Connect with us

ಬಿಗ್ ನ್ಯೂಸ್

Rajyotsava Award-2025ರ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ; ಪ್ರಕಾಶ್ ರಾಜ್ ಸೇರಿ 70 ಸಾಧಕರಿಗೆ ಗೌರವ; ನ.1 ರಂದು ಪ್ರಶಸ್ತಿ ಪ್ರದಾನ

Published

on

Ad Widget

Ad Widget

Ad Widget

Ad Widget

2025ನೇ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿದಂತೆ ಒಟ್ಟು 70 ಸಾಧಕರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ನಿನ್ನೆ (ಅ.30) ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿದರು.

Ad Widget

Ad Widget

Ad Widget

Ad Widget

ಬೆಂಗಳೂರು, ಅ.30: 2025ನೇ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿದಂತೆ ಒಟ್ಟು 70 ಸಾಧಕರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ನಿನ್ನೆ (ಅ.30) ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿದರು. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸದೆ ಸಾಧಕರನ್ನು ನೇರವಾಗಿ ಆಯ್ಕೆ ಮಾಡಲಾಗಿದೆ.

Ad Widget

Ad Widget alt="Ad Widget"/>

Ad Widget

ಪ್ರಶಸ್ತಿ ಆಯ್ಕೆಯಲ್ಲಿ ಜಿಲ್ಲಾವಾರು ಮತ್ತು ಸಾಮಾಜಿಕ ಪರಿಪಾಲನೆಯ ಮಾನದಂಡಗಳನ್ನು ಅನುಸರಿಸಲಾಗಿದೆ. ಆಯ್ಕೆ ಸಲಹಾ ಸಮಿತಿ ಸದಸ್ಯರು ನಾಲ್ಕೈದು ಬಾರಿ ಸಭೆ ನಡೆಸಿ, ಅರ್ಹ ಸಾಧಕರನ್ನು ಶಿಫಾರಸ್ಸು ಮಾಡಿದ್ದಾರೆ ಎಂದು ಸಚಿವ ತಂಗಡಗಿ ತಿಳಿಸಿದರು. ಈ ಬಾರಿ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. ಹಾಗೆಯೇ, 12 ಮಂದಿ ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಲಭಿಸಿದೆ.

Ad Widget

Ad Widget <> Ad Widget

ನವೆಂಬರ್ 1ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, 25 ಗ್ರಾಂ ಚಿನ್ನದ ಪದಕ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.

ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ:
ಜಾನಪದ
ಬಸಪ್ಪ ಭರಮಪ್ಪ ಚೌಡ್ಕಿ-ಕೊಪ್ಪಳ
ಬಿ. ಟಾಕಪ್ಪ ಕಣ್ಣೂರು-ಶಿವಮೊಗ್ಗ
ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ-ಬೆಳಗಾವಿ
ಹನುಮಂತಪ್ಪ, ಮಾರಪ್ಪ, ಚೀಳಂಗಿ-ಚಿತ್ರದುರ್ಗ
ಎಂ. ತೋಪಣ್ಣ-ಕೋಲಾರ
ಸೋಮಣ್ಣ ದುಂಡಪ್ಪ ಧನಗೊಂಡ-ವಿಜಯಪುರ
ಸಿಂಧು ಗುಜರನ್ದ-ಕ್ಷಿಣ ಕನ್ನಡ
ಎಲ್. ಮಹದೇವಪ್ಪ ಉಡಿಗಾಲ-ಮೈಸೂರು.

Ad Widget

Ad Widget

ಸಾಹಿತ್ಯ ಕ್ಷೇತ್ರ
ಪ್ರೊ. ರಾಜೇಂದ್ರ ಚೆನ್ನಿ ಶಿವಮೊಗ್ಗ
ತುಂಬಾಡಿ ರಾಮಯ್ಯ ತುಮಕೂರು
ಪ್ರೊ ಅರ್ ಸುನಂದಮ್ಮ ಚಿಕ್ಕಬಳ್ಳಾಪುರ
ಡಾ.ಎಚ್.ಎಲ್ ಪುಷ್ಪ ತುಮಕೂರು
ರಹಮತ್ ತರೀಕೆರೆ ಚಿಕ್ಕಮಗಳೂರು
ಹ.ಮ. ಪೂಜಾರ ವಿಜಯಪುರ

ಚಲನಚಿತ್ರ /ಕಿರುತೆರೆ
ಪ್ರಕಾಶ್ ರಾಜ್- ದಕ್ಷಿಣ ಕನ್ನಡ
ವಿಜಯಲಕ್ಷ್ಮೀ ಸಿಂಗ್- ಕೊಡಗು

ಆಡಳಿತ
ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) ಬೆಂಗಳೂರು ದಕ್ಷಿಣ (ರಾಮನಗರ)

ವೈದ್ಯಕೀಯ
ಆಲಮ್ಮ ಮಾರಣ್ಣ- ತುಮಕೂರು
ಡಾ. ಜಯರಂಗನಾಥ್- ಬೆಂಗಳೂರು ಗ್ರಾಮಾಂತರ

ಸಂಗೀತ:
ದೇವೆಂದ್ರಕುಮಾರ ಪತ್ತಾರ್- ಕೊಪ್ಪಳ
ಮಡಿವಾಳಯ್ಯ ಸಾಲಿ-ಬೀದರ್

ನೃತ್ಯ: ಪ್ರೊ. ಕೆ. ರಾಮಮೂರ್ತಿ ರಾವ್- ಮೈಸೂರು

ಸಮಾಜ ಸೇವೆ
ಮತಿ ಸೂಲಗಿತ್ತಿ ಈರಮ್ಮ-ವಿಜಯನಗರ
ಫಕ್ಕೀರಿ-ಬೆಂಗಳೂರು ಗ್ರಾಮಾಂತರ
ಕೋರಿನ್ ಆಂಟೊನಿಯಟ್ ರಸ್ಕೀನಾ-ದಕ್ಷಿಣ ಕನ್ನಡ
ಡಾ. ಎನ್. ಸೀತಾರಾಮ ಶೆಟ್ಟಿ-ಉಡುಪಿ
ಕೋಣಂದೂರು ಲಿಂಗಪ್ಪ-ಶಿವಮೊಗ್ಗ

ಸಂಕೀರ್ಣ:
ಉಮೇಶ ಪಂಬದ -ದಕ್ಷಿಣ ಕನ್ನಡ
ಡಾ. ರವೀಂದ್ರ ಕೋರಿಶೆಟ್ಟಿರ್ ಧಾರವಾಡ
ಕೆ.ದಿನೇಶ್- ಬೆಂಗಳೂರು
ಶಾಂತರಾಜು -ತುಮಕೂರು
ಜಾಫರ್ ಮೊಹಿಯುದ್ದೀನ್- ರಾಯಚೂರು
ಪೆನ್ನ ಓಬಳಯ್ಯ- ಬೆಂಗಳೂರು ಗ್ರಾಮಾಂತರ
ಬಾಯಿ ಬಳ್ಳಾರಿ
ಪುಂಡಲೀಕ ಶಾಸ್ತ್ರೀ(ಬುಡಬುಡಕೆ) ಬೆಳಗಾವಿ

ಹೊರನಾಡು/ ಹೊರದೇಶ: ಜಕರಿಯ ಬಜಪೆ (ಸೌದಿ), ಪಿ ವಿ ಶೆಟ್ಟಿ (ಮುಂಬೈ)
ಪರಿಸರ: ರಾಮೇಗೌಡ- ಚಾಮರಾಜನಗರ, ಮಲ್ಲಿಕಾರ್ಜುನ ನಿಂಗಪ್ಪ- ಯಾದಗಿರಿ
ಕೃಷಿ: ಡಾ.ಎಸ್.ವಿ.ಹಿತ್ತಲಮನಿ-ಹಾವೇರಿ, ಎಂ ಸಿ ರಂಗಸ್ವಾಮಿ-ಹಾಸನ.
ಮಾಧ್ಯಮ: ಕೆ.ಸುಬ್ರಮಣ್ಯ-ಬೆಂಗಳೂರು, ಅಂಶಿ ಪ್ರಸನ್ನಕುಮಾರ್-ಮೈಸೂರು, ಬಿ.ಎಂ ಹನೀಫ್- ದಕ್ಷಿಣ ಕನ್ನಡ, ಎಂ ಸಿದ್ಧರಾಜು- ಮಂಡ್ಯ.
ವಿಜ್ಞಾನ ಮತ್ತು ತಂತ್ರಜ್ಞಾನ : ರಾಮಯ್ಯ ಚಿಕ್ಕಬಳ್ಳಾಪುರ, ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ-ದಾವಣಗೆರೆ, ಡಾ. ಆರ್. ವಿ ನಾಡಗೌಡ- ಗದಗ.
ಸಹಕಾರ: ಶೇಖರಗೌಡ ವಿ ಮಾಲಿಪಾಟೀಲ್ -ಕೊಪ್ಪಳ.

ಯಕ್ಷಗಾನ: ಕೋಟ ಸುರೇಶ ಬಂಗೇರ- ಉಡುಪಿ , ಐರಬೈಲ್‌ಆನಂದ ಶೆಟ್ಟಿ ಉಡುಪಿ, ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ)- ಉತ್ತರ ಕನ್ನಡ.
ಬಯಲಾಟ: ಗುಂಡೂರಾಜ್-ಹಾಸನ
ರಂಗಭೂಮಿ: ಹೆಚ್.ಎಂ. ಪರಮಶಿವಯ್ಯ,ಬೆಂಗಳೂರು ದಕ್ಷಿಣ (ರಾಮನಗರ), ಎಲ್.ಬಿ.ಶೇಖ್ (ಮಾಸ್ತರ್)-ವಿಜಯಪುರ, ಬಂಗಾರಪ್ಪ ಖುದಾನ್‌ಪುರ-ಬೆಂಗಳೂರು, ಮೈಮ್ ರಮೇಶ್- ದಕ್ಷಿಣ ಕನ್ನಡ, ಡಿ.ರತ್ನಮ್ಮ ದೇಸಾಯಿ- ರಾಯಚೂರು.

ಕ್ರೀಡೆ: ಆಶೀಶ್ ಕುಮಾರ್ ಬಲ್ಲಾಳ್-ಬೆಂಗಳೂರು, ಎಂ ಯೋಗೇಂದ್ರ-ಮೈಸೂರು, ಡಾ. ಬಬಿನಾ ಎನ್.ಎಂ (ಯೋಗ)ಕೊಡಗು.
ಶಿಕ್ಷಣ: ಡಾ. ಎಂ.ಆರ್. ಜಯರಾಮ್-ಬೆಂಗಳೂರು, ಡಾ. ಎನ್ ಎಸ್ ರಾಮೇಗೌಡ-ಮೈಸೂರು , ಎಸ್. ಬಿ. ಹೊಸಮನಿ- ಕಲಬುರಗಿ, ರಾಜ್ ಶ್ರೀ ನಾಗರಾಜು- ಬೆಳಗಾವಿ.
ನ್ಯಾಯಾಂಗ: ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ (ಪವನ್ ಕುಮಾರ್ ಭಜಂತ್ರಿ )-ಬಾಗಲಕೋಟೆ.
ಶಿಲ್ಪಕಲೆ: ಬಸಣ್ಣ ಮೋನಪ್ಪ ಬಡಿಗೇರ- ಯಾದಗಿರಿ, ನಾಗಲಿಂಗಪ್ಪ ಜಿ ಗಂಗೂರ- ಬಾಗಲಕೋಟೆ.
ಚಿತ್ರಕಲೆ: ಬಿ. ಮಾರುತಿ-ವಿಜಯನಗರ
ಕರಕುಶಲ: ಎಲ್. ಹೇಮಾಶೇಖರ್-ಮೈಸೂರು

Ad Widget
Click to comment

Leave a Reply

ಸ್ಥಳೀಯ

Subrahmanya-ಸುಬ್ರಹ್ಮಣ್ಯ: ಮನೆಗೆ ರಾತ್ರಿ ನಕ್ಸಲರ ಭೇಟಿ ಪ್ರಕರಣ: ಮಾಜಿ ನಕ್ಸಲರಾದ ರವೀಂದ್ರ, ಸುಂದರಿ, ದಿಶಾರಿಂದ ಸ್ಥಳ ಮಹಜರು

Published

on

Ad Widget

Ad Widget

Ad Widget

Ad Widget

ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಮನೆಗೆ ರಾತ್ರಿ ವೇಳೆ ಭೇಟಿ ನೀಡಿ ಊಟ ಮಾಡಿ, ದಿನಸಿ ಸಾಮಗ್ರಿಗಳನ್ನು ಪಡೆದು ತೆರಳಿದ್ದ ನಾಲ್ವರು ನಕ್ಸಲರ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಶೂರ್ ಜೈಲಿನಿಂದ ಕರೆತರಲಾದ ಮೂವರು ಮಾಜಿ ನಕ್ಸಲರಿಂದ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.

Ad Widget

Ad Widget

Ad Widget

Ad Widget

ಸುಬ್ರಹ್ಮಣ್ಯ, ನ.23: ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಮನೆಗೆ ರಾತ್ರಿ ವೇಳೆ ಭೇಟಿ ನೀಡಿ ಊಟ ಮಾಡಿ, ದಿನಸಿ ಸಾಮಗ್ರಿಗಳನ್ನು ಪಡೆದು ತೆರಳಿದ್ದ ನಾಲ್ವರು ನಕ್ಸಲರ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಶೂರ್ ಜೈಲಿನಿಂದ ಕರೆತರಲಾದ ಮೂವರು ಮಾಜಿ ನಕ್ಸಲರಿಂದ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.

Ad Widget

Ad Widget alt="Ad Widget"/>

Ad Widget

2024ರ ಮಾರ್ಚ್ 23ರಂದು ರಾತ್ರಿ ನಾಲ್ವರು ನಕ್ಸಲರು ಐನೆಕಿದು ಗ್ರಾಮದ ಮನೆಯೊಂದಕ್ಕೆ ಭೇಟಿ ನೀಡಿ ಊಟ ಮಾಡಿದ್ದಲ್ಲದೆ, ದಿನಸಿ ಸಾಮಗ್ರಿಗಳನ್ನು ಪಡೆದುಕೊಂಡು ತೆರಳಿದ್ದರು. ಇದಕ್ಕೂ ಎರಡು ದಿನಗಳ ಮೊದಲು ಕಲ್ಮಕಾರು ಭಾಗದ ಕಡಮಕಲ್ ಎಸ್ಟೇಟ್‌ಗೂ ನಕ್ಸಲರು ಭೇಟಿ ನೀಡಿದ್ದರು ಎನ್ನಲಾಗಿತ್ತು.

Ad Widget

Ad Widget <> Ad Widget

ಈ ಘಟನೆ ಆ ಸಂದರ್ಭದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ನಕ್ಸಲ್ ನಿಗ್ರಹ ಪಡೆಗಳು ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದವು. ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್‌ಐಆರ್‌ನಲ್ಲಿ ನಕ್ಸಲರ ಭೇಟಿಯ ಬಗ್ಗೆ ಉಲ್ಲೇಖಿಸಲಾಗಿದ್ದರೂ, ಯಾರ ಹೆಸರನ್ನೂ ದಾಖಲಿಸಿರಲಿಲ್ಲ.

ಬಳಿಕ ಕರ್ನಾಟಕ ಸರಕಾರದ ಪ್ರಸ್ತಾವನೆಯಂತೆ ಶರಣಾಗಿದ್ದ ಈ ನಕ್ಸಲರು ತ್ರಿಶೂರ್ ಜೈಲಿನಲ್ಲಿದ್ದರು. ಪ್ರಕರಣದ ತನಿಖೆ ಹಾಗೂ ನ್ಯಾಯಾಲಯದ ವಿಚಾರಣೆಯ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರು ತ್ರಿಶೂರ್‌ಗೆ ತೆರಳಿ ನ.17ರಂದು ಮಾಜಿ ನಕ್ಸಲರಾದ ರವೀಂದ್ರ, ಸುಂದರಿ ಮತ್ತು ದಿಶಾ ಅವರನ್ನು ವಶಕ್ಕೆ ಪಡೆದಿದ್ದರು.

Ad Widget

Ad Widget

ನಂತರ ಕರ್ನಾಟಕ ಹೈಕೋರ್ಟ್‌ಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದ ಪೊಲೀಸರು, ಮೂವರನ್ನು ಐನೆಕಿದು ಗ್ರಾಮದ ತೋಟದಮಜಲು ಪ್ರದೇಶಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ನಕ್ಸಲರು ತಾವು ಭೇಟಿ ನೀಡಿದ್ದ ಮನೆ ಹಾಗೂ ದಿನಸಿ ಸಾಮಗ್ರಿಗಳನ್ನು ಪಡೆದುಕೊಂಡಿದ್ದ ಸ್ಥಳವನ್ನು ಪೊಲೀಸರಿಗೆ ತೋರಿಸಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳ ಮಹಜರು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೂವರನ್ನು ಮತ್ತೆ ಹೈಕೋರ್ಟ್‌ಗೆ ಹಾಜರುಪಡಿಸಿ, ಅಲ್ಲಿಂದ ತ್ರಿಶೂರ್ ಜೈಲಿಗೆ ಕರೆದೊಯ್ದು ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

Ad Widget
Continue Reading

ಅಂತರ ರಾಜ್ಯ

WhatsApp Web: WhatsApp Web ಬಳಕೆದಾರರೇ ಎಚ್ಚರ..! ಟ್ಯಾಬ್ ಮುಚ್ಚಿದರೆ ಸಾಲದು, ಲಾಗೌಟ್ ಆಗದಿದ್ದರೆ ನಿಮ್ಮ ಖಾಸಗಿ ಚಾಟ್ ಬೇರೆಯವರ ಪಾಲು; ಕೇಂದ್ರ ಸರಕಾರದಿಂದ ಮಹತ್ವದ ಎಚ್ಚರಿಕೆ

Published

on

Ad Widget

Ad Widget

Ad Widget

Ad Widget

ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಕಂಪ್ಯೂಟರ್‌ಗಳಲ್ಲಿ WhatsApp Web ಬಳಸುವಾಗ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರಕಾರದ ಸೈಬರ್ ಅಪರಾಧ ನಿಗ್ರಹ ಘಟಕವಾದ ಇಂಡಿಯನ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ (I4C) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಕಂಪ್ಯೂಟರ್‌ಗಳಲ್ಲಿ WhatsApp Web ಬಳಸುವಾಗ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರಕಾರದ ಸೈಬರ್ ಅಪರಾಧ ನಿಗ್ರಹ ಘಟಕವಾದ ಇಂಡಿಯನ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ (I4C) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

Ad Widget

Ad Widget alt="Ad Widget"/>

Ad Widget

ಈ ಕುರಿತು ಹೊಸ ಸಲಹಾಸೂಚಿ ಬಿಡುಗಡೆ ಮಾಡಿರುವ ನ್ಯಾಷನಲ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್‌ನ ನ್ಯಾಷನಲ್ ಸೈಬರ್ ಕ್ರೈಂ ಥ್ರೆಟ್ ಅನಾಲಿಟಿಕ್ಸ್ ಯೂನಿಟ್, ಕಂಪ್ಯೂಟರ್‌ನಲ್ಲಿ WhatsApp Web ಲಾಗಿನ್ ಆಗಿಯೇ ಉಳಿದಿದ್ದರೆ ಅನಧಿಕೃತ ವ್ಯಕ್ತಿಗಳು ಬಳಕೆದಾರರ ಖಾಸಗಿ ಸಂದೇಶಗಳು, ಸಂಪರ್ಕ ಸಂಖ್ಯೆಗಳು ಹಾಗೂ ಗ್ರೂಪ್ ಚಾಟ್‌ಗಳನ್ನು ವೀಕ್ಷಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.

Ad Widget

Ad Widget <> Ad Widget

ಅಷ್ಟೇ ಅಲ್ಲದೆ, ಬಳಕೆದಾರರ ಖಾತೆಯನ್ನು ದುರುಪಯೋಗಪಡಿಸಿಕೊಂಡು ಅವರ ಹೆಸರಿನಲ್ಲಿ ಇತರರಿಗೆ ಸಂದೇಶಗಳನ್ನು ಕಳುಹಿಸುವ ಮೂಲಕ ವಂಚನೆ ಹಾಗೂ ವಿವಿಧ ಸೈಬರ್ ಹಗರಣಗಳನ್ನು ನಡೆಸುವ ಅಪಾಯವೂ ಇದೆ ಎಂದು ಎಚ್ಚರಿಸಿದೆ.

ಟ್ಯಾಬ್ ಮುಚ್ಚಿದರೆ ಸಾಲದು, ಲಾಗೌಟ್ ಆಗಲೇಬೇಕು!
ಬಹುತೇಕ ಬಳಕೆದಾರರು WhatsApp Web ಬಳಸಿದ ಬಳಿಕ ಬ್ರೌಸರ್ ವಿಂಡೋ ಅಥವಾ ಟ್ಯಾಬ್ ಮುಚ್ಚುವುದರಿಂದ ಖಾತೆ ಲಾಗೌಟ್ ಆಗುತ್ತದೆ ಎಂದು ಭಾವಿಸುತ್ತಾರೆ. ಆದರೆ, ಕೇವಲ ಟ್ಯಾಬ್ ಮುಚ್ಚುವುದರಿಂದ ಲಾಗಿನ್ ಅವಧಿ ಅಂತ್ಯಗೊಳ್ಳುವುದಿಲ್ಲ. ಹೀಗಾಗಿ ಪ್ರತಿ ಬಾರಿ ಬಳಕೆ ಮುಗಿದ ತಕ್ಷಣ ಖಾತೆಯಿಂದ ಲಾಗೌಟ್ ಆಗುವುದು ಕಡ್ಡಾಯ ಎಂದು ಸಲಹೆ ನೀಡಿದೆ.

Ad Widget

Ad Widget

ಇತರರೂ ಬಳಸಬಹುದಾದ ಕಚೇರಿ ಕಂಪ್ಯೂಟರ್‌ಗಳು, ಹಂಚಿಕೆಯ ಕಂಪ್ಯೂಟರ್‌ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ಸಾಧನಗಳಲ್ಲಿ WhatsApp Web ಬಳಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅಲ್ಲದೆ, ಇಂತಹ ಕಂಪ್ಯೂಟರ್‌ಗಳಲ್ಲಿ ಸರಕಾರಿ, ಸಾಂಸ್ಥಿಕ, ಹಣಕಾಸು, ಗೌಪ್ಯ ಅಥವಾ ಇತರ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದು ಸೂಚಿಸಿದೆ.

ಸೈಬರ್ ಕೆಫೆಗಳು, ಹೋಟೆಲ್‌ಗಳ ವ್ಯವಹಾರ ಕೇಂದ್ರಗಳು, ಸಾರ್ವಜನಿಕ ಸ್ಥಳಗಳು ಹಾಗೂ ಬಾಡಿಗೆಗೆ ಪಡೆದ ಕಂಪ್ಯೂಟರ್‌ಗಳಂತಹ ವಿಶ್ವಾಸಾರ್ಹವಲ್ಲದ ಸಾಧನಗಳಲ್ಲಿ WhatsApp Webಗೆ ಲಾಗಿನ್ ಆಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಅನಿವಾರ್ಯವಾಗಿ ಬಳಸಬೇಕಾದರೆ ಇನ್‌ಕಾಗ್ನಿಟೊ ಅಥವಾ ಪ್ರೈವೇಟ್ ಬ್ರೌಸಿಂಗ್ ಮೋಡ್ ಬಳಸುವಂತೆ ಶಿಫಾರಸು ಮಾಡಿದೆ.

ಈ ಲಕ್ಷಣಗಳು ಕಂಡುಬಂದರೆ ಎಚ್ಚರ!
ತಮ್ಮ ಖಾತೆಯಿಂದ ತಮಗೆ ತಿಳಿಯದೆಯೇ ಸಂದೇಶಗಳು ರವಾನೆಯಾಗುವುದು, ಸಂಪರ್ಕದಲ್ಲಿರುವವರಿಂದ ಅಸಹಜ ಪ್ರತಿಕ್ರಿಯೆಗಳು ಬರುವುದು ಅಥವಾ ಖಾತೆಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಎಚ್ಚರಿಕೆ ವಹಿಸಬೇಕು. ಇವು ಖಾತೆಗೆ ಅನಧಿಕೃತ ಪ್ರವೇಶವಾಗಿರುವ ಸೂಚನೆಗಳಾಗಿರಬಹುದು ಎಂದು ತಿಳಿಸಿದೆ.

ಇದರೊಂದಿಗೆ ಡಿಜಿಟಲ್ ಸಾಧನಗಳು, ಕಂಪ್ಯೂಟರ್‌ಗಳು, ಬ್ರೌಸರ್‌ಗಳು ಹಾಗೂ ಭದ್ರತಾ ಸಾಫ್ಟ್‌ವೇರ್‌ಗಳನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡಬೇಕು. ಅನುಮಾನಾಸ್ಪದ ಡೌನ್‌ಲೋಡ್‌ಗಳು, ಅಪರಿಚಿತ ಫೈಲ್‌ಗಳು ಹಾಗೂ ಕ್ರ್ಯಾಕ್ ಮಾಡಿದ ಸಾಫ್ಟ್‌ವೇರ್‌ಗಳನ್ನು ಬಳಸಬಾರದು ಎಂದು ಸಲಹೆ ನೀಡಿದೆ.

ಒಟ್ಟಿನಲ್ಲಿ, WhatsApp Web ಬಳಕೆ ಮುಗಿದ ಬಳಿಕ ಕಡ್ಡಾಯವಾಗಿ ಲಾಗೌಟ್ ಆಗುವುದು, ಅಪರಿಚಿತ ಹಾಗೂ ವಿಶ್ವಾಸಾರ್ಹವಲ್ಲದ ಕಂಪ್ಯೂಟರ್‌ಗಳಲ್ಲಿ ಲಾಗಿನ್ ಆಗುವುದನ್ನು ತಪ್ಪಿಸುವುದು ಮತ್ತು ಖಾತೆಯಲ್ಲಿನ ಅಸಹಜ ಚಟುವಟಿಕೆಗಳ ಮೇಲೆ ನಿಗಾ ಇಡುವ ಮೂಲಕ ಖಾತೆ ದುರುಪಯೋಗ ಹಾಗೂ ಹಣಕಾಸು ವಂಚನೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು I4C ತಿಳಿಸಿದೆ.

Ad Widget
Continue Reading

ಬಿಗ್ ನ್ಯೂಸ್

High Court notice-ಜಾರಿಯಾಗದ ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Published

on

Ad Widget

Ad Widget

Ad Widget

Ad Widget

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡುವಂತೆ ಪುತ್ತೂರು ಉಪವಿಭಾಗಾಧಿಕಾರಿ ಹೊರಡಿಸಿರುವ ಆದೇಶ ಇದುವರೆಗೂ ಜಾರಿಯಾಗದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡುವಂತೆ ಪುತ್ತೂರು ಉಪವಿಭಾಗಾಧಿಕಾರಿ ಹೊರಡಿಸಿರುವ ಆದೇಶ ಇದುವರೆಗೂ ಜಾರಿಯಾಗದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

Ad Widget

Ad Widget alt="Ad Widget"/>

Ad Widget

ಧನಕೀರ್ತಿ ಅರಿಗ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

Ad Widget

Ad Widget <> Ad Widget

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎನ್. ವಿನಯ್ ವಾದ ಮಂಡಿಸಿ, ಪ್ರಕರಣದ 10ನೇ ಪ್ರತಿವಾದಿಯಾಗಿರುವ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಈಗಾಗಲೇ ಗಡೀಪಾರು ಆದೇಶ ಹೊರಡಿಸಲಾಗಿದೆ. ಆದರೆ, ಈ ಆದೇಶವನ್ನು ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಅದನ್ನು ಇನ್ನೂ ಜಾರಿಗೊಳಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು, ಪ್ರಕರಣದ 1ರಿಂದ 9ನೇ ಪ್ರತಿವಾದಿಗಳಾಗಿರುವ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಎಡಿಜಿಪಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಂಟ್ವಾಳ ಡಿವೈಎಸ್ಪಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದರು.

Ad Widget

Ad Widget

ಪ್ರತಿವಾದಿಗಳ ಪರವಾಗಿ ಸರಕಾರಿ ವಕೀಲರು ನೋಟಿಸ್ ಸ್ವೀಕರಿಸಿದರು. ಇನ್ನು ಮೂರು ದಿನಗಳೊಳಗೆ ನೋಟಿಸ್ ಜಾರಿಗೆ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಿತು.

ನೋಟಿಸ್‌ಗೆ ಉತ್ತರ ಸಲ್ಲಿಸಲು ಡಿಸೆಂಬರ್ 16ರವರೆಗೆ ಕಾಲಾವಕಾಶ ನೀಡಿರುವ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.16ಕ್ಕೆ ನಿಗದಿಪಡಿಸಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!