Connect with us

ಬಿಗ್ ನ್ಯೂಸ್

ಪುತ್ತೂರು : ಮಾಜಿ ಯೋಧನ ಮನೆಯ ರಸ್ತೆ ಬ್ಲಾಕ್‌ ಮಾಡಿ ಬಸ್ಸು ತಂಗುದಾಣ ನಿರ್ಮಾಣ ದೂರು : ಮಾಜಿ ಸೈನಿಕರ ತಂಡದ ಭೇಟಿ | ಕೂಡಲೇ ರಸ್ತೆ ತಂಗುದಾಣವಾಗಬೇಕು, ಇಲ್ಲದಿದ್ದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ : ನಾಗರೀಕರ, ವಿದ್ಯಾರ್ಥಿಗಳ ಪ್ರತಿಭಟನೆ

Published

on



Ad Widget

Ad Widget

Ad Widget

Ad Widget

ಪುತ್ತೂರು ಜು 14 :  ಪುತ್ತೂರು – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ದಾರಂದಕುಕ್ಕು ಎಂಬಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿತವಾಗುತ್ತಿರುವ ಪ್ರಯಾಣಿಕರ ತಂಗುದಾಣ ವಿವಾದದ ಗೂಡಾಗಿ ಪರಿಣಮಿಸಿದೆ.  ಮಾಜಿ ಸೈನಿಕರೊಬ್ಬರ ಮನೆ ಹೋಗುವ ದಾರಿಯನ್ನು ಬಂದ್‌ ಮಾಡಿ ಪ್ರಯಾಣಿಕರ ತಂಗುದಾಣ ನಿರ್ಮಿಸುತ್ತಿದ್ದಾರೆ ಎಂಬ ದೂರು ಬಂದ ಹಿನ್ನಲೆಯಲ್ಲಿ ಮಾಜಿ ಸೈನಿಕರ ತಂಡವೊಂದು ಸೆ 14 ರಂದು ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿತ್ತು. ಈ ವೇಳೆ ಬಸ್ಸು ನಿಲ್ದಾಣ ನಿರ್ಮಾಣದ ಪರ ಇರುವ ಸ್ಥಳೀಯ ನಾಗರೀಕರು ಸ್ಥಳದಲ್ಲಿ ಜಮಾಯಿಸಿದರು.  

Ad Widget

Ad Widget

Ad Widget

Ad Widget

ಕೆಲ ವರ್ಷಗಳ ಹಿಂದೆ  ಕೆಮ್ಮಾಯಿಯಿಂದ ಸೇಡಿಯಾಪಿನವರೆಗೆ  ಪುತ್ತೂರು  ಉಪ್ಪಿನಂಗಡಿ ಹೆದ್ದಾರಿಯಲ್ಲಿ  ಚತುಷ್ಟಥ ಕಾಮಾಗಾರಿ  ಆರಂಭಗೊಂಡ  ವೇಳೆ ದಾರಂದಕುಕ್ಕುವಿನಲ್ಲಿದ್ದ  ಬಸ್ಸು ತಂಗುದಾಣವನ್ನು ಕೆಡವಲಾಗಿತ್ತು. ಚತುಷ್ಪಥ ಕಾಮಾಗಾರಿ ಪೂರ್ಣಗೊಂಡ ಕೂಡಲೇ  ಬಸ್ ತಂಗುದಾಣ ಪುನನಿರ್ಮಾಣಕ್ಕೆ ನಾಗರಿಕರು ಹಾಗೂ ಕಾಲೇಜ್‌ ವಿದ್ಯಾರ್ಥಿಗಳು ಬನ್ನೂರು ಪಂಚಾಯತ್ ಗೆ ಮನವಿ ಮಾಡಿದ್ದರು. ಪಂಚಾಯತ್‌ ಈ ಬಗ್ಗೆ ಶಾಸಕರಲ್ಲಿ ಬೇಡಿಕೆ ಸಲ್ಲಿಸಿದ ಹಿನ್ನಲೆಯಲ್ಲಿ 5 ಲ .ರೂ ವಿಶೇಷ ಅನುದಾನವನ್ನು ಜಿಲ್ಲಾ ಪಂಚಾಯತ್‌ ಮೂಲಕ  ಅವರು ಒದಗಿಸಿದರು.  

Ad Widget

Ad Widget

Ad Widget alt="Ad Widget"/>

Ad Widget

ಈ ಹಿನ್ನಲೆಯಲ್ಲಿ ಬಸ್ಸು ನಿಲ್ದಾಣಕ್ಕೆ ಅಗತ್ಯ ಜಮೀನನ್ನುಸರ್ವೆ ಇಲಾಖೆ ಗುರುತು ಮಾಡಿದ್ದು, ಇದು ತನ್ನ ಜಮೀನು ಎಂದು ಸ್ಥಳೀಯ ನಿವಾಸಿ ಮಾಜಿ ಸೈನಿಕರೊಬ್ಬರ ಮನೆಯವರು  ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ  ಬಸ್ಸು ನಿಲ್ಧಾಣಕ್ಕೆ ಗುರುತು ಮಾಡಲಾದ ಸ್ಥಳ ಪ್ರಯಾಣಿಕರ ಹಾಗೂ ವಾಹನ ಸಂಚಾರರ ಸುರಕ್ಷತೆಯ ದೃಷ್ಟಿಯಿಂದಲೂ  ಅಪಾಯಕಾರಿ ಎಂದು ಆಕ್ಷೇಪದಲ್ಲಿ ಉಲ್ಲೇಖಿಸಲಾಗಿತ್ತು.  ಹೀಗಾಗಿ ಬಸ್ಸು ತಂಗುದಾಣ ನಿರ್ಮಾಣ ಕಾರ್ಯ ಅರ್ಧದಲ್ಲಿ ಸ್ಥಗಿತವಾಗಿತ್ತು.

Ad Widget

Ad Widget <> Ad Widget

ಬಸ್ಸು ನಿಲ್ದಾಣ ಕಾಮಾಗರಿ ನಡೆಯುತ್ತಿರುವುದು

ಆದರೇ ಇತ್ತೀಚೆಗೆ ನಡೆದ ತ್ರೈಮಾಸಿಕ ಸಭೆಯಲ್ಲಿ “ ದಾರಂದಕುಕ್ಕುವಿನಲ್ಲಿ ವಿದ್ಯಾರ್ಥಿಗಳ, ಸಾರ್ವಜನಿಕರ ಒತ್ತಾಯದ ಮೇರೆಗೆ  ಬಸ್ ಪ್ರಯಾಣಿಕರ ತಂಗುದಾಣಕ್ಕಾಗಿ ಅನುದಾನ ಇಟ್ಟಿದ್ದೇನೆ. ಯಾರದೇ ಪ್ರಭಾವವಿದ್ದರೂ ಇದನ್ನು ಲೆಕ್ಕಿಸದೆ  ತಕ್ಷಣ ಸರ್ವೆ ಕಾರ್ಯ ನಡೆಸಿ ಬಸ್ ಪ್ರಯಾಣಿಕರ ತಂಗುದಾಣದ ಕಾಮಗಾರಿ ನಡೆಸುವಂತೆ ” ಶಾಸಕರು ಸೂಚಿಸಿದ್ದರು.



Ad Widget

ಇದಾದ ಬಳಿಕ ಲೊಕೋಪಯೋಗಿ ಇಲಾಖೆಯ ನಿರ್ದೇಶನದ ಮೇರೆಗೆ  ಖಾಸಗಿ ವ್ಯಕ್ತಿಗಳ  ಆಕ್ಷೇಪದ ಇರುವಂತೆಯೇ  ಸರ್ವೆ ಇಲಾಖೆ ಸರ್ವೆ ನಡೆಸಿ ಬಸ್ ಪ್ರಯಾಣಿಕರ ತಂಗುದಾಣಕ್ಕೆ ಸ್ಥಳಗುರುತು ಮಾಡಿ ಕೊಟ್ಟಿತ್ತು. ಬಳಿಕ ಅಲ್ಲಿ ಸ್ಥಳವನ್ನು ಸಮತ್ತಟ್ಟು ಮಾಡಲಾಗಿತ್ತು.  ಆದರೇ ಸರ್ವೆ ಸರಿಯಾಗಿಲ್ಲ ಎಂದು  ಖಾಸಗಿ ವ್ಯಕ್ತಿ ಮನೆಯವರು ಮತ್ತೆ ಲೊಕೋಪಯೋಗಿ ಇಲಾಖೆಗೆ ಹಾಗೂ ಭೂ ಮಾಪನ ಇಲಾಖೆಗೆ   ಆಕ್ಷೇಪ ವ್ಯಕ್ತಪಡಿಸಿದ್ದರು.

Ad Widget

Ad Widget
ಮಧ್ಯಾಹ್ನ ಸ್ಥಳದಲ್ಲಿ ಜಮಾಯಿಸಿದ ನಾಗರೀಕರು

ಹೀಗಾಗಿ ಲೊಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್‌ ಇಂಜೀನಿಯರ್‌ ಸೆ 15 ರಂದು ಮತ್ತೆ ಪರಿಶೀಲನೆಗೆ ಬರುವುದಾಗಿ ತಿಳಿಸಿದ್ದರು. ಹೀಗಾಗಿ  ಜಿ.ಪಂ ಗೆ ಸೆ 15 ರವರೆಗೆ  ಬಸ್‌ ಸ್ಟ್ಯಾಂಡ್‌ ನಿರ್ಮಾಣ ಕಾಮಾಗಾರಿ ನಡೆಸದಂತೆ ಲೊಕೋಪಯೋಗಿ ಇಲಾಖೆ ಸೂಚಿಸಿತ್ತು ಎನ್ನಲಾಗಿದೆ. ಅಲ್ಲದೇ ಖಾಸಗಿ ವ್ಯಕ್ತಿ ಆಕ್ಷೇಪಣೆ ಸಲ್ಲಿಸಿದರೂ ಭೂ ಮಾಪನ  ಇಲಾಖೆ ಇವರೆಗೆ  ಸ್ಥಳ ಗುರುತಿನಲ್ಲಿ ವ್ಯತ್ಯಾಸ ಇರುವ ಬಗ್ಗೆ ಲೊಕೋಪಯೊಗಿ ಇಲಾಖೆಗೆ ಯಾವುದೇ ಮಾಹಿತಿ ರವಾನಿಸಿಲ್ಲ.

ಬಸ್ಸು ನಿಲ್ದಾಣ ಪರ ಹೋರಾಟಗಾರರು ಹಾಗೂ ಸ್ಥಳ ಪರಿಶೀಲನೆಗೆ ಬಂದಿದ್ದ ಮಾಜಿ ಸೈನಿಕರು ಜತೆಯಾಗಿ ತೆಗೆಸಿಕೊಂಡ ಫೋಟೊ

 ಏತನ್ಮಧ್ಯೆ  ಬಸ್ಸು ನಿಲ್ದಾಣ ಕಾಮಾಗರಿ ನಿಗದಿತ ಸ್ಥಳದಲ್ಲಿ ಆರಂಭಗೊಂಡಿತ್ತು. ಇದರ ವಿರುದ್ದ   ಮಾಜಿ ಯೋಧ  ಮಾಜಿ ಸೈನಿಕರ ಸಂಘಕ್ಕೆ ದೂರು ನೀಡಿದ್ದು ಅದರಂತೆ ಮಾಜಿ ಸೈನಿಕರ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಈ ಬಗ್ಗೆ  ನೆರೆದಿದ್ದ ಸಾರ್ವಜನಿಕರಲ್ಲಿ ಹಾಗೂ ದೂರು ನೀಡಿದ ಮನೆಯವರಲ್ಲಿ ಅವರು ಮಾತುಕತೆ ನಡೆಸಿದ್ದರು. ಇದೇ ವೇಳೆ ಅಲ್ಲಿ ಬಸ್ಸು ನಿಲ್ದಾಣವಾಗಬೇಕೆಂದು ಒತ್ತಾಯಿಸಿದ ಜನರು ಮಾಜಿ ಸೈನಿಕರಿಗೆ ಜೈಕಾರ ಕೂಗಿದ ಘಟನೆಯೂ ನಡೆಯಿತು.  

ಸೂಕ್ತ ತನಿಖೆ ನಡೆಯಬೇಕು

ಆದರೇ ಈ ಬಳಿಕ  ಸುದ್ದಿಗಾರರ ಜತೆ ಮಾತನಾಡಿದ ನಿಯೋಗದಲ್ಲಿ ಮಾಜಿ ಸೈನಿಕರೊಬ್ಬರು “ ಪುತ್ತೂರು ತಾಲೂಕಿನ ಮಾಜಿ ಸೈನಿಕರೊಬ್ಬರು ನನ್ನ ಮನೆಯ ರಸ್ತೆಯನ್ನು ಬ್ಲಾಕ್‌ ಮಾಡಿ ಬಸ್ಸು ನಿಲ್ದಾಣ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದು ಅದರಂತೆ ಪರಿಶೀಲನೆಗಾಗಿ ಬಂದಿದ್ದೇವೆ. ಇಲ್ಲಿ ಬಸ್‌ ಸ್ಟ್ಯಾಂಡ್‌ ಕಾಮಗಾರಿ ನಡೆಯುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.  ಪಿಡಿಒ ಹಾಗೂ ಇಂಜನೀಯರಿಂಗ್‌ ವಿಭಾಗದವರಲ್ಲಿ ಈ ಬಗ್ಗೆ ವಿಚಾರಿಸಿದ್ದು, ಅವರು ನಾವು ಈ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ.  ಇಲ್ಲಿ ನಡೆಯುತ್ತಿರುವ ಕಾಮಾಗಾರಿಯ  ಹೊಣೆಯನ್ನು ಯಾರು ವಹಿಸದಿರುವುದರಿಂದ ಪೊಲೀಸ್‌ ಇಲಾಖೆ ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆ

ಮಾಜಿ ಸೈನಿಕರ ಭೇಟಿಯ ಬಳಿಕ ಬಸ್ಸು ನಿಲ್ದಾಣ ನಿರ್ಮಾಣ ಕಾಮಾಗಾರಿ ಅರ್ಧದಲ್ಲೆ ಸ್ಥಗಿತಗೊಂಡಿತ್ತು. ಇದಾದ ಬಳಿಕ ಸಂಜೆ ಬಸ್ಸು ನಿಲ್ದಾಣಕ್ಕೆ ಜಾಗ ನಿಗದಿಗೊಳಿಸಿದ ಜಾಗದಲ್ಲಿ ವಿದ್ಯಾರ್ಥಿಗಳು ಹಾಗು ನಾಗರೀಕರು ಬಸ್ಸು ನಿಲ್ದಾಣ ಕಾಮಾಗಾರಿ ಪುನರಾರಂಭಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

 ದುರುದ್ಧೇಶದಿಂದ ಬಸ್ಸು ನಿಲ್ದಾಣ ನಿರ್ಮಾಣಕ್ಕೆ ಅಡ್ಡಿ

ಈ ವೇಳೆ ಪ್ರತಿಭಟನಕಾರರನ್ನು ಉದ್ಧೇಶಿಸಿ ಮಾತನಾಡಿದ ಚಿಕ್ಕಮುಡ್ನೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್‌ ಟಿ ಎಸ್‌ “ ಬಸ್ಸು ನಿಲ್ದಾಣ ಕೆಡವುವ ವೇಳೆಯೇ ಶಾಸಕರು ಇಲ್ಲಿಗೆ ಹೊಸ ನಿಲ್ದಾಣ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು. ಅಲ್ಲದೇ ಇಲ್ಲಿಗೆ  ಡಿಜಿಟಲ್‌ ಬಸ್ಸು ತಂಗುದಾಣ ನಿರ್ಮಿಸಿ ಕೊಡಲು ಅಗತ್ಯ ಅನುದಾನವನ್ನು ನೀಡಿದ್ದಾರೆ. ಆದರೇ ಸ್ಥಳೀಯ ಮನೆಯವರೊಬ್ಬರು ದುರುದ್ಧೇಶದಿಂದ ಬಸ್ಸು ನಿಲ್ದಾಣ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನಕಾರರನ್ನು ಉದ್ಧೇಶಿಸಿ ನಾಗೇಶ್‌ ಮಾತನಾಡುತ್ತಿರುವುದು

ದಾರಿ ತಪ್ಪಿಸುವ ಪ್ರಯತ್ನ

“ತಂಗುದಾಣ ನಿರ್ಮಾಣ ತಡೆಯಲು ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ. ಶಾಸಕರು ಯೋಧನ ರಸ್ತೆ ಬಂದ್‌ ಮಾಡಿದ್ದಾರೆ ಎಂಬ ಆರೋಪಗಳನ್ನು ಮಾಡಿಸಿದ್ದು ಇದರಲ್ಲಿ ಎಳಷ್ಟು ಸತ್ಯಾಂಶವಿಲ್ಲ . ಮಾಜಿ ಯೋಧರ ಮನೆಗೆ ಹೋಗಲು ಬೇರೆ ದಾರಿಯಿದೆ, ಈ ಬಸ್ಸು ನಿಲ್ದಾಣದ ಕಾಮಾಗಾರಿ ಆರಂಭಗೊಂಡ ಬಳಿಕ ಸೆ 11 ರಂದು  ಅದರ ಹಿಬ್ಬಂದಿಯಲ್ಲಿ  ಗೇಟ್‌ ಅಳವಡಿಸಿದ್ದಾರೆ.ಈ ಬಗೆಗಿನ ವಿಡಿಯೋ ನಮ್ಮಲಿದೆ. ಈ ಗೇಟ್‌ ನಿರ್ಮಿಸಿ  ಮಾಧ್ಯಮಗಳ  ಹಾಗೂ ಜನರ ದಾರಿ ತಪ್ಪಿಸುತ್ತಿದ್ದಾರೆ. ಈ ನಾಟಕಕ್ಕೆ ಯಾರು ಬಲಿ ಬೀಳಬಾರದು “ ಎಂದು ಹೇಳಿದರು    

ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ

ಕೂಡಲೇ ನಿಗದಿ ಪಡಿಸಿದ ಸ್ಥಳದಲ್ಲಿ ಕೂಡಲೇ ಬಸ್ಸು ನಿಲ್ದಾಣ ನಿರ್ಮಾಣವಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ರಸ್ತೆ ತಡೆದು ಪ್ರತಿಭಟನೆ ಹಾಗೂ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆಯನ್ನು ಪ್ರತಿಭಟನಕಾರರು ನೀಡಿದರು

ಬನ್ನೂರು ಗ್ರಾ. ಪಂ ಅಧ್ಯಕ್ಷೆ ಜಯ ಎ, ಗ್ರಾ.ಪಂ ಸದಸ್ಯರಾದ ಶೀನಪ್ಪ ಕುಲಾಲ್‌ , ರಾಘವೇಂದ್ರ ಗೌಡ ಸ್ಮಿತಾ ಕೃಷ್ಣ ನಾಯ್ಕ್‌ ತಿಮ್ಮಪ್ಪ ಪೂಜಾರಿ, ತಾ.ಪಂ ಮಾಜಿ ಸದಸ್ಯ ಲಕ್ಮಣ ಗೌಡ ಬೆಳ್ಳಿಪಾಡಿ  ಮಾಜಿ ಗ್ರಾ.ಪಂ ಸದಸ್ಯ ರತ್ನಾಕರ ಪ್ರಭು, ತಿಮ್ಮಪ್ಪ ಗೌಡ,  ಮತ್ತಿತ್ತರರು ಉಪಸ್ಥಿತರಿದ್ದರು. ಪುತ್ತೂರು ನಗರ ಠಾಣೆ ಪೊಲೀಸರು ಸೂಕ್ತ ಬಂದೋಬಸ್ತು ಒದಗಿಸಿದರು.

Ad Widget
Click to comment

Leave a Reply

ಮಂಗಳೂರು

Mangalore-ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ನೆಕ್ಲೇಸ್‌ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ

Published

on



Ad Widget

Ad Widget

Ad Widget

Ad Widget

ಸುಲ್ತಾನ್ ಗೋಲ್ಡ್‌ ಶಾಪ್‌ನಲ್ಲಿ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌ ಸರ ಖರೀದಿಸಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನವಿದ್ದ ಬ್ಯಾಗನ್ನು ರಿಕ್ಷಾದಲ್ಲೇ ಮರೆತುಹೋದ ಮಹಿಳೆಗೆ, ರಿಕ್ಷಾ ಚಾಲಕರೊಬ್ಬರು ಅದನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ಸುಲ್ತಾನ್ ಗೋಲ್ಡ್‌ ಶಾಪ್‌ನಲ್ಲಿ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌ ಸರ ಖರೀದಿಸಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನವಿದ್ದ ಬ್ಯಾಗನ್ನು ರಿಕ್ಷಾದಲ್ಲೇ ಮರೆತುಹೋದ ಮಹಿಳೆಗೆ, ರಿಕ್ಷಾ ಚಾಲಕರೊಬ್ಬರು ಅದನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಅಫ್ಜಿಲಾ ಎಂಬವರು ಸುಲ್ತಾನ್ ಗೋಲ್ಡ್‌ ಶಾಪ್‌ನಲ್ಲಿ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌ ಸರವನ್ನು ಖರೀದಿಸಿದ್ದರು. ಬಳಿಕ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನದ ಸರವಿದ್ದ ಬ್ಯಾಗನ್ನು ರಿಕ್ಷಾದಲ್ಲೇ ಬಿಟ್ಟು ಇಳಿದಿದ್ದರು.

Ad Widget

Ad Widget <> Ad Widget

ರಿಕ್ಷಾ ಚಾಲಕ ಬಸವರಾಜ ಅವರಿಗೆ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿ ಚಿನ್ನದ ನೆಕ್ಲೇಸ್‌ ಇರುವುದನ್ನು ಗಮನಿಸಿದ್ದಾರೆ. ಬಳಿಕ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಬ್ಯಾಗನ್ನು ಸುರಕ್ಷಿತವಾಗಿ ವಾರಸುದಾರರಿಗೆ ಮರಳಿಸಿದ್ದಾರೆ.



Ad Widget

ಚಿನ್ನದ ಸರವನ್ನು ಮರಳಿ ಪಡೆದ ಅಫ್ಜಿಲಾ ಅವರು ರಿಕ್ಷಾ ಚಾಲಕ ಬಸವರಾಜ ಅವರ ಪ್ರಾಮಾಣಿಕತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಚಾಲಕನ ಈ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Continue Reading

ಬಿಗ್ ನ್ಯೂಸ್

Half helmet-ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್‌ ಸಂಪೂರ್ಣ ನಿಷೇಧ

Published

on



Ad Widget

Ad Widget

Ad Widget

Ad Widget

ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯಾದ್ಯಂತ ಹಾಫ್ ಹೆಲ್ಮೆಟ್‌ಗಳ ಬಳಕೆ, ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯಾದ್ಯಂತ ಹಾಫ್ ಹೆಲ್ಮೆಟ್‌ಗಳ ಬಳಕೆ, ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಥವಾ ಐಎಸ್‌ಐ ಗುಣಮಟ್ಟದ ಮಾನದಂಡ ಹೊಂದಿರುವ ಸುರಕ್ಷಿತ ಹೆಲ್ಮೆಟ್‌ಗಳನ್ನೇ ಧರಿಸಬೇಕು. ತಪಾಸಣೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಳಪೆ ಗುಣಮಟ್ಟದ ಅಥವಾ ಹಾಫ್ ಹೆಲ್ಮೆಟ್‌ಗಳನ್ನು ಬಳಸುವುದರಿಂದ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗಂಭೀರ ತಲೆಪೆಟ್ಟಾಗುವ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Ad Widget

Ad Widget <> Ad Widget

ಹಾಫ್ ಹೆಲ್ಮೆಟ್‌ಗಳನ್ನು ಬಳಸುವ ಸವಾರರ ವಿರುದ್ಧ ಮಾತ್ರವಲ್ಲದೆ, ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ತಯಾರಿಸುವ ಘಟಕಗಳು ಹಾಗೂ ಅವುಗಳನ್ನು ಮಾರಾಟ ಮಾಡುವ ಅಂಗಡಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅನಧಿಕೃತವಾಗಿ ಇಂತಹ ಹೆಲ್ಮೆಟ್‌ಗಳನ್ನು ಮಾರಾಟ ಮಾಡುವವರ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ.



Ad Widget

ಸರ್ಕಾರದ ನಿಯಮ ಉಲ್ಲಂಘಿಸಿ ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವ ಸವಾರರ ವಿರುದ್ಧ ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳು ದಂಡ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

Ad Widget

Ad Widget

ಸವಾರರು ತಮ್ಮ ಸುರಕ್ಷತೆಯ ದೃಷ್ಟಿಯಿಂದ ಗುಣಮಟ್ಟದ ಹೆಲ್ಮೆಟ್‌ಗಳನ್ನು ಧರಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರಿಗೆ ಇಲಾಖೆ ಮನವಿ ಮಾಡಿದೆ.

Ad Widget
Continue Reading

ಬಿಗ್ ನ್ಯೂಸ್

Puttur-ಪುತ್ತೂರು : ಕೋಟಿ- ಚೆನ್ನಯ KSRTC ಬಸ್ ನಿಲ್ದಾಣದ ನಿಲ್ದಾಣಾಧಿಕಾರಿಯಾಗಿ ಕೆ. ಭಾಸ್ಕರ ಶೆಟ್ಟಿ ಬಜನಿಗುತ್ತು ಪದೋನ್ನತಿ

Published

on



Ad Widget

Ad Widget

Ad Widget

Ad Widget

ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಬಜನಿಗುತ್ತು ಕೆ.ಭಾಸ್ಕರ ಶೆಟ್ಟಿಯವರು ಸಹಾಯಕ ಸಂಚಾರ ನಿರೀಕ್ಷಕರಾಗಿ ಪದನ್ನೋತಿ ಹೊಂದಿ ಪುತ್ತೂರು ಕೋಟಿ- ಚೆನ್ನಯ KSRTC ಬಸ್ ನಿಲ್ದಾಣದ ನಿಲ್ದಾಣಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. 1992 ರಲ್ಲಿ ನಿರ್ವಾಹಕರಾಗಿ KSRTC ಮಂಗಳೂರು ವಿಭಾಗದಲ್ಲಿ ನೇಮಕಗೊಂಡರು.

Ad Widget

Ad Widget

Ad Widget

Ad Widget

ಪುತ್ತೂರು : ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಬಜನಿಗುತ್ತು ಕೆ.ಭಾಸ್ಕರ ಶೆಟ್ಟಿಯವರು ಸಹಾಯಕ ಸಂಚಾರ ನಿರೀಕ್ಷಕರಾಗಿ ಪದನ್ನೋತಿ ಹೊಂದಿ ಪುತ್ತೂರು ಕೋಟಿ- ಚೆನ್ನಯ KSRTC ಬಸ್ ನಿಲ್ದಾಣದ ನಿಲ್ದಾಣಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

1992 ರಲ್ಲಿ ನಿರ್ವಾಹಕರಾಗಿ KSRTC ಮಂಗಳೂರು ವಿಭಾಗದಲ್ಲಿ ನೇಮಕಗೊಂಡರು.

Ad Widget

Ad Widget <> Ad Widget

2022ರಲ್ಲಿ ಸಂಚಾರ ನಿಯಂತ್ರಕರಾಗಿ ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಸೇವೆ ಸಲ್ಲಿಸಿದ ಭಾಸ್ಕರ ಶೆಟ್ಟಿಯವರು 2024ರಿಂದ ಪುತ್ತೂರು ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್ ನಲ್ಲಿ ಕಾರ್ಯನಿರ್ವಹಿಸಿ, 2026 ಜೂನ್ ನಲ್ಲಿ ಬಸ್ ನಿಲ್ದಾಣದ ಸಹಾಯಕ ಸಂಚಾರ ನಿರೀಕ್ಷಕರಾಗಿ ಪದೋನ್ನತಿ ಹೊಂದಿದ್ದಾರೆ.



Ad Widget

ಬಜನಿಯಲ್ಲಿ ಕೃಷಿಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಭಾಸ್ಕರ ಶೆಟ್ಟಿಯವರ ಪತ್ನಿ ಸೀಮಾ ಬಿ. ಶೆಟ್ಟಿ, ಹಿರಿಯ ಪುತ್ರಿ ಕು. ಸನ್ಮಿತಾ ಶೆಟ್ಟಿ ಬಿ.ಇ ಪದವೀಧರೆಯಾಗಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದಾರೆ.

Ad Widget

Ad Widget

ಸುಳ್ಯ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ದಂತ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ಸಮೃದ್ಧಿ ಶೆಟ್ಟಿ.ಕೆ ಇವರ ದ್ವಿತೀಯ ಪುತ್ರಿ.

ಇವರು ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಕಾರ್ನೋಜಿ ಕೃಷ್ಣ ಶೆಟ್ಟಿ ಹಾಗೂ ಬಜನಿಗುತ್ತು ಶೀಲಾವತಿ ಕೆ ಶೆಟ್ಟಿಯವರ ಪುತ್ರ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading