ಸುಳ್ಯ
Kishore Kumar-ಅರಂತೋಡು ಘನ ತ್ಯಾಜ್ಯ ಘಟಕ ಮರುಸ್ಥಾಪನೆಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ನೆರವು; ₹5 ಲಕ್ಷ ಅನುದಾನ ಮಂಜೂರು
ಆಕಸ್ಮಿಕ ಬೆಂಕಿಯಿಂದ ಸಂಪೂರ್ಣವಾಗಿ ಹಾನಿಗೊಳಗಾದ ಸುಳ್ಯದ ಅರಂತೋಡು ಘನ ತ್ಯಾಜ್ಯ ನಿರ್ವಹಣಾ ಘಟಕದ ಮರುಸ್ಥಾಪನೆಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ತಮ್ಮ ಶಾಸಕರ ಅಭಿವೃದ್ಧಿ ನಿಧಿಯ ಅನುದಾನದಿಂದ ₹5 ಲಕ್ಷ ಹಣವನ್ನು ಮಂಜೂರು ಮಾಡಿದ್ದಾರೆ.
ಸುಳ್ಯ: ಆಕಸ್ಮಿಕ ಬೆಂಕಿಯಿಂದ ಸಂಪೂರ್ಣವಾಗಿ ಹಾನಿಗೊಳಗಾದ ಸುಳ್ಯದ ಅರಂತೋಡು ಘನ ತ್ಯಾಜ್ಯ ನಿರ್ವಹಣಾ ಘಟಕದ ಮರುಸ್ಥಾಪನೆಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ತಮ್ಮ ಶಾಸಕರ ಅಭಿವೃದ್ಧಿ ನಿಧಿಯ ಅನುದಾನದಿಂದ ₹5 ಲಕ್ಷ ಹಣವನ್ನು ಮಂಜೂರು ಮಾಡಿದ್ದಾರೆ.

ಈ ಕುರಿತು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯನ್ನು ಭೇಟಿ ಮಾಡಿದ ಶಾಸಕರು, ಈ ಘಟಕದ ಪುನರ್ ನಿರ್ಮಾಣಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ತಕ್ಷಣ ಕೈಗೊಳ್ಳಲು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ಬ್ರಿಜೇಶ್ ಚೌಟ ಹಾಗೂ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಈ ಸಂಬಂಧ ಬರೆದ ಮನವಿ ಪತ್ರವನ್ನೂ ಶಾಸಕರ ಮೂಲಕ ಅಧಿಕಾರಿಗಳಿಗೆ ನೀಡಲಾಯಿತು.
ಶಾಸಕರು ಮಾತನಾಡುತ್ತಾ, ಕೇಂದ್ರದ ಸ್ವಚ್ಛ ಭಾರತ್ ಅಭಿಯಾನ ಅಡಿಯಲ್ಲಿ ಹೆಚ್ಚಿನ ಧನಸಹಾಯವನ್ನು ತರಲು ಪ್ರಯತ್ನ ನಡೆಯುತ್ತಿದೆ ಎಂದರು. ಮುಂದೆ ಒಂದು ತಿಂಗಳೊಳಗೆ ಶಂಕುಸ್ಥಾಪನೆ ನಡೆಯಲಿದ್ದು, ಮೂರು ತಿಂಗಳೊಳಗೆ ಈ ಹೊಸ ಘಟಕ ಕಾರ್ಯಾರಂಭ ಮಾಡುವ ಗುರಿಯೊಂದಿಗೆ ಎಲ್ಲ ಸಿದ್ಧತೆಗಳು ಸಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆ ಮುಂದಿನ 20 ವರ್ಷಗಳ ಅಭಿವೃದ್ಧಿಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸುಸಜ್ಜಿತ ಸೌಲಭ್ಯಗಳೊಂದಿಗೆ ರೂಪುರೇಷೆ ಸಿದ್ಧವಾಗಿದೆ. ಸ್ಥಳೀಯ ಜನತೆ ಹಾಗೂ ಸುತ್ತಮುತ್ತಲ ಗ್ರಾಮಗಳ ತ್ಯಾಜ್ಯ ನಿರ್ವಹಣೆಗೆ ಈ ಘಟಕ ಬಹುಮುಖ್ಯವಾಗಲಿದೆ. ಶುದ್ಧತೆ, ಪರಿಸರ ಸಂರಕ್ಷಣೆ ಹಾಗೂ ಗ್ರಾಮೀಣ ಆರೋಗ್ಯಕ್ಕೆ ಇದು ತುಂಬಾ ನೆರವಾಗಲಿದೆ.

ಶಾಸಕರ ಜೊತೆ ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ತಮ್ಮ-ತಮ್ಮ ವಿಕಾಸ ನಿಧಿಯಿಂದ ಹಣಕಾಸು ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ. ಅವರ ಈ ಸಕಾರಾತ್ಮಕ ಬೆಂಬಲದಿಂದಾಗಿ ಕಾಮಗಾರಿಗೆ ಹೊಸ ಚೈತನ್ಯ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕಿಶೋರ್ ಕುಮಾರ್ ಅವರು ಮಾತನಾಡಿ “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನದ ಕನಸು ನಮ್ಮೆಲ್ಲರಿಗೂ ದಿಕ್ಕು ತೋರಿಸುತ್ತಿದೆ. ಗ್ರಾಮೀಣ ಸ್ವಚ್ಚತೆ, ಪರಿಸರ ಸಂರಕ್ಷಣೆ, ಹಾಗೂ ನಾಗರಿಕ ಜವಾಬ್ದಾರಿಯ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಈ ಘಟಕ ಒಂದು ಪ್ರಮುಖ ಹಂತವಾಗಿದೆ.
ನಾನು, ನಮ್ಮ ಸಂಸದ ಬೃಜೇಶ್ ಚೌಟ ಮತ್ತು ಶಾಸಕಿ ನಮ್ಮ ಸಹೋದರಿ ಭಾಗೀರಥಿ ಮುರುಳ್ಯರೊಂದಿಗೆ ಸೇರಿ ಈ ಘಟಕದ ಮರುಸ್ಥಾಪನೆಗೆ ಶ್ರಮಿಸುತ್ತಿದ್ದೇವೆ. ಇದು ಸುಳ್ಯ ಹಾಗೂ ಸುತ್ತಮುತ್ತಲ ಜನತೆಗೆ ಹೊಸ ಆಶಾಕಿರಣ ತರುತ್ತದೆ.
ನರೇಂದ್ರ ಮೋದಿಯವರ ದೂರದೃಷ್ಟಿಗೆ ಅನುಗುಣವಾಗಿ, ಈ ಘಟಕದ ಮೂಲಕ ನಾವು ಸ್ವಚ್ಛತಾ ಕ್ರಾಂತಿಗೆ ನಾಂದಿಯನ್ನಿಡುತ್ತಿದ್ದೇವೆ. ಅವರ ಕನಸು ನಮ್ಮ ಆದರ್ಶ, ನಮ್ಮ ದಿಕ್ಕು. ಈ ಕಾರ್ಯದಲ್ಲಿ ನನ್ನಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವೆ. ಈ ಘಟಕ ಭವಿಷ್ಯದ ಪೀಳಿಗೆಗೂ ಲಾಭವಾಗುವಂತೆ ರೂಪುಗೊಳ್ಳಬೇಕು ಎಂಬುದು ನನ್ನ ಆಶಯ,” ಎಂದು ಅವರು ಭಾವನಾತ್ಮಕವಾಗಿ ಹೇಳಿದರು.
ಈ ಸಂದರ್ಭದಲ್ಲಿ ಈ ಘಟಕದ ಮರುಸ್ಥಾಪನೆಗೆ ಭಾರತೀಯ ಜನತಾ ಪಾರ್ಟಿಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪಂಚಾಯತ್ ಅಧ್ಯಕ್ಷರಾದ ಕೇಶವ ಆಡ್ತಳೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ ಆರ್, ವ್ಯವಸಾಯ ಸೇವಾಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ, ಪಂಚಾಯತ್ ಉಪಾಧ್ಯಕ್ಷರಾದ ಭವಾನಿ ತೊಡಿಕಾನ, ಮಾಜಿ ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ತೊಡಿಕಾನ, ಪಂಚಾಯತ್ ಸದಸ್ಯ ಶಿವಾನಂದ್ ಕುಕ್ಕಮೂಲೆ ಮತ್ತು ಪಂಚಾಯತ್ ನ ಎಲ್ಲಾ ಸದಸ್ಯರ ಮನವಿಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಸ್ಪಂದಿಸಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.
ಸುಳ್ಯ
Sevaratna-ಕಲ್ಪವೃಕ್ಷದ ಕಾಯಕಯೋಗಿಗೆ ‘ಸೇವಾರತ್ನ’ ಗೌರವ; 20 ವರ್ಷಗಳ ನಿರಂತರ ಕಾಯಕಕ್ಕೆ ಅಚ್ಚುತ ನಾಯಕ್ ಕಿಲಂಗೋಡಿಯವರಿಗೆ ಜಿಲ್ಲಾಮಟ್ಟದ ಪ್ರಶಸ್ತಿ
ಕಲ್ಪವೃಕ್ಷವೆಂದೇ ಕರೆಯಲ್ಪಡುವ ತೆಂಗಿನ ಮರವನ್ನು ಏರಿ, ಕಳೆದ ಎರಡು ದಶಕಗಳಿಂದ ರೈತರು ಹಾಗೂ ಸಾರ್ವಜನಿಕರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಕಳಂಜ ಗ್ರಾಮದ ಶ್ರೀ ಅಚ್ಚುತ ನಾಯಕ್ ಕಿಲಂಗೋಡಿಯವರು ತಮ್ಮ ಕಾಯಕನಿಷ್ಠೆ ಹಾಗೂ ಸೇವೆಯಿಂದ ಇದೀಗ ಜಿಲ್ಲಾಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.
ಸುಳ್ಯ: ಕಲ್ಪವೃಕ್ಷವೆಂದೇ ಕರೆಯಲ್ಪಡುವ ತೆಂಗಿನ ಮರವನ್ನು ಏರಿ, ಕಳೆದ ಎರಡು ದಶಕಗಳಿಂದ ರೈತರು ಹಾಗೂ ಸಾರ್ವಜನಿಕರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಕಳಂಜ ಗ್ರಾಮದ ಶ್ರೀ ಅಚ್ಚುತ ನಾಯಕ್ ಕಿಲಂಗೋಡಿಯವರು ತಮ್ಮ ಕಾಯಕನಿಷ್ಠೆ ಹಾಗೂ ಸೇವೆಯಿಂದ ಇದೀಗ ಜಿಲ್ಲಾಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.
ಆಕ್ಸಿಸ್ ಬ್ಯಾಂಕ್ ಹಾಗೂ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ವತಿಯಿಂದ ಕೊಡಮಾಡುವ ಜಿಲ್ಲಾಮಟ್ಟದ ‘ಸೇವಾರತ್ನ ಪ್ರಶಸ್ತಿ’ಗೆ ಅಚ್ಚುತ ನಾಯಕ್ ಕಿಲಂಗೋಡಿಯವರನ್ನು ಆಯ್ಕೆ ಮಾಡಲಾಗಿದೆ.
ಒಕ್ಟೊಬರ್ 9ರಂದು ಸಂಜೆ 4.30ಕ್ಕೆ ಮoಗಳೂರಿನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ತೆಂಗಿನ ಮರವೇರುವುದು ಸುಲಭದ ಕೆಲಸವಲ್ಲ. ಮರದ ಎತ್ತರ, ಗಾಳಿಯ ವೇಗ, ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಮರದ ತುದಿಗೆ ಏರಿ ತೆಂಗಿನಕಾಯಿಗಳನ್ನು ಕೊಯ್ದು ಕೆಳಗಿಳಿಸುವ ಈ ಕಾಯಕಕ್ಕೆ ಧೈರ್ಯ, ದೈಹಿಕ ಸಾಮರ್ಥ್ಯ, ಕೌಶಲ್ಯ ಹಾಗೂ ಅಪಾರ ಅನುಭವದ ಅಗತ್ಯವಿದೆ. ಇಂತಹ ಅಪಾಯಭರಿತ ಕಾಯಕವನ್ನು ಅಚ್ಚುತ ನಾಯಕ್ ಅವರು ಕಳೆದ 20 ವರ್ಷಗಳಿಂದ ಅತ್ಯಂತ ಪ್ರಾಮಾಣಿಕತೆ ಮತ್ತು ಕಾಯಕನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದಾರೆ.
ಕಳಂಜ ಗ್ರಾಮಕ್ಕೆ ಮಾತ್ರ ಸೀಮಿತವಾಗದೆ ಸುಳ್ಯ ತಾಲೂಕು ಹಾಗೂ ಹೊರ ತಾಲೂಕುಗಳ ವಿವಿಧ ಪ್ರದೇಶಗಳಿಗೆ ತೆರಳಿ, ರೈತರು ಮತ್ತು ಸಾರ್ವಜನಿಕರ ತೆಂಗಿನ ಮರಗಳಿಂದ ತೆಂಗಿನಕಾಯಿಗಳನ್ನು ಕೊಯ್ದು ತೆಗೆದು ಕೊಡುವ ಸೇವೆಯನ್ನು ಅವರು ನಿರಂತರವಾಗಿ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅತ್ಯಗತ್ಯವಾಗಿರುವ ಈ ಸೇವೆಯನ್ನು ಯಾವುದೇ ಪ್ರಚಾರದ ನಿರೀಕ್ಷೆಯಿಲ್ಲದೆ ಮಾಡುತ್ತಿರುವುದು ಅವರ ಕಾಯಕದ ವಿಶೇಷತೆಯಾಗಿದೆ.
ಮೌನ ಸಾಧಕರ ಸೇವೆಗೆ ಮತ್ತೊಂದು ಗೌರವ
ಅಚ್ಚುತ ನಾಯಕ್ ಅವರ ಸೇವೆಯನ್ನು ಈಗಾಗಲೇ ಹಲವು ಸಂಸ್ಥೆಗಳು ಗುರುತಿಸಿವೆ. ರೋಟರಿ ಕ್ಲಬ್ ಬೆಳ್ಳಾರೆ ಸಂಸ್ಥೆಯು 2018–19ನೇ ಸಾಲಿನಲ್ಲಿ ಅವರ ಸೇವೆಯನ್ನು ಗುರುತಿಸಿ ಗೌರವಿಸಿತ್ತು.
ಅದೇ ರೀತಿ ಜೆಸಿಐ ಬೆಳ್ಳಾರೆ ಸಂಸ್ಥೆಯು 2025ರಲ್ಲಿ ಅವರ ನಿರಂತರ ಹಾಗೂ ಶ್ರಮದಾಯಕ ಸೇವೆಯನ್ನು ಗುರುತಿಸಿ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿ ನೀಡಿ ಗೌರವಿಸಿತ್ತು.
ಯಾವುದೇ ಪ್ರಚಾರದ ಹಿಂದೆ ಹೋಗದೆ, ತನ್ನ ಶ್ರಮವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಪ್ರತಿದಿನವೂ ದುಡಿಯುತ್ತಿರುವ ಅಚ್ಚುತ ನಾಯಕ್ ಅವರು ನಿಜವಾದ ಮೌನ ಕಾಯಕಯೋಗಿ. ತೆಂಗಿನ ಮರದ ತುದಿಯಲ್ಲಿ ನಿಂತು ಅವರು ಮಾಡುವ ಪ್ರತಿಯೊಂದು ಕೆಲಸದ ಹಿಂದೆಯೂ ಧೈರ್ಯ, ಪರಿಶ್ರಮ, ಕೌಶಲ್ಯ ಮತ್ತು ಕುಟುಂಬದ ಬದುಕಿಗಾಗಿ ನಡೆಸುವ ಪ್ರಾಮಾಣಿಕ ಹೋರಾಟವಿದೆ.
ಕಲ್ಪವೃಕ್ಷದೊಂದಿಗೆ ಎರಡು ದಶಕಗಳ ಕಾಲ ನಂಟು ಬೆಳೆಸಿಕೊಂಡಿರುವ ಅಚ್ಚುತ ನಾಯಕ್ ಅವರ ಕಾಯಕವು ಗ್ರಾಮೀಣ ಶ್ರಮಜೀವಿಗಳ ಬದುಕಿನ ಪ್ರತೀಕವಾಗಿದೆ. ರೈತರ ಅಗತ್ಯಕ್ಕೆ ಸ್ಪಂದಿಸುತ್ತಾ, ಅಪಾಯವನ್ನು ಲೆಕ್ಕಿಸದೆ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿರುವ ಅವರ ಸೇವೆಗೆ ‘ಸೇವಾರತ್ನ’ ಪ್ರಶಸ್ತಿ ಮತ್ತೊಂದು ಸಾರ್ಥಕ ಗೌರವವಾಗಿದೆ.
ಕಾಯಕಕ್ಕೆ ಸಂದ ಸಾರ್ಥಕ ಗೌರವ
ಕಳೆದ 20 ವರ್ಷಗಳಿಂದ ತೆಂಗಿನ ಮರದ ತುದಿಯಲ್ಲಿ ಬೆವರು ಸುರಿಸಿ, ರೈತರು ಮತ್ತು ಸಾರ್ವಜನಿಕರಿಗೆ ಅಗತ್ಯವಾದ ಸೇವೆಯನ್ನು ಸಲ್ಲಿಸುತ್ತಿರುವ ಅಚ್ಚುತ ನಾಯಕ್ ಕಿಲಂಗೋಡಿಯವರಿಗೆ ದೊರೆಯುತ್ತಿರುವ ‘ಸೇವಾರತ್ನ’ ಪ್ರಶಸ್ತಿ, ಅವರ ಕಾಯಕನಿಷ್ಠೆಗೆ ಸಂದ ಗೌರವ ಮಾತ್ರವಲ್ಲದೆ, ಗ್ರಾಮೀಣ ಶ್ರಮಜೀವಿಗಳ ಪರಿಶ್ರಮಕ್ಕೂ ಸಂದ ಗೌರವವಾಗಿದೆ.
ಕಲ್ಪವೃಕ್ಷದ ಕಾಯಕಯೋಗಿಯ ಎರಡು ದಶಕಗಳ ನಿರಂತರ ಸೇವೆಗೆ ಇದೀಗ ‘ಸೇವಾರತ್ನ’ದ ಗೌರವದ ಕಿರೀಟ ದೊರೆತಿದೆ.
ಸುಳ್ಯ
ಸುಳ್ಯ :ಗ್ಯಾರೇಜ್‌ನಲ್ಲಿ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಸುಳ್ಯ ಐವರ್ನಾಡು ನಿವಾಸಿ ದಯಾನಂದ (30) ಹಾಗೂ ಸುಳ್ಯ ಕಸಬಾ ನಿವಾಸಿ ದರ್ಶನರಾಜು (23) ಎಂದು ಗುರುತಿಸಲಾಗಿದೆ.
ಸುಳ್ಯ ಕಸಬಾ ಗ್ರಾಮದ ಅಂಬೆಟಡ್ಕದಲ್ಲಿ ಆ.26ರ ರಾತ್ರಿ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ.120/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 326(g) ಅಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಸುಳ್ಯ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಸುಳ್ಯ
Dr. Deviprasad Kanattur-ಪಂಜ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮೇಲೆ ಅವ್ಯವಹಾರದ ಆರೋಪ; ಸತ್ಯ ಪ್ರಮಾಣಕ್ಕೆ ಡಾ. ದೇವಿಪ್ರಸಾದ್ ಕಾನತ್ತೂರ್ ನಿರ್ಧಾರ
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.
ಆಗಸ್ಟ್ 31 ರಂದು ಸೋಮವಾರ ಪೂರ್ವಾಹ್ನ ಶ್ರೀ ದೇವರು ಜಳಕ ಮಾಡುವ ಪವಿತ್ರ ನಾಗತೀರ್ಥ ನದಿಯಲ್ಲಿ ಸ್ನಾನಮಾಡಿ ದೇಗುಲದ ನಡೆಯಲ್ಲಿ ಬೆಳಗ್ಗಿನ ಮಹಾಪೂಜೆಯ ನಂತರ ನಾನು ಯಾವ ಅವ್ಯವಹಾರ ಮಾಡಿಲ್ಲ ಎಂದು ಸತ್ಯ ಪ್ರಮಾಣ ಮಾಡುತ್ತೇನೆ. ನನ್ನ ಮೇಲೆ ಸುಳ್ಳು ಆರೋಪ ಮಾಡಿದವರಿಗೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರು ಹಾಗೂ ಪರಿವಾರ ದೈವಗಳು ಉತ್ತರ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಯಾರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರೂ ಪ್ರಮಾಣಕ್ಕೆ ಬರಲಿ ಎಂದು ಅವರು ತಿಳಿಸಿದ್ದಾರೆ.
-
ಮಂಗಳೂರು11 hours agoMangalore-ಮಂಗಳೂರು : 2 ತಿಂಗಳ ಬಳಿಕ ಸಮಾಧಿಯಿಂದ ಹೊರಬರಲಿದೆ ಆಲ್ಬರ್ಟ್ ರೇಗೋ ಶವ..!; ಮಗಳಿಂದಲೇ ತಂದೆಯ ಕೊಲೆ : ಸ್ನೇಹಿತನ ಆರೋಪ – ತನಿಖೆಗೆ ಸಿಗಲಿದೆ ಮಹತ್ವದ ತಿರುವು
-
ಅಪರಾಧ14 hours agoRaid-ರಾಜ್ಯದ 45 ಐಸ್ಕ್ರೀಂ ಘಟಕಗಳ ಮೇಲೆ ದಾಳಿ: 4 ಕಡೆ ನಿಯಮ ಉಲ್ಲಂಘನೆ, ಅವಧಿ ಮೀರಿದ ಪದಾರ್ಥ ಪತ್ತೆ..!
-
ಸ್ಥಳೀಯ16 hours agoGanja-ಸಾಗರದ ಲಾಡ್ಜ್ನಲ್ಲಿ ಗಾಂಜಾ ಸೇವನೆ: ಯುವತಿ ಸೇರಿ ನಾಲ್ವರು ವಶಕ್ಕೆ – ಗಾಂಜಾ ಸಾಗಾಟಗಾರನ ಮಾಹಿತಿ ಬಿಚ್ಚಿಟ್ಟ ಯುವತಿ..!
-
ಬಿಗ್ ನ್ಯೂಸ್16 hours agoAYUSH Federation-ಡಾ. ಪ್ರದೀಪ್ ನಾವೂರು ಅವರ ಆರೋಗ್ಯ ಕ್ಲಿನಿಕ್ ಗೆ ಬೆಂಕಿ : ಆಯುಷ್ ಫೆಡರೇಶನ್ ತೀವ್ರ ಖಂಡನೆ
-
ಬಿಗ್ ನ್ಯೂಸ್9 hours agoKaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
-
ಅಪರಾಧ9 hours agoPuttur-ಪುತ್ತೂರು: ಅಕ್ರಮ ಗೋ ಸಾಗಾಟ ಪ್ರಕರಣ; ಪರಾರಿಯಾಗಿದ್ದ ಇಬ್ಬರು ವಶಕ್ಕೆ, ಆರೋಪಿ ಶಿವಪ್ರಸಾದ್ ಮನೆ ಮಹಜರು?
-
ಮಂಗಳೂರು9 hours agoMRPL accident-MRPL ಅವಘಡದಲ್ಲಿ ಮೃತಪಟ್ಟ ಕರ್ಕಡ ಕುಟುಂಬಕ್ಕೆ EPFO ಕ್ಲೈಮ್ ಸಂದಾಯ
-
ಅಪರಾಧ16 hours agoUdupi-ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆ : ಉಡುಪಿ, ಮೂಲ್ಕಿಯಲ್ಲಿ 4 ಪ್ರಕರಣ ದಾಖಲು


















