Connect with us

ಪುತ್ತೂರು

Praveen Nettar | ಪ್ರವೀಣ್ ನೆಟ್ಟಾರ್ ಕನಸಿನ ಮನೆ ಎ.27 ರಂದು ಗೃಹಪ್ರವೇಶ – ಪುತ್ಥಳಿ ಅನಾವರಣ: ಮನೆ ಗೃಹಪ್ರವೇಶದ ಮೊದಲು ಪ್ರಮುಖ ಆರೋಪಿಗಳ ಬಂಧನವಾಗಬೇಕು ಹಾಗೂ ಮಗನ ಕೊಂದ ಆರೋಪಿಗೆ ಚುನಾವಣಾ ಸ್ಪರ್ಧೆಗೆ ಅವಕಾಶ ಕೊಡಬಾರದು- ಪ್ರವೀಣ್ ತಾಯಿ

Published

on

Ad Widget

Ad Widget

Ad Widget

Ad Widget

ಪುತ್ತೂರು: ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು (Praveen Nettar) ಹತ್ಯೆಗೂ ಮೊದಲು ಸ್ವಂತ ಮನೆಯ ಬಗ್ಗೆ ಕಂಡ ಕನಸು ನನಸಾಗುವ ದಿನ ಹತ್ತಿರವಾಗಿದ್ದು, ನೂತನ ಮನೆಯ ಗೃಹ ಪ್ರವೇಶ ಶ್ರೀ ಗಣಪತಿ ಹವನ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಎ.27ರಂದು 8.40ರ ವೃಷಭ ಲಗ್ನದಲ್ಲಿ ನಡೆಯಲಿದ್ದು, ಅದೇ ದಿನ ರಾತ್ರಿ
7 ಗಂಟೆಗೆ ಪ್ರವೀಣ್ ಇಚ್ಛೆಯಂತೆ ಶ್ರೀ ಕಲ್ಲುರ್ಟಿ ದೈವದ ನೇಮೋತ್ಸವವೂ ನಡೆಯಲಿದೆ. ಮಗನ ಕನಸಿನಂತೆ ಬಿಜೆಪಿ ಮನೆ ನಿರ್ಮಿಸಿ ಕೊಡುತ್ತಿದ್ದರೂ , ಮಗನ ಕೊಲೆ ಆರೋಪಿ ಚುನಾವಣೆಗೆ ನಿಲ್ಲುತ್ತಿರುವುದು ಆ ಕುಟುಂಬಕ್ಕೆ ಸುತರಾಂ ಇಷ್ಟವಿಲ್ಲ. ಆರೋಪಿಯ ಪೋಟೋ ಕ್ಷೇತ್ರದಲ್ಲಿ ರಾರಾಜಿಸುತ್ತಿರುವುದು ಕುಟುಂಬ ಸದಸ್ಯರಿಗೆ ನೋವು , ಭಯ , ಹತಾಶೆ ಉಂಟುಮಾಡುತ್ತಿದೆ. ದೇಶದಲ್ಲಿ ಈ ರೀತಿಯ ಕಾನೂನು ಚಾಲ್ತಿಯಲ್ಲಿದೆಯೇ ಎಂದು ಅಲ್ಲಿಗೆ ತೆರಳಿದ ಪತ್ರಕರ್ತರಲ್ಲಿ ಕೇಳುತ್ತಿದ್ದಾರೆ .

Ad Widget

Ad Widget

Ad Widget

Ad Widget

ಜು.26 ರಂದು ರಾತ್ರಿ ಬೆಳ್ಳಾರೆಯ ಅವರ ಚಿಕನ್ ಸೆಂಟರ್ ಮುಂಭಾಗ ಪ್ರವೀಣ್ ನೆಟ್ಟಾರು ಕಡಿದು ಹತ್ಯೆ ಮಾಡಲಾಗಿದ್ದು, ಅದಾದ ಬಳಿಕ ಹಲವರು ಪ್ರವೀಣ್ ಆಸೆಯನ್ನು ನೆರವೇರಿಸುವ ಉದ್ದೇಶದಿಂದ ಮನೆ ನಿರ್ಮಾಣಕ್ಕೆ ಸಹಕಾರ ನೀಡುವ ವಾಗ್ದಾನ ನೀಡಿದ್ದರು. ಅದರಂತೆ ನ.2ರಂದು ಮನೆನಿರ್ಮಾಣಕ್ಕೆ ಕೆಸರುಕಲ್ಲು ಹಾಕಲಾಗಿತ್ತು. ಅದಾದ ಬಳಿಕ ಗುತ್ತಿಗೆದಾರ ಮುಗೆರೋಡಿ ಕನ್ಟ್ರಕ್ಷನ್ ಕೆಲಸವನ್ನು ತ್ವರಿತವಾಗಿ ಮಾಡಿದ್ದು, ಶೇ.90 ಕಾಮಗಾರಿಯನ್ನು ಮುಗಿಸಿದೆ. ಎ.27 ರ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಭರವಸೆಯನ್ನು ಸೈಟ್ ಇಂಜಿನಿಯರ್ ನೀಡಿದ್ದಾರೆ.

Ad Widget

Ad Widget alt="Ad Widget"/>

Ad Widget

ಮನೆಯಲ್ಲಿ ದೇವರ ಕೋಣೆ, ದೈವದ ಕೋಣೆ, ಲೀವಿಂಗ್ ಹಾಲ್, ಡೈನಿಂಗ್ ಹಾಲ್, ಎರಡು ಅಡಿಗೆ ಮನೆ, ನಾಲ್ಕು ಬೆಡ್ ರೂಮ್, ನಾಲ್ಕು ಬಾತ್ ರೂಮ್, ಸಿಟೌಟ್, ಕಾರು ಪಾರ್ಕಿಂಗ್ ಒಳಗೊಂಡಿರುವ ಮನೆ ಸುಮಾರು 2800 ಚದರ ಅಡಿಯನ್ನು ಒಳಗೊಂಡಿದೆ. ಅಂದಾಜು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.

Ad Widget

Ad Widget <> Ad Widget

ಈಗಾಗಲೇ ಪಿ.ಒ.ಪಿ. ಹಾಗೂ ಟೈಲ್ಸ್ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು, ಅಂಗಳ ಹಾಗೂ ರಸ್ತೆಗೆ ಇಂಟರ್ ಲಾಕ್ ಹಾಕುವ, ಗೇಟ್ ನಿರ್ಮಾಣದ ಕಾರ್ಯ ನಡೆಯಬೇಕಾಗಿದೆ.

ಮಗನನ್ನು ಕೊಂದವನಿಗೆ ಸರ್ಕಾರ ಅವಕಾಶ ನೀಡಬೇಡಿ..!
ಪ್ರವೀಣ್ ಹತ್ಯೆಯಲ್ಲಿ ಬಂಧನವಾಗಿ ಜೈಲಿನಲ್ಲಿರುವ ಆರೋಪಿಯೊಬ್ಬನು ಚುನಾವಣೆಗೆ ನಿಲ್ಲಲು ಎಸ್.ಡಿ.ಪಿ.ಐ. ಟಿಕೇಟ್ ನೀಡಿದ್ದು, ಈ ಬಗ್ಗೆ ಪುತ್ತೂರು ಕ್ಷೇತ್ರದಲ್ಲಿ ಕಟೌಟ್ ಹಾಕಲಾಗಿದೆ. ಕೊಲೆ ಆರೋಪಿಯ ಕಟೌಟ್ ಹಾಕಲು ಅನುಮತಿ ನೀಡಿದ ಸರ್ಕಾರದ ಕ್ರಮ ಸರಿಯಾ ಎಂದು ಪ್ರಶ್ನಿಸಿದ ಪ್ರವೀಣ್ ತಾಯಿ ರತ್ನಾವತಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಲೇ ಬಾರದು ಎಂದು ಸರ್ಕಾರವನ್ನು ಎರಡು ಕೈಮುಗಿದು ಬೇಡಿಕೊಂಡರು. ಇದಕ್ಕೆ ಪ್ರವೀಣ್ ಸಹೋದರಿ ಹಾಗೂ ತಂದೆ ದನಿಗೂಡಿಸಿದರು.

Ad Widget

Ad Widget

ಪ್ರವೀಣ್ ಪುತ್ತಳಿ ಅನಾವರಣ:
ಗೃಹಪ್ರವೇಶದ ದಿನದಂದು ಬೆಂಗಳೂರಿನಿಂದ ಪ್ರವೀಣ್ ಅರ್ಧ ದೇಹಾಕೃತಿಯ ಶಿಲಾಮಯ ಪುತ್ತಳಿಯ ಆಗಮಿಸಲಿದೆ. ಪ್ರವೀಣ್ ನೆಟ್ಟಾರು ಅವರ ಅಂತ್ಯ ಕ್ರಿಯೆ ನಡೆದ ಜಾಗದಲ್ಲಿ ಇರುವ ಸಮಾದಿಯ ಮಧ್ಯದಲ್ಲಿ ಈ ಪುತ್ತಳಿಯ ಅನಾವರಣ ನಡೆಯಲಿದೆ.

ಗೃಹಪ್ರವೇಶದಂದು ಬೆಳಗ್ಗೆ 11 ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ಕಣ್ಣಿಗೆ ಚಿಕಿತ್ಸೆ:
ಸದ್ಯ ಸಂಬಂಧಿಯೊಬ್ಬರ ಬಾಡಿಗೆ ಮನೆಯಲ್ಲಿ ಪತ್ನಿ, ಪುತ್ರಿ, ಮೊಮ್ಮಕ್ಕಳ ಜತೆಗೆ ವಾಸವಾಗಿರುವ ಶೇಖರ್ ಪೂಜಾರಿ ಅವರಿಗೆ ಮಗನ ಸಾವಿನ ಬಳಿಕ ಆರೋಗ್ಯ ಏರುಪೇರಾಗಿತ್ತು. ಸದ್ಯ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿದ್ದು, ಮಂಗಳೂರಿನಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಕಣ್ಣಿನ ಶಸ್ತ್ರಚಿಕಿತ್ಸೆ ಆದರೂ ವಿಶ್ರಾಂತಿ ಪಡೆದುಕೊಳ್ಳಬೇಕಾದ ಹಿರಿಜೀವ ಮನೆ ತೆರೆಗೆ ಸೇರಿ ಅಗತ್ಯ ಕೆಲಸಗಳಿಗೆ ತಾವೇ ಪೇಟೆಗೆ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಎಲ್ಲರೊಂದಿಗೆ ಆತ್ಮೀಯವಾಗಿದ್ದ ಪ್ರವೀಣ್ ಕೊಲೆಗೆ ನಿಜ ಕಾರಣ ಏನೆಂಬುದನ್ನು ಸರ್ಕಾರ ಬಹಿರಂಗ ಪಡಿಸಿಲ್ಲ. ಪ್ರಮುಖ ಆರೋಪಿಗಳ ಬಂಧನವೂ ಆಗಿಲ್ಲ. ಗೃಹ ಪ್ರವೇಶಕ್ಕೆ ಮೊದಲು ಸರ್ಕಾರ ಆರೋಪಿಗಳನ್ನು ಬಂಧಿಸಬೇಕು. ಆ ಮೂಲಕ ಪ್ರವೀಣ್ ಆತ್ಮಕ್ಕೆ ಶಾಂತಿ ದೊರಕಿಸಿಕೊಡಬೇಕು. ಮಗನನ್ನು ಕಡಿದು ಕೊಂದವರು ಚುನಾವಣೆಯಲ್ಲಿ ಗೆದ್ದರೆ, ಉಳಿದವರಿಗೆ ಅವರು ಇದನ್ನೇ ಮಾಡಬಹುದು. ಮಗನನ್ನು ಕೊಂದವ ಊರು ದೇಶವನ್ನು ಉಳಿಸಲು ಸಾಧ್ಯವಾ? ಅವನು ಚುನಾವಣೆಗೆ ನಿಲ್ಲಿಸುವುದು ನ್ಯಾಯಯುತವೇ..? ಇದು ಕಾನೂನು ಸರಿಯಾ..? ಎಂದು ಸರ್ಕಾರವನ್ನು ಪ್ರವೀಣ್ ನೆಟ್ಟಾರು ತಾಯಿ ರತ್ನಾವತಿ ಪ್ರಶ್ನಿಸಿದರು.

ಸದ್ಯ ನಾನು ಆರ್ಥಿಕವಾಗಿ ಸಾಕಷ್ಟು ಅನುಕೂಲವಾಗಿಲ್ಲ, ಮುಂದಿನ ದಿನದಲ್ಲಿ ಉತ್ತಮ ಮನೆ ನಿರ್ಮಾಣ ಮಾಡುವ ಎಂಬ ಮಾತನ್ನು ಪ್ರವೀಣ್ ಹೇಳುತ್ತಿದ್ದ. ಯಾವುದೇ ಧರ್ಮ ಭೇದ ಭಾವ ಇಲ್ಲದೆ ಎಲ್ಲರ ಜತೆಗೆ ಬೆರೆಯುತ್ತಿದ್ದ ಪ್ರವೀಣ್ ಹತ್ಯೆಯನ್ನು ಮಾಡುವ ಮೂಲಕ ಮನೆಯ ಆಧಾರ ಸ್ತಂಭವನ್ನು ಕಿತ್ತುಕೊಳ್ಳಲಾಗಿದೆ. ಪ್ರವೀಣ್ ನಂತ ಅಮಾಯಕರನ್ನು ಹತ್ಯೆ ಮಾಡುವ ಹಂತಕರನ್ನು ಸರ್ಕಾರ ಕೊಲ್ಲುವ ಮೂಲಕ ನ್ಯಾಯ ಒದಗಿಸಬೇಕು. ಎಲ್ಲರ ಭಾಗವಹಿಸುವಿಕೆಯೊಂದಿಗೆ ಸಂತೋಷದಿಂದ ಎ.27 ರಂದು ಗೃಹಪ್ರವೇಶ ನಡೆಯಲಿದ್ದೇವೆ ಎಂದು ಪ್ರವೀಣ್ ನೆಟ್ಟಾರು ತಂದೆ ಶೇಖರ್ ಪೂಜಾರಿ ಮಾಧ್ಯಮಗಳಿಗೆ ಹೇಳಿದರು.

Ad Widget
Click to comment

Leave a Reply

ಶಿಕ್ಷಣ

Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮವರ್ಷದ ವಿದ್ಯಾರ್ಥಿಗಳ ಹೆತ್ತವರ ಮತ್ತು ಪೋಷಕರ ಸಭೆ

Published

on

Ad Widget

Ad Widget

Ad Widget

Ad Widget

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ವಿಭಾಗ ಮತ್ತು ಪೇರೆಂಟ್ ರಿಲೇಶನ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಸಾವರ್ಕರ್ ಸಭಾಭವನದಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ವಿದ್ಯಾರ್ಥಿಗಳ ಹೆತ್ತವರ ಮತ್ತು ಪೋಷಕರ ಸಮಾಲೋಚನ ಸಭೆಯಲ್ಲಿ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ ಮಾತನಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಕಾಲೇಜಿನ ಅತ್ಯುತ್ತಮ ಶೈಕ್ಷಣಿಕ ವಾತಾವರಣ, ಉಪನ್ಯಾಸಕರ ನಿರಂತರ ಮಾರ್ಗದರ್ಶನದ ಹೊರತಾಗಿ, ಹೆತ್ತವರೂ ಕೂಡಾ ತಮ್ಮ ಮಕ್ಕಳ ಓದುವ ಹವ್ಯಾಸವನ್ನು ಮತ್ತು ಶೈಕ್ಷಣಿಕ ಅಭಿವೃದ್ದಿಯನ್ನು ಹೆಚ್ಚಿಸಲು ಅವರನ್ನು ಸೂಕ್ತ ರೀತಿಯಲ್ಲಿ ಪ್ರೇರೇಪಿಸಬೇಕು ಎಂದು ಪುತ್ತೂರಿನ
ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ ಹೇಳಿದರು.

Ad Widget

Ad Widget alt="Ad Widget"/>

Ad Widget

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ವಿಭಾಗ ಮತ್ತು ಪೇರೆಂಟ್ ರಿಲೇಶನ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಸಾವರ್ಕರ್
ಸಭಾಭವನದಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ವಿದ್ಯಾರ್ಥಿಗಳ ಹೆತ್ತವರ ಮತ್ತು
ಪೋಷಕರ ಸಮಾಲೋಚನ ಸಭೆಯಲ್ಲಿ ಮಾತನಾಡಿದರು.

Ad Widget

Ad Widget <> Ad Widget

ವಿದ್ಯಾರ್ಥಿಗಳು ತಮ್ಮ ನವೀನ ಅಲೋಚನೆಗಳನ್ನು ಹಂಚಿಕೊಂಡಾಗ ಅದಕ್ಕೆ ಸೂಕ್ತ ಪ್ರೋತ್ಸಾಹವನ್ನು ನೀಡಿ, ಪ್ರಾಯೋಗಿಕ ಯೋಜನೆಗಳನ್ನು ಕೈಗೊಳ್ಳಲು ಅವರಿಗೆ ಸಹಕಾರವನ್ನು ನೀಡಬೇಕು ಇದರಿಂದಾಗಿ ಸಾಮಾಜಿಕವಾಗಿ ಉಪಯೋಗವಾಗುವಂತಹ ಹೊಸ ತಂತ್ರಜ್ಞಾನದ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳ ಉತ್ತಮ ಶಿಸ್ತು ಮತ್ತು ನಡವಳಿಕೆಯ ಬಗ್ಗೆ ಹರ್ಷವ್ಯಕ್ತಪಡಿಸಿದ ಅವರು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ತಮ್ಮ ಮಕ್ಕಳ ಶೈಕ್ಷಣಿಕ ಹಾಗೂ ಸರ್ವತೋಮುಖ ಏಳಿಗೆಗೆ ಕಾಲೇಜಿನ ಜತೆಗೆ ಪೋಷಕರೂ ಸಹಕರಿಸಬೇಕು ಎಂದರು.

Ad Widget

Ad Widget

ಕಾಲೇಜಿನ ದಾಖಲಾತಿ ಮತ್ತು ವಿದ್ಯಾರ್ಥಿಗಳ ನೇಮಕಾತಿಗೆ ಎಲ್ಲರೂ ಸಹಕಾರವನ್ನು ನೀಡುವುದರೊಂದಿಗೆ ಸಂಸ್ಥೆಯ ಬೆಳವಣಿಗೆಯಲ್ಲಿ ಪಾಲುದಾರರಾಗಬೇಕೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ತಿಳಿದುಕೊಳ್ಳುವುದಕ್ಕೆ ಪೋಷಕರು ನಿರಂತರ ಕಾಲೇಜಿನ
ಸಂಪರ್ಕದಲ್ಲಿರಬೇಕು ಎಂದರು.

ಸಂಸ್ಥೆಯ ನೇಮಕಾತಿಯಲ್ಲಿನ ಅಂಕಿ ಅಂಶಗಳು, ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನೀಡಲಾಗುವ ಸಹಕಾರ ಮತ್ತು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳ ಸಾಧನೆಯ
ಬಗ್ಗೆ ಅವರು ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜು ತೆಗೆದುಕೊಳ್ಳುವ ನಿರ್ಧಾರಗಳಿಗೆ ಹೆತ್ತವರ ಸಹಕಾರ ಅಗತ್ಯ ಎಂದರು.

ವಿದ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಮತ್ತು ತಮಗಿದ್ದ
ಸಂಶಯಗಳನ್ನು ನಿವಾರಿಸಿಕೊಂಡರು. ಸಭಾ ಕಾರ್ಯಕ್ರಮದ ಬಳಿಕ ತಮ್ಮ ಮಕ್ಕಳಿಗೆ ಕಲಿಸುವ ಎಲ್ಲಾ
ಪ್ರಾಧ್ಯಾಪಕರ ಜತೆ ಪೋಷಕರು ಸಂವಹನವನ್ನು ನಡೆಸಿದರು.

ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಪ್ರಸನ್ನ ದರ್ಬೆ, ನಿರ್ದೇಶಕರಾದ ಮನೋಜ್ ಕುಮಾರ್, ಸುಜಿತ್ ಕುಮಾರ್, ಕೆ.ಸುಬ್ರಮಣ್ಯ ಭಟ್, ಮೂಲ ವಿಜ್ಞಾನ ವಿಭಾಗದ ಸಂಯೋಜಕಿಯರಾದ ಡಾ.ಶ್ವೇತಾಂಬಿಕಾ.ಪಿ ಹಾಗೂ ಪ್ರೊ.ತೇಜಸ್ವಿನಿ.ಎಲ್.ಪಿ ಮತ್ತು ಪೇರೆಂಟ್ ರಿಲೇಶನ್ ಸೆಲ್‌ನ ಮುಖ್ಯ
ಸಂಯೋಜಕಿ ಶ್ರೀಶರಣ್ಯ.ಯು.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ.ಶ್ವೇತಾಂಬಿಕಾ.ಪಿ ಸ್ವಾಗತಿಸಿದರು. ಪ್ರೊ. ಶ್ರೀಶರಣ್ಯ ಯು.ಆರ್ ಪ್ರಸ್ತಾವನೆಗೈದರು. ಪ್ರೊ. ತೇಜಸ್ವಿನಿ.ಎಲ್.ಪಿ ವಂದನಾರ್ಪಣೆಗೈದರು. ಪ್ರೊ.ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.

Ad Widget
Continue Reading

ಶಿಕ್ಷಣ

Philomena-ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ

Published

on

Ad Widget

Ad Widget

Ad Widget

Ad Widget

ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಹಾಗೂ 10 ದಿನಗಳ ಪುಸ್ತಕ ಪ್ರದರ್ಶನವು ಸೋಮವಾರ, ನವೆಂಬರ್ 23, 2026 ರಂದು ನಡೆದ ಸಮಾರೋಪ ಸಮಾರಂಭದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

Ad Widget

Ad Widget

Ad Widget

Ad Widget

ಪುತ್ತೂರು, ನ.23: ಇಲ್ಲಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಹಾಗೂ 10 ದಿನಗಳ ಪುಸ್ತಕ ಪ್ರದರ್ಶನವು ಸೋಮವಾರ, ನವೆಂಬರ್ 23, 2026 ರಂದು ನಡೆದ ಸಮಾರೋಪ ಸಮಾರಂಭದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

Ad Widget

Ad Widget alt="Ad Widget"/>

Ad Widget

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು, ಹತ್ತು ದಿನಗಳ ಪರಿಣಾಮಕಾರಿ ಪುಸ್ತಕ ಪ್ರದರ್ಶನವನ್ನು ಆಯೋಜಿಸಿದ ಮತ್ತು ಕ್ಯಾಂಪಸ್‌ನಲ್ಲಿ ಉತ್ತಮ ಓದುವ ಸಂಸ್ಕೃತಿಯನ್ನು ಬೆಳೆಸಿದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವನ್ನು ಅಭಿನಂದಿಸಿದರು.
ಗ್ರಂಥಾಲಯಗಳು ಶೈಕ್ಷಣಿಕ ಸಂಸ್ಥೆಯ ನಿಜವಾದ ಹೃದಯಭಾಗವಿದ್ದಂತೆ ಎಂದು ಒತ್ತಿಹೇಳಿದ ಅವರು, ವಿದ್ಯಾರ್ಥಿಗಳು ತಮ್ಮ ನಿಗದಿತ ಪಠ್ಯಕ್ರಮವನ್ನು ಮೀರಿ ಜೀವನಪರ್ಯಂತ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಡಿಜಿಟಲ್ ಪರದೆಗಳು ನೀಡಲಾಗದ ಆಳವಾದ ಜ್ಞಾನ, ವಿಮರ್ಶಾತ್ಮಕ ಚಿಂತನೆ ಮತ್ತು ವ್ಯಕ್ತಿತ್ವ ನಿರ್ಮಾಣವನ್ನು ಪುಸ್ತಕಗಳು ಮಾಡುತ್ತವೆ ಎಂದು ತಿಳಿಸಿದ
ಅವರು, ತಮ್ಮ ಸಮಗ್ರ ಅಭಿವೃದ್ಧಿ ಮತ್ತು ಸ್ಪರ್ಧಾತ್ಮಕ ಯಶಸ್ಸಿಗಾಗಿ ಕಾಲೇಜಿನ ಶ್ರೀಮಂತ ಗ್ರಂಥಾಲಯ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

Ad Widget

Ad Widget <> Ad Widget

ನವೆಂಬರ್ 14ರಂದು ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ. ಅವರಿಂದ ಉದ್ಘಾಟನೆಗೊಂಡಿದ್ದ ವಿಸ್ತೃತ (ಸ್ನಾತಕೋತ್ತರ) ಗ್ರಂಥಾಲಯದಲ್ಲಿ ನಡೆದ ಹತ್ತು ದಿನಗಳ ಪುಸ್ತಕ ಪ್ರದರ್ಶನಕ್ಕೆ ಈ ಸಮಾರಂಭದ ಮೂಲಕ ಯಶಸ್ವಿ ತೆರೆ ಬಿದ್ದಿತು. ಪ್ರದರ್ಶನದ ಉದ್ದಕ್ಕೂ ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಜೀವನಚರಿತ್ರೆ, ವ್ಯಕ್ತಿತ್ವ ವಿಕಸನ ಮತ್ತು ಕೆಎಎಸ್ (KAS) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರಸಿದ್ಧ ಲೇಖಕರ 750ಕ್ಕೂ ಹೆಚ್ಚು ಪುಸ್ತಕಗಳನ್ನು ವೀಕ್ಷಿಸಿದರು.

ಡಿಜಿಟಲ್ ವ್ಯಾಮೋಹದಿಂದ ದೂರವಿದ್ದು ಓದುವ ಮತ್ತು ಬರೆಯುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಕಾಲೇಜಿನ ‘ಗ್ರಂಥಾಲಯ ಮಾಸ’ (Library Month) ಉಪಕ್ರಮ ಮತ್ತು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಭಾಗವಾಗಿ ಈ ಹಿಂದೆ ಸಾಹಿತ್ಯಿಕ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ಸಪ್ತಾಹದ ಪೂರ್ವಭಾವಿಯಾಗಿ, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವು ಪದವಿ ಮತ್ತು ಸ್ನಾತಕೋತ್ತರ
ವಿದ್ಯಾರ್ಥಿಗಳಿಗಾಗಿ ಎರಡು ಭಾಷಣ ಸ್ಪರ್ಧೆಗಳನ್ನು ಆಯೋಜಿಸಿತ್ತು. ಅಕ್ಟೋಬರ್ 5ರಂದು ಪ್ರದರ್ಶನ ಕಲೆಗಳ ಸಂಘದ ಸಹಯೋಗದೊಂದಿಗೆ ಇಂಗ್ಲಿಷ್ ಭಾಷಣ ಸ್ಪರ್ಧೆಯನ್ನು ಮತ್ತು ಅಕ್ಟೋಬರ್ 22ರಂದು ಹಿಂದಿ ವಿಭಾಗದ ಸಹಯೋಗದೊಂದಿಗೆ ಹಿಂದಿ ಭಾಷಣ ಸ್ಪರ್ಧೆಯನ್ನು ನಡೆಸಲಾಗಿತ್ತು.
ಅಭಿಪ್ರಾಯ ಹಂಚಿಕೆ ಅವಧಿಯಲ್ಲಿ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಡಿಂಪಲ್ ಜೆ. ಫೆರ್ನಾಂಡಿಸ್, ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಜಿತ್, ದ್ವಿತೀಯ ಎಂ.ಎಸ್ಸಿ. ಗಣಿತಶಾಸ್ತ್ರ ವಿದ್ಯಾರ್ಥಿನಿ ಶ್ರೀದೇವಿ ಎನ್. ಮತ್ತು ದ್ವಿತೀಯ ಎಂ.ಕಾಂ. ವಿದ್ಯಾರ್ಥಿ ವಿಷ್ಣುಜಿತ್ ಎಂ.ಎ. ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Ad Widget

Ad Widget

ಈ ಸಂದರ್ಭದಲ್ಲಿ ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ, ಐಕ್ಯೂಎಸಿ ಸಂಯೋಜಕ ಹಾಗೂ ಹಣಕಾಸು ಅಧಿಕಾರಿ ಡಾ. ಎಡ್ವಿನ್ ಎಸ್. ಡಿ’ಸೋಜಾ, ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಕಾಶ್ ಡಿ’ಸೋಜಾ, ಪ್ರಾಧ್ಯಾಪಕರು ಹಾಗೂ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವ್ಯವಹಾರ ಆಡಳಿತ ಮತ್ತು ವೃತ್ತಿಪರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು. ಆಯ್ಕೆ ಶ್ರೇಣಿ ಗ್ರಂಥಪಾಲಕ ಅಬ್ದುಲ್ ರಹಮಾನ್ ಜಿ. ಅವರು ಸಮಾರಂಭಕ್ಕೆ ಆಗಮಿಸಿದ ಮತ್ತು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆಗೆ
ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ವಂದಿಸಿದರು.

Ad Widget
Continue Reading

ಶಿಕ್ಷಣ

Philomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ: ಸಂವಿಧಾನದ ಆಶಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಿ-– ಡಾ. ನಾರ್ಬರ್ಟ್ ಮಸ್ಕರೇನ್ಹಸ್

Published

on

Ad Widget

Ad Widget

Ad Widget

Ad Widget

ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನಲ್ಲಿ ನವೆಂಬರ್ 26ರಂದು ಆಯೋಜಿಸಲಾದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಕಲಾ ವಿಭಾಗದ ಡೀನ್ ಹಾಗೂ ಶೈಕ್ಷಣಿಕ ವಿಭಾಗದ ಕುಲಸಚಿವರಾದ ಡಾ. ನಾರ್ಬರ್ಟ್ ಮಸ್ಕರೇನ್ಹಸ್ ಮಾತನಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಹಕ್ಕುಗಳನ್ನು ನೀಡುವುದರ ಜೊತೆಗೆ ಕರ್ತವ್ಯಗಳನ್ನೂ ವಿಧಿಸಿದೆ. ಮೂಲಭೂತ ಹಕ್ಕುಗಳನ್ನು ಕೇಳುವ ಮೊದಲು, ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಕರ್ತವ್ಯಗಳನ್ನು ಪಾಲಿಸುವ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ಕಲಾ ವಿಭಾಗದ ಡೀನ್ ಹಾಗೂ ಶೈಕ್ಷಣಿಕ ವಿಭಾಗದ ಕುಲಸಚಿವರಾದ ಡಾ. ನಾರ್ಬರ್ಟ್ ಮಸ್ಕರೇನ್ಹಸ್ ಹೇಳಿದರು.

Ad Widget

Ad Widget alt="Ad Widget"/>

Ad Widget

ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನಲ್ಲಿ ನವೆಂಬರ್ 26ರಂದು ಆಯೋಜಿಸಲಾದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

Ad Widget

Ad Widget <> Ad Widget

ಭಾರತದ ಸಂವಿಧಾನವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಉದಾತ್ತ ಆಶಯಗಳನ್ನು ಒಳಗೊಂಡಿದೆ. ಸಂವಿಧಾನವು ಕೇವಲ ಕಾನೂನುಗಳ ಸಂಕಲನವಲ್ಲ; ಅದು ವೈವಿಧ್ಯಮಯ ಸಂಸ್ಕೃತಿ, ಭಾಷೆ ಮತ್ತು ಧರ್ಮಗಳನ್ನು ಹೊಂದಿರುವ ಭಾರತೀಯರನ್ನು ಒಗ್ಗೂಡಿಸುವ ಪ್ರಜಾಪ್ರಭುತ್ವದ ಬುನಾದಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಂವಿಧಾನದ ಪ್ರಸ್ತಾವನೆಯ ಮಹತ್ವವನ್ನು ವಿವರಿಸಿದ ಅವರು, ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆಗಳಲ್ಲಿ ಮತ ಚಲಾಯಿಸುವುದಲ್ಲ. ಕಾನೂನಿನ ಆಳ್ವಿಕೆಯನ್ನು ಗೌರವಿಸುವುದು, ವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವುದು, ಸಮಾನತೆಯನ್ನು ಎತ್ತಿಹಿಡಿಯುವುದು ಮತ್ತು ಅಧಿಕಾರದಲ್ಲಿರುವವರನ್ನು ಹೊಣಗಾರರನ್ನಾಗಿಸುವುದೂಪ್ರಜಾಪ್ರಭುತ್ವ ದ ಪ್ರಮುಖ ಲಕ್ಷಣಗಳಾಗಿವೆ ಎಂದರು.

Ad Widget

Ad Widget

ಜಾತಿ ಮತ್ತು ಧರ್ಮದ ಆಧಾರದ ಮೇಲಿನ ತಾರತಮ್ಯ, ಕೋಮುವಾದ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ಭ್ರಷ್ಟಾಚಾರ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಸುಳ್ಳು ಸುದ್ದಿಗಳು ಸಂವಿಧಾನದ ಮೌಲ್ಯಗಳಿಗೆ ಸವಾಲಾಗಿವೆ. ವಿದ್ಯಾರ್ಥಿಗಳು ಯಾವುದೇ ಮಾಹಿತಿಯನ್ನು ನಂಬುವ ಅಥವಾ ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಯುವಜನತೆ ವಿಮರ್ಶಾತ್ಮಕ ಚಿಂತನೆ, ವೈಜ್ಞಾನಿಕ ಮನೋಭಾವ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ಜಾತಿ, ಧರ್ಮ, ಭಾಷೆ ಮತ್ತು ಲಿಂಗದ ಭೇದವಿಲ್ಲದೆ ಪರಸ್ಪರ ಗೌರವದಿಂದ ನಡೆದುಕೊಳ್ಳಬೇಕು. ತಮ್ಮ ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸುವುದರ ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ತೊಡಗಿಸಿಕೊಳ್ಳಬೇಕು. ಸಂವಿಧಾನದ ಆಶಯಗಳು ನಮ್ಮ ದೈನಂದಿನ ನಡವಳಿಕೆಯಲ್ಲಿ ಪ್ರತಿಫಲಿಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಅವರು ಮಾತನಾಡಿ, ಮೂಲಭೂತ ಹಕ್ಕುಗಳನ್ನು ಪ್ರತಿಪಾದಿಸುವುದರ ಜೊತೆಗೆ ಪ್ರತಿಯೊಬ್ಬರೂ ತಮ್ಮ ಮೂಲಭೂತ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸಬೇಕು. ಹಕ್ಕುಗಳು ಮತ್ತು ಕರ್ತವ್ಯಗಳ ನಡುವಿನ ಸಮತೋಲನವೇ ಜವಾಬ್ದಾರಿಯುತ ನಾಗರಿಕತ್ವದ ಆಧಾರವಾಗಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಸಂವಿಧಾನ ದಿನದ ಪ್ರತಿಜ್ಞಾ ವಿಧಿಯನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಎ. ಪಿ. ಮೊಂತೆರೊ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳು ಮತ್ತು ಆದರ್ಶಗಳನ್ನು ಎತ್ತಿಹಿಡಿದು, ಜವಾಬ್ದಾರಿಯುತ ನಾಗರಿಕರಾಗಿ ಕರ್ತವ್ಯಗಳನ್ನು ಪಾಲಿಸುವ ಪ್ರತಿಜ್ಞೆ ಕೈಗೊಂಡರು.

ಕಾರ್ಯಕ್ರಮದ ನಿರೂಪಣೆಯನ್ನು ಸಹಾಯಕ ಪ್ರಾಧ್ಯಾಪಕರಾದ ಪೃಥ್ವಿ ಕೆ. ನಿರ್ವಹಿಸಿದರು. ಪ್ರತೀಕ್ಷಾ ಸ್ವಾಗತಿಸಿ, ಶ್ರೀಮಣಿ ವಂದಿಸಿದರು. ದ್ವಿತೀಯ ಎಂ.ಎಸ್ಸಿ. ವಿದ್ಯಾರ್ಥಿನಿ ಸೌಪರ್ಣಿಕಾ ಮತ್ತು ತಂಡದವರು ಪ್ರಾರ್ಥನೆ ಸಲ್ಲಿಸಿದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!