Connect with us

ಮಂಗಳೂರು

Mangalore-ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರಿಂದ ದ.ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಅವಿರತ ಪ್ರಯತ್ನಕ್ಕೆ ಶ್ಲಾಘನೆ; ಮಂಗಳೂರಿನ ಜೆಬಿಎಫ್‌-ಜಿಎಂಪಿಎಲ್‌ ಸಮಸ್ಯೆಯನ್ನು 40 ದಿನದಲ್ಲಿ ಬಗೆಹರಿಸಿದ ಮೋದಿ ಸರ್ಕಾರ

Published

on



Ad Widget

Ad Widget

Ad Widget

Ad Widget
Ad Widget

Ad Widget

Ad Widget

Ad Widget

ಮಂಗಳೂರು: ಮಂಗಳೂರಿನ ವಿಶೇಷ ಆರ್ಥಿಕ ವಲಯ(ಎಂಎಸ್‌ಇಝೆಡ್‌)ದಲ್ಲಿ ಜೆಬಿಎಫ್‌ ಕಂಪೆನಿ ಸ್ಥಾಪನೆಗೆ ಜಮೀನು ಕೊಟ್ಟಿದ್ದ ಪಿಡಿಎಫ್‌ ಉದ್ಯೋಗಸ್ಥರನ್ನು ಜಿಎಂಪಿಎಲ್‌(ಗೈಲ್‌) ಕಂಪೆನಿಯಲ್ಲಿ ಮುಂದುವರಿಸುವುದಕ್ಕೆ ಅವಕಾಶ ಕಲ್ಪಿಸಿ ಬಹುದಿನಗಳ ಗಂಭೀರ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಲು ಕಾರಣರಾದ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಸತತ ಪ್ರಯತ್ನವನ್ನು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರು ಶ್ಲಾಘಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಜೆಬಿಎಫ್‌-ಜಿಎಂಪಿಎಲ್‌(ಗೈಲ್‌) ಸಮಸ್ಯೆಯನ್ನು ಕೇಂದ್ರ ಸರ್ಕಾರವು ಕೇವಲ 40 ದಿನಗಳಲ್ಲಿ ಬಗೆಹರಿಸಿ ಕೊಟ್ಟಿರುವ ಹಿನ್ನಲೆಯಲ್ಲಿ ಕ್ಯಾ. ಚೌಟ ಅವರು ಮಂಗಳೂರಿನ ಜೆಬಿಎಫ್‌ ಪಿಡಿಎಫ್‌ ಉದ್ಯೋಗಸ್ಥರ ಪರವಾಗಿ ಇಂದು ನವದಿಲ್ಲಿಯಲ್ಲಿ ಪೆಟ್ರೋಲಿಯಂ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ.

Ad Widget

Ad Widget <> Ad Widget

ಪ್ರಥಮ ಬಾರಿಗೆ ಸಂಸದರಾಗಿ ಆಯ್ಕೆಯಾದ ತಕ್ಷಣದಲ್ಲೇ ಕ್ಯಾ. ಚೌಟ ಅವರು ದಕ್ಷಿಣ ಕನ್ನಡದ ಸುಮಾರು 115 ಪಿಡಿಎಫ್‌ ಕುಟುಂಬಸ್ಥರ ಬಹುದಿನಗಳಿಂದ ಈಡೇರದೆ ಬಾಕಿಯಾಗಿದ್ದ ಈ ಪ್ರಮುಖ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಪೆಟ್ರೋಲಿಯಂ ಸಚಿವಾಲಯ ಹಾಗೂ ಜಿಎಂಪಿಎಲ್‌ ಕಂಪೆನಿ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಪ್ರೇರೇಪಿಸಿ ಈ ಗಂಭೀರ ಸಮಸ್ಯೆ ಬಗೆಹರಿಸುವುದಕ್ಕೆ ವಹಿಸಿದ್ದ ಮುತುರ್ವಜಿಗೆ ಸಚಿವ ಹರ್‌ದೀಪ್‌ ಸಿಂಗ್‌ ಅವರು ಇದೇವೇಳೆ ಕ್ಯಾ. ಚೌಟ ಅವರ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



Ad Widget

ಈ ಬಗ್ಗೆ ಖುದ್ದು ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರೇ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದು, “ಮಂಗಳೂರಿನ ಎಂಎಸ್‌ಇಝೆಡ್‌ನಲ್ಲಿ ಗೈಲ್‌ ಮಂಗಳೂರು ಪೆಟ್ರೋಕೆಮಿಕಲ್ಸ್‌(ಜಿಎಂಪಿಎಲ್‌), ಜೆಬಿಎಫ್‌ನ್ನು ಸ್ವಾಧೀನಪಡಿಸಿದ ಬಳಿಕ 115 ಜೆಬಿಎಫ್‌ ಪಿಡಿಎಫ್‌ ಕುಟುಂಬಸ್ಥರ ಉದ್ಯೋಗ ಮುಂದುವರಿಸುವುದಕ್ಕೆ ಸಮಸ್ಯೆಯಾಗಿತ್ತು. ಈ ಗಂಭೀರ ಸಮಸ್ಯೆ ಬಗ್ಗೆ ಕ್ಯಾ. ಚೌಟ ಅವರು ನನ್ನ ಬಳಿ ನಿರಂತರ ಫಾಲೋಅಪ್‌ ಮಾಡಿ ಬಹಳ ವರ್ಷಗಳಿಂದ ಬಗೆಹರಿಯದೆ ಬಾಕಿಯಾಗಿದ್ದ ಈ ಪಿಡಿಎಫ್‌ ಕುಟುಂಬಸ್ಥರ ಸಂಕಷ್ಟವನ್ನು ಆದ್ಯತೆ ಮೇರೆಗೆ ಬಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Ad Widget

Ad Widget

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 3.0 ಸರ್ಕಾರದಲ್ಲಿ ಕೇವಲ 40 ದಿನದಲ್ಲಿ ಜೆಬಿಎಫ್‌ ಉದ್ಯೋಗಸ್ಥರ ಈ ಜ್ವಲಂತ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿರುವುದು ನನಗೆ ಬಹಳ ಸಂತಸ ತಂದಿದೆ. ಈ ವಿಚಾರದಲ್ಲಿ ನಾನು ಕ್ಯಾ. ಚೌಟ ಅವರ ಬದ್ಧತೆ ಮತ್ತು ಪ್ರಯತ್ನವನ್ನು ಪ್ರಶಂಸಿಸುವುದಾಗಿ” ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Ad Widget
Click to comment

Leave a Reply

ಮಂಗಳೂರು

Ujire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ

Published

on



Ad Widget

Ad Widget

Ad Widget

Ad Widget

ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಉಜಿರೆಯಿಂದ ಆರಂಭವಾದ ಬೃಹತ್ ಜಾಥಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು, ಮೌನ ಮೆರವಣಿಗೆಯ ಮೂಲಕ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಲಾಯಿತು. ಸುಮಾರು ಐದು ಕಿಲೋಮೀಟರ್‌ ದೂರದವರೆಗೆ ಹೋರಾಟಗಾರರು ನಡಿಗೆಯಲ್ಲಿ ಸಾಗಲಿದ್ದಾರೆ.

Ad Widget

Ad Widget <> Ad Widget

ನ್ಯಾಯದ ನಡಿಗೆಯ ಬಳಿಕ ಬೆಳ್ತಂಗಡಿಯ ಮೈದಾನದಲ್ಲಿ ಬೃಹತ್ ಅಭಿನಂದನಾ ಸಮಾವೇಶ ನಡೆಯಲಿದೆ. ಸೌಜನ್ಯ ಪರವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ವಕೀಲರ ತಂಡಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಕೀಲರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.



Ad Widget
Ad Widget
Continue Reading

ಮಂಗಳೂರು

MRPL accident-MRPL ಅವಘಡದಲ್ಲಿ ಮೃತಪಟ್ಟ ಕರ್ಕಡ ಕುಟುಂಬಕ್ಕೆ EPFO ಕ್ಲೈಮ್ ಸಂದಾಯ

Published

on



Ad Widget

Ad Widget

Ad Widget

Ad Widget

MRPL ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO), ಮಂಗಳೂರು ಪ್ರಾದೇಶಿಕ ಕಚೇರಿಯು, 30.09.2026 ರಂದು ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಸಂಭವಿಸಿದ ಕೈಗಾರಿಕಾ ಅಪಘಾತದಲ್ಲಿ ಮರಣ ಹೊಂದಿದ ಭವಿಷ್ಯ ನಿಧಿ ಚಂದಾದಾರರಾದ ದಿವಂಗತ ಮನೀಶ್ ಕರ್ಕಡ ಅವರ ಕುಟುಂಬದ ಅವಲಂಬಿತರ ಸಾಮಾಜಿಕ ಭದ್ರತಾ ಸೌಲಭ್ಯಗಳ ಕ್ಷೇಮುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು : MRPL ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO), ಮಂಗಳೂರು ಪ್ರಾದೇಶಿಕ ಕಚೇರಿಯು, 30.09.2026 ರಂದು ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಸಂಭವಿಸಿದ ಕೈಗಾರಿಕಾ ಅಪಘಾತದಲ್ಲಿ ಮರಣ ಹೊಂದಿದ ಭವಿಷ್ಯ ನಿಧಿ ಚಂದಾದಾರರಾದ ದಿವಂಗತ ಮನೀಶ್ ಕರ್ಕಡ ಅವರ ಕುಟುಂಬದ ಅವಲಂಬಿತರ ಸಾಮಾಜಿಕ ಭದ್ರತಾ ಸೌಲಭ್ಯಗಳ ಕ್ಷೇಮುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO) ವತಿಯಿಂದ ಕುಟುಂಬಕ್ಕೆ ಪಾವತಿಸಬೇಕಾದ ಉದ್ಯೋಗಿಗಳ ಭವಿಷ್ಯ ನಿಧಿ ಹಾಗೂ ಉದ್ಯೋಗಿಗಳ ಠೇವಣಿ ಆಧಾರಿತ ವಿಮಾ ಸೌಲಭ್ಯಗಳ ಕ್ಷೇಮುಗಳನ್ನು ಇತ್ಯರ್ಥಪಡಿಸಲಾಗಿದೆ.

Ad Widget

Ad Widget <> Ad Widget

ಇದರೊಂದಿಗೆ ಉದ್ಯೋಗಿಗಳ ಪಿಂಚಣಿ ಯೋಜನೆ 2026ರ ಅಡಿಯಲ್ಲಿ, ಮಾಸಿಕ ಪಿಂಚಣಿಯನ್ನೂ ಮಂಜೂರು ಮಾಡಿ ಪಾವತಿ ಪ್ರಾರಂಭಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳನ್ನು 08.10.2026 ರಂದು ಇತ್ಯರ್ಥಪಡಿಸಿ ಜಾರಿಗೊಳಿಸಲಾಗಿದೆ ಹಾಗೂ ಮೊತ್ತವನ್ನು ಪಾವತಿಸಲಾಗಿದೆ.



Ad Widget

ದುಃಖತಪ್ತ ಕುಟುಂಬಕ್ಕೆ ಸಂತಾಪ ಹಾಗೂ ಸಾಂತ್ವನ ಸಲ್ಲಿಸುವ ಉದ್ದೇಶದಿಂದ, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ಸಂದೀಪ್ ಬಿಸ್ವಾಸ್ ಅವರು, ಸಹಾಯಕ ಭವಿಷ್ಯ ನಿಧಿ ಆಯುಕ್ತರಾದ ಅಂಕಿತ್ ಸಿಂಗ್ ಹಾಗೂ ಪ್ರವರ್ತನಾಧಿಕಾರಿಯಾದ ಶ್ರೀಮತಿ ಅನಿತಾ ಆರ್ ಅವರೊಂದಿಗೆ 09.10.2026 ರಂದು ದಿವಂಗತ ಶ್ರೀ ಮನೀಶ್ ಕರ್ಕಡ ಅವರ ನಿವಾಸಕ್ಕೆ ಭೇಟಿ ನೀಡಿ, ಫಲಾನುಭವಿಗೆ ಪಿಂಚಣಿ ಪಾವತಿ ಆದೇಶವನ್ನು (PPO) ಹಸ್ತಾಂತರಿಸಿದರು. ಈ ಭೇಟಿಯು ಸಂಕಷ್ಟದ ಸಂದರ್ಭದಲ್ಲಿ ತನ್ನ ಸದಸ್ಯರ ಕುಟುಂಬಗಳೊಂದಿಗೆ ನಿಲ್ಲುವ EPFO ಸಂಸ್ಥೆಯ ಮಾನವೀಯ ಕಾಳಜಿ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

Ad Widget

Ad Widget

ಅನಿರೀಕ್ಷಿತ ದುರಂತಗಳ ಸಂದರ್ಭದಲ್ಲಿ ತನ್ನ ಸದಸ್ಯರ ಕುಟುಂಬಗಳಿಗೆ ಸಲ್ಲಬೇಕಾದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವುದು EPFO ಸಂಸ್ಥೆಯ ಬದ್ಧತೆಯಾಗಿದೆ ಎಂಬುದನ್ನು ಈ ತ್ವರಿತ ಇತ್ಯರ್ಥವು ಮತ್ತೊಮ್ಮೆ ದೃಢಪಡಿಸಿದೆ.

EPFO ಸಂಸ್ಥೆಯು ಮೃತ ಸದಸ್ಯರ ಕುಟುಂಬಕ್ಕೆ ತನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದು, ಈ ಕಷ್ಟದ ಸಮಯದಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಬದ್ಧವಾಗಿದೆ.

Ad Widget
Continue Reading

ಮಂಗಳೂರು

Mangalore-ಮಂಗಳೂರು : 2 ತಿಂಗಳ ಬಳಿಕ ಸಮಾಧಿಯಿಂದ ಹೊರಬರಲಿದೆ ಆಲ್ಬರ್ಟ್ ರೇಗೋ ಶವ..!; ಮಗಳಿಂದಲೇ ತಂದೆಯ ಕೊಲೆ : ಸ್ನೇಹಿತನ ಆರೋಪ – ತನಿಖೆಗೆ ಸಿಗಲಿದೆ ಮಹತ್ವದ ತಿರುವು

Published

on



Ad Widget

Ad Widget

Ad Widget

Ad Widget

ಎರಡು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಇದೀಗ ಹೂತು ಹಾಕಿದ್ದ ಶವವನ್ನೇ ಹೊರತೆಗೆದು ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ಹರಡಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗಳೇ ತಂದೆಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಈ ಪ್ರಕರಣ ಮಂಗಳೂರಿನಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Ad Widget

Ad Widget

Ad Widget

Ad Widget

ಮಂಗಳೂರು, ಅ 9: ಎರಡು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಇದೀಗ ಹೂತು ಹಾಕಿದ್ದ ಶವವನ್ನೇ ಹೊರತೆಗೆದು ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ಹರಡಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗಳೇ ತಂದೆಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಈ ಪ್ರಕರಣ ಮಂಗಳೂರಿನಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ (Albert Rego) ಅವರು ಕಳೆದ ಜುಲೈ 19ರಂದು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಅವರ ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ನಡೆಸದೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಇದೀಗ ಕುಂಟಿಕಾನ ಸಮೀಪದ ದೇರೆಬೈಲ್ ಚರ್ಚ್ ಆವರಣದ ದಫನ ಭೂಮಿಯಲ್ಲಿ ಹೂತು ಹಾಕಿರುವ ಅವರ ಶವವನ್ನು ಹೊರತೆಗೆದು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರ ನೆರವಿನಿಂದ ಪರಿಶೀಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

Ad Widget

Ad Widget <> Ad Widget

ಸ್ನೇಹಿತನ ದೂರಿನಿಂದ ಬಯಲಿಗೆ ಬಂದ ಅನುಮಾನ



Ad Widget

ಆಲ್ಬರ್ಟ್ ರೇಗೋ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ಅವರ ಸ್ನೇಹಿತ ಹೆರಾಲ್ಡ್ ಪಿರೇರಾ ಅವರು ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಾವಿನ ಬಗ್ಗೆ ಸ್ಥಳೀಯರಿಗೆ ಹಾಗೂ ಕುಟುಂಬದ ಇತರ ಸದಸ್ಯರಿಗೆ ಮಾಹಿತಿ ನೀಡದೆ, ಆಪ್ತರ ಮೂಲಕ ಮಗಳು ಮಾಯಾ ರೇಗೋ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಯಾ ರೇಗೋ ಸೇರಿದಂತೆ ಇತರರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

Ad Widget

Ad Widget

ಆಸ್ತಿಗಾಗಿ ಕಿರುಕುಳ ನೀಡಿದ್ದ ಆರೋಪ

ಆಲ್ಬರ್ಟ್ ರೇಗೋ ಅವರು ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಸಾಕಷ್ಟು ಆಸ್ತಿ ಸಂಪಾದಿಸಿದ್ದರು ಎನ್ನಲಾಗಿದೆ. ಅವರ ಇಬ್ಬರು ಮಕ್ಕಳು ಬೇರೆ ಬೇರೆ ಕಡೆ ನೆಲೆಸಿದ್ದರೆ, ಮಾಯಾ ರೇಗೋ ಮಾತ್ರ ಅವರೊಂದಿಗೆ ವಾಸವಾಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಬಲವಂತವಾಗಿ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳಲು ಯತ್ನಿಸಿದ್ದಾಳೆ ಎಂಬುದು ದೂರುದಾರರ ಆರೋಪ. ತನಗೆ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿರುವ ಬಗ್ಗೆ ಆಲ್ಬರ್ಟ್ ಅವರು ಸ್ನೇಹಿತರ ಬಳಿ ಹೇಳಿಕೊಂಡಿದ್ದರು. ತನಗೇನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಮಗಳ ಕಿರುಕುಳವೇ ಕಾರಣವಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದರು ಎಂದು ಹೆರಾಲ್ಡ್ ಪಿರೇರಾ ದೂರಿನಲ್ಲಿ ತಿಳಿಸಿದ್ದಾರೆ.

ಮಾದಕ ವ್ಯಸನದ ಆರೋಪವನ್ನೂ ಮಾಯಾ ರೇಗೋ ವಿರುದ್ಧ ಮಾಡಲಾಗಿದ್ದು, ಹಣ ಮತ್ತು ಆಸ್ತಿಯ ವಿಚಾರವಾಗಿ ಇತರರ ನೆರವಿನಿಂದ ತಂದೆಯನ್ನು ಕೊಲೆ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕೃತ್ಯಕ್ಕೆ ಬೋಂದೆಲ್‌ನ ವೈದ್ಯರೊಬ್ಬರು ಹಾಗೂ ಪೊಲೀಸ್ ಪೇದೆಯೊಬ್ಬರು ಸಹಕರಿಸಿದ್ದಾರೆ ಎಂದೂ ಆರೋಪಿಸಲಾಗಿದೆ. ಆದರೆ, ಈ ಆರೋಪಗಳು ತನಿಖೆಯಿಂದ ದೃಢಪಡಬೇಕಿದೆ.

ಅಸ್ಥಿಪಂಜರದ ಪರೀಕ್ಷೆಯಿಂದ ಸಿಗಲಿದೆಯೇ ಸುಳಿವು?

ಪ್ರಕರಣದ ತನಿಖೆಯಲ್ಲಿ ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಪೊಲೀಸರು, ಇದೀಗ ಸಾವಿನ ನೈಜ ಕಾರಣ ಪತ್ತೆಹಚ್ಚಲು ಹೂತು ಹಾಕಿರುವ ಶವವನ್ನು ಹೊರತೆಗೆಯುವ ನಿರ್ಧಾರ ಕೈಗೊಂಡಿದ್ದಾರೆ. ದೇರೆಬೈಲ್ ಚರ್ಚ್ ಆವರಣದ ದಫನ ಭೂಮಿಯಲ್ಲಿ ಪೊಲೀಸರು ಹಾಗೂ ಎಫ್‌ಎಸ್‌ಎಲ್ ತಜ್ಞರು ಸ್ಥಳಕ್ಕೆ ಆಗಮಿಸಿ ಪ್ರಕ್ರಿಯೆಗೆ ಮುಂದಾಗಿದ್ದಾರೆ.

ಮಾಯಾ ರೇಗೋ ಹಾಗೂ ದೂರುದಾರರ ಸಮ್ಮುಖದಲ್ಲಿ ಅಸ್ಥಿಪಂಜರವನ್ನು ಹೊರತೆಗೆದು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಎರಡು ತಿಂಗಳ ಹಿಂದೆ ನಡೆದ ಸಾವು ಕೊಲೆ ಕೃತ್ಯವೇ? ಸಾವಿನ ಹಿಂದಿದೆಯಾ ಆಸ್ತಿ ವಿವಾದ ? ಎಂಬ ಪ್ರಶ್ನೆಗಳಿಗೆ ವಿಧಿವಿಜ್ಞಾನ ಪರೀಕ್ಷೆ ಮತ್ತು ಪೊಲೀಸ್ ತನಿಖೆಯಿಂದ ಉತ್ತರ ಸಿಗಬೇಕಿದೆ. ಸದ್ಯ ಪ್ರಕರಣದ ಆರೋಪಗಳು ತನಿಖಾ ಹಂತದಲ್ಲಿದ್ದು, ಪರೀಕ್ಷೆಯ ವರದಿ ಹಾಗೂ ಮುಂದಿನ ತನಿಖೆ ನಿರ್ಣಾಯಕವಾಗಲಿವೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading