Connect with us

ಅಂತರ ರಾಜ್ಯ

‘Arnab’ storm-ಆಂಧ್ರ ಕರಾವಳಿಗೆ ಅಪ್ಪಳಿಸಿದ ‘ಅರ್ನಬ್’ ಚಂಡಮಾರುತ: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ; ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರ ರಕ್ಷಣೆ

Published

on



Ad Widget

Ad Widget

Ad Widget

Ad Widget

ಆಂಧ್ರಪ್ರದೇಶದ ಕರಾವಳಿಗೆ ಬುಧವಾರ ಮುಂಜಾನೆ ತೀವ್ರ ಸ್ವರೂಪದ ‘ಅರ್ನಬ್’ ಚಂಡಮಾರುತ ಅಪ್ಪಳಿಸಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಾರೀ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

Ad Widget

Ad Widget

Ad Widget

Ad Widget

ಅಮರಾವತಿ, ಅ.28: ಆಂಧ್ರಪ್ರದೇಶದ ಕರಾವಳಿಗೆ ಬುಧವಾರ ಮುಂಜಾನೆ ತೀವ್ರ ಸ್ವರೂಪದ ‘ಅರ್ನಬ್’ ಚಂಡಮಾರುತ ಅಪ್ಪಳಿಸಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಾರೀ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

Ad Widget

Ad Widget

Ad Widget alt="Ad Widget"/>

Ad Widget

ಚಂಡಮಾರುತವು ಕರಾವಳಿ ದಾಟುವ ಪ್ರಕ್ರಿಯೆ ಮುಂದುವರಿದಿದ್ದು, ಅದರ ಕೇಂದ್ರಭಾಗ ಕರಾವಳಿಯ ಸಮೀಪದಲ್ಲೇ ಬಹುತೇಕ ಸ್ಥಿರವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

Ad Widget

Ad Widget <> Ad Widget

ಚಂಡಮಾರುತದ ಉತ್ತರ ಭಾಗದಲ್ಲಿರುವ ಸುರುಳಿಯಾಕಾರದ ಮೋಡಗಳ ಪಟ್ಟಿಯು ಒಳನಾಡಿನತ್ತ ಚಲಿಸುತ್ತಿದ್ದು, ಕರಾವಳಿ ದಾಟುವ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಮೂರು ಗಂಟೆಗಳು ಬೇಕಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.



Ad Widget

ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಆಂಧ್ರಪ್ರದೇಶದ ಕರಾವಳಿಗೆ ಸಮೀಪ ಚಂಡಮಾರುತ ಕೇಂದ್ರೀಕೃತವಾಗಿದೆ. ಇದು ನರಸಾಪುರದಿಂದ ಪೂರ್ವಕ್ಕೆ ಸುಮಾರು 30 ಕಿ.ಮೀ., ಯಾನಂನಿಂದ ದಕ್ಷಿಣ-ನೈಋತ್ಯಕ್ಕೆ 45 ಕಿ.ಮೀ., ಕಾಕಿನಾಡದಿಂದ ದಕ್ಷಿಣ-ನೈಋತ್ಯಕ್ಕೆ 70 ಕಿ.ಮೀ. ಹಾಗೂ ಮಚಲಿಪಟ್ಟಣದಿಂದ ಪೂರ್ವ-ಈಶಾನ್ಯಕ್ಕೆ 90 ಕಿ.ಮೀ. ದೂರದಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Ad Widget

Ad Widget

ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ
ಚಂಡಮಾರುತದ ಪರಿಣಾಮ ಅನಕಾಪಲ್ಲಿ, ವಿಶಾಖಪಟ್ಟಣ, ಕಾಕಿನಾಡ ಹಾಗೂ ಕೋನಸೀಮಾ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ.

ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರ ರಕ್ಷಣೆ
ಕಾಕಿನಾಡದಲ್ಲಿ ಭಾರೀ ಮಳೆ ಹಾಗೂ ಸಮುದ್ರದ ನೀರು ನುಗ್ಗಿದ ಪರಿಣಾಮ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ನಾಲ್ವರು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ನಿರಂತರ ಮಳೆಯಿಂದ ಸುತ್ತಮುತ್ತಲಿನ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದರಿಂದ ಅವರಿಗೆ ಹೊರಬರಲು ಸಾಧ್ಯವಾಗದೆ ಸಿಲುಕಿಕೊಂಡಿದ್ದರು.

ಹೊರಬರಲು ಯಾವುದೇ ಮಾರ್ಗವಿಲ್ಲದ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ನಾಲ್ವರನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

Ad Widget
Click to comment

Leave a Reply

ಅಂತರ ರಾಜ್ಯ

Mobile charging-ರೈಲು ಪ್ರಯಾಣಿಕರೇ ಗಮನಿಸಿ: ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಮೊಬೈಲ್ ಚಾರ್ಜಿಂಗ್‌ಗೆ ನಿರ್ಬಂಧ

Published

on



Ad Widget

Ad Widget

Ad Widget

Ad Widget

ರೈಲಿನಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ಸ್ಫೋಟಗೊಂಡ ಘಟನೆ ಬಳಿಕ, ಬೆಂಕಿ ಅವಘಡಗಳ ಅಪಾಯ ತಡೆಯುವ ಉದ್ದೇಶದಿಂದ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ರೈಲು ಬೋಗಿಗಳಲ್ಲಿ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಚಾರ್ಜ್ ಮಾಡುವುದರ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರೈಲ್ವೆ ಮಂಡಳಿ ಎಲ್ಲ ರೈಲ್ವೆ ವಲಯಗಳಿಗೆ ನಿರ್ದೇಶನ ನೀಡಿದೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ, ಅ.28: ರೈಲಿನಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ಸ್ಫೋಟಗೊಂಡ ಘಟನೆ ಬಳಿಕ, ಬೆಂಕಿ ಅವಘಡಗಳ ಅಪಾಯ ತಡೆಯುವ ಉದ್ದೇಶದಿಂದ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ರೈಲು ಬೋಗಿಗಳಲ್ಲಿ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಚಾರ್ಜ್ ಮಾಡುವುದರ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರೈಲ್ವೆ ಮಂಡಳಿ ಎಲ್ಲ ರೈಲ್ವೆ ವಲಯಗಳಿಗೆ ನಿರ್ದೇಶನ ನೀಡಿದೆ.

Ad Widget

Ad Widget

Ad Widget alt="Ad Widget"/>

Ad Widget

ಅಕ್ಟೋಬರ್ 26ರಂದು ಹೊರಡಿಸಿದ ಪತ್ರದಲ್ಲಿ, ದಕ್ಷಿಣ ಪೂರ್ವ ರೈಲ್ವೆ ವಲಯದಲ್ಲಿ ನಡೆದ ಘಟನೆಯೊಂದರಲ್ಲಿ ನಿಗದಿತ ಸಮಯದಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ವಿಚ್ ಆಫ್ ಮಾಡಲು ಸಿಬ್ಬಂದಿ ವಿಫಲರಾಗಿದ್ದರು. ಈ ವೇಳೆ ಚಾರ್ಜ್‌ಗೆ ಇಡಲಾಗಿದ್ದ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ಸ್ಫೋಟಗೊಂಡಿತ್ತು ಎಂದು ರೈಲ್ವೆ ಮಂಡಳಿ ತಿಳಿಸಿದೆ.

Ad Widget

Ad Widget <> Ad Widget

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಂಡಳಿ, ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಕಡ್ಡಾಯವಾಗಿ ಆಫ್ ಮಾಡುವುದನ್ನು ಖಚಿತಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಸಿಬ್ಬಂದಿಗೆ ಸೂಚನೆ ನೀಡಲು ಎಲ್ಲ ರೈಲ್ವೆ ವಲಯಗಳಿಗೆ ನಿರ್ದೇಶಿಸಿದೆ.



Ad Widget

ನಿಯಮ ಪಾಲನೆಗೆ ಹಠಾತ್ ತಪಾಸಣೆ
ಚಾರ್ಜಿಂಗ್ ನಿಷೇಧದ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಂಬಂಧಪಟ್ಟ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಬೇಕು ಎಂದು ಮಂಡಳಿ ಸೂಚಿಸಿದೆ. ಅಲ್ಲದೆ, ಅಧಿಕಾರಿಗಳು ಮತ್ತು ಮೇಲ್ವಿಚಾರಕರು ಹಠಾತ್ ತಪಾಸಣೆ ನಡೆಸುವ ಮೂಲಕ ನಿಯಮ ಪಾಲನೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.

Ad Widget

Ad Widget

2014ರಲ್ಲೇ ಹೊರಡಿಸಲಾಗಿತ್ತು ಆದೇಶ
2013ರಲ್ಲಿ ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಹಜೂರ್ ಸಾಹಿಬ್ ನಾಂದೇಡ್–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ನ ಎಸಿ 3-ಟೈರ್ ಬೋಗಿಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಘಟನೆಯ ಬಳಿಕ 2014ರ ಜೂನ್‌ನಲ್ಲಿ ರೈಲ್ವೆ ಮಂಡಳಿಯು ಎಸಿ ಬೋಗಿಗಳಲ್ಲಿ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಚಾರ್ಜಿಂಗ್ ಪಾಯಿಂಟ್‌ಗಳನ್ನು ಆಫ್ ಮಾಡುವಂತೆ ಆದೇಶಿಸಿತ್ತು.

ಇದೀಗ ಪವರ್ ಬ್ಯಾಂಕ್ ಸ್ಫೋಟದ ಘಟನೆ ಹಿನ್ನೆಲೆಯಲ್ಲಿ, ಈಗಾಗಲೇ ಜಾರಿಯಲ್ಲಿರುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ರೈಲ್ವೆ ವಲಯಗಳಿಗೆ ಮತ್ತೊಮ್ಮೆ ಸೂಚನೆ ನೀಡಲಾಗಿದೆ.

Ad Widget
Continue Reading

ಅಂತರ ರಾಜ್ಯ

Nagpur-RSS ಭದ್ರಕೋಟೆ ನಾಗ್ಪುರದಲ್ಲಿ ಬಿಜೆಪಿಗೆ ಶಾಕ್ : ಪದವೀಧರ ಕ್ಷೇತ್ರ ಕಾಂಗ್ರೆಸ್ ಪಾಲು

Published

on



Ad Widget

Ad Widget

Ad Widget

Ad Widget

ಮಹಾರಾಷ್ಟ್ರ ವಿಧಾನ ಪರಿಷತ್‌ನ ನಾಗಪುರ ವಿಭಾಗದ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಪ್ರದೇಶದಲ್ಲಿ ಬಿಜೆಪಿಗೆ ಆಘಾತ ನೀಡಿದೆ.

Ad Widget

Ad Widget

Ad Widget

Ad Widget

ನಾಗಪುರ: ಮಹಾರಾಷ್ಟ್ರ ವಿಧಾನ ಪರಿಷತ್‌ನ ನಾಗಪುರ ವಿಭಾಗದ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಪ್ರದೇಶದಲ್ಲಿ ಬಿಜೆಪಿಗೆ ಆಘಾತ ನೀಡಿದೆ.

Ad Widget

Ad Widget

Ad Widget alt="Ad Widget"/>

Ad Widget

ಸುದೀರ್ಘ ಮತ ಎಣಿಕೆ ಪ್ರಕ್ರಿಯೆಯ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಅಭಿಜಿತ್ ಗೋವಿಂದರಾವ್ ವಂಜಾರಿ ಅವರು ಬಿಜೆಪಿಯ ಸುಧಾಕರ್ ಕೊಣ್ಣೆ ಅವರನ್ನು 3,271 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ತವರು ನಗರವಾಗಿರುವ ನಾಗಪುರವು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವೂ ಆಗಿದೆ. ಅಲ್ಲದೆ, ಆರೆಸ್ಸೆಸ್‌ನ ಕೇಂದ್ರ ಕಚೇರಿಯೂ ಇದೇ ನಗರದಲ್ಲಿದೆ. ಬಿಜೆಪಿ ಹಾಗೂ ಆರೆಸ್ಸೆಸ್ ಪ್ರಬಲ ಹಿಡಿತ ಹೊಂದಿರುವ ಪ್ರದೇಶದಲ್ಲಿ ಕಾಂಗ್ರೆಸ್ ಸಾಧಿಸಿರುವ ಈ ಗೆಲುವು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

Ad Widget

Ad Widget <> Ad Widget

ನಾಲ್ಕು ರಾಜ್ಯಗಳ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮೊದಲ ಗೆಲುವು
ಕರ್ನಾಟಕ, ಬಿಹಾರ, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಸೇರಿದಂತೆ ನಾಲ್ಕು ರಾಜ್ಯಗಳ ಒಟ್ಟು 28 ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಈ ಗೆಲುವಿನೊಂದಿಗೆ ತನ್ನ ಖಾತೆ ತೆರೆದಿದೆ.



Ad Widget

ವಕೀಲ ಹಾಗೂ ಶಿಕ್ಷಣ ತಜ್ಞರಾಗಿರುವ ಅಭಿಜಿತ್ ವಂಜಾರಿ ಅವರು 2020ರಲ್ಲಿಯೂ ನಾಗಪುರ ಪದವೀಧರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಇದೀಗ ಸತತ ಎರಡನೇ ಬಾರಿಗೆ ಆಯ್ಕೆಯಾಗುವ ಮೂಲಕ ಮಹಾರಾಷ್ಟ್ರ ವಿಧಾನ ಪರಿಷತ್‌ನಲ್ಲಿ ಮತ್ತೊಂದು ಅವಧಿಗೆ ಪ್ರವೇಶ ಪಡೆದಿದ್ದಾರೆ.

Ad Widget

Ad Widget

ಕಾಂಗ್ರೆಸ್, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಹಾಗೂ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಒಳಗೊಂಡ ಪ್ರತಿಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಯಾಗಿ ವಂಜಾರಿ ಕಣಕ್ಕಿಳಿದಿದ್ದರು.

ಮತ ಎಣಿಕೆ ವೇಳೆ ಘರ್ಷಣೆ
ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಮತ ಎಣಿಕೆ ನಡೆಯುತ್ತಿದ್ದ ಮಾನಕಾಪುರ ಒಳಾಂಗಣ ಕ್ರೀಡಾಂಗಣದ ಹೊರಭಾಗದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆಯೂ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿದರು.

ಮತದಾರರು ನಮ್ಮ ಕೈಹಿಡಿದರು: ವಂಜಾರಿ
ಗೆಲುವಿನ ಬಳಿಕ ಅಕ್ಟೋಬರ್ 28ರಂದು ಪ್ರತಿಕ್ರಿಯಿಸಿದ ಅಭಿಜಿತ್ ವಂಜಾರಿ, ನಾಗಪುರದಲ್ಲಿ ಬಿಜೆಪಿ ತನ್ನ ಎಲ್ಲ ನಾಯಕರು ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸಿತ್ತು. ಆದರೂ ಮತದಾರರು ಕಾಂಗ್ರೆಸ್ ಪರ ನಿಂತಿದ್ದಾರೆ ಎಂದು ಹೇಳಿದರು.

ಬಿಜೆಪಿ ತನ್ನ ಸಂಪೂರ್ಣ ಶಕ್ತಿಯನ್ನು ಪ್ರಯೋಗಿಸಿತ್ತು. ಪಕ್ಷದ ಎಲ್ಲ ಪ್ರಮುಖ ನಾಯಕರು ನಾಗಪುರದಲ್ಲಿಯೇ ಬೀಡುಬಿಟ್ಟಿದ್ದರು. ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ ಎಂದು ವಂಜಾರಿ ಸಂತಸ ವ್ಯಕ್ತಪಡಿಸಿದರು.

Ad Widget
Continue Reading

ಅಂತರ ರಾಜ್ಯ

High Court-ಅನ್ಯಧರ್ಮದವರಿಗೆ ಹಿಂದೂ ದೇಗುಲ ಪ್ರವೇಶ ನಿರ್ಬಂಧ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

Published

on



Ad Widget

Ad Widget

Ad Widget

Ad Widget

ಅನ್ಯ ಧರ್ಮದ ಗುರುತುಗಳನ್ನು ಧರಿಸಿದ ಹಿಂದೂಯೇತರರು ಹಾಗೂ ದೇವರ ಮೇಲೆ ಭಕ್ತಿ ಅಥವಾ ಗೌರವವಿಲ್ಲದವರನ್ನು ಆಗಮ ಶಾಸ್ತ್ರ ಪಾಲಿಸುವ ದೇವಾಲಯಗಳಿಗೆ ಪ್ರವೇಶಿಸಲು ಅನುಮತಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

Ad Widget

Ad Widget

Ad Widget

Ad Widget

ಮಧುರೈ, ಅ.28: ಅನ್ಯ ಧರ್ಮದ ಗುರುತುಗಳನ್ನು ಧರಿಸಿದ ಹಿಂದೂಯೇತರರು ಹಾಗೂ ದೇವರ ಮೇಲೆ ಭಕ್ತಿ ಅಥವಾ ಗೌರವವಿಲ್ಲದವರನ್ನು ಆಗಮ ಶಾಸ್ತ್ರ ಪಾಲಿಸುವ ದೇವಾಲಯಗಳಿಗೆ ಪ್ರವೇಶಿಸಲು ಅನುಮತಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಮಧುರೈಯ ಕೆ. ತಂಗಂ ವೆಂಕಟೇಶ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಈ ತೀರ್ಪು ನೀಡಿರುವ ಮದ್ರಾಸ್‌ ಹೈಕೋರ್ಟ್‌ ವಿಭಾಗೀಯ ಪೀಠವು, ದೇವಾಲಯದ ಗೌರವ ಪಾಲಿಸುವ ಒಪ್ಪಂದಕ್ಕೆ ಸಹಿ ಹಾಕದವರನ್ನು ಧ್ವಜಸ್ತಂಭ ದಾಟಲು ಬಿಡಬಾರದು. ಇಂತಹ ಪ್ರವೇಶದಿಂದ ದೇಗುಲದ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎಂದಿದೆ.

Ad Widget

Ad Widget <> Ad Widget

ಆದರೆ ಇದು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ, ಶಿರಡಿ ಸಾಯಿಬಾಬಾ ದೇಗುಲಕ್ಕೆ ಅನ್ವಯಿಸುವುದಿಲ್ಲ. ಏಕೆಂದರೆ ಈ ದೇಗುಲಗಳು ಧರ್ಮ ಮೀರಿ ಭಕ್ತರನ್ನು ಹೊಂದಿದ್ದು, ಆಗಮ ಶಾಸ್ತ್ರದಡಿಯೂ ಬರುವುದಿಲ್ಲ. ಆಗಮ ಶಾಸ್ತ್ರದಡಿ ನಿಯಮ ಪಾಲಿಸುವ ದೇವಸ್ಥಾನಗಳಿಗೆ ಈ ನಿಯಮ ಅನ್ವಯಿಸುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.



Ad Widget

ಇದೇ ವೇಳೆ ಮಧುರೈಯ ಟಿವಿಕೆ ಶಾಸಕ ಬದ್ರುದ್ದೀನ್ ಮುಸ್ತಫಾ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಪೀಠ, ಪರಿಶೀಲನೆಯ ಹೆಸರಿನಲ್ಲಿ ಮಧುರೈ ಮೀನಾಕ್ಷಿ ದೇವಾಲಯ ವನ್ನು ಪ್ರವೇಶಿಸಿದ್ದ ಮುಸ್ತಫಾ, ಶಾಸಕನಾಗಿ ತನಗೆ ಪ್ರವೇಶದ ಹಕ್ಕಿದೆ ಎಂದಿದ್ದರು.

Ad Widget

Ad Widget

ಅಲ್ಲದೆ ಕುಂಭಾಭಿಷೇಕದ ಸಂದರ್ಭದಲ್ಲೂ ಗೋಪುರದ ಬಳಿ ತೆರಳಿದ್ದರು. ಇದೇ ಶಾಸಕ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದಿರುವುದು ವಿಪರ್ಯಾಸ ಎಂದಿದೆ. ಅಲ್ಲದೆ ಕ್ರೈಸ್ತ ಧರ್ಮೀಯರಾದ ಸಿಎಂ ವಿಜಯ್ ನಿಗದಿತ ಒಪ್ಪಂದಕ್ಕೆ ಸಹಿ ಹಾಕದೆ ತಿರುಚೆಂದೂರು ದೇಗುಲಕ್ಕೆ ಪ್ರವೇಶಿಸಿದ್ದನ್ನೂ ಗಮನಿಸಿದ್ದೇವೆ. ಆದರೆ ಅದೇ ವಿಜಯ್, ಮೀನಾಕ್ಷಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವಾಗ ದೇಗುಲದ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದನ್ನು ನಾವು ಶ್ಲಾಘಿಸುತ್ತೇವೆ. ಕ್ರೈಸ್ತ ಧರ್ಮದವರಾದ ಸಿಎಂ ವಿಜಯ್ ಅವರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಕೇಳಲಾಗಿಲ್ಲ. ದೇವರ ಮೇಲಿನ ಅವರ ಭಕ್ತಿಯನ್ನು ದೃಢೀಕರಿಸಲು ಮಾತ್ರ ಕೇಳಲಾಯಿತು ಎಂದು ಪೀಠ ಹಲವು ಉದಾಹರಣೆಗಳನ್ನು ನೀಡಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!