Connect with us

ಶಿಕ್ಷಣ

Vivekananda-ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾ ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ

Published

on



Ad Widget

Ad Widget

Ad Widget

Ad Widget

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಸ್ನಾತಕೋತ್ತರ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಐಕ್ಯೂಎಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಪ್ರಯುಕ್ತ ಪರಿಸರ ರಕ್ಷಣಾ ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ಮಾತನಾಡಿದರು.

Ad Widget

Ad Widget

Ad Widget

Ad Widget

ಪುತ್ತೂರು. ನ. 22: ಮನುಷ್ಯ ಯಾವಾಗ ನೈತಿಕ ಭಾವನೆಯನ್ನು ತನ್ನಲ್ಲಿ ತಾನು ತೊಡಗಿಸಿಕೊಳ್ಳುತ್ತಾನೋ ಆಗ ಮಾತ್ರ ಪರಿಸರವನ್ನು ಉಳಿಸಲು ಸಾಧ್ಯ. ಜನರ ಮನಸ್ಥಿತಿಗಳು ಯಾವ ರೀತಿಯಾಗಿ ಬದಲಾಗಿದೆ ಎಂದರೆ ತಾನು ಶ್ರೀಮಂತನಾದರೆ ಸಾಕು, ಅದರಿಂದ ನಾಶದ ಕಡೆಗೆ ಸಾಗುವ ಪ್ರಕೃತಿಯ ಮೇಲೆ ದಯೆಯೇ ಇಲ್ಲದಾಗಿದೆ. ದೇಶದ ಪ್ರಗತಿ, ಮನುಷ್ಯನ ಶ್ರೀಮಂತಿಕೆಗೆ ಪರಿಸರ ಬಲಿಯಾಗುತ್ತಿವೆ. ಜನರೆಲ್ಲರೂ ನೈತಿಕ ಭಾವನೆಯನ್ನು ಅಳವಡಿಸಿಕೊಳ್ಳದಿದ್ದರೆ, ಮುಂದಿನ ಜನಾಂಗಕ್ಕೆ ಜೀವಿಸುವುದೇ ಕಷ್ಟವಾಗಬಹುದು. ಅನಕ್ಷರಸ್ಥರಿಗೆ ಇರುವಂತಹ ಜ್ಞಾನ ಇಂದಿನ ಅಕ್ಷರಸ್ಥರಿಗಿಲ್ಲ. ಇಂದು ಪರಿಸರವನ್ನು ಉಳಿಸಿ, ಮುಂದಿನ ತಲೆಮಾರುಗಳಿಗೆ ಸ್ವಚ್ಛ ಪರಿಸರವನ್ನು ಕೊಡುವ ಕೆಲಸ ಮಾಡಬೇಕು. ಸಹಿಷ್ಣುತಾ ಭಾವ ಎಲ್ಲರಲ್ಲೂ ಬೆಳೆದರೆ ಆಗ ಪ್ರಕೃತಿ ಸುಂದವಾಗಿರಲು ಸಾಧ್ಯವಾಗುವುದು ಎಂದು ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಅಧಿಕಾರಿ, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ಹೇಳಿದರು.

Ad Widget

Ad Widget

Ad Widget alt="Ad Widget"/>

Ad Widget

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಸ್ನಾತಕೋತ್ತರ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಐಕ್ಯೂಎಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಪ್ರಯುಕ್ತ ಪರಿಸರ ರಕ್ಷಣಾ ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

Ad Widget

Ad Widget <> Ad Widget

ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಶಿವಪ್ರಸಾದ್ ಕೆ.ಎಸ್ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ವಿದ್ಯಾವಂತರಿಂದಲೇ ಇಂದು ಪರಿಸರ ಹಾಳಾಗುತ್ತಿದೆ. ಅವಿದ್ಯಾವಂತರಿಗಿರುವ ಪರಿಸರ ಪ್ರೀತಿ ವಿದ್ಯಾವಂತರಿಗಿಲ್ಲ. ಶಿಕ್ಷಣ ಕಲಿತಷ್ಟು ಪ್ರಕೃತಿಯ ನಾಶವನ್ನೇ ಹೆಚ್ಚು ಮಾಡುತ್ತಿದ್ದಾರೆ. ಪ್ರಕೃತಿಯನ್ನು ಪ್ರಾಣಿ, ಪಕ್ಷಿಗಳು ಪ್ರೀತಿಸಿದಷ್ಟು ಮನುಷ್ಯರು ಪ್ರೀತಿಸುತ್ತಿಲ್ಲ. ಜನರು ತಮ್ಮ ಮನಸ್ಥಿತಿಗಳನ್ನು ಬದಲಾಯಿಸಿದಾಗ ಮಾತ್ರ ಪರಿಸರದ ಉಳಿವು ಸಾಧ್ಯವಾಗುವುದು. ಯಾವಾಗ ಮನುಷ್ಯರು ಸಣ್ಣ, ಪುಟ್ಟ ಕಾಳಜಿಯೊಂದಿಗೆ ಪ್ರಕೃತಿಯನ್ನು ಪ್ರೀತಿಸುತ್ತಾರೋ, ಆಗ ಪರಿಸರವು ಸುಂದರವಾಗಿರುತ್ತದೆ ಎಂದು ತಿಳಿಸಿದರು.



Ad Widget

ಕಾರ್ಯಕ್ರಮದಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ ಬಿ ಹಾಗೂ ಐಕ್ಯೂಎಸಿ ಘಟಕದ ಸಂಯೋಜಕಿ ಡಾ. ರವಿಕಲಾ ಉಪಸ್ಥಿತರಿದ್ದರು.

Ad Widget

Ad Widget

ಕಾರ್ಯಕ್ರವನ್ನು ದ್ವಿತೀಯ ಎಂಕಾಂ ವಿದ್ಯಾರ್ಥಿನಿ ಯಶ್ವಿತಾ ಸ್ವಾಗತಿಸಿ, ದ್ವಿತೀಯ ಎಂಕಾಂ ವಿದ್ಯಾರ್ಥಿನಿ ಅನನ್ಯ ಬಿ ವಂದಿಸಿ, ದ್ವಿತೀಯ ಎಂಕಾಂ ವಿಭಾಗದ ವಿದ್ಯಾರ್ಥಿ ನವೀನ್ ಕೃಷ್ಣ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಗಿಡಗಳಿಗೆ ನೀರುಣಿಸಿದರು ಮತ್ತು ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸಿದರು.

Ad Widget
Click to comment

Leave a Reply

ಶಿಕ್ಷಣ

Vivekananda-ಅಂಚೆ ಇಲಾಖೆ ನಡೆಸಲ್ಪಟ್ಟ ಆಶುಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಿಗೆ ಬಹುಮಾನ

Published

on



Ad Widget

Ad Widget

Ad Widget

Ad Widget

ಭಾರತೀಯ ಅಂಚೆ ಇಲಾಖೆ ಹಾಗೂ  ಅಂಚೆ ಅಧೀಕ್ಷಕರ ಕಚೇರಿ, ಪುತ್ತೂರು ಇವರ ಪ್ರಾಯೋಜಕತ್ವದಲ್ಲಿ ಜಾಗೃತಿ ಸಪ್ತಾಹದ ಅಂಗವಾಗಿ “ಪ್ರಾಮಾಣಿಕತೆಯಿಂದ ಸಮೃದ್ಧಿ” ಎಂಬ ವಿಷಯದ ಕುರಿತು ನಡೆಸಲ್ಪಟ್ಟ ಆಶುಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Ad Widget

Ad Widget

Ad Widget

Ad Widget

ಇವರಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ದೀಪ್ತಿ ಕುಬಣುರಾಯ (ಸುಧಾಕರ ಕುಬಣುರಾಯ ಮತ್ತು ಸವಿತಾ ಸಾವಿತ್ರಿ ದಂಪತಿಗಳ ಪುತ್ರಿ ) ಇವರು ದ್ವಿತೀಯ ಬಹುಮಾನ ಹಾಗೂ ಕುಮಾರಿ ವೈಷ್ಣಿ ರೈ (ಜಗನ್ನಾಥ ಎಂ ಮತ್ತು ಸೀಮಾ ಜೆ ರೈ ದಂಪತಿಗಳ ಪುತ್ರಿ ) ಇವರು ಸಮಾಧಾನಕರ ಬಹುಮಾನವನ್ನು ಪಡೆದಿರುತ್ತಾರೆ.

Ad Widget

Ad Widget

Ad Widget alt="Ad Widget"/>

Ad Widget
Ad Widget
Continue Reading

ಶಿಕ್ಷಣ

Narendra-ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ “ ವ್ಯವಹಾರ “ ಕ್ಲಬ್ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ

Published

on



Ad Widget

Ad Widget

Ad Widget

Ad Widget

ಮಾರುಕಟ್ಟೆಯು ವಿವಿಧ ರೀತಿಯ ಉತ್ಪನ್ನಗಳು ಮತ್ತು ವ್ಯವಹಾರ ಕಲ್ಪನೆಗಳಿಂದ ತುಂಬಿರುವಾಗ, ಹೊಸತನವನ್ನು ಮಾಡಲು ಮತ್ತು ವಿಶಿಷ್ಟವಾದ ಮತ್ತು ಉತ್ತಮವಾದದ್ದನ್ನು ಮಾಡಲು ಯಾವಾಗಲೂ ಅವಕಾಶವಿರುತ್ತದೆ. ವ್ಯವಹಾರದ ಯಶಸ್ಸು ಯೋಜನೆ ಮತ್ತು ಕಠಿಣ ಪರಿಶ್ರಮವನ್ನು ಅವಲಂಬಿಸಿರುತ್ತದೆ. ಅದ್ಭುತವಾದ ವ್ಯವಹಾರ ಕಲ್ಪನೆಯನ್ನು ಹೊಂದಿರುವುದು ಒಂದು ವಿಷಯ, ಆದರೆ ವ್ಯವಹಾರದ ಯಶಸ್ಸು ಕಲ್ಪನೆಯ ಕಾರ್ಯಗತಗೊಳಿಸುವಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಎಂದು ಪುತ್ತೂರಿನ ಉದ್ಯಮಿಗಳಾದ ಮತ್ತು ಮರಿಕೆ ಹೋಂ ಇಂಡಸ್ಟ್ರಿ ಇದರ ಮಾಲಕರಾದ ಸುಹಾಸ್ ಮರಿಕೆ ಇವರು ಹೇಳಿದರು.

Ad Widget

Ad Widget

Ad Widget

Ad Widget

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಉದ್ಯಮ ಕ್ಷೇತ್ರದ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸುವ ರಿಟೈಲ್ ಬ್ಯುಸಿನೆಸ್ ತರಬೇತಿ ಕರ‍್ಯಕ್ರಮ “ ವ್ಯವಹಾರ “ ವತಿಯಿಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವ್ಯವಹಾರದ ಯಶಸ್ಸಿಗಾಗಿ ಮುಖ್ಯವಾದ ಅದರ ಸ್ವರೂಪದ ಬಗ್ಗೆ ವಿವರಿಸುತ್ತಾ, ಅವರು ಮಾತನಾಡಿದರು.

Ad Widget

Ad Widget

Ad Widget alt="Ad Widget"/>

Ad Widget

ವ್ಯವಹಾರದ ಯಶಸ್ಸಿಗೆ ಉತ್ತಮ ಯೋಜನೆ ಅಥವಾ ಕಾರ್ಯತಂತ್ರವನ್ನು ರೂಪಿಸುವುದು ಅತ್ಯಗತ್ಯ. ವ್ಯವಹಾರದ ಗುರಿಗಳು ಮತ್ತು ಉದ್ದೇಶಗಳು ಮತ್ತು ಅವುಗಳನ್ನು ಸಾಧಿಸುವ ಮಾರ್ಗಗಳನ್ನು ವಿವರಿಸುವ ಸಮಗ್ರ ವ್ಯಾಪಾರ ಯೋಜನೆಯ ಬಗ್ಗೆ ತಿಳಿಸಿದರು.ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿ ಕೆಲವು ಸಲಹೆಗಳನ್ನು ನೀಡಿದರು.

Ad Widget

Ad Widget <> Ad Widget

ಕಾರ‍್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಮತ್ತು ಎಲ್ಲಾ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ‍್ಯಕ್ರಮದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಸಾನ್ವಿ ಸ್ವಾಗತಿಸಿ ವಂದಿಸಿದರು.



Ad Widget
Ad Widget
Continue Reading

ಶಿಕ್ಷಣ

Ambika-ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ‌ಕನ್ನಡ ರಾಜ್ಯೋತ್ಸವ

Published

on



Ad Widget

Ad Widget

Ad Widget

Ad Widget

ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ ನಾಡು, ನುಡಿ, ಭಾಷೆ ಮತ್ತು ಸಂಸ್ಕೃತಿಯ ಮಹತ್ವವನ್ನು ಸಾರುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

Ad Widget

Ad Widget

Ad Widget

Ad Widget

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ ನಾಡು, ನುಡಿ, ಭಾಷೆ ಮತ್ತು ಸಂಸ್ಕೃತಿಯ ಮಹತ್ವವನ್ನು ಸಾರುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

Ad Widget

Ad Widget

Ad Widget alt="Ad Widget"/>

Ad Widget

ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಮಾತನಾಡಿ ಕನ್ನಡ ಭಾಷೆಯು ನಮ್ಮ ನಾಡಿನ ಹೆಮ್ಮೆ ಮತ್ತು ಅಸ್ಮಿತೆಯ ಪ್ರತೀಕವಾಗಿದ್ದು, ಅದರ ಉಳಿವು ಮತ್ತು ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಪಾತ್ರವು ಮಹತ್ವದ್ದಾಗಿದೆ ಎಂದು ಹೇಳಿ, ಕನ್ನಡ ಭಾಷೆಯನ್ನು ಕೇವಲ ಸಂವಹನದ ಮಾಧ್ಯಮವಾಗಿ ಮಾತ್ರವಲ್ಲದೆ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬವಾಗಿ ಕಾಣಬೇಕು. ವಿದ್ಯಾರ್ಥಿಗಳು ಮಾತೃಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಹೇಳಿದರು.

Ad Widget

Ad Widget <> Ad Widget

ಈ ಸಂದರ್ಭದಲ್ಲಿ,  ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ವತಿಯಿಂದ ನಡೆಸಲ್ಪಟ್ಟ ಬಾಲಸಾಹಿತಿಗಳ ಸಮಾವೇಶದಲ್ಲಿ ಭಾಗವಹಿಸಿದ  ಸಂಸ್ಥೆಯ ಬಾಲ ಸಾಹಿತಿಗಳು ಸ್ವರಚಿತ ಕವನ, ಪ್ರವಾಸ ಕಥನ ಹಾಗೂ ನನ್ನ ಆಪ್ತಮಿತ್ರೆ ಲೇಖನಗಳನ್ನು ವಾಚಿಸಿದರು.



Ad Widget

ಕಾರ್ಯಕ್ರಮದಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ  ಅನರ್ಘ್ಯಶ್ರೀ ಹೆಚ್ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು.10ನೇ ತರಗತಿಯ ಅದಿತಿ ಎನ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಶಿಕ್ಷಕಿಯರಾದ ಪ್ರಿಯಾಶ್ರೀ ಕೆ ಎಸ್ ಮತ್ತು ದಿವ್ಯಾರವರು  ಕಾರ್ಯಕ್ರಮವನ್ನು ನಿರ್ವಹಿಸಿದರು.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!