Connect with us

ದಕ್ಷಿಣ ಕನ್ನಡ

lokayukta Raid ಪುತ್ತೂರು : ಲಂಚ ಸ್ವೀಕರಿಸಿದ ಭೂ ಸುಧಾರಣಾ ಶಾಖೆಯ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ; ತಹಶೀಲ್ದಾರ್  ಪರಾರಿ

Published

on

Ad Widget

Ad Widget

Ad Widget

Ad Widget

ಪುತ್ತೂರು: ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲು. ಲಂಚ ಸ್ವೀಕರಿಸುತ್ತಿದ್ದಾಗ ಪುತ್ತೂರು ತಾಲೂಕು ಕಚೇರಿಯ ಭೂ ಸುಧಾರಣಾ ಶಾಖೆಯ ಕೇಸ್ ವರ್ಕರ್ ಸುನೀಲ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ತಹಶೀಲ್ದಾರ್ ತಲೆಮರೆಸಿಕೊಂಡಿದ್ದಾರೆ.

Ad Widget

Ad Widget

Ad Widget

Ad Widget

ಪ್ರಕರಣದ ವಿವರ:
ದೂರುದಾರರ ಚಿಕ್ಕಪ್ಪನವರಿಗೆ ನೆಟ್ಟಣಿಗೆ ಮುಡೂರು ಗ್ರಾಮದಲ್ಲಿ ಮಂಜೂರಾಗಿದ್ದ 65 ಸೆಂಟ್ಸ್ ಜಮೀನನ್ನು ಪರಭಾರೆ ಮಾಡಲು ತಹಶೀಲ್ದಾರ್‌ರಿಂದ ನಿರಾಕ್ಷೇಪಣಾ ಪತ್ರದ ಅಗತ್ಯವಿತ್ತು. ಇದಕ್ಕಾಗಿ ಅವರು ಡಿಸೆಂಬರ್ 2024 ರಲ್ಲಿ ಅರ್ಜಿ ಸಲ್ಲಿಸಿದ್ದರು. 27 ವರ್ಷಗಳ ಹಿಂದೆ ಮಂಜೂರಾಗಿದ್ದ ಈ ಜಮೀನಿನ ಹಕ್ಕು ವಿಲ್‌ನಾಮೆ ಮೂಲಕ ಪಿರ್ಯಾದಿದಾರರಿಗೆ ಸೇರಿತ್ತು.

Ad Widget

Ad Widget alt="Ad Widget"/>

Ad Widget

ಅರ್ಜಿಯ ವಿಚಾರಣೆಗಾಗಿ ಪಿರ್ಯಾದಿದಾರರು ಜೂನ್ 26, 2025 ರಂದು ಪುತ್ತೂರು ತಹಶೀಲ್ದಾರ್ ಕಚೇರಿಯ ಭೂ ಸುಧಾರಣಾ ಶಾಖೆಗೆ ಭೇಟಿ ನೀಡಿದಾಗ, ಕೇಸ್ ವರ್ಕರ್ ಸುನೀಲ್ “ತಹಶೀಲ್ದಾರ್ ಸಹಿಗೆ ಬಾಕಿ ಇದೆ. ಅದಕ್ಕೆ 10,000 ರೂ. ತಹಶೀಲ್ದಾರ್‌ಗೆ ಮತ್ತು ನನಗೂ ಸ್ವಲ್ಪ ಹಣ ಕೊಡಬೇಕಾಗುತ್ತದೆ” ಎಂದು ಹೇಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

Ad Widget

Ad Widget <> Ad Widget

ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಸುನೀಲ್ ಮತ್ತು ಪುತ್ತೂರು ತಹಶೀಲ್ದಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಲೋಕಾಯುಕ್ತ ಕಾರ್ಯಾಚರಣೆ:
ಲಾಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಆಗಸ್ಟ್ 28, 2025 ರಂದು ಸುನೀಲ್ ಅವರು ದೂರುದಾರರಿಂದ 12,000 ರೂ. ಲಂಚ ಸ್ವೀಕರಿಸುವಾಗ ಅವರನ್ನು ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ. ಸುನೀಲ್ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

Ad Widget

Ad Widget

ತಹಶೀಲ್ದಾರ್ ನಾಪತ್ತೆ:
ಈ ಮಧ್ಯೆ, ತಹಶೀಲ್ದಾರ್ ಅವರ ಪಾತ್ರದ ಕುರಿತು ತನಿಖೆ ನಡೆಸಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದು, ಪ್ರಸ್ತುತ ತಹಶೀಲ್ದಾರ್ ತಲೆಮರೆಸಿಕೊಂಡಿರುವುದಾಗಿ ಲೋಕಾಯುಕ್ತ ಎಸ್ಪಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ

ಕಾರ್ಯಾಚರಣೆ ತಂಡ:
ಈ ಕಾರ್ಯಾಚರಣೆಯನ್ನು ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ (ಪ್ರಭಾರ) ಶ್ರೀ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಭಾರತಿ ಜಿ, ಶ್ರೀ ಚಂದ್ರಶೇಖರ್ ಕೆ.ಎನ್, ಶ್ರೀ ರವಿ ಪವಾರ್ ಮತ್ತು ಲೋಕಾಯುಕ್ತ ಸಿಬ್ಬಂದಿಗಳು ಕೈಗೊಂಡಿದ್ದರು.

Ad Widget
Click to comment

Leave a Reply

ಅಪರಾಧ

Excise raid-ಬಾಳ್ತಿಲ, ಮೆಲ್ಕಾರ್‌ನಲ್ಲಿ ಅಬಕಾರಿ ದಾಳಿ: ₹20.37 ಲಕ್ಷ ಮೌಲ್ಯದ ಗೋವಾ ಮದ್ಯ, 2 ಕಾರುಗಳು ವಶ

Published

on

Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ ₹20.37 ಲಕ್ಷ ಮೌಲ್ಯದ ಗೋವಾ ಮದ್ಯ ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು 1,450 ಲೀಟರ್‌ಗೂ ಅಧಿಕ ಅಕ್ರಮ ಮದ್ಯವನ್ನು ಜಪ್ತಿ ಮಾಡಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ ₹20.37 ಲಕ್ಷ ಮೌಲ್ಯದ ಗೋವಾ ಮದ್ಯ ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು 1,450 ಲೀಟರ್‌ಗೂ ಅಧಿಕ ಅಕ್ರಮ ಮದ್ಯವನ್ನು ಜಪ್ತಿ ಮಾಡಲಾಗಿದೆ.

Ad Widget

Ad Widget alt="Ad Widget"/>

Ad Widget

ಮೊದಲ ಪ್ರಕರಣದಲ್ಲಿ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಪೂರ್ಲಿಪಾಡಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 1,261 ಲೀಟರ್ ಗೋವಾ ಮದ್ಯವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜಪ್ತಿಯಾದ ಮದ್ಯದ ಮೌಲ್ಯ ಸುಮಾರು ₹7.72 ಲಕ್ಷ ಎಂದು ಅಂದಾಜಿಸಲಾಗಿದೆ.

Ad Widget

Ad Widget <> Ad Widget

ಇನ್ನೊಂದು ಪ್ರಕರಣದಲ್ಲಿ ಮೆಲ್ಕಾರ್ ಸಮೀಪ ಕೇರಳಕ್ಕೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 188.9 ಲೀಟರ್ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯ ಸಾಗಾಟಕ್ಕೆ ಬಳಸಲಾಗುತ್ತಿದ್ದ ಎರಡು ಕಾರುಗಳನ್ನೂ ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಈ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಒಟ್ಟು ₹20.37 ಲಕ್ಷ ಮೌಲ್ಯದ ಮದ್ಯ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಜಮಾಡಿ ಟೋಲ್ ಬಳಿ ನಡೆದ ಕಾರ್ಯಾಚರಣೆಯ ಬೆನ್ನಲ್ಲೇ ಅಬಕಾರಿ ಇಲಾಖೆ ಮತ್ತೊಂದು ಮಹತ್ವದ ಯಶಸ್ಸು ಸಾಧಿಸಿದೆ.

Ad Widget

Ad Widget

ಜಿಲ್ಲೆಯಲ್ಲಿ ಅಕ್ರಮ ಮದ್ಯ ದಾಸ್ತಾನು ಹಾಗೂ ಸಾಗಾಟದ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದ್ದು, ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಎಚ್ಚರಿಕೆ ನೀಡಿದೆ.

Ad Widget
Continue Reading

ಕಾರ್ಯಕ್ರಮಗಳು

Puttur-ಪುತ್ತೂರು: ನ.27ರಂದು ಅತ್ಯಾಧುನಿಕ ಬಹುಮಹಡಿ ವಾಣಿಜ್ಯ ಸೌಧ ‘ದ್ವಾರಕಾ ಕಮರ್ಶಿಯಲ್ಸ್’ ಲೋಕಾರ್ಪಣೆ; ಒಂದೇ ಸೂರಿನಡಿ ಹೈಪರ್ ಮಾರ್ಕೆಟ್‌ ಸಹಿತ ಹಲವು ಸೇವೆಗಳು

Published

on

Ad Widget

Ad Widget

Ad Widget

Ad Widget

ನಿರ್ಮಾಣ ಕ್ಷೇತ್ರದಲ್ಲಿ ಕಳೆದ 22 ವರ್ಷಗಳಿಂದ ತನ್ನದೇ ಆದ ಛಾಪು ಮೂಡಿಸಿರುವ ದ್ವಾರಕಾ ಸಂಸ್ಥೆಯು ಪುತ್ತೂರಿನ ದರ್ಬೆಯಲ್ಲಿ ಸ್ವಂತ ನಿವೇಶನದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ವಾಣಿಜ್ಯ ಸೌಧ ‘ದ್ವಾರಕಾ ಕಮರ್ಶಿಯಲ್ಸ್’ ನ.27ರಂದು ಲೋಕಾರ್ಪಣೆಗೊಳ್ಳಲಿದೆ. ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಒಂದೇ ಸೂರಿನಡಿ ವಿವಿಧ ಸಂಸ್ಥೆಗಳ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸುವ ಪರಿಕಲ್ಪನೆಯೊಂದಿಗೆ ಈ ವಾಣಿಜ್ಯ ಸೌಧ ರೂಪುಗೊಂಡಿದೆ.

Ad Widget

Ad Widget

Ad Widget

Ad Widget

ಪುತ್ತೂರು: ನಿರ್ಮಾಣ ಕ್ಷೇತ್ರದಲ್ಲಿ ಕಳೆದ 22 ವರ್ಷಗಳಿಂದ ತನ್ನದೇ ಆದ ಛಾಪು ಮೂಡಿಸಿರುವ ದ್ವಾರಕಾ ಸಂಸ್ಥೆಯು ಪುತ್ತೂರಿನ ದರ್ಬೆಯಲ್ಲಿ ಸ್ವಂತ ನಿವೇಶನದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ವಾಣಿಜ್ಯ ಸೌಧ ‘ದ್ವಾರಕಾ ಕಮರ್ಶಿಯಲ್ಸ್’ ನ.27ರಂದು ಲೋಕಾರ್ಪಣೆಗೊಳ್ಳಲಿದೆ. ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಒಂದೇ ಸೂರಿನಡಿ ವಿವಿಧ ಸಂಸ್ಥೆಗಳ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸುವ ಪರಿಕಲ್ಪನೆಯೊಂದಿಗೆ ಈ ವಾಣಿಜ್ಯ ಸೌಧ ರೂಪುಗೊಂಡಿದೆ ಎಂದು ದ್ವಾರಕಾ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Ad Widget

Ad Widget alt="Ad Widget"/>

Ad Widget

ನಿರ್ಮಾಣ ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಅಧಿಕ ಪಯಣ ನಡೆಸಿರುವ ಸಂಸ್ಥೆಯು ಆರಂಭದಲ್ಲಿ ಪಡೀಲು ಬಾಳಪ್ಪ ಕಾಂಪ್ಲೆಕ್ಸ್, ಬೊಳುವಾರು, ಕಬಕ ಹಾಗೂ ಸರ್ಕಾರಿ ನೌಕರರ ಕಟ್ಟಡದಲ್ಲಿ ಕಚೇರಿ ಹೊಂದಿ ಕಾರ್ಯಾಚರಿಸುತ್ತಿತ್ತು. ಇದೀಗ ಸ್ವಂತ ಕಟ್ಟಡದಲ್ಲಿ ಸಂಸ್ಥೆಯ ಕಚೇರಿ ಆರಂಭವಾಗುತ್ತಿರುವುದು ಸಂತಸದ ವಿಚಾರ. ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಒಂದೇ ಸೂರಿನಡಿ ವಿವಿಧ ಸೇವೆಗಳನ್ನು ಒದಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.

Ad Widget

Ad Widget <> Ad Widget

ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆ
ನೂತನ ವಾಣಿಜ್ಯ ಸೌಧದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅರ್ತ್ಯಡ್ಕ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಶಿಕ್ಷಣ ಕರ್ಮಯೋಗಿ ಪದ್ಮಶ್ರೀ ಡಾ. ಹರೇಕಳ ಹಾಜಬ್ಬ, ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ, ಮಾಸ್ಟರ್ ಪ್ಲಾನರಿ ಸಂಸ್ಥೆಯ ಎಸ್.ಕೆ. ಆನಂದ ಕುಮಾರ್, ಹಿರಿಯ ಉದ್ಯಮಿ ಮಂಜುನಾಥ್ ನಾಯಕ್, ಐಶ್ವರ್ಯ ಕನ್‌ಸ್ಟ್ರಕ್ಷನ್‌ನ ರಘುರಾಮ ಭಟ್ ಉಪ್ಪಂಗಳ, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೋ, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ ನಡುಬೈಲು, ಪುತ್ತೂರು ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ನಗರಸಭೆ ಪೌರಾಯುಕ್ತೆ ವಿದ್ಯಾ ಎಂ. ಕಾಳೆ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಕಾರ್ಯದರ್ಶಿ ಗುರುಪ್ರಸಾದ್ ಎ.ಬಿ. ಹಾಗೂ ಹೋಟೆಲ್ ಅಶ್ವಿನಿ ಮಾಲಕ ಕರುಣಾಕರ ರೈ ದೇರ್ಲ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ ಎಂದು ಗೋಪಾಲಕೃಷ್ಣ ಭಟ್ ವಿವರಿಸಿದರು.

‘ದ್ವಾರಕಾ ಮಂಗಲ್ ಹೈಪರ್ ಮಾರ್ಕೆಟ್’ ಪ್ರಮುಖ ಆಕರ್ಷಣೆ
ನಾಲ್ಕು ಅಂತಸ್ತಿನ ಈ ವಾಣಿಜ್ಯ ಸೌಧದ ನೆಲಹಂತ ಹಾಗೂ ಮೊದಲ ಮಹಡಿಯಲ್ಲಿ ದ್ವಾರಕಾ ಮಂಗಲ್ ಹೈಪರ್ ಮಾರ್ಕೆಟ್ ಕಾರ್ಯಾಚರಿಸಲಿದೆ. ಇಲ್ಲಿ ದ್ವಾರಕಾ ಹಾಲಿನ ಉತ್ಪನ್ನಗಳು, ತರಕಾರಿ, ದಿನಸಿ ಸಾಮಗ್ರಿಗಳು, ಹಣ್ಣು, ಚಾಟ್ಸ್, ಜ್ಯೂಸ್, ಕೂಲ್‌ಝೋನ್, ಬೇಕರಿ ತಿನಿಸುಗಳು, ಸ್ಟೇಶನರಿ ಸೇರಿದಂತೆ ಗ್ರಾಹಕರ ನಿತ್ಯ ಬಳಕೆಯ ನೂರಾರು ವಸ್ತುಗಳು ಮಿತದರದಲ್ಲಿ ಲಭ್ಯವಾಗಲಿವೆ.

Ad Widget

Ad Widget

ಎರಡನೇ ಮಹಡಿಯಲ್ಲಿ ಹಾರ್ಡ್‌ವೇರ್, ಸ್ಯಾನಿಟರಿ, ಟೈಲ್ಸ್, ಪೇಂಟ್ಸ್, ಯುನಿಸೆಕ್ಸ್ ಸಲೂನ್, ಡೆಂಟಲ್ ಕ್ಲಿನಿಕ್, ಸಾಫ್ಟ್‌ವೇರ್ ಸಂಸ್ಥೆ, ಚಾರ್ಟರ್ಡ್ ಅಕೌಂಟೆಂಟ್ ಕಚೇರಿ ಹಾಗೂ ಟೆಕ್ಸ್‌ಟೈಲ್ಸ್ ಮಳಿಗೆಗಳು ಕಾರ್ಯನಿರ್ವಹಿಸಲಿವೆ.

ಮೂರನೇ ಮಹಡಿಯಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ಪ್ರಧಾನ ಕಚೇರಿ ಇರಲಿದ್ದು, ನಾಲ್ಕನೇ ಮಹಡಿಯಲ್ಲಿ ಸುಮಾರು 200 ಮಂದಿ ಆಸೀನರಾಗಬಹುದಾದ ಸುಸಜ್ಜಿತ ಸಭಾಂಗಣ ನಿರ್ಮಿಸಲಾಗಿದೆ.

ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತ ಕಟ್ಟಡ
ಗ್ರಾಹಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಮಾರು 20 ಕಾರುಗಳನ್ನು ನಿಲುಗಡೆ ಮಾಡಬಹುದಾಗಿದೆ. ಕಟ್ಟಡದಲ್ಲಿ ಲಿಫ್ಟ್ ವ್ಯವಸ್ಥೆ ಸೇರಿದಂತೆ ವಿವಿಧ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ.

Ad Widget
Continue Reading

ಕ್ರೈಂ

Murder-ಕನ್ಯಾನ: ಚಿಕ್ಕಪ್ಪನ ಎದೆಗೆ ಕತ್ತಿಯಿಂದ ಇರಿದು ಹತ್ಯೆಗೈದ ಯುವತಿ ಅರೆಸ್ಟ್

Published

on

Ad Widget

Ad Widget

Ad Widget

Ad Widget

ಸಹೋದರನ ಮಗಳೇ ಚಿಕ್ಕಪ್ಪನನ್ನು ಹರಿತವಾದ ಆಯುಧದಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಚೆನ್ನಯ್ಯ ಪೂಜಾರಿ (52) ಮೃತಪಟ್ಟಿದ್ದಾರೆ. ಅವರ ಸಹೋದರ ಕೋಟಿ ಪೂಜಾರಿಯವರ ಪುತ್ರಿ ಕೃತ್ತಿಕಾ (26) ಕೊಲೆ ಆರೋಪಿತೆಯಾಗಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ಸಹೋದರನ ಮಗಳೇ ಚಿಕ್ಕಪ್ಪನನ್ನು ಹರಿತವಾದ ಆಯುಧದಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಗ್ರಾಮದಲ್ಲಿ ನಡೆದಿದೆ.

Ad Widget

Ad Widget alt="Ad Widget"/>

Ad Widget

ಕನ್ಯಾನ ಗ್ರಾಮದ ಶಿರಂಕಲ್ಲು ನಂದರಬೆಟ್ಟು ಎಂಬಲ್ಲಿ ನ.24ರ ರಾತ್ರಿ ನಡೆದ ಘಟನೆಯಲ್ಲಿ ಚೆನ್ನಯ್ಯ ಪೂಜಾರಿ (52) ಮೃತಪಟ್ಟಿದ್ದಾರೆ. ಅವರ ಸಹೋದರ ಕೋಟಿ ಪೂಜಾರಿಯವರ ಪುತ್ರಿ ಕೃತ್ತಿಕಾ (26) ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದು, ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

Ad Widget

Ad Widget <> Ad Widget

ಘಟನೆಯ ವಿವರ
ಶಿರಂಕಲ್ಲು ನಂದರಬೆಟ್ಟು ದಾಸರಕೋಡಿ ಎಂಬಲ್ಲಿ ಕೋಟಿ ಪೂಜಾರಿ ಹಾಗೂ ಚೆನ್ನಯ್ಯ ಪೂಜಾರಿ ಎಂಬ ಅವಳಿ ಸಹೋದರರು ವಾಸವಾಗಿದ್ದರು. ಕೋಟಿ ಪೂಜಾರಿಯವರ ವಿವಾಹಿತ ಪುತ್ರಿ ಕೃತ್ತಿಕಾ ಇತ್ತೀಚೆಗೆ ತವರು ಮನೆಗೆ ಬಂದಿದ್ದರು.

ನ.24ರಂದು ರಾತ್ರಿ ಸುಮಾರು 7 ಗಂಟೆಯ ವೇಳೆಗೆ ಚೆನ್ನಯ್ಯ ಪೂಜಾರಿ ಅವರು ಕೃತ್ತಿಕಾ ವಾಸವಿದ್ದ ಮನೆಯ ಬಳಿ ಗಲಾಟೆ ನಡೆಸಿದ್ದು, ಈ ವೇಳೆ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಮಾತಿನ ಚಕಮಕಿ ತೀವ್ರಗೊಂಡಾಗ ಆಕ್ರೋಶಗೊಂಡ ಕೃತ್ತಿಕಾ ಮನೆಯಲ್ಲಿದ್ದ ಹರಿತವಾದ ಕತ್ತಿಯಿಂದ ತನ್ನ ಚಿಕ್ಕಪ್ಪ ಚೆನ್ನಯ್ಯ ಪೂಜಾರಿ ಅವರ ಎದೆಗೆ ಬಲವಾಗಿ ಚುಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.

Ad Widget

Ad Widget

ಕತ್ತಿಯೇಟಿನಿಂದ ಎದೆಗೆ ಗಂಭೀರ ಗಾಯಗೊಂಡ ಚೆನ್ನಯ್ಯ ಪೂಜಾರಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ಅವರನ್ನು ಸ್ಥಳೀಯರು ತಕ್ಷಣ ವಿಟ್ಲ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಆದರೆ, ಪುತ್ತೂರಿಗೆ ಕರೆತರುತ್ತಿದ್ದ ವೇಳೆ ತೀವ್ರ ರಕ್ತಸ್ರಾವದಿಂದ ಚೆನ್ನಯ್ಯ ಪೂಜಾರಿ ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಕಾಶ್ ದೇವಾಡಿಗ, ಉಪನಿರೀಕ್ಷಕರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಕೃತ್ತಿಕಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!