Connect with us

ಶಿಕ್ಷಣ

Puttur-ವಿದ್ಯಾರ್ಥಿಗಳ ಜೊತೆ ಶಾಸಕ ಅಶೋಕ್ ರೈ ಸಂವಾದ; ಬೇಡಿಕೆ-ಸಮಸ್ಯೆಗಳ ಬಗ್ಗೆ ಚರ್ಚೆ- ನಿಮ್ಮ ಭವಿಷ್ಯಕ್ಕೆ ಭದ್ರಬುನಾದಿ ಕಟ್ಟಿಕೊಳ್ಳಿ: ವಿದ್ಯಾರ್ಥಿಗಳಿಗೆ ಶಾಸಕ ಅಶೋಕ್ ರೈ

Published

on

Ad Widget

Ad Widget

Ad Widget

Ad Widget

ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಸೆ.3 ರಂದು ಪುತ್ತೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ಜೊತೆ ಶಾಸಕರು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಶಾಸಕರು ವಿದ್ಯಾರ್ಥಿಗಳ ಜೊತೆ ಸುಮಾರು 2 ಗಂಟೆಗಳ ಕಾಲ ವಿವಿಧ ವಿಚಾರಗಳಿಗೆ ಸಂಬಧಿಸಿ ಸಂವಾದ, ಚರ್ಚೆ ನಡೆಸಿದರು.

Ad Widget

Ad Widget

Ad Widget

Ad Widget
oplus_2097152

ಪುತ್ತೂರು: ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿದೆ, ನೀವು ಶಿಕ್ಷಣ ಪಡೆದು ನಾಳೆಯ ಬದುಕಿಗೆ ಸುಂದರ ಹೆಜ್ಜೆ ಇಡುವ ಸಮಯ, ನೀವು ಏನಾಂಗಬೇಕೆಂದು ಬಯಸಿದ್ದೀರೋ ಅದನ್ನು ಸಾಧಿಸಿ ಸಫಲರಾಗುವ ಛಲ ನಿಮ್ಮಲ್ಲಿರಬೇಕು. ಶಿಕ್ಷಣವಂತರಾಗಿ ಸಾಧನೆ ಮಾಡುವ ಮೂಲಕ ಕಲಿತ ಸಂಸ್ಥೆಗೆ, ಊರಿಗೆ, ದೇಶಕ್ಕೆ ಕೀರ್ತಿ ತರುವ ಕೆಲಸವನ್ನು ಪ್ರತೀಯೊಬ್ಬರೂ ಮಾಡಬೇಕು, ನಿಮ್ಮ ಶಿಕ್ಷಣಕ್ಕೆ ಏನು ನೆರವು ಬೇಕೋ ಅದನ್ನು ನಾನು ಮಾಡುವೆ ಎಂದು ಶಾಸಕ ಅಶೋಕ್ ರೈ ಅವರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.

Ad Widget

Ad Widget alt="Ad Widget"/>

Ad Widget

ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಸೆ.3 ರಂದು ಪುತ್ತೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ಜೊತೆ ಶಾಸಕರು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಶಾಸಕರು ವಿದ್ಯಾರ್ಥಿಗಳ ಜೊತೆ ಸುಮಾರು 2 ಗಂಟೆಗಳ ಕಾಲ ವಿವಿಧ ವಿಚಾರಗಳಿಗೆ ಸಂಬಧಿಸಿ ಸಂವಾದ, ಚರ್ಚೆ ನಡೆಸಿದರು.

Ad Widget

Ad Widget <> Ad Widget

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಾಸಕರು ವಿದ್ಯಾರ್ಥಿ ಜೀವನ ಎಂಬುದು ನಮ್ಮ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ. ನೀವು ಮುಂದೆ ಏನು ಆಗಬೇಕೆಂದು ಬಯಸಿದ್ದೀರೋ ಅದನ್ನು ಈಡೇರಿಸುವ ಸಮಯ ವಿದ್ಯಾರ್ಥಿ ಜೀವನ. ಎಲ್ಲಿ, ಏನೆಲ್ಲಾ ಕಲಿಯಲು ಅವಕಾಶವಿದೆಯೋ ಅದೆಲ್ಲವನ್ನೂ ಕಲಿತು ಜ್ಞಾನವನ್ನು ವೃದ್ದಿಸಿಕೊಳ್ಳಬೇಕು. ಕಲಿತ ವಿದ್ಯೆ ಎಂದೂ ವ್ಯರ್ಥವಾಗುವುದೇ ಇಲ್ಲ. ಕಲಿಕೆಯ ಜೊತೆ ಇತರೆ ಶೈಕ್ಷಣಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವು ಮ್ತತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ಜೀವನಕ್ಕೆ ಮುನ್ನುಡಿ ಬರೆಯವ ಛಲ ಎಲ್ಲರಲ್ಲೂ ಇರಬೇಕು ಎಂದು ಹೇಳಿದರು.

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣಕ್ಕೆ ಒತ್ತು ಕೊಡಿ
ವಿದ್ಯಾರ್ಥಿಗಳನ್ನು ರಾಜಕೀಯ ಶಕ್ತಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಇಂದಿನ ಕಾಲಘಟ್ಟದಲ್ಲಿ ನೀವು ಅತ್ಯಂತ ಎಚ್ಚರದಿಂದ ಇರಬೇಕು. ವಿದ್ಯಾರ್ಥಿಗಳು ವಿದ್ಯಾರ್ಥಿಗಳಾಗಿಯೇ ಇರಬೇಕು ವಿನಾ ನಿಮ್ಮ ಕಲಿಕೆಯ ಕಾಲದಲ್ಲಿ ರಾಜಕೀಯದವರ ಬಲಿಪಶುಗಳಾಗಬೇಡಿ. ನಿಮ್ಮ ತಂದೆ ತಾಯಿ ಕಷ್ಟದಿಂದ ಯಾವುದೋ ಉದ್ದೇಶ ಇಟ್ಟುಕೊಂಡು ನಿಮಗೆ ಶಿಕ್ಷಣ ನೀಡುತ್ತಿರಬಹುದು ಅವರ ನಿರೀಕ್ಷೆಯನ್ನು ಎಂದೂ ಮಣ್ಣು ಪಾಲುಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಶಾಸಕರು ಸಲಹೆ ನೀಡಿದರು.

Ad Widget

Ad Widget

ಎಲ್ಲದರಲ್ಲೂ ನಾವೇ ಫಸ್ಟ್ ಆದರೆ ಸರಕಾರಿ ಕೆಲಸದಲ್ಲಿ ಲಾಸ್ಟ್
ಪ್ರತೀ ಬಾರಿ ಶೈಕ್ಷಣಿಕ ವರ್ಷದ ಪಲಿತಾಂಶ ಬಂದಾಗ ದ ಕ ಮತ್ತು ಉಡುಪಿ ಜಿಲ್ಲೆಯವರೇ ಪ್ರಥಮ ಸ್ಥಾನದಲ್ಲಿರುತ್ತಾರೆ, ರ‍್ಯಾಂಕ್ ಹೊಡೆಯುವುದರಲ್ಲೂ ನಾವೇ ಪ್ರಥಮದಲ್ಲಿರುತ್ತೇವೆ ಆದರೆ ಸರಕಾರಿ ಕೆಲಸ ಪಡೆಯುವುದರಲ್ಲಿ ನಾವು ಕೊನೇಯ ಸ್ಥಾನದಲ್ಲಿರುತ್ತೇವೆ. ನಾವು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸದೇ ಇರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಪ್ರತೀಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಭಾಗವಹಿಸಬೇಕು. ಸೋಲುತ್ತದೋ, ಗೆಲ್ಲುತ್ತದೋ ಎಂಬುದರ ಬಗ್ಗೆ ನೀವು ಚಿಂತೆ ಮಾಡಬೇಡಿ. ಸೋಲೇ ಜೀವನದ ಗೆಲುವಿನ ಹಾದಿ ಎಂಬುದನ್ನೂ ಯಾರೂ ಮರೆಯಬಾರದು ಎಂದು ಶಾಸಕರು ಹೇಳಿದರು.

ಸಮಸ್ಯೆಗಳನ್ನು ಶಾಸಕರ ಮುಂದಿಟ್ಟ ವಿದ್ಯಾರ್ಥಿಗಳು
ಬೊಳುವಾರಿನಲ್ಲಿರುವ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಕೆಲವೊಂದು ಸಮಸ್ಯೆಗಳನ್ನು, ಬೇಡಿಕೆಗಳನ್ನು ಈ ಸಂದರ್ಭದಲ್ಲಿ ಶಾಸಕರ ಮುಂದಿಟ್ಟರು. ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿರುವ ಕಾರಣ ಕಾಲೇಜಿನ ಆವರಣದಲ್ಲೇ ಕ್ಯಾಂಟೀನ್ ವ್ಯವಸ್ಥೆ ಮಾಡಬೇಕು ಮತ್ತು ಈ ಕ್ಯಾಂಟೀನ್‌ನಲ್ಲಿ ಕೈಗೆಟಕುವ ಧರದಲ್ಲಿ ವಿದ್ಯಾರ್ಥಿಗಳಿಗೆ ಉಪಹಾರ, ಊಟದ ವ್ಯವಸ್ಥೆಯನ್ನು ಮಾಡಬೇಕು. ನಾವು ವಿದ್ಯಾರ್ಥಿನಿಯರಾದ ಕಾರಣ ನಮಗೆ ಹೊರಗೆ ಹೋಗಿ ಹೊಟೇಲ್‌ಗಳಲ್ಲಿ ಊಟ ಮಾಡುವುದು ಅಷ್ಟು ಸರಿಯಾಗುವುದಿಲ್ಲ ಈ ಕಾರಣಕ್ಕೆ ಕ್ಯಾಂಟೀನ್ ವ್ಯವಸ್ಥೆ ಮಾಡಿ ಎಂದು ಬೇಡಿಕೆ ಇಟ್ಟಾಗ ಶಾಸಕರು ಅದಕ್ಕೆ ಒಪ್ಪಿಗೆ ಸೂಚಿಸಿದರು. ಕಾಲೇಜಿನ ಕಂಪ್ಯೂಟರ್ ಸಂಖ್ಯೆ ಕೇವಲ ನಾಲ್ಕು ಇದೆ ಅದನ್ನು ಹತ್ತಕ್ಕೆ ಏರಿಸಿ ಎಂದು ವಿದ್ಯಾರ್ಥಿಗಳ ಮನವಿಗೆ ಶಾಸಕರು ಸ್ಪಂದಿಸಿದರು. ಕಾಲೇಜಿಗೆ ಬರಲು ಸಿಟಿ ಬಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದು ಅದಕ್ಕೂ ಶಾಸಕರು ಸ್ಪಂದನೆ ನೀಡಿದರು.

ಉಳಿದಂತೆ ವಿವಿಧ ಗ್ರಾಮಾಂತರ ಭಾಗದಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಇದ್ದು ಅದನ್ನು ಶಾಸಕರ ಗಮನಕ್ಕೆ ತಂದರು. ಈಗ ಇರುವ ರೂಟ್‌ಗಳಲ್ಲಿ ಬಸ್‌ನ ಕೊರತೆ ಅಥವಾ ಸಮಯ ವೆತ್ಯಾಸ ಮಾಡಬೇಕಿದ್ದರೆ ಅದನ್ನು ಮಾಡಬಹುದು ಎಂದು ಶಾಸಕರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ನಮಗೆ ವಾಸ ಮಾಡಲು ಮನೆಯಿಲ್ಲ, ನಮಗೆ ಮನೆ ಕಟ್ಟಲು ನಿವೇಶನ ಕೊಡಿ, ನಮ್ಮ ಮನೆ ಕಾಮಗಾರಿ ಆರ್ಧದಲ್ಲಿದೆ, ನಮ್ಮ ಮನೆಯ ಅಕ್ರಮ ಸಕ್ರಮ ಮಾಡಿಕೊಡಿ, ನಮ್ಮ ರಸ್ತೆಗೆ ಕಾಂಕ್ರೀಟ್ ಮಾಡಿ, ನಮಗೆ ಸ್ಪರ್ಧಾತ್ಮ ಪರೀಕ್ಷೆ ಬರೆಯುವಲ್ಲಿ ನಿಮ್ಮ ಸಹಕಾರ ಬೇಕು ಮುಂತಾದ ಕೆಲವೊಂದು ಬೇಡಿಕೆಗಳನ್ನು ವಿದ್ಯಾರ್ಥಿಗಳು ಶಾಸಕರ ಮುಂದಿಟ್ಟರು.

ವಿದ್ಯಾರ್ಥಿಗಳ ಬೇಡಿಕೆಗಳನ್ನು ಸ್ಥಳದಲ್ಲೇ ಮಂಜೂರು ಮಾಡಿದ ಶಾಸಕರು ರಸ್ತೆ ನಿಮಾಣಕ್ಕೆ ಒಟ್ಟು ೫೦ ಲಕ್ಷದ ಅನುದಾನ ಮಂಜೂರು ಮಾಡಿದರು. ಅಕ್ರಮ ಸಕ್ರಮ ಅರ್ಜಿಯ ಮಾಹಿತಿ ನೀಡುವಂತೆಯೂ ಸೂಚನೆಯನ್ನು ನೀಡಿದರು. ಮನೆ ಇಲ್ಲದವರಿಗೆ ನಿವೇಶನ ಕೊಟ್ಟೇ ಕೊಡ್ತೇನೆ ಮನೆ ಕಟ್ಟಲು ಎರಡು ಲಕ್ಷ ರೂ ಕೊಡಿಸುವುದಾಗಿಯೂ ಶಾಸಕರು ವಿದ್ಯಾರ್ಥಿಗಳಲ್ಲಿ ತಿಳಿಸಿದರು.

ಶಾಸಕರ ಸಂವಾದ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮವಾಗಿದೆ, ನಮ್ಮ ಸಮಸ್ಯೆಗಳನ್ನು ಅವರ ಬಳಿ ಹೇಳಿಕೊಂಡೆವು. ಸಂವಾದದಲ್ಲಿ ಉತ್ತಮ ಮಾಹಿತಿಯೂ ದೊರೆತಿದೆ, ಶಾಸಕರ ಮಾತುಗಳು ನಮಗೆ ಭರವಸೆಗಳನ್ನು ಮೂಡಿಸಿದೆ. ಇಂಥಹ ಕಾರ್ಯಕ್ರಮಗಳು ಇನ್ನೂ ನಡೆಯಬೇಕು. ಅವರಾಗಿಯೇ ನಮ್ಮನ್ನು ಕರೆದು ಈ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದಾರೆ.

ಗೌತಮಿ , ವಿದ್ಯಾರ್ಥಿನಿ

ಶಾಸಕರು ನಮ್ಮೊಂದಿಗೆ ಚೆನ್ನಾಗಿ ಮಾತನಾಡಿದ್ರು, ಸಮಸ್ಯೆಗಳನ್ನು ಹೇಳಿದ್ದೇವೆ ಅವರು ಆಲಿಸಿದ್ದಾರೆ, ಸಮಸ್ಯೆಗೆ ಪರಿಹಾರ ಕೊಟ್ಟಿದ್ದಾರೆ. ಶಾಸಕರಲ್ಲಿ ಮುಕ್ತವಾಗಿ ಮಾತನಾಡಲು ಅವಕಾಶ ಸಿಕ್ಕಿದೆ. ಶಾಸಕರಿಗೆ ದನ್ಯವಾದಗಳು

ಅಂಕಿತಾ, ವಿದ್ಯಾರ್ಥಿ

ಬೇರೆ ಯಾರೂ ಈ ರೀತಿಯ ಕಾರ್ಯಕ್ರಮ ಮಾಡುವುದಿಲ್ಲ. ನಮಗೆ ಉತ್ತಮ ಮಾರ್ಗದರ್ಶನ ತರಗತಿ ಜೊತೆಗೆ ನಾವು ಜೀವನದಲ್ಲಿ ಮುಂದೆ ಏನು ಮಾಡಬೇಕು, ಹೇಗೆ ವ್ಯಾಸಂಗ ಮಾಡಬೇಕು ಎಂಬುದನ್ನು ಚೆನ್ನಾಗಿ ಮನಮುಟ್ಟುವಂತೆ ನಮಗೆ ವಿವರಿಸಿದ್ದಾರೆ. ಇಂಥಹ ಕಾರ್ಯಕ್ರಮ ಮುಂಧೆಯೂ ನಡೆಯಬೇಕು. ವಿದ್ಯಾರ್ಥಿಗಳ ಸಮಸ್ಯೆ, ಬೇಡಿಕೆಗಳನ್ನು ಆಲಿಸಿದ ಶಾಸಕರಿಗೆ ಅಭಿನಂದನೆಗಳು.

ಅಸ್ಮಾವಿದ್ಯಾರ್ಥಿನಿ

ಶಾಸಕರು ತಮ್ಮ ಮೌಲ್ಯಯುತ ಸಮಯವನ್ನು ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿದ್ದಾರೆ.ನಮ್ಮ ಕಷ್ಟಗಳನ್ನು ಆಲಿಸಿ ಅದಕ್ಕೆ ಪರಿಹಾರ ಒದಗಿಸಿದ್ದಾರೆ.

ಶಿವಾನಿ ವಿದ್ಯಾರ್ಥಿ

ನನ್ನ ವಿಧಾನ ಸಭಾ ಕ್ಷೇತ್ರದ ಕಾಲೇಜು ವಿದ್ಯಾರ್ಥಿಗಳ ಜೊತೆ ಒಂದು ದಿನ ಬೆರೆತು ಅವರ ಬೇಡಿಕೆ, ಸಮಸ್ಯೆಗಳನ್ನು ಆಲಿಸುವ ಒಂದು ಹೊಸ ಪ್ರಯೋಗವನ್ನು ಆರಂಭಿಸಿದ್ದೇನೆ. ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಜೊತೆ ಈ ಸಂವಾದ ನಡೆಯಲಿದೆ. ಪ್ರಾರಂಭದಲ್ಲಿ ಪುತ್ತೂರಿನ ಪ್ರಥಮ ದರ್ಜೆ ಸರಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿಗಳನ್ನು ಬೇಟಿಯಾಗಿದ್ದೇನೆ. ಅವರ ಜೊತೆ ಮುಕ್ತವಾಗಿ ಮಾತನಾಡಿದ್ದೇನೆ. ಸಂಪನ್ಮೂಲ ವ್ಯಕ್ತಿಗಳಿಂದ ಅವರಿಗೆ ತರಬೇತಿಯನ್ನು ನೀಡಿದ್ದೇನೆ. ಯುವ ವಿದ್ಯಾರ್ಥಿ ಸಮೂಹದ ಶಿಕ್ಷಣ ಅಥವಾ ಕಲಿಕೆಗೆ ಯಾವುದೇ ತೊಂದರೆಗಳಿದ್ದಲ್ಲಿ ಅದನ್ನು ಪರಿಹರಿಸಿ ಮತ್ತು ಅವರ ಸಮಸ್ಯೆಗಳನ್ನು ಆಲಿಸುವ ಉದ್ದೇಶ ಇದರ ಹಿಂದಿದೆ. ಬಹುತೇಕ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ

ಅಶೋಕ್ ರೈ, ಶಾಸಕರು, ಪುತ್ತೂರು

ಭರ್ಜರಿ ಊಟೋಪಚಾರ
ಮಧ್ಯಾಹ್ನಕ್ಕೆ ಬಿರಯಾನಿ, ತರಕಾರಿ ಉಪಹಾರ, ಐಸ್‌ಕ್ರೀಂ ನೀಡಲಾಯಿತು. ಭಾಗವಹಿಸಿದ ಪ್ರತೀಯೊಬ್ಬ ವಿದ್ಯಾರ್ಥಿಗೂ ಶಾಸಕರು ಉಡುಗೋರೆ ನೀಡಿ ಗೌರವಿಸಿದರು.

ವಿದ್ಯಾರ್ಥಿಗಳ ಜೊತೆ ಊಟ
ಕಾರ್ಯಕ್ರಮದ ಕೊನೇಯಲ್ಲಿ ವಿದ್ಯಾರ್ಥಿಗಳ ಜೊತೆ ಶಾಸಕರು ಊಟವನ್ನು ಮಾಡಿದರು. ತಾನು ಮನೆಯಿಂದ ತಂದಿದ್ದ ಮೀನ್ fryಯನ್ನು ವಿದ್ಯಾರ್ಥಿಗಳಿಗೆ ಹಂಚಿದರು. ಶಾಸಕರ ಪತ್ನಿ ಸುಮಾ ಅಶೋಕ್ ರೈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು. ರೈ ಚಾರಿಟೇಬಲ್ ಟ್ರಸ್ಟ್ ಕಾಯಾಧ್ಯಕ್ಷ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಸತೀಶ್ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.

ವಾಹನದ ವ್ಯವಸ್ಥೆ
ಎಪಿಎಂಸಿ ಸಭಾಂಗಣಕ್ಕೆ ಬರಲು ಕಾಲೇಜಿನಿಂದ ಮಿನಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ನಿಗಧಿತ ಸಮಯಕ್ಕೆ ವಿದ್ಯಾರ್ಥಿಗಳನ್ನು ಬೀಲ್ಕೊಡಲಾಯಿತು.

Ad Widget
Click to comment

Leave a Reply

ಶಿಕ್ಷಣ

Vivekananda-ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ: ವೃತ್ತಿವಾದ ಮತ್ತು ಆದರ್ಶವಾದ: ಸು.ರಾಮಣ್ಣ ಅವರಿಂದ ಉಪನ್ಯಾಸ ಕಾರ್ಯಕ್ರಮ

Published

on

Ad Widget

Ad Widget

Ad Widget

Ad Widget

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಾವರ್ಕರ್ ಸಬಾಭವನದಲ್ಲಿ ವೃತ್ತಿವಾದ ಮತ್ತು ಆದರ್ಶವಾದ ಎನ್ನುವ ವಿಷಯದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಟ ಪ್ರಚಾರಕ ಮಾನನೀಯ ಸು.ರಾಮಣ್ಣ ಮಾತಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು: ಮನುಷ್ಯನ ಜೀವನದ ಗುರಿ ವ್ಯಕ್ತಿಗತವಾಗಿರಬಾರದು. ಸಮಾಜಕ್ಕೆ, ದೇಶಕ್ಕೆ ಏನಾದರೂ ಮಾಡಬೇಕೆನ್ನುವುದು ನಮ್ಮ ಗುರಿಯಾಗಬೇಕು. ಅದಕ್ಕೆ ವಿವಿಧ ಬಗೆಯ ಜನರ ನಡುವೆ ಕಾರ್ಯನಿರ್ವಹಿಸಬೇಕು. ಆಗ ನಿಜವಾದ ಆವಶ್ಯಕತೆ ಏನೆಂದು ಅರಿವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಟ ಪ್ರಚಾರಕ ಮಾನನೀಯ ಸು.ರಾಮಣ್ಣ ಹೇಳಿದರು.

Ad Widget

Ad Widget alt="Ad Widget"/>

Ad Widget

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಾವರ್ಕರ್ ಸಬಾಭವನದಲ್ಲಿ ವೃತ್ತಿವಾದ ಮತ್ತು ಆದರ್ಶವಾದ ಎನ್ನುವ ವಿಷಯದ ಬಗ್ಗೆ ಮಾತಾಡಿದರು. ಓದು, ಜ್ಞಾನಸಂಗ್ರಹ ನಮ್ಮ ಸಾಧನೆಯ ಮೊದಲನೇ ಘಟ್ಟ. ಇದು ಇಲ್ಲದಿದ್ದರೆ ನಾವು ಸಣ್ಣವರಾಗುತ್ತೇವೆ. ವಿದ್ಯಾರ್ಥಿ ದೆಸೆಯಲ್ಲಿಯೇ ದೀರ್ಘವಾದ ಗುರಿಯನ್ನು ಇಟ್ಟುಕೊಳ್ಳಲೇಬೇಕು ಎಂದರು. ಜೀವನದಲ್ಲಿ ಕನಸು ಕಾಣಬೇಕು. ದೇವರು ಕೊಟ್ಟ ಬುದ್ಧಿ ಶಕ್ತಿ ಮತ್ತು ವ್ಯಕ್ತಿತ್ವವನ್ನು ಬಳಸಿಕೊಂಡು ದೊಡ್ಡವರಾಗಿ ಎನ್ನುವ ಅಬ್ದುಲ್ ಕಲಾಂ ಅವರ ಮಾತುಗಳನ್ನು ನೆನಪಿಸಿದ ಅವರು ದೇಶದ ಜೀವಿತೋದ್ದೇಶವನ್ನು ಉನ್ನತೀಕರಿಸುವುದರ ಜತೆಯಲ್ಲಿ ಸೃಷ್ಟಿಯ ಹಿತಕ್ಕೋಸ್ಕರ ಬದುಕಬೇಕು ಎಂದರು. ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸ್ವಾಮಿ ವಿವೇಕಾನಂದರು, ಸಾವರ್ಕರ್, ಅಂಬೇಡ್ಕರ್ ಇವರ ಜೀವನವು ನಮಗೆ ದಾರಿದೀಪವಾಗಲಿ ಎಂದರು. ಮಾನವತೆಯನ್ನು ಉಳಿಸುವುದಕ್ಕಾಗಿ ಅತ್ಯಂತ ಘೋರ ಸಂಕಟದ ಸಮಯದಲ್ಲಿ ಸೂಕ್ತ ನಿರ್ಣಯವನ್ನು ತೆಗೆದುಕೊಂಡ ಪೈಲೆಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ನಿಜವಾದ ಸಾಧಕ ಎಂದು ಹೇಳಿದರು. ಕೋಟ್ಯಂತರ ರೂಪಾಯಿ ವೇತನ ಪಡೆಯುವ ತಂತ್ರಜ್ಞರಾಗುವುದಲ್ಲ ಬದಲಾಗಿ ಸರ್.ಎಂ.ವಿಶ್ವೇಶ್ವರಯ್ಯರಾಗಿ ಎಂದು ಹಿತ ನುಡಿದರು.

Ad Widget

Ad Widget <> Ad Widget

ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ.ಡಿ.ಕಲ್ಲಾಜೆ ಮತ್ತು ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಪ್ರಸನ್ನ ದರ್ಬೆ, ನಿರ್ದೇಶಕರಾದ ಮನೋಜ್ ಕುಮಾರ, ಸುಜಿತ್ ಕುಮಾರ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಅಚ್ಯುತ ನಾಯಕ್, ವಿವೇಕಾನಂದ ಸಿಬಿಎಸ್‌ಸಿ ಶಾಲೆಯ ಸಂಚಾಲಕ ರವಿನಾರಾಯಣ, ವಿವೇಕಾನಂದ ವಸತಿ ನಿಲಯಗಳ ನಿರ್ದೇಶಕ ರಾಜಗೋಪಾಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ಅ.ನಾ.ರವಿ ಸಮಾರಂಭದಲ್ಲಿ ಹಾಜರಿದ್ದರು.

Ad Widget

Ad Widget

ರವಿಕೃಷ್ಣ.ಡಿ.ಕಲ್ಲಾಜೆ ಸ್ವಾಗತಿಸಿ, ಡಾ.ಪುರುಷೋತ್ತಮ ಚಿಪ್ಪಾರ್ ವಂದಿಸಿದರು. ಪ್ರೊ.ನಿರುಪಮಾ.ಕೆ ಕಾರ್ಯಕ್ರಮ ನಿರ್ವಹಿಸಿದರು.

Ad Widget
Continue Reading

ಶಿಕ್ಷಣ

Vivekananda-ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಖುಷಿ ಕೆ.ಎಂ. ರಾಷ್ಟ್ರ ಮಟ್ಟದಲ್ಲಿ ಸಾಧನೆ

Published

on

Ad Widget

Ad Widget

Ad Widget

Ad Widget

ಮಧ್ಯಪ್ರದೇಶದ ದೇವಾಸ್‌ನ ಸರಸ್ವತಿ ವಿದ್ಯಾ ಮಂದಿರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಖುಷಿ ಕೆ. ಎಂ ಇವರು ತೃತೀಯ ಸ್ಥಾನ ಪಡೆದಿರುತ್ತಾರೆ.

Ad Widget

Ad Widget

Ad Widget

Ad Widget

ಮಧ್ಯಪ್ರದೇಶದ ದೇವಾಸ್‌ನ ಸರಸ್ವತಿ ವಿದ್ಯಾ ಮಂದಿರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಖುಷಿ ಕೆ. ಎಂ ಇವರು ತೃತೀಯ ಸ್ಥಾನ ಪಡೆದಿರುತ್ತಾರೆ.

Ad Widget

Ad Widget alt="Ad Widget"/>

Ad Widget

ಇವರು ಬೆಳ್ಳಿಪಾಡಿ ಗ್ರಾಮದ ಶಂಕರನಾರಾಯಣ ನಿವಾಸಿ ಕೆ. ವಿ ಮಂಜುನಾಥ ಮತ್ತು ಭವ್ಯ ದಂಪತಿಯ ಪುತ್ರಿಯಾಗಿರುತ್ತಾರೆ.

Ad Widget

Ad Widget <> Ad Widget

ಇವರು ಕಾಲೇಜಿನ ಧೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ , ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ , ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

Ad Widget
Continue Reading

ಶಿಕ್ಷಣ

Sahyadri-ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಮ್ಯಾನೇಜ್ಮೆಂಟ್, ಮಂಗಳೂರು : ಕಂಪ್ಯೂಟಿಂಗ್, ಸೆಮಿಕಂಡಕ್ಟರ್, ಮೆಕಾಟ್ರಾನಿಕ್ಸ್, ಇಂಟೆಲಿಜೆಂಟ್ ಸಿಸ್ಟಮ್ಸ್ ಮತ್ತು ಕಮ್ಯುನಿಕೇಷನ್ಸ್ ಕುರಿತ ಮೂರನೇ ಅಂತರರಾಷ್ಟ್ರೀಯ ಸಮ್ಮೇಳನ

Published

on

Ad Widget

Ad Widget

Ad Widget

Ad Widget

ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಮ್ಯಾನೇಜ್ಮೆಂಟ್, ಮಂಗಳೂರಿನಲ್ಲಿ ನವೆಂಬರ್ 27 ರಿಂದ 28, 2026 ರವರೆಗೆ ಮಂಗಳೂರಿನ ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ  ಕ್ಯಾಂಪಸ್‌ನಲ್ಲಿ ಕಂಪ್ಯೂಟಿಂಗ್, ಸೆಮಿಕಂಡಕ್ಟರ್, ಮೆಕಾಟ್ರಾನಿಕ್ಸ್, ಇಂಟೆಲಿಜೆಂಟ್ ಸಿಸ್ಟಮ್ಸ್ ಮತ್ತು ಕಮ್ಯುನಿಕೇಷನ್ಸ್ (COSMIC–2026) ಕುರಿತು ಮೂರನೇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲು ಸಜ್ಜಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಮ್ಯಾನೇಜ್ಮೆಂಟ್, ಮಂಗಳೂರಿನಲ್ಲಿ ನವೆಂಬರ್ 27 ರಿಂದ 28, 2026 ರವರೆಗೆ ಮಂಗಳೂರಿನ ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ  ಕ್ಯಾಂಪಸ್‌ನಲ್ಲಿ ಕಂಪ್ಯೂಟಿಂಗ್, ಸೆಮಿಕಂಡಕ್ಟರ್, ಮೆಕಾಟ್ರಾನಿಕ್ಸ್, ಇಂಟೆಲಿಜೆಂಟ್ ಸಿಸ್ಟಮ್ಸ್ ಮತ್ತು ಕಮ್ಯುನಿಕೇಷನ್ಸ್ (COSMIC–2026) ಕುರಿತು ಮೂರನೇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲು ಸಜ್ಜಾಗಿದೆ, ಇದನ್ನು IEEE ಬೆಂಗಳೂರು ವಿಭಾಗ ಮತ್ತು IEEE ಮಂಗಳೂರು ಉಪವಿಭಾಗವು ತಾಂತ್ರಿಕವಾಗಿ ಬೆಂಬಲಿಸುತ್ತದೆ.

Ad Widget

Ad Widget alt="Ad Widget"/>

Ad Widget

COSMIC-2026 ಅಂತರರಾಷ್ಟ್ರೀಯ ಸಂಶೋಧನಾ ಉಪಕ್ರಮವಾಗಿದ್ದು, ಭಾರತ ಮತ್ತು ವಿದೇಶಗಳಿಂದ ಸಂಶೋಧಕರು, ಶಿಕ್ಷಣ ತಜ್ಞರು, ಉದ್ಯಮ ವೃತ್ತಿಪರರು, ಅಭ್ಯಾಸ ಮಾಡುವ ಎಂಜಿನಿಯರ್‌ಗಳು ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ, ಇದು ಸಂಶೋಧನಾ ಸಂಶೋಧನೆಗಳನ್ನು ಹಂಚಿಕೊಳ್ಳಲು, ಉದಯೋನ್ಮುಖ ತಂತ್ರಜ್ಞಾನಗಳನ್ನು ಚರ್ಚಿಸಲು ಮತ್ತು ಅಂತರಶಿಸ್ತೀಯ ಸಹಯೋಗಕ್ಕಾಗಿ ಅವಕಾಶಗಳನ್ನು ಅನ್ವೇಷಿಸಲು ಉದ್ದೇಶಿಸಿದೆ. ಸಮ್ಮೇಳನವು ಐದು ಪ್ರಮುಖ ಡೊಮೇನ್‌ಗಳ ಮೇಲೆ ಕೇಂದ್ರೀಕರಿಸುತ್ತದೆ: ಕಂಪ್ಯೂಟಿಂಗ್, ಸೆಮಿಕಂಡಕ್ಟರ್ ತಂತ್ರಜ್ಞಾನಗಳು, ಮೆಕಾಟ್ರಾನಿಕ್ಸ್, ಇಂಟೆಲಿಜೆಂಟ್ ಸಿಸ್ಟಮ್ಸ್ ಮತ್ತು ಕಮ್ಯುನಿಕೇಷನ್ಸ್.

Ad Widget

Ad Widget <> Ad Widget

ಈ ಸಮ್ಮೇಳನವು ಮೂಲ ಸಂಶೋಧನೆಯನ್ನು ಪ್ರಸ್ತುತಪಡಿಸಲು, ನವೀನ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಶೈಕ್ಷಣಿಕ ಮತ್ತು ಕೈಗಾರಿಕಾ ಸಂವಹನಗಳ ಮೂಲಕ ಸಮಕಾಲೀನ ತಾಂತ್ರಿಕ ಸವಾಲುಗಳನ್ನು ಪರಿಹರಿಸಲು ವೇದಿಕೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

ಪ್ರಭಾವಶಾಲಿ ಸಂಶೋಧನಾ ಪ್ರತಿಕ್ರಿಯೆ: 1,076 ಪ್ರಬಂಧ ಸಲ್ಲಿಕೆಗಳು

Ad Widget

Ad Widget

COSMIC-2026 ಸಂಶೋಧಕರು, ಶಿಕ್ಷಣ ತಜ್ಞರು, ಉದ್ಯಮ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಂದ ಪ್ರಭಾವಶಾಲಿ 1,076 ಸಂಶೋಧನಾ ಪ್ರಬಂಧ ಸಲ್ಲಿಕೆಗಳನ್ನು ಸ್ವೀಕರಿಸಿದೆ. ಕಠಿಣ ಡಬಲ್-ಬ್ಲೈಂಡ್ ಪೀರ್-ರಿವ್ಯೂ ಪ್ರಕ್ರಿಯೆಯ ನಂತರ, ಸಲ್ಲಿಸಿದ ಪ್ರಬಂಧಗಳಲ್ಲಿ ಕೇವಲ 11% ಮಾತ್ರ ಸಮ್ಮೇಳನದಲ್ಲಿ ಅಂತಿಮ ಪ್ರಸ್ತುತಿಗಾಗಿ ಆಯ್ಕೆ ಮಾಡಲಾಗಿದೆ.

ಈ ಆಯ್ದ ಸ್ವೀಕಾರ ಪ್ರಕ್ರಿಯೆಯು ಸಂಶೋಧನಾ ಗುಣಮಟ್ಟ, ಸ್ವಂತಿಕೆ ಮತ್ತು ತಾಂತ್ರಿಕ ಪ್ರಸ್ತುತತೆಯ ಮೇಲೆ ಸಮ್ಮೇಳನದ ಒತ್ತು ಪ್ರತಿಬಿಂಬಿಸುತ್ತದೆ. ಕಾಲ್ ಫಾರ್ ಪೇಪರ್ಸ್‌ಗೆ ಬಲವಾದ ಪ್ರತಿಕ್ರಿಯೆಯು COSMIC-2026 ರಲ್ಲಿ ಹೆಚ್ಚುತ್ತಿರುವ ಸಂಶೋಧನಾ ಆಸಕ್ತಿಯನ್ನು ಮತ್ತು ಗುಣಮಟ್ಟದ ಸಂಶೋಧನೆಯನ್ನು ಪ್ರಸಾರ ಮಾಡಲು ಅಂತರರಾಷ್ಟ್ರೀಯ ವೇದಿಕೆಯಾಗಿ ಅದರ ಪಾತ್ರವನ್ನು ಎತ್ತಿ ತೋರಿಸುತ್ತದೆ.

ಗಣ್ಯ ಅತಿಥಿಗಳು ಮತ್ತು ಅಂತರರಾಷ್ಟ್ರೀಯ ಮುಖ್ಯ ಭಾಷಣಕಾರರು

2026ರ ನವೆಂಬರ್ 27ರಂದು ನಡೆಯಲಿರುವ ಉದ್ಘಾಟನಾ ಅಧಿವೇಶನದಲ್ಲಿ, ಬೆಂಗಳೂರಿನಲ್ಲಿರುವ ಜಪಾನ್‌ನ ಕಾನ್ಸುಲೇಟ್-ಜನರಲ್‌ನ ಉಪ ಕಾನ್ಸುಲ್ ಜನರಲ್ ಯೋಶಿಮುರಾ ಟೊಮೊಟಕಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಯುನೈಟೆಡ್ ಕಿಂಗ್‌ಡಮ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ನೆಡುಂಚೆಜಿಯನ್ ಸ್ವಾಮಿನಾಥನ್ ಅವರು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣವನ್ನು (Keynote address) ನೀಡಲಿದ್ದಾರೆ.

ಉದ್ಘಾಟನಾ ಅಧಿವೇಶನದ ಗೌರವಾನ್ವಿತ ಅತಿಥಿಗಳು:

  • ಯೋಂಗ್‌ಜೂ ಯೂ, ಸಂಸ್ಥಾಪಕರು ಮತ್ತು ಸಿಇಒ, ದುರು ಕೋಆಪರೇಷನ್ ಪ್ರೈವೇಟ್ ಲಿಮಿಟೆಡ್, ದಕ್ಷಿಣ ಕೊರಿಯಾ.
  • ಡಾ. ಚೆಂಗಪ್ಪ ಮುಂಜಂದಿರ, ಹಿರಿಯ ತಂತ್ರಜ್ಞರು, ಹ್ಯೂಲೆಟ್-ಪ್ಯಾಕರ್ಡ್ ಎಂಟರ್‌ಪ್ರೈಸ್ (Hewlett-Packard Enterprise) ಮತ್ತು ಐಇಇಇ (IEEE) ಬೆಂಗಳೂರು ವಿಭಾಗದ ನಿಯೋಜಿತ ಅಧ್ಯಕ್ಷರು (Chair-Elect).
  • ಡಾ. ಮೇಡ್ ಸತ್ರಿಯ ವಿಬಾವಾ, ಪ್ರಾಧ್ಯಾಪಕರು, ಐಟಿಬಿ ಸ್ಟಿಕಾಮ್ ಬಾಲಿ (ITB STIKOM Bali), ಇಂಡೋನೇಷ್ಯಾ.
  • ಡಾ. ವೇಣುಗೋಪಾಲ ಪಿ. ಎಸ್., ಅಧ್ಯಕ್ಷರು, ಐಇಇಇ (IEEE) ಮಂಗಳೂರು ಉಪವಿಭಾಗ.

ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಸದಸ್ಯರು (MLC) ಹಾಗೂ ಸರ್ಕಾರದ ಮುಖ್ಯ ಸಚೇತಕರು (Chief Whip) ಮತ್ತು ಭಂಡಾರಿ ಫೌಂಡೇಶನ್‌ನ ಅಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ಈ ಉದ್ಘಾಟನಾ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ತಜ್ಞರ ಸಮಿತಿ ಚರ್ಚೆ: ಭಾರತದ ಸುಸ್ಥಿರ ಡೀಪ್-ಟೆಕ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು

COSMIC–2026 ರ ಪ್ರಮುಖ ಮುಖ್ಯಾಂಶವೆಂದರೆ “ಭಾರತದ ಸುಸ್ಥಿರ ಡೀಪ್-ಟೆಕ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು: AI, ಸೆಮಿಕಂಡಕ್ಟರ್‌ಗಳು, ರೊಬೊಟಿಕ್ಸ್ ಮತ್ತು ಸುಧಾರಿತ ಸಂವಹನಗಳಲ್ಲಿ ಅವಕಾಶಗಳು” ಎಂಬ ತಜ್ಞರ ಸಮಿತಿ ಚರ್ಚೆ.

ಸಮಿತಿಯು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:

  1. ರಾಹುಲ್ ಕ್ಸೇವಿಯರ್, ಸಿಒಒ, ದುರು ಸಹಕಾರ ಪ್ರೈವೇಟ್ ಲಿಮಿಟೆಡ್, ದಕ್ಷಿಣ ಕೊರಿಯಾ.
  2. ಜಹೀ ಕಿಮ್, ಕಾರ್ಯತಂತ್ರ ತಂಡದ ನಾಯಕಿ, ದುರು ಸಹಕಾರ ಪ್ರೈವೇಟ್ ಲಿಮಿಟೆಡ್, ದಕ್ಷಿಣ ಕೊರಿಯಾ.
  3. ಯತೀಶ್ ಎಲ್. ನಾಗವಳ್ಳಿ, ಪ್ರಾಕ್ಸಿಟಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು.
  4. ಡಾ. ಪವನ್ ಕುಮಾರ್ ಸಿ., ಸಹಾಯಕ ಪ್ರಾಧ್ಯಾಪಕ, ಐಐಟಿ ಧಾರವಾಡ.

ಹೆವ್ಲೆಟ್-ಪ್ಯಾಕರ್ಡ್ ಎಂಟರ್‌ಪ್ರೈಸ್‌ನ ಹಿರಿಯ ತಂತ್ರಜ್ಞ ಮತ್ತು ಐಇಇಇ ಬೆಂಗಳೂರು ವಿಭಾಗದ ಅಧ್ಯಕ್ಷ-ಚುನಾಯಿತ ಡಾ. ಚೆಂಗಪ್ಪ ಮುಂಜಾಂಡಿರ ಅವರು ಚರ್ಚೆಯನ್ನು ನಡೆಸಲಿದ್ದಾರೆ.

ಎರಡನೇ ದಿನದ ಮುಖ್ಯ ಭಾಷಣಗಳು ಮತ್ತು ಆಹ್ವಾನಿತ ತಾಂತ್ರಿಕ ಮಾತುಕತೆಗಳು

ಎರಡನೇ ದಿನ, ನವೆಂಬರ್ 28, 2026 ರಂದು ಇಬ್ಬರು ಅಂತರರಾಷ್ಟ್ರೀಯ ತಜ್ಞರಿಂದ ಮುಖ್ಯ ಭಾಷಣಗಳು ನಡೆಯಲಿವೆ:

  • ಡಾ. ಮಡೆ ಸಟ್ರಿಯಾ ವಿಬಾವಾ, ಪ್ರಾಧ್ಯಾಪಕರು, ಐಟಿಬಿ STIKOM ಬಾಲಿ, ಇಂಡೋನೇಷ್ಯಾ.
  • ಡಾ. ಗೈಸೆಪ್ಪೆ ಸ್ಯಾಂಟರ್ಸಿಯೊ, ಪ್ರಾಧ್ಯಾಪಕರು, ಇಟಲಿಯ ಬೆಸಿಲಿಕಾಟಾ ವಿಶ್ವವಿದ್ಯಾಲಯ.

ಆಹ್ವಾನಿತ ತಾಂತ್ರಿಕ ಭಾಷಣ:

  • ಡಾ. ಲೆ ಥಿ ನ್ಗೋಕ್ ಥಾವೊ, ಹೋ ಚಿ ಮಿನ್ಹ್ ಸಿಟಿ ಅರ್ಥಶಾಸ್ತ್ರ ಮತ್ತು ಹಣಕಾಸು ವಿಶ್ವವಿದ್ಯಾಲಯ (UEF), ವಿಯೆಟ್ನಾಂ.
  • ಸಂದೀಪ್ ಕೆ.ಎಸ್., ನಿರ್ದೇಶಕ – ಸಾಫ್ಟ್‌ವೇರ್ ಎಂಜಿನಿಯರಿಂಗ್, ಸಿಸ್ಕೋ ಸಿಸ್ಟಮ್ಸ್, ಬೆಂಗಳೂರು.

ಸಮ್ಮೇಳನವು ಸಮಾರೋಪ ಅಧಿವೇಶನದೊಂದಿಗೆ ಮುಕ್ತಾಯಗೊಳ್ಳಲಿದ್ದು, ಪಟ್ಟಥಿಲ್ ಸುಜಿತ್, ಕಾರ್ಯನಿರ್ವಾಹಕ ನಿರ್ದೇಶಕ (ಯೋಜನೆಗಳು), MRPL, ಮುಖ್ಯ ಅತಿಥಿಯಾಗಿ ಮತ್ತು ಸಂದೀಪ್ ಕೆ.ಎಸ್. ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸಂಶೋಧನಾ ಪ್ರಕಟಣೆ ಮತ್ತು ಶೈಕ್ಷಣಿಕ ಸಹಯೋಗ

COSMIC-2026ರ ಗಮನಾರ್ಹ ಮುಖ್ಯಾಂಶವೆಂದರೆ ಅದರ ಸಂಶೋಧನಾ ಪ್ರಕಟಣೆಯ ಅವಕಾಶ. ಎಲ್ಲಾ ಸ್ವೀಕೃತ ಮತ್ತು ಪ್ರಸ್ತುತಪಡಿಸಿದ ಪ್ರಬಂಧಗಳನ್ನು IEEE ಸಮ್ಮೇಳನ ಪ್ರಕಟಣೆ ಕಾರ್ಯಕ್ರಮದ (CPP) ಮೂಲಕ IEEE ಸಮ್ಮೇಳನ ದಾಖಲೆ ಸಂಖ್ಯೆ 71451ರ ಅಡಿಯಲ್ಲಿ ಅನ್ವಯಿಸುವ IEEE ಪ್ರಕಟಣೆಯ ಅವಶ್ಯಕತೆಗಳಿಗೆ ಒಳಪಟ್ಟು IEEE Xplore® ಡಿಜಿಟಲ್ ಲೈಬ್ರರಿಯಲ್ಲಿ ಸಂಭಾವ್ಯ ಸೇರ್ಪಡೆಗಾಗಿ ಸಲ್ಲಿಸಲಾಗುತ್ತದೆ.

ಸಮ್ಮೇಳನವು ಸಂಶೋಧಕರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮ ವೃತ್ತಿಪರರ ನಡುವೆ ಅರ್ಥಪೂರ್ಣ ಸಂವಹನಗಳನ್ನು ಪ್ರೋತ್ಸಾಹಿಸುತ್ತದೆ, ಭವಿಷ್ಯದ ಸಂಶೋಧನಾ ಸಹಯೋಗಗಳು, ತಂತ್ರಜ್ಞಾನ ಅಭಿವೃದ್ಧಿ ಮತ್ತು ಜ್ಞಾನ ವಿನಿಮಯಕ್ಕೆ ಮಾರ್ಗಗಳನ್ನು ತೆರೆಯುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸಂಶೋಧನಾ ಶ್ರೇಷ್ಠತೆ ಮತ್ತು ತಾಂತ್ರಿಕ ಪ್ರಭಾವದ ಕುರಿತು ಸಮ್ಮೇಳನ ಪೂರ್ವ ಕಾರ್ಯಾಗಾರ

ಮುಖ್ಯ ಸಮ್ಮೇಳನಕ್ಕೆ ಮುಂಚಿನ ಪ್ರಮುಖ ಶೈಕ್ಷಣಿಕ ಉಪಕ್ರಮವಾಗಿ, ಸಹ್ಯಾದ್ರಿ ಕಾಲೇಜು ನವೆಂಬರ್ 26, 2026 ರಂದು ಬೆಳಿಗ್ಗೆ 9:30 ರಿಂದ ಸಂಜೆ 5:00 ರವರೆಗೆ ಒಂದು ದಿನದ ಸಮ್ಮೇಳನ ಪೂರ್ವ ಕಾರ್ಯಾಗಾರವನ್ನು ಆಯೋಜಿಸುತ್ತದೆ.

“ಉತ್ಪಾದಕ AI, ವಿದ್ವತ್ಪೂರ್ಣ ಪ್ರಕಾಶನ ಮತ್ತು ಬೌದ್ಧಿಕ ಆಸ್ತಿಯ ಮೂಲಕ ಮುಂದುವರಿದ ಸಂಶೋಧನಾ ಶ್ರೇಷ್ಠತೆ ಮತ್ತು ತಾಂತ್ರಿಕ ಪ್ರಭಾವ” ಎಂಬ ಶೀರ್ಷಿಕೆಯ ಈ ಕಾರ್ಯಾಗಾರವು ಸಂಶೋಧನಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಮತ್ತು ಸಂಶೋಧನೆ, ವಿದ್ವತ್ಪೂರ್ಣ ಪ್ರಕಾಶನ ಅಭ್ಯಾಸಗಳು ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಲ್ಲಿ ಜನರೇಟಿವ್ AI ಅನ್ವಯದ ಬಗ್ಗೆ ಸಮಕಾಲೀನ ಜ್ಞಾನ ಮತ್ತು ಪ್ರಾಯೋಗಿಕ ಒಳನೋಟಗಳೊಂದಿಗೆ ಭಾಗವಹಿಸುವವರನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.

ಈ ಕಾರ್ಯಾಗಾರವು ಮೂವರು ವಿಶಿಷ್ಟ ಸಂಪನ್ಮೂಲ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ:

  1. ಮಲೇಷ್ಯಾದ ಅಂತರರಾಷ್ಟ್ರೀಯ ಇಸ್ಲಾಮಿಕ್ ವಿಶ್ವವಿದ್ಯಾಲಯ ಮಲೇಷ್ಯಾ (IIUM) ನ ಮಾನವರಹಿತ ತಂತ್ರಜ್ಞಾನಗಳ ಕೇಂದ್ರ (CUT) ನಿರ್ದೇಶಕ ಮತ್ತು ಮೆಕಾಟ್ರಾನಿಕ್ಸ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಡಾ. ಹಸನ್ ಫಿರ್ದೌಸ್ ಮೊಹಮ್ಮದ್ ಝಕಿ.
  2. ಹೆವ್ಲೆಟ್ ಪ್ಯಾಕರ್ಡ್ ಎಂಟರ್‌ಪ್ರೈಸ್‌ನ ಹಿರಿಯ ತಂತ್ರಜ್ಞ ಡಾ. ಚೆಂಗಪ್ಪ ಮುಂಜಾಂಡಿರ, IEEE ಬೆಂಗಳೂರು ವಿಭಾಗದ ಅಧ್ಯಕ್ಷರು ಮತ್ತು VTU ಶೈಕ್ಷಣಿಕ ಸೆನೆಟ್ ಸದಸ್ಯರು ಆಯ್ಕೆಯಾಗಿದ್ದಾರೆ.
  3. ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಮಣಿಪಾಲದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ-ಎಲ್ಸೆವಿಯರ್ ಶ್ರೇಯಾಂಕದಲ್ಲಿ ವಿಶ್ವದ ಅಗ್ರ 2% ವಿಜ್ಞಾನಿಗಳಲ್ಲಿ ಒಬ್ಬರಾದ ಡಾ. ಕೃಷ್ಣರಾಜ್ ಚಡಗ.

ಸಮ್ಮೇಳನದ ನೇತೃತ್ವ

ಈ ಸಮ್ಮೇಳನವನ್ನು ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೇರಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದೆ.

ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಮುಸ್ತಫಾ ಬಸ್ತಿಕೋಡಿ ಅವರು ‘ಆಯೋಜನಾ ಅಧ್ಯಕ್ಷ’ರಾಗಿ (Organising Chair) ಕಾರ್ಯನಿರ್ವಹಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಅನುಷ್ ಬೆಕಲ್ ಅವರು ‘ಸಹ-ಆಯೋಜನಾ ಅಧ್ಯಕ್ಷ’ರಾಗಿ (Organising Co-Chair) ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ಈ ಸಮ್ಮೇಳನವು ಸಹ್ಯಾದ್ರಿಯ ಟ್ರಸ್ಟಿ ಮತ್ತು ಆಡಳಿತಾಧಿಕಾರಿ ಶ್ರೀ ಕೃಷ್ಣ ಹೆಗಡೆ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಮಂಜಪ್ಪ ಸಾರಥಿ ಹಾಗೂ ಸಂಸ್ಥೆಯ ಇತರ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ.

ಸಮ್ಮೇಳನದ ದಿನಾಂಕಗಳು: 27–28 ನವೆಂಬರ್ 2026

ಸಮ್ಮೇಳನ ಪೂರ್ವ ಕಾರ್ಯಾಗಾರ (Pre-Conference Workshop): 26 ನವೆಂಬರ್ 2026

ಸ್ಥಳ: ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು, ಮಂಗಳೂರು, ಕರ್ನಾಟಕ, ಭಾರತ.

ಸಮ್ಮೇಳನದ ಜಾಲತಾಣ: https://cosmic.sahyadri.edu.in

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!