ಶಿಕ್ಷಣ
Ambika-ಸಿಎಸ್ಇಇಟಿ-2026 ಪರೀಕ್ಷೆಯಲ್ಲಿ ಅಂಬಿಕಾ ಪ.ಪೂ. ವಿದ್ಯಾಲಯದ ಜಿ. ಸುನಿಧಿ ಪ್ರಭು ತೇರ್ಗಡೆ
ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿ ಜಿ. ಸುನಿಧಿ ಪ್ರಭು ಅವರು ದಿ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ ಸಂಸ್ಥೆ ನಡೆಸಿದ ಕಂಪೆನಿ ಸೆಕ್ರೆಟರಿ ಎಕ್ಸಿಕ್ಯೂಟಿವ್ ಎಂಟ್ರಾನ್ಸ್ ಟೆಸ್ಟ್ (ಸಿಎಸ್ಇಇಟಿ) ನಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದಾರೆ.
ಪುತ್ತೂರು : ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿ ಜಿ. ಸುನಿಧಿ ಪ್ರಭು ಅವರು ದಿ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ ಸಂಸ್ಥೆ ನಡೆಸಿದ ಕಂಪೆನಿ ಸೆಕ್ರೆಟರಿ ಎಕ್ಸಿಕ್ಯೂಟಿವ್ ಎಂಟ್ರಾನ್ಸ್ ಟೆಸ್ಟ್ (ಸಿಎಸ್ಇಇಟಿ) ನಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದಾರೆ.
ಇವರು ಪುತ್ತೂರು ದರ್ಬೆಯ ಜಿ ರಾಮ ಎಸ್ ಪ್ರಭು ಮತ್ತು ಜಿ ಶ್ರೀರಮಾ ಪ್ರಭು ದಂಪತಿಯ ಪುತ್ರಿ.
ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಮತ್ತು ಉಪನ್ಯಾಸಕೇತರ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ
Prajwal-ಪ್ರಜ್ವಲ್ಗೆ ವಿಶ್ವವಿದ್ಯಾನಿಲಯ ಮಟ್ಟದ ಬೆಸ್ಟ್ ಫಿಸಿಕ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಪುತ್ತೂರಿನ ವಿದ್ಯಾರ್ಥಿ ಪ್ರಜ್ವಲ್ ಎಂ. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಬೆಸ್ಟ್ ಫಿಸಿಕ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ಪುತ್ತೂರು, ಅ. 28: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಪುತ್ತೂರಿನ ವಿದ್ಯಾರ್ಥಿ ಪ್ರಜ್ವಲ್ ಎಂ. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಬೆಸ್ಟ್ ಫಿಸಿಕ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ಅಕ್ಟೋಬರ್ 22ರಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ)ದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಕ್ರೀಡಾ ಸ್ಪರ್ಧೆಯ ಅಂಗವಾಗಿ ಆಯೋಜಿಸಲಾಗಿದ್ದ ಬೆಸ್ಟ್ ಫಿಸಿಕ್ ಸ್ಪರ್ಧೆಯಲ್ಲಿ ಪ್ರಜ್ವಲ್ ಎಂ. ಅವರು ಈ ಸಾಧನೆ ಮಾಡಿದ್ದಾರೆ.
ಪ್ರಾಂಶುಪಾಲರಾದ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ,ಕಾಲೇಜಿನ ಆಡಳಿತ ಮಂಡಳಿ, ಬೋಧಕವರ್ಗ ಹಾಗೂ ವಿದ್ಯಾರ್ಥಿಗಳು ಪ್ರಜ್ವಲ್ ಎಂ. ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಶಿಕ್ಷಣ
Vivekananda-ವಿವೇಕಾನಂದ ಕಾಲೇಜಿನಲ್ಲಿ ‘ವಾಲ್ಮೀಕಿ ರಾಮಾಯಣ-ಲಕ್ಷ್ಮಣ ಅಂತರಂಗದ ಪ್ರಸ್ತುತಿ’
ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ವಿವೇಕಾನಂದ ಸಂಶೋಧನಾ ಕೇಂದ್ರ, ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷರಂಜಿನಿ, ಲಲಿತಕಲಾ ಸಂಘ, ಕನ್ನಡ ವಿಭಾಗ – ಕನ್ನಡ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ನಡೆದ ‘ವಾಲ್ಮೀಕಿ ರಾಮಾಯಣದ ಪಾತ್ರದ ಅಂತರಂಗ ನಿರೂಪಣೆ-ಲಕ್ಷ್ಮಣನ ಅಂತರಂಗ’ ಎಂಬ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಹಾಗೂ ಲೇಖಕ ರಾಧಾಕೃಷ್ಣ ಕಲ್ಚಾರ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಅಂತರಂಗ ಪ್ರಸ್ತುತಿ ನಡೆಸಿಕೊಟ್ಟರು.
ಪುತ್ತೂರು, ಅ.27: ರಾಮಾಯಣದಲ್ಲಿ ರಾಮ ಧರ್ಮದ ಪ್ರತೀಕವಾದರೆ, ಲಕ್ಷ್ಮಣ ತ್ಯಾಗದ ಪ್ರತೀಕ. ಲಕ್ಷ್ಮಣನ ಅಂತರಂಗ ಶುದ್ಧವಾಗಿರುತ್ತದೆ. ಅವನಲ್ಲಿ ಯಾವುದೇ ಕಲ್ಮಶವಿಲ್ಲ. ಅರಮನೆಯ ಸುಖವನ್ನು ತ್ಯಜಿಸಿ ಸಹೋದರನಿಗಾಗಿ 14 ವರ್ಷ ವನವಾಸಕ್ಕೆ ಹೊರಡುವ ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯ ಮನುಷ್ಯನಿಂದ ಸಾಧ್ಯವಿಲ್ಲ, ಇದಕ್ಕೆ ಶುದ್ಧ ಮನಸ್ಸಿನ ಜೊತೆಗೆ ನಮ್ಮ ಮನಸ್ಸು ಜ್ಞಾನದತ್ತ ಸಾಗಬೇಕು ಎಂದು ಹಿರಿಯ ಯಕ್ಷಗಾನ ಕಲಾವಿದ ಹಾಗೂ ಲೇಖಕ ರಾಧಾಕೃಷ್ಣ ಕಲ್ಚಾರ್ ಹೇಳಿದರು.
ಇವರು ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ವಿವೇಕಾನಂದ ಸಂಶೋಧನಾ ಕೇಂದ್ರ, ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷರಂಜಿನಿ, ಲಲಿತಕಲಾ ಸಂಘ, ಕನ್ನಡ ವಿಭಾಗ – ಕನ್ನಡ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ನಡೆದ ‘ವಾಲ್ಮೀಕಿ ರಾಮಾಯಣದ ಪಾತ್ರದ ಅಂತರಂಗ ನಿರೂಪಣೆ-ಲಕ್ಷ್ಮಣನ ಅಂತರಂಗ’ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಅಂತರಂಗ ಪ್ರಸ್ತುತಿ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ, ಲಕ್ಷö್ಮಣನ ಆದರ್ಶ ಗುಣಗಳು, ಕರ್ತವ್ಯನಿಷ್ಠೆ, ಸಹೋದರ ಪ್ರೀತಿ ಹಾಗೂ ತ್ಯಾಗ ಮನೋಭಾವವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಮಾಯಣದ ಪಾತ್ರಗಳು ಸಾರುವ ಮೌಲ್ಯಗಳು ಮತ್ತು ಸಂದೇಶಗಳು ನಮ್ಮ ಜೀವನಕ್ಕೆ ಸದಾ ಮಾರ್ಗದರ್ಶನ ನೀಡುವಂತಿರಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಎಸ್, ಸಂಶೋಧನಾ ಕೇಂದ್ರದ ನಿರ್ದೇಶಕಿ ಹಾಗು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ವಿಜಯಸರಸ್ವತಿ ಬಿ. ಹಾಗೂ ಕಾಲೇಜಿನ ವಿಶೇಷ ಅಧಿಕಾರಿ (ಆಡಳಿತ ವಿಭಾಗ) ಹಾಗು ಕನ್ನಡ ವಿಭಾಗದ ಮುಖ್ಯಸ್ಥ ಡಾ ಮನಮೋಹನ್ ಎಂ ಉಪಸ್ಥಿತರಿದ್ದರು.
ಶಿಕ್ಷಣ
Vivekananda-ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2026-27ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ-ಸನ್ಮಾನ ಕಾರ್ಯಕ್ರಮ; ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ವಿದ್ಯೆಯ ಜೊತೆಗೆ ವಿನಯ ಇರಲಿ – ಜೀವನ್ ದಾಸ್
ವಿವೇಕಾನಂದ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಜೀವನ್ದಾಸ್ ಎ. ಏಕತಾ ವೇದಿಕೆಯಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವದ ಮೊದಲನೇ ದಿನ ‘ಸಾಧನಾ ದರ್ಪಣಂʼ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಜೀವನ್ದಾಸ್ ಎ. ಏಕತಾ ವೇದಿಕೆಯಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವದ ಮೊದಲನೇ ದಿನ ‘ಸಾಧನಾ ದರ್ಪಣಂʼ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ “ವಿದ್ಯಾರ್ಥಿಗಳ ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ ಇರಬೇಕು.

ನಾವು ಏನಾಗಬೇಕು, ನಮ್ಮ ಜೀವನದಲ್ಲಿ ಏನನ್ನು ಸಾಧಿಸಬೇಕು ಎಂಬ ಸ್ಪಷ್ಟತೆ ಇರಬೇಕು. ಗುರಿಯಿಲ್ಲದ ಜೀವನ ದಿಕ್ಕಿಲ್ಲದ ಪ್ರಯಾಣದಂತೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ನಿರ್ಧರಿಸಿ, ಅದನ್ನು ಸಾಧಿಸಲು ನಿರಂತರ ಪ್ರಯತ್ನ ಮಾಡಬೇಕು. ತಾಯಿಯೇ ಮಗುವಿನ ಮೊದಲ ಗುರು. ಮಗುವಿಗೆ ಮೊದಲ ಮಾತು, ಮೊದಲ ನಡವಳಿಕೆ, ಮೊದಲ ಸಂಸ್ಕಾರ ದೊರೆಯುವುದೇ ತಾಯಿಯಿಂದ. ತಂದೆ-ತಾಯಿ ನೀಡುವ ಪ್ರೀತಿ, ಮಾರ್ಗದರ್ಶನ ಮತ್ತು ಗುರುಗಳು ನೀಡುವ ಶಿಕ್ಷಣ ನಮ್ಮ ಜೀವನದುದ್ದಕ್ಕೂ ನಮಗೆ ದಾರಿದೀಪವಾಗಿರುತ್ತವೆ.” ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ.ಸುಚೇತಾ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಸಂಶೋಧನಾ ವಿಜ್ಞಾನಿ, ಅಜೀಂ ಪ್ರೇಮ್ ಜಿ ಫೌಂಡೇಶನ್ ಅನುದಾನಿತ ಕ್ಯಾನ್ಸರ್ ತಪಾಸಣಾ ಯೋಜನೆ ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯ ಮಾತನಾಡುತ್ತಾ “ವಿದ್ಯಾರ್ಥಿ ಜೀವನವು ಭವಿಷ್ಯದ ಬದುಕಿಗೆ ಬುನಾದಿಯಿದ್ದಂತೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಯಾವುದೇ ಗೊಂದಲಗಳಿಗೆ ಒಳಗಾಗದೆ ತಮ್ಮ ಭವಿಷ್ಯದ ಬಗ್ಗೆ ನಿರ್ದಿಷ್ಟ ಉದ್ದೇಶವನ್ನು ಹೊಂದಿರಬೇಕು ಹಾಗೂ ಸಿಗುವ ಎಲ್ಲಾ ಸೂಕ್ತ ಅವಕಾಶಗಳನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಂಡು ತಮ್ಮ ಸ್ವಂತ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವತ್ತ ಗಮನ ಹರಿಸಬೇಕು.
ಕೇವಲ ಅಂಕಗಳನ್ನು ಗಳಿಸುವುದು ಮಾತ್ರ ಶಿಕ್ಷಣದ ಉದ್ದೇಶವಲ್ಲ, ಬದಲಿಗೆ ವಿದ್ಯಾರ್ಥಿಗಳು ಹೊಸ ಹೊಸ ವಿಚಾರಗಳನ್ನು ಸದಾ ಅನ್ವೇಷಿಸುತ್ತಾ, ಸ್ವಾವಲಂಬಿಗಳಾಗಿ ಬೆಳೆಯಲು ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ಸುಧಾರಿಸಿಕೊಳ್ಳಬೇಕು. ಯಾವುದೇ ರಂಗದಲ್ಲಿ ಯಶಸ್ಸು ಸಿಗಬೇಕಾದರೂ ಅದಕ್ಕೆ ಕೇವಲ ಅದೃಷ್ಟ ಕಾರಣವಲ್ಲ, ಬದಲಿಗೆ ನಿರಂತರವಾದ ಕಠಿಣ ಶ್ರಮ ಮಾತ್ರ ಯಶಸ್ಸನ್ನು ತಂದುಕೊಡುತ್ತದೆ. ” ಎಂದು ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತಮಂಡಳಿಯ ಕೋಶಾಧಿಕಾರಿ ಸಚಿನ್ ಶೆಣೈ ಕೆ. ವಹಿಸಿಕೊಂಡು “ಸಂಸ್ಥೆಯು ಉತ್ತುಂಗಕ್ಕೇರಲು ವಿದ್ಯಾರ್ಥಿಗಳು, ಹೆತ್ತವರು ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಅದರಲ್ಲೂ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ವಿದ್ಯಾರ್ಥಿಗಳ ಸಾಧನೆಯೇ ಸಂಸ್ಥೆಯ ಕೀರ್ತಿ ಮತ್ತು ಗೌರವವನ್ನು ಹೆಚ್ಚಿಸುತ್ತದೆ. ತಮ್ಮ ಸಾಧನೆಗಳ ಮೂಲಕ ಹೆತ್ತವರಿಗೆ, ಶಿಕ್ಷಕರಿಗೆ ಹಾಗೂ ತಾವು ಕಲಿತ ಸಂಸ್ಥೆಗೆ ಹೆಮ್ಮೆ ತರುವ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು” ಎಂದು ಹೇಳಿದರು.

ಏಕತಾ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಲಾಯಿತು. ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸ್ಪರ್ಧೆಗಳ ಹಾಗೂ ಕಾಲೇಜಿನ ವಿವಿಧ ಸಂಘಗಳ ವತಿಯಿಂದ ನಡೆಸಲಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜತೆಗೆ ಕಾಲೇಜು ವಾರ್ಷಿಕ ಕ್ರೀಡಾಕೂಟದ ವಿವಿಧ ಪಂದ್ಯಾಟಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ –ರಕ್ಷಕ ಸಂಘದ ಉಪಾಧ್ಯಕ್ಷರಾದ ಎನ್. ಸತ್ಯನಾರಾಯಣ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ದಯಾಮಣಿ ಟಿ.ಕೆ ಸ್ವಾಗತಿಸಿ, ದಿವ್ಯಾ ಕೆ. ವಂದಿಸಿ ಪುಷ್ಪಲತಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
-
Uncategorized21 hours ago
ಸುರತ್ಕಲ್ : ಪೊಲೀಸ್ ವಿಚಾರಣೆಗೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ: ಠಾಣೆ ಎದುರು ಶವವಿಟ್ಟು ಪ್ರತಿಭಟನೆ, ಹೆದ್ದಾರಿ ಸಂಚಾರ ಸ್ಥಗಿತ | ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ
-
ದಕ್ಷಿಣ ಕನ್ನಡ19 hours ago
kukke Temple Contravercy: ಭಕ್ತರ ವಿರೋಧಕ್ಕೆ ಮಣಿದ ಕುಕ್ಕೆ ದೇಗುಲ ಆಡಳಿತ: ಅ.28ರಿಂದಲೇ ಪ್ರತ್ಯೇಕ ಸಂಕಲ್ಪ ಸೇವೆ ಪುನರಾರಂಭ | ಮಾಜಿ ಟ್ರಸ್ಟಿ ಪ್ರಸನ್ನ ದರ್ಭೆ ಹೋರಾಟಕ್ಕೆ ಜಯ
-
Uncategorized20 hours ago
ಸುರತ್ಕಲ್: ಸೋಮನಾಥ ಆ#ತ್ಮಹತ್ಯೆ ಪ್ರಕರಣ; ಪೊಲೀಸ್ ಠಾಣೆ ಎದುರು ಮೃತದೇಹವಿಟ್ಟು ಸ್ಥಳೀಯರ ಆಕ್ರೋಶ; ಶಾಸಕ ಭರತ್ ಶೆಟ್ಟಿ ಮಧ್ಯಸ್ಥಿಕೆ- ಪ್ರತಿಭಟನೆ ಅಂತ್ಯ;
-
ಬಿಗ್ ನ್ಯೂಸ್24 hours agoPuttur-ಪುತ್ತೂರು: ಕಾರು-ಆಕ್ಟಿವಾ ಡಿಕ್ಕಿ- ಸವಾರನಿಗೆ ಗಾಯ
-
ಬಿಗ್ ನ್ಯೂಸ್8 hours agoPuttur-ಪುತ್ತೂರು: ವಿಷ ಪದಾರ್ಥ ಸೇವಿಸಿ ನವವಿವಾಹಿತೆ ಸಾವು; ಇಬ್ಬರ ವಿರುದ್ಧ ಪ್ರಕರಣ ದಾಖಲು
-
ಅಪರಾಧ4 hours ago
Puttur Pickup Accident : ಪುತ್ತೂರು: ಕೋಡಿಂಬಾಡಿಯಲ್ಲಿ ತೆಂಗಿನ ಕಾಯಿ ಸಾಗಿಸುತ್ತಿದ್ದ ಪಿಕಪ್ ಪಲ್ಟಿ; ಚಾಲಕ ಸಾವು
-
ಬಿಗ್ ನ್ಯೂಸ್3 hours ago
Prasanna Darbe On Ashok kumar Rai“ಇದು ಗುಲಾಮರ ನೆಲವಲ್ಲ, ಸ್ವಾಭಿಮಾನದ ಪುತ್ತೂರು – ಶಾಸಕರ ಅಭಿವೃದ್ಧಿ ರೀಲ್ಸ್, ಫ್ಲೆಕ್ಸ್ಗಳಿಗೆ ಸೀಮಿತ : ಪ್ರಸನ್ನ ದರ್ಬೆ
-
ಅಪರಾಧ8 hours agoDeralkatte-ದೇರಳಕಟ್ಟೆ ಕಾಲೇಜಿನಲ್ಲಿ ರ್ಯಾಗಿಂಗ್ ಆರೋಪ: ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು


















