Connect with us

ಸಾಮಾಜಿಕ ಮಾಧ್ಯಮ

Big News : ಪುತ್ತೂರು : ಕಾಮಗಾರಿ ಪೂರ್ಣಗೊಂಡ ವರ್ಕ್ ಗೆ ಟೆಂಡರ್…! ಪುತ್ತೂರು ನಗರ ಸಭೆ ಅಧ್ಯಕ್ಷರ ಮನೆಯ ಬಳಿಯೇ ಭ್ರಷ್ಟಚಾರ ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ದಾಖಲೆ | ಅಚ್ಚರಿಗೆ ಕಾರಣವಾಗಿರುವ ವಿಪಕ್ಷ ಕಾಂಗ್ರೇಸ್ಸಿನ ಮೌನ

Published

on

Ad Widget

Ad Widget

Ad Widget

Ad Widget

ಪುತ್ತೂರು : ನ 18 : ಪೂರ್ಣಗೊಂಡಿರುವ ಕಾಮಾಗಾರಿಗೆ ಟೆಂಡರ್ ಕರೆದಿರುವ ಘಟನೆಯೊಂದು ಪುತ್ತೂರು ನಗರ ಸಭೆ ವ್ಯಾಪ್ತಿಯಲ್ಲಿ ನಡೆದಿದ್ದು, ಇದರಲ್ಲಿ ಭ್ರಷ್ಟಚಾರ ನಡೆದಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ. ಸುಮಾರು 52 ಲಕ್ಷ ರೂಪಾಯಿ ಅನುದಾನದಲ್ಲಿ ಪುತ್ತೂರು ನಗರ ಸಭೆಯೂ ನೆಹರು ನಗರಕ್ಕಿಂತ ಒಂದೂವರೆ ಕಿಮೀ ದೂರವಿರುವ ಪಡ್ನೂರು ತಾಲೂಕಿನ ನೆಲಪ್ಪಾಲು ಎಂಬಲ್ಲಿ ಪಾರ್ಕ್ ವೊಂದನ್ನು ನಿರ್ಮಿಸಿದೆ.

Ad Widget

Ad Widget

Ad Widget

Ad Widget

ಈ ಪಾರ್ಕ್ ನಲ್ಲಿರುವ ಕಾರಂಜಿಯ ಸುತ್ತಲೂ ಸ್ಟೈನ್ ಲೆಸ್ ಸ್ಟೀಲ್ ನ ರೀಲಿಂಗ್ಸ್ ಆಳವಡಿಸಲು ಪುತ್ತೂರು ನಗರ ಸಭೆ ನ. 9 ರಂದು ಟೆಂಡರ್ ಪ್ರಕಟನೆ ಹೊರಡಿಸಿದೆ. ಟೆಂಡರ್ ಮೊತ್ತ 2 ಲಕ್ಷದ 70 ಸಾವಿರ ಎಂದು ನಿಗದಿಪಡಿಸಿ ತನ್ನ ವೆಬ್ ಸೈಟ್ ನಲ್ಲಿ ಟೆಂಡರ್ ಪ್ರಕಟಿಸಲಾಗಿದೆ. ನ 28 ರಂದು ಸಂಜೆ 4 ಗಂಟೆಗೆ ಮೊದಲು ಆಸಕ್ತ ಗುತ್ತಿಗೆದಾರರು ಟೆಂಡರನ್ನು ಸಲ್ಲಿಸಬೇಕು ಎಂದು ಟೆಂಡರು ಪ್ರಕಟನೆಯಲ್ಲಿ ನಗರ ಸಭೆಯೂ ತಿಳಿಸಿದೆ.

Ad Widget

Ad Widget alt="Ad Widget"/>

Ad Widget

ಆದರೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೆ ಆ ಕಾರಂಜಿಗೆ ಸ್ಟೈನ್ ಲೆಸ್ ಸ್ಟೀಲ್ ನ ರೀಲಿಂಗ್ಸ್ ಅಳವಡಿಸಿರುವುದು ಬೆಳಕಿಗೆ ಬಂದಿದೆ. ಟೆಂಡರ್ ಪ್ರಕ್ರಿಯೆಗೆ ಇನ್ನು 11 ದಿನ ಬಾಕಿಯಿರುವಾಗಲೇ ಕಾರಂಜಿಗೆ ಸ್ಟೈನ್ ಲೆಸ್ ಸ್ಟೀಲ್ ನ ರೀಲಿಂಗ್ಸ್ ಅಳವಡಿಸಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಕಾರ್ಯಕರ್ತ ಪುತ್ತೂರು ನಿವಾಸಿ, ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಲ್ಮುಡ ಹಾಗೂ ರಾಜೇಶ್ ಕೃಷ್ಣ ಪ್ರಸಾದ್ ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ನಲ್ಲಿ ಬೆಳಕು ಚೆಲ್ಲಿದ್ದಾರೆ.

Ad Widget

Ad Widget <> Ad Widget

ಲೋಕೇಶ್‌ ಅಲ್ಮುಡರವರ ಪೋಸ್ಟ್‌
ಟೆಂಡರ್‌ ಕರೆದಿರುವ ಕಾರಂಜಿಗೆ ಈಗಾಗಲೇ ಸ್ಟೈನ್ ಲೆಸ್ ಸ್ಟೀಲ್ ನ ರೀಲಿಂಗ್ಸ್ ಅಳವಡಿಸಿರುವ ಪೋಟೊ : ಪೋಟೊ ದಿನಾಂಕ ನ. 17

ಫೋಟೊದಲ್ಲಿನ ವಿಚಾರಗಳನ್ನು ಖಚಿತಪಡಿಸಲು ನಿಖರ ನ್ಯೂಸ್ ವರದಿಗಾರ ಸ್ಥಳಕ್ಕೆ ಭೇಟಿ ನೀಡಿದ್ದು ಅಲ್ಲಿ ಕಾರಂಜಿಗೆ ಸ್ಟೈನ್ ಲೆಸ್ ಸ್ಟೀಲ್ ನ ರೀಲಿಂಗ್ಸ್ ಅಳವಡಿಸಿರುವುದು ಕಂಡು ಬಂದಿದೆ. ಈ ಪಾರ್ಕ್ ನ ಪಕ್ಕದಲ್ಲೆ ಪುತ್ತೂರು ನಗರ ಸಭೆಯ ಅಧ್ಯಕ್ಷ ಜೀವಂಧರ್ ಜೈನ್ ಅವರ ಮನೆಯಿರುವುದು ವಿಶೇಷವಾಗಿದೆ. ಇವರ ಕಣ್ಣೇದುರಿನಲ್ಲೆ ಈ ರೀತಿಯ ಘಟನೆ ನಡೆದಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ.

ನಗರ ಸಭೆಯ ಅಧಿಕೃತ ವೆಬ್‌ ಸೈಟ್‌ ನಲ್ಲಿ ಪಕ್ರಟಿಸಿರುವ ಟೆಂಡರ್‌ ಪ್ರಕಟನೆ.

ಈ ಬಗ್ಗೆ ನಿಖರ ನ್ಯೂಸ್ ಪುತ್ತೂರು ನಗರ ಸಭೆ ಆಯುಕ್ತ ಮಧು ಎಸ್ ಮನೋಹರ್ ಅವರನ್ನು ಸಂಪರ್ಕಿಸಿ ಪ್ರಶ್ನಿಸಿತ್ತು. “ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ತರಬೇತಿಯಲ್ಲಿದ್ದೇನೆ, ನನ್ನ ಗಮನಕ್ಕೆ ಬಂದಿಲ್ಲ, ಪರಿಶೀಲಿಸುತ್ತೇನೆ, ಬಳಿಕ ತಿಳಿಸುತ್ತೇನೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Ad Widget

Ad Widget
ಟೆಂಡರ್‌ ಸಲ್ಲಿಕೆಗೆ ಕೊನೆಯ ದಿನ ನ .28 ರಂದು ಸಂಜೆ 4 ಗಂಟೆ ಎಂದು ಉಲ್ಲೇಖಿಸಿರುವುದು

ಒಗಟಾಗಿರುವ ಕಾಂಗ್ರೆಸ್ ಮೌನ:

ಪುತ್ತೂರು ನಗರ ಸಭೆ ವ್ಯಾಪ್ತಿಯಲ್ಲಿ ನಡೆದ ಹಲವು ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ಪದೇ ಪದೇ ಸಾಮಾಜಿಕ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹಲವು ದಾಖಲೆಗಳನ್ನು ಉಲ್ಲೇಖಿಸಿ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಈ ಬಗ್ಗೆ ಹೋರಾಟ ನಡೆಸಬೇಕಿದ್ದ ಪ್ರಮುಖ ವಿಪಕ್ಷ ಕಾಂಗ್ರೆಸ್ ಮೌನ ವಹಿಸಿರುವುದು ಸಾರ್ವಜನಿಕ ವಲಯದ ಅಚ್ಚರಿಗೆ ಕಾರಣವಾಗಿದೆ. ಪುತ್ತೂರು ಕಾಂಗ್ರೆಸ್ ನ ಪತ್ರಿಕಾಗೋಷ್ಠಿಗಳು ರಾಜಕೀಯ ಟೀಕೆ ಹಾಗೂ ಆರೋಪ ಪ್ರತ್ಯಾರೋಪಗಳಿಗಷ್ಟೆ ಸಿಮೀತ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಆಡಳಿತಶಾಹಿಯ ವಿರುದ್ದ ಹೋರಾಟ ಅಥವಾ ಗಮನ ಸೆಳೆಯಲು ಅದು ಅದನ್ನು ಬಳಕೆ ಮಾಡುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಅರ್ಧ ಕೋಟಿ ವೆಚ್ಚದ ಆ ಪಾರ್ಕ್ ಅಲ್ಲಿ ಬೇಕಿತ್ತೆ ?

ಪುತ್ತೂರು ನಗರಕ್ಕಿಂತ 3 ಕಿಮೀ ದೂರವಿರುವ , ಜನ ಸಂಚಾರ ಅತೀ ವಿರಳವಾಗಿರುವ , ಕೇವಲ ಕೆಲವೇ ಮನೆಗಳನ್ನು ಹೊಂದಿರುವ ಪ್ರದೇಶದಲ್ಲಿ ಅರ್ಧ ಕೋಟಿಗೂ ಅಧಿಕ ವೆಚ್ಚದಲ್ಲಿ ಪಾರ್ಕ್ ನಿರ್ಮಿಸಿರುವುದರ ಪ್ರಯೋಜನಗಳ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಗಿದೆ. ನಗರ ಸಭೆ ವ್ಯಾಪ್ತಿಯಲ್ಲಿ ಹಲವು ರಸ್ತೆಗಳು ಹದಗೆಟ್ಟಿದ್ದು, ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳಿವೆ. ಜನರಿಗೆ ಅತೀ ಅಗತ್ಯವಾಗಿರುವ ಈ ರಸ್ತೆಗಳ ಸುಸ್ಥಿತಿಗೆ ಅನುದಾನಗಳ ಬಳಕೆ ಮಾಡುವುದು ಬಿಟ್ಟು ಪಾರ್ಕ್ ಗಳ ಅಭಿವೃದ್ದಿಗೆ ಹಣ ವಿನಿಯೋಗಿಸುವ ಬಗ್ಗೆ ಜನರು ಅಸಮಾಧಾನ ತೋಡಿಕೊಂಡಿದ್ದಾರೆ.ಅಲ್ಲದೇ ಆ ಪಾರ್ಕ್‌ ಗೆ ತೆರಳುವ ರಸ್ತೆಯೂ ಹದಗೆಟ್ಟಿರುವುದು ಜನರ ಆಕ್ರೋಶಕ್ಕೆ ಮತ್ತೊಂದು ಕಾರಣ.

ಪುತ್ತೂರು ನಗರದಲ್ಲೂ ʼಬೆಳಗಾವಿ ಮಾದರಿʼ ಗುತ್ತಿಗೆ …! ಕೋಟಿ ವೆಚ್ಚದಲ್ಲಿ ಅಗಲೀಕರಣಗೊಂಡು ಲೋಕಾರ್ಪಣೆಗೊಂಡ ಬಳಿಕ ಈ ರಸ್ತೆಯಲ್ಲಿ ಸಾಹಸ ಕ್ರೀಡೆಯಾಗಿ ಬದಲಾಗಿರುವ ವಾಹನ ಚಾಲನೆ | ಈ ರಸ್ತೆಯನ್ನು ನಿರ್ಮಿಸಿರುವುದು ʼನಾವಲ್ಲ, ನಾವಲ್ಲʼ ಎನ್ನುತ್ತಿರುವ ಪಿಡಬ್ಲ್ಯುಡಿ ಹಾಗೂ ನಗರ ಸಭೆ

ರಾಜೇಶ್‌ ಕೃಷ್ಣ ಪ್ರಸಾದ್‌ ಅವರ ಪೋಸ್ಟ್‌ ನಲ್ಲಿ ಏನಿದೆ ?

ಇದು ಇತಿಹಾಸ ಪ್ರಸಿದ್ಧ ಪುತ್ತೂರು ನೆಲಪ್ಪಾಲು ಪಾರ್ಕು.

ಇದಿರುವ ಜಾಗ ನಗರದ ಹೊರವಲಯದ ನೆಹರೂನಗರದ ಒಳಗಿರುವ, ಸರಿಯಾದ ರಸ್ತೆಯೂ ಇಲ್ಲದ ಪ್ರದೇಶ. ‌ಸುತ್ತಮುತ್ತಲೂ ಬೆರಳೆಣಿಕೆಯ ಮನೆಗಳು
ಅದಕ್ಕೆ ನಮ್ಮ ಪುತ್ತೂರು ನರಕಸಭೆ ಖರ್ಚು ಮಾಡಿದ್ದು ಬರೋಬ್ಬರಿ ₹52ಲಕ್ಷ.
ಶಾಸಕರಿಂದ ಅದ್ಧೂರಿ ಉದ್ಘಾಟನೆ.

ಅಲ್ಲಿ ಹೋಗಿ ನೋಡಿದರೆ ನಿಮಗೂ ಗೊತ್ತಾಗ್ತದೆ.
ಇಲ್ಲಿ ಇಷ್ಟು ವೆಚ್ಚದ ಪಾರ್ಕು ಯಾಕೆ ಅಂತ.

ಈಗ ಪುನಃ ಆ ಪಾರ್ಕಿಗೆ ಬಣ್ಣ ಬಳೆಯಲು(ಇತರ ಮೂರು ಪಾರ್ಕು ಸೇರಿ‌ ₹4.5ಲಕ್ಷ.
ಅದೇ ಪಾರ್ಕಿಗೆ ವಿದ್ಯುತ್ತೀಕರಣ ಮಾಡಲು ₹ 4.00 ಲಕ್ಷ.
ಅದೇ ಪಾರ್ಕಿನ‌ ಕಾರಂಜಿಯ ಸುತ್ತ steel rod ಹಾಕಲು
₹2.7ಲಕ್ಷ.

ವಿಶೇಶ ಅಂದ್ರೆ steal rod ಅಳವಡಿಸಲು ಕರೆದ ಟೆಂಡರಿನ ಕೊನೆಯ ದಿನಾಂಕ 24-11-2022. 5PM.
ಆದರೆ ಈಗಾಗಲೇ ಕಾಮಗಾರಿ ಮುಗಿದಿದೆ..😃

ಅದೇ ನಮ್ಮ ಸೂತ್ರಬೆಟ್ಟು ವಾರ್ಡಿನ 59ಮಂದಿ ಸೇರಿ ‘ನಮ್ಮರಸ್ತೆ ಸರಿ ಇಲ್ಲ, ನೀರು ಹೋಗಲು ದಾರಿ ಇಲ್ಲದೇ ನೀರು ನಿಂತು ಮಲೇರಿಯಾ ಬರ್ತದೆ’ ಅಂತ ಮನವಿಕೊಟ್ಟು 2 ಪುಣ್ಯತಿಥಿ ಕಳೆದರೂ ಇನ್ನೂ ಆಗಲಿಲ್ಲ.

ನಗರದಿಂದ ಅದೆಷ್ಟೋ ದೂರ ಇರುವ, ಈಗಾಗಲೇ ಶಾಸಕರಿಂದ‌ ಉದ್ಘಾಟನೆ‌ ಆದ ಪಾರ್ಕ್ ಗೆ ಪ್ರತೀ ತಿಂಗಳು ಟೆಂಡರು.😊
ಟೆಂಡರು ಆಗುವ ಮೊದಲೇ ಕಾಮಗಾರಿ.
ಹೇಗೆ ಸಾಧ್ಯ?

ಪುತ್ತೂರಿನ ಜನರ ಬಹುದಿನದ ಬೇಡಿಕೆ ಸರಕಾರಿ ಮೆಡಿಕಲ್ ಕಾಲೇಜು. ಅದಕ್ಕೆ ಈಗಿರುವ ಸರಕಾರಿ ಆಸ್ಪತ್ರೆಯನ್ನು 300ಬೆಡ್ಡಿಗೆ ಏರಿಸಲು ಯಾರಿಗೂ ಆಸಕ್ತಿ ಇಲ್ಲ. ಜನ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗ್ತಾ ಇದ್ದಾರೆ. ನಡುದಾರಿಯಲ್ಲಿ ಪ್ರಾಣ ಕಳೆದುಕೊಂಡವರು ಅದೆಷ್ಟೋ..

ಆದರೆ ನಮ್ಮ ಜನಪ್ರತಿನಿಧಿಗಳಿಗೆ ಮಾತ್ರ ದುಂದುವೆಚ್ಚ ಮಾಡುವ ಪಾರ್ಕುಗಳೇ ಹೆಚ್ಚು ಇಷ್ಟ ಯಾಕೆ?

ಮುಖಕ್ಕೆ ಗೋಣಿ ಹಾಕಿ ಹೊಡೆಯುವವರು ದಯವಿಟ್ಟು ಉತ್ತರಿಸಿ.

ಪಾರ್ಕ್‌ ಗೆ ತೆರಳುವ ರಸ್ತೆಯ ಸ್ಥಿತಿ ಹಾಗು ಪಾರ್ಕ್‌ ಸುತ್ತ ಮುತ್ತಲಿನ ಫೋಟೊಗಳು :

ಪೋಟೊಗಳು : ರಾಜೇಶ್‌ ಕೃಷ್ಣ ಪ್ರಸಾದ್‌ ಅವರ ಫೇಸ್‌ ಬುಕ್‌ ವಾಲ್‌ ನಿಂದ

Ad Widget
Click to comment

Leave a Reply

ಸಾಮಾಜಿಕ ಮಾಧ್ಯಮ

ನೀವು ಕಳ್ಳರ ಜೊತೆಗಾದರೂ ಇರಿ. ಯಾರ ಜೊತೆಗಾದರೂ ಇರಿ. ಆದರೆ, ಸತ್ಯದ ಪರವಾಗಿ ಇರಿ: ಎಲೆಕ್ಟ್ರಾನಿಕ್ ಮೀಡಿಯಾದವರಿಗೆ ಸಿಎಂ ಕರೆ : ಯುಟ್ಯೂಬ್ ಚಾನಲ್ ಗಳ ಆರಂಭಕ್ಕೆ ಪರವಾನಗಿ ನಿಗಧಿ ಮಾಡುವ ಬಗ್ಗೆ ಪರಿಶೀಲನೆ – ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ

Published

on

Ad Widget

Ad Widget

Ad Widget

Ad Widget

ಹುಬ್ಬಳ್ಳಿ ಸೆ 15: ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರಿಗೆ ಕರೆ ನೀಡಿದರು.

Ad Widget

Ad Widget

Ad Widget

Ad Widget

ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ, ಲೋಗೋ ಬಿಡುಗಡೆ ಮಾಡಿ ಮಾತನಾಡಿದರು.

Ad Widget

Ad Widget alt="Ad Widget"/>

Ad Widget

ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ಬಗ್ಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ ಎಂದು ಯಾವತ್ತೂ ಹೇಳಿಲ್ಲ. ನನ್ನ ಬಗ್ಗೆ ಸುಳ್ಳುಗಳನ್ನು ಸತತವಾಗಿ ತೋರಿಸುವಾಗಲೂ ಯಾಕೆ ಹೀಗೆ ತೋರಿಸ್ತೀರಿ ಅಂತಲೂ ಯಾರಿಗೂ ಕೇಳಿಲ್ಲ. ನಿಮ್ಮಿಂದ ನನಗೆ ಏನೇನೂ ಅಪೇಕ್ಷೆ ಇಲ್ಲ. ಸಾಧ್ಯವಾದರೆ ಸತ್ಯ ತೋರಿಸಿ, ಸತ್ಯ ಬರೆಯಿರಿ ಎಂದರು.

Ad Widget

Ad Widget <> Ad Widget

ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದೇ ಏನ್ ದೊಡ್ಡ ದೊಡ್ಡ ಚರ್ಚೆ ನಡೆಸಿದರು. ಆ ಚರ್ಚೆಯಲ್ಲಿ ಜ್ಯೋತಿಷಿಗಳು, ಚಾನಲ್ ಗಳು ತೋರಿಸಿದ್ದೆಲ್ಲಾ ಅಪ್ಪಟ ಸುಳ್ಳಾಯ್ತು. ನೀವು ಹೀಗೆಲ್ಲಾ ತೋರಿಸಿದರೆ ಜನ ಒಪ್ತಾರಾ ಯೋಚನೆ ಮಾಡಿ ಎಂದರು.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಮ್ಮ‌ ಸರ್ಕಾರ ಸದಾ ಸಿದ್ದ. ಯಾವತ್ತೂ ಇದಕ್ಕೆ ಧಕ್ಕೆ ತರುವ ಕೆಲಸವನ್ನು ನಾನೂ ಯಾವತ್ತೂ ಮಾಡಿಲ್ಲ, ನಮ್ಮ ಸರ್ಕಾರವೂ ಮಾಡುವುದಿಲ್ಲ ಎಂದರು.

Ad Widget

Ad Widget

ಸಂಘದ ಬೇಡಿಕೆ

ಬ್ಲಾಕ್ ಮೇಲ್ ಮತ್ತು ಕೀಳು ಮಟ್ಟದ ಪ್ರಾಕ್ಟೀಸ್ ಮಾಡುತ್ತಿರುವ ಯು ಟ್ಯೂಬ್ ಚಾನಲ್ ಗಳು ಸಮಾಜಕ್ಕೆ ಶಾಪ ಆಗಿದ್ದು, ಇಂಥವರಿಂದ ಪತ್ರಿಕೋದ್ಯಮದ ಘನತೆ ಹಾಳಾಗಿದೆ. ಹೀಗಾಗಿ ಯು ಟ್ಯೂಬ್ ಚಾನಲ್ ಗಳ ಹಾವಳಿ ತಡೆಯಲು ಇವರಿಗೂ ಲೈಸೆನ್ಸ್ ಕಡ್ಡಾಯಗೊಳಿಸಬೇಕು ಎಂದು ಸಂಘ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿತು. ಈ ಬೇಡಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗಿವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

Ad Widget
Continue Reading

ಸಿನೆಮಾ

Kiara Advani War 2 bikini look: ಕಿಯಾರಾ ಬಿಕಿನಿ ಕಿಡಿ – ಎಲ್ಲರ ಕಣ್ಣು ಅಲ್ಲೇ! ‘ವಾರ್ 2’ ಟೀಸರ್‌ನಿಂದ ಇಂಟರ್ನೆಟ್‌ನಲ್ಲಿ ಅಲ್ಲೋಲ ಕಲ್ಲೋಲ

Published

on

Ad Widget

Ad Widget

Ad Widget

Ad Widget

ವಾರ್ 2′ ಟೀಸರ್‌ನಲ್ಲಿ ಕಿಯಾರಾ ಅಡ್ವಾಣಿಯವರ ಚಿನ್ನದ ಬಿಕಿನಿ ಲುಕ್ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಅವರ ಕೇವಲ ಎರಡು ಸೆಕೆಂಡ್‌ಗಳ ಹಾಟ್ ದೃಶ್ಯವು ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ.

Ad Widget

Ad Widget

Ad Widget

Ad Widget

Kiara Advani War 2 bikini look ಬಾಲಿವುಡ್‌ನ ಬ್ಯೂಟಿ ಕ್ವೀನ್ ಕಿಯಾರಾ ಅಡ್ವಾಣಿ ಇದೀಗ ಇಂಟರ್ನೆಟ್‌ನಲ್ಲಿ ಅಕ್ಷರಶಃ ಬೆಂಕಿ ಹಚ್ಚಿದ್ದಾರೆ! “ವಾರ್ 2” ಚಿತ್ರದ ಟೀಸರ್‌ನಲ್ಲಿ ಅವರು ತೊಟ್ಟ ಚಿನ್ನದ ಬಿಕಿನಿ ಇದೀಗ ನ್ಯಾಷನಲ್ ಹಾಟ್ ಟಾಪಿಕ್. ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬದ ಗಿಫ್ಟ್ ಆಗಿ ರಿಲೀಸ್ ಆದ ಈ ಟೀಸರ್‌ನಲ್ಲಿ ಹೃತಿಕ್ ರೋಷನ್‌ರವರ ಮೈ ಜುಮ್ಮೆನ್ನಿಸೋ ಆಕ್ಷನ್ ಸೀಕ್ವೆನ್ಸ್‌ಗಳಿವೆ, ನಿಜ. ಆದರೆ, ಎಲ್ಲರ ಕಣ್ಣು, ಮನಸ್ಸು ಕದ್ದಿದ್ದು ಮಾತ್ರ ಕಿಯಾರಾ ಅವರ ಹಾಟ್ ಅವತಾರ!

Ad Widget

Ad Widget alt="Ad Widget"/>

Ad Widget

ಬರೀ ಎರಡೇ ಎರಡು ಸೆಕೆಂಡುಗಳ ಕಾಲ ಕಡಲತೀರದಲ್ಲಿ, ಚಿನ್ನದ ಬಿಕಿನಿಯಲ್ಲಿ ಕಂಗೊಳಿಸಿರುವ ಕಿಯಾರಾ, ತಮ್ಮ ಫಿಟ್ ದೇಹ ಮತ್ತು ಆಕರ್ಷಕ ಮೈಮಾಟದಿಂದ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ರೆಡ್ಡಿಟ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ಕಾಳ್ಗಿಚ್ಚಿನಂತೆ ಹಬ್ಬಿದೆ. ‘ಕಿಯಾರಾ ಎರಡೇ ಸೆಕೆಂಡ್‌ನಲ್ಲಿ ಇಡೀ ಶೋ ಕದ್ದಿದ್ದಾರೆ’ ಎಂದು ಕೆಲವರು ಹೊಗಳಿದರೆ, ‘ಗರ್ಭಿಣಿಯಾಗಿದ್ದರೂ ಕಿಯಾರಾ ದೇವತೆಯಂತೆ ಕಾಣುತ್ತಿದ್ದಾರೆ’ ಎಂದು ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.ಅವರ ಫಿಟ್ನೆಸ್, ಆಕರ್ಷಕ ಮೈಮಾಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Ad Widget

Ad Widget <> Ad Widget

ಸದ್ಯ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಿಯಾರಾಗೆ, ‘ವಾರ್ 2’ ಹಲವು ಪ್ರಥಮಗಳ ಚಿತ್ರ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೊದಲ ಸಿನಿಮಾ, ಮೊದಲ ಪಕ್ಕಾ ಆಕ್ಷನ್ ಸಿನಿಮಾ, ಮತ್ತು ಹೌದು, ತೆರೆಮೇಲೆ ಮೊದಲ ಬಿಕಿನಿ ದೃಶ್ಯ ಕೂಡಾ ಇದೇ! ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರ 2025ರ ಆಗಸ್ಟ್ 14ಕ್ಕೆ ತೆರೆಗೆ ಅಪ್ಪಳಿಸಲಿದೆ.

ಆದರೆ, ಇಲ್ಲೊಂದು ಸಣ್ಣ ಟ್ವಿಸ್ಟ್! ಈ ಹಾಟ್ ಲುಕ್ ಕೆಲವರಲ್ಲಿ  ಅನುಮಾನದ ಕಿಡಿಯನ್ನೂ ಹತ್ತಿಸಿದೆ. ಕೆಲವರು ಇದನ್ನು ಸಿಜಿಐ (ಕಂಪ್ಯೂಟರ್ ಜನರೇಟೆಡ್ ಇಮೇಜರಿ) ಇರಬೇಕು  “ಇಲ್ಲ, ಬಾಡಿ ಡಬಲ್ ಇರಬಹುದು” ಅಂತೆಲ್ಲಾ ಕೆಲ ನೆಟ್ಟಿಗರು ಗುಸುಗುಸು ಶುರುಮಾಡಿದ್ದಾರೆ. ಆದರೆ, ಕಿಯಾರಾ ಅವರ ತಂಡ, “ಅದೆಲ್ಲಾ ಸುಳ್ಳು, ಕಿಯಾರಾ ಈ ಲುಕ್‌ಗಾಗಿ ಸಖತ್ ಆಗಿ ಜಿಮ್‌ನಲ್ಲಿ ಬೆವರು ಹರಿಸಿದ್ದಾರೆ” ಅಂತ ಸ್ಪಷ್ಟನೆ ಕೊಟ್ಟಿದೆ.

Ad Widget

Ad Widget

ಒಟ್ಟಿನಲ್ಲಿ, ‘ವಾರ್ 2’ ಟೀಸರ್‌ನಲ್ಲಿ ಕಿಯಾರಾ ಅವರ ಬಿಕಿನಿ ಅವತಾರ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಸಿನಿಮಾ ರಿಲೀಸ್ ಆಗೋವರೆಗೂ ಈ ಚರ್ಚೆ, ಈ ಹವಾ ಕಮ್ಮಿಯಾಗೋ ಲಕ್ಷಣ ಕಾಣ್ತಿಲ್ಲ!

 

Ad Widget
Continue Reading

ಸಾಮಾಜಿಕ ಮಾಧ್ಯಮ

ದೂರು ನೀಡಲು ಬಂದ ಮಹಿಳೆಯ ಜತೆ  ಡಿವೈಎಸ್ಪಿ ಬಲವಂತದ ಸೆಕ್ಸ್‌ ! ಕಛೇರಿಯಲ್ಲೆ ರಾಸಲೀಲೆ ನಡೆಸುತ್ತಿರುವ ವಿಡಿಯೋ ವೈರಲ್‌ – ಗೃಹ ಸಚಿವರ ತವರು ಜಿಲ್ಲೆಯಲ್ಲಿ ಶಾಕಿಂಗ್‌ ಘಟನೆ  

Published

on

Ad Widget

Ad Widget

Ad Widget

Ad Widget

ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆ, ಮಕ್ಕಳು ಸೇರಿದಂತೆ ರಾಜ್ಯದ ಜನತೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂಬುದು ಇನ್ನೂ ಅಸಹ್ಯಕರವಾಗಿದೆ. ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವವರಾಗಿದ್ದಾರೆ.  ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇದು ಇಂತಹ ವಿಕೃತ ಮನೋಸ್ಥಿತಿ ಇರುವವರಿಗೆ ಬುದ್ಧಿ ಕಲಿಸುವಂತಿರಬೇಕು ಎಂದು ವಿಡಿಯೊ ನೋಡಿದವರು ಒತ್ತಾಯಿಸಿದ್ದಾರೆ.

Ad Widget

Ad Widget

Ad Widget

Ad Widget

ತುಮಕೂರು : ಜ 2ಡಿವೈಎಸ್ಪಿಯೊಬ್ಬರು ರಾಜ್ಯ ಪೊಲೀಸ್‌ ಇಲಾಖೆಯ ಮಾನ ಹಾಗೂ ಗೌರವವನ್ನು ಹರಾಜು ಹಾಕಿದ ಘಟನೆಯೊಂದು ಗೃಹ ಸಚಿವ ಡಾ| ಪರಮೇಶ್ವರ್‌ ಅವರ ತವರು ಜಿಲ್ಲೆಯಿಂದ ವರದಿಯಾಗಿದೆ. ದೂರು ನೀಡಲು ಬಂದ ಸಂತ್ರಸ್ತ ಮಹಿಳೆಯನ್ನು ತುಮಕೂರು ಜಿಲ್ಲೆಯ ಮಧುಗಿರಿಯ ಡಿವೈಎಸ್ಪಿ ತನ್ನ ಕಾಮತೃಷೆ ತೀರಿಸಲು ಬಲವಂತವಾಗಿ ಬಳಸಲು ಯತ್ನಿಸಿದ ಆರೋಪ ಕೇಳಿ ಬಂದಿದೆ.ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಘಿದೆ.

Ad Widget

Ad Widget alt="Ad Widget"/>

Ad Widget

ಏನಿದು ಪ್ರಕರಣ ?

Ad Widget

Ad Widget <> Ad Widget

 ದೂರು ನೀಡಲು ಕಚೇರಿಗೆ ಬಂದ ಮಹಿಳೆಯೊಂದಿಗೆ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಅಸಭ್ಯವಾಗಿ ವರ್ತಿಸಿದ್ದಾರೆ. ಇವರ ಹದ್ದು ಮೀರಿದ ವರ್ತನೆಯ ವಿಡಿಯೊ ವೈರಲ್‌ ಆಗಿದೆ. ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು ಪಾವಗಡದಿಂದ ಬಂದಿದ್ದ ಮಹಿಳೆಯನ್ನು ಏಕಾಂತ ಕೊಠಡಿಗೆ ಎಳೆದುಕೊಂಡು ಹೋದ ರಾಮಚಂದ್ರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ.

ಪಾವಗಡ ಮೂಲದ ಮಹಿಳೆ ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ಮಹಿಳೆಯೊಂದಿಗೆ ಮಾತುಕತೆ ನಡೆಸಬೇಕು ಕೆಲವು ವಿಚಾರಣೆ ಮಾಡಬೇಕು ಎಂದು ಡಿವೈಎಸ್ ಪಿ ಕಚೇರಿಗೆ ಕರೆಸಲಾಗಿತ್ತು. ಈ ವೇಳೆ ಮಹಿಳೆಯನ್ನ ಪುಸಲಾಯಿಸಿರುವ ಡಿವೈಎಸ್‌ಪಿ ರಾಮಚಂದ್ರಪ್ಪ ದೂರು ಕೊಡಲು ಬಂದ ಮಹಿಳೆಯನ್ನ ಪುಸಲಾಯಿಸಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ.

Ad Widget

Ad Widget

ತನಗೆ ನ್ಯಾಯ ಸಿಗಬೇಕಾದರೆ ಇಂಥ ಕೆಲಸವನ್ನೂ ಮಾಡಬೇಕು ಎಂದು ಮಹಿಳೆ ಡಿವೈಎಸ್‌ಪಿಯ ಕಾಮತೃಷೆ ತೀರಿಸಲು ಮುಂದಾಗಿದ್ದಾಳೆ. ಇದಾದ ನಂತರ ಡಿವೈಎಸ್‌ಪಿ ಕಚೇರಿಯ ಶೌಚಾಲಯದ ಬಳಿ ಕರೆದುಕೊಂಡು ಹೋದ ರಾಮಚಂದ್ರಪ್ಪ ಮಹಿಳೆಯೊಂದಿಗೆ ರಾಸಲೀಲೆ ಆರಂಭಿಸಿದ್ದಾರೆ. ಆದರೆ, ಡಿವೈಎಸ್‌ಪಿ ರಾಮಚಂದ್ರಪ್ಪನ ರಾಸಲೀಲೆಯ ದೃಶ್ಯ ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲಿ ಮಹಿಳೆಯೊಂದಿಗೆ ಬಲವಂತವಾಗಿ ನಡೆದುಕೊಳ್ಳುತ್ತಿದ್ದ ದೃಶ್ಯಗಳು ಸೆರೆ ಸಿಕ್ಕಿವೆ.

ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆ, ಮಕ್ಕಳು ಸೇರಿದಂತೆ ರಾಜ್ಯದ ಜನತೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂಬುದು ಇನ್ನೂ ಅಸಹ್ಯಕರವಾಗಿದೆ. ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವವರಾಗಿದ್ದಾರೆ.  ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇದು ಇಂತಹ ವಿಕೃತ ಮನೋಸ್ಥಿತಿ ಇರುವವರಿಗೆ ಬುದ್ಧಿ ಕಲಿಸುವಂತಿರಬೇಕು ಎಂದು ವಿಡಿಯೊ ನೋಡಿದವರು ಒತ್ತಾಯಿಸಿದ್ದಾರೆ.

‘ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊವನ್ನು ನಾನೂ ವೀಕ್ಷಿಸಿದ್ದೇನೆ. ಅದರಲ್ಲಿ ಡಿವೈಎಸ್‌ಪಿ ರಾಮಚಂದ್ರಪ್ಪ ಆಕ್ಷೇಪಾರ್ಹವಾಗಿ ವರ್ತಿಸುತ್ತಿರುವುದು ಕಂಡು ಬಂದಿದೆ. ಸಂತ್ರಸ್ತೆಯನ್ನು ಹುಡುಕುತ್ತಿದ್ದೇವೆ. ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇದನ್ನು ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ತುಮಕೂರು ಜಿಲ್ಲೆ ಎಸ್‌ಪಿ ಕೆ.ವಿ. ಅಶೋಕ್‌ ಪ್ರತಿಕ್ರಿಯಿಸಿದ್ದಾರೆ

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!