ಸಹಕಾರಿ ಕ್ಷೇತ್ರವು ಇಂದು ವಿವಿಧ ಆಯಾಮಗಳಲ್ಲಿ ಬೆಳೆಯುತ್ತಿದ್ದು, ಆರ್ಯಾಪು ಸಹಕಾರಿ ಸಂಘವು ಯಾವುದೇ ಖಾಸಗಿ ವಿಮಾ ಕಂಪನಿಗಳ ಒಡಂಬಡಿಕೆ ಇಲ್ಲದೆ ಸ್ವಂತ ನೆಲೆಯಲ್ಲಿ ವಿಮಾ ಯೋಜನೆಯನ್ನು ಜಾರಿಗೆ ತರುವ ಮೂಲಕ ರಾಜ್ಯದಲ್ಲೇ ಹೊಸ ಇತಿಹಾಸ ನಿರ್ಮಿಸಿದೆ...
ಸಹಕಾರ ಸಂಘಗಳ ಇತಿಹಾಸದಲ್ಲೇ ಮೊದಲ ಬಾರಿಗೆ, ಯಾವುದೇ ಖಾಸಗಿ ವಿಮಾ ಸಂಸ್ಥೆಗಳ ಒಡಂಬಡಿಕೆಯಿಲ್ಲದೆ ಸದಸ್ಯರಿಗಾಗಿ ಸ್ವಂತ ನೆಲೆಯಲ್ಲಿ ರೂಪಿಸಲಾದ ‘ಸಹಕಾರ ಸಂಜೀವಿನಿ’ ವಿಮೆ ಯೋಜನೆಯನ್ನು ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಾರಿಗೆ ತರುತ್ತಿದೆ....