ಕ್ರೀಡೆ
India vs South Africa 1st T20I : ಸೂರ್ಯಕುಮಾರ್, ರಾಹುಲ್ ಪಿಪ್ಟಿ, ಅರ್ಶದೀಪ್ ಹಾಗೂ ಚಹರ್ ಬೌಲಿಂಗ್ ಮಿಂಚು – ಭಾರತಕ್ಕೆ ಭರ್ಜರಿ ಗೆಲುವು | ರೋಹಿತ್ ಶರ್ಮಾ ಹೊಸ ದಾಖಲೆ – ಇಲ್ಲಿದೆ ಸಂಪೂರ್ಣ ಸ್ಕೊರ್ ಕಾರ್ಡ್
ತಿರುವನಂತಪುರ ಸೆ 29 : ಭಾರತದ ವೇಗದ ಬೌಲಿಂಗ್ ನ ಹೊಸ ಪ್ರತಿಭೆ ಎಡಗೈ ಮಧ್ಯಮವೇಗಿ ಆರ್ಷದೀಪ್ ಸಿಂಗ್ ಹಾಗೂ ಹೊಸ ಚೆಂಡಿನಲ್ಲಿ ಯಾವತ್ತೂ ಕರಾಮತ್ತು ಪ್ರದರ್ಶಿಸುವ ದೀಪಕ್ ಚಹರ್ ಅವರ ಚುರುಕಿನ ದಾಳಿಗೆ ತತ್ತರಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ಮೊದಲು ಪಂಧ್ಯದಲ್ಲಿ ಹೀನಾಯ ಸೋಲು ಅನುಭವಿಸಿದೆ. ತಿರುವನಂತಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್ ಗಳಿಂದ ಗೆದ್ದು ಬೀಗಿದೆ.
ಗ್ರೀನ್ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರ್ಷದೀಪ್ (32ಕ್ಕೆ3) ದೀಪಕ್ (24ಕ್ಕೆ2) ಅವರು ಆರಂಭದಲ್ಲಿಯೇ ಪೆಟ್ಟು ಕೊಟ್ಟರು.ದಕ್ಷಿಣ ಆಫ್ರಿಕಾ ತಂಡವು ಮೊದಲ ಮೂರು ಓವರ್ಗಳು ಮುಗಿಯುವ ಮುನ್ನವೇ ಕೇವಲ ಒಂಬತ್ತು ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡಿತು.
20 ಓವರ್ಗಳ ಮುಕ್ತಾಯದ ವೇಳೆ ದ. ಅಫ್ರಿಕಾ ತಂಡ 8 ವಿಕೆಟ್ಗಳ ನಷ್ಟಕ್ಕೆ 106 ರನ್ ಕೂಡಿ ಹಾಕಿತ್ತು. ಈ ಸಣ್ಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 16.4 ಓವರ್ಗಳಲ್ಲಿ 2 ವಿಕೆಟ್ಗಳಿಗೆ 110 ರನ್ ಗಳಿಸಿತು. ಎಂಟು ವಿಕೆಟ್ಗಳಿಂದ ಗೆದ್ದಿತು. ದಕ್ಷಿಣ ಆಫ್ರಿಕಾ ಬೌಲರ್ಗಳ ಪ್ರಯತ್ನಕ್ಕೆ ಕೆ.ಎಲ್.ರಾಹುಲ್ (ಅಜೇಯ 51) ಹಾಗೂ ಸೂರ್ಯಕುಮಾರ್ ಯಾದವ್ (ಅಜೇಯ 50) ಅಡ್ಡಿಯಾದರು. ತಂಡವು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿತು.
Gold Rate Today : ಚಿನ್ನದ ಬೆಲೆಯಲ್ಲಿ ಏರಿಕೆ – ಇಂದಿನ ಚಿನ್ನ ಹಾಗೂ ಬೆಳ್ಳಿ ದರವನ್ನು ಇಲ್ಲಿ ತಿಳಿಯಿರಿ
ಹೊಸ ದಾಖಲೆ
ಟೀಂ ಇಂಡಿಯಾ ಈಗಾಗಲೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ದಾಖಲೆಯನ್ನು ಮಾಡಿದೆ. ಈ ಮೂಲಕ ಪಾಕಿಸ್ತಾನದ ರೆಕಾರ್ಡ್ ಬ್ರೇಕ್ ಆಗಿದೆ. ಇದರ ಜೊತೆಗೆ ನಾಯಕನಾಗಿ ರೋಹಿತ್ ಶರ್ಮಾ ಹೊಸ ಮೈಲಿಗಲ್ಲು ತಲುಪಿದ್ದಾರೆ. ಹಿಟ್ಮ್ಯಾನ್ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ಪಂದ್ಯ ಗೆದ್ದ ಟೀಂ ಇಂಡಿಯಾ ನಾಯಕ ಎಂಬ ಸಾಧನೆ ಮಾಡಿದ್ದಾರೆ.
ಈ ಮೊದಲು ಮಹೇಂದ್ರ ಸಿಂಗ್ ಧೋನಿ 2016ರಲ್ಲಿ 15 ಪಂದ್ಯಗಳನ್ನ ಜಯಿಸಿದ್ರು. ಈ ದಾಖಲೆ ಮುರಿದ ಹಿಟ್ಮ್ಯಾನ್ 2022ರಲ್ಲಿ ಪ್ರಸ್ತುತ 16 ಗೆಲುವನ್ನ ಸಂಪಾದಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಇನ್ನೂ ಎರಡು ಪಂದ್ಯಗಳು ಬಾಕಿ ಇರುವುದರ ಜೊತೆಗೆ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಕೂಡ ನಡೆಯುವುದರಿಂದ ರೋಹಿತ್ ಶರ್ಮಾ ದಾಖಲೆ ಮತ್ತಷ್ಟು ಎತ್ತರಕ್ಕೆ ತಲುಪುವ ಸಾಧ್ಯತೆ ಇದೆ.
ದಕ್ಷಿಣ ಆಫ್ರಿಕಾ 8ಕ್ಕೆ106 (20 ಓವರ್)
ಡಿಕಾಕ್ ಬಿ ಆರ್ಷದೀಪ್ 1 (4ಎ), ಬವುಮಾ ಬಿ ದೀಪಕ್ 0 (4ಎ), ರೊಸೊವ್ ಸಿ ಪಂತ್ ಬಿ ಆರ್ಷದೀಪ್ 0 (1ಎ), ಮರ್ಕರಂ ಎಲ್ಬಿಡಬ್ಲ್ಯು ಬಿ ಹರ್ಷಲ್ 25 (24ಎ, 4X3,6X1), ಮಿಲ್ಲರ್ ಬಿ ಆರ್ಷದೀಪ್ 0 (1ಎ), ಸ್ಟಬ್ಸ್ ಸಿ ಆರ್ಷದೀಪ್ ಬಿ ದೀಪಕ್ 0 (1ಎ), ಪಾರ್ನೆಲ್ ಸಿ ಸೂರ್ಯಕುಮಾರ್ ಬಿ ಅಕ್ಷರ್ 24 (37ಎ, 4X1, 6X1), ಮಹಾರಾಜ ಬಿ ಹರ್ಷಲ್ 41 (35ಎ, 4X5, 6X2), ರಬಾಡ ಔಟಾಗದೆ 7 (11ಎ), ಎನ್ರಿಚ್ ಔಟಾಗದೆ 2 (2ಎ)
ಇತರೆ 6 (ವೈಡ್ 6)
ವಿಕೆಟ್ ಪತನ:
1-1 (ತೆಂಬಾ ಬವುಮಾ; 0.6), 2-1 (ಕ್ವಿಂಟನ್ ಡಿಕಾಕ್; 1.2), 3-8 (ರಿಲಿ ರೊಸೊವ್; 1.5), 4-8 (ಡೇವಿಡ್ ಮಿಲ್ಲರ್;1.6), 5-9 (ಟ್ರಿಸ್ಟನ್ ಸ್ಟಬ್ಸ್;2.3), 6-42 (ಏಡನ್ ಮರ್ಕರಂ;7.6), 7-68 (ವೇಯ್ನ್ ಪಾರ್ನೆಲ್; 15.5), 8-101 (ಕೇಶವ್ ಮಹಾರಾಜ; 19.1)
ಬೌಲಿಂಗ್:
ದೀಪಕ್ ಚಾಹರ್ 4-0-24-2, ಆರ್ಷದೀಪ್ ಸಿಂಗ್ 4-0-32-3, ಆರ್. ಅಶ್ವಿನ್ 4-1-8-0, ಹರ್ಷಲ್ ಪಟೇಲ್ 4-0-26-2, ಅಕ್ಷರ್ ಪಟೇಲ್ 4-0-16-1
ಭಾರತ 2ಕ್ಕೆ110 (16.4 ಓವರ್)
ರಾಹುಲ್ ಅಜೇಯ 51 (56ಎ, 4X2, 6X4), ರೋಹಿತ್ ಸಿ ಡಿಕಾಕ್ ಬಿ ರಬಾಡ 0 (2ಎ), ವಿರಾಟ್ ಸಿ ಡಿಕಾಕ್ ಬಿ ಎನ್ರಿಚ್ 3 (9ಎ), ಸೂರ್ಯಕುಮಾರ್ ಅಜೇಯ 50 (33ಎ, 4X5, 6X3)
ಇತರೆ 6 (ವೈಡ್ 6)
ವಿಕೆಟ್ ಪತನ:
1-9 (ರೋಹಿತ್ ಶರ್ಮಾ; 2.2), 2-17 (ವಿರಾಟ್ ಕೊಹ್ಲಿ; 6.1)
ಬೌಲಿಂಗ್: ಕಗಿಸೊ ರಬಾಡ 4-1-16-1, ವೇಯ್ನ್ ಪಾರ್ನೆಲ್ 4-0-14-0, ಎನ್ರಿಚ್ ನಾಕಿಯಾ 3-0-32-1, ತಬ್ರೇಜ್ ಶಮ್ಸಿ 2.4-0-27-0, ಕೇಶವ್ ಮಹಾರಾಜ 3-0-21-0
ಕ್ರೀಡೆ
Vaibhav Suryavamshi-52 ಎಸೆತಗಳಲ್ಲಿ ದ್ವಿಶತಕ, 28 ಸಿಕ್ಸರ್ಗಳ ಅಬ್ಬರ; ಒಂದೇ ಪಂದ್ಯದಲ್ಲಿ ಎರಡು ವಿಶ್ವದಾಖಲೆ ಬರೆದ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ
ಭಾರತದ ಯುವ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮಂಗಳವಾರ ದೋಹಾದಲ್ಲಿ ನಡೆದ ‘ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026’ ಟೂರ್ನಿಯ ಯುಎಇ ವಿರುದ್ಧದ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ ಲಿಸ್ಟ್-ಎ ಕ್ರಿಕೆಟ್ನಲ್ಲಿ ಅತಿ ವೇಗದ ದ್ವಿಶತಕದ ವಿಶ್ವದಾಖಲೆ ನಿರ್ಮಿಸಿದ್ದಾರೆ.
ದೋಹಾ: ಭಾರತದ ಯುವ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮಂಗಳವಾರ ದೋಹಾದಲ್ಲಿ ನಡೆದ ‘ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026’ ಟೂರ್ನಿಯ ಯುಎಇ ವಿರುದ್ಧದ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ ಲಿಸ್ಟ್-ಎ ಕ್ರಿಕೆಟ್ನಲ್ಲಿ ಅತಿ ವೇಗದ ದ್ವಿಶತಕದ ವಿಶ್ವದಾಖಲೆ ನಿರ್ಮಿಸಿದ್ದಾರೆ.
28 ಸಿಕ್ಸರ್, 7 ಬೌಂಡರಿಗಳೊಂದಿಗೆ 204 ರನ್..!
ಯುಎಇ ನಾಯಕ ಬಾಸಿಲ್ ಹಮೀದ್ ಎಸೆತವನ್ನು ಸಿಕ್ಸರ್ಗೆ ಅಟ್ಟುವ ಮೂಲಕ ವೈಭವ್ ತಮ್ಮ ಐತಿಹಾಸಿಕ ದ್ವಿಶತಕ ಪೂರೈಸಿದರು. ಆದರೆ, ದ್ವಿಶತಕದ ಸಂಭ್ರಮದ ಬೆನ್ನಲ್ಲೇ ಮುಂದಿನ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಕೇವಲ 53 ಎಸೆತಗಳನ್ನು ಎದುರಿಸಿದ ಅವರು 28 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 204 ರನ್ ಸಿಡಿಸಿದರು.
2024ರಲ್ಲಿ ನ್ಯೂಜಿಲೆಂಡ್ನ ಚಾಡ್ ಬೋವ್ಸ್ 103 ಎಸೆತಗಳಲ್ಲಿ ದ್ವಿಶತಕ ಬಾರಿಸಿ ನಿರ್ಮಿಸಿದ್ದ ದಾಖಲೆಯನ್ನು ವೈಭವ್ ಇದೀಗ ಹಿಂದಿಕ್ಕಿದ್ದಾರೆ.
ಅತಿ ವೇಗದ ಶತಕದ ದಾಖಲೆಯೂ ವೈಭವ್ ಹೆಸರಿಗೆ
ದ್ವಿಶತಕದ ಜೊತೆಗೆ ವೈಭವ್ ಮತ್ತೊಂದು ವಿಶ್ವದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಲಿಸ್ಟ್-ಎ ಕ್ರಿಕೆಟ್ನ ಅತಿ ವೇಗದ ಶತಕದ ದಾಖಲೆ ನಿರ್ಮಿಸಿದ್ದಾರೆ.
ಇದಕ್ಕೂ ಮೊದಲು ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್ಗುರ್ಕ್ 29 ಎಸೆತಗಳಲ್ಲಿ ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 31 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ಈ ಇಬ್ಬರ ದಾಖಲೆಗಳನ್ನು ವೈಭವ್ ಮುರಿದಿದ್ದಾರೆ.
ಹರ್ಪ್ರೀತ್ ಭಾಟಿಯಾ ಶತಕ ವ್ಯರ್ಥ
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಯುಎಇ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಭಾರತದ ವೇಗಿಗಳಾದ ಹರ್ಷಿತ್ ರಾಣಾ ಮತ್ತು ಅರ್ಷದ್ ಖಾನ್ ದಾಳಿಗೆ ತತ್ತರಿಸಿದ ಯುಎಇ 20 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ತಂಡಕ್ಕೆ ಆಸರೆಯಾದ ಭಾರತದ ಮಾಜಿ ದೇಶೀಯ ಕ್ರಿಕೆಟಿಗ ಹರ್ಪ್ರೀತ್ ಸಿಂಗ್ ಭಾಟಿಯಾ 144 ಎಸೆತಗಳಲ್ಲಿ 130 ರನ್ ಸಿಡಿಸಿ ಗಮನ ಸೆಳೆದರು. ಅವರಿಗೆ ಮುಹಮ್ಮದ್ ಶಹದಾದ್ (28) ಹಾಗೂ ಇಥಾನ್ ಡಿಸೋಜಾ (25) ಉತ್ತಮ ಸಾಥ್ ನೀಡಿದರು.
ಕೊನೆಯಲ್ಲಿ ನಾಯಕ ಬಾಸಿಲ್ ಹಮೀದ್ ಅಜೇಯ 36 ರನ್ ಗಳಿಸುವ ಮೂಲಕ ಯುಎಇ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ ಕಲೆಹಾಕಿತು.
ಭಾರತ ‘ಎ’ ಪರ ಅರ್ಷದ್ ಖಾನ್ 43 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಹರ್ಷ್ ದುಬೆ, ಶಹಬಾಜ್ ಅಹ್ಮದ್, ಸೂರ್ಯಾಂಶ್ ಶೆಡ್ಗೆ ಹಾಗೂ ಹರ್ಷಿತ್ ರಾಣಾ ತಲಾ ಒಂದು ವಿಕೆಟ್ ಪಡೆದರು.
ಬಳಿಕ ಬ್ಯಾಟಿಂಗ್ಗೆ ಇಳಿದ ಭಾರತ ‘ಎ’ ತಂಡದ ಪರ ವೈಭವ್ ಸೂರ್ಯವಂಶಿ ನಡೆಸಿದ ಸಿಕ್ಸರ್ಗಳ ಅಬ್ಬರಕ್ಕೆ ಯುಎಇ ಬೌಲರ್ಗಳು ತತ್ತರಿಸಿದರು.
ಕ್ರೀಡೆ
Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಭುವನ್ರಾಮ್ ಭಾರ ಎತ್ತುವ ಸ್ಪರ್ಧೆಯಲ್ಲಿ ವಿಟಿಯು ತಂಡಕ್ಕೆ ಆಯ್ಕೆ
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಭುವನ್ರಾಮ್ ಜಗದೀಶ್ ಭಂಡಾರಿ ಇವರು ಅಖಿಲ ಭಾರತ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಭಾರ ಎತ್ತುವ ಸ್ಪರ್ಧೆಯಲ್ಲಿ 75 ಕೆಜಿ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಭುವನ್ರಾಮ್ ಜಗದೀಶ್ ಭಂಡಾರಿ ಇವರು ಅಖಿಲ ಭಾರತ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಭಾರ ಎತ್ತುವ ಸ್ಪರ್ಧೆಯಲ್ಲಿ 75 ಕೆಜಿ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಯಾಗಿರುವ ಇವರು ಚೆನ್ನೈನ ವಿನಾಯಕ ಮಿಶನ್ಸ್ ರೀಸರ್ಚ್ ಫೌಂಡೇಶನ್ ಆಶ್ರಯದಲ್ಲಿ ನವೆಂಬರ್ 21 ರಿಂದ 23 ರವರೆಗೆ ನಡೆಯುವ ಈ ಸ್ಪರ್ಧೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ.
ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ತಿಳಿಸಿದ್ದಾರೆ.
ಕ್ರೀಡೆ
IPL 2027-ಐಪಿಎಲ್ 2027 ಮಿನಿ ಹರಾಜು ಡಿ.16ಕ್ಕೆ ಫಿಕ್ಸ್: ಆರ್ಸಿಬಿ ಸೇರಿ 10 ತಂಡಗಳ ಪರ್ಸ್ ವಿವರ ಇಲ್ಲಿದೆ..
ಐಪಿಎಲ್ 2027ರ ಮಿನಿ ಹರಾಜಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 17ರ ಗಡುವಿನೊಳಗೆ ಬಿಸಿಸಿಐಗೆ ಸಲ್ಲಿಸಿವೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಆಟಗಾರರ ರಿಟೆನ್ಷನ್ ಮತ್ತು ಟ್ರೇಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಹರಾಜಿನಲ್ಲಿ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಮತ್ತು ಎಷ್ಟು ಆಟಗಾರರನ್ನು ಖರೀದಿಸಲು ಅವಕಾಶವಿದೆ ಎಂಬ ಲೆಕ್ಕಾಚಾರ ಬಹಿರಂಗವಾಗಿದೆ.
ಬೆಂಗಳೂರು, ನ.18: ಐಪಿಎಲ್ 2027ರ ಮಿನಿ ಹರಾಜಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 17ರ ಗಡುವಿನೊಳಗೆ ಬಿಸಿಸಿಐಗೆ ಸಲ್ಲಿಸಿವೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಆಟಗಾರರ ರಿಟೆನ್ಷನ್ ಮತ್ತು ಟ್ರೇಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಹರಾಜಿನಲ್ಲಿ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಮತ್ತು ಎಷ್ಟು ಆಟಗಾರರನ್ನು ಖರೀದಿಸಲು ಅವಕಾಶವಿದೆ ಎಂಬ ಲೆಕ್ಕಾಚಾರ ಬಹಿರಂಗವಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ಬಳಿ ಅತಿ ಹೆಚ್ಚು ಹಣ!
ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಅತಿ ಹೆಚ್ಚು ಹಣದೊಂದಿಗೆ ಕಣಕ್ಕಿಳಿಯಲಿದೆ. ಆಟಗಾರರನ್ನು ಉಳಿಸಿಕೊಂಡ ಬಳಿಕ ತಂಡದ ಪರ್ಸ್ನಲ್ಲಿ ಬರೋಬ್ಬರಿ ₹47.45 ಕೋಟಿ ಉಳಿದಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ₹41.65 ಕೋಟಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ₹40.15 ಕೋಟಿ ಹಣದೊಂದಿಗೆ ನಂತರದ ಸ್ಥಾನಗಳಲ್ಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಬಳಿ ₹39.50 ಕೋಟಿ ಹಾಗೂ ಮುಂಬೈ ಇಂಡಿಯನ್ಸ್ ಬಳಿ ₹32.60 ಕೋಟಿ ಹಣವಿದೆ.
ಇನ್ನೊಂದೆಡೆ, ಗುಜರಾತ್ ಟೈಟಾನ್ಸ್ ತಂಡದ ಬಳಿ ಕೇವಲ ₹8.75 ಕೋಟಿ ಮಾತ್ರ ಉಳಿದಿದ್ದು, 10 ತಂಡಗಳ ಪೈಕಿ ಅತ್ಯಂತ ಕಡಿಮೆ ಮೊತ್ತ ಹೊಂದಿರುವ ತಂಡವಾಗಿದೆ.
ಡೆಲ್ಲಿ, ಮುಂಬೈಗೆ ಹೆಚ್ಚು ಆಟಗಾರರ ಖರೀದಿ ಅವಕಾಶ
ಖಾಲಿ ಇರುವ ಆಟಗಾರರ ಸ್ಥಾನಗಳ ಲೆಕ್ಕಾಚಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಂಚೂಣಿಯಲ್ಲಿವೆ. ಈ ಎರಡೂ ತಂಡಗಳು ತಲಾ 9 ಆಟಗಾರರನ್ನು ಖರೀದಿಸಲು ಅವಕಾಶ ಹೊಂದಿವೆ.
ಕೋಲ್ಕತ್ತಾ ನೈಟ್ ರೈಡರ್ಸ್ 8, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಲಾ 7 ಆಟಗಾರರನ್ನು ಖರೀದಿಸಬಹುದು. ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಲ್ಲಿ ತಲಾ 6 ಸ್ಥಾನಗಳು ಖಾಲಿಯಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 6 ಆಟಗಾರರನ್ನು ಖರೀದಿಸುವ ಅವಕಾಶವಿದ್ದು, ಗುಜರಾತ್ ಟೈಟಾನ್ಸ್ ತಂಡದಲ್ಲಿ ಕೇವಲ 3 ಸ್ಥಾನಗಳು ಮಾತ್ರ ಖಾಲಿಯಿವೆ.
10 ತಂಡಗಳ ಪರ್ಸ್ ಮೊತ್ತ ಮತ್ತು ಖಾಲಿ ಸ್ಥಾನಗಳ ವಿವರ
ತಂಡ ಉಳಿದ ಹಣ ಖಾಲಿ ಸ್ಥಾನ ವಿದೇಶಿ ಆಟಗಾರರ ಸ್ಥಾನ
ಲಕ್ನೋ ಸೂಪರ್ ಜೈಂಟ್ಸ್ ₹47.45 ಕೋಟಿ 7 3
ಕೋಲ್ಕತ್ತಾ ನೈಟ್ ರೈಡರ್ಸ್ ₹41.65 ಕೋಟಿ 8 3
ಸನ್ರೈಸರ್ಸ್ ಹೈದರಾಬಾದ್ ₹40.15 ಕೋಟಿ 7 3
ಡೆಲ್ಲಿ ಕ್ಯಾಪಿಟಲ್ಸ್ ₹39.50 ಕೋಟಿ 9 4
ಮುಂಬೈ ಇಂಡಿಯನ್ಸ್ ₹32.60 ಕೋಟಿ 9 2
ಚೆನ್ನೈ ಸೂಪರ್ ಕಿಂಗ್ಸ್ ₹28.05 ಕೋಟಿ 6 2
ರಾಜಸ್ಥಾನ್ ರಾಯಲ್ಸ್ ₹27.05 ಕೋಟಿ 6 2
ಪಂಜಾಬ್ ಕಿಂಗ್ಸ್ ₹18.60 ಕೋಟಿ 6 2
ರಾಯಲ್ ಚಾಲೆಂಜರ್ಸ್ ಬೆಂಗಳೂರು ₹14.15 ಕೋಟಿ 6 1
ಗುಜರಾತ್ ಟೈಟಾನ್ಸ್ ₹8.75 ಕೋಟಿ 3 2
ಡಿಸೆಂಬರ್ 16ರಂದು ಗೋವಾದಲ್ಲಿ ಮಿನಿ ಹರಾಜು
ಐಪಿಎಲ್ 2027ರ ಮಿನಿ ಹರಾಜು ಡಿಸೆಂಬರ್ 16, 2026ರಂದು ಗೋವಾದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಎಲ್ಲಾ 10 ತಂಡಗಳು ತಮ್ಮ ತಂಡಕ್ಕೆ ಅಗತ್ಯವಿರುವ ಆಟಗಾರರನ್ನು ಖರೀದಿಸಲು ಪೈಪೋಟಿ ನಡೆಸಲಿವೆ.
2025ರಿಂದ 2027ರವರೆಗಿನ ಮೂರು ವರ್ಷಗಳ ಅವಧಿಯ ಆರಂಭದಲ್ಲಿ ಪ್ರತಿ ತಂಡಕ್ಕೆ ಆಟಗಾರರ ಖರೀದಿಗಾಗಿ ₹120 ಕೋಟಿ ಪರ್ಸ್ ನಿಗದಿಪಡಿಸಲಾಗಿತ್ತು. ನಿಯಮದ ಪ್ರಕಾರ ಪ್ರತಿ ಮಿನಿ ಹರಾಜಿಗೂ ಮುನ್ನ ಈ ಮೊತ್ತಕ್ಕೆ ಹೆಚ್ಚುವರಿಯಾಗಿ ₹5 ಕೋಟಿ ಸೇರ್ಪಡೆಯಾಗುತ್ತದೆ. ಹೀಗಾಗಿ 2027ರ ಮಿನಿ ಹರಾಜಿನಲ್ಲಿ ಪ್ರತಿ ತಂಡದ ಒಟ್ಟು ಪರ್ಸ್ ಮೊತ್ತ ₹130 ಕೋಟಿಗೆ ಏರಿಕೆಯಾಗಲಿದೆ.
ಡಿಸೆಂಬರ್ 16ರಂದು ನಡೆಯಲಿರುವ ಹರಾಜಿನಲ್ಲಿ ಯಾವ ತಂಡ ಯಾವ ಸ್ಟಾರ್ ಆಟಗಾರರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಮತ್ತು ಯಾವ ತಂಡ ಬಲಿಷ್ಠ ಪಡೆಯನ್ನು ಕಟ್ಟಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆಮಾಡಿದೆ.
-
ಕ್ರೈಂ18 hours agoMurder-ಕನ್ಯಾನ: ಚಿಕ್ಕಪ್ಪನ ಎದೆಗೆ ಕತ್ತಿಯಿಂದ ಇರಿದು ಹತ್ಯೆಗೈದ ಯುವತಿ ಅರೆಸ್ಟ್
-
ನಿಧನ ವಾರ್ತೆ18 hours agoAccident-ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಭೀಕರ ಅಪಘಾತ: 8 ವರ್ಷದ ಬಾಲಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವು; ನಾಲ್ವರ ಸ್ಥಿತಿ ಗಂಭೀರ
-
ಕಾರ್ಯಕ್ರಮಗಳು17 hours agoPuttur-ಪುತ್ತೂರು: ನ.27ರಂದು ಅತ್ಯಾಧುನಿಕ ಬಹುಮಹಡಿ ವಾಣಿಜ್ಯ ಸೌಧ ‘ದ್ವಾರಕಾ ಕಮರ್ಶಿಯಲ್ಸ್’ ಲೋಕಾರ್ಪಣೆ; ಒಂದೇ ಸೂರಿನಡಿ ಹೈಪರ್ ಮಾರ್ಕೆಟ್ ಸಹಿತ ಹಲವು ಸೇವೆಗಳು
-
ಸ್ಥಳೀಯ12 hours agoValaalu toll plaza-ವಳಾಲು ಟೋಲ್ ಪ್ಲಾಜಾ ಕಾಮಗಾರಿ ಪೂರ್ಣ; ವಾರದೊಳಗೆ ಅಧಿಕೃತ ಘೋಷಣೆ ಸಾಧ್ಯ; ಬ್ರಹ್ಮರಕೂಟ್ಲು ಟೋಲ್ನಿಂದ ‘ಡಬಲ್ ಟೋಲ್’ ಆತಂಕ..!
-
ಅಪರಾಧ16 hours agoExcise raid-ಬಾಳ್ತಿಲ, ಮೆಲ್ಕಾರ್ನಲ್ಲಿ ಅಬಕಾರಿ ದಾಳಿ: ₹20.37 ಲಕ್ಷ ಮೌಲ್ಯದ ಗೋವಾ ಮದ್ಯ, 2 ಕಾರುಗಳು ವಶ
-
ಅಪರಾಧ12 hours agoRenukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತಿಬ್ಬರು ಸಾಕ್ಷಿಗಳು ಉಲ್ಟಾ; ಪ್ರತಿಕೂಲ ಸಾಕ್ಷಿಗಳೆಂದು ಘೋಷಿಸಿದ ನ್ಯಾಯಾಲಯ
-
ಬಿಗ್ ನ್ಯೂಸ್18 hours agoRakesh Shetty-ಸ್ಟಿಂಗ್ ಆಪರೇಷನ್ ಪ್ರಕರಣ: ಜಾಮೀನು ಅರ್ಜಿ ವಾಪಸ್ ಪಡೆದ ರಾಕೇಶ್ ಶೆಟ್ಟಿ
-
ಕ್ರೀಡೆ17 hours agoVaibhav Suryavamshi-52 ಎಸೆತಗಳಲ್ಲಿ ದ್ವಿಶತಕ, 28 ಸಿಕ್ಸರ್ಗಳ ಅಬ್ಬರ; ಒಂದೇ ಪಂದ್ಯದಲ್ಲಿ ಎರಡು ವಿಶ್ವದಾಖಲೆ ಬರೆದ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ















