ಕಾರ್ಯಕ್ರಮಗಳು
Puttur-ಪುತ್ತೂರು: ಮುಳಿಯ ಜ್ಯುವೆಲ್ಸ್‌ನಲ್ಲಿ ಆ.30ರಿಂದ ಸೆ.26ರ ತನಕ `ಡೈಮಂಡ್ ಫೆಸ್ಟ್’
ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಕೋರ್ಟ್‌ರಸ್ತೆಯಲ್ಲಿರುವ ಮುಳಿಯ ಜ್ಯುವೆಲ್ಸ್‌ನಲ್ಲಿ ಆ.30ರಿಂದ ಸೆ.26ರ ತನಕ ನಡೆಯಲಿರುವ `ಡೈಮಂಡ್ ಫೆಸ್ಟ್’ನ ಎರಡನೇ ಆವೃತ್ತಿಯು ಸೆ.2ರಂದು ಅಧಿಕೃತವಾಗಿ ಉದ್ಘಾಟನೆಗೊಂಡಿತು.
ಪುತ್ತೂರು:ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಕೋರ್ಟ್‌ರಸ್ತೆಯಲ್ಲಿರುವ ಮುಳಿಯ ಜ್ಯುವೆಲ್ಸ್‌ನಲ್ಲಿ ಆ.30ರಿಂದ ಸೆ.26ರ ತನಕ ನಡೆಯಲಿರುವ `ಡೈಮಂಡ್ ಫೆಸ್ಟ್’ನ ಎರಡನೇ ಆವೃತ್ತಿಯು ಸೆ.2ರಂದು ಅಧಿಕೃತವಾಗಿ ಉದ್ಘಾಟನೆಗೊಂಡಿತು.

ಶಾಸಕ ಅಶೋಕ್ ಕುಮಾರ್ ರೈಯವರ ಪತ್ನಿ ಸುಮಾ ಅಶೋಕ್ ಡೈಮಂಡ್ ಫೆಸ್ಟ್‌ನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮುಳಿಯದ ಡೈಮಂಡ್ ಫೆಸ್ಟ್‌ನಲ್ಲಿ ಕನಿಷ್ಠ ಬೆಲೆಯಲ್ಲಿ ಖರೀದಿಸಬಹುದಾದ ಆಭರಣಗಳಿದ್ದು ಜನ ಸಾಮಾನ್ಯರಿಗೂ ಖರಿದಿಸಬಹುದು.
ಉತ್ತಮ ವೆರಾಟಿ, ಆಕರ್ಷಕ ವಿನ್ಯಾಸಗಳ ಆಭರಣಗಳು ಉತ್ತಮ ಬೆಲೆಯಲ್ಲಿ ಆಕರ್ಷಕ ಕೊಡುಗೆಗಳೊಂದಿಗೆ ಗ್ರಾಹಕರು ಖರೀದಿಸಬಹುದು. ಮುಳಿಯ ಜ್ಯುವೆಲ್ಸ್ ಕರ್ನಾಟಕದ ವಿವಿಧ ಕಡೆಗಳಲ್ಲಿ ಮಳಿಗೆಗಳನ್ನು ಹೊಂದಿದ್ದು ಇನ್ನು ಮುಂದೆ ಹೊರ ರಾಜ್ಯಗಳಲ್ಲಿಯೂ ಮಳಿಗೆಗಳನ್ನು ತೆರೆಯುವಂತಾಗಲಿ ಎಂದರು.
ಮುಖ್ಯ ಅತಿಥಿ ಡ್ಯಾಶ್ ಮಾರ್ಕೆಟಿಂಗ್‌ನ ಮುಖ್ಯಸ್ಥೆ ನಳಿನಿ ಶೆಟ್ಟಿ ಮಾತನಾಡಿ, ಮುಳಿಯ ಜ್ಯುವೆಲ್ಸ್‌ನಲ್ಲಿ ಗುಣಮಟ್ಟದ ಆಭರಣಗಳೊಂದಿಗೆ ಗ್ರಾಹಕರಿಗೆ ಮನಮುಟ್ಟುವಂತ ಆಕರ್ಷಕ ವಿನ್ಯಾಸಗಳ ಆಯ್ಕೆಗಳಿವೆ ಎಂದರು.

ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಇಪ್ಪತ್ತೈದು ವರ್ಷಗಳಿಂದ ಚಿನ್ನಾಭರಗಳಲ್ಲಿ ಹೊಸತನಗಳನ್ನು ಪರಿಚಯಿಸಿರುವ ಮುಳಿಯ ಜ್ಯುವೆಲ್ಸ್ ಗ್ರಾಹಕರಿಗೆ ಕೈಗೆಟಕುವ ದರದ ಆಭರಣಗಳು ಲಭ್ಯವಿದೆ. ರೂ.7 ಸಾವಿರದಿಂದ ಪ್ರಾರಂಭಿಸಿದ ವಜ್ರದ ಆಭರಣಗಳು ಫೆಸ್ಟ್‌ನಲ್ಲಿ ಲಭ್ಯವಿದೆ. ಮುಂಬಯಿಂದ ನಾವೇ ಖರೀದಿಸಿದ ಗ್ರಾಹಕರ ಮನಮುಟ್ಟುವಂತ ವೆರಾಟಿ, ವಿನ್ಯಾಸದ ವಜ್ರಗಳು ಆಭರಣಗಳು ಫೆಸ್ಟ್‌ನಲ್ಲಿ ಲಭ್ಯವಿದೆ ಎಂದರು.
ಡೈಮಂಡ್ ಫೆಸ್ಟ್‌ನ ಎರಡನೇ ಆವೃತ್ತಿಯ ಪ್ರಥಮ ಗ್ರಾಹಕಿ ನಿವೃತ್ತ ಶಿಕ್ಷಕಿ ಸುನೀತಾ ಕಾವಳಮುಡೂರುರವರಿಗೆ ಕಾರ್ಯಕ್ರಮದಲ್ಲಿ ವಜ್ರದ ಆಭರಣವನ್ನು ಹಸ್ತಾಂತರಿಸಲಾಯಿತು.
ಮುಳಿಯ ಜ್ಯುವೆಲ್ಸ್‌ನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಶಿವಕೃಷ್ಣಮೂರ್ತಿ, ಪ್ರಬಂಧಕ ರಾಘವೇಂದ್ರ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರಿಣಾಕ್ಷಿ ಪ್ರಾರ್ಥಿಸಿದರು. ಕಾರ್ಯನಿರ್ವಹಕ ಅಧಿಕಾರಿ ಯತೀಶ್ ಸ್ವಾಗತಿಸಿದರು. ಫ್ಲೋರ್ ಮ್ಯಾನೇಜರ್‌ಗಳಾದ ಪ್ರವೀಣ್ ಕಾರ್ಯಕ್ರಮ ನಿರೂಪಿಸಿ, ಆನಂದ ಕುಲಾಲ್ ವಂದಿಸಿದರು.
ಕಾರ್ಯಕ್ರಮಗಳು
Saptaka Foundation-ಬೆಂಗಳೂರಿನ ಸಪ್ತಕ ಸಂಸ್ಥೆ ವತಿಯಿಂದ ವಿಟ್ಲ ಬಸ್ ನಿಲ್ದಾಣದಲ್ಲಿ ಕುಡಿಯುವ ತಂಪು ನೀರಿನ ವ್ಯವಸ್ಥೆ ಉದ್ಘಾಟನೆ; ಅಳಿಕೆ ಸತ್ಯಸಾಯಿ ಆಸ್ಪತ್ರೆಗೆ ನೀರಿನ ಡಿಸ್ಪೆನ್ಸರ್ ಕೊಡುಗೆ
ಬೆಂಗಳೂರಿನ ಸಪ್ತಕ ಸಂಸ್ಥೆಯು ವಿಟ್ಲದಲ್ಲಿ ಇತ್ತೀಚೆಗೆ ತನ್ನ ಶಾಖೆಯನ್ನು ತೆರೆದ ಸುರತ್ಕಲ್‌ನ ಚಿರಂತನ ಚಾರಿಟೇಬಲ್ ಟ್ರಸ್ಟ್ ಮೂಲಕ ಪುತ್ತೂರು ರಸ್ತೆಯಲ್ಲಿರುವ ವಿಟ್ಲ ಪಟ್ಟಣ ಪಂಚಾಯತ್‌ನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ತಂಪು ನೀರಿನ ವ್ಯವಸ್ಥೆಯನ್ನು ಕಲ್ಪಿಸಿದೆ.

ವಿಟ್ಲ: ಬೆಂಗಳೂರಿನ ಸಪ್ತಕ ಸಂಸ್ಥೆಯು ವಿಟ್ಲದಲ್ಲಿ ಇತ್ತೀಚೆಗೆ ತನ್ನ ಶಾಖೆಯನ್ನು ತೆರೆದ ಸುರತ್ಕಲ್‌ನ ಚಿರಂತನ ಚಾರಿಟೇಬಲ್ ಟ್ರಸ್ಟ್ ಮೂಲಕ ಪುತ್ತೂರು ರಸ್ತೆಯಲ್ಲಿರುವ ವಿಟ್ಲ ಪಟ್ಟಣ ಪಂಚಾಯತ್‌ನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ತಂಪು ನೀರಿನ ವ್ಯವಸ್ಥೆಯನ್ನು ಕಲ್ಪಿಸಿದೆ.
ನೂತನ ವ್ಯವಸ್ಥೆಯನ್ನು ಸಪ್ತಕ ಸಂಸ್ಥೆಯ ಜಿ.ಎಸ್. ಹೆಗಡೆ ಅವರು ಉದ್ಘಾಟಿಸಿದರು. ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಹಾಗೂ ವಿಟ್ಲದ ಸಾರ್ವಜನಿಕರಿಗೆ ಈ ವ್ಯವಸ್ಥೆಯಿಂದ ಅನುಕೂಲವಾಗಲಿದೆ.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ರಮಾನಾಥ್ ವಿಟ್ಲ, ರಾಮದಾಸ್ ಶೆಣೈ, ರವೀಶ್ ವಿಟ್ಲ, ಅಶ್ರಫ್, ಚಿರಂತನದ ಭಾರವಿ ದೇರಾಜೆ ಹಾಗೂ ಶಿವಾನಂದ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಳಿಕೆಯ ಸತ್ಯಸಾಯಿ ಆಸ್ಪತ್ರೆಗೆ ನೀರಿನ ಡಿಸ್ಪೆನ್ಸರ್ ಕೊಡುಗೆ
ಇದೇ ವೇಳೆ, ಬೆಂಗಳೂರಿನ ಸಪ್ತಕ ಸಂಸ್ಥೆಯ ವತಿಯಿಂದ ಚಿರಂತನ ಚಾರಿಟೇಬಲ್ ಟ್ರಸ್ಟ್ ಮೂಲಕ ಅಳಿಕೆಯ ಶ್ರೀ ಸತ್ಯ ಸಾಯಿ ಆಸ್ಪತ್ರೆಗೆ ಬಿಸಿ ನೀರು ಹಾಗೂ ತಂಪು ನೀರಿನ ಡಿಸ್ಪೆನ್ಸರ್‌ಗಳನ್ನು ಒದಗಿಸಲಾಗಿದೆ.
ಮಂಗಳೂರು
Mangalore Dasara-ಮಂಗಳೂರು ದಸರಾಕ್ಕೆ ಚಾಲನೆ: ಸಿಎಂ ಆಗಮನ ಮುಂದೂಡಿಕೆ
ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವಕ್ಕೆ ರವಿವಾರ ವಿಧ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ದರ್ಬಾರು ಮಂಟಪದಲ್ಲಿ ವಿವಿಧ ದೇವಿ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಮೂಲಕ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಂಗಳೂರು: ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವಕ್ಕೆ ರವಿವಾರ ವಿಧ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ದರ್ಬಾರು ಮಂಟಪದಲ್ಲಿ ವಿವಿಧ ದೇವಿ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಮೂಲಕ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಬೆಳಗ್ಗೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ ಹಾಗೂ ನವಕಲಶಾಭಿಷೇಕ ನೆರವೇರಿತು. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಶ್ರೀ ಮಹಾಗಣಪತಿ, ಶ್ರೀ ಶಾರದಾ ಮಾತೆ, ಆದಿಶಕ್ತಿ ಹಾಗೂ ಸ್ಕಂದಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ ಮತ್ತು ಕೂಷ್ಮಾಂಡಿನಿ ದೇವಿಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.
ರವಿವಾರದ ರಜೆಯ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯರ ವಿಗ್ರಹಗಳ ಪ್ರತಿಷ್ಠಾಪನೆಯ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.
ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹಾಗೂ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕ್ಷೇತ್ರಾಡಳಿತ ಮಂಡಳಿಯ ಟ್ರಸ್ಟಿಗಳು, ಕ್ಷೇತ್ರ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಬಾರಿ ಮಹಿಳಾ ದಸರಾ ವಿಶೇಷ ಆಕರ್ಷಣೆ
ಕ್ಷೇತ್ರದ ಖಜಾಂಚಿ ಪದ್ಮರಾಜ್ ಆರ್. ಪೂಜಾರಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಸಮಿತಿಯ ಸಹಯೋಗದೊಂದಿಗೆ ಈ ಬಾರಿಯ ಮಂಗಳೂರು ದಸರಾ ನಡೆಯುತ್ತಿದೆ ಎಂದು ತಿಳಿಸಿದರು.
ಕಳೆದ ವರ್ಷ ಆರಂಭಿಸಿದ್ದ ಮಕ್ಕಳ ದಸರಾ ಮತ್ತು ಕಿನ್ನಿಪಿಲಿ ಕಾರ್ಯಕ್ರಮಗಳನ್ನು ಈ ಬಾರಿಯೂ ಮುಂದುವರಿಸಲಾಗುವುದು. ಇದೇ ಮೊದಲ ಬಾರಿಗೆ ಮಹಿಳಾ ದಸರಾ ಆಯೋಜಿಸಲಾಗುತ್ತಿದ್ದು, ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಭಕ್ತರ ಬೇಡಿಕೆಯಂತೆ ಅಕ್ಟೋಬರ್ 20ರಂದು ಅಕ್ಷರಾಭ್ಯಾಸ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಈ ಬಾರಿ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಶೇ. 25ರಿಂದ 30ರಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ವ್ಯವಸ್ಥಿತ ನಿರ್ವಹಣೆಗಾಗಿ ಒಂದು ಸಾವಿರಕ್ಕೂ ಹೆಚ್ಚು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಆಗಮನ ಮುಂದೂಡಿಕೆ
ಸೋಮವಾರ ಸಂಜೆ 6.30ಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳೂರು ದಸರಾ ಮಹೋತ್ಸವವನ್ನು ಉದ್ಘಾಟಿಸಬೇಕಿತ್ತು. ಆದರೆ ತುರ್ತು ಕಾರಣದಿಂದ ದೆಹಲಿಗೆ ತೆರಳಬೇಕಾದ ಹಿನ್ನೆಲೆಯಲ್ಲಿ ಅವರ ಪ್ರವಾಸ ರದ್ದಾಗಿದೆ. ಅಕ್ಟೋಬರ್ 15 ಅಥವಾ 16ರಂದು ಮುಖ್ಯಮಂತ್ರಿ ಕ್ಷೇತ್ರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಪದ್ಮರಾಜ್ ಆರ್. ಪೂಜಾರಿ ತಿಳಿಸಿದರು.
ಮಂಗಳೂರು
Mangaluru-ಬೆಳೆ ವಿಮೆ ಅನ್ಯಾಯ ಆರೋಪ: ಅ.9ರಂದು ಮಂಗಳೂರಿನಲ್ಲಿ ರೈತರ ಬೃಹತ್ ಹಕ್ಕೊತ್ತಾಯ | ಸಹಕಾರ ಭಾರತಿ – ಬಿಜೆಪಿ ಬೆಂಬಲ
ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಹಕಾರ ಭಾರತಿ ಹಾಗೂ ಬಿಜೆಪಿ ನೇತೃತ್ವದಲ್ಲಿ ಅ.9ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಟೌನ್‌ಹಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು: ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಹಕಾರ ಭಾರತಿ ಹಾಗೂ ಬಿಜೆಪಿ ನೇತೃತ್ವದಲ್ಲಿ ಅ.9ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ಟೌನ್‌ಹಾಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಬೆಳೆ ವಿಮೆ ಯೋಜನೆಯಡಿ ರೈತರಿಗೆ ಸೂಕ್ತ ಪರಿಹಾರ ದೊರೆಯದಿರುವುದು ಸೇರಿದಂತೆ ವಿಮೆ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಭೆಯಲ್ಲಿ ಧ್ವನಿ ಎತ್ತಲಾಗುತ್ತದೆ.
ಬೆಳೆ ವಿಮೆ ಯೋಜನೆಯಡಿ ರೈತರಿಗೆ ನ್ಯಾಯಯುತ ಪರಿಹಾರ ದೊರೆಯಬೇಕು ಹಾಗೂ ವಿಮೆ ಪಾವತಿಯಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರು ಸೇರಿದಂತೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಳೆ ವಿಮೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಹಕ್ಕೊತ್ತಾಯ ಮಂಡಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
-
ಮಂಗಳೂರು22 hours agoMangalore-ಮಂಗಳೂರು: ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ
-
ಬಿಗ್ ನ್ಯೂಸ್23 hours agoGolithottu-ಗೋಳಿತ್ತೊಟ್ಟು: ತೋಡಿನ ನೀರಿನಲ್ಲಿ ಮೀನುಗಳ ಮಾರಣಹೋಮ; ತನಿಖೆಗೆ ಸ್ಥಳೀಯರ ಆಗ್ರಹ
-
Uncategorized19 hours ago
Digitel Arrest ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಪುತ್ತೂರಿನ ವ್ಯಕ್ತಿಗೆ ₹1.31 ಕೋಟಿ ವಂಚನೆ
-
ನಿಧನ ವಾರ್ತೆ5 hours agoSullia-Big Breaking: ಸುಳ್ಯ: ವಿದ್ಯುತ್ ಶಾಕ್ಗೆ ಇಬ್ಬರು ಯುವಕರು ಬಲಿ; ಬಾಲಕನಿಗೆ ಗಾಯ
-
ಮಂಗಳೂರು23 hours agoABVP protest-ಮಂಗಳೂರಿನ ಆಗ್ನೆಸ್ ಕಾಲೇಜಿನಲ್ಲಿ ದಸರಾ ರಜೆಯಲ್ಲೂ ಪರೀಕ್ಷೆ; ಎಬಿವಿಪಿ ಪ್ರತಿಭಟನೆ ವೇಳೆ ನೂಕಾಟ; ವಿದ್ಯಾರ್ಥಿನಿಯರನ್ನು ತಳ್ಳಿದ ಪೊಲೀಸರ ವಿರುದ್ಧ ಆಕ್ರೋಶ
-
ಸ್ಥಳೀಯ5 hours agoSatish Patri-ಚಿಕ್ಕಮಗಳೂರು: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಆರೋಪ; ತಲೆಮರೆಸಿಕೊಂಡಿದ್ದ ಅರ್ಚಕ ಸತೀಶ್ ಪಾತ್ರಿ ಅರೆಸ್ಟ್..!
-
ಕ್ರೀಡೆ22 hours agoMCC:ಎಂಸಿಸಿಯಿಂದ ಕ್ರಿಕೆಟ್ ನಿಯಮಗಳ ಪರಿಷ್ಕರಣೆ: ಅ.1ರಿಂದ ಹೊಸ ಬದಲಾವಣೆಗಳು ಜಾರಿ
-
ಸ್ಥಳೀಯ4 hours agoArrested-1,000 ಅಡಿ ಆಳದ ಪ್ರಪಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶವ ಪತ್ತೆ; ಆತ್ಮಹತ್ಯೆ ಕತೆ ಕಟ್ಟಿದ ಪ್ರಿಯಕರ ಅರೆಸ್ಟ್..!




















