ಬಿಗ್ ನ್ಯೂಸ್
ಮಹಿಳೆ ಅಥಾವ ಯುವತಿಗೆ ಅತೀವ ಲೈಂಗಿಕ ಆಸಕ್ತಿ ಇತ್ತು ಎಂದಾಕ್ಷಣ ಯಾರೊಬ್ಬರನ್ನೂ ಅತ್ಯಾಚಾರ ಆರೋಪದಿಂದ ಕ್ಷಮಿಸಲಾಗದು : ಕೇರಳ ಹೈ ಕೋರ್ಟು
ಕೊಚ್ಚಿ: ಮಹಿಳೆ ಅಥಾವ ಯುವತಿಗೆ ಅತೀವ ಲೈಂಗಿಕ ಆಸಕ್ತಿ ಇತ್ತು ಎಂದಾಕ್ಷಣ ಯಾರೊಬ್ಬರನ್ನೂ ಅತ್ಯಾಚಾರ ಆರೋಪದಿಂದ ಕ್ಷಮಿಸಲಾಗದು, ವಿಶೇಷವಾಗಿ ತಂದೆಯಾದವನನ್ನು. ಆ ತನ್ನ ಮಗಳಿಗೆ ‘ರಕ್ಷಕ ಮತ್ತು ಆಶ್ರಯಧಾತ’ ಎಂದೇ ಪರಿಗಣಿಸಲಾಗಿರುವುದರಿಂದ ಆತನ ಅಪರಾಧವನ್ನು ಮನ್ನಿಸಲಾಗದು ಎಂದು ಕೇರಳ ಹೈಕೋರ್ಟ್ ಹೇಳಿದೆ. ಅಪ್ರಾಪ್ತ ಬಾಲಕಿಗೆ ತಂದೆಯೇ ನಿರಂತರ ಅತ್ಯಾಚಾರ ಎಸಗಿದ ಹಾಗೂ ಆ ಬಾಲಕಿ ಮಗುವಿಗೆ ಜನ್ಮ ನೀಡಿದ ಪ್ರಕರಣದ ತೀರ್ಪು ಪ್ರಕಟಿಸುವ ವೇಳೆ ಕೇರಳ ಹೈ ಕೋರ್ಟು ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಗು ಹಾಗೂ ಆರೋಪಿ ತಂದೆಯ ಡಿಎನ್‌ಎ ವಿಶ್ಲೇಷಣೆಯೂ ಸಂತ್ರಸ್ತೆಯ ತಂದೆಯೇ ಶಿಶುವಿನ ಜೈವಿಕ ತಂದೆ ಎಂಬುದನ್ನು ಬಹಿರಂಗಪಡಿಸಿದ ಹಿನ್ನಲೆಯಲ್ಲಿ ಆರೋಪಿ ತಂದೆಯನ್ನು ಅಪರಾಧಿ ಎಂದು ಘೋಷಿಸಿದ ನ್ಯಾಯಮೂರ್ತಿ ಆರ್. ನಾರಾಯಣ ಪಿಶರಡಿ ತೀರ್ಪು ನೀಡಿದ್ದಾರೆ
‘ತನ್ನ ಮಗಳು ಬೇರೊಬ್ಬ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದು ಹಾಗಾಗಿ ನಾನು ಮಗ್ದನಾಗಿದ್ದು ನನ್ನನ್ನು ಈ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. ‘ ಎಂದು ಸಂತ್ರಸ್ತೆಯ ತಂದೆ ನ್ಯಾಯಾಲಯಕ್ಕೆ ಅರ್ಜ ಸಲ್ಲಿಸಿದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ‘ಒಬ್ಬ ತಂದೆ ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿದರೆ, ರಕ್ಷಕನೇ ಭಕ್ಷಕನಾದ, ಖಜಾನೆ ಕಾವಲುಗಾರನೇ ದರೋಡೆಕೋರನಾಗುವುದಕ್ಕಿಂತಲೂ ಕೆಟ್ಟದು. ತಂದೆಯಾದವನು ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗುವಷ್ಟು ಘೋರ ಅಪರಾಧ ಇನ್ನೊಂದು ಇರಲಾರದು’ ಎಂದು ಅಭಿಪ್ರಾಯಪಟ್ಟರು.

ಸಂತ್ರಸ್ತೆಯ ಆರೋಪಿ ತಂದೆ ನಾನು ಮುಗ್ಧ ಎಂದು ವಾದಿಸಿರುವುದನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳು, ಲೈಂಗಿಕ ದೌರ್ಜನ್ಯದ ಪರಿಣಾಮವಾಗಿ 2013ರ ಮೇನಲ್ಲಿ ಜನಿಸಿದ ಮಗುವಿನ ಡಿಎನ್‌ಎ ವಿಶ್ಲೇಷಣೆಯೂ ಸಂತ್ರಸ್ತೆಯ ತಂದೆಯೇ ಶಿಶುವಿನ ಜೈವಿಕ ತಂದೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.
ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಆರೋಪಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ, 12 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.
ಬಿಗ್ ನ್ಯೂಸ್
Puttur-ಪುತ್ತೂರು : ಕೋಟಿ- ಚೆನ್ನಯ KSRTC ಬಸ್ ನಿಲ್ದಾಣದ ನಿಲ್ದಾಣಾಧಿಕಾರಿಯಾಗಿ ಕೆ. ಭಾಸ್ಕರ ಶೆಟ್ಟಿ ಬಜನಿಗುತ್ತು ಪದೋನ್ನತಿ
ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಬಜನಿಗುತ್ತು ಕೆ.ಭಾಸ್ಕರ ಶೆಟ್ಟಿಯವರು ಸಹಾಯಕ ಸಂಚಾರ ನಿರೀಕ್ಷಕರಾಗಿ ಪದನ್ನೋತಿ ಹೊಂದಿ ಪುತ್ತೂರು ಕೋಟಿ- ಚೆನ್ನಯ KSRTC ಬಸ್ ನಿಲ್ದಾಣದ ನಿಲ್ದಾಣಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. 1992 ರಲ್ಲಿ ನಿರ್ವಾಹಕರಾಗಿ KSRTC ಮಂಗಳೂರು ವಿಭಾಗದಲ್ಲಿ ನೇಮಕಗೊಂಡರು.
ಪುತ್ತೂರು : ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಬಜನಿಗುತ್ತು ಕೆ.ಭಾಸ್ಕರ ಶೆಟ್ಟಿಯವರು ಸಹಾಯಕ ಸಂಚಾರ ನಿರೀಕ್ಷಕರಾಗಿ ಪದನ್ನೋತಿ ಹೊಂದಿ ಪುತ್ತೂರು ಕೋಟಿ- ಚೆನ್ನಯ KSRTC ಬಸ್ ನಿಲ್ದಾಣದ ನಿಲ್ದಾಣಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.
1992 ರಲ್ಲಿ ನಿರ್ವಾಹಕರಾಗಿ KSRTC ಮಂಗಳೂರು ವಿಭಾಗದಲ್ಲಿ ನೇಮಕಗೊಂಡರು.
2022ರಲ್ಲಿ ಸಂಚಾರ ನಿಯಂತ್ರಕರಾಗಿ ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಸೇವೆ ಸಲ್ಲಿಸಿದ ಭಾಸ್ಕರ ಶೆಟ್ಟಿಯವರು 2024ರಿಂದ ಪುತ್ತೂರು ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್ ನಲ್ಲಿ ಕಾರ್ಯನಿರ್ವಹಿಸಿ, 2026 ಜೂನ್ ನಲ್ಲಿ ಬಸ್ ನಿಲ್ದಾಣದ ಸಹಾಯಕ ಸಂಚಾರ ನಿರೀಕ್ಷಕರಾಗಿ ಪದೋನ್ನತಿ ಹೊಂದಿದ್ದಾರೆ.
ಬಜನಿಯಲ್ಲಿ ಕೃಷಿಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಭಾಸ್ಕರ ಶೆಟ್ಟಿಯವರ ಪತ್ನಿ ಸೀಮಾ ಬಿ. ಶೆಟ್ಟಿ, ಹಿರಿಯ ಪುತ್ರಿ ಕು. ಸನ್ಮಿತಾ ಶೆಟ್ಟಿ ಬಿ.ಇ ಪದವೀಧರೆಯಾಗಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದಾರೆ.
ಮಂಗಳೂರು
Auto passengers-ದಕ್ಷಿಣ ಕನ್ನಡದಲ್ಲಿ ಆಟೊ ಪ್ರಯಾಣಿಕರಿಗೆ ಮತ್ತೊಂದು ದರ ಏರಿಕೆ ಶಾಕ್: ಇಲ್ಲಿದೆ ಪರಿಷ್ಕೃತ ರೇಟ್ ಕಾರ್ಡ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೊರಿಕ್ಷಾ ಪ್ರಯಾಣ ದರವನ್ನು ಮತ್ತೊಮ್ಮೆ ಪರಿಷ್ಕರಿಸಲಾಗಿದ್ದು, ನವೆಂಬರ್ 1ರಿಂದ ಮೊದಲ 1.5 ಕಿ.ಮೀಗೆ ಕನಿಷ್ಠ ₹40 ಹಾಗೂ ಬಳಿಕ ಪ್ರತಿ ಕಿ.ಮೀಗೆ ₹23 ದರ ನಿಗದಿಪಡಿಸಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೊರಿಕ್ಷಾ ಪ್ರಯಾಣ ದರವನ್ನು ಮತ್ತೊಮ್ಮೆ ಪರಿಷ್ಕರಿಸಲಾಗಿದ್ದು, ನವೆಂಬರ್ 1ರಿಂದ ಮೊದಲ 1.5 ಕಿ.ಮೀಗೆ ಕನಿಷ್ಠ ₹40 ಹಾಗೂ ಬಳಿಕ ಪ್ರತಿ ಕಿ.ಮೀಗೆ ₹23 ದರ ನಿಗದಿಪಡಿಸಲಾಗಿದೆ.
ಆಗಸ್ಟ್ 28ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಮೊದಲ 1.5 ಕಿ.ಮೀಗೆ ಕನಿಷ್ಠ ದರವನ್ನು ₹35ರಿಂದ ₹40ಕ್ಕೆ ಹೆಚ್ಚಿಸಲಾಗಿತ್ತು. ಆದರೆ, ಪ್ರತಿ ಕಿ.ಮೀಗೆ ₹20ರಂತೆ ಇದ್ದ ದರವನ್ನು ಅದೇ ರೀತಿ ಮುಂದುವರಿಸಲಾಗಿತ್ತು. 2022ರ ನವೆಂಬರ್ 23ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ನಿಗದಿಪಡಿಸಿದ್ದ ಪ್ರತಿ ಕಿ.ಮೀಗೆ ₹20ರ ದರವನ್ನು ಆಗಸ್ಟ್ 28ರ ಅಧಿಸೂಚನೆಯಲ್ಲಿ ಪರಿಗಣಿಸಲಾಗಿರಲಿಲ್ಲ ಎಂದು ಅ.1ರಂದು ಹೊರಡಿಸಿರುವ ಪರಿಷ್ಕೃತ ಅಧಿಸೂಚನೆಯಲ್ಲಿ ಆರ್‌ಟಿಎ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
ಆಟೊ ಚಾಲಕರು ಹಾಗೂ ಮಾಲೀಕರ ಪ್ರತಿನಿಧಿಗಳು ಕನಿಷ್ಠ ದರವನ್ನು ₹35ರಿಂದ ₹50ಕ್ಕೆ ಹಾಗೂ ಪ್ರತಿ ಕಿ.ಮೀ. ದರವನ್ನು ₹30ಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದ್ದರು. ಇಂಧನ, ಬಿಡಿಭಾಗ ಸೇರಿದಂತೆ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದರ ಹೆಚ್ಚಳ ಅಗತ್ಯ ಎಂದು ಅವರು ಕೋರಿದ್ದರು.
ಆದರೆ, ₹50 ಕನಿಷ್ಠ ದರ ಹಾಗೂ ಕಿ.ಮೀಗೆ ₹30ಕ್ಕೆ ದರ ಏರಿಸಿದರೆ ಸಾರ್ವಜನಿಕರು ಆಟೊರಿಕ್ಷಾ ಬಳಕೆಯಿಂದ ದೂರ ಸರಿದು ಪರ್ಯಾಯ ಸಾರಿಗೆ ವ್ಯವಸ್ಥೆಗಳತ್ತ ಮುಖ ಮಾಡುವ ಸಾಧ್ಯತೆಯಿದೆ. ಇದರಿಂದ ಆಟೊರಿಕ್ಷಾ ಚಾಲಕರು ಮತ್ತು ಮಾಲೀಕರಿಗೂ ತೊಂದರೆಯಾಗಬಹುದು ಎಂದು ಆರ್‌ಟಿಎ ಅಭಿಪ್ರಾಯಪಟ್ಟಿದೆ.
ಹೊಸ ದರ ಹೀಗಿದೆ
ಗರಿಷ್ಠ ಮೂರು ಪ್ರಯಾಣಿಕರನ್ನು ಕರೆದೊಯ್ಯುವ ಆಟೊರಿಕ್ಷಾಗಳಿಗೆ ಮೊದಲ 1.5 ಕಿ.ಮೀಗೆ ₹40 ಹಾಗೂ ನಂತರ ಪ್ರತಿ ಕಿ.ಮೀಗೆ ₹23 ದರ ನಿಗದಿಯಾಗಿದೆ.
- ಮೊದಲ 10 ನಿಮಿಷ ಕಾಯುವಿಕೆಗೆ ಶುಲ್ಕವಿಲ್ಲ.
- ನಂತರದ 15 ನಿಮಿಷ ಅಥವಾ ಅದರ ಭಾಗಕ್ಕೆ ₹5 ಶುಲ್ಕ.
- 20 ಕೆ.ಜಿ.ವರೆಗೆ ಸಾಮಾನುಗಳಿಗೆ ಶುಲ್ಕವಿಲ್ಲ.
- ಮುಂದಿನ 20 ಕೆ.ಜಿ. ಅಥವಾ ಅದರ ಭಾಗಕ್ಕೆ ₹25 ಶುಲ್ಕ.
- ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಸಾಮಾನ್ಯ ದರದ ಒಂದೂವರೆ ಪಟ್ಟು ಶುಲ್ಕ ವಿಧಿಸಬಹುದು.
ಪರಿಷ್ಕೃತ ದರದ ಪಟ್ಟಿಯನ್ನು ಪ್ರತಿಯೊಂದು ಆಟೊರಿಕ್ಷಾದಲ್ಲೂ ಕಡ್ಡಾಯವಾಗಿ ಪ್ರದರ್ಶಿಸುವಂತೆ ಆರ್‌ಟಿಎ ಸೂಚಿಸಿದೆ. ಅಲ್ಲದೆ, ಮೀಟರ್‌ಗಳನ್ನು ಪರಿಷ್ಕೃತ ದರಕ್ಕೆ ಮರುಹೊಂದಿಸಿ, ಶೀಘ್ರದಲ್ಲೇ ಸೀಲ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಮೀಟರ್‌ಗಳ ಮರುಹೊಂದಿಕೆ ಪೂರ್ಣಗೊಳ್ಳುವವರೆಗೆ ಚಾಲಕರಿಗೆ ಪ್ರದರ್ಶಿಸಲು ಅಗತ್ಯವಿರುವ ಹೋಲಿಕೆ ದರಪಟ್ಟಿಯನ್ನು ಚಾಲಕರ ಸಂಘಗಳಿಗೆ ನೀಡಲಾಗುವುದು. ಸಂಘಗಳು ಅದನ್ನು ಚಾಲಕರಿಗೆ ವಿತರಿಸಲಿವೆ ಎಂದು ಆರ್‌ಟಿಎ ತಿಳಿಸಿದೆ.
ಬಿಗ್ ನ್ಯೂಸ್
ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್ – 9 ರಾಷ್ಟ್ರಗಳ 1500 ಈಜುಪಟುಗಳು ಭಾಗಿ : ಪುತ್ತೂರಿನ ಪಾರ್ಥ ವಾರಣಾಸಿಗೆ ಚಿನ್ನ
ಬೆಂಗಳೂರಿನ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಎಕ್ಸೆಲೆನ್ಸ್ (ಡಾಲ್ಫಿನ್ ಆಕ್ವಾಟಿಕ್ಸ್)ನಲ್ಲಿ ಅ.4ರಿಂದ 10ರ ತನಕ ನಡೆಯುತ್ತಿರುವ 2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್ ಶಿಪ್ 2026ರಲ್ಲಿ ಭಾಗವಹಿಸಿದ ಭಾರತದ ಪ್ರಮುಖ ಈಜು ಸ್ಪರ್ಧಿ ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿ ಮತ್ತು ಪುತ್ತೂರು ಅಕ್ವಾಟಿಕ್ ಕ್ಲಬ್ ನ ಪ್ರಧಾನ ಕೋಚ್ ಪಾರ್ಥ ವಾರಣಾಸಿ 50 ಮೀ ಬಟರ್ ಫೈ ನಲ್ಲಿ ಪುಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.

ಪುತ್ತೂರು:ಬೆಂಗಳೂರಿನ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಎಕ್ಸೆಲೆನ್ಸ್ (ಡಾಲ್ಫಿನ್ ಆಕ್ವಾಟಿಕ್ಸ್)ನಲ್ಲಿ ಅ.4ರಿಂದ 10ರ ತನಕ ನಡೆಯುತ್ತಿರುವ 2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್ ಶಿಪ್ 2026ರಲ್ಲಿ ಭಾಗವಹಿಸಿದ ಭಾರತದ ಪ್ರಮುಖ ಈಜು ಸ್ಪರ್ಧಿ ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿ ಸಂಸ್ಥಾಪಕ ಮತ್ತು ಪುತ್ತೂರು ಅಕ್ವಾಟಿಕ್ ಕ್ಲಬ್ ನ ಪ್ರಧಾನ ಕೋಚ್ ಪಾರ್ಥ ವಾರಣಾಸಿ 50 ಮೀ ಬಟರ್ ಫ್ಲೈ ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.
9 ರಾಷ್ಟ್ರಗಳ 1,500ಕ್ಕೂ ಹೆಚ್ಚು ಈಜುಗಾರರು ಭಾಗಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ. ಏಷ್ಯಾ ಅಕ್ವಾಟಿಕ್ ಮಾರ್ಗದರ್ಶನದಲ್ಲಿ, ಭಾರತೀಯ ಈಜು ಒಕ್ಕೂಟದ ಅಧೀನದಲ್ಲಿ ಹಾಗೂ ಕರ್ನಾಟಕ ಈಜು ಸಂಸ್ಥೆಯ ಆಯೋಜನಾ ಪಾಲುದಾರಿಕೆಯಲ್ಲಿ ಚಾಂಪಿಯನ್‌ಶಿಪ್ ನಡೆಯುತ್ತಿದೆ.
ಭಾರತ ಸೇರಿದಂತೆ ಶ್ರೀಲಂಕಾ, ಇರಾನ್, ಥೈಲ್ಯಾಂಡ್, ಜಪಾನ್, ಚೀನಾ, ಓಮನ್, ಮಲೇಷ್ಯಾ ಸೇರಿದಂತೆ ಒಟ್ಟು 9 ರಾಷ್ಟ್ರಗಳ 1,500ಕ್ಕೂ ಅಧಿಕ ಈಜುಗಾರರು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ.
ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಟ್ಟದ ಕೂಟದಲ್ಲಿ ಪಾರ್ಥ ವಾರಣಾಸಿ ಚಿನ್ನದ ಪದಕ ಗೆದ್ದಿರುವುದು ಪುತ್ತೂರಿನ ಕ್ರೀಡಾಭಿಮಾನಿಗಳಿಗೆ ಸಂತಸದ ವಿಷಯವಾಗಿದೆ.
-
ಬಿಗ್ ನ್ಯೂಸ್19 hours agoಡಿಕೆಶಿ ಸರ್ಕಾರದಿಂದ ಜನತೆಗೆ ಬಿಗ್ ಶಾಕ್ – ರೈತರಿಗೆ ಬಂಪರ್ ಗಿಫ್ಟ್..! ಹಾಲಿನ ದರ 8 ರೂ. ಏರಿಕೆ : 6 ರೂ. ರೈತರಿಗೆ..! ನ.1 ರಿಂದ ಬಹುತೇಕ ಜಾರಿ
-
ನಿಧನ ವಾರ್ತೆ24 hours agoPuttur-ಪುತ್ತೂರು: ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಮೃತ್ಯು
-
ಶಿಕ್ಷಣ23 hours agoPhilomena-ಸಂತ ಫಿಲೋಮಿನಾ ಕಾಲೇಜು : 35 ವರ್ಷಗಳ ಬಳಿಕ ಮತ್ತೆ ಒಂದಾದ 1991ರ ಬಿ.ಎಸ್ಸಿ. ಬ್ಯಾಚ್; ನೆನಪು, ನಂಟು ಮತ್ತು ಗುರು-ಗೌರವದ ಭಾವಪೂರ್ಣ ಸಂಗಮ
-
ನಿಧನ ವಾರ್ತೆ24 hours agoDead body-ಹುಲಿವೇಷ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಬಾಲಕ ಸಮುದ್ರ ಪಾಲು; ಮೃತದೇಹ ಪತ್ತೆ
-
ನಿಧನ ವಾರ್ತೆ23 hours agoKerala-ಕೇರಳ: ಸಿಡಿಲು ಬಡಿದು ಖ್ಯಾತ ‘ಪಲ್ಲಟ್ಟು ಬ್ರಹ್ಮದತ್ತನ್’ ಆನೆ ದಾರುಣ ಸಾವು
-
ಬಿಗ್ ನ್ಯೂಸ್24 hours agoPuttur-ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ: ‘ಭಕ್ತರನ್ನು ಕಡೆಗಣಿಸಿ ಜೀರ್ಣೋದ್ಧಾರ ಸಮಿತಿ ರಚನೆ’ – ವಿಹಿಂಪ ಆಕ್ಷೇಪ
-
Uncategorized20 hours ago
ಶಿಕ್ಷೆಯ ವಿರುದ್ಧ ಹೈಕೋರ್ಟಿಗೆ ಅಪೀಲು; ನ್ಯಾಯಾಲಯಕ್ಕೆ ಗೈರು: ನೆಕ್ಕಿಲಾಡಿಯಲ್ಲಿ ಆರೋಪಿಯ ಬಂಧನ
-
ರಾಜಕೀಯ19 hours ago2027ರ ಜನವರಿ ಮೊದಲ ವಾರದಲ್ಲೇ ಜಿ.ಪಂ ಮತ್ತು ತಾ.ಪಂ ಚುನಾವಣೆ : ಸಚಿವ ಸಂಪುಟದಲ್ಲಿ ಚರ್ಚೆ..!


















