ಬಾಲಿವುಡ್ ಬೆಡಗಿ, ಬಳಕುವ ಬಳ್ಳಿ ಶಿಲ್ಪಾ ಶೆಟ್ಟಿ ವಯಸ್ಸು ಎಷ್ಟು ? ನಟಿಯ ಫಿಟ್‌ನೆಸ್ ಫೋಟೊ ನೋಡಿ ಚರ್ಚೆ

12
Ad Widget

Ad Widget

Ad Widget

ಮಂಗಳೂರಿನ ಸುಂದರಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಫಿಟ್‌ನೆಸ್ ವಿಚಾರದಲ್ಲಿ ಎತ್ತಿದ ಕೈ. ಈ ಬಳಕುವ ಬಳ್ಳಿ ಸೋಶಿಯಲ್ ಮೀಡಿಯಾದಲ್ಲಿ ಈಗಲೂ ಹೊಸ ಹೊಸ ಫೋಟೊಗಳನ್ನು ಅಪ್‌ ಲೋಡ್‌ ಮಾಡುತ್ತಿರುತ್ತಾರೆ. ಮತ್ತು ಅದು ಸಕ್ಕತ್‌ ವೈರಲ್‌ ಆಗುತ್ತೆ. ಅದಕ್ಕೆ ಕಾರಣ ಆಕೆ ಇಷ್ಟು ವರ್ಷಗಳ ಬಳಿಕವು ಉಳಿಸಿಕೊಂಡಿರುವ ಗ್ಲ್ಯಾಮರ್‌ . ಮದುವೆಯಾಗಿ ಮಕ್ಕಳಾದ್ರೂ ಸಖತ್ ಫಿಟ್ ಆಗಿರುವ ನಟಿ ಶಿಲ್ಪಾ ಶೆಟ್ಟಿಯ ನಿಜವಾದ ವಯಸ್ಸು ಎಷ್ಟು ಗೊತ್ತಾ ? Instagram ನಲ್ಲಿ ಆಕೆಯ ಪೋಟೊ ನೋಡಿ ಸಾಮಾಜಿಕ ಜಾಲತಾಣದಲ್ಲಿ ಈ ಪ್ರಶ್ನೆ ಹುಟ್ಟಿಕೊಂಡಿದೆ.

Ad Widget

ಮದುವೆಯಾದ ಮೇಲೆ ಉದ್ಯಮಿಯಾಗಿ ಬದಲಾಗಿರುವ ಶಿಲ್ಪಾ ಶೆಟ್ಟಿ ಯವರು ಮಂಗಳೂರು ಸಮೀಪದ ನಿಡ್ಡೊಡಿಯವರು. ಹಿಂದಿ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೇ, ಕನ್ನಡ ಹಾಗೂ ತೆಲುಗಿನಲ್ಲೂ ಹಲವು ಚಿತ್ರಗಳಲ್ಲಿ ಶಿಲ್ಪಾ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಶಿಲ್ಪಾ ಶೆಟ್ಟಿಗೆ, 30.4 ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಅವರು ಯೋಗಾಸನಗಳ ವಿಡಿಯೋ ಹಾಗೂ ಫಿಟ್ನೆಸ್ ಸಲಹೆ ನೀಡುವ ಮೂಲಕ ಸದಾ ಅಭಿಮಾನಿಗಳೊಂದಿಗೆ ಟಚನಲ್ಲಿ ಇರುತ್ತಾರೆ.

Ad Widget

Ad Widget

ಶಿಲ್ಪಾ ಶೆಟ್ಟಿ ಬಾಲಿ ವುಡ್‌ ನಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿದ್ದು 1993ರಲ್ಲಿ . ಅದು ಶಾರುಖಾನ್ ಅಭಿನಯದ ‘ಬಾಜಿಗರ್’ ಚಿತ್ರ . ಅದರಲ್ಲಿ ನಾಯಕಿಯಾಗಿ ನಟಿಸಿದ ಶಿಲ್ಪಾ ಶೆಟ್ಟಿ ಅದ್ಭುತ ಯಶಸ್ಸನ್ನು ಗಳಿಸಿದರು. ಬಳಿಕ ಅವರುಚಿತ್ರರಂಗದಲ್ಲಿ ಹಿಂದುರಿಗಿ ನೋಡಿಯೆ ಇಲ್ಲ. ಈ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಫಿಲ್ಮಫೆರ್ ಪ್ರಶಸ್ತಿಯನ್ನು ಸಹ ಗಳಿಸಿದ್ದಾರೆ. ಉತ್ತರ ಮತ್ತು ದಕ್ಷಿಣ ಭಾರತದ ಎಲ್ಲ ಪ್ರಮುಖ ತಾರೆಗಳೊಂದಿಗೆ ಅಭಿನಯಿಸಿರುವ ಶಿಲ್ಪಾ, ‘ಮೈ ಕಿಲಾಡಿ ತು ಅನಾಡಿ’, ‘ದಡಕನ್’ ‘ಪರ್ದೆಶಿ ಬಾಬು’ ಚಿತ್ರಗಳ ಮೂಲಕ ಅಂತರಾಷ್ಟ್ರೀಯ ಗಮನ ಸೆಳೆದಿದ್ದಾರೆ.

Ad Widget

ಯಶಸ್ಸಿನ ಬೆನ್ನ ಹಿಂದೆಯೆ ವಿವಾದವನ್ನು ಸಹ ಸೃಷ್ಟಿಸಿಕೊಳ್ಳುತ್ತಿರುವುದು ಶಿಲ್ಪಾಗೆ ರೂಢಿಯಾಗಿದೆ. ಲಂಡನ್ನಿನ ಪ್ರಮುಖ ಚಾನೆಲ್ ಒಂದರ ಜನಪ್ರಿಯ ಕಾರ್ಯಕ್ರಮ ‘ಬಿಗ್ ಬ್ರದರ್’ ಶೋ ನೀಡಲು ಹೋದಾಗ ಜನಾಂಗೀಯ ನಿಂದನೆಯ ಆರೋಪದ ವಿವಾದದಲ್ಲಿ ಸಿಲುಕಿದರು . ಆದರೂ ದೃತಿಗೆಡದೆ ತನಗಂಟಿದ ಕಳಂಕವನ್ನು ಕಿತ್ತೊಗೆದು 90 ಲಕ್ಷಕ್ಕೂ ಹೆಚ್ಚು ಬಹುಮಾನವನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದರು. ಅದರ ಬೆನ್ನಲ್ಲೆ, ನವದೆಹಲಿಯ ಕಾರ್ಯಕ್ರಮವೊಂದರಲ್ಲಿ ಖ್ಯಾತ ಹಾಲಿವುಡ್ ನಟ ರಿಚರ್ಡ್ ಗೇರ್ ಜೊತೆ ಬಹಿರಂಗ ವೇದಿಕೆಯ ಮೇಲೆ ದೀರ್ಘ ಚುಂಬನಕ್ಕೆ ಸಹಕರಿಸಿದ ಆರೋಪವನ್ನು ಸಹ ಶಿಲ್ಪಾ ಹೊತ್ತಿದ್ದಾರೆ.

Ad Widget

Ad Widget

ಇದಾದ ಬಳಿಕ 2 ವರ್ಷಗಳ ಹಿಂದೆ ಶಿಲ್ಪಾ ಅರ್ಥಾತ್​ 2021ರಲ್ಲಿ, ಬಾಲಿವುಡ್​ ಚೆಲುವೆ ಶಿಲ್ಪಾ ಶೆಟ್ಟಿ ಜೀವನದಲ್ಲಿ ಬಿರುಗಾಳಿ ಬಂದ ವರ್ಷ. ಇದಕ್ಕೆ ಕಾರಣ, ಇವರ ಪತಿ, ಖ್ಯಾತ ಉದ್ಯಮಿ ರಾಜ್​ ಕುಂದ್ರಾ ನೀಲಿ ಚಿತ್ರ (porn film) ಕೇಸ್​ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬ ಆರೋಪದಡಿ ಪೊಲೀಸರು ರಾಜ್​ ಕುಂದ್ರಾನನ್ನು ಬಂಧಿಸಿದ್ದಾರು. 63 ದಿನಗಳ ಕಾಲ ಆತ ಜೈಲಿನಲ್ಲಿ ಕಳೆಯಬೇಕಾಯಿತು.

ನೀಲಿ ಚಿತ್ರಗಳ ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್​ ಕುಂದ್ರಾ ಎದುರಿಸುತ್ತಿದ್ದಾರೆ. ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್​ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್​ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು. ಅಂದಹಾಗೆ, ರಾಜ್ ಕುಂದ್ರಾ (Raj Kundra) ಮತ್ತು ಶಿಲ್ಪಾ ಶೆಟ್ಟಿ 2009 ರಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳೂ ಇದ್ದಾರೆ.

ಹಾಗಾದರೇ ಶಿಲ್ಪಾಗೆ ವಯಸ್ಸೆಷ್ಟು ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದುಕೊಂಡಿದೆ ಅಲ್ವಾ ? ಸಾವಿರಾರು ಅಭಿಮಾನಿಗಳ ಮನಗೆದ್ದ ಮಂಗಳೂರಿನ ಹುಡುಗಿ ಚೆಂದದ ಬೆಡಗಿ ಶಿಲ್ಪಾ ಶೆಟ್ಟಿಗೆ 48 ವರ್ಷ ವಯಸ್ಸಾಗಿದೆ. 1975 ರಲ್ಲಿ ಅವರು ಹುಟ್ಟಿದ ಈಕೆಯ ಚೆಂದದ ಸೌಂದರ್ಯ ನೋಡಿದ್ರೆ ಅಭಿಮಾನಿಗಳು ವಯಸ್ಸಿನ ಕುರಿತಾಗಿ ಕನ್ಫೂಜ್ ಆಗೋದು ಗ್ಯಾರಂಟಿ. 50ರ ಹಂಚಿನಲ್ಲಿರುವ ಶಿಲ್ಪಾ ಶೆಟ್ಟಿ, ಯಂಗ್ ನಟಿಯರಿಗೆ ಸೆಡ್ಡು ಹೊಡೆಯುತ್ತಿರುವುದು ವಿಶೇಷ

Leave a Reply

Recent Posts

error: Content is protected !!
%d bloggers like this: