Connect with us

ಅಂತರ ರಾಜ್ಯ

Kisan Samman-ಕಿಸಾನ್ ಸಮ್ಮಾನ್ ಯೋಜನೆಯ ಮುಂದಿನ ಕಂತು ಬಿಡುಗಡೆ ಯಾವಾಗ ? ಇದನ್ನು ಮಾಡಿದ್ರೆ ಮಾತ್ರ ಸಿಗೋದು

Published

on



Ad Widget

Ad Widget

Ad Widget

Ad Widget

ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಗೂ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತು ಬಿಡುಗಡೆ ಮಾಡುವ ಮೂಲಕ ರೈತರಿಗೆ ಭರ್ಜರಿ ಗಿಫ್ಟ್ ನೀಡಿದ್ದರು. ದೇಶದ 11 ಕೋಟಿ ರೈತರು ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ 18ನೇ ಕಂತಿನ ಲಾಭ ಪಡೆದಿದ್ದರು. ಇದೀಗ ಈ ಯೋಜನೆಯ ಮುಂದಿನ ಕಂತಿಗಾಗಿ ರೈತರು ಕಾಯುತ್ತಿದ್ದಾರೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ ಇದುವರೆಗೆ 3.45 ಲಕ್ಷ ಕೋಟಿ ರೂ. ಬಿಡುಗಡೆ ಮಾಡಿದೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಗೂ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತು ಬಿಡುಗಡೆ ಮಾಡುವ ಮೂಲಕ ರೈತರಿಗೆ ಭರ್ಜರಿ ಗಿಫ್ಟ್ ನೀಡಿದ್ದರು. ದೇಶದ 11 ಕೋಟಿ ರೈತರು ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ 18ನೇ ಕಂತಿನ ಲಾಭ ಪಡೆದಿದ್ದರು. ಇದೀಗ ಈ ಯೋಜನೆಯ ಮುಂದಿನ ಕಂತಿಗಾಗಿ ರೈತರು ಕಾಯುತ್ತಿದ್ದಾರೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ ಇದುವರೆಗೆ 3.45 ಲಕ್ಷ ಕೋಟಿ ರೂ. ಬಿಡುಗಡೆ ಮಾಡಿದೆ.

Ad Widget

Ad Widget

Ad Widget alt="Ad Widget"/>

Ad Widget

2019 ರಲ್ಲಿ ಕೇಂದ್ರ ಸರ್ಕಾರವು ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಈ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿ ಪ್ರತಿ ವರ್ಷ ₹6000 ಆರ್ಥಿಕ ನೆರವನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ.

Ad Widget

Ad Widget <> Ad Widget

19 ನೇ ಕಂತು ಬಿಡುಗಡೆ ಯಾವಾಗ ?
ಕೇಂದ್ರ ಸರ್ಕಾರವು ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19 ನೇ ಕಂತು ಬಿಡುಗಡೆ ಮಾಡಬಹುದು ಎಂದು ಹಲವು ಮಾಧ್ಯಮ ವರದಿ ಮಾಡಿವೆ. ಆದರೆ, ಸರ್ಕಾರವು ಇದುವರೆಗೆ ಯಾವುದೇ ಅಧಿಕೃತ ದಿನಾಂಕವನ್ನು ಘೋಷಿಸಿಲ್ಲ. ಸರ್ಕಾರವು ಮೂರು ಕಂತುಗಳಲ್ಲಿ ತಲಾ 2000 ರೂ.ನಂತೆ ವರ್ಷಕ್ಕೆ 6000 ರೂ. ಹಣವನ್ನು ಫಲಾನುಭವಿ ರೈತರ ಖಾತೆಗಳಿಗೆ ಜಮೆ ಮಾಡುತ್ತದೆ.



Ad Widget

ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತುಗಳ ಲಾಭವನ್ನು ಪಡೆಯಲು, ಅರ್ಹ ರೈತರು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಇ- ಕೆವೈಸಿ ಅನ್ನು ಅಪ್ಲೇಟ್ ಮಾಡದ ರೈತರಿಗೆ ಮುಂದಿನ ಕಂತಿನ ಲಾಭ ಸಿಗುವುದಿಲ್ಲ. ಇ-ಕೆವೈಸಿಯನ್ನು ನವೀಕರಿಸದ ರೈತರು ಕೂಡಲೇ ಅಪ್ಲೇಟ್ ಮಾಡಿ. ಇ-ಕೆವೈಸಿಯನ್ನು ಮೂರು ವಿಧಾನಗಳಲ್ಲಿ ಅಪ್ಲೇಟ್ ಮಾಡಬಹುದು.

Ad Widget

Ad Widget

ಇ-ಕೆವೈಸಿ ಅಪ್ಡೇಟ್ ಹೇಗೆ?

  • OTP ಆಧಾರಿತ e-KYC (PM-Kisan ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ)
  • ಬಯೋಮೆಟ್ರಿಕ್ ಆಧಾರಿತ e-KYC (ಸಾಮಾನ್ಯ ಸೇವಾ ಕೇಂದ್ರ (CSC) ಮತ್ತು ರಾಜ್ಯ ಸೇವಾ ಕೇಂದ್ರ (SSK) ನಲ್ಲಿ ಲಭ್ಯವಿದೆ
  • ಫೇಸ್ ಅಥೆಂಟಿಕೇಷನ್ ಆಧಾರಿತ ಇ-ಕೆವೈಸಿ (ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ ಇದನ್ನು ಲಕ್ಷಾಂತರ ರೈತರು ಬಳಸುತ್ತಾರೆ).

ಸ್ಟೇಟಸ್ ಚೆಕ್ ಮಾಡುವ ವಿಧಾನ

  • * ಪಿಎಂ ಕಿಸಾನ್ ಫಲಾನುಭವಿಯ ಸ್ಟೇಟಸ್ ಚೆಕ್ ಮಾಡಲು, ಮೊದಲು ನೀವು ಪಿಎಂ ಕಿಸಾನ್‌ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
  • * ಇದರ ನಂತರ, ಫಲಾನುಭವಿಯ ಸ್ಟೇಟಸ್ ಪುಟಕ್ಕೆ ಹೋಗಿ ಮತ್ತು ಫಲಾನುಭವಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
  • * ನಿಮ್ಮ ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು ‘ಗೆಟ್ ಡೇಟಾ’ ಬಟನ್ ಮೇಲೆ ಕ್ಲಿಕ್ ಮಾಡಿ.
Ad Widget

ಅಂತರ ರಾಜ್ಯ

Mohan Bhagwat-ಭಾರತದಲ್ಲಿ ಆಡಳಿತ ಬದಲಾವಣೆ ಸಾಧ್ಯವಿಲ್ಲ: ವಿಜಯದಶಮಿ ಕಾರ್ಯಕ್ರಮದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್

Published

on



Ad Widget

Ad Widget

Ad Widget

Ad Widget

ದೇಶದಲ್ಲಿ ಆಡಳಿತ ಬದಲಾವಣೆಯ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ದೇಶದಲ್ಲಿ ‘ಆಡಳಿತ ಬದಲಾವಣೆ’ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Ad Widget

Ad Widget

Ad Widget

Ad Widget

ನಾಗ್ಪುರ: ದೇಶದಲ್ಲಿ ಆಡಳಿತ ಬದಲಾವಣೆಯ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ದೇಶದಲ್ಲಿ ‘ಆಡಳಿತ ಬದಲಾವಣೆ’ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ನಾಗ್ಪುರದಲ್ಲಿ ಮಂಗಳವಾರ ನಡೆದ ಆರ್‌ಎಸ್‌ಎಸ್‌ನ ವಾರ್ಷಿಕ ವಿಜಯದಶಮಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ವಿವಿಧ ರಾಷ್ಟ್ರಗಳಲ್ಲಿ ಇತ್ತೀಚೆಗೆ ಸಂಭವಿಸಿದ ಹಿಂಸಾತ್ಮಕ ಘಟನೆಗಳನ್ನು ಉಲ್ಲೇಖಿಸಿದರು.

Ad Widget

Ad Widget <> Ad Widget

ಫ್ರಾನ್ಸ್, ಅಲ್ಬೇನಿಯಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದ ಘಟನೆಗಳನ್ನು ಪ್ರಸ್ತಾಪಿಸಿದ ಭಾಗವತ್, ಇಂತಹ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಹಲವು ಸವಾಲುಗಳನ್ನು ಸೃಷ್ಟಿಸುತ್ತಿವೆ ಎಂದು ಅಭಿಪ್ರಾಯಪಟ್ಟರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳೂ ಇಂತಹ ಸವಾಲುಗಳಿಂದ ಹೊರತಾಗಿಲ್ಲ. ಭಾರತವೂ ಇಂತಹ ಪರಿಸ್ಥಿತಿಗಳಿಂದ ಪ್ರಭಾವಿತವಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.



Ad Widget

“ಪಾಶ್ಚಿಮಾತ್ಯ ದೇಶಗಳಿಂದ ಬಿರುಗಾಳಿಯೊಂದು ಬೀಸುತ್ತಿದೆ. ಇದು ವ್ಯವಸ್ಥೆಗಳು, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ವಿರೋಧಿಸುವುದರ ಜತೆಗೆ ಅವುಗಳನ್ನು ನಾಶಪಡಿಸಲು ಪ್ರಯತ್ನಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಬೇಕು. ನಮ್ಮ ಸಮಾಜ ವಿಶಾಲವಾಗಿದ್ದು, ದೇಶ ಇನ್ನೂ ಅಭಿವೃದ್ಧಿಯ ಹಾದಿಯಲ್ಲಿದೆ. ಹೀಗಾಗಿ ಸವಾಲುಗಳು ಎದುರಾಗುವುದು ಸಹಜ” ಎಂದು ಅವರು ತಿಳಿಸಿದರು.

Ad Widget

Ad Widget

ಪ್ರತಿಭಟನಾಕಾರರು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅಧಿಕಾರಿಗಳು ಅಥವಾ ರಾಜಕೀಯ ನಾಯಕರು ಯಾರೇ ಆಗಿದ್ದರೂ, ಅವರ ನಡೆಗಳು ಸಮಾಜದಲ್ಲಿ ಸಂಘರ್ಷ, ದ್ವೇಷ ಹಾಗೂ ವಿಭಜನೆಗೆ ಕಾರಣವಾಗಬಾರದು ಎಂದು ಭಾಗವತ್ ಎಚ್ಚರಿಸಿದರು.

“ಪ್ರತಿಭಟನೆಗಳು ಎಷ್ಟೇ ತೀವ್ರವಾಗಿದ್ದರೂ, ಪ್ರತಿಯೊಬ್ಬರ ನಡೆ-ನುಡಿ ಸಂವಿಧಾನ ಮತ್ತು ಕಾನೂನಿನ ಮಿತಿಯೊಳಗಿರಬೇಕು. ಸಮಾಜದ ಏಕತೆ ಮತ್ತು ಸಾಮರಸ್ಯಕ್ಕೆ ಧಕ್ಕೆಯಾಗದಂತೆ ಎಲ್ಲರೂ ನಡೆದುಕೊಳ್ಳಬೇಕು” ಎಂದು ಅವರು ಪ್ರತಿಪಾದಿಸಿದರು.

ಆರ್‌ಎಸ್‌ಎಸ್ ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಇಡೀ ಸಮಾಜವನ್ನು ಸಂಘಟಿತ ಮತ್ತು ಬಲಿಷ್ಠವಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಭಾಗವತ್ ಹೇಳಿದರು.

ಇದೇ ವೇಳೆ, ಹಿಮಾಲಯ ಪ್ರದೇಶದಲ್ಲಿ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳ ಕುರಿತು ಸಮಗ್ರ ಹಾಗೂ ಸಮತೋಲಿತ ದೃಷ್ಟಿಕೋನ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು. ಭಾರತ, ಟಿಬೆಟ್, ಭೂತಾನ್ ಮತ್ತು ಚೀನಾ ಸೇರಿದಂತೆ ಹಲವು ಪ್ರದೇಶಗಳೊಂದಿಗೆ ಸಂಬಂಧ ಹೊಂದಿರುವ ಹಿಮಾಲಯ ವಲಯದಲ್ಲಿ ಪರಿಸರದ ಸೂಕ್ಷ್ಮತೆಯನ್ನು ಪರಿಗಣಿಸದೆ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದರು.

ಪ್ರಕೃತಿ ವಿಕೋಪಗಳಿಂದ ಸಂಭವಿಸುವ ಜೀವಹಾನಿ ದುಃಖಕರವಾಗಿದ್ದು, ಇಂತಹ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ನೆರವಾಗಲು ಎಲ್ಲರೂ ಒಗ್ಗೂಡುವುದು ಅಗತ್ಯ. ಅದೇ ಸಮಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಯೋಜಿಸುವಾಗ ಪರಿಸರ, ಜನಜೀವನ ಮತ್ತು ದೀರ್ಘಕಾಲೀನ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.

Ad Widget
Continue Reading

ನಿಧನ ವಾರ್ತೆ

Karthik-37 ಹರೆಯದ ಖ್ಯಾತ ನಟ ನಿಧನ : ಖ್ಯಾತ ಸಂಗೀತ ನಿರ್ದೇಶಕ ದೇವಾ ಕುಟುಂಬದಲ್ಲಿ ಮೂರು ದಿನದಲ್ಲಿ ಎರಡನೇ ಸಾವು..!

Published

on



Ad Widget

Ad Widget

Ad Widget

Ad Widget

ತಮಿಳು ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಖ್ಯಾತ ಸಂಗೀತ ಸಂಯೋಜಕ ಸಬೇಶ್ ಅವರ ಪುತ್ರ, ತಮಿಳು ನಟ ಕಾರ್ತಿಕ್ ಸಬೇಶ್ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ಕಾರ್ತಿಕ್ ಅವರ ಚಿಕ್ಕಪ್ಪ, ‘ಥೆನಿಸೈ ತೆಂದ್ರಲ್’ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಹಿರಿಯ ತಮಿಳು ಸಂಗೀತ ಸಂಯೋಜಕ ದೇವಾ ಅವರು ನಿಧನರಾದ ಕೇವಲ ಮೂರು ದಿನಗಳಲ್ಲೇ ಕಾರ್ತಿಕ್ ನಿಧನ ಹೊಂದಿದ್ದು, ಕುಟುಂಬ ದುಃಖದ ಕಡಲಲ್ಲಿ ಮುಳುಗಿದೆ.

Ad Widget

Ad Widget

Ad Widget

Ad Widget

ಚೆನ್ನೈ: ತಮಿಳು ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಖ್ಯಾತ ಸಂಗೀತ ಸಂಯೋಜಕ ಸಬೇಶ್ ಅವರ ಪುತ್ರ, ತಮಿಳು ನಟ ಕಾರ್ತಿಕ್ ಸಬೇಶ್ (37) ಅವರು ಮಂಗಳವಾರ (ಅ. 20) ಮುಂಜಾನೆ ನಿಧನರಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಕಾರ್ತಿಕ್ ಅವರ ಚಿಕ್ಕಪ್ಪ, ‘ಥೆನಿಸೈ ತೆಂದ್ರಲ್’ (Thenisai Thendral) ಎಂದೇ ಪ್ರೀತಿಯಿಂದ ಕರೆಯಲ್ಪಡುವ ಹಿರಿಯ ತಮಿಳು ಸಂಗೀತ ಸಂಯೋಜಕ ದೇವಾ ಅವರು ನಿಧನರಾದ ಕೇವಲ ಮೂರು ದಿನಗಳಲ್ಲೇ ಕಾರ್ತಿಕ್ ನಿಧನ ಹೊಂದಿದ್ದು, ಕುಟುಂಬ ದುಃಖದ ಕಡಲಲ್ಲಿ ಮುಳುಗಿದೆ.

Ad Widget

Ad Widget <> Ad Widget

ಮಾಧ್ಯಮ ವರದಿಗಳ ಪ್ರಕಾರ, ಕಾರ್ತಿಕ್ ಅವರು ಕಳೆದ ಎರಡು ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಯಾಲಿಸಿಸ್ ಸೇರಿದಂತೆ ವಿವಿಧ ಚಿಕಿತ್ಸೆಗೆ ಒಳಗಾಗಿದ್ದ ಅವರ ಆರೋಗ್ಯ ಕಳೆದ ಎರಡು ವಾರಗಳಲ್ಲಿ ಮತ್ತಷ್ಟು ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.



Ad Widget

2004ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ
ಕಾರ್ತಿಕ್ ಸಬೇಶ್ ಅವರು 2004ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ ಡ್ರೀಮ್ಸ್ ಮೂಲಕ ನಟನಾ ಕ್ಷೇತ್ರಕ್ಕೆ ಪ್ರವೇಶಿಸಿದ್ದರು. ಬಳಿಕ ಸಿಲಂಬರಸನ್ ಅಭಿನಯದ ವಲ್ಲವನ್, ಕುಳಿರ್ 100°, ಕಾದಲ್ ಸೊಲ್ಲ ವಂದೇನ್, ಪಟ್ಟತ್ತು ಯಾನೈ, ಉದಯಂ NH4, ಒರು ಕಣ್ಣಿಯುಂ ಮೂನು ಕಲವಾನಿಕಲುಮ್, ಬರ್ಮಾ ಹಾಗೂ ಮಹಾಬಲಿಪುರಂ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

Ad Widget

Ad Widget

ವೈಯಕ್ತಿಕ ಜೀವನದಲ್ಲಿ ಪತ್ನಿ ರಮ್ಯಾ ಕಾರ್ತಿಕ್ ಹಾಗೂ ಪುತ್ರಿಯರಾದ ಬ್ರಿಶಾನಿತಾರಾ ಮತ್ತು ಹೈರಾನಿತಾರಾ ಅವರನ್ನು ಅಗಲಿದ್ದಾರೆ. ಅಲ್ಲದೆ, ಹಿರಿಯ ಸಹೋದರಿಯರಾದ ಗೀತಾ ಸಬೇಶ್ ಮತ್ತು ಅರ್ಚನಾ ಸಬೇಶ್ ಅವರನ್ನು ಕೂಡ ಅಗಲಿದ್ದಾರೆ.

ಕಾರ್ತಿಕ್ ಸಬೇಶ್ ಅವರ ಅಂತ್ಯಕ್ರಿಯೆ ಮಂಗಳವಾರ ಸಂಜೆ 4.30ಕ್ಕೆ ಚೆನ್ನೈನ ವಲಸರವಕ್ಕಂನಲ್ಲಿ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

Ad Widget
Continue Reading

ಅಂತರ ರಾಜ್ಯ

Jantar Mantar-ಜಂತರ್ ಮಂತರ್ ಅಕ್ರಮ ಪ್ರವೇಶ ಆರೋಪ : ಸೌರವ್ ದಾಸ್, ಅಶುತೋಷ್ ರಾಂಕಾ ಬಂಧನ ಅವಧಿ ವಿಸ್ತರಣೆ: ಸಿಜೆಪಿ ಆಕ್ರೋಶ

Published

on



Ad Widget

Ad Widget

Ad Widget

Ad Widget

ಜಂತರ್ ಮಂತರ್‌ಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪ ಎದುರಿಸುತ್ತಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆರಡು ದಿನಗಳ ಕಾಲ ವಿಸ್ತರಿಸಲಾಗಿದೆ.

Ad Widget

Ad Widget

Ad Widget

Ad Widget

ನವದೆಹಲಿ: ಜಂತರ್ ಮಂತರ್‌ಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪ ಎದುರಿಸುತ್ತಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆರಡು ದಿನಗಳ ಕಾಲ ವಿಸ್ತರಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ದಾಸ್ ಮತ್ತು ರಾಂಕಾ ಅವರನ್ನು ಸೋಮವಾರ ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಯಿತು. ಈ ವೇಳೆ ಇಬ್ಬರನ್ನೂ ಮತ್ತೆ ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Ad Widget

Ad Widget <> Ad Widget

ಪ್ರತಿಭಟನಾ ಸ್ಥಳದ ಸ್ಥಾನಮಾನವನ್ನು ಹಿಂಪಡೆದಿರುವುದನ್ನು ವಿರೋಧಿಸಿ ಅಕ್ಟೋಬರ್ 13ರಂದು ರಾಷ್ಟ್ರಧ್ವಜ ಹಿಡಿದು ದಾಸ್, ರಾಂಕಾ ಸೇರಿದಂತೆ ಸಿಜೆಪಿ ಕಾರ್ಯಕರ್ತರು ಜಂತರ್ ಮಂತರ್‌ಗೆ ಪ್ರವೇಶಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಬಳಿಕ ಇಬ್ಬರಿಗೂ ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೀಗ ಬಂಧನದ ಅವಧಿಯನ್ನು ಮತ್ತೆರಡು ದಿನ ವಿಸ್ತರಿಸಲಾಗಿದೆ.



Ad Widget

ಇಬ್ಬರು ನಾಯಕರ ಬಿಡುಗಡೆಯನ್ನು ತಡೆಯುವ ಉದ್ದೇಶದಿಂದ ಜಾಮೀನು ಪ್ರಕ್ರಿಯೆಗಳನ್ನು ವಿಳಂಬಗೊಳಿಸಲಾಗುತ್ತಿದೆ ಎಂದು ಸಿಜೆಪಿ ಆರೋಪಿಸಿದೆ.

Ad Widget

Ad Widget

ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದು, “ನ್ಯಾಯಾಲಯದ ಪ್ರಕ್ರಿಯೆಗಳನ್ನು ವಿಳಂಬಗೊಳಿಸಿ ನಾಯಕರ ಬಿಡುಗಡೆ ತಡೆಯಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ದಾಸ್ ಮತ್ತು ರಾಂಕಾ ಅವರ ಬಂಧನವನ್ನು ಉದ್ದೇಶಪೂರ್ವಕವಾಗಿ ಮುಂದುವರಿಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

ತಮ್ಮ ನಾಯಕರ ಬಿಡುಗಡೆಗಾಗಿ ಸಲ್ಲಿಸಲಾದ ಜಾಮೀನು ಖಾತರಿಗಳನ್ನು ಅಸ್ಪಷ್ಟ ಕಾರಣಗಳನ್ನು ನೀಡಿ ತಿರಸ್ಕರಿಸಲಾಗಿದೆ ಎಂದೂ ಪಕ್ಷ ಆರೋಪಿಸಿದೆ. ಇಬ್ಬರು ನಾಯಕರನ್ನು ಬುಧವಾರ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading