Connect with us

ಬಿಗ್ ನ್ಯೂಸ್

Ghee and butter price-ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ..! ತುಪ್ಪ, ಬೆಣ್ಣೆ ದರವೂ ಏರಿಕೆ

Published

on



Ad Widget

Ad Widget

Ad Widget

Ad Widget

ಹಾಲು ಮತ್ತು ಮೊಸರಿನ ದರ ಏರಿಕೆಯ ಬೆನ್ನಲ್ಲೇ ಇದೀಗ ತುಪ್ಪ ಹಾಗೂ ಬೆಣ್ಣೆಯ ಬೆಲೆಯನ್ನೂ ಹೆಚ್ಚಿಸಲಾಗಿದೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ತುಪ್ಪ ಮತ್ತು ಬೆಣ್ಣೆಯ ದರವನ್ನು ಪರಿಷ್ಕರಿಸಿದ್ದು, ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಹಾಲು ಮತ್ತು ಮೊಸರಿನ ದರ ಏರಿಕೆಯ ಬೆನ್ನಲ್ಲೇ ಇದೀಗ ತುಪ್ಪ ಹಾಗೂ ಬೆಣ್ಣೆಯ ಬೆಲೆಯನ್ನೂ ಹೆಚ್ಚಿಸಲಾಗಿದೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ತುಪ್ಪ ಮತ್ತು ಬೆಣ್ಣೆಯ ದರವನ್ನು ಪರಿಷ್ಕರಿಸಿದ್ದು, ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ.

Ad Widget

Ad Widget

Ad Widget alt="Ad Widget"/>

Ad Widget

ಹೊಸ ದರದ ಪ್ರಕಾರ, ತುಪ್ಪದ ಬೆಲೆಯನ್ನು ಲೀಟರ್‌ಗೆ 750 ರೂ.ನಿಂದ 850 ರೂ.ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಬೆಣ್ಣೆಯ ದರವನ್ನು ಕೆ.ಜಿ.ಗೆ 700 ರೂ.ನಿಂದ 780 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

Ad Widget

Ad Widget <> Ad Widget

ಇನ್ನೊಂದೆಡೆ, ಮೊಸರಿನ ದರವನ್ನು ಲೀಟರ್‌ಗೆ 2ರಿಂದ 3 ರೂ.ವರೆಗೆ ಕಡಿತಗೊಳಿಸುವ ಸಾಧ್ಯತೆಯಿದೆ. ಈ ಕುರಿತು ಒಂದೆರಡು ದಿನಗಳಲ್ಲಿ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.



Ad Widget

ನಿತ್ಯ 10 ಲಕ್ಷ ಲೀಟರ್ ಹಾಲು ಪೂರೈಕೆ ಹೆಚ್ಚಳ
ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ಕೆಎಂಎಫ್‌ಗೆ ಪೂರೈಕೆಯಾಗುವ ಹಾಲಿನ ಪ್ರಮಾಣದಲ್ಲೂ ಏರಿಕೆಯಾಗಿದೆ. ಪ್ರಸ್ತುತ ನಿತ್ಯ ಸುಮಾರು 10 ಲಕ್ಷ ಲೀಟರ್‌ನಷ್ಟು ಹೆಚ್ಚುವರಿ ಹಾಲು ಮಹಾಮಂಡಳಿಗೆ ಪೂರೈಕೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Ad Widget

Ad Widget

ಹಾಲಿಗೆ ಹೆಚ್ಚಿನ ದರ ದೊರೆಯುತ್ತಿರುವ ಹಿನ್ನೆಲೆಯಲ್ಲಿ ರೈತರು ಖಾಸಗಿ ಡೇರಿಗಳ ಬದಲಿಗೆ ಕೆಎಂಎಫ್‌ಗೆ ಹಾಲು ಪೂರೈಸಲು ಆಸಕ್ತಿ ತೋರುತ್ತಿದ್ದಾರೆ. ಇದರಿಂದಾಗಿ ಹಾಲಿನ ಸಂಗ್ರಹ ಪ್ರಮಾಣ ಹೆಚ್ಚಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Ad Widget
Click to comment

Leave a Reply

ಶಿಕ್ಷಣ

ಹವ್ಯಕ ಭಾಷಾ ಸಾಹಿತ್ಯಾಸಕ್ತರಿಗೆ ಸಿಹಿ ಸುದ್ದಿ; ಸಂಕ್ರಾಂತಿ ಹವ್ಯಕ ಸಾಹಿತ್ಯ ಉತ್ಸವ-2027ಕ್ಕೆ ಬರಹಗಳ ಆಹ್ವಾನ

Published

on



Ad Widget

Ad Widget

Ad Widget

Ad Widget

ಪುತ್ತೂರು: ಹವ್ಯಕ ಭಾಷೆಯ ಸಾಹಿತ್ಯವನ್ನು ಬೆಳೆಸುವ ಹಾಗೂ ಹೊಸ ತಲೆಮಾರಿನ ಬರಹಗಾರರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆರಂಭಗೊಂಡಿರುವ ‘ಹವ್ಯಕ ವಿಶ್ವ’ ಡಿಜಿಟಲ್ ವೇದಿಕೆಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ‘ಸಂಕ್ರಾಂತಿ ಹವ್ಯಕ ಸಾಹಿತ್ಯ ಉತ್ಸವ-2027’ ಆಯೋಜಿಸಲಾಗಿದೆ. ಈ ಪ್ರಯುಕ್ತ ಹವ್ಯಕ ಭಾಷೆಯಲ್ಲಿ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾಹಿತ್ಯಾಸಕ್ತರಿಂದ ಬರಹಗಳನ್ನು ಆಹ್ವಾನಿಸಲಾಗಿದೆ.

Ad Widget

Ad Widget

Ad Widget

Ad Widget

ಕರ್ನಾಟಕದ ಕರಾವಳಿ ಭಾಗ (ಕಾಸರಗೋಡು ಸೇರಿದಂತೆ) ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಬಳಕೆಯಲ್ಲಿರುವ ಹವ್ಯಕ ಭಾಷೆಯ ಸಾಹಿತ್ಯಿಕ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಕಥೆ, ಕವನ, ಪ್ರಬಂಧ ಹಾಗೂ ಲಘುಬರಹ ಹೀಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕಥೆ ಮತ್ತು ಲಘುಬರಹ ವಿಭಾಗಗಳಲ್ಲಿ ಸ್ಪರ್ಧಿಗಳು ತಮ್ಮ ಇಷ್ಟದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಕವನ ವಿಭಾಗಕ್ಕೆ ‘ಹಳ್ಳಿ ಮನೆಯೋ/ಬದುಕೋ, ಪೇಟೆ ಮನೆಯೋ/ಬದುಕೋ’ ಎಂಬ ವಿಷಯ ನೀಡಲಾಗಿದೆ. ಪ್ರಬಂಧ ವಿಭಾಗದಲ್ಲಿ ‘ಹವ್ಯಕ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಯುವ ಪೀಳಿಗೆಯ ಜವಾಬ್ದಾರಿ’ ಎಂಬ ವಿಷಯದ ಕುರಿತು ಬರೆಯಬೇಕಾಗಿದೆ.

Ad Widget

Ad Widget <> Ad Widget

ಪ್ರತಿ ವಿಭಾಗದಲ್ಲಿ ಆಯ್ಕೆಯಾಗುವ ಬರಹಗಳಿಗೆ ಪ್ರಥಮ ಬಹುಮಾನವಾಗಿ 3,000 ರೂ. ನಗದು, ಫಲಕ ಹಾಗೂ ಪ್ರಮಾಣಪತ್ರ ಮತ್ತು ದ್ವಿತೀಯ ಬಹುಮಾನವಾಗಿ 1,500 ರೂ. ನಗದು, ಫಲಕ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ.



Ad Widget

ಸ್ಪರ್ಧೆಗೆ ಸಲ್ಲಿಸುವ ಬರಹಗಳು ಕಡ್ಡಾಯವಾಗಿ ಹವ್ಯಕ ಭಾಷೆಯಲ್ಲಿರಬೇಕು. ಈ ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು. ಬರಹಗಳನ್ನು ಯೂನಿಕೋಡ್ ಅಥವಾ ನುಡಿ ಫಾಂಟ್‌ನಲ್ಲಿ ಸಿದ್ಧಪಡಿಸಿ ವರ್ಡ್, ಪಿಡಿಎಫ್ ರೂಪದಲ್ಲಿ ಅಥವಾ ಕಾಗದದಲ್ಲಿ ಬರೆದು ಸ್ಕ್ಯಾನ್ ಮಾಡಿ ಕಳುಹಿಸಬಹುದು.

Ad Widget

Ad Widget

ಬರಹಗಳನ್ನು ಕಳುಹಿಸಲು 2026ರ ಡಿಸೆಂಬರ್ 1 ಕೊನೆಯ ದಿನವಾಗಿದ್ದು, ಸ್ಪರ್ಧೆಯ ಫಲಿತಾಂಶವನ್ನು 2027ರ ಜನವರಿ 14ರ ಸಂಕ್ರಾಂತಿ ದಿನ ಪ್ರಕಟಿಸಲಾಗುವುದು.

ಆಸಕ್ತರು ತಮ್ಮ ಬರಹಗಳನ್ನು editor@havyakavishwa.com ಅಥವಾ havyakavishwa@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ವಾಟ್ಸ್ಆ್ಯಪ್ ಮೂಲಕವೂ +91 6360604365 ಸಂಖ್ಯೆಗೆ ಕಳುಹಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ havyakavishwa.com ವೆಬ್‌ಸೈಟ್ ಸಂಪರ್ಕಿಸಬಹುದು ಎಂದು ಹವ್ಯಕ ವಿಶ್ವ ಬಳಗದ ಪರವಾಗಿ ಕೃಷ್ಣ ಕಿಶೋರ್ ಯೇನಂಕೂಡ್ಲು ತಿಳಿಸಿದ್ದಾರೆ.

Ad Widget
Continue Reading

ಸ್ಥಳೀಯ

Kukke Subrahmanya-ಕುಕ್ಕೆ ಸುಬ್ರಹ್ಮಣ್ಯ: ನದಿಗೆ ಹಾರಿದ ಮಹಿಳೆಗೆ ಮೊಸಳೆ ಕಚ್ಚಿ ಸಿಕ್ಕಿತು ಜೀವದಾನ..! ಸಾಯಲು ಹೋದವಳು ಬದುಕಿ ಬಂದ ವಿಚಿತ್ರ ಘಟನೆ..!

Published

on



Ad Widget

Ad Widget

Ad Widget

Ad Widget

ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕುಮಾರಧಾರ ನದಿಗೆ ಹಾರಿದ ಮಹಿಳೆಯೊಬ್ಬರಿಗೆ ಮೊಸಳೆ ಕಚ್ಚಿದ ಪರಿಣಾಮ, ಆಕೆ ಜೀವ ಭಯದಿಂದ ಚೀರಿ ಬದುಕಿ ಬಂದ ವಿಚಿತ್ರ ಹಾಗೂ ಅಚ್ಚರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆ ಬಳಿ ನವೆಂಬರ್ 4 ರ ತಡರಾತ್ರಿ ಸಂಭವಿಸಿದೆ.

Ad Widget

Ad Widget

Ad Widget

Ad Widget

ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕುಮಾರಧಾರ ನದಿಗೆ ಹಾರಿದ ಮಹಿಳೆಯೊಬ್ಬರಿಗೆ ಮೊಸಳೆ ಕಚ್ಚಿದ ಪರಿಣಾಮ, ಆಕೆ ಜೀವ ಭಯದಿಂದ ಚೀರಿ ಬದುಕಿ ಬಂದ ವಿಚಿತ್ರ ಹಾಗೂ ಅಚ್ಚರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆ ಬಳಿ ನವೆಂಬರ್ 4 ರ ತಡರಾತ್ರಿ ಸಂಭವಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಉಡುಪಿ ಮೂಲದ ಮಹಿಳೆಯೊಬ್ಬರು ಕೌಟುಂಬಿಕ ಮನಸ್ತಾಪದಿಂದ ಬೇಸತ್ತು ನವೆಂಬರ್ 4 ರ ತಡರಾತ್ರಿ ಕುಮಾರಧಾರಾ ನದಿ ಸೇತುವೆ ಮೇಲಿಂದ ನೀರಿಗೆ ಹಾರಿದ್ದರು.

Ad Widget

Ad Widget <> Ad Widget

ಮಹಿಳೆ ನದಿಯ ನೀರಿಗೆ ಧುಮುಕಿದ ತಕ್ಷಣವೇ ನದಿಯಲ್ಲಿದ್ದ ಮೊಸಳೆಯೊಂದು ಆಕೆಗೆ ಕಚ್ಚಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದರೂ, ಮೊಸಳೆ ದಾಳಿ ನಡೆಸುತ್ತಿದ್ದಂತೆ ತೀವ್ರ ಭೀತಿ ಹಾಗೂ ನೋವಿನಿಂದ ಮಹಿಳೆ ನದಿಯ ಮಧ್ಯದಲ್ಲೇ ಗಟ್ಟಿಯಾಗಿ ಬೊಬ್ಬೆ ಹೊಡೆದು ಚೀರಲು ಆರಂಭಿಸಿದ್ದಾರೆ. ಈ ವೇಳೆ ಸೇತುವೆಯ ಪಕ್ಕದಲ್ಲಿದ್ದ ವಸತಿ ಗೃಹದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಮಹಿಳೆಯ ಆಕ್ರಂದನ ಕೇಳಿ ತಕ್ಷಣವೇ ಟಾರ್ಚ್ ಬೆಳಕಿನೊಂದಿಗೆ ನದಿ ದಂಡೆಗೆ ಧಾವಿಸಿದ್ದಾರೆ.



Ad Widget

ಮಹಿಳೆ ನಿರಂತರವಾಗಿ ಚೀರಿ ಬೊಬ್ಬೆ ಹೊಡೆದಿದ್ದರಿಂದ ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬಂದಿದ್ದರಿಂದ ಗಾಬರಿಗೊಂಡ ಮೊಸಳೆ ಮಹಿಳೆಯನ್ನು ಬಿಟ್ಟು ನೀರಿನಲ್ಲಿ ಈಜಿಕೊಂಡು ಕಾಲ್ಕಿತ್ತಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಮಹಿಳೆಯನ್ನು ಸುರಕ್ಷಿತವಾಗಿ ನೀರಿನಿಂದ ಹೊರಗೆ ತೆಗೆದು ದಂಡೆಗೆ ಕರೆತಂದಿದ್ದಾರೆ. ಸಾಮಾನ್ಯವಾಗಿ ನೀರಿಗೆ ಹಾರಿದರೆ ಮುಳುಗಿ ಪ್ರಾಣ ಹೋಗುತ್ತಿತ್ತು, ಆದರೆ ಇಲ್ಲಿ ಮೊಸಳೆ ಕಚ್ಚಿದ್ದರಿಂದಲೇ ಮಹಿಳೆ ಭಯದಿಂದ ಚೀರಿ ಸ್ಥಳೀಯರ ಗಮನ ಸೆಳೆಯುವಂತಾಯಿತು. ಹೀಗಾಗಿ ‘ಮೊಸಳೆ ಕಡಿತವೇ ಆಕೆಯ ಜೀವ ಉಳಿಸಿತು’ ಎಂದು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Ad Widget

Ad Widget

ಸ್ಥಳೀಯರು ತಕ್ಷಣವೇ ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸಿದಾಗ, ಕೌಟುಂಬಿಕ ಸಣ್ಣಪುಟ್ಟ ಮನಸ್ತಾಪಗಳಿಂದ ಬೇಸತ್ತು ಜೀವ ಕಳೆದುಕೊಳ್ಳಲು ಉಡುಪಿಯಿಂದ ಕುಕ್ಕೆಗೆ ಬಂದು ನದಿಗೆ ಹಾರಿದ್ದಾಗಿ ತಿಳಿಸಿದ್ದಾರೆ. ಬಳಿಕ ಉಡುಪಿಯಲ್ಲಿದ್ದ ಆಕೆಯ ಕುಟುಂಬಸ್ಥರನ್ನು ಸಂಪರ್ಕಿಸಿ ಸುಬ್ರಹ್ಮಣ್ಯಕ್ಕೆ ಕರೆಸಿದ ಪೊಲೀಸರು, ಅವರಿಗೆ ಸೂಕ್ತ ಕೌನ್ಸೆಲಿಂಗ್ ನಡೆಸಿ ಮಹಿಳೆಯನ್ನು ಕುಟುಂಬಸ್ಥರ ಜೊತೆ ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ.

Ad Widget
Continue Reading

ಸ್ಥಳೀಯ

Fertilizer-ಸದ್ದಿಲ್ಲದೆ ರಸಗೊಬ್ಬರ ಧಾರಣೆ ಏರಿಕೆ – ಸ್ಟಾಕ್ ಖಾಲಿ : ಕೃಷಿಕರಿಗೆ ಶಾಕ್

Published

on



Ad Widget

Ad Widget

Ad Widget

Ad Widget

ಮಳೆ ಕೊರತೆ ಹಾಗೂ ರಸಗೊಬ್ಬರಗಳ ಬೆಲೆ ಏರಿಕೆಯ ಪರಿಣಾಮ ದೇಶದ ಕೃಷಿ ವಲಯದ ಮೇಲೆ ಗಂಭೀರವಾಗಿ ಗೋಚರಿಸಲಾರಂಭಿಸಿದೆ. ಯೂರಿಯಾ ಸೇರಿದಂತೆ ಪ್ರಮುಖ ರಸಗೊಬ್ಬರಗಳ ಮಾರಾಟದಲ್ಲಿ ಇಳಿಕೆ ದಾಖಲಾಗಿದ್ದು, ಕೃಷಿ ಚಟುವಟಿಕೆಗಳ ಮಂದಗತಿ ಮತ್ತು ರೈತರ ಖರೀದಿ ಸಾಮರ್ಥ್ಯದ ಕುಸಿತದ ಬಗ್ಗೆ ಆತಂಕ ವ್ಯಕ್ತವಾಗಿದೆ.

Ad Widget

Ad Widget

Ad Widget

Ad Widget

ಕುಂದಾಪುರ: ಮಳೆ ಕೊರತೆ ಹಾಗೂ ರಸಗೊಬ್ಬರಗಳ ಬೆಲೆ ಏರಿಕೆಯ ಪರಿಣಾಮ ದೇಶದ ಕೃಷಿ ವಲಯದ ಮೇಲೆ ಗಂಭೀರವಾಗಿ ಗೋಚರಿಸಲಾರಂಭಿಸಿದೆ. ಯೂರಿಯಾ ಸೇರಿದಂತೆ ಪ್ರಮುಖ ರಸಗೊಬ್ಬರಗಳ ಮಾರಾಟದಲ್ಲಿ ಇಳಿಕೆ ದಾಖಲಾಗಿದ್ದು, ಕೃಷಿ ಚಟುವಟಿಕೆಗಳ ಮಂದಗತಿ ಮತ್ತು ರೈತರ ಖರೀದಿ ಸಾಮರ್ಥ್ಯದ ಕುಸಿತದ ಬಗ್ಗೆ ಆತಂಕ ವ್ಯಕ್ತವಾಗಿದೆ. ಇದರ ನಡುವೆ ಮುಂದಿನ ದಿನಗಳಲ್ಲಿಯೂ ಎಲ್‌ನಿನೋ ಪ್ರಭಾವ ಮುಂದುವರಿಯುವ ಸಾಧ್ಯತೆಯಿರುವುದು ಕೃಷಿಕರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಫರ್ಟಿಲೈಸರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್‌ಎಐ) ವರದಿಯ ಪ್ರಕಾರ, 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ದೇಶದಲ್ಲಿ ಯೂರಿಯಾ ಮಾರಾಟ ಶೇ.4.1ರಷ್ಟು ಕುಸಿದಿದೆ. ಸಂಕೀರ್ಣ ರಸಗೊಬ್ಬರಗಳು ಹಾಗೂ ಸಿಂಗಲ್ ಸೂಪರ್ ಫಾಸ್ಪೇಟ್ (ಎಸ್‌ಎಸ್‌ಪಿ) ಉತ್ಪಾದನೆಯಲ್ಲಿಯೂ ಗಣನೀಯ ಇಳಿಕೆ ಕಂಡುಬಂದಿದೆ. ಮಳೆಯ ಅನಿಶ್ಚಿತತೆ, ಕೃಷಿ ಚಟುವಟಿಕೆಗಳಲ್ಲಿನ ಬದಲಾವಣೆ ಹಾಗೂ ಕಚ್ಚಾವಸ್ತುಗಳ ಬೆಲೆ ಏರಿಕೆ ರಸಗೊಬ್ಬರ ವಲಯದ ಮೇಲೆ ಒತ್ತಡ ಸೃಷ್ಟಿಸಿವೆ.

Ad Widget

Ad Widget <> Ad Widget

ಕೃಷಿ ಚಟುವಟಿಕೆಗಳಿಗೆ ಮಳೆ ಕೊರತೆಯ ಹೊಡೆತ
ರಸಗೊಬ್ಬರಗಳ ಬೇಡಿಕೆ ಕುಸಿತಕ್ಕೆ ಮಳೆ ಕೊರತೆ ಪ್ರಮುಖ ಕಾರಣವಾಗಿದೆ. 2026ರ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನೈಋತ್ಯ ಮುಂಗಾರು ಅವಧಿಯಲ್ಲಿ ದೇಶದ ಒಟ್ಟಾರೆ ಮಳೆಯ ಪ್ರಮಾಣ ದೀರ್ಘಾವಧಿ ಸರಾಸರಿಗಿಂತ ಶೇ.12.6ರಷ್ಟು ಕಡಿಮೆಯಾಗಿದೆ. ಅಕ್ಟೋಬರ್‌ನಲ್ಲಿಯೂ ಮಳೆ ಕೊರತೆ ಮುಂದುವರಿದಿದೆ.



Ad Widget

ದಕ್ಷಿಣ ಭಾರತದ ರಾಜ್ಯಗಳು, ಮಹಾರಾಷ್ಟ್ರದ ಮರಾಠವಾಡ ಮತ್ತು ವಿದರ್ಭ, ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್, ರಾಜಸ್ಥಾನ, ದಕ್ಷಿಣ ಬಿಹಾರ ಹಾಗೂ ಅಸ್ಸಾಂನ ಕೆಲವು ಭಾಗಗಳಲ್ಲಿ ಮಳೆಯ ಕೊರತೆ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.

Ad Widget

Ad Widget

ಮಳೆಯನ್ನೇ ಅವಲಂಬಿಸಿರುವ ಪ್ರದೇಶಗಳಲ್ಲಿ ಬಿತ್ತನೆ, ಬೆಳೆಗಳ ಬೆಳವಣಿಗೆ ಹಾಗೂ ಮುಂದಿನ ಹಂತದ ಕೃಷಿ ಕಾರ್ಯಗಳ ಬಗ್ಗೆ ಅನಿಶ್ಚಿತತೆ ಉಂಟಾದಾಗ ರಸಗೊಬ್ಬರ ಬಳಕೆಯೂ ಸಹಜವಾಗಿ ಕಡಿಮೆಯಾಗುತ್ತದೆ. ಕಳೆದ ವರ್ಷ ರಸಗೊಬ್ಬರ ಮಾರಾಟ ಗರಿಷ್ಠ ಮಟ್ಟ ತಲುಪಿದ್ದರೆ, ಪ್ರಸಕ್ತ ಸಾಲಿನಲ್ಲಿ ಬೇಡಿಕೆ ಕುಸಿಯುತ್ತಿರುವ ಲಕ್ಷಣಗಳು ಕಂಡುಬರುತ್ತಿವೆ. 2025-26ರ ಏಪ್ರಿಲ್‌ನಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ ದೇಶದಲ್ಲಿ ಒಟ್ಟು 39.6 ದಶಲಕ್ಷ ಟನ್ ರಸಗೊಬ್ಬರ ಮಾರಾಟವಾಗಿತ್ತು.

ಕಚ್ಚಾವಸ್ತುಗಳ ಬೆಲೆ ಏರಿಕೆಯ ಬಿಸಿ
ರಸಗೊಬ್ಬರ ವಲಯದ ಮೇಲೆ ಕಚ್ಚಾವಸ್ತುಗಳ ಬೆಲೆ ಏರಿಕೆಯೂ ತೀವ್ರ ಪರಿಣಾಮ ಬೀರಿದೆ. ಎಫ್‌ಎಐ ವರದಿಯ ಪ್ರಕಾರ, 2025ರ ಏಪ್ರಿಲ್-ಸೆಪ್ಟೆಂಬರ್ ಅವಧಿಗೆ ಹೋಲಿಸಿದರೆ 2026ರ ಇದೇ ಅವಧಿಯಲ್ಲಿ ಸಂಕೀರ್ಣ ರಸಗೊಬ್ಬರಗಳ ದೇಶೀಯ ಉತ್ಪಾದನೆ ಶೇ.35.5ರಷ್ಟು ಹಾಗೂ ಎಸ್‌ಎಸ್‌ಪಿ ಉತ್ಪಾದನೆ ಶೇ.10.4ರಷ್ಟು ಕುಸಿದಿದೆ.

ವಿಶೇಷವಾಗಿ ಗಂಧಕದ ಆಮದು ಬೆಲೆ ಏರಿಕೆಯು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿದೆ. ಕಳೆದ ವರ್ಷ ಟನ್‌ಗೆ 300ರಿಂದ 400 ಡಾಲರ್ ಇದ್ದ ಗಂಧಕದ ಬೆಲೆ ಪ್ರಸ್ತುತ 1,000ರಿಂದ 1,100 ಡಾಲರ್‌ಗೆ ತಲುಪಿದೆ. ಕಚ್ಚಾವಸ್ತುಗಳ ದುಬಾರಿ ದರ ಮತ್ತು ಉತ್ಪಾದನಾ ವೆಚ್ಚದ ಹೆಚ್ಚಳ ರಸಗೊಬ್ಬರ ತಯಾರಿಕಾ ವಲಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

2027ರ ಆರಂಭದವರೆಗೂ ಎಲ್‌ನಿನೋ ಆತಂಕ..!
2027ರ ಜನವರಿಯಿಂದ ಮಾರ್ಚ್‌ವರೆಗಿನ ಅವಧಿಯವರೆಗೂ ಎಲ್‌ನಿನೋ ಪ್ರಭಾವ ಪ್ರಬಲವಾಗಿರುವ ಸಾಧ್ಯತೆಯಿದೆ ಎಂಬ ಜಾಗತಿಕ ಹವಾಮಾನ ಸಂಸ್ಥೆಗಳ ಮುನ್ಸೂಚನೆ ಕೃಷಿ ವಲಯದಲ್ಲಿ ಆತಂಕ ಮೂಡಿಸಿದೆ.

ಆದರೆ ರಸಗೊಬ್ಬರ ಮಾರಾಟ ಕುಸಿತಕ್ಕೆ ಎಲ್‌ನಿನೋ ಒಂದೇ ಕಾರಣವಲ್ಲ. ಮಳೆಯ ಪ್ರಮಾಣ, ಬೆಳೆ ಪ್ರದೇಶ, ಕೃಷಿ ಚಟುವಟಿಕೆಗಳು, ರಸಗೊಬ್ಬರಗಳ ಬೆಲೆ ಹಾಗೂ ರೈತರ ಖರೀದಿ ಸಾಮರ್ಥ್ಯವೂ ಬೇಡಿಕೆಯನ್ನು ನಿರ್ಧರಿಸುತ್ತವೆ. ಮಳೆ ಕೊರತೆ ಮುಂದುವರಿದು ಕೃಷಿ ಚಟುವಟಿಕೆಗಳು ಕುಂಠಿತಗೊಂಡರೆ ರಸಗೊಬ್ಬರ ಬಳಕೆ ಮಾತ್ರವಲ್ಲದೆ ಬೆಳೆ ಉತ್ಪಾದನೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ಮುಂಗಾರು ಮತ್ತು ಹಿಂಗಾರು ಹಂಗಾಮಿನ ಮಳೆಯ ಸ್ಥಿತಿ, ರಸಗೊಬ್ಬರಗಳ ಲಭ್ಯತೆ, ಬೆಲೆ ಹಾಗೂ ರೈತರ ಖರೀದಿ ಪ್ರವೃತ್ತಿ ಮುಂದಿನ ದಿನಗಳಲ್ಲಿ ಕೃಷಿ ವಲಯದ ಭವಿಷ್ಯವನ್ನು ನಿರ್ಧರಿಸಲಿವೆ.

ದರ ಏರಿಕೆಯಿಂದ ರೈತರಿಗೆ ಹೆಚ್ಚುವರಿ ಹೊರೆ
ಈ ಕುರಿತು ಮಾತನಾಡಿರುವ ಪ್ರಗತಿಪರ ರೈತ ಬಲಾಡಿ ಸಂತೋಷ್ ಶೆಟ್ಟಿ, ಮಳೆ ಕೊರತೆಯ ನಡುವೆಯೇ ಸಂಕೀರ್ಣ ರಸಗೊಬ್ಬರಗಳ ಬೆಲೆ ಏರಿಕೆಯಾಗಿರುವುದು ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.

20:20:0:13 ದರ್ಜೆಯ ರಸಗೊಬ್ಬರದ ಪ್ರತಿ ಚೀಲದ ಬೆಲೆ 2,100 ರೂ. ಹಾಗೂ 12:32:16 ಮತ್ತು 10:26:26 ದರ್ಜೆಯ ರಸಗೊಬ್ಬರಗಳ ಪ್ರತಿ ಚೀಲದ ಬೆಲೆ ಸುಮಾರು 2,400 ರೂ. ತಲುಪಿದೆ. ಈಗಾಗಲೇ ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಈ ಬೆಲೆ ಏರಿಕೆ ಮತ್ತಷ್ಟು ಹೊರೆಯಾಗಿದೆ. ಹೆಚ್ಚಿನ ಬೆಲೆ ನೀಡಿ ಗೊಬ್ಬರ ಖರೀದಿಸುವುದು ಕಷ್ಟವಾಗುತ್ತಿದ್ದು, ಇದು ರೈತರ ಖರೀದಿ ನಿರ್ಧಾರದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!