ಬಿಗ್ ನ್ಯೂಸ್
ಬಿಜಿಪಿ ಮುಂದಿನ ಹಲವು ದಶಕಗಳ ಕಾಲ ರಾಷ್ಟ್ರಮಟ್ಟದಲ್ಲಿ ಪ್ರಬಲ ಶಕ್ತಿಯಾಗಿ ಉಳಿಯಲಿದೆ : ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್
ಪಣಜಿ: ಮುಂದಿನ ಹಲವು ದಶಕಗಳ ಕಾಲ ರಾಷ್ಟ್ರಮಟ್ಟದಲ್ಲಿ ಪ್ರಭಲ ಶಕ್ತಿಯಾಗಿ ಉಳಿಯಲಿದೆ. ಅದು ಎಲ್ಲಿಯೂ ಹೋಗುವುದಿಲ್ಲ. ಅಡಳಿತ ವಿರೋಧಿ ಅಲೆ ಮೋದಿ ಹಾಗೂ ಬಿಜೆಪಿಯನ್ನು ಕಿತ್ತೊಗೆಯಲಿದೆ ಎನ್ನುವುದು ರಾಹುಲ್ ಗಾಂಧಿಯವರ ಭ್ರಮೆ ಎಂದು ಖ್ಯಾತ
ಚುನಾವಣಾ ತಂತ್ರಗಾರಿಕ ನಿಪುಣ ಪ್ರಶಾಂತ್ ಕಿಶೋರ್ ಗೋವಾದಲ್ಲಿ ಹೇಳಿದ್ದಾರೆ.
ಚುನಾವಣಾ ತಂತ್ರಗಾರಿಕೆಯನ್ನೇ ಕಸುಬಾಗಿಸಿಕೊಂಡಿರುವ ಐ ಪ್ಯಾಕ್ ನ ಮುಂದಾಳು ಆಗಿರುವ ಪ್ರಶಾಂತ್ ಕಿಶೋರ್
ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ನ ಅವಕಾಶಗಳನ್ನು ಗೋವಾದಲ್ಲಿ ಹುಡುಕಲು ಅ. 28 ರಂದು ಗೋವಾಕ್ಕೆ ಆಗಮಿಸಿದ್ದಾರೆ.
ಮೋದಿ ನೇತ್ರತ್ವದ ಕೇಂದ್ರ ಸರಕಾರವನ್ನು ಜನರೇ ಕಿತ್ತೊಗೆಯುತ್ತಾರೆ ಎಂಬ ಭ್ರಮೆಯಲ್ಲಿ ಕಾಂಗ್ರೇಸ್ ಮುಖಂಡ ರಾಹುಲ್ ಗಾಂಧಿ ಇದ್ದಾರೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ
ಬಿಜೆಪಿ ಗೆಲ್ಲಲಿ ಅಥವಾ ಸೋಲಲಿ, ಕಾಂಗ್ರೆಸ್ ಗೆ ಮೊದಲ 40 ವರ್ಷವಿದ್ದ ಹಾಗೆ, ರಾಷ್ಟ್ರ ರಾಜಕೀಯದಲ್ಲಿ ಬಿಜೆಪಿ ಇರಲಿದ್ದು, ಅದು ಎಲ್ಲಿಯೂ ಹೋಗಲ್ಲ ಎಂದು ಅವರು ಹೇಳಿದ್ದಾರೆ.

ಮೋದಿ ಅಡಳಿತದ ವಿರುದ್ದ ಜನರು ಬೇಸತ್ತಿದ್ದು ಅದು ಅಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಆ ಮೂಲಕ ಜನರು ಮೋದಿಯನ್ನು ಕಿತ್ತೊಗೆಯಲಿದ್ದಾರೆಂದು ರಾಹುಲ್ ನಂಬಿದ್ದಾರೆ. ಕೆಲವೇ ಸಮಯದಲ್ಲಿ ಮೋದಿ ಪದಚ್ಯುತಿಯಾಗಲಿದೆ ಎಂದು ಅವರು ತಿಳಿದುಕೊಂಡಿದ್ದಾರೆ. ಅದರೆ ಇದು ಕೇವಲ ಅವರ ಭ್ರಮೆ ಎಂದು ಕಿಶೋರ್ ತಿಳಿಸಿದ್ದಾರೆ.
ಒಂದು ಬಾರಿ ರಾಷ್ಟ್ರ ಮಟ್ಡದಲ್ಲಿ ಶೇಕಡಾ 30 ಕ್ಕೂ ಹೆಚ್ಚು ಮತಗಳನ್ನು ಪಡೆದರೆ, ಮತ್ತೆ ಅಷ್ಟು ಅವಸರದಲ್ಲಿ ಅಲ್ಲಿಂದ ಅವರು ಕೆಳಗಿಳಿಯುವುದಿಲ್ಲ.
ಆದ್ದರಿಂದ ಜನರು ಕೋಪಗೊಂಡು, ಪ್ರಧಾನಿ ಮೋದಿಯನ್ನು ಕಿತ್ತೊಗೆಯುವುದಿಲ್ಲ, ಮೋದಿಯನ್ನು ಕಿತ್ತೊಗೆದರೂ, ಬಿಜೆಪಿ ಎಲ್ಲಿಯೂ ಹೋಗಲ್ಲ. ಅವರು ಇಲ್ಲಿಯೇ ಇರುತ್ತಾರೆ. ಮುಂದಿನ ಹಲವು ದಶಕಗಳ ಕಾಲ ಅವರೊಂದಿಗೆ ನೀವು ಹೋರಾಟ ನಡೆಸಬೇಕಾಗಿದೆ ಎಂದು ಕಿಶೋರ್ ಕಾಂಗ್ರೇಸ್ ಗೆ ಕಿವಿ ಮಾತು ಹೇಳಿದ್ದಾರೆ.
ಮೋದಿಯ ಸಾಮರ್ಥ್ಯ ಹಾಗೂ ತಾಕತ್ತನ್ನು ನೀವು ಅಭ್ಯಸಿಸದೆ ಹೋದರೆ, ನೀವು ಅವರನ್ನು ಎದುರಿಸಲಾರಿರಿ… ಸೋಲಿಸಲಾರಿರಿ. ಕಾಂಗ್ರೇಸ್ಸಿನ ಹಲವು ನಾಯಕರು ಸೇರಿದಂತೆ ಬಹಳಷ್ಟು ವಿರೋಧ ಪಕ್ಷದ ನಾಯಕರು, ಮೋದಿಯ ಸಾಮರ್ಥ್ಯ, ಅವರ ಜನಪ್ರಿಯತೆಗೆ ಕಾರಣವಾಗಿರುವ ಅಂಶಗಳನ್ನು ಅಭ್ಯಸಿಸುತಿಲ್ಲ ಎಂದು ಅವರು ಹೇಳಿದರು.
ತೈಲ ಬೆಲೆಯಲ್ಲಿ ಇಷ್ಟು ಅಗಾಧ ಏರಿಕೆಯಾದರೂ ಮೋದಿಯ ಜನಪ್ರಿಯತೆಗೆ ಕುಂದುಂಟಾಗಿಲ್ಲ ಎಂದು ಅವರು ಉದಾಹರಿಸಿದರು.
ಭಾರತದಲ್ಲಿ ಚುಣಾವಣೆ 3/1 ಮತದಾರರು ಹಾಗೂ 3/2 ಮತದಾರರ ಮಧ್ಯೆ ನಡೆಯುತ್ತಿದೆ. ಬಿಜೆಪಿಗೆ ದೇಶದ ಕೇವಲ 3/1 ಭಾಗದಷ್ಟು ಜನರು ಮಾತ್ರ ಓಟು ಹಾಕುತಿದ್ದಾರೆ. ಆದರೆ, ಬಿಜೆಪಿ ವಿರೋಧಿ ಮತಗಳು 3/2 ರಷ್ಟಿದ್ದು ಅದು 10-12 ಪಕ್ಷಗಳ ಮಧ್ಯೆ ಹಂಚಿ ಹೋಗಿದೆ. ಬಿಜೆಪಿ ವಿರೋಧಿ ಮತಗಳು ಇಷ್ಟು ಪಕ್ಷಗಳ ಮಧ್ಯೆ ಹಂಚಿ ಹೋಗಲು ಕಾಂಗ್ರೇಸ್ ದುರ್ಬಲಗೊಂಡಿರುವುದೇ ಕಾರಣ ಎಂದು ಅವರು ವಿವರಿಸಿದರು.
ಬಿಗ್ ನ್ಯೂಸ್
Heavy rain-ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ: ಚಿಂತಾಮಣಿಯಲ್ಲಿ 54 ಮಿ.ಮೀ. ಮಳೆ ದಾಖಲು; ಕೋಲಾರ, ಬೆಂಗಳೂರು ಭಾಗದಲ್ಲೂ ವರ್ಷಧಾರೆ..!
ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ. ಹಲವು ಕಡೆ 20ರಿಂದ 50 ಮಿ.ಮೀ.ಗೂ ಅಧಿಕ ಮಳೆ ದಾಖಲಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ. ಹಲವು ಕಡೆ 20ರಿಂದ 50 ಮಿ.ಮೀ.ಗೂ ಅಧಿಕ ಮಳೆ ದಾಖಲಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ದೊಡ್ಡ ಗಂಜೂರಿನಲ್ಲಿ ಗರಿಷ್ಠ 54 ಮಿ.ಮೀ. ಮಳೆಯಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ 51 ಮಿ.ಮೀ. ಹಾಗೂ ಚಿಂತಾಮಣಿ ತಾಲ್ಲೂಕಿನ ಮುಂಗನಹಳ್ಳಿಯಲ್ಲಿ 47.5 ಮಿ.ಮೀ. ಮಳೆ ದಾಖಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಬಿಸ್ಕೂರಿನಲ್ಲಿ 47 ಮಿ.ಮೀ., ಹುಲ್ಲೇನಹಳ್ಳಿಯಲ್ಲಿ 46 ಮಿ.ಮೀ. ಹಾಗೂ ಅದರಂಗಿಯಲ್ಲಿ 42.5 ಮಿ.ಮೀ. ಮಳೆಯಾಗಿದೆ. ಬೆಂಗಳೂರು ಪಶ್ಚಿಮ ಭಾಗದ ಕೋನೇನ ಅಗ್ರಹಾರ ಮತ್ತು ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರದಲ್ಲಿ ತಲಾ 40 ಮಿ.ಮೀ. ಮಳೆ ಸುರಿದಿದೆ.
ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಹಾಗೂ ಚಿಂತಾಮಣಿ ತಾಲ್ಲೂಕಿನ ಪೆರಮಂಚನಹಳ್ಳಿಯಲ್ಲಿ ತಲಾ 35.5 ಮಿ.ಮೀ., ಸಂಕಿಘಟ್ಟದಲ್ಲಿ 35 ಮಿ.ಮೀ. ಮಳೆಯಾಗಿದೆ. ಆನೇಕಲ್ ತಾಲ್ಲೂಕಿನ ನೇರಿಗದಲ್ಲಿ 33.5 ಮಿ.ಮೀ., ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ 33 ಮಿ.ಮೀ. ಹಾಗೂ ಚಿಂತಾಮಣಿಯಲ್ಲಿ 32.8 ಮಿ.ಮೀ. ಮಳೆ ದಾಖಲಾಗಿದೆ.
ಬೆಂಗಳೂರು ನಗರದ ದಾಸನಪುರದಲ್ಲಿ 29 ಮಿ.ಮೀ., ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಜೆ.ತಿಮ್ಮಸಂದ್ರದಲ್ಲಿ 28.5 ಮಿ.ಮೀ., ಅರಿಕುಂಟೆಯಲ್ಲಿ 27.5 ಮಿ.ಮೀ. ಹಾಗೂ ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ 27.25 ಮಿ.ಮೀ. ಮಳೆಯಾಗಿದೆ.
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವಿರುಪಸಮುದ್ರದಲ್ಲಿ 26 ಮಿ.ಮೀ. ಹಾಗೂ ಮಧುಗಿರಿ ತಾಲ್ಲೂಕಿನ ಬೇಡತೂರಿನಲ್ಲಿ 25.5 ಮಿ.ಮೀ. ಮಳೆ ದಾಖಲಾಗಿದೆ. ಬೆಂಗಳೂರಿನ ದೊಮ್ಮಲೂರು ಮತ್ತು ಚಿಂತಾಮಣಿ ತಾಲ್ಲೂಕಿನ ಮಾಸ್ತೇನಹಳ್ಳಿಯಲ್ಲಿ ತಲಾ 24.5 ಮಿ.ಮೀ. ಮಳೆಯಾಗಿದೆ.
ಇನ್ನು ಚಿಂತಾಮಣಿ ತಾಲ್ಲೂಕಿನ ತಳಗವಾರದಲ್ಲಿ 23.5 ಮಿ.ಮೀ., ಮುರುಗಮಲೆಯಲ್ಲಿ 23.25 ಮಿ.ಮೀ. ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ವೆಂಕಟಾಪುರದಲ್ಲಿ 23 ಮಿ.ಮೀ. ಮಳೆಯಾಗಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಪುಳಗುರುಕೋಟೆ ಹಾಗೂ ಗೌರಿಬಿದನೂರು ತಾಲ್ಲೂಕಿನ ಮೆಲ್ಯಾದಲ್ಲಿ ತಲಾ 22.75 ಮಿ.ಮೀ. ಮಳೆ ಸುರಿದಿದೆ. ಬೆಂಗಳೂರಿನ ಚಿಕ್ಕಬಾಣಾವರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆಯಲ್ಲಿ ತಲಾ 22.5 ಮಿ.ಮೀ. ಮಳೆಯಾಗಿದೆ.
ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ಮತ್ತು ಶಿಡ್ಲಘಟ್ಟದಲ್ಲಿ ತಲಾ 22 ಮಿ.ಮೀ., ಬೆಂಗಳೂರಿನ ಲಕ್ಕಸಂದ್ರ, ವನ್ನಾರಪೇಟೆ ಹಾಗೂ ನೆಲಮಂಗಲ ತಾಲ್ಲೂಕಿನ ಶ್ರೀನಿವಾಸಪುರದಲ್ಲಿ ತಲಾ 21.5 ಮಿ.ಮೀ. ಮಳೆಯಾಗಿದೆ.
ಆನೇಕಲ್ ತಾಲ್ಲೂಕಿನ ಮುಗಳೂರು ಮತ್ತು ನೆಲಮಂಗಲ ತಾಲ್ಲೂಕಿನ ವಿಶ್ವೇಶ್ವರಪುರದಲ್ಲಿ ತಲಾ 21 ಮಿ.ಮೀ. ಮಳೆಯಾಗಿದ್ದರೆ, ಮಾಗಡಿ ತಾಲ್ಲೂಕಿನ ಲಕ್ಕೇನಹಳ್ಳಿಯಲ್ಲಿ 20.75 ಮಿ.ಮೀ. ಮಳೆ ದಾಖಲಾಗಿದೆ.
ನೆಲಮಂಗಲ ತಾಲ್ಲೂಕಿನ ಅರೆಬೊಮ್ಮನಹಳ್ಳಿ ಹಾಗೂ ಚಿಂತಾಮಣಿ ತಾಲ್ಲೂಕಿನ ಬುರುದಗುಂಟೆಯಲ್ಲಿ ತಲಾ 20.5 ಮಿ.ಮೀ., ಚಿಕ್ಕಬಳ್ಳಾಪುರ ತಾಲ್ಲೂಕಿನ ದೊಡ್ಡಪೈಲಗುರ್ಕಿಯಲ್ಲಿ 20 ಮಿ.ಮೀ. ಹಾಗೂ ಮಾಗಡಿ ತಾಲ್ಲೂಕಿನ ಬಾಣವಾಡಿಯಲ್ಲಿ 19.5 ಮಿ.ಮೀ. ಮಳೆಯಾಗಿದೆ.
ಅಂತರ ರಾಜ್ಯ
Sabarimala-ಶಬರಿಮಲೆ: ದೇವಸ್ಥಾನ ಹಾಗೂ ಅಂಗಡಿಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ; ಅಂಗಡಿಗಳಿಗೆ ₹1 ಲಕ್ಷ ದಂಡ
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಸಕ್ತ ವರ್ಷದ ಮಂಡಲ ತೀರ್ಥಯಾತ್ರೆ ಆರಂಭವಾಗುತ್ತಿದ್ದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆ ಕೈಗೊಂಡಿದ್ದಾರೆ. ಯಾತ್ರೆಯ ಮೊದಲ ವಾರದಲ್ಲೇ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಅಂಗಡಿಗಳ ಮೇಲೆ ಜಂಟಿ ತಪಾಸಣಾ ತಂಡ ದಾಳಿ ನಡೆಸಿದ್ದು, ವಿವಿಧ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ 29 ಪ್ರಕರಣ ದಾಖಲಿಸಿ ಒಟ್ಟು 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಪತ್ತನಂತಿಟ್ಟ (ಕೇರಳ): ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಸಕ್ತ ವರ್ಷದ ಮಂಡಲ ತೀರ್ಥಯಾತ್ರೆ ಆರಂಭವಾಗುತ್ತಿದ್ದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆ ಕೈಗೊಂಡಿದ್ದಾರೆ. ಯಾತ್ರೆಯ ಮೊದಲ ವಾರದಲ್ಲೇ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಅಂಗಡಿಗಳ ಮೇಲೆ ಜಂಟಿ ತಪಾಸಣಾ ತಂಡ ದಾಳಿ ನಡೆಸಿದ್ದು, ವಿವಿಧ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ 29 ಪ್ರಕರಣ ದಾಖಲಿಸಿ ಒಟ್ಟು 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಸ್ಥಳೀಯ ಸ್ವಯಂ ಆಡಳಿತ, ಕಂದಾಯ, ಆರೋಗ್ಯ, ಆಹಾರ ಸುರಕ್ಷತೆ, ಕಾನೂನು ಮಾಪನಶಾಸ್ತ್ರ ಹಾಗೂ ನಾಗರಿಕ ಸರಬರಾಜು ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡ ನಿರಂತರ ತಪಾಸಣೆ ನಡೆಸುತ್ತಿದೆ. ರಾತ್ರಿ ವೇಳೆಯೂ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ.
ಹೋಟೆಲ್‌ಗಳು ಹಾಗೂ ಆಹಾರ ಮಳಿಗೆಗಳಲ್ಲಿ ಕಂಡುಬಂದ ಅಶುಚಿತ್ವ, ಸಿಬ್ಬಂದಿ ಕೈಗವಸು ಮತ್ತು ತಲೆಯ ಕವಚ ಧರಿಸದಿರುವುದು, ಅಡುಗೆಮನೆಗಳ ಸ್ವಚ್ಛತೆ ಕಾಪಾಡದಿರುವುದು ಸೇರಿದಂತೆ ಹಲವು ಉಲ್ಲಂಘನೆಗಳು ಪತ್ತೆಯಾಗಿವೆ. ಅಲ್ಲದೆ, ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವುದು ಹಾಗೂ ತೂಕ ಮತ್ತು ಅಳತೆಯಲ್ಲಿ ವಂಚನೆ ಮಾಡುವ ಅಂಗಡಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.
ಭಾನುವಾರ ಸನ್ನಿಧಾನದಲ್ಲಿರುವ ಹೋಟೆಲ್‌ವೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಹಳಸಿದ ಆಹಾರವನ್ನು ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡು ನಾಶಪಡಿಸಿದ್ದಾರೆ. ಈ ಸಂಬಂಧ ಹೋಟೆಲ್‌ಗೆ ದಂಡವನ್ನೂ ವಿಧಿಸಲಾಗಿದೆ.
ಇದಲ್ಲದೆ, ಕೊಳೆತ ಹಣ್ಣುಗಳ ಕೆಟ್ಟ ಭಾಗವನ್ನು ಮಾತ್ರ ತೆಗೆದು ಉಳಿದ ಭಾಗದಿಂದ ಜ್ಯೂಸ್ ತಯಾರಿಸುವಂತಿಲ್ಲ. ಹಣ್ಣು ಕೊಳೆತಿದ್ದರೆ ಸಂಪೂರ್ಣ ಹಣ್ಣನ್ನೇ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಒಟ್ಟು ಮೂರು ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಆಹಾರ ಮಳಿಗೆಗಳ ತಪಾಸಣೆಯ ಜತೆಗೆ ಅಯ್ಯಪ್ಪ ಭಕ್ತರನ್ನು ನೇರವಾಗಿ ಭೇಟಿಯಾಗಿ ಅವರ ಅಭಿಪ್ರಾಯ ಹಾಗೂ ದೂರುಗಳನ್ನು ಆಲಿಸುತ್ತಿವೆ. ದೂರುಗಳಿಗೆ ತಕ್ಷಣ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಡಲ ಮತ್ತು ಮಕರವಿಳಕ್ಕು ಯಾತ್ರೆಯ ವೇಳಾಪಟ್ಟಿ
ವಾರ್ಷಿಕ ಮಂಡಲ ತೀರ್ಥಯಾತ್ರೆ ಹಿನ್ನೆಲೆಯಲ್ಲಿ ನವೆಂಬರ್ 17ರಂದು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಡಿಸೆಂಬರ್ 27ರಂದು ಮಂಡಲ ಪೂಜೆ ನಡೆಯಲಿದ್ದು, ಬಳಿಕ ಒಂದು ದಿನದ ಮಟ್ಟಿಗೆ ದೇವಸ್ಥಾನ ಮುಚ್ಚಲಿದೆ.
ನಂತರ ಮಕರವಿಳಕ್ಕು ತೀರ್ಥಯಾತ್ರೆಗಾಗಿ ಡಿಸೆಂಬರ್ 30ರಂದು ಸಂಜೆ 5 ಗಂಟೆಗೆ ಮತ್ತೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಜನವರಿ 14ರಂದು ಮಕರವಿಳಕ್ಕು ಉತ್ಸವ ನಡೆಯಲಿದ್ದು, ಜನವರಿ 19ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಜನವರಿ 20ರಂದು ದೇವಸ್ಥಾನದ ಬಾಗಿಲು ಮುಚ್ಚಲಿದೆ.
ಅಂತರ ರಾಜ್ಯ
RBI-ಡಿಜಿಟಲ್ ವಂಚನೆಗೆ ಆರ್‌ಬಿಐ ಬ್ರೇಕ್: ಖಾತೆಯ ಹಣ ವರ್ಗಾವಣೆ ತಕ್ಷಣವೇ ಸ್ಥಗಿತಗೊಳಿಸುವ ‘ಸ್ಟಾಪ್ ಸ್ವಿಚ್’ ಪ್ರಸ್ತಾಪ..!
ದೇಶದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳಿಗೆ ಕಡಿವಾಣ ಹಾಕಲು ಹಾಗೂ ಗ್ರಾಹಕರಿಗೆ ತಮ್ಮ ಬ್ಯಾಂಕ್ ಖಾತೆಗಳ ಮೇಲೆ ಹೆಚ್ಚಿನ ನಿಯಂತ್ರಣ ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕರಡು ನಿಯಮಾವಳಿಗಳನ್ನು ಪ್ರಸ್ತಾಪಿಸಿದೆ.
ಮುಂಬೈ: ದೇಶದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳಿಗೆ ಕಡಿವಾಣ ಹಾಕಲು ಹಾಗೂ ಗ್ರಾಹಕರಿಗೆ ತಮ್ಮ ಬ್ಯಾಂಕ್ ಖಾತೆಗಳ ಮೇಲೆ ಹೆಚ್ಚಿನ ನಿಯಂತ್ರಣ ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕರಡು ನಿಯಮಾವಳಿಗಳನ್ನು ಪ್ರಸ್ತಾಪಿಸಿದೆ.
ಈ ಪ್ರಸ್ತಾವನೆಯ ಪ್ರಮುಖ ಅಂಶವೆಂದರೆ, ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಿಂದ ನಡೆಯುವ ಎಲ್ಲಾ ಡೆಬಿಟ್ ವಹಿವಾಟುಗಳು ಹಾಗೂ ಹೊಸ ಪಾವತಿ ಆದೇಶಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಅನುಕೂಲವಾಗುವ ‘ಸ್ಟಾಪ್ ಸ್ವಿಚ್’ ವ್ಯವಸ್ಥೆ. ಇದರಿಂದ ಅನುಮಾನಾಸ್ಪದ ವಹಿವಾಟುಗಳು ಅಥವಾ ವಂಚನೆಯ ಪ್ರಯತ್ನಗಳು ಕಂಡುಬಂದಾಗ ಗ್ರಾಹಕರು ತಕ್ಷಣವೇ ಹಣ ವರ್ಗಾವಣೆಯನ್ನು ತಡೆಯಲು ಸಾಧ್ಯವಾಗಲಿದೆ.
ಇದಲ್ಲದೆ, ಹೊಸದಾಗಿ ತೆರೆಯುವ ಬ್ಯಾಂಕ್ ಖಾತೆಗಳಲ್ಲಿ ಡಿಜಿಟಲ್ ಪಾವತಿ ಸೌಲಭ್ಯಗಳು ಆರಂಭದಲ್ಲಿ ನಿಷ್ಕ್ರಿಯವಾಗಿರಲಿವೆ. ಗ್ರಾಹಕರ ಸ್ಪಷ್ಟ ಒಪ್ಪಿಗೆ ಪಡೆದ ಬಳಿಕವಷ್ಟೇ ಈ ಸೌಲಭ್ಯಗಳನ್ನು ಸಕ್ರಿಯಗೊಳಿಸುವ ವ್ಯವಸ್ಥೆಯನ್ನು ಆರ್‌ಬಿಐ ಪ್ರಸ್ತಾಪಿಸಿದೆ.
ಗ್ರಾಹಕರು ತಮ್ಮ ವೈಯಕ್ತಿಕ ವಹಿವಾಟುಗಳಿಗೆ ಮಿತಿಯನ್ನು ತಾವೇ ನಿಗದಿಪಡಿಸಿಕೊಳ್ಳುವ ಅವಕಾಶವನ್ನೂ ಕಲ್ಪಿಸಲು ಉದ್ದೇಶಿಸಲಾಗಿದೆ. ಜತೆಗೆ, ಹೆಚ್ಚಿನ ಮೊತ್ತದ ಹಣ ವರ್ಗಾವಣೆಗಳಿಗೆ 18 ವರ್ಷ ಮೇಲ್ಪಟ್ಟ ವಿಶ್ವಾಸಾರ್ಹ ವ್ಯಕ್ತಿಯೊಬ್ಬರನ್ನು ಅನುಮೋದಕರನ್ನಾಗಿ ನೋಂದಾಯಿಸಿಕೊಳ್ಳುವ ವ್ಯವಸ್ಥೆಯನ್ನೂ ಪ್ರಸ್ತಾಪಿಸಲಾಗಿದೆ.
ಈ ವ್ಯವಸ್ಥೆಯಡಿ, ಗ್ರಾಹಕರು ನಿಗದಿಪಡಿಸಿದ ಹೆಚ್ಚಿನ ಮೊತ್ತದ ವಹಿವಾಟಿಗೆ ವಿಶ್ವಾಸಾರ್ಹ ವ್ಯಕ್ತಿ ಒಂದು ಗಂಟೆಯೊಳಗೆ ಅನುಮೋದನೆ ನೀಡಿದರೆ ಮಾತ್ರ ಹಣ ವರ್ಗಾವಣೆ ಪೂರ್ಣಗೊಳ್ಳಲಿದೆ.
ಈ ಕರಡು ನಿಯಮಾವಳಿಗಳ ಕುರಿತು ಸಾರ್ವಜನಿಕರು ಹಾಗೂ ಸಂಬಂಧಪಟ್ಟ ವಲಯಗಳಿಂದ ಡಿಸೆಂಬರ್ 14ರವರೆಗೆ ಆರ್‌ಬಿಐ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಪ್ರಸ್ತಾವಿತ ಸುರಕ್ಷತಾ ಕ್ರಮಗಳು ಅಂತಿಮವಾಗಿ ಅನುಮೋದನೆ ಪಡೆದು ಜಾರಿಗೆ ಬಂದಲ್ಲಿ, 2027ರ ಜುಲೈ 1ರಿಂದ ಅನುಷ್ಠಾನಗೊಳ್ಳುವ ಸಾಧ್ಯತೆಯಿದೆ.
-
Uncategorized19 hours ago
ಫುತ್ತೂರು : ಗುತ್ತಿಗೆದಾರರ ಸಹಾಯಕಿಗೆ ಲೈಂಗಿಕ ದೌರ್ಜನ್ಯ, ವಿಡಿಯೋ ಚಿತ್ರೀಕರಣ , ಕಾರು ಹತ್ತಿಸಲು ಯತ್ನ ಆರೋಪ; ಮೆಸ್ಕಾಂ ಸಿಬ್ಬಂದಿ ವಿರುದ್ಧ ಕೇಸ್
-
ಕ್ರೈಂ6 hours agoMurder-ಕನ್ಯಾನ: ಚಿಕ್ಕಪ್ಪನ ಎದೆಗೆ ಕತ್ತಿಯಿಂದ ಇರಿದು ಹತ್ಯೆಗೈದ ಯುವತಿ ಅರೆಸ್ಟ್
-
ನಿಧನ ವಾರ್ತೆ6 hours agoAccident-ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಭೀಕರ ಅಪಘಾತ: 8 ವರ್ಷದ ಬಾಲಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವು; ನಾಲ್ವರ ಸ್ಥಿತಿ ಗಂಭೀರ
-
ಬಿಗ್ ನ್ಯೂಸ್6 hours agoRakesh Shetty-ಸ್ಟಿಂಗ್ ಆಪರೇಷನ್ ಪ್ರಕರಣ: ಜಾಮೀನು ಅರ್ಜಿ ವಾಪಸ್ ಪಡೆದ ರಾಕೇಶ್ ಶೆಟ್ಟಿ
-
ಕಾರ್ಯಕ್ರಮಗಳು5 hours agoPuttur-ಪುತ್ತೂರು: ನ.27ರಂದು ಅತ್ಯಾಧುನಿಕ ಬಹುಮಹಡಿ ವಾಣಿಜ್ಯ ಸೌಧ ‘ದ್ವಾರಕಾ ಕಮರ್ಶಿಯಲ್ಸ್’ ಲೋಕಾರ್ಪಣೆ; ಒಂದೇ ಸೂರಿನಡಿ ಹೈಪರ್ ಮಾರ್ಕೆಟ್ ಸಹಿತ ಹಲವು ಸೇವೆಗಳು
-
ಶಿಕ್ಷಣ24 hours agoVivekananda-ದ.ಕ ಜಿಲ್ಲಾಮಟ್ಟದ ಶಾಂತಿವನ ಟ್ರಸ್ಟ್ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಚಿಂತನ ಎಂ. ಚಿತ್ರಕಲೆಯಲ್ಲಿ ಪ್ರಥಮ
-
ಅಪರಾಧ4 hours agoExcise raid-ಬಾಳ್ತಿಲ, ಮೆಲ್ಕಾರ್ನಲ್ಲಿ ಅಬಕಾರಿ ದಾಳಿ: ₹20.37 ಲಕ್ಷ ಮೌಲ್ಯದ ಗೋವಾ ಮದ್ಯ, 2 ಕಾರುಗಳು ವಶ
-
ಶಿಕ್ಷಣ24 hours agoNarendra-ನರೇಂದ್ರ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಇಚ್ಚಿಕ ಜೈನ್ ಇವರು ಕರಾಟೆ ಸ್ಪರ್ಧೆಯಲ್ಲಿ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI)ಗೆ ಆಯ್ಕೆ















