ಕಾರ್ಯಕ್ರಮಗಳು
Savanur-ಆದರ್ಶ ವಿವಿದ್ಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ: 830 ಕೋಟಿ ವಹಿವಾಟು – 2.01 ಕೋಟಿ ಲಾಭ – 17ನೇ ಶಾಖೆ ಶೀಘ್ರ ಪ್ರಾರಂಭ- ಸವಣೂರು ಕೆ.ಸೀತಾರಾಮ ರೈ
ಸಹಕಾರಿ ರತ್ನ ಕೆ. ಸೀತಾರಾಮ ರೈ ಸವಣೂರು ಅವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರಿನ ದರ್ಬೆಯ ಪ್ರಶಾಂತ್ ಮಹಲ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮತ್ತು ಜಿಲ್ಲೆಯಾದ್ಯಂತ 15 ಶಾಖೆಗಳನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 13 ರಂದು ಪುತ್ತೂರಿನ ಪ್ರಶಾಂತ್ ಮಹಲ್‌ನ ಸನ್ನಿಧಿ ಸಭಾಂಗಣದಲ್ಲಿ ನಡೆಯಿತು.
ಸಹಕಾರಿ ರತ್ನ ಕೆ. ಸೀತಾರಾಮ ರೈ ಸವಣೂರು ಅವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರಿನ ದರ್ಬೆಯ ಪ್ರಶಾಂತ್ ಮಹಲ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮತ್ತು ಜಿಲ್ಲೆಯಾದ್ಯಂತ 15 ಶಾಖೆಗಳನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 13 ರಂದು ಪುತ್ತೂರಿನ ಪ್ರಶಾಂತ್ ಮಹಲ್‌ನ ಸನ್ನಿಧಿ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಕೆ. ಸೀತಾರಾಮ ರೈ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಂಘವು ವಾರ್ಷಿಕವಾಗಿ 830 ಕೋಟಿ ರೂ.ಗಳ ವಹಿವಾಟು ನಡೆಸಿ, 2.01 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಕೆ. ಸೀತಾರಾಮ ರೈ ಘೋಷಿಸಿದರು. ಮುಂದಿನ ವರ್ಷ 3 ಕೋಟಿ ರೂ. ಲಾಭ ಗಳಿಸುವ ಗುರಿ ಹೊಂದಿದ್ದೇವೆ. ಸಂಘದಲ್ಲಿ 100 ಮಂದಿ ಉದ್ಯೋಗಿಗಳಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ನೂತನ ಕಟ್ಟಡದ ಲೋಕಾರ್ಪಣೆಗೆ ಯೋಜನೆ ಹಾಕಿಕೊಂಡಿದ್ದೇವೆ ಎಂದು ರೈ ತಿಳಿಸಿದರು.

ಸಭೆಯಲ್ಲಿ ಪ್ರಮುಖ ನಿರ್ಧಾರಗಳು ಮತ್ತು ಘೋಷಣೆಗಳು ಹೀಗಿವೆ:
ಡಿವಿಡೆಂಡ್: ಸದಸ್ಯರಿಗೆ ಶೇ. 17 ರಷ್ಟು ಡಿವಿಡೆಂಡ್ ಘೋಷಿಸಲಾಯಿತು. ಸದಸ್ಯರ ಒಪ್ಪಿಗೆ ಮೇರೆಗೆ ಶೇ. 5 ರಷ್ಟನ್ನು ಸಂಘದ ಕಟ್ಟಡ ನಿಧಿಗೆ ವರ್ಗಾಯಿಸಲಾಗುವುದು ಮತ್ತು ಉಳಿದ ಶೇ. 12 ರಷ್ಟನ್ನು ಸದಸ್ಯರ ಖಾತೆಗೆ ಜಮಾ ಮಾಡಲಾಗುವುದು.
ಸಾಲದ ಮಿತಿ ಹೆಚ್ಚಳ: ಸದಸ್ಯರ ಸಾಲದ ಮಿತಿಯನ್ನು 50 ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳಿಗೆ ಏರಿಸಲಾಗುವುದು. ಚಿನ್ನಾಭರಣ ಈಡಿನ ಸಾಲವನ್ನು 25 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು.
ವಿಸ್ತರಣೆ: ಸಂಘದ ವ್ಯವಹಾರವನ್ನು ವಿಸ್ತರಿಸುವ ಉದ್ದೇಶದಿಂದ ದ.ಕ. ಜಿಲ್ಲೆಯಿಂದ ಉಡುಪಿ ಮತ್ತು ಮಡಿಕೇರಿ ಜಿಲ್ಲೆಗಳಿಗೂ ಕಾರ್ಯಾಚರಣೆಯನ್ನು ವಿಸ್ತರಿಸಲಾಗುವುದು. 16ನೇ ಶಾಖೆಯಾಗಿ ಮಂಗಳೂರಿನಲ್ಲಿ ಮತ್ತು 17ನೇ ಶಾಖೆಯಾಗಿ ಈಶ್ವರಮಂಗಲದಲ್ಲಿ ಹೊಸ ಶಾಖೆಗಳನ್ನು ತೆರೆಯಲಾಗುವುದು.
ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು, ನಿರ್ದೇಶಕರಾದ ಮಹಾಬಲ ರೈ ಬೋಳಂತೂರು, ಅಶ್ವಿನ್ ಎಲ್. ಶೆಟ್ಟಿ ಸವಣೂರು, ಎಸ್.ಎಂ. ಬಾವು ಸಾಹೇಬ್, ಕೆ. ರವೀಂದ್ರನಾಥ ಶೆಟ್ಟಿ ಕೇನ್, ಎನ್. ರಾಮಯ್ಯ ರೈ ಕೆದಂಬಾಡಿ, ಚಿಕ್ಕಪ್ಪ ನಾಯ್ಕ ಅರಿಯಡ್ಕ, ಸೀತಾರಾಮ ಶೆಟ್ಟಿ ಬಿ. ಮಂಗಳೂರು, ವಿ.ವಿ. ನಾರಾಯಣ ಭಟ್ ನರಿಮೊಗರು, ಜೈರಾಜ್ ಭಂಡಾರಿ ಪುತ್ತೂರು, ಮಹಾದೇವ ಎಂ. ಮಂಗಳೂರು, ಶ್ರೀಮತಿ ಪೂರ್ಣಿಮಾ ಎಸ್. ಆತ್ಮ ಮಂಗಳೂರು, ಶ್ರೀಮತಿ ಯಮುನಾ ಎಸ್. ರೈ ಗುತ್ತುಪಾಲ್, ಶ್ರೀಮತಿ ರಶ್ಮಿ ಎಸ್. ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮಹಾಪ್ರಬಂಧಕರಾದ ವಸಂತ ಜಾಲಾಡಿ ವರದಿ ವಾಚಿಸಿದರು. ಪುತ್ತೂರು ಶಾಖೆಯ ಹೆಚ್ಚುವರಿ ಶಾಖಾ ವ್ಯವಸ್ಥಾಪಕಿ ರತ್ನಾ ಡಿ.ಜಿ ಪ್ರಾರ್ಥನೆ ಸಲ್ಲಿಸಿದರು. ಕೇಂದ್ರ ಕಚೇರಿಯ ಸಿಬ್ಬಂದಿ ರಾಖಿ ಜಿ ಸ್ವಾಗತಿಸಿದರು ಮತ್ತು ಪ್ರಭಾರ ಶಾಖಾ ವ್ಯವಸ್ಥಾಪಕಿ ಕು. ಮಹಾಲಕ್ಷ್ಮೀ ಕೆ ವಂದಿಸಿದರು.
ಕೇಂದ್ರ ಕಚೇರಿಯ ಸಿಬ್ಬಂದಿ ಶ್ರೀಮತಿ ಶ್ರೀರಕ್ಷಾ ಪಿ.ಕೆ 2024-25ನೇ ಸಾಲಿನ ತಿಳುವಳಿಕೆ ಪತ್ರವನ್ನು ವಾಚಿಸಿದರು. ವಿಟ್ಲ ಶಾಖೆಯ ವ್ಯವಸ್ಥಾಪಕಿ ಕವಿತಾ ಕೆ.ಎಸ್ ಗತ ವರ್ಷದ ಸಭಾ ನಡವಳಿಕೆಯನ್ನು ವಾಚಿಸಿದರು. ಮುಂದಿನ ವರ್ಷಕ್ಕೆ ತಯಾರಿಸಿದ ಅಂದಾಜು ಅಯವ್ಯಯ ಪಟ್ಟಿಯನ್ನು ಸಹಾಯಕ ಮಹಾಪ್ರಬಂಧಕರಾದ ಸುನಾದ್ ರಾಜ್ ಶೆಟ್ಟಿ ವಾಚಿಸಿದರು. ಆರ್ಥಿಕ ಸಾಲಿನಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ ಶಾಖೆಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನವನ್ನು ಕುಂಬ್ರ ಶಾಖೆ, ದ್ವಿತೀಯ ಸ್ಥಾನವನ್ನು ಬೊಳ್ಳಾರು ಶಾಖೆ ಮತ್ತು ತೃತೀಯ ಸ್ಥಾನವನ್ನು ಸವಣೂರು ಶಾಖೆ ಪಡೆದುಕೊಂಡಿತು. ಮಡಂತ್ಯಾರು ಶಾಖೆಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಮುಂದಿನ ವರ್ಷ ವಿದ್ಯಾರಶ್ಮಿ ವಿದ್ಯಾಸಂಸ್ಥೆ ಮತ್ತು ಆದರ್ಶ ಸಹಕಾರಿ ಸಂಘಕ್ಕೆ 25 ವರ್ಷ ತುಂಬಲಿದ್ದು, ಹಾಗೂ ನನ್ನ ವಿವಾಹವಾಗಿ 50 ವರ್ಷಗಳು ಪೂರ್ಣಗೊಳ್ಳಲಿವೆ. ಈ ಸಂದರ್ಭದಲ್ಲಿ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ಬಡ ಕುಟುಂಬಗಳಿಗೆ ನೆರವು ನೀಡುವ ಯೋಜನೆಯನ್ನು ನಾವು ಹಾಕಿಕೊಂಡಿದ್ದೇವೆ. ಈ ಕಾರ್ಯಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಕೆ. ಸೀತಾರಾಮ ರೈ ಹೇಳಿದರು.
ಸ್ಥಳೀಯ
Dharmasthala-ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ; ಶಿಬಿರಾರ್ಥಿಗಳಿಗೆ ಭಜನಾ ತರಬೇತಿ
ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಅ.02, ಶುಕ್ರವಾರದಂದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾದ 28ನೇ ವರ್ಷದ ಭಜನಾ ಕಮ್ಮಟ ದ ಐದನೇ ದಿನದ ಅಂಗವಾಗಿ ಶಿಬಿರದಲ್ಲಿ ಉಪ್ಪುಂದ ರಾಜೇಶ್ ಪಡಿಯಾರ್ ಗಾಯಕರು, ಮೈಸೂರು ಇವರು ಎಲ್ಲಾ ಶಿಬಿರಾರ್ಥಿಗಳಿಗೆ ಭಜನಾ ತರಬೇತಿಯನ್ನು ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಅ.02, ಶುಕ್ರವಾರದಂದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾದ 28ನೇ ವರ್ಷದ ಭಜನಾ ಕಮ್ಮಟ ದ ಐದನೇ ದಿನದ ಅಂಗವಾಗಿ ಶಿಬಿರದಲ್ಲಿ ಉಪ್ಪುಂದ ರಾಜೇಶ್ ಪಡಿಯಾರ್ ಗಾಯಕರು, ಮೈಸೂರು ಇವರು ಎಲ್ಲಾ ಶಿಬಿರಾರ್ಥಿಗಳಿಗೆ ಭಜನಾ ತರಬೇತಿಯನ್ನು ನೀಡಿದರು.
ದಾಸ ಸಾಹಿತ್ಯದ ‘ಇಟ್ಹಾಂಗೆ ಇರುವೆನೋ ಹರಿಯೇ’, ಏಸು ಕಾಯಂಗಳ ಕಳೆದು’ ಹಾಗೂ ಇನ್ನಿತರ ಭಜನಾ ಕೀರ್ತನೆಗಳನ್ನು ತರಬೇತುದಾರರು ಅಭ್ಯಾಸ ಮಾಡಿಸಿದರು.
ಈ ಸಂದರ್ಭದಲ್ಲಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಐಶ್ವರ್ಯ ನಿಶ್ಚಲ್ ಜೈನ್ ಹಾಗೂ ಭಜನಾ ಕಮ್ಮಟ ಪರಿಷತ್ ನ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಉಪಸ್ಥಿತರಿದ್ದರು.
ಕಾರ್ಯಕ್ರಮಗಳು
Swachha Bharat Mission-ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ವಿಟ್ಲದಲ್ಲಿ 3 ಟಿಪಿಡಿ ಸಾಮರ್ಥ್ಯದ ಎಂಆರ್‌ಎಫ್ ಘಟಕಕ್ಕೆ ಸಂಸದ ಕ್ಯಾ. ಚೌಟ ಚಾಲನೆ
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಎಂ.ಆರ್.ಎಫ್(ಮೆಟೀರಿಯಲ್ ರಿಕವರಿ ಫೆಸಿಲಿಟಿ) ಘಟಕಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಚಾಲನೆ ನೀಡಿದ್ದಾರೆ.

ಮಂಗಳೂರು: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಎಂ.ಆರ್.ಎಫ್(ಮೆಟೀರಿಯಲ್ ರಿಕವರಿ ಫೆಸಿಲಿಟಿ) ಘಟಕಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಚಾಲನೆ ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ವಚ್ಛ ಭಾರತ್ ಮಿಷನ್ 2.0 ಹಾಗೂ ಕೇಂದ್ರ ಪುರಸ್ಕೃತ ವಿವಿಧ ಯೋಜನೆಯಡಿ ಸುಮಾರು 60.10 ಲಕ್ಷ ರೂಪಾಯಿಗಳ ಅನುದಾನದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಈ ಘನ ತ್ಯಾಜ್ಯ ಘಟಕದಲ್ಲಿ ಒಣತ್ಯಾಜ್ಯ ಸಂಗ್ರಹಿಸುವುದಕ್ಕೆ 3 ಟಿಪಿಡಿ ಸಾಮರ್ಥ್ಯದ ಮೆಟೀರಿಯಲ್ ರಿಕವರಿ ಫೆಸಿಲಿಟಿ ಘಟಕವನ್ನು ನಿರ್ಮಿಸಲಾಗುತ್ತದೆ. ಆ ಮೂಲಕ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬಹಳ ವೈಜ್ಞಾನಿಕವಾದ ಒಣ ಕಸ ಸಂಗ್ರಹ ಹಾಗೂ ವಿಲೇವಾರಿ ವ್ಯವಸ್ಥೆ ಅಳವಡಿಕೆಯಾಗುತ್ತಿದೆ. ಇದು ಗ್ರಾಮೀಣ ಭಾಗದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಮಿಷನ್ ಅನುಷ್ಠಾನ ಪ್ರಕ್ರಿಯೆಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ.

ವಿಟ್ಲದ ಎಂಆರ್‌ಎಫ್ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು , ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರಿಂದ ಪರಿಸರ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಅಲ್ಲದೆ, ಒಣ ಕಸವನ್ನು ಈ ರೀತಿಯ ಅತ್ಯಾಧುನಿಕ ವ್ಯವಸ್ಥೆಯಡಿ ಸಂಗ್ರಹಿಸಿ ವಿಲೇವಾರಿ ಮಾಡುವುದರಿಂದ ಸ್ಥಳೀಯವಾಗಿ ಉದ್ಯೋಗಾವಕಾಶವನ್ನು ಒದಗಿಸುವ ಜತೆಗೆ ಆರ್ಥಿಕವಾಗಿ ಸಂಪನ್ಮೂಲ ಕ್ರೋಢೀಕರಣಕ್ಕೂ ಅನುಕೂಲ ಕಲ್ಪಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ದ ಕನಸು ನನಸಾಗಬೇಕಾದರೆ, ಗ್ರಾಮ ಮತ್ತು ಪಟ್ಟಣ ಮಟ್ಟದಲ್ಲೇ ಆಧುನಿಕ ಮೂಲಸೌಕರ್ಯಗಳು ಬೆಳೆಯಬೇಕು. ಈ ₹60.10 ಲಕ್ಷದ ಯೋಜನೆಯು ನಮ್ಮ ವಿಟ್ಲ ಪಟ್ಟಣ ಪಂಚಾಯತಿಯನ್ನು ಮಾದರಿ ಮತ್ತು ಸ್ವಾವಲಂಬಿ ಪಟ್ಟಣವನ್ನಾಗಿ ಪರಿವರ್ತಿಸಲು ನಾಂದಿ ಹಾಡಲಿದೆ ಎಂದರು. ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್‌ನ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಕಾರ್‍ಯಕ್ರಮದ ಬಳಿಕ ಪ್ರಧಾನಮಂತ್ರಿಯವರ 25 ವರ್ಷಗಳ ಸಾರ್ವಜನಿಕ ಸೇವೆ ಪ್ರಯುಕ್ತ ನಡೆಯುತ್ತಿರುವ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ವಿಟ್ಲ ಮಹಾಶಕ್ತಿ ಕೇಂದ್ರದ ಬೂತ್ ಸಂಖ್ಯೆ 5ರ ಪಳಿಕೆಯಲ್ಲಿ ಸಂಸದ ಕ್ಯಾ.ಚೌಟ ಅವರು ಕಾರ್ಯಕರ್ಯರೊಂದಿಗೆ ಸಸಿ ನೆಟ್ಟು ನೀರುಣಿಸಿದರು.

ಈ ವೇಳೆ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ, ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ, ಬಿಜೆಪಿ ಮುಖಂಡರಾದ ದೇವಪ್ಪ ಪೂಜಾರಿ, ಸಂಜಯ್ ಪ್ರಭು, ಪ್ರಸನ್ನ ದರ್ಬೆ, ನಿತೀಶ್ ಕುಮಾರ್ ಶಾಂತಿವನ, ಹರಿಪ್ರಸಾದ್ ಯಾದವ್, ವಿದ್ಯಾಧರ ಜೈನ್, ಶ್ರೀಕೃಷ್ಣ ವಿಟ್ಲ, ಪ್ರೀತಂ ಪೂಂಜಾ , ಉದಯ ಆಲಂಗಾರ್, ಹರೀಶ್ ಸಿ.ಎಚ್ ಉಪಸ್ಥಿತರಿದ್ದರು.
ಕಾರ್ಯಕ್ರಮಗಳು
Bantare Serige-2026-ಅ.3ರಂದು ‘ಬಂಟೆರೆ ಸೇರಿಗೆ-2026’: 15 ಸಾಧಕರಿಗೆ ಪ್ರಶಸ್ತಿ; ಬಂಟರ ಸಂಘಕ್ಕೆ 5.50 ಎಕರೆ ಜಾಗದ ಹಕ್ಕುಪತ್ರ ಹಸ್ತಾಂತರ; 3,000 ಮಂದಿಯ ಸಾಮರ್ಥ್ಯದ ಮದುವೆ ಹಾಲ್ ನಿರ್ಮಾಣಕ್ಕೆ ಯೋಜನೆ
ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಪುತ್ತೂರು ತಾಲೂಕು ಸಮಿತಿಯ ಮಾರ್ಗದರ್ಶನದಲ್ಲಿ ‘ಬಂಟೆರೆ ಸೇರಿಗೆ-2026’ ಕಾರ್ಯಕ್ರಮ ಅ.3ರಂದು ಪುತ್ತೂರಿನ ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ.

ಪುತ್ತೂರು: ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಪುತ್ತೂರು ತಾಲೂಕು ಸಮಿತಿಯ ಮಾರ್ಗದರ್ಶನದಲ್ಲಿ ‘ಬಂಟೆರೆ ಸೇರಿಗೆ-2026’ ಕಾರ್ಯಕ್ರಮ ಅ.3ರಂದು ಪುತ್ತೂರಿನ ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ 9ಕ್ಕೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಿಂದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಎರಡು ರಥಗಳಲ್ಲಿ ಸಾಧಕರು, ಶಾಸಕ ಅಶೋಕ್ ಕುಮಾರ್ ರೈ ಹಾಗೂ ಅತಿಥಿಗಳನ್ನು ರಾಜರಸ್ತೆ ಮೂಲಕ ಬಂಟರ ಭವನಕ್ಕೆ ಕರೆತರಲಾಗುವುದು. ಅರಿಯಡ್ಕ ಚಿಕ್ಕಪ್ಪ ನ್ಯಾಕ್ ಮಹಾದ್ವಾರ ಉದ್ಘಾಟಿಸಲಿದ್ದು, ದಂಬೆಕ್ಕಾನ ಸದಾಶಿವ ರೈ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬೆಳಿಗ್ಗೆ 11ಕ್ಕೆ ಶಾಸಕ ಅಶೋಕ್ ಕುಮಾರ್ ರೈ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಜಿತ್ ಕುಮಾರ್ ರೈ ಮಾಲಾಡಿ ಶುಭಾಶಂಸನೆ ಮಾಡಲಿದ್ದು, ಶಶಿಧರ್ ಶೆಟ್ಟಿ ಬರೋಡಾ ಪ್ರಶಸ್ತಿ ಪ್ರದಾನ, ಆರ್.ಕೆ. ಶೆಟ್ಟಿ ಮುಂಬೈ ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ. ಜಗನ್ನಾಥ ರೈ ಬೀಡು ಮುಖ್ಯ ಅತಿಥಿಯಾಗಿರುವರು.
ಪ್ರಶಸ್ತಿ ಪುರಸ್ಕೃತರು: ಸಹಕಾರರತ್ನ *ಸವಣೂರು ಸೀತಾರಾಮ ರೈ, **ಚನಿಲ ತಿಮ್ಮಪ್ಪ ಶೆಟ್ಟಿ, **ಮಿತ್ರಂಪಾಡಿ ಪುರಂದರ ರೈ, **ಡಾ. ಸಂದೀಪ್ ರೈ, ಸಹಕಾರರತ್ನ **ಅಗರಿ ನವೀನ್ ಭಂಡಾರಿ, **ಸುಬೇದಾರ್ ಮೇಜರ್ ರಮೇಶ್ ರೈ ಬೋಳೋಡಿ, **ಚಂದ್ರಹಾಸ್ ರೈ ಬನ್ನೂರು ಬಾಳಿಕೆ, **ಜಯಲಕ್ಷ್ಮಿ ಶೆಟ್ಟಿ, **ಸತೀಶ್ ರೈ ಕುತ್ಯಾಡಿ, **ಪ್ರವೀಣ್ ಭಂಡಾರಿ ಪುರ, **ಡಾ. ಸತ್ಯವತಿ ಆಳ್ವ, **ಸರೋಜ ಉಮೇಶ್ ರೈ ಮನವಳಿಕೆ, ಪಿಯುಸಿ ವಿಭಾಗದ **ಸಸ್ತಿ ಶೆಟ್ಟಿ, *ಸಮೃದ್ಧಿ ಶೆಟ್ಟಿ ಹಾಗೂ ಶರಣ್ಯ ಶೆಟ್ಟಿ ಅವರಿಗೆ ವಿವಿಧ ಕ್ಷೇತ್ರಗಳ ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪ್ರದಾನ ಮಾಡಲಾಗುವುದು.
ಅಶೋಕ್ ರೈಗೆ ವಿಶೇಷ ಸನ್ಮಾನ
ಪುತ್ತೂರಿನ ಮರೀಲ್‌ನಲ್ಲಿ ಬಂಟರ ಸಂಘಕ್ಕೆ ಸರ್ಕಾರದಿಂದ 5.50 ಎಕರೆ ಜಾಗ ಮಂಜೂರು ಮಾಡಿಸಲು ಸಹಕರಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಹಕ್ಕುಪತ್ರವನ್ನು ಸಂಘಕ್ಕೆ ಹಸ್ತಾಂತರಿಸಲಿದ್ದು, ಜಾಗಕ್ಕೆ ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತವನ್ನು ಶಾಸಕರೇ ಭರಿಸಿದ್ದಾರೆ ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ಮಂಜೂರಾದ ಜಾಗದಲ್ಲಿ ಮೊದಲ ಹಂತವಾಗಿ ಅಡ್ಯಾರ್ ಗಾರ್ಡನ್ ಮಾದರಿಯ ಮದುವೆ ಹಾಲ್ ಮತ್ತು ಭೋಜನ ಶಾಲೆ ನಿರ್ಮಿಸಲು ಉದ್ದೇಶಿಸಲಾಗಿದೆ. ಸುಮಾರು 3,000 ಮಂದಿಗೆ ಅವಕಾಶ, ವಿಶಾಲ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಮುಂದಿನ ಹಂತಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.
ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಪುತ್ತೂರು ಮೂಲದ ಸೌಮ್ಯ ಪ್ರಿಯ ಹೆಗ್ಡೆ ಅರಿಯಡ್ಕ ಹಾಗೂ ಉಮೇಶ್ ಪೂಂಜ ದೇರ್ಲ ಅವರನ್ನು ಸನ್ಮಾನಿಸಲಾಗುವುದು. ಪ್ರಧಾನ ಕಾರ್ಯದರ್ಶಿ ಅಮರನಾಥ ಶೆಟ್ಟಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಮಾಂಸಾಹಾರಿ ಭೋಜನದ ವ್ಯವಸ್ಥೆ ಇದೆ.
ಸುದ್ದಿಗೋಷ್ಠಿಯಲ್ಲಿ ದಂಬೆಕ್ಕಾನ ಸದಾಶಿವ ರೈ, ಸಾಜ ರಾಧಾಕೃಷ್ಣ ಆಳ್ವ, ನಿತ್ಯಾನಂದ ಶೆಟ್ಟಿ ಮನವಳಿಕೆ, ಸಂತೋಷ್ ಕುಮಾರ್ ಶೆಟ್ಟಿ ಸಾಜ ಹಾಗೂ ಭಾಗ್ಗೇಶ್ ರೈ ಉಪಸ್ಥಿತರಿದ್ದರು.
-
Uncategorized7 hours ago
ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಕೀಲ ಮೋಹಿತ್ ಕುಮಾರ್ ಗೆ ಮಾತೃ ವಿಯೋಗ
-
Uncategorized6 hours ago
ಮಂಗಳೂರು : ಸಹಪಾಠಿಯೊಂದಿಗೆ ಜಗಳ: ಬಿಸಿಎ ವಿದ್ಯಾರ್ಥಿಗೆ ಚೂರಿಯಿಂದ ಇರಿತ; ಇಬ್ಬರು ವಶಕ್ಕೆ
-
ದಕ್ಷಿಣ ಕನ್ನಡ38 minutes ago
Raod Accident : ಮಂತ್ರಾಲಯ ಯಾತ್ರೆ ವೇಳೆ ಬಣಕಲ್ ನಲ್ಲಿ ಭೀಕರ ಅಪಘಾತ: ಗಂಭೀರ ಗಾಯಗೊಂಡಿದ್ದ ಶಿಶಿಲದ ಯುವಕ ಸಾವು


















