Connect with us

ಬಿಗ್ ನ್ಯೂಸ್

Dharmasthala | ಧರ್ಮಸ್ಥಳ ಎಸ್ಐಟಿ ತನಿಖೆ : ಮಾಧ್ಯಮಗಳಲ್ಲಿ ಬರೋದೆಲ್ಲ ಸತ್ಯ ಅಲ್ಲ – ಗೃಹ ಸಚಿವ ಪರಮೇಶ್ವರ್

Published

on

Ad Widget

Ad Widget

Ad Widget

Ad Widget

ಬೆಂಗಳೂರು: ಧರ್ಮಸ್ಥಳದ (Dharmasthala) ಎಸ್ಐಟಿ ತನಿಖೆ ಬಗ್ಗೆ ಮಾಧ್ಯಮ ವರದಿಗಳ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಮೊದಲ ಬಾರಿ ಮಾತನಾಡಿದ್ದಾರೆ.

Ad Widget

Ad Widget

Ad Widget

Ad Widget

ಹೊರಗಡೆ ಪ್ರಪಂಚಕ್ಕೆ ಮಾಧ್ಯಮಗಳು ಹೇಳೋದರಲ್ಲಿ ಸತ್ಯ ಇದೆ ಅಂತ ನಾನು ಹೇಳಕ್ಕೆ ಹೋಗೋದಿಲ್ಲ ಎಂದು ಗೃಹ ಸಚಿವರು ತಿಳಿಸಿದ್ದಾರೆ. Sit ತನಿಖಾ ಅಧಿಕಾರಿಗಳು ವರದಿ ಕೊಟ್ಟ ಮೇಲೆ ಏನಾದರೂ ಹೇಳಬಹುದು. ಈಗ ತನಿಖೆಯ ಹಂತದಲ್ಲಿದೆ. ಎಸ್‌ಐಟಿ ಅಧಿಕಾರಿಗಳು ತನಿಖೆಯ ವಿವರಗಳನ್ನು ಹೊರಗಡೆ ಯಾರಿಗೂ ತಿಳಿಸುವುದಿಲ್ಲ. ಈಗ ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲ ಸತ್ಯ ಅಲ್ಲ ಅಂತ ಹೇಳಿದ್ದಾರೆ.

Ad Widget

Ad Widget alt="Ad Widget"/>

Ad Widget

ನಿನ್ನೆ ಜಿ ಪರಮೇಶ್ವರ್ ರವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ನಾವು ಎಸ್ ಐಟಿ ತನಿಖೆಗೆ ಕಾಲಮಿತಿ ನಿಗದಿ ಮಾಡಿಲ್ಲ. ಆದಷ್ಟು ಬೇಗ ಮಾಡಿ ಅಂದಿದ್ದಾರೆ ಮುಖ್ಯ ಮಂತ್ರಿಗಳು. ಆದಷ್ಟು ಬೇಗ ಅಂದ್ರೆ ತನಿಖೆಯನ್ನು ಅರ್ಧಕ್ಕೆ ನಿಲ್ಲಿಸಿ ಬಿಡಲು ಆಗಲ್ಲ. ತನಿಖೆ ನಡೆಯುತ್ತಿದ್ದಾಗ, ಆ ತನಿಖೆಯು ಎಲ್ಲೋ ಇನ್ನೊಂದು ದಿಕ್ಕಿನತ್ತ ಸಾಗಬಹುದು. ಹಾಗಾಗಿ ತನಿಖೆಗೆ ಸಾಕಷ್ಟು ಕಾಲಾವಕಾಶ ಬೇಕಿರುತ್ತದೆ ಎಂದಿದ್ದಾರೆ.

Ad Widget

Ad Widget <> Ad Widget

ಈ ಮಧ್ಯೆ, ಗೃಹ ಸಚಿವರ ಒಂದು ಮಾತು ಇದೀಗ ಚರ್ಚೆಗೆ ಕಾರಣವಾಗಿದೆ. ಕೆಲವು ಸಲ ಸ್ಪೆಕ್ಯುಲೇಶನ್ ಸತ್ಯ ಆಗಬಹುದು. ಆದರೆ ಈಗ ಮಾಧ್ಯಮಗಳಲ್ಲಿ ಬರುತ್ತಿರುವುದು SIT ಯ ತನಿಖಾ ಪ್ರಗತಿಯ ವರದಿಯಲ್ಲ ಎಂದಿದ್ದಾರೆ.

ಐಪಿಎಸ್ ಮೊಹಂತಿಯ ನೇತೃತ್ವದಲ್ಲಿ ಮುಖ್ಯ ಮಂತ್ರಿಗಳು ನಂಬಿಕೆ ಇಟ್ಟು ತನಿಖೆಯ ನೇತೃತ್ವ ಕೊಟ್ಟಿದ್ದಾರೆ. ಅವರು ಸರಿಯಾದ. ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ. ಎಲ್ಲರೂ ಶಾಂತಿ ಸೌಹಾರ್ದತೆ ಕಾಯ್ದುಕೊಳ್ಳಬೇಕು ಎಂದು ಗೃಹಸಚಿವರು ಮನವಿ ಮಾಡಿಕೊಂಡಿದ್ದಾರೆ.

Click to comment

Leave a Reply

ಬಿಗ್ ನ್ಯೂಸ್

Rakesh Shetty-ಸ್ಟಿಂಗ್ ಆಪರೇಷನ್ ಪ್ರಕರಣ: ಜಾಮೀನು ಅರ್ಜಿ ವಾಪಸ್ ಪಡೆದ ರಾಕೇಶ್ ಶೆಟ್ಟಿ

Published

on

Ad Widget

Ad Widget

Ad Widget

Ad Widget

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ, ಇದೀಗ ತಮ್ಮ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ, ಇದೀಗ ತಮ್ಮ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ.

Ad Widget

Ad Widget alt="Ad Widget"/>

Ad Widget

ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ರಾಕೇಶ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನವೆಂಬರ್ 20ರಂದು ಬೆಂಗಳೂರಿನ 66ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

Ad Widget

Ad Widget <> Ad Widget

ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧ ದಾಖಲಾಗಿರುವುದು ಜಾಮೀನು ಪಡೆಯಬಹುದಾದ ಅಪರಾಧಗಳಾಗಿವೆ. ಒಂದು ವೇಳೆ ಬಂಧನಕ್ಕೊಳಗಾದರೂ ವಿಚಾರಣಾ ನ್ಯಾಯಾಲಯದಲ್ಲಿಯೇ ಜಾಮೀನು ಪಡೆಯಲು ಅವಕಾಶವಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಊರ್ಜಿತವಲ್ಲ ಎಂದು ಅಭಿಪ್ರಾಯಪಟ್ಟಿತು.

ಇದಕ್ಕೂ ಮುನ್ನ ರಾಕೇಶ್ ಶೆಟ್ಟಿ ಪರ ವಕೀಲರು ವಾದ ಮಂಡಿಸಿ, ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧಗಳ ಆರೋಪ ಹೊರಿಸಲಾಗಿದೆ. ಆದ್ದರಿಂದ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ನ್ಯಾಯಪೀಠವನ್ನು ಕೋರಿದ್ದರು.

Ad Widget

Ad Widget

ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ಪ್ರಕರಣದಲ್ಲಿ ಜಾಮೀನು ಪಡೆಯಬಹುದಾದ ಅಪರಾಧಗಳು ದಾಖಲಾಗಿರುವುದರಿಂದ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವುದು ಕಾನೂನುಬದ್ಧವಾಗಿ ಊರ್ಜಿತವಲ್ಲ ಎಂದು ವಾದಿಸಿದರು.

ನ್ಯಾಯಪೀಠದ ಅಭಿಪ್ರಾಯದ ಬೆನ್ನಲ್ಲೇ ರಾಕೇಶ್ ಶೆಟ್ಟಿ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂಪಡೆದುಕೊಂಡರು.

Ad Widget
Continue Reading

ಬಿಗ್ ನ್ಯೂಸ್

Bantwal-ಬಂಟ್ವಾಳ: ತಂದೆ ಗದರಿಸಿದ್ದಕ್ಕೆ ಮನೆ ಬಿಟ್ಟ ಬ್ಯಾಂಕ್ ಉದ್ಯೋಗಿ ಯುವತಿ ನಾಪತ್ತೆ..!

Published

on

Ad Widget

Ad Widget

Ad Widget

Ad Widget

ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ 21 ವರ್ಷದ ಯುವತಿಯೊಬ್ಬರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ನಾಪತ್ತೆಯಾದ ಯುವತಿಯನ್ನು ಪೆರ್ನೆ ಗ್ರಾಮದ ನಿವಾಸಿ ಕವಿತಾ (21) ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು, ನ.23: ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ 21 ವರ್ಷದ ಯುವತಿಯೊಬ್ಬರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

Ad Widget

Ad Widget alt="Ad Widget"/>

Ad Widget

ನಾಪತ್ತೆಯಾದ ಯುವತಿಯನ್ನು ಪೆರ್ನೆ ಗ್ರಾಮದ ನಿವಾಸಿ ಕವಿತಾ (21) ಎಂದು ಗುರುತಿಸಲಾಗಿದೆ. ಇವರು ಬಿ.ಸಿ.ರೋಡಿನ ಬ್ಯಾಂಕ್‌ವೊಂದರಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು.

Ad Widget

Ad Widget <> Ad Widget

ನವೆಂಬರ್ 20ರಂದು ಕವಿತಾ ಅವರು ನಾಪತ್ತೆಯಾಗಿದ್ದು, ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಗದರಿಸಿದ್ದರಿಂದ ಅಜ್ಜಿಯ ಮನೆಗೆ ಹೋಗುವುದಾಗಿ ತೆರಳಿದ್ದ ಕವಿತಾ ಬಳಿಕ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಯುವತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಸ್ಥಳೀಯ

Bank-ಚಿನ್ನದ ಬೆಲೆ ಕುಸಿತದ ಎಫೆಕ್ಟ್: ಗೋಲ್ಡ್ ಲೋನ್ ಪಡೆದವರಿಗೆ ಬ್ಯಾಂಕ್‌ಗಳಿಂದ ಶಾಕ್; ಒಡವೆ ಹರಾಜಿನ ಎಚ್ಚರಿಕೆ..!

Published

on

Ad Widget

Ad Widget

Ad Widget

Ad Widget

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬರುತ್ತಿರುವ ಬೆನ್ನಲ್ಲೇ ಚಿನ್ನದ ಆಭರಣಗಳನ್ನು ಅಡವಿಟ್ಟು ಸಾಲ ಪಡೆದ ಗ್ರಾಹಕರಿಗೆ ಬ್ಯಾಂಕ್‌ಗಳು ಹಾಗೂ ಖಾಸಗಿ ಫೈನಾನ್ಸ್ ಸಂಸ್ಥೆಗಳು ಹೊಸ ಸಂಕಷ್ಟ ತಂದೊಡ್ಡಿವೆ. ಚಿನ್ನದ ಬೆಲೆ ಕುಸಿತದಿಂದ ಸಾಲದ ಮೊತ್ತ ಮತ್ತು ಅಡವಿಟ್ಟ ಚಿನ್ನದ ಮೌಲ್ಯದ ನಡುವಿನ ಅನುಪಾತದಲ್ಲಿ ವ್ಯತ್ಯಾಸ ಉಂಟಾಗಿರುವ ಹಿನ್ನೆಲೆಯಲ್ಲಿ, ಹೆಚ್ಚುವರಿ ಹಣ ಪಾವತಿಸುವಂತೆ ಬ್ಯಾಂಕ್‌ಗಳು ಸಾಲಗಾರರಿಗೆ ಸೂಚನೆ ನೀಡುತ್ತಿವೆ. ನಿಗದಿತ ಅವಧಿಯಲ್ಲಿ ಹಣ ಪಾವತಿಸದಿದ್ದರೆ ಆರ್‌ಬಿಐ ನಿಯಮಗಳ ಪ್ರಕಾರ ಅಡವಿಟ್ಟ ಚಿನ್ನವನ್ನು ಹರಾಜು ಹಾಕಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡುತ್ತಿವೆ.

Ad Widget

Ad Widget

Ad Widget

Ad Widget

ಯಾದಗಿರಿ: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬರುತ್ತಿರುವ ಬೆನ್ನಲ್ಲೇ ಚಿನ್ನದ ಆಭರಣಗಳನ್ನು ಅಡವಿಟ್ಟು ಸಾಲ ಪಡೆದ ಗ್ರಾಹಕರಿಗೆ ಬ್ಯಾಂಕ್‌ಗಳು ಹಾಗೂ ಖಾಸಗಿ ಫೈನಾನ್ಸ್ ಸಂಸ್ಥೆಗಳು ಹೊಸ ಸಂಕಷ್ಟ ತಂದೊಡ್ಡಿವೆ. ಚಿನ್ನದ ಬೆಲೆ ಕುಸಿತದಿಂದ ಸಾಲದ ಮೊತ್ತ ಮತ್ತು ಅಡವಿಟ್ಟ ಚಿನ್ನದ ಮೌಲ್ಯದ ನಡುವಿನ ಅನುಪಾತದಲ್ಲಿ ವ್ಯತ್ಯಾಸ ಉಂಟಾಗಿರುವ ಹಿನ್ನೆಲೆಯಲ್ಲಿ, ಹೆಚ್ಚುವರಿ ಹಣ ಪಾವತಿಸುವಂತೆ ಬ್ಯಾಂಕ್‌ಗಳು ಸಾಲಗಾರರಿಗೆ ಸೂಚನೆ ನೀಡುತ್ತಿವೆ. ನಿಗದಿತ ಅವಧಿಯಲ್ಲಿ ಹಣ ಪಾವತಿಸದಿದ್ದರೆ ಆರ್‌ಬಿಐ ನಿಯಮಗಳ ಪ್ರಕಾರ ಅಡವಿಟ್ಟ ಚಿನ್ನವನ್ನು ಹರಾಜು ಹಾಕಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡುತ್ತಿವೆ.

Ad Widget

Ad Widget alt="Ad Widget"/>

Ad Widget

ಕಳೆದ ಆರೇಳು ತಿಂಗಳ ಹಿಂದೆ 10 ಗ್ರಾಂ ಚಿನ್ನದ ಬೆಲೆ ₹1.75 ಲಕ್ಷದಿಂದ ₹1.85 ಲಕ್ಷದವರೆಗೆ ತಲುಪಿದ್ದ ಸಂದರ್ಭದಲ್ಲಿ ಅನೇಕರು ತಮ್ಮ ಚಿನ್ನಾಭರಣಗಳನ್ನು ಅಡವಿಟ್ಟು ಹೆಚ್ಚಿನ ಮೊತ್ತದ ಸಾಲ ಪಡೆದಿದ್ದರು. ಇದೀಗ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಅಂತಹ ಗ್ರಾಹಕರನ್ನು ಬ್ಯಾಂಕ್‌ಗಳು ಸಂಪರ್ಕಿಸಿ, ಸಾಲದ ಖಾತೆಯನ್ನು ಸರಿಪಡಿಸಿಕೊಳ್ಳಲು ಹೆಚ್ಚುವರಿ ಹಣ ಪಾವತಿಸುವಂತೆ ಸೂಚಿಸುತ್ತಿವೆ.

Ad Widget

Ad Widget <> Ad Widget

ಕಳೆದ ಮೂರು ತಿಂಗಳ ಅವಧಿಯಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು ₹30,000 ಇಳಿಕೆಯಾಗಿರುವುದು ಬ್ಯಾಂಕ್‌ಗಳ ಆತಂಕಕ್ಕೆ ಪ್ರಮುಖ ಕಾರಣವಾಗಿದೆ. ಚಿನ್ನದ ಮೌಲ್ಯ ಕುಸಿದಂತೆ ಸಾಲದ ಮೊತ್ತ ಮತ್ತು ಅಡವಿಟ್ಟ ಚಿನ್ನದ ಮೌಲ್ಯದ ನಡುವಿನ ಅನುಪಾತವಾದ ಲೋನ್ ಟು ವ್ಯಾಲ್ಯೂ (LTV) ನಿಗದಿತ ಮಿತಿಯನ್ನು ಮೀರಿರುವ ಸಾಧ್ಯತೆಯಿದೆ. ಹೀಗಾಗಿ ವಿಶೇಷವಾಗಿ ಖಾಸಗಿ ಬ್ಯಾಂಕ್‌ಗಳು ಗ್ರಾಹಕರಿಗೆ ಹೆಚ್ಚುವರಿ ಮಾರ್ಜಿನ್ ಹಣ ಪಾವತಿಸುವಂತೆ ಅಥವಾ ಹೆಚ್ಚುವರಿ ಚಿನ್ನವನ್ನು ಅಡವಿಡುವಂತೆ ಸೂಚಿಸುತ್ತಿವೆ.

ಚಿನ್ನದ ಮೌಲ್ಯ ಕುಸಿತ; ಸಾಲಗಾರರಿಗೆ ಹೆಚ್ಚುವರಿ ಹೊರೆ

Ad Widget

Ad Widget

ಉದಾಹರಣೆಗೆ, ಚಿನ್ನದ ಬೆಲೆ 10 ಗ್ರಾಂಗೆ ₹1.85 ಲಕ್ಷ ಇದ್ದಾಗ ₹5 ಲಕ್ಷ ಮೌಲ್ಯದ ಚಿನ್ನಾಭರಣ ಅಡವಿಟ್ಟು ₹3.75 ಲಕ್ಷದಿಂದ ₹4 ಲಕ್ಷದವರೆಗೆ ಸಾಲ ಪಡೆದಿದ್ದರೆ, ಇದೀಗ ಚಿನ್ನದ ಬೆಲೆ ಕುಸಿದಿರುವುದರಿಂದ ಅಡವಿಟ್ಟ ಆಭರಣಗಳ ಮೌಲ್ಯವೂ ಕಡಿಮೆಯಾಗಿರುತ್ತದೆ. ಇದರಿಂದ ಸಾಲದ ಮೊತ್ತಕ್ಕೆ ಹೋಲಿಸಿದರೆ ಚಿನ್ನದ ಮೌಲ್ಯ ಕಡಿಮೆಯಾಗುವ ಪರಿಸ್ಥಿತಿ ಎದುರಾಗಬಹುದು.

ಇನ್ನೂ ಮುಂದಿನ ತಿಂಗಳುಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂಬ ಆತಂಕವೂ ಸಾಲಗಾರರ ಚಿಂತೆಯನ್ನು ಹೆಚ್ಚಿಸಿದೆ. ಹೀಗಾಗಿ ಬ್ಯಾಂಕ್‌ಗಳು ಗ್ರಾಹಕರಿಗೆ ತಕ್ಷಣ ಅಗತ್ಯ ಮಾರ್ಜಿನ್ ಮೊತ್ತವನ್ನು ಪಾವತಿಸಿ ಸಾಲದ ಖಾತೆಯನ್ನು ಕ್ರಮಬದ್ಧಗೊಳಿಸುವಂತೆ ಸೂಚಿಸುತ್ತಿವೆ.

ಹಣ ಪಾವತಿಸದಿದ್ದರೆ ಒಡವೆ ಹರಾಜು?

ಈ ಕುರಿತು ಮಾತನಾಡಿರುವ ಖಾಸಗಿ ಬ್ಯಾಂಕ್‌ನ ಪ್ರಮುಖರೊಬ್ಬರು, ಚಿನ್ನದ ಬೆಲೆ ಕುಸಿತದಿಂದ ಬ್ಯಾಂಕ್‌ಗಳಿಗೆ ನಷ್ಟವಾಗಬಾರದು ಎಂಬ ಉದ್ದೇಶದಿಂದ ಗೋಲ್ಡ್ ಲೋನ್ ಪಡೆದ ಗ್ರಾಹಕರಿಗೆ ಸೂಚನೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಾಲದ ಖಾತೆಯನ್ನು ಸರಿಪಡಿಸಿಕೊಳ್ಳಲು ಹೆಚ್ಚುವರಿ ಮಾರ್ಜಿನ್ ಹಣ ಪಾವತಿಸುವಂತೆ ಗ್ರಾಹಕರಿಗೆ ತಿಳಿಸಲಾಗುತ್ತಿದೆ. ಗ್ರಾಹಕರು ನಿಗದಿತ ಸಮಯದಲ್ಲಿ ಸ್ಪಂದಿಸದಿದ್ದರೆ ಬ್ಯಾಂಕ್‌ಗಳು ಹಾಗೂ ಖಾಸಗಿ ಫೈನಾನ್ಸ್ ಸಂಸ್ಥೆಗಳು ಅಡವಿಟ್ಟ ಚಿನ್ನವನ್ನು ಹರಾಜು ಹಾಕುವ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಚಿನ್ನದ ಬೆಲೆ ಇಳಿಕೆ ಬಗ್ಗೆ ಮೋದಿ ಹೇಳಿಕೆ
ಇತ್ತೀಚೆಗೆ ಚಿನ್ನದ ಬೆಲೆ ಇಳಿಕೆಯ ಕುರಿತು ಪ್ರತಿಕ್ರಿಯಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಚಿನ್ನ ಖರೀದಿಸದಂತೆ ತಾವು ನೀಡಿದ್ದ ಸಲಹೆಯಿಂದ ಜನರ ಹಣ ಉಳಿತಾಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಚೇಂಬರ್ ಆಫ್ ಟ್ರೇಡ್ ಆ್ಯಂಡ್ ಇಂಡಸ್ಟ್ರಿ ಕೂಡ ಪ್ರಧಾನಿಯವರ ಸಲಹೆಯಿಂದ ಲಕ್ಷಾಂತರ ರೂಪಾಯಿ ನಷ್ಟ ತಪ್ಪಿದೆ ಎಂದು ಪತ್ರ ಬರೆದು ಅಭಿನಂದಿಸಿತ್ತು.

ನ.23ರ ಸೋಮವಾರ ಯಾದಗಿರಿಯಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹1.31 ಲಕ್ಷ ಇತ್ತು ಎಂದು ವರದಿಯಾಗಿದೆ.

ಒಟ್ಟಿನಲ್ಲಿ, ಚಿನ್ನದ ಬೆಲೆ ಏರಿಕೆಯ ಸಂದರ್ಭದಲ್ಲಿ ಹೆಚ್ಚಿನ ಸಾಲ ಪಡೆದಿದ್ದ ಗ್ರಾಹಕರು ಇದೀಗ ಬೆಲೆ ಇಳಿಕೆಯ ಪರಿಣಾಮವಾಗಿ ಹೆಚ್ಚುವರಿ ಹಣ ಹೊಂದಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಬ್ಯಾಂಕ್‌ಗಳ ಸೂಚನೆ ಪಾಲಿಸದಿದ್ದರೆ ತಮ್ಮ ಅಮೂಲ್ಯ ಆಭರಣಗಳನ್ನೇ ಕಳೆದುಕೊಳ್ಳುವ ಆತಂಕವೂ ಎದುರಾಗಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!