Connect with us

ಬಿಗ್ ನ್ಯೂಸ್

Bajrang Dal-ಧರ್ಮಸ್ಥಳ ವಿರುದ್ಧ ಅಪಪ್ರಚಾರ: ವಿದೇಶಿ ಹಣದ ಬಗ್ಗೆ ಇಡಿ ತನಿಖೆಗೆ ಬಜರಂಗದಳ ಮನವಿ

Published

on



Ad Widget

Ad Widget

Ad Widget

Ad Widget

ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಹಾನಿ ಮಾಡುತ್ತಿರುವ ಯೂಟ್ಯೂಬರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಇನ್ಫ್ಲೂಯೆನ್ಸರ್‌ಗಳು ವಿದೇಶಿ ಹಣದ ನೆರವು ಪಡೆಯುತ್ತಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸಬೇಕು ಎಂದು ಬಜರಂಗದಳ ಮುಖಂಡ ತೇಜಸ್ ಎ. ಗೌಡ ಅವರು ಪತ್ರ ಬರೆದಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು, ಆ.20: ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಹಾನಿ ಮಾಡುತ್ತಿರುವ ಯೂಟ್ಯೂಬರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಇನ್ಫ್ಲೂಯೆನ್ಸರ್‌ಗಳು ವಿದೇಶಿ ಹಣದ ನೆರವು ಪಡೆಯುತ್ತಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸಬೇಕು ಎಂದು ಬಜರಂಗದಳ ಮುಖಂಡ ತೇಜಸ್ ಎ. ಗೌಡ ಅವರು ಪತ್ರ ಬರೆದಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ವಿದೇಶಿ ಹಣವನ್ನು ಬಳಸಿಕೊಂಡು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ವಿಶೇಷವಾಗಿ, ಒಬ್ಬ ಮುಸ್ಲಿಂ ಯೂಟ್ಯೂಬರ್ ವಿದೇಶದಿಂದ ಹಣ ಪಡೆಯುತ್ತಿದ್ದು, ಈತನ ಹಣದ ಮೂಲವನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

Ad Widget

Ad Widget <> Ad Widget

ದೂರಿನ ವಿವರಗಳು:
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಹೆಸರು ಕೆಡಿಸಲು ಪ್ರಯತ್ನಿಸುತ್ತಿರುವ ಮುಸ್ಲಿಂ ಯೂಟ್ಯೂಬರ್ ಮತ್ತು ಅವರ ಸಹಚರರು ವಿದೇಶದಿಂದ ಹಣ ಪಡೆದಿರುವ ಬಗ್ಗೆ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಮುದ್ರಣ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ದೇವಸ್ಥಾನದ ವಿರೋಧಿಗಳ ವಿದೇಶಿ ಹಣಕಾಸು ವಹಿವಾಟುಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ತೇಜಸ್ ಗೌಡ ವಿನಂತಿಸಿದ್ದಾರೆ.



Ad Widget

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ಹಿಂದೆ ದೊಡ್ಡ ಗುಂಪೊಂದು ಕೆಲಸ ಮಾಡುತ್ತಿದ್ದು, ಅವರ ಕೈವಾಡದಿಂದ ಇಂತಹ ಚಟುವಟಿಕೆಗಳು ನಡೆಯುತ್ತಿವೆ. ಎನ್‌ಐಎ ಮತ್ತು ಇಡಿ ಅಧಿಕಾರಿಗಳು ಈ ವಿಷಯದಲ್ಲಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

Click to comment

Leave a Reply

ಬಿಗ್ ನ್ಯೂಸ್

Sting Operation | ಸ್ಟಿಂಗ್‌ ಆಪರೇಷನ್‌ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್‌’ ಸದ್ದು..?

Published

on



Ad Widget

Ad Widget

Ad Widget

Ad Widget


ಪುತ್ತೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ‘ಸ್ಟಿಂಗ್‌ ಆಪರೇಷನ್‌’ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿರೋಧ ಪಕ್ಷದವರು ಕೆಲವು ಸಚಿವರನ್ನು ಗುರಿಯಾಗಿಸಿ ಸ್ಟಿಂಗ್‌ ಆಪರೇಷನ್‌ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದ್ದು, ಸಚಿವರು ಎಚ್ಚರಿಕೆಯಿಂದ ಇರುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕಿವಿಮಾತು ಹೇಳಿದ್ದಾರೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಗುರಿಯಾಗಿಸಿ ಮಾಡಿರುವ ಆರೋಪಗಳು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿವೆ.

Ad Widget

Ad Widget

Ad Widget

Ad Widget


ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಡೆಸಿದ ಸ್ಟಿಂಗ್‌ ಆಪರೇಷನ್‌ನಿಂದಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತಾಯಿತು ಎಂದು ಆರೋಪಿಸಿದ್ದರು.
ಈ ರಾಜಕೀಯ ಆರೋಪ-ಪ್ರತ್ಯಾರೋಪಗಳ ನಡುವೆಯೇ, ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ‘ಸ್ಟಿಂಗ್‌’ ವಿಚಾರಕ್ಕೂ ಪುತ್ತೂರಿಗೂ ಸಂಬಂಧವಿದೆಯೇ ಎಂಬ ಚರ್ಚೆ ಇದೀಗ ಸ್ಥಳೀಯ ರಾಜಕೀಯ ವಲಯದಲ್ಲಿ ಆರಂಭವಾಗಿದೆ.

Ad Widget

Ad Widget

Ad Widget alt="Ad Widget"/>

Ad Widget


ಇದಕ್ಕೆ ಕಾರಣವಾಗಿರುವುದು ಸುಮಾರು 10 ದಿನಗಳ ಹಿಂದೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಆಗಿರುವ ಎರಡು ವಿಡಿಯೊಗಳು. ಈ ವಿಡಿಯೊಗಳಲ್ಲಿ ಟಿವಿ ಮಾಧ್ಯಮ ಕ್ಷೇತ್ರದ ‘ಪವರ್‌ಫುಲ್‌’ ವ್ಯಕ್ತಿಯೊಬ್ಬರು ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷವೊಂದರಿಂದ ಪುತ್ತೂರು ಕ್ಷೇತ್ರದ ಟಿಕೆಟ್‌ ಬಯಸಿದ್ದರೆಂದು ಹೇಳಲಾಗಿರುವ ಹವ್ಯಾಸಿ ರಾಜಕಾರಣಿ ಮಹಿಳೆಯೊಬ್ಬರು ಒಟ್ಟಾಗಿ ಸಂತ್ರಸ್ತೆ ಎನ್ನಲಾಗುತ್ತಿರುವ ಮಹಿಳೆಯನ್ನು ಭೇಟಿಯಾಗಿರುವ ದೃಶ್ಯಗಳಿವೆ.
ಪ್ರಭಾವಿ ರಾಜಕಾರಣಿಯಿಂದ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ಎಂಬಂತೆ ಆ ಮಹಿಳೆಯನ್ನು ಚಿತ್ರಿಸಲಾಗಿದೆಯಾದರೂ, ಅದರ ಸತ್ಯಾಸತ್ಯತೆ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಸಂತ್ರಸ್ತೆಯನ್ನು ಆ ಇಬ್ಬರು ಮಹಾರಾಷ್ಟ್ರದ ಯಾವುದೋ ಅಜ್ಞಾತ ಸ್ಥಳದಲ್ಲಿ ಭೇಟಿಯಾಗಿ, ‘ಡೀಲ್‌’ ಕುದುರಿಸುವ ಕುರಿತು ಮಾತುಕತೆ ನಡೆಸುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ.

Ad Widget

Ad Widget <> Ad Widget


ಅದರಲ್ಲೂ ಮಾಧ್ಯಮ ಕ್ಷೇತ್ರದ ಈ ವ್ಯಕ್ತಿ ಇಂತಹ ಸ್ಟಿಂಗ್‌ ಆಪರೇಷನ್‌ಗಳಿಗೆ ಹೆಸರುವಾಸಿಯಾಗಿದ್ದು, ಮಾಧ್ಯಮ ಲೋಕದ ಅತ್ಯಂತ ವಿವಾದಾತ್ಮಕ ವ್ಯಕ್ತಿಯಾಗಿದ್ದಾರೆ. ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲದವರಾಗಿದ್ದಾರೆ.
ವಿಡಿಯೊದಲ್ಲಿರುವ ಮಹಿಳೆಯನ್ನು ಮುಸ್ಲಿಂ ಮಹಿಳೆ ಎಂದು ಪರಿಚಯಿಸಲಾಗಿದ್ದು, ಆಕೆಯನ್ನು ಬುರ್ಖಾಧಾರಿಯಾಗಿ ವಿಡಿಯೊದಲ್ಲಿ ತೋರಿಸಲಾಗಿದೆ. ತಾನು ಅಪ್ರಾಪ್ತೆಯಾಗಿದ್ದ ಸಂದರ್ಭದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರ ಸಂಪರ್ಕಕ್ಕೆ ಬಂದಿದ್ದಾಗಿ ಆಕೆ ಹೇಳಿಕೊಳ್ಳುತ್ತಿರುವುದು ಕಂಡುಬರುತ್ತದೆ.
ಕಳೆದ ವಿಧಾನಸಭಾ ಚುನಾವಣೆಗಿಂತ ಸುಮಾರು ಆರು ತಿಂಗಳು ಮೊದಲು, ಅಂದರೆ 2022ರ ಅಕ್ಟೋಬರ್‌ ಅಥವಾ ನವೆಂಬರ್‌ ಅವಧಿಯಲ್ಲಿ, ಟಿವಿ ಕ್ಷೇತ್ರದ ಈ ವ್ಯಕ್ತಿ ಹಾಗೂ ಮಹಿಳಾ ರಾಜಕಾರಣಿ ‘ಡೀಲ್‌’ ಕುದುರಿಸಲು ಸಂತ್ರಸ್ತೆ ಎನ್ನಲಾಗುತ್ತಿರುವ ಮಹಿಳೆಯನ್ನು ಭೇಟಿಯಾಗಲು ತೆರಳಿದ್ದ ದೃಶ್ಯಗಳು ಯೂಟ್ಯೂಬ್‌ನಲ್ಲಿವೆ. ಇದನ್ನು ಎರಡು ಭಾಗಗಳಾಗಿ ಅಪ್‌ಲೋಡ್‌ ಮಾಡಲಾಗಿದೆ.



Ad Widget


Ad Widget

Ad Widget

ಏನು ಹೇಳುತ್ತಾಳೆ ಮಹಿಳೆ?
ಕೃತ್ಯವು 2011ರಲ್ಲಿ, ಅಂದರೆ ಈ ವಿಡಿಯೊ ಚಿತ್ರೀಕರಣಕ್ಕಿಂತ 13ರಿಂದ 14 ವರ್ಷಗಳ ಹಿಂದೆ ನಡೆದಿದೆ ಎನ್ನಲಾಗಿದೆ. ಸಂತ್ರಸ್ತೆಗೆ ಆಗ 13 ಅಥವಾ 14 ವರ್ಷ ವಯಸ್ಸಾಗಿದ್ದು, 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು ಎಂದು ಆಕೆ ಹೇಳಿಕೊಂಡಿದ್ದಾಳೆ.
ತನ್ನ ತಾಯಿಯ ಗೆಳತಿಯೊಬ್ಬರ ಮೂಲಕ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯ ಹತ್ತಿರದ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಲ್ಲಿದ್ದ ಕೊಠಡಿಗೆ ತನ್ನನ್ನು ಕರೆದುಕೊಂಡು ಹೋಗಲಾಗಿತ್ತು ಎಂದು ಆಕೆ ವಿವರಿಸಿದ್ದಾಳೆ. ಅಲ್ಲಿ ರಾಜ್ಯದ ಪ್ರಭಾವಿ ರಾಜಕೀಯ ನಾಯಕ ಸೇರಿದಂತೆ ಒಟ್ಟು ನಾಲ್ಕು ಮಂದಿ ಇದ್ದು, ಅಲ್ಲಿ ಎರಡು ಗಂಟೆಗಳ ಕಾಲ ತಾನು ಕಳೆದಿದ್ದಾಗಿ ವಿಡಿಯೊದಲ್ಲಿ ಬುರ್ಖಾಧಾರಿ ಮಹಿಳೆ ವಿವರಿಸಿದ್ದಾರೆ. ಹೊರಡುವಾಗ ತನ್ನನ್ನು ಕರೆತಂದ ಮಹಿಳೆಗೆ ಹಣ ಪಾವತಿಸಲಾಗಿತ್ತು ಎಂದು ಆಕೆ ತಿಳಿಸಿದ್ದಾಳೆ.


ಈ ಕಹಿ ಘಟನೆಯಿಂದಾಗಿ ಮುಂದಿನ ಜೀವನದುದ್ದಕ್ಕೂ ತೀವ್ರ ಮಾನಸಿಕ ಖಿನ್ನತೆ ಹಾಗೂ ಆಘಾತದಿಂದ ಬಳಲಿದ್ದಾಗಿ ಆಕೆ ತಿಳಿಸಿದ್ದಾರೆ. ಪ್ರಸ್ತುತ ತನಗೆ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಎಲ್ಲ ವಿಚಾರವನ್ನು ಪತಿಗೆ ತಿಳಿಸಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಪತಿಯು ತನ್ನ ನ್ಯಾಯದ ಹೋರಾಟಕ್ಕೆ ಸಾಥ್‌ ನೀಡುವುದಾಗಿ ತಿಳಿಸಿರುವುದಾಗಿಯೂ ಆಕೆ ಹೇಳಿದ್ದಾಳೆ.


ಈಗ ಸಂಬಂಧಪಟ್ಟ ರಾಜಕಾರಣಿಯೊಂದಿಗೆ ಮಾತನಾಡಿ ವಿಷಯವನ್ನು ‘ಸೆಟಲ್‌’ ಮಾಡಿಕೊಳ್ಳಲು ಬಯಸುವುದಾಗಿ ಆಕೆ ಹೇಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಇದಕ್ಕೆ ಮಾಧ್ಯಮ ರಂಗದ ವ್ಯಕ್ತಿಯು ಬೆಂಗಳೂರಿನ ಯಾವುದಾದರೂ ರಹಸ್ಯ ಸ್ಥಳ ಅಥವಾ ಪಂಚತಾರಾ ಹೋಟೆಲ್‌ನಲ್ಲಿ ಕೆಲವೇ ಜನರ ಸಮ್ಮುಖದಲ್ಲಿ ಭೇಟಿ ಮಾಡಿಸಿ, ವಿಷಯ ಇತ್ಯರ್ಥಪಡಿಸಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದು, ಅದಕ್ಕೆ ಆಕೆ ಸಿದ್ಧ ಇರುವುದಾಗಿ ಹೇಳಿದ್ದಾಳೆ.
ಮುಂದೆ, ಆಕೆಯ ಎರಡು ಛಾಯಾಚಿತ್ರಗಳನ್ನು ಪಡೆದು ಸಂಬಂಧಪಟ್ಟ ರಾಜಕಾರಣಿಗೆ ತೋರಿಸಿ, ಅವರ ಪ್ರತಿಕ್ರಿಯೆ ತಿಳಿದುಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಟಿವಿ ಸಂಸ್ಥೆಯ ವ್ಯಕ್ತಿ ಹೇಳುತ್ತಿರುವುದು ಕೂಡ ವಿಡಿಯೊದಲ್ಲಿ ಕೇಳಿಸುತ್ತದೆ.


ಇದೇ ವೇಳೆ, ಭೇಟಿಯ ಬಳಿಕ ಕಾರಿನಲ್ಲಿ ಹಿಂದಿರುಗುವ ಸಂದರ್ಭದ ಸಂಭಾಷಣೆಯೂ ವಿಡಿಯೊದಲ್ಲಿ ದಾಖಲಾಗಿದೆ. ಆಗ ಮಹಿಳಾ ರಾಜಕಾರಣಿ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಹಾಗೂ ಸಚಿವ ಸ್ಥಾನಕ್ಕೆ ಬೇಡಿಕೆ ಇಡುವಂತೆ ಟಿವಿ ಸಂಸ್ಥೆಯ ವ್ಯಕ್ತಿಗೆ ಹೇಳುತ್ತಿರುವಂತೆ ದೃಶ್ಯಗಳಿವೆ. ಇದಕ್ಕೆ ಪ್ರತಿಯಾಗಿ, ಸಂತ್ರಸ್ತೆಗೂ ಹಣ ಕೊಡಿಸಿ ವಿಷಯವನ್ನು ಇತ್ಯರ್ಥಪಡಿಸುವ ಕುರಿತು ಚರ್ಚೆ ನಡೆದಿರುವುದು ವಿಡಿಯೊದಲ್ಲಿ ಕಂಡುಬರುತ್ತದೆ.


ಆದರೆ, ಟಿಕೆಟ್‌ ಸಿಕ್ಕೇ ಸಿಗುತ್ತದೆ ಎಂದು ನಂಬಿದ್ದ ಆ ಮಹಿಳಾ ರಾಜಕಾರಣಿ ಟಿಕೆಟ್‌ಗಾಗಿ ₹2 ಲಕ್ಷ ಕಟ್ಟಿ ಅರ್ಜಿ ಕೂಡ ಸಲ್ಲಿಸಿದ್ದರು ಎನ್ನಲಾಗಿದೆ. ಹೈಕಮಾಂಡ್‌ನ ‘ಕೃಪಾಕಟಾಕ್ಷ’ ತನ್ನ ಮೇಲಿರಬಹುದೆಂದು ನಂಬಿ ಕ್ಷೇತ್ರದಲ್ಲಿ ಚುನಾವಣಾ ಸಂದರ್ಭದಲ್ಲಿ ಓಡಾಟ ಕೂಡ ನಡೆಸಿದ್ದರು. ಚುನಾವಣೆಗೆ ಟಿಕೆಟ್‌ ಘೋಷಣೆಯಾಗುವ ಸಮಯದಲ್ಲಿ 6 ತಿಂಗಳ ಕಾಲ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಆಕೆ ಇದರ ಮೊದಲು ಮತ್ತು ಬಳಿಕ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಆ ಮಹಿಳೆಗೆ ಈ ಹಿಂದೆ ಭೂಗತ ಲೋಕದೊಂದಿಗೆ ನಿಕಟ ಸಂಪರ್ಕವಿದ್ದದ್ದು, ಅವರ ಕುರಿತಾಗಿ ಪಕ್ಷದ ವಲಯದಲ್ಲಿ ಗ್ಲಾಮರ್‌ ತಂದುಕೊಟ್ಟಿತ್ತು ಎನ್ನಲಾಗಿದೆ. ಆದರೆ, ಆಕೆ ಅಂದುಕೊಂಡಂತೆ ಯಾವುದೂ ಆಗದೇ ಅವರಿಗೆ ಟಿಕೆಟ್‌ ಕೈತಪ್ಪಿತ್ತು.


ಆದರೆ, ಈ ವಿಡಿಯೊಗಳನ್ನು ಯಾರು, ಯಾವ ಉದ್ದೇಶದಿಂದ ಚಿತ್ರೀಕರಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಜೊತೆಗೆ, ವಿಡಿಯೊದಲ್ಲಿರುವ ಸಂಭಾಷಣೆಯ ಸಂಪೂರ್ಣ ಹಿನ್ನೆಲೆ, ಅದರ ಸತ್ಯಾಸತ್ಯತೆ ಹಾಗೂ ಅದರಲ್ಲಿ ಕೇಳಿಬರುವ ಆರೋಪಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ದೃಢೀಕರಣವೂ ಲಭ್ಯವಾಗಿಲ್ಲ.
ವಿಡಿಯೊದಲ್ಲಿ ಸಂತ್ರಸ್ತೆ ಎಂದು ತೋರಿಸಲಾಗುತ್ತಿರುವ ಮಹಿಳೆಯ ಮುಖವನ್ನು ಮಸುಕುಗೊಳಿಸಲಾಗಿದ್ದು, ಆಕೆಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ.

ರಾಜಕಾರಣಿ ಮಹಿಳೆ ಮತ್ತು ಟಿವಿ ಸಂಸ್ಥೆಯ ವ್ಯಕ್ತಿ ಮುಂಬೈನಲ್ಲಿ ವ್ಯವಹಾರ ಕುದಿರಿಸುವ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಆದರೆ ಇವರಿಬ್ಬರ ಸಂಭಾಷಣೆಯನ್ನು ತನ್ನ ಕ್ಯಾಮೆರಾದಲ್ಲಿ ಚಿತ್ರಿಸಿದ ವ್ಯಕ್ತಿ ಯಾರೆನ್ನುವುದು ಗೌಪ್ಯವಾಗಿದೆ. ಆ ಚಾನೆಲ್ ನಲ್ಲಿ ಇನ್ನಷ್ಟು ವಿಡಿಯೋಗಳು ಸರಣಿ ಮೂಲಕ ಅಪ್ ಲೋಡ್ ಆಗುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಅಪ್ರಾಪ್ತ ವಯಸ್ಸಿನಲ್ಲಿ ನಡೆದಿತ್ತೆಂದು ಆಕೆ ಹೇಳಿರುವ ಘಟನೆಯ ಕುರಿತೂ ಈ ವಿಡಿಯೊದಿಂದ ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ.
ಹೀಗಾಗಿ, ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಸ್ಟಿಂಗ್‌ ಆಪರೇಷನ್‌ ಚರ್ಚೆಗೂ, ಪುತ್ತೂರಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೊಗಳಿಗೂ ನೇರ ಸಂಬಂಧವಿದೆಯೇ ಎಂಬುದು ಸದ್ಯಕ್ಕೆ ಚರ್ಚೆ ಮತ್ತು ಅನುಮಾನದ ಹಂತದಲ್ಲಷ್ಟೇ ಇದೆ.
ಈ ವಿಡಿಯೊಗಳ ಹಿಂದಿನ ಉದ್ದೇಶ, ಚಿತ್ರೀಕರಣದ ಸಂದರ್ಭ ಹಾಗೂ ಅದರಲ್ಲಿರುವ ಆರೋಪಗಳ ಸತ್ಯಾಸತ್ಯತೆ ಕುರಿತು ಅಧಿಕೃತ ಸ್ಪಷ್ಟನೆ ಹೊರಬಂದ ಬಳಿಕವಷ್ಟೇ ಪೂರ್ಣ ಚಿತ್ರಣ ದೊರೆಯಬೇಕಿದೆ.

Ad Widget
Continue Reading

ಮಂಗಳೂರು

Mangalore-ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ನೆಕ್ಲೇಸ್‌ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ

Published

on



Ad Widget

Ad Widget

Ad Widget

Ad Widget

ಸುಲ್ತಾನ್ ಗೋಲ್ಡ್‌ ಶಾಪ್‌ನಲ್ಲಿ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌ ಸರ ಖರೀದಿಸಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನವಿದ್ದ ಬ್ಯಾಗನ್ನು ರಿಕ್ಷಾದಲ್ಲೇ ಮರೆತುಹೋದ ಮಹಿಳೆಗೆ, ರಿಕ್ಷಾ ಚಾಲಕರೊಬ್ಬರು ಅದನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ಸುಲ್ತಾನ್ ಗೋಲ್ಡ್‌ ಶಾಪ್‌ನಲ್ಲಿ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌ ಸರ ಖರೀದಿಸಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನವಿದ್ದ ಬ್ಯಾಗನ್ನು ರಿಕ್ಷಾದಲ್ಲೇ ಮರೆತುಹೋದ ಮಹಿಳೆಗೆ, ರಿಕ್ಷಾ ಚಾಲಕರೊಬ್ಬರು ಅದನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಅಫ್ಜಿಲಾ ಎಂಬವರು ಸುಲ್ತಾನ್ ಗೋಲ್ಡ್‌ ಶಾಪ್‌ನಲ್ಲಿ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌ ಸರವನ್ನು ಖರೀದಿಸಿದ್ದರು. ಬಳಿಕ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನದ ಸರವಿದ್ದ ಬ್ಯಾಗನ್ನು ರಿಕ್ಷಾದಲ್ಲೇ ಬಿಟ್ಟು ಇಳಿದಿದ್ದರು.

Ad Widget

Ad Widget <> Ad Widget

ರಿಕ್ಷಾ ಚಾಲಕ ಬಸವರಾಜ ಅವರಿಗೆ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿ ಚಿನ್ನದ ನೆಕ್ಲೇಸ್‌ ಇರುವುದನ್ನು ಗಮನಿಸಿದ್ದಾರೆ. ಬಳಿಕ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಬ್ಯಾಗನ್ನು ಸುರಕ್ಷಿತವಾಗಿ ವಾರಸುದಾರರಿಗೆ ಮರಳಿಸಿದ್ದಾರೆ.



Ad Widget

ಚಿನ್ನದ ಸರವನ್ನು ಮರಳಿ ಪಡೆದ ಅಫ್ಜಿಲಾ ಅವರು ರಿಕ್ಷಾ ಚಾಲಕ ಬಸವರಾಜ ಅವರ ಪ್ರಾಮಾಣಿಕತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಚಾಲಕನ ಈ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Continue Reading

ಬಿಗ್ ನ್ಯೂಸ್

Half helmet-ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್‌ ಸಂಪೂರ್ಣ ನಿಷೇಧ

Published

on



Ad Widget

Ad Widget

Ad Widget

Ad Widget

ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯಾದ್ಯಂತ ಹಾಫ್ ಹೆಲ್ಮೆಟ್‌ಗಳ ಬಳಕೆ, ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯಾದ್ಯಂತ ಹಾಫ್ ಹೆಲ್ಮೆಟ್‌ಗಳ ಬಳಕೆ, ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಥವಾ ಐಎಸ್‌ಐ ಗುಣಮಟ್ಟದ ಮಾನದಂಡ ಹೊಂದಿರುವ ಸುರಕ್ಷಿತ ಹೆಲ್ಮೆಟ್‌ಗಳನ್ನೇ ಧರಿಸಬೇಕು. ತಪಾಸಣೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಳಪೆ ಗುಣಮಟ್ಟದ ಅಥವಾ ಹಾಫ್ ಹೆಲ್ಮೆಟ್‌ಗಳನ್ನು ಬಳಸುವುದರಿಂದ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗಂಭೀರ ತಲೆಪೆಟ್ಟಾಗುವ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Ad Widget

Ad Widget <> Ad Widget

ಹಾಫ್ ಹೆಲ್ಮೆಟ್‌ಗಳನ್ನು ಬಳಸುವ ಸವಾರರ ವಿರುದ್ಧ ಮಾತ್ರವಲ್ಲದೆ, ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ತಯಾರಿಸುವ ಘಟಕಗಳು ಹಾಗೂ ಅವುಗಳನ್ನು ಮಾರಾಟ ಮಾಡುವ ಅಂಗಡಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅನಧಿಕೃತವಾಗಿ ಇಂತಹ ಹೆಲ್ಮೆಟ್‌ಗಳನ್ನು ಮಾರಾಟ ಮಾಡುವವರ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ.



Ad Widget

ಸರ್ಕಾರದ ನಿಯಮ ಉಲ್ಲಂಘಿಸಿ ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವ ಸವಾರರ ವಿರುದ್ಧ ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳು ದಂಡ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

Ad Widget

Ad Widget

ಸವಾರರು ತಮ್ಮ ಸುರಕ್ಷತೆಯ ದೃಷ್ಟಿಯಿಂದ ಗುಣಮಟ್ಟದ ಹೆಲ್ಮೆಟ್‌ಗಳನ್ನು ಧರಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರಿಗೆ ಇಲಾಖೆ ಮನವಿ ಮಾಡಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading