Connect with us

ನಿಧನ ವಾರ್ತೆ

Suicide-ನಾನು ಈಗ ಸ್ವರ್ಗದಲ್ಲಿದ್ದೇನೆ – ಡೆತ್‌ ನೋಟ್‌ ಬರೆದಿಟ್ಟು ಮಂಗಳೂರು ಮೂಲದ ದಂಪತಿಯ 14 ವರ್ಷದ ಪುತ್ರ ಆತ್ಮ#ಹ#ತ್ಯೆ

Published

on



Ad Widget

Ad Widget

Ad Widget

Ad Widget

ಹಾಡು, ಸಂಗೀತ, ಕಲೆಯ ಕಲರವದಿಂದ ತುಂಬಿರಬೇಕಾದ ಮನೆಯಲ್ಲಿ ಈಗ ಮೌನ ಆವರಿಸಿದೆ. ಜಾನಪದ ಗಾಯಕಿ ಸವಿತಾ ಅವರ 14 ವರ್ಷದ ಪುತ್ರ, 7ನೇ ತರಗತಿ ವಿದ್ಯಾರ್ಥಿ ಗಾಂಧಾರ್, “ಮನೆಯ ಒಳಿತಿಗಾಗಿ ಈ ನಿರ್ಧಾರ” ಎಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬನಶಂಕರಿ 3ನೇ ಹಂತದ ಬನಗಿರಿ ನಗರದಲ್ಲಿ ನಡೆದಿದ್ದು, ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಹಾಡು, ಸಂಗೀತ, ಕಲೆಯ ಕಲರವದಿಂದ ತುಂಬಿರಬೇಕಾದ ಮನೆಯಲ್ಲಿ ಈಗ ಮೌನ ಆವರಿಸಿದೆ. ಜಾನಪದ ಗಾಯಕಿ ಸವಿತಾ ಅವರ 14 ವರ್ಷದ ಪುತ್ರ, 7ನೇ ತರಗತಿ ವಿದ್ಯಾರ್ಥಿ ಗಾಂಧಾರ್, “ಮನೆಯ ಒಳಿತಿಗಾಗಿ ಈ ನಿರ್ಧಾರ” ಎಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬನಶಂಕರಿ 3ನೇ ಹಂತದ ಬನಗಿರಿ ನಗರದಲ್ಲಿ ನಡೆದಿದ್ದು, ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಘಟನೆಯ ವಿವರ:
ಸೋಮವಾರ ಬೆಳಗ್ಗೆ ಎಂದಿನಂತೆ ದಿನ ಆರಂಭವಾದರೂ, ಗಾಂಧಾರ್ ಕೊಠಡಿಯಿಂದ ಹೊರಬಂದಿರಲಿಲ್ಲ. ಅನುಮಾನಗೊಂಡ ಸಹೋದರ ಜಿ.ಬಸಂತ್ ಕೊಠಡಿಯ ಬಾಗಿಲು ತೆರೆದಾಗ ಕಂಡ ದೃಶ್ಯ ಎದೆ ನಡುಗಿಸುವಂತಿತ್ತು. ತಮ್ಮ ಪ್ರೀತಿಯ ತಮ್ಮ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ತಕ್ಷಣವೇ ಕುಟುಂಬಸ್ಥರು ಸಿ.ಕೆ. ಅಚ್ಚುಕಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Ad Widget

Ad Widget <> Ad Widget

ಕರುಳು ಹಿಂಡುವ ಡೆತ್ನೋಟ್:
ಮರಣಪತ್ರದಲ್ಲಿ ಗಾಂಧಾರ್ “ಪ್ರೀತಿಯ ಕುಟುಂಬಕ್ಕೆ, ನನ್ನನ್ನು ಕ್ಷಮಿಸಿ. ಈ ಪತ್ರ ಓದುವವರು ದುಃಖಿಸಬೇಡಿ. ನಾನು ಈಗ ಸ್ವರ್ಗದಲ್ಲಿದ್ದೇನೆ. ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ನಿಮಗೆ ನೋವಾಗುತ್ತದೆ ಎಂದು ಗೊತ್ತಿದೆ, ಆದರೆ ಮನೆಯ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಕೆಲವೊಮ್ಮೆ ಕೋಪದಿಂದ ವರ್ತಿಸಿದ್ದೇನೆ, ತೊಂದರೆ ಕೊಟ್ಟಿದ್ದೇನೆ. ಆದರೆ ನಿಮ್ಮನ್ನು ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ. ಕೋಪಕ್ಕೆ ಕ್ಷಮೆ ಕೇಳುತ್ತೇನೆ. ತಪ್ಪುಗಳನ್ನು ಕ್ಷಮಿಸಿ. 14 ವರ್ಷ ಸಂತೋಷದಿಂದ ಬದುಕಿ ತೃಪ್ತನಾಗಿದ್ದೇನೆ. ಸ್ವರ್ಗದಲ್ಲಿ ಖುಷಿಯಾಗಿರುತ್ತೇನೆ. ನನ್ನ ಸ್ನೇಹಿತರಿಗೆ ಮತ್ತು ಶಾಲಾ ಸ್ನೇಹಿತರಿಗೆ ನಾನು ಅವರನ್ನು ಪ್ರೀತಿಸುತ್ತಿದ್ದೆ ಎಂದು ತಿಳಿಸಿ. ಎಲ್ಲರನ್ನೂ ಮಿಸ್ ಮಾಡುತ್ತೇನೆ – ಗುಡ್‌ಬೈ ಅಮ್ಮ.” ಎಂದು ಬರೆದಿದ್ದಾನೆ.



Ad Widget

ಗಾಂಧಾರ್ನ ತಂದೆ ಗಣೇಶ್ ಪ್ರಸಾದ್ ಮಂಗಳೂರಿನ ಕದ್ರಿ ಮೂಲದ ಪ್ರಸಿದ್ಧ ಸಂಗೀತ ಕಲಾವಿದರು. ತಾಯಿ ಸವಿತಾ, ತಮ್ಮ ಕಂಚಿನ ಕಂಠದಿಂದ ಜಾನಪದ ಗೀತ ಗಾಯನ ಮತ್ತು ಪೂಜಾ ಕುಣಿತದ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾದವರು. ಇವರ ಹಿರಿಯ ಮಗ ಜಿ.ಬಸಂತ್ ಕೂಡ ಸಂಗೀತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಡೀ ಕುಟುಂಬವೇ ಕಲಾ ಸೇವೆಗೆ ಮುಡಿಪಾಗಿತ್ತು. ಇಂತಹ ಕಲಾ ಕುಟುಂಬದ ಕಿರಿಯ ಕುಡಿ, ನಗುವ ವಯಸ್ಸಿನಲ್ಲೇ ಬದುಕಿಗೆ ವಿದಾಯ ಹೇಳಿರುವುದು ತೀವ್ರ ಆಘಾತವನ್ನುಂಟುಮಾಡಿದೆ.

Ad Widget

Ad Widget

ಆಸ್ಟ್ರೇಲಿಯಾದಲ್ಲಿರುವ ತಾಯಿಗೆ ಮಾಹಿತಿ:
ವಿಪರ್ಯಾಸವೆಂದರೆ, ಮಗ ಸಾವಿಗೆ ಶರಣಾದಾಗ ತಾಯಿ ಸವಿತಾ ಅವರು ಕಾರ್ಯಕ್ರಮವೊಂದಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಅವರಿಗೆ ಈ ದುರಂತದ ಸುದ್ದಿ ತಿಳಿಸಲಾಗಿದ್ದು, ಅವರು ಹಿಂತಿರುಗಿದ ಬಳಿಕವೇ ಗಾಂಧಾರ್ನ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮಗನ ಅಂತಿಮ ದರ್ಶನ ಪಡೆಯಲು ತಾಯಿ ಪಡುತ್ತಿರುವ ವೇದನೆ ಅಷ್ಟಿಷ್ಟಲ್ಲ.

ಸದ್ಯ, ಪೊಲೀಸರು ಡೆತ್ನೋಟ್ ವಶಪಡಿಸಿಕೊಂಡು, ಗಾಂಧಾರ್ನ ಸ್ನೇಹಿತರು ಮತ್ತು ಶಾಲೆಯಲ್ಲಿ ವಿಚಾರಣೆ ನಡೆಸಿ ಸಾವಿನ ಹಿಂದಿನ ನೈಜ ಕಾರಣವನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿದ್ದಾರೆ. ನಗುತ್ತಾ, ಆಡುತ್ತಾ ಇರಬೇಕಾದ ವಯಸ್ಸಿನಲ್ಲಿ ಬಾಲಕನೊಬ್ಬ ಇಂತಹ ಕಠೋರ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಮಾತ್ರ ಉತ್ತರ ಸಿಗದೆಯೇ ಉಳಿದಿದೆ.

Ad Widget
Click to comment

Leave a Reply

ನಿಧನ ವಾರ್ತೆ

Kerala-ಕೇರಳ: ಸಿಡಿಲು ಬಡಿದು ಖ್ಯಾತ ‘ಪಲ್ಲಟ್ಟು ಬ್ರಹ್ಮದತ್ತನ್’ ಆನೆ ದಾರುಣ ಸಾವು

Published

on



Ad Widget

Ad Widget

Ad Widget

Ad Widget

ಕೇರಳದ ದೇವಾಲಯ ಉತ್ಸವಗಳಲ್ಲಿ ತನ್ನ ಭವ್ಯ ನಿಲುವು ಹಾಗೂ ಸೌಮ್ಯ ಸ್ವಭಾವದಿಂದ ಲಕ್ಷಾಂತರ ಆನೆ ಪ್ರಿಯರ ಮನಗೆದ್ದಿದ್ದ ಪ್ರಸಿದ್ಧ ಆನೆ ‘ಪಲ್ಲಟ್ಟು ಬ್ರಹ್ಮದತ್ತನ್’ ಸಿಡಿಲು ಬಡಿದು ದಾರುಣವಾಗಿ ಮೃತಪಟ್ಟಿದೆ. ಎರಟ್ಟುಪೆಟ್ಟಾ ಸಮೀಪದ ಮೇಲಂಪಾರದಲ್ಲಿ ಭಾನುವಾರ ಈ ಘಟನೆ ನಡೆದಿದೆ.

Ad Widget

Ad Widget

Ad Widget

Ad Widget

ಕೊಟ್ಟಾಯಂ (ಕೇರಳ): ಕೇರಳದ ದೇವಾಲಯ ಉತ್ಸವಗಳಲ್ಲಿ ತನ್ನ ಭವ್ಯ ನಿಲುವು ಹಾಗೂ ಸೌಮ್ಯ ಸ್ವಭಾವದಿಂದ ಲಕ್ಷಾಂತರ ಆನೆ ಪ್ರಿಯರ ಮನಗೆದ್ದಿದ್ದ ಪ್ರಸಿದ್ಧ ಆನೆ ‘ಪಲ್ಲಟ್ಟು ಬ್ರಹ್ಮದತ್ತನ್’ ಸಿಡಿಲು ಬಡಿದು ದಾರುಣವಾಗಿ ಮೃತಪಟ್ಟಿದೆ. ಎರಟ್ಟುಪೆಟ್ಟಾ ಸಮೀಪದ ಮೇಲಂಪಾರದಲ್ಲಿ ಭಾನುವಾರ ಈ ಘಟನೆ ನಡೆದಿದೆ.

Ad Widget

Ad Widget

Ad Widget alt="Ad Widget"/>

Ad Widget

ಕಳೆದ ಒಂದು ತಿಂಗಳಿನಿಂದ ಮಾಲೀಕ ರಾಜೇಶ್ ಪಲ್ಲಟ್ ಅವರ ನಿವಾಸದ ಸಮೀಪದ ತಾತ್ಕಾಲಿಕ ಶೆಡ್‌ನಲ್ಲಿ ಬ್ರಹ್ಮದತ್ತನ್ ವಿಶ್ರಾಂತಿ ಪಡೆಯುತ್ತಿತ್ತು. ಈ ವೇಳೆ ಸಿಡಿಲು ಬಡಿದು ಮೃತಪಟ್ಟಿದೆ ಎನ್ನಲಾಗಿದೆ.

Ad Widget

Ad Widget <> Ad Widget

ಸುಮಾರು 28 ವರ್ಷಗಳ ಹಿಂದೆ ಅರುಣಾಚಲ ಪ್ರದೇಶದ ದಟ್ಟ ಕಾಡುಗಳಲ್ಲಿ ಮರದ ಆನೆಯಾಗಿ ಕೆಲಸ ಮಾಡುತ್ತಿದ್ದ ಬ್ರಹ್ಮದತ್ತನ್‌ನ್ನು ಕೊಟ್ಟಾಯಂನ ಪುತುಪ್ಪಳ್ಳಿಯ ಪೋಥನ್ ವರ್ಗೀಸ್ ಹಾಗೂ ಚಾಕೊ ಸಹೋದರರು ಕೇರಳಕ್ಕೆ ಕರೆತಂದಿದ್ದರು. ಆರಂಭದಲ್ಲಿ ‘ಪುತುಪ್ಪಳ್ಳಿ ಬ್ರಹ್ಮದತ್ತನ್’ ಎಂದು ಕರೆಯಲಾಗುತ್ತಿದ್ದ ಆನೆಯನ್ನು 16 ವರ್ಷಗಳ ಹಿಂದೆ ಪಲ್ಲಟ್ ಕುಟುಂಬ ಖರೀದಿಸಿದ ಬಳಿಕ ‘ಪಲ್ಲಟ್ಟು ಬ್ರಹ್ಮದತ್ತನ್’ ಎಂದು ಮರುನಾಮಕರಣ ಮಾಡಲಾಗಿತ್ತು.



Ad Widget

10 ಅಡಿ 2 ಇಂಚು ಎತ್ತರ, ಅಗಲವಾದ ಹಣೆ ಹಾಗೂ ಉದ್ದನೆಯ ದಂತಗಳನ್ನು ಹೊಂದಿದ್ದ ಬ್ರಹ್ಮದತ್ತನ್ ಮಧ್ಯ ಕೇರಳದ ಪ್ರಮುಖ ದೇವಾಲಯ ಉತ್ಸವಗಳಲ್ಲಿ ಪ್ರಸಿದ್ಧಿ ಪಡೆದಿತ್ತು. ತ್ರಿಶೂರ್ ಪೂರಂನ ಪರಮೆಕ್ಕಾವು ದೇವಸ್ಥಾನದ ‘ರಾತ್ರಿ ಪೂರಂ’ನಲ್ಲಿ ದೇವರ ವಿಗ್ರಹವನ್ನು ಹೊತ್ತು ಸಾಗುತ್ತಿದ್ದ ಇದು, ಎಟ್ಟುಮನೂರು ಎಝರಪೊನ್ನನ ಹಾಗೂ ವೈಕಥಷ್ಟಮಿ ಉತ್ಸವಗಳ ಪ್ರಮುಖ ಆಕರ್ಷಣೆಯಾಗಿತ್ತು.

Ad Widget

Ad Widget

ತ್ರಿಶೂರ್ ಪೂರಂ ಬಳಿಕ ಗುರುವಾಯೂರು ದೇವಸ್ಥಾನಕ್ಕೆ ತೆರಳಿ ದೇವರಿಗೆ ಸೊಂಡಿಲೆತ್ತಿ ನಮಸ್ಕರಿಸುತ್ತಿದ್ದ ದೃಶ್ಯವೂ ಭಕ್ತರ ಗಮನ ಸೆಳೆಯುತ್ತಿತ್ತು. ಸಾಮಾಜಿಕ ಜಾಲತಾಣದಲ್ಲೂ ‘ಗಜಕೌಸ್ತುಭಂ ಪಲ್ಲಟ್ಟು ಬ್ರಹ್ಮದತ್ತನ್’ ಹೆಸರಿನ ಇನ್‌ಸ್ಟಾಗ್ರಾಂ ಪುಟದ ಮೂಲಕ ಆನೆಗೆ ಅಪಾರ ಅಭಿಮಾನಿಗಳಿದ್ದರು.

ಮಾವುತನೊಂದಿಗೆ ಅಪರೂಪದ ಬಾಂಧವ್ಯ

ಬ್ರಹ್ಮದತ್ತನ್ ತನ್ನ ದೀರ್ಘಕಾಲದ ಮಾವುತ ದಾಮೋದರನ್ ನಾಯರ್ ಅವರೊಂದಿಗೆ ವಿಶೇಷ ಭಾವನಾತ್ಮಕ ಬಾಂಧವ್ಯ ಹೊಂದಿತ್ತು. ಆರಂಭದಲ್ಲಿ ಮಲಯಾಳಂ ಅರ್ಥವಾಗದಿದ್ದ ಆನೆಗೆ ದಾಮೋದರನ್ ಪ್ರೀತಿಯಿಂದ ಹಿಂದಿ ಭಾಷೆಯ ಮೂಲಕ ತರಬೇತಿ ನೀಡಿದ್ದರು.

ವಡನಪ್ಪಳ್ಳಿ ಗಣೇಶಮಂಗಲಂ ಉತ್ಸವದ ವೇಳೆ ಮತ್ತೊಂದು ಆನೆ ದಾಮೋದರನ್ ನಾಯರ್ ಅವರ ಮೇಲೆ ದಾಳಿ ಮಾಡಲು ಮುಂದಾದಾಗ, ಬ್ರಹ್ಮದತ್ತನ್ ಮಧ್ಯಪ್ರವೇಶಿಸಿ ಆ ಆನೆಯನ್ನು ಓಡಿಸಿ ತನ್ನ ಮಾವುತನನ್ನು ರಕ್ಷಿಸಿತ್ತು ಎನ್ನಲಾಗಿದೆ.

2021ರ ಜೂನ್‌ನಲ್ಲಿ ದಾಮೋದರನ್ ನಾಯರ್ (74) ನಿಧನರಾದಾಗ, ಬ್ರಹ್ಮದತ್ತನ್ ಅವರ ಪಾರ್ಥಿವ ಶರೀರದ ಬಳಿ ಸೊಂಡಿಲೆತ್ತಿ ಅಂತಿಮ ನಮನ ಸಲ್ಲಿಸಿದ್ದ ದೃಶ್ಯ ಭಾರೀ ವೈರಲ್ ಆಗಿತ್ತು. ಈ ಘಟನೆ ಆನೆ ಮತ್ತು ಮಾವುತನ ನಡುವಿನ ಅಪರೂಪದ ಬಾಂಧವ್ಯಕ್ಕೆ ಸಾಕ್ಷಿಯಾಗಿತ್ತು.

ಇದೀಗ ಬ್ರಹ್ಮದತ್ತನ್ ನಿಧನದ ಸುದ್ದಿ ತಿಳಿದು ಸಾವಿರಾರು ಅಭಿಮಾನಿಗಳು ಹಾಗೂ ಸ್ಥಳೀಯರು ಮೇಲಂಪಾರಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಗಜರಾಜನ ಅಕಾಲಿಕ ನಿಧನಕ್ಕೆ ಕೇರಳದ ದೇವಸ್ವಂ ಮಂಡಳಿ ಹಾಗೂ ಉತ್ಸವ ಪ್ರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಶಾಂತ ಸ್ವಭಾವದ ಬ್ರಹ್ಮದತ್ತನ್ ಜೊತೆ ಮಾವುತರು ಸಾಮಾನ್ಯವಾಗಿ ಅಂಕುಶ ಬಳಸುತ್ತಿರಲಿಲ್ಲ. ಜಾತ್ರೆ ಹಾಗೂ ಉತ್ಸವಗಳ ಸಂದರ್ಭಗಳಲ್ಲಿ ಮಾತ್ರ ನೆಪಕ್ಕಾಗಿ ಅಂಕುಶವನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಿದ್ದರು ಎನ್ನಲಾಗಿದೆ. ಗಾಂಭೀರ್ಯದ ನಡೆ ಹಾಗೂ ಸೌಮ್ಯ ಸ್ವಭಾವದಿಂದ ‘ಗಜರಾಜ’ ಎಂಬ ಹೆಸರಿಗೆ ಅನ್ವರ್ಥವಾಗಿದ್ದ ಬ್ರಹ್ಮದತ್ತನ್‌ನ ದುರಂತ ಅಂತ್ಯ ಆನೆ ಪ್ರಿಯರಲ್ಲಿ ತೀವ್ರ ನೋವು ಮೂಡಿಸಿದೆ.

Ad Widget
Continue Reading

ನಿಧನ ವಾರ್ತೆ

Puttur-ಪುತ್ತೂರು: ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಮೃತ್ಯು

Published

on



Ad Widget

Ad Widget

Ad Widget

Ad Widget

ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆರ್ಯಾಪು ಗ್ರಾಮದ ಕಾರ್ಪಾಡಿ ದೇವಸ್ಥಾನದ ದ್ವಾರದ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕುರಿಯ ಮುಲಾರು ನಿವಾಸಿ, ಮರದ ಕೆಲಸ ನಿರ್ವಹಿಸುತ್ತಿದ್ದ ಸುಂದರ ಆಚಾರ್ಯ ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆರ್ಯಾಪು ಗ್ರಾಮದ ಕಾರ್ಪಾಡಿ ದೇವಸ್ಥಾನದ ದ್ವಾರದ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ.

Ad Widget

Ad Widget

Ad Widget alt="Ad Widget"/>

Ad Widget

ಮೃತರನ್ನು ಕುರಿಯ ಮುಲಾರು ನಿವಾಸಿ, ಮರದ ಕೆಲಸ ನಿರ್ವಹಿಸುತ್ತಿದ್ದ ಸುಂದರ ಆಚಾರ್ಯ ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ಮೂರು ದಿನಗಳ ಹಿಂದೆ ಸುಂದರ ಆಚಾರ್ಯ ಅವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಕಾರ್ಪಾಡಿ ದೇವಸ್ಥಾನದ ದ್ವಾರದ ಬಳಿ ಅಪರಿಚಿತ ವಾಹನವೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ವಾಹನ ನಿಲ್ಲಿಸದೆ ಪರಾರಿಯಾಗಿತ್ತು.



Ad Widget

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುಂದರ ಆಚಾರ್ಯ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಅ.6ರಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

Ad Widget

Ad Widget

ಮೃತರು ಪತ್ನಿ ಶಶಿಕಲಾ, ಪುತ್ರರಾದ ಹರ್ಷಿತ್ ಹಾಗೂ ರಕ್ಷಿತ್, ಸಹೋದರರು ಮತ್ತು ಸಹೋದರಿಯರನ್ನು ಅಗಲಿದ್ದಾರೆ.

Ad Widget
Continue Reading

ನಿಧನ ವಾರ್ತೆ

Dead body-ಹುಲಿವೇಷ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಬಾಲಕ ಸಮುದ್ರ ಪಾಲು; ಮೃತದೇಹ ಪತ್ತೆ

Published

on



Ad Widget

Ad Widget

Ad Widget

Ad Widget

ಮಂಗಳೂರಿನ ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಬೆಳ್ತಂಗಡಿಯ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶ್ರೇಯಸ್‌ ಎಸ್. ಕುಂಬಾರ (14) ಅವರ ಮೃತದೇಹ ಶೋಧ ಕಾರ್ಯಾಚರಣೆ ವೇಳೆ ಅ.6ರಂದು ಸಂಜೆ ಪತ್ತೆಯಾಗಿದೆ.

Ad Widget

Ad Widget

Ad Widget

Ad Widget

ಬೆಳ್ತಂಗಡಿ: ಮಂಗಳೂರಿನ ಪಣಂಬೂರು ಸಮುದ್ರದಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಬೆಳ್ತಂಗಡಿಯ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶ್ರೇಯಸ್‌ ಎಸ್. ಕುಂಬಾರ (14) ಅವರ ಮೃತದೇಹ ಶೋಧ ಕಾರ್ಯಾಚರಣೆ ವೇಳೆ ಅ.6ರಂದು ಸಂಜೆ ಪತ್ತೆಯಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಬೆಳ್ತಂಗಡಿ ತಾಲೂಕಿನ ರಂಕದಗುತ್ತು, ಕಸಬಾ ಗ್ರಾಮದ ಮೂಲದ ಶ್ರೇಯಸ್‌ ಅ.4ರಂದು ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿಗೆ ತೆರಳಿದ್ದರು. ನಾಲ್ವರು ಅಪ್ರಾಪ್ತ ಸ್ನೇಹಿತರೊಂದಿಗೆ ಬೆಳಗ್ಗೆ ಸುಮಾರು 10 ಗಂಟೆಗೆ ಮಂಗಳೂರಿಗೆ ಬಂದು ಹುಲಿ ವೇಷದ ತರಬೇತಿಯಲ್ಲಿ ಭಾಗವಹಿಸಿದ್ದರು.

Ad Widget

Ad Widget <> Ad Widget

ತರಬೇತಿ ಮುಗಿದ ಬಳಿಕ ಶ್ರೇಯಸ್‌ ಹಾಗೂ ಸ್ನೇಹಿತರು ಸ್ಟೇಟ್‌ ಬ್ಯಾಂಕ್‌ನಿಂದ ಪಣಂಬೂರು ಬೀಚ್‌ಗೆ ತೆರಳಿದ್ದರು. ಸಂಜೆ ಸುಮಾರು 4.30ರಿಂದ 5 ಗಂಟೆಯ ವೇಳೆಗೆ ಕೂರಿಕಟ್ಟ ಸಮುದ್ರ ಕಿನಾರೆಗೆ ತೆರಳಿದ್ದು, ಸುಮಾರು 6 ಗಂಟೆಗೆ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಶ್ರೇಯಸ್‌ ನೀರಿನಲ್ಲಿ ಮುಳುಗಿದ್ದಾರೆ. ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು.



Ad Widget

ಶ್ರೇಯಸ್‌ ನೀರು ಪಾಲಾದ ವಿಚಾರವನ್ನು ಆತನ ಅಪ್ರಾಪ್ತ ಸ್ನೇಹಿತರು ಭಯಗೊಂಡು ಮನೆಯವರಿಗೆ ತಿಳಿಸಿರಲಿಲ್ಲ. ಅ.5ರಂದು ಬೆಳಗ್ಗೆ ಈ ವಿಚಾರ ಶ್ರೇಯಸ್‌ ಕುಟುಂಬಸ್ಥರಿಗೆ ತಿಳಿದುಬಂದಿದೆ.

Ad Widget

Ad Widget

ಬಾಲಕನ ತಂದೆ ಶೇಷಪ್ಪ ನೀಡಿದ ದೂರಿನ ಆಧಾರದಲ್ಲಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಬಾಲಕನ ಪತ್ತೆಗಾಗಿ ಕೋಸ್ಟ್‌ ಗಾರ್ಡ್‌, ಕರಾವಳಿ ಕಾವಲು ಪಡೆ ಹಾಗೂ ಸಮುದ್ರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿತ್ತು. ಲೈಫ್‌ಗಾರ್ಡ್‌ಗಳು, ಮುಳುಗು ತಜ್ಞರು ಹಾಗೂ ಸ್ಥಳೀಯ ಮೀನುಗಾರರ ಸಹಕಾರದಿಂದ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading