿ , ಸಾನ್ವಿ ಅಂಚನ ವೈ. ವೈ, ದ್ವಿತೀಯ ಪಿಯುಸಿ ವಿಂದ್ಯಾ ಎಮ್ ಆರ್, ನಳಿನ ಎ. ಬಿ , ಅನನ್ಯ ಗೌಡ ಭಾಗವಹಿಸಿರುತ್ತಾರೆ.

Ad Widget

Ad Widget <> Ad Widget

ವೈಯಕ್ತಿಕ ಪ್ರಶಸ್ತಿಗಳು ದ್ವಿತೀಯ ವಾಣಿಜ್ಯ ವಿಭಾಗದ ದೇಶ್ಚಿತ್ ಎಸ್( ಬೆಸ್ಟ್ ಡಿಫೆಂಡರ್) ,ಲಿಖಿತ್ (ಬೆಸ್ಟ್ ಆಲ್ ರೌಂಡರ್), ಪ್ರಥಮ ವಿಜ್ಞಾನ ವಿಭಾಗದ ವೃಷ್ಟಿ ರೈ ( ಬೆಸ್ಟ್ ಡಿಫೆಂಡರ್).
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.



Ad Widget

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading