Connect with us

ಅಪರಾಧ

Mangalore-ಮಂಗಳೂರು : ವಿದ್ಯಾರ್ಥಿಗಳು, ಯುವಕರನ್ನು ಗುರಿಯಾಗಿಸಿರುವ ಡ್ರಗ್ಸ್ ಜಾಲದ ಮೇಲೆ ಸರಣಿ ದಾಳಿ: 5 ಕೆ.ಜಿ.ಗೂ ಅಧಿಕ ಗಾಂಜಾ ವಶ, 8 ಮಂದಿ ಬಂಧನ

Published

on

Ad Widget

Ad Widget

Ad Widget

Ad Widget

ಮಾದಕ ದ್ರವ್ಯ ಮುಕ್ತವನ್ನಾಗಿಸುವ ಅಭಿಯಾನದ ಭಾಗವಾಗಿ ಮಂಗಳೂರು ನಗರ ಪೊಲೀಸರು ಐದು ಕಡೆಗಳಲ್ಲಿ ಬುಧವಾರ ಸರಣಿ ಕಾರ್ಯಾಚರಣೆ ನಡೆಸಿ, ಎಂಟು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 5.2 ಕೆ.ಜಿ.ಗೂ ಅಧಿಕ ಗಾಂಜಾ ಮತ್ತು 219 ಗ್ರಾಂ ಭಾಂಗ್ ಅನ್ನು ವಶಪಡಿಸಿಕೊಳ್ಳಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ನಗರವನ್ನು ಮಾದಕ ದ್ರವ್ಯ ಮುಕ್ತವನ್ನಾಗಿಸುವ ಅಭಿಯಾನದ ಭಾಗವಾಗಿ ಮಂಗಳೂರು ನಗರ ಪೊಲೀಸರು ಐದು ಕಡೆಗಳಲ್ಲಿ ಬುಧವಾರ ಸರಣಿ ಕಾರ್ಯಾಚರಣೆ ನಡೆಸಿ, ಎಂಟು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 5.2 ಕೆ.ಜಿ.ಗೂ ಅಧಿಕ ಗಾಂಜಾ ಮತ್ತು 219 ಗ್ರಾಂ ಭಾಂಗ್ ಅನ್ನು ವಶಪಡಿಸಿಕೊಳ್ಳಲಾಗಿದೆ.

Ad Widget

Ad Widget alt="Ad Widget"/>

Ad Widget

ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಪ್ರತ್ಯೇಕ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ.

Ad Widget

Ad Widget <> Ad Widget

ವಿವಿಧೆಡೆ ಕಾರ್ಯಾಚರಣೆ:
ಮಂಗಳೂರು ಉತ್ತರ (ಕದ್ರಿ) ಪೊಲೀಸ್ ಠಾಣಾ ವ್ಯಾಪ್ತಿಯ ಕುದ್ರೋಳಿ ಕಂಡತ್‌ಪಳ್ಳಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಅಬ್ದುಲ್ ಸಮದ್ ಅಲಿಯಾಸ್ ಚಮ್ಮು ಎಂಬಾತನನ್ನು ಬಂಧಿಸಿ, 1.040 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಮುಲ್ಕಿ ಠಾಣಾ ವ್ಯಾಪ್ತಿಯ ಕೊನಾಡು ಲಿಂಗಪ್ಪಯ್ಯನಕಾಡು ಎಂಬಲ್ಲಿ ಧರ್ಮಲಿಂಗ ಎಂಬಾತನನ್ನು ಬಂಧಿಸಿ, 1.090 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಬಜ್ಪೆ ಠಾಣಾ ವ್ಯಾಪ್ತಿಯ ಮರವೂರು ಬಳಿ ಬಿಹಾರ ಮೂಲದ ದೌಲತ್ ಕುಮಾರ್ ಶರ್ಮಾ ಮತ್ತು ಮಹಮ್ಮದ್ ಖುರ್ಷಿದ್ ಎಂಬುವವರನ್ನು ಬಂಧಿಸಿದ್ದು, ಅವರಿಂದ 1.189 ಕೆ.ಜಿ. ಗಾಂಜಾ ಹಾಗೂ 219 ಗ್ರಾಂ ಭಾಂಗ್ ವಶಪಡಿಸಿಕೊಳ್ಳಲಾಗಿದೆ.

Ad Widget

Ad Widget

ಕಂಕನಾಡಿ ಠಾಣಾ ವ್ಯಾಪ್ತಿಯ ಪಡೀಲ್ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಕಾರ್ತಿಕ್ ಮತ್ತು ಮೋಹಿತ್ ಎಂಬಿಬ್ಬರನ್ನು ಬಂಧಿಸಿ, 800 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಮಂಗಳೂರು ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಕೇರಳದ ಮಲಪ್ಪುರಂ ಮೂಲದ, ನಗರದಲ್ಲಿ ಇಂಜಿನಿಯರಿಂಗ್ ಓದುತ್ತಿರುವ ಪ್ರಣವ್ ಕೆ.ವಿ. ಎಂಬಾತನನ್ನು ಬಂಧಿಸಲಾಗಿದೆ. ಈತ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದು, ಅವರಿಂದ 1.100 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಜಾಲದ ಮೂಲ ಪತ್ತೆಗೆ ತಂಡ ರಚನೆ:
“ಬಂಧಿತ ಆರೋಪಿಗಳ ವಿಚಾರಣೆಯಿಂದ ಗಾಂಜಾ ಸಾಗಾಟದ ಮೂಲ ಹಾಗೂ ಜಾಲದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಅಲ್ಲದೆ, ಇವರಿಂದ ಗಾಂಜಾ ಖರೀದಿಸುತ್ತಿದ್ದ ಹಲವು ವ್ಯಕ್ತಿಗಳ ವಿವರಗಳೂ ಸಿಕ್ಕಿವೆ. ಇವರೆಲ್ಲರ ಪತ್ತೆಗಾಗಿ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ,” ಎಂದು ಪೊಲೀಸ್ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad Widget
Click to comment

Leave a Reply

ಅಪರಾಧ

Mangalore-Big Breaking:ಮಂಗಳೂರು: ಕದ್ರಿ ಯುದ್ಧ ಸ್ಮಾರಕದಲ್ಲಿರುವ ಟಿ-55 ಟ್ಯಾಂಕ್ ಮೇಲೆ ಹತ್ತಿ ಯುವಕರ ಹುಚ್ಚಾಟ; ವಿಡಿಯೋ ವೈರಲ್, ಸಾರ್ವಜನಿಕರ ಆಕ್ರೋಶ

Published

on

Ad Widget

Ad Widget

Ad Widget

Ad Widget

ಮಂಗಳೂರು ನಗರದ ಕದ್ರಿ ಯುದ್ಧ ಸ್ಮಾರಕದ ಬಳಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿರುವ ಯುದ್ಧ ಟ್ಯಾಂಕ್ ಮೇಲೆ ಹತ್ತಿ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ನಗರದ ಕದ್ರಿ ಯುದ್ಧ ಸ್ಮಾರಕದ ಬಳಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿರುವ ಯುದ್ಧ ಟ್ಯಾಂಕ್ ಮೇಲೆ ಹತ್ತಿ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Ad Widget

Ad Widget alt="Ad Widget"/>

Ad Widget

ಮಂಗಳೂರು ಸರ್ಕೀಟ್ ಹೌಸ್ ಮುಂಭಾಗದ ಕದ್ರಿ ಯುದ್ಧ ಸ್ಮಾರಕದ ಬಳಿ 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿದ್ದ ಟಿ-55 ಯುದ್ಧ ಟ್ಯಾಂಕ್‌ನ್ನು ಸಾರ್ವಜನಿಕರ ವೀಕ್ಷಣೆಗಾಗಿ ಎತ್ತರದ ವೇದಿಕೆಯಲ್ಲಿ ಇರಿಸಲಾಗಿದೆ.

Ad Widget

Ad Widget <> Ad Widget

ರಾತ್ರಿ ವೇಳೆ ಇಬ್ಬರು ಯುವಕರು ಟ್ಯಾಂಕ್ ಮೇಲೆ ಹತ್ತಿ, ಅದರ ಹ್ಯಾಚ್ ತೆರೆದು ಒಳಗೆ ಪ್ರವೇಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ತಮ್ಮ ಕಿಡಿಗೇಡಿತನದ ವರ್ತನೆಯನ್ನು ವಿಡಿಯೋ ಮಾಡಿಕೊಂಡಿರುವ ಯುವಕರು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ.

ದೇಶದ ಯುದ್ಧ ಇತಿಹಾಸ ಹಾಗೂ ಸೈನಿಕರ ಶೌರ್ಯ, ತ್ಯಾಗದ ಸಂಕೇತವಾಗಿ ಇರಿಸಲಾಗಿರುವ ಟ್ಯಾಂಕ್ ಬಳಿ ಯುವಕರು ಇಂತಹ ವರ್ತನೆ ತೋರಿರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Ad Widget

Ad Widget

ಕದ್ರಿ ಪೊಲೀಸ್ ಠಾಣೆಯ ಎದುರಿನಲ್ಲೇ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ, ವಿಡಿಯೋದಲ್ಲಿರುವ ಯುವಕರನ್ನು ಪತ್ತೆಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಿಂದ ಆಗ್ರಹ ವ್ಯಕ್ತವಾಗಿದೆ.

Ad Widget
Continue Reading

ಅಪರಾಧ

Arrest-ಸಾಲದ ಇಎಂಐ ಕಟ್ಟಲು ಸ್ನೇಹಿತನನ್ನೇ ಕೊಂದು ₹63 ಸಾವಿರ ದೋಚಿದ ಆರೋಪ: ಉತ್ತರ ಪ್ರದೇಶದಲ್ಲಿ ಆರೋಪಿ ಬಂಧನ

Published

on

Ad Widget

Ad Widget

Ad Widget

Ad Widget

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.27ರಂದು ನಾಪತ್ತೆಯಾಗಿದ್ದ ಯುವಕನ ಮೃತದೇಹದ ಅವಶೇಷಗಳು ನ.13ರಂದು ಹಳೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮೃತ ಯುವಕನ ಸ್ನೇಹಿತ, ಉತ್ತರ ಪ್ರದೇಶ ಮೂಲದ ಶ್ರವಣ್ ಎಂಬಾತನನ್ನು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.27ರಂದು ನಾಪತ್ತೆಯಾಗಿದ್ದ ಯುವಕನ ಮೃತದೇಹದ ಅವಶೇಷಗಳು ನ.13ರಂದು ಹಳೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

Ad Widget

Ad Widget alt="Ad Widget"/>

Ad Widget

ಮೃತ ಯುವಕನ ಸ್ನೇಹಿತ, ಉತ್ತರ ಪ್ರದೇಶ ಮೂಲದ ಶ್ರವಣ್ ಎಂಬಾತನನ್ನು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ.

Ad Widget

Ad Widget <> Ad Widget

ಉತ್ತರ ಪ್ರದೇಶ ಮೂಲದ ಮನೀಶ್ ಶರ್ಮಾ (25) ಎಂಬ ಯುವಕನನ್ನು ಆತನ ಸ್ನೇಹಿತ ಶ್ರವಣ್ ಕೊಲೆ ಮಾಡಿ ಬಳಿಕ ತನ್ನ ಊರಾದ ಉತ್ತರ ಪ್ರದೇಶದ ಖುಷಿನಗರಕ್ಕೆ ಪರಾರಿಯಾಗಿದ್ದ ಎನ್ನಲಾಗಿದೆ. ಪ್ರಕರಣವನ್ನು ವ್ಯವಸ್ಥಿತ ಕೊಲೆ ಎಂದು ಶಂಕಿಸಿ ಮೃತನ ಸಹೋದರ ಸೋನು ಶರ್ಮಾ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಬಜಪೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಾಲದ ಇಎಂಐ ಕಟ್ಟಲು ಕೊಲೆ?
ಆರೋಪಿಗೆ ಸಾಲದ ಇಎಂಐ ಪಾವತಿಸಲು ಹಣದ ಅವಶ್ಯಕತೆ ಇದ್ದು, ಸ್ನೇಹಿತ ಮನೀಶ್ ಬಳಿ ಹಣವಿರುವುದನ್ನು ತಿಳಿದುಕೊಂಡಿದ್ದ ಎನ್ನಲಾಗಿದೆ. ಅಲ್ಲದೆ, ಮನೀಶ್‌ನ ಮೊಬೈಲ್ ಪಾಸ್‌ವರ್ಡ್‌ಗಳನ್ನು ಮೊದಲೇ ತಿಳಿದುಕೊಂಡಿದ್ದ ಶ್ರವಣ್, ಹಣ ಪಡೆಯುವ ಉದ್ದೇಶದಿಂದ ಆತನನ್ನು ಉಪಾಯವಾಗಿ ಊಟಕ್ಕೆಂದು ಕರೆದುಕೊಂಡು ಹೋಗಿದ್ದಾನೆ. ಬಳಿಕ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿ, ನಿರ್ಜನ ಪ್ರದೇಶದಲ್ಲಿ ಮೃತದೇಹವನ್ನು ಬಿಸಾಡಿದ್ದಾಗಿ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

Ad Widget

Ad Widget

ಖಾತೆಯಿಂದ ₹63,720 ವರ್ಗಾವಣೆ
ಕೊಲೆ ಬಳಿಕ ಮನೀಶ್‌ನ ಬ್ಯಾಂಕ್ ಖಾತೆಯಲ್ಲಿದ್ದ ₹63,720 ಹಣವನ್ನು ರಾಜನ್ ಎಂಬ ವ್ಯಕ್ತಿಯ ಖಾತೆಗೆ ವರ್ಗಾಯಿಸಿ, ಬಳಿಕ ರಾಜನ್ ಮೂಲಕ ತನ್ನ ಖಾತೆಗೆ ಹಣ ಪಡೆದುಕೊಂಡಿದ್ದ ಎನ್ನಲಾಗಿದೆ. ಈ ಹಣ ವರ್ಗಾವಣೆಯ ಸುಳಿವು ಪ್ರಕರಣದ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.

ಸಿಸಿಟಿವಿ ದೃಶ್ಯಗಳಿಂದ ಸುಳಿವು
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅ.27ರಂದು ಮನೀಶ್ ಮತ್ತು ಶ್ರವಣ್ ಒಟ್ಟಿಗೆ ತೆರಳಿರುವುದು ಹಾಗೂ ಬಳಿಕ ಶ್ರವಣ್ ಒಬ್ಬನೇ ವಾಪಸ್ ಬಂದಿರುವುದು ಕಂಡುಬಂದಿತ್ತು. ಈ ಸುಳಿವುಗಳ ಆಧಾರದ ಮೇಲೆ ತನಿಖೆ ಮುಂದುವರಿದಿತ್ತು.

ನ.13ರಂದು ಹಳೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿದ ಪೊಲೀಸರಿಗೆ ಅಸ್ಥಿಪಂಜರದ ತುಂಡುಗಳು ಹಾಗೂ ತಲೆಬುರುಡೆಯ ಅವಶೇಷಗಳು ಪತ್ತೆಯಾಗಿದ್ದವು. ಸ್ಥಳದಲ್ಲಿ ದೊರೆತ ಶರ್ಟ್ ಮತ್ತು ಪ್ಯಾಂಟ್‌ಗಳನ್ನು ಮೃತನ ಸಹೋದರ ಸೋನು ಶರ್ಮಾ ಗುರುತಿಸಿದ್ದರು.

ಆರೋಪಿಯನ್ನು ಉತ್ತರ ಪ್ರದೇಶದಿಂದ ಬಂಧಿಸಿ ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಳಿಕ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

Ad Widget
Continue Reading

ಅಂತರ ರಾಜ್ಯ

Arrested-14ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿ ಅಪಹರಣಕಾರರ ಬೇಡಿಕೆಯಂತೆ 25ಲಕ್ಷ ರೂ ನೀಡಿದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಮಹತ್ವದ ತಿರುವು..!

Published

on

Ad Widget

Ad Widget

Ad Widget

Ad Widget

14 ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ತ್ರಿಪುರದ ಶಾಲಾ ಶಿಕ್ಷಕರ ಅಪಹರಣ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಅಪಹರಣಕಾರರ ಬೇಡಿಕೆಯಂತೆ ಕುಟುಂಬಸ್ಥರು ಸುಮಾರು ₹25 ಲಕ್ಷ ಸುಲಿಗೆ ಹಣ ನೀಡಿದ್ದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಪುರ ಪೊಲೀಸರ ಅಪರಾಧ ತನಿಖಾ ದಳ (CID) ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಪ್ರಮುಖ ಶಂಕಿತನೊಬ್ಬನನ್ನು ಬಂಧಿಸಿದೆ.

Ad Widget

Ad Widget

Ad Widget

Ad Widget

ಅಗರ್ತಲಾ: ಬರೋಬ್ಬರಿ 14 ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ತ್ರಿಪುರದ ಶಾಲಾ ಶಿಕ್ಷಕರ ಅಪಹರಣ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಅಪಹರಣಕಾರರ ಬೇಡಿಕೆಯಂತೆ ಕುಟುಂಬಸ್ಥರು ಸುಮಾರು ₹25 ಲಕ್ಷ ಸುಲಿಗೆ ಹಣ ನೀಡಿದ್ದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಪುರ ಪೊಲೀಸರ ಅಪರಾಧ ತನಿಖಾ ದಳ (CID) ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಪ್ರಮುಖ ಶಂಕಿತನೊಬ್ಬನನ್ನು ಬಂಧಿಸಿದೆ.

Ad Widget

Ad Widget alt="Ad Widget"/>

Ad Widget

ಬಾಜು ಎಂದು ಗುರುತಿಸಲಾಗಿರುವ ಆರೋಪಿಯನ್ನು ಗುರುವಾರ ಬಂಧಿಸಿ ಅಗರ್ತಲಾಗೆ ಕರೆತರಲಾಗಿದೆ. ಬಳಿಕ ಪಶ್ಚಿಮ ತ್ರಿಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (CJM) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ನಾಲ್ಕು ದಿನಗಳ ಕಾಲ ಸಿಐಡಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

Ad Widget

Ad Widget <> Ad Widget

ಏನಿದು 14 ವರ್ಷಗಳ ಹಿಂದಿನ ಪ್ರಕರಣ?
ಅಗರ್ತಲಾದ ಭಾಟಿ ಅಭಯನಗರ ನಿವಾಸಿ ಆಶಿಶ್ ಸೋಮ್ (40) ಎಂಬ ಶಾಲಾ ಶಿಕ್ಷಕರು 2011ರ ಮೇ 28ರಂದು ನಿಗೂಢವಾಗಿ ನಾಪತ್ತೆಯಾಗಿದ್ದರು. ಮರದ ವ್ಯಾಪಾರದಲ್ಲಿಯೂ ತೊಡಗಿಸಿಕೊಂಡಿದ್ದ ಅವರು, ವ್ಯವಹಾರದ ನಿಮಿತ್ತ ಕಾಂಚನ್‌ಪುರಕ್ಕೆ ತೆರಳಿದ ಬಳಿಕ ಮನೆಗೆ ವಾಪಸಾಗಿರಲಿಲ್ಲ.

ಶಿಕ್ಷಕರು ನಾಪತ್ತೆಯಾದ ಕೆಲವೇ ದಿನಗಳಲ್ಲಿ ಅವರನ್ನು ಅಪಹರಿಸಿರುವುದಾಗಿ ಹೇಳಿಕೊಂಡು ಕುಟುಂಬಸ್ಥರಿಗೆ ದೂರವಾಣಿ ಕರೆಗಳು ಬಂದಿದ್ದವು. ಅಪಹರಣಕಾರರು ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿವಿಧ ಹಂತಗಳಲ್ಲಿ ಸುಮಾರು ₹25 ಲಕ್ಷ ಹಣವನ್ನು ನೀಡಿದ್ದಾರೆ. ಆದರೆ ಹಣ ಪಡೆದ ಬಳಿಕವೂ ಶಿಕ್ಷಕರನ್ನು ಬಿಡುಗಡೆ ಮಾಡಿರಲಿಲ್ಲ. ಹಲವು ವರ್ಷಗಳ ಕಾಲ ಅವರ ಸುಳಿವು ಕೂಡ ಪತ್ತೆಯಾಗಿರಲಿಲ್ಲ.

Ad Widget

Ad Widget

ಸಮಾಧಿಗಳಲ್ಲಿ ಪತ್ತೆಯಾದ ಅಸ್ಥಿಪಂಜರದಿಂದ ತನಿಖೆಗೆ ವೇಗ
ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ತನಿಖೆಯ ವೇಳೆ ಶಿಕ್ಷಕ ಆಶಿಶ್ ಸೋಮ್ ಅವರ ವ್ಯಾಪಾರ ಪಾಲುದಾರ ಎನ್ನಲಾದ ಹೊಸೈನ್ ಅಹ್ಮದ್ ಕೂಡ ಅಪಹರಣ ಪ್ರಕರಣದ ಶಂಕಿತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಬಂಧಿತ ಬಾಜುವನ್ನು ವಿಚಾರಣೆ ನಡೆಸಲಾಗುತ್ತಿದ್ದು, ಆತ ಹಲವು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.

ಇದೇ ವರ್ಷದ ಸೆಪ್ಟೆಂಬರ್ 16ರಂದು ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಸೋನ್ಸಿಲ್ ಪ್ರದೇಶದ ಸ್ಮಶಾನವೊಂದರ ಮೂರು ಸಮಾಧಿಗಳಿಂದ ಅಪರಿಚಿತ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಈ ಬೆಳವಣಿಗೆ ಪ್ರಕರಣದ ತನಿಖೆಗೆ ಹೊಸ ವೇಗ ನೀಡಿದೆ.

ಪತ್ತೆಯಾದ ಅಸ್ಥಿಪಂಜರದ ಅವಶೇಷಗಳು ನಾಪತ್ತೆಯಾಗಿರುವ ಆಶಿಶ್ ಸೋಮ್ ಅವರದ್ದೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಅವರ ಕುಟುಂಬ ಸದಸ್ಯರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಸದ್ಯ ಡಿಎನ್‌ಎ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದ್ದು, ಅದರ ಬಳಿಕ ಪ್ರಕರಣದ ಹಲವು ನಿಗೂಢ ಸಂಗತಿಗಳು ಬಯಲಾಗುವ ನಿರೀಕ್ಷೆಯಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!