Connect with us

ಕಾರ್ಯಕ್ರಮಗಳು

Chakravarti Sulibele-“ಶಿಕ್ಷಕನಾದವನು ಆದರ್ಶ, ಮೌಲ್ಯಗಳನ್ನು ಹೊತ್ತ ವಿದ್ಯಾರ್ಥಿ ಸಮೂಹದ ಸೃಷ್ಟಿ ಮಾಡಬೇಕು: ಚಕ್ರವರ್ತಿ ಸೂಲಿಬೆಲೆ

Published

on



Ad Widget

Ad Widget

Ad Widget

Ad Widget
Ad Widget

Ad Widget

Ad Widget

Ad Widget

ʻʻಶಿಕ್ಷಕನಾದವನು ಮೊದಲು ʼಗುರುʼವಾಗಬೇಕು. ಭಾರತದಲ್ಲಿ ಗುರುವಿನ ಮೌಲ್ಯ ಬಹು ವಿಸ್ತಾರವಾದದು. ಪ್ರತಿ ವಿದ್ಯಾರ್ಥಿಯ ಅಂತರಂಗದಲ್ಲಿರುವ ವಿಶೇಷತೆಯನ್ನು ಗುರುತಿಸುವ ಪ್ರಯತ್ನವನ್ನು ಗುರುವಾದವನು ಮಾಡಬೇಕು. ಶಿಕ್ಷಣ ಮತ್ತು ಶಿಕ್ಷೆ ಎರಡನ್ನೂ ನೀಡುವ ಶಿಕ್ಷಕ ಮಕ್ಕಳಿಗೆ ಮಮತೆ ಪ್ರೀತಿಯ ಧಾರೆಯನ್ನು ಎರೆವಲ್ಲಿ ಉತ್ಕೃಷ್ಟ ವಿದ್ಯಾರ್ಥಿಗಳ ಸೃಷ್ಟಿ ಸಾಧ್ಯವಿದೆ. ಮೌಲ್ಯಗಳನ್ನು ಕಳೆದುಕೊಂಡು ನಿರಂತರವಾಗಿ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಮಾಜದಲ್ಲಿ ಶಿಕ್ಷಕನಾದವನು ಮೌಲ್ಯಗಳನ್ನು ಪುನರ್ಸ್ಥಾಪಿಸಬೇಕಾದ ತುರ್ತು ಇಂದಿನ ದಿನಗಳಿಗಿದೆ.” ಎಂದು ಚಕ್ರವರ್ತಿ ಸೂಲಿಬೆಲೆ ಅವರು ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆದ “ವಿವೇಕ ವಿಜಯ” ಉಪನ್ಯಾಸ ಕಾರ್ಯಕ್ರಮದ ಎರಡನೆಯ ಅವಧಿಯು “ವಿವೇಕ- ಶಿಕ್ಷಣ ರಾಷ್ಟ್ರ ನಿರ್ಮಾಣ” ಎಂಬ ಶೀರ್ಷಿಕೆಯಡಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ವಿದ್ಯಾಸಂಸ್ಥೆಗಳ ಹಾಗೂ ಪುತ್ತೂರಿನ ಆಸುಪಾಸಿನ ಶಿಕ್ಷಣ ಸಂಸ್ಥೆಗಳ ಶಿಕ್ಷಕ ವೃಂದದವರಿಗಾಗಿ ನಡೆಯಿತು.

Ad Widget

Ad Widget <> Ad Widget

ಈ ಕಾರ್ಯಕ್ರಮದ ವಿಶೇಷ ಅಭ್ಯಾಗತರಾಗಿ ಆಗಮಿಸಿದ ವಿವೇಕಾನಂದ ಮಹಾವಿದ್ಯಾಲಯ(ಸ್ವಾಯತ್ತ) ಇದರ ಆಡಳಿತಮಂಡಳಿ ಅಧ್ಯಕ್ಷರಾದ ಶ್ರೀಪತಿ ಕಲ್ಲೂರಾಯ ಇವರು ಮಾತನಾಡುತ್ತಾ “ಭಾರತೀಯರಾದ ನಾವು ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಒಲವು ತೋರದೆ ನಮ್ಮ ಸನಾತನ ಸಂಸ್ಕೃತಿಯ ಮಹೋನ್ನತಿಯನ್ನು ಅರ್ಥೈಸಿಕೊಂಡು ಪಾಶ್ಚಾತ್ಯ ದೇಶಗಳಲ್ಲಿ ಹಿಂದೂ ಧರ್ಮದ ಚಿಂತನೆಗಳನ್ನು ಬಿತ್ತರಿಸಿದ ದಾರ್ಶನಿಕ ಸ್ವಾಮಿ ವಿವೇಕಾನಂದರ ಮೌಲ್ಯ, ಆದರ್ಶಗಳನ್ನು ಪ್ರತೀ ಭಾರತೀಯನೂ ಅಳವಡಿಸಿಕೊಳ್ಳಬೇಕಿದೆ.” ಎಂದರು.



Ad Widget

ಈ ಅವಧಿಯಲ್ಲಿ ಶಿಕ್ಷಕರನ್ನುದ್ದೇಶಿಸಿ ಚಕ್ರವರ್ತಿ ಸೂಲಿಬೆಲೆ ಇವರು ದಿಕ್ಸೂಚಿ ಮಾತುಗಳನ್ನಾಡುತ್ತಾ “ಸ್ವಾಮಿ ವಿವೇಕಾನಂದರ ಧೀಮಂತ ವ್ಯಕ್ತಿತ್ವ, ಒಂದು ಅದ್ಭುತವಾದ ಸಮಾಜವನ್ನು ನಿರ್ಮಿಸಿಕೊಟ್ಟಿದೆ. ವಿದ್ಯಾರ್ಥಿಗಳಲ್ಲಿ ಧರ್ಮ, ಸಂಸ್ಕಾರ, ದೇಶಪ್ರೇಮವನ್ನು ಜಾಗೃತಗೊಳಿಸುವ ಮೂಲಕ ಶಿಕ್ಷಕನಾದವನು ಜಾಗೃತ ಸಮಾಜದ ನಿರ್ಮಾಣವನ್ನು ಮಾಡಬೇಕಾಗಿದೆ. ನಮ್ಮ ಮಕ್ಕಳನ್ನು ಸಾಂಪ್ರದಾಯಿಕವಾಗಿ, ಭಾರತೀಯತೆಗೆ ಹತ್ತಿರವಾಗಿ ಬೆಳೆಸುವ ಹಾಗೂ ಆದರ ಮೌಲ್ಯಗಳನ್ನು ಹೊತ್ತ ವಿದ್ಯಾರ್ಥಿ ಸಮೂಹವನ್ನು ಸೃಷ್ಟಿಮಾಡಬೇಕಾದ ಹೊಣೆಗಾರಿಕೆಯನ್ನು ಇಂದು ಪ್ರತಿಯೊಬ್ಬ ಶಿಕ್ಷಕ ನಿಭಾಯಿಸಬೇಕಿದೆ.” ಎಂದು ಅಭಿಪ್ರಾಯಪಟ್ಟರು.

Ad Widget

Ad Widget

ಕಾರ್ಯಕ್ರಮದ ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ಸದಸ್ಯರಾದ ವತ್ಸಲಾ ರಾಜ್ಞಿ, ಅಧ್ಯಕ್ಷರಾದ ರವೀಂದ್ರ ಪಿ , ಕೋಶಾಧಿಕಾರಿಗಳಾದ ಸಚಿನ್ಶೆಣೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಗಳ ವಿವಿಧ ವಿದ್ಯಾಸಂಸ್ಥೆಗಳ ಹಾಗೂ ಪುತ್ತೂರಿನ ಆಸುಪಾಸಿನ ಶಿಕ್ಷಣ ಸಂಸ್ಥೆಗಳ ಶಿಕ್ಷಕ ವೃಂದದವರು, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರೇರಣಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ಸದಸ್ಯರಾದ ವತ್ಸಲಾ ರಾಜ್ಞಿ ಸ್ವಾಗತಿಸಿ, ಉಪನ್ಯಾಸಕಿ ನಳಿನ ಕುಮಾರಿ ಎ. ಎನ್ ವಂದಿಸಿದರು. ಉಪನ್ಯಾಸಕಿ ಮೊನಿಶಾ ಎನ್ ಕಾರ್ಯಕ್ರಮವನ್ನು ನಿರೂಪಿಸಿದರು.

Ad Widget
Click to comment

Leave a Reply

ಕಾರ್ಯಕ್ರಮಗಳು

‘Havells Experience Center-ನಾಳೆ (ಅ. 15) ರಂದು ಮೈತ್ರಿ ಎಲೆಕ್ಟ್ರಿಕ್‌ನಲ್ಲಿ ʻಹ್ಯಾವೆಲ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್ʼ ಶುಭಾರಂಭ

Published

on



Ad Widget

Ad Widget

Ad Widget

Ad Widget

ಪುತ್ತೂರು ನಗರದ ಮೈತ್ರಿ ಎಲೆಕ್ಟ್ರಿಕ್ ಕಂಪನಿಯ ವತಿಯಿಂದ ಹ್ಯಾವೆಲ್ಸ್‌ನ ವಿಶೇಷ ಅನುಭವ ಕೇಂದ್ರವಾದ ‘ಹ್ಯಾವೆಲ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್’ ಅ.15 ಗುರುವಾರದಂದು ಉದ್ಘಾಟನೆಗೊಳ್ಳಲಿದೆ. ಪುತ್ತೂರಿನ ಮೊಳಹಳ್ಳಿ ಶಿವರಾಯ ರಸ್ತೆಯಲ್ಲಿರುವ ಸುಶಾ ಚೇಂಬರ್ಸ್‌ನ ಮೊದಲ ಮಹಡಿಯಲ್ಲಿರುವ ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

Ad Widget

Ad Widget

Ad Widget

Ad Widget

ಪುತ್ತೂರು: ನಗರದ ಮೈತ್ರಿ ಎಲೆಕ್ಟ್ರಿಕ್ ಕಂಪನಿಯ ವತಿಯಿಂದ ಹ್ಯಾವೆಲ್ಸ್‌ನ ವಿಶೇಷ ಅನುಭವ ಕೇಂದ್ರವಾದ ‘ಹ್ಯಾವೆಲ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್’ ಅ.15 ಗುರುವಾರದಂದು ಉದ್ಘಾಟನೆಗೊಳ್ಳಲಿದೆ.

Ad Widget

Ad Widget

Ad Widget alt="Ad Widget"/>

Ad Widget

ಪುತ್ತೂರಿನ ಮೊಳಹಳ್ಳಿ ಶಿವರಾಯ ರಸ್ತೆಯಲ್ಲಿರುವ ಸುಶಾ ಚೇಂಬರ್ಸ್‌ನ ಮೊದಲ ಮಹಡಿಯಲ್ಲಿರುವ ಮೈತ್ರಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

Ad Widget

Ad Widget <> Ad Widget

ಹ್ಯಾವೆಲ್ಸ್ ಕಂಪನಿಯ ವಿದ್ಯುತ್ ಉಪಕರಣಗಳು ಹಾಗೂ ಗೃಹ ಬಳಕೆಯ ವಿವಿಧ ಉತ್ಪನ್ನಗಳು ಮತ್ತು ಪರಿಹಾರಗಳ ಸಂಪೂರ್ಣ ಶ್ರೇಣಿಯನ್ನು ಗ್ರಾಹಕರು ವೀಕ್ಷಿಸಿ, ಮಾಹಿತಿ ಪಡೆಯಲು ಇಲ್ಲಿ ಅವಕಾಶವಿರಲಿದೆ.



Ad Widget

1997ರಿಂದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವ ಮೈತ್ರಿ ಎಲೆಕ್ಟ್ರಿಕ್ ಕಂಪನಿಯು ಈ ನೂತನ ಕೇಂದ್ರದ ಮೂಲಕ ಗ್ರಾಹಕರಿಗೆ ಹ್ಯಾವೆಲ್ಸ್ ಉತ್ಪನ್ನಗಳ ಪರಿಚಯ ಹಾಗೂ ಉತ್ತಮ ಖರೀದಿ ಅನುಭವ ಒದಗಿಸುವ ಉದ್ದೇಶ ಹೊಂದಿದೆ.

Ad Widget

Ad Widget

ಹೆಚ್ಚಿನ ಮಾಹಿತಿಗಾಗಿ 94493 24436 ಅನ್ನು ಸಂರ್ಪಕಿಸಬಹುದು.

Ad Widget
Continue Reading

ಕಾರ್ಯಕ್ರಮಗಳು

Puttur-ಪುತ್ತೂರು: ಅ.15ರಂದು ‘ಮೈ ಡ್ರೆಸ್ ಕೋಡ್’ ನೂತನ ಮಳಿಗೆ ಗ್ರಾಂಡ್ ರೀ-ಓಪನಿಂಗ್

Published

on



Ad Widget

Ad Widget

Ad Widget

Ad Widget

ಪುತ್ತೂರು ನಗರದ ಕೆಎಸ್‌ಆರ್‌ಟಿಸಿ ವಾಣಿಜ್ಯ ಸಂಕೀರ್ಣದ ನೆಲಮಹಡಿಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ‘ಮೈ ಡ್ರೆಸ್ ಕೋಡ್’ ಬಟ್ಟೆ ಮಳಿಗೆಯ ಶುಭಾರಂಭ ಸಮಾರಂಭವು ಅ.15 ಗುರುವಾರದಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

Ad Widget

Ad Widget

Ad Widget

Ad Widget

ಪುತ್ತೂರು: ನಗರದ ಕೆಎಸ್‌ಆರ್‌ಟಿಸಿ ವಾಣಿಜ್ಯ ಸಂಕೀರ್ಣದ ನೆಲಮಹಡಿಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ‘ಮೈ ಡ್ರೆಸ್ ಕೋಡ್’ ಬಟ್ಟೆ ಮಳಿಗೆಯ ಶುಭಾರಂಭ ಸಮಾರಂಭವು ಅ.15 ಗುರುವಾರದಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

Ad Widget

Ad Widget

Ad Widget alt="Ad Widget"/>

Ad Widget

ಈ ಶುಭಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ದಕ್ಷಿಣ ಕನ್ನಡದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ವಿಜಯ ಸಾಮ್ರಾಟ್ ಪುತ್ತೂರಿನ ಸಂಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಯು.ಆರ್. ಪಾರ್ಪಟೀಸ್ ಸಂಸ್ಥಾಪಕ ಉಜ್ವಲ್ ಪ್ರಭು, ಪುತ್ತೂರು ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸಿಜ್ಲರ್ಸ್ ಗ್ರೂಪ್ ಮಾಲೀಕ ಪ್ರಸನ್ನ ಕುಮಾರ್ ಶೆಟ್ಟಿ, ಹಿಂದೂ ಮುಖಂಡ ಮುರಳಿ ಕೃಷ್ಣ ಹಸಂತಡ್ಕ, ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಚನಿಲ ಹಾಗೂ ಹಿಂದೂಸ್ಥಾನ್ ಪ್ರೊಮೋಟರ್ಸ್ ಆ್ಯಂಡ್ ಡೆವಲಪರ್ಸ್ ಪ್ರೈ.ಲಿ.ಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಇಬ್ರಾಹಿಂ ಮೊಹಿದೀನ್ ಅವರು ಭಾಗವಹಿಸಲಿದ್ದಾರೆ.

Ad Widget

Ad Widget <> Ad Widget

ಮಳಿಗೆಯ ಮಾಲೀಕ ರಮೇಶ್ ಅವರು ಗ್ರಾಹಕರು, ಹಿತೈಷಿಗಳು ಹಾಗೂ ಸಾರ್ವಜನಿಕರನ್ನು ಶುಭಾರಂಭ ಸಮಾರಂಭಕ್ಕೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.



Ad Widget

ಹೆಚ್ಚಿನ ಮಾಹಿತಿಗಾಗಿ 63631 66808 / 95352 47400 ಅನ್ನು ಸಂರ್ಪಕಿಸಬಹುದು.

Continue Reading

ಕಾರ್ಯಕ್ರಮಗಳು

Puttur-ಪುತ್ತೂರು: ಅ.16ರಂದು ಪ್ರವೀಣ್ ಕ್ಯಾಪಿಟಲ್‌ನ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ

Published

on



Ad Widget

Ad Widget

Ad Widget

Ad Widget

ಹಣಕಾಸು ಸೇವಾ ಕ್ಷೇತ್ರದಲ್ಲಿ 1994ರಿಂದ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಕ್ಯಾಪಿಟಲ್ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ ಅ.16, ಶುಕ್ರವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಶ್ರೀ ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ಹಣಕಾಸು ಸೇವಾ ಕ್ಷೇತ್ರದಲ್ಲಿ 1994ರಿಂದ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಕ್ಯಾಪಿಟಲ್ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ ಅ.16, ಶುಕ್ರವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

Ad Widget

Ad Widget

Ad Widget alt="Ad Widget"/>

Ad Widget

ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಶ್ರೀ ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ.

Ad Widget

Ad Widget <> Ad Widget

ಮುಖ್ಯ ಅತಿಥಿಗಳಾಗಿ ಪುತ್ತೂರಿನ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನ ಅಧ್ಯಕ್ಷ ಜಿ.ಎಲ್. ಬಲರಾಮ ಆಚಾರ್ಯ ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಭಾಗವಹಿಸಲಿದ್ದಾರೆ.



Ad Widget

1994ರಲ್ಲಿ ಆರಂಭಗೊಂಡಿರುವ ಪ್ರಾವೀಣ್ ಕ್ಯಾಪಿಟಲ್, ಗ್ರಾಹಕರ ಬೆಂಬಲ ಮತ್ತು ವಿಶ್ವಾಸದೊಂದಿಗೆ ತನ್ನ ಸೇವೆಯನ್ನು ಮುಂದುವರಿಸುತ್ತಿದೆ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಪ್ರಧಾನ ಕಚೇರಿಯನ್ನು ನವೀಕರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

Ad Widget

Ad Widget

ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸತ್ಯಶಂಕರ್, ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮೋಘ್ ಜೆ. ರೈ ಅವರು ಕಾರ್ಯಕ್ರಮಕ್ಕೆ ಗಣ್ಯರು, ಗ್ರಾಹಕರು ಹಾಗೂ ಹಿತೈಷಿಗಳನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading