ಬಿಗ್ ನ್ಯೂಸ್
‘ಎಸ್ಐಟಿಯಿಂದ ತಾರ್ಕಿಕ ಅಂತ್ಯ ಅಸಾಧ್ಯ’ ಎಂದ ವಕೀಲ ಅಮೃತೇಶ್ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ತನಿಖೆಗೆ ಪ್ರಭಾವ ಬೀರಲು ಯತ್ನಿಸಿದ್ದಾರೆಂದು ಆರೋಪಿಸಿ ಸೌಜನ್ಯ ತಾಯಿ ಕುಸುಮಾವತಿಯಿಂದ ಧರ್ಮಸ್ಥಳ ಠಾಣೆಗೆ ದೂರು ದಾಖಲು – ಹಳೆಯ ಪ್ರಕರಣದ ಜಾಮೀನು ರದ್ದುಗೊಳಿಸುವಂತೆ ಮನವಿ..!
ಬೆಳ್ತಂಗಡಿ: ಸೌಜನ್ಯ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಹೇಳಿಕೆ ನೀಡಿ ತನಿಖೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ಆರೋಪಿಸಿ, ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ ಬೆಂಗಳೂರಿನ ವಕೀಲ ಎನ್.ಪಿ. ಅಮೃತೇಶ್ ವಿರುದ್ಧ ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಕೀಲ ವಿಜಯ್ ವಾಸು ಪೂಜಾರಿ ಅವರ ಮೂಲಕ ಅ.17ರಂದು ಸಲ್ಲಿಸಿರುವ ದೂರಿನಲ್ಲಿ ಅ.13ರಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮೃತೇಶ್ ಅವರು ಸೌಜನ್ಯ ಅವರ ಪೋಷಕರು ಪ್ರಕರಣದಿಂದ ಹಣ ಸಂಪಾದಿಸಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ವಿಶೇಷ ತನಿಖಾ ತಂಡದ (SIT) ತನಿಖೆ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬರ್ಥದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈ ಹೇಳಿಕೆಗಳು ಸಂತ್ರಸ್ತೆಯ ಕುಟುಂಬದ ಗೌರವಕ್ಕೆ ಧಕ್ಕೆ ತರುವುದರ ಜತೆಗೆ, ತನಿಖೆಗೆ ಸಹಕರಿಸಬಹುದಾದ ಸಂಭಾವ್ಯ ಸಾಕ್ಷಿಗಳ ಮೇಲೆ ಒತ್ತಡ ಉಂಟು ಮಾಡಬಹುದು. ಹೀಗಾಗಿ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
‘ತನಿಖೆಯಿಂದ ಫಲಿತಾಂಶ ಅಸಾಧ್ಯ’ ಎಂದು ಆರೋಪ: ಅ.13ರಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮೃತೇಶ್ ಅವರು, ಸೌಜನ್ಯ ಪ್ರಕರಣದ ತನಿಖೆ ತಾರ್ಕಿಕ ಅಂತ್ಯ ತಲುಪುವುದು ಅಸಾಧ್ಯ ಮೂರು ತಿಂಗಳಲ್ಲಿ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ, 14 ವರ್ಷಗಳಷ್ಟು ಹಳೆಯ ಸಾಕ್ಷ್ಯಗಳನ್ನು ಈಗ ಪತ್ತೆಹಚ್ಚುವುದು ಕಷ್ಟ ಎಂದು ಹೇಳಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸಂತೋಷ್ ರಾವ್ ಅವರನ್ನು ಮರುತನಿಖೆಗೆ ಒಳಪಡಿಸಬೇಕು ಎಂಬ ಹೇಳಿಕೆಯನ್ನೂ ಅವರು ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಸುಪ್ರೀಂ ಕೋರ್ಟ್ 2026ರ ಸೆ.21ರಂದು ಪ್ರಕರಣದ ಮರುತನಿಖೆಗೆ ನಿರ್ದೇಶನ ನೀಡಿ, ಮೂರು ತಿಂಗಳ ಕಾಲಮಿತಿ ವಿಧಿಸಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಸೆ.24ರಂದು SIT ರಚಿಸಿತ್ತು. ಅ.1ರಿಂದ ತನಿಖೆ ಆರಂಭವಾಗಿದ್ದು, ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ಹೇಳಿಕೆಗಳನ್ನು ನೀಡಿರುವುದು ತನಿಖೆಯ ನಿಷ್ಪಕ್ಷಪಾತತೆ ಮತ್ತು ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರಬಹುದು ಎಂಬುದು ದೂರುದಾರರ ವಾದವಾಗಿದೆ.
ಸಂತ್ರಸ್ತೆಯ ಕುಟುಂಬವೇ ಸಾಕ್ಷಿ : ಸೌಜನ್ಯ ಜೀವಂತವಾಗಿದ್ದಾಗ ಕೊನೆಯದಾಗಿ ಆಕೆಯ ಚಿಕ್ಕಪ್ಪ ಮತ್ತು ಚಿಕ್ಕಮ್ಮನಿಗೆ ಕಾಣಿಸಿಕೊಂಡಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆಕೆಯ ಚಿಕ್ಕಪ್ಪ ಜಗದೀಶ್ ಗೌಡ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣದ ಪ್ರಥಮ ಮಾಹಿತಿ ವರದಿಯಲ್ಲಿ (FIR) ಬದಲಾವಣೆ ಮಾಡಲಾಗಿತ್ತು. ಸೌಜನ್ಯ ಅವರ ತಂದೆ ಮೊದಲ ಸಾಕ್ಷಿಯಾಗಿ (PW-1) ಹೇಳಿಕೆ ನೀಡಿದ್ದಾರೆ ಎಂದೂ ತಿಳಿಸಲಾಗಿದೆ.ಈ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಪೋಷಕರು ಪ್ರಕರಣದಿಂದ ಹಣ ಸಂಪಾದಿಸಿದ್ದಾರೆ ಎಂಬ ಹೇಳಿಕೆಗಳು ಕುಟುಂಬದ ವಿಶ್ವಾಸಾರ್ಹತೆಗೆ ಧಕ್ಕೆ ತರುವುದರ ಜತೆಗೆ, ಕುಟುಂಬದ ಪರವಾಗಿ ಸಾಕ್ಷ್ಯ ನೀಡಲು ಮುಂದೆ ಬರಬಹುದಾದವರನ್ನು ಹಿಮ್ಮೆಟ್ಟಿಸುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬೆಂಗಳೂರಿನ ಹೈ ಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 218/2013ಕ್ಕೆ ಸಂಬಂಧಿಸಿದ C.C. ಸಂಖ್ಯೆ 20735/2013ರ ಪ್ರಕರಣದಲ್ಲಿ ಅಮೃತೇಶ್ ಅವರನ್ನು ಏಳನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಈ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿತ್ತು. ನಿರೀಕ್ಷಣಾ ಜಾಮೀನು ನೀಡುವಾಗ ಯಾವುದೇ ಅಪರಾಧ ಕೃತ್ಯಗಳಲ್ಲಿ ತೊಡಗಬಾರದು ಎಂಬ ಷರತ್ತು ವಿಧಿಸಲಾಗಿತ್ತು ಎಂದೂ ದೂರಿನಲ್ಲಿ ತಿಳಿಸಲಾಗಿದೆ. ಪ್ರಸ್ತುತ ಘಟನೆಯು ಅಪರಾಧವನ್ನು ಒಳಗೊಂಡಿದೆ ಎಂದು SIT ಕಂಡುಕೊಂಡರೆ, ಸಂಬಂಧಪಟ್ಟ ಅಭಿಯೋಜನಾ ಸಂಸ್ಥೆಗೆ ಮಾಹಿತಿ ನೀಡಬೇಕು ಎಂದು ಕೋರಲಾಗಿದೆ.
ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 351ರ ಅಡಿಯಲ್ಲಿ ಅಪರಾಧ ಬೆದರಿಕೆಗೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 174ರ ಅಡಿಯಲ್ಲಿ ದೂರಿನ ಸಾರಾಂಶ ದಾಖಲಿಸಿ, ತನಿಖೆಗೆ ಸಕ್ಷಮ ಮ್ಯಾಜಿಸ್ಟ್ರೇಟ್‌ನ ಆದೇಶ ಪಡೆಯುವಂತೆ SITಗೆ ಮನವಿ ಮಾಡಲಾಗಿದೆ.
ಸಾಕ್ಷಿಗಳಿಗೆ ರಕ್ಷಣೆಗೆ ಮನವಿ : ಕುಸುಮಾವತಿ ಗೌಡ, ಅವರ ಕುಟುಂಬದವರು ಮತ್ತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಹೆಚ್ಚುವರಿ ಅಫಿಡವಿಟ್‌ನಲ್ಲಿ ಹೆಸರಿಸಲಾದ ಎಂಟು ಸಂಭಾವ್ಯ ಸಾಕ್ಷಿಗಳಿಗೆ ಎದುರಾಗಬಹುದಾದ ಅಪಾಯವನ್ನು ಮೌಲ್ಯಮಾಪನ ಮಾಡಬೇಕು. ಸಾಕ್ಷಿದಾರರ ರಕ್ಷಣಾ ಯೋಜನೆ, 2018ರ ಅಡಿಯಲ್ಲಿ ಅಪಾಯದ ವಿಶ್ಲೇಷಣಾ ವರದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಿ, ಅಗತ್ಯ ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದೂ ಕೋರಲಾಗಿದೆ.
ಬಿಗ್ ನ್ಯೂಸ್
G.L. Acharya Jewellers-ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವಿಜಯದಶಮಿ ಧಮಾಕಾ; ಕೊನೆಯ ಎರಡು ದಿನ ಮಾತ್ರ..!
1957ರಿಂದ ಗ್ರಾಹಕರ ವಿಶ್ವಾಸ ಗಳಿಸಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ನವರಾತ್ರಿ ಹಾಗೂ ವಿಜಯದಶಮಿ ಪ್ರಯುಕ್ತ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ. ಚಿನ್ನ, ವಜ್ರ ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಅಕ್ಟೋಬರ್ 15ರಿಂದ ಆರಂಭವಾಗಿರುವ ಈ ಕೊಡುಗೆಗಳು ಅಕ್ಟೋಬರ್ 21ರವರೆಗೆ ಮಾತ್ರ ಲಭ್ಯವಿದ್ದು, ಗ್ರಾಹಕರಿಗೆ ಖರೀದಿಯ ಸಂಭ್ರಮವನ್ನು ಹೆಚ್ಚಿಸಿವೆ.
ಪುತ್ತೂರು: 1957ರಿಂದ ಗ್ರಾಹಕರ ವಿಶ್ವಾಸ ಗಳಿಸಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ನವರಾತ್ರಿ ಹಾಗೂ ವಿಜಯದಶಮಿ ಪ್ರಯುಕ್ತ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ. ಚಿನ್ನ, ವಜ್ರ ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಅಕ್ಟೋಬರ್ 15ರಿಂದ ಆರಂಭವಾಗಿರುವ ಈ ಕೊಡುಗೆಗಳು ಅಕ್ಟೋಬರ್ 21ರವರೆಗೆ ಮಾತ್ರ ಲಭ್ಯವಿದ್ದು, ಗ್ರಾಹಕರಿಗೆ ಖರೀದಿಯ ಸಂಭ್ರಮವನ್ನು ಹೆಚ್ಚಿಸಿವೆ.
ನವರಾತ್ರಿಯ ನವೋಲ್ಲಾಸಕ್ಕಾಗಿ ವಿಶೇಷ ಕೊಡುಗೆಗಳು:
ಚಿನ್ನಾಭರಣಗಳು: ವಿ.ಎ. (VA) ಶುಲ್ಕದ ಮೇಲೆ ಪ್ರತಿ ಗ್ರಾಂಗೆ ₹600ರವರೆಗೆ ರಿಯಾಯಿತಿ.
ವಜ್ರಾಭರಣಗಳು: ಪ್ರತಿ ಕ್ಯಾರೆಟ್‌ಗೆ ₹8,000 ಫ್ಲ್ಯಾಟ್ ರಿಯಾಯಿತಿ.
ಬೆಳ್ಳಿಯ ಆಭರಣಗಳು: ಪ್ರತಿ ಕೆ.ಜಿ.ಗೆ ₹8,000 ಫ್ಲ್ಯಾಟ್ ರಿಯಾಯಿತಿ.
ಶಾಪಿಂಗ್ ಹಬ್ಬದ ಸಂಭ್ರಮ
ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಶಾಪಿಂಗ್ ಹಬ್ಬದ ಸಂಭ್ರಮದಲ್ಲಿ ಗ್ರಾಹಕರಿಗೆ ಅದೃಷ್ಟ ಪರೀಕ್ಷಿಸುವ ಅವಕಾಶವೂ ಇದೆ. ಬಂಪರ್ ಬಹುಮಾನವಾಗಿ 5 ಕಾರುಗಳು ಸೇರಿದಂತೆ ಒಟ್ಟು 2,500ಕ್ಕೂ ಹೆಚ್ಚು ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.
ನವರಾತ್ರಿಯ ಸಂಭ್ರಮವನ್ನು ಆಭರಣಗಳೊಂದಿಗೆ ಮತ್ತಷ್ಟು ವಿಶೇಷವಾಗಿಸಿಕೊಳ್ಳಲು ಬಯಸುವ ಗ್ರಾಹಕರು ಈ ಕೊಡುಗೆಗಳ ಪ್ರಯೋಜನ ಪಡೆದುಕೊಳ್ಳಬಹುದು. ಕೊಡುಗೆಗಳು ಅಕ್ಟೋಬರ್ 21ರಂದು ಮುಕ್ತಾಯಗೊಳ್ಳಲಿರುವುದರಿಂದ ಗ್ರಾಹಕರು ಶೀಘ್ರದಲ್ಲೇ ಮಳಿಗೆಗೆ ಭೇಟಿ ನೀಡಬಹುದು.
ಅಂತರ ರಾಜ್ಯ
Jantar Mantar-ಜಂತರ್ ಮಂತರ್ ಅಕ್ರಮ ಪ್ರವೇಶ ಆರೋಪ : ಸೌರವ್ ದಾಸ್, ಅಶುತೋಷ್ ರಾಂಕಾ ಬಂಧನ ಅವಧಿ ವಿಸ್ತರಣೆ: ಸಿಜೆಪಿ ಆಕ್ರೋಶ
ಜಂತರ್ ಮಂತರ್‌ಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪ ಎದುರಿಸುತ್ತಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆರಡು ದಿನಗಳ ಕಾಲ ವಿಸ್ತರಿಸಲಾಗಿದೆ.
ನವದೆಹಲಿ: ಜಂತರ್ ಮಂತರ್‌ಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪ ಎದುರಿಸುತ್ತಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆರಡು ದಿನಗಳ ಕಾಲ ವಿಸ್ತರಿಸಲಾಗಿದೆ.
ದಾಸ್ ಮತ್ತು ರಾಂಕಾ ಅವರನ್ನು ಸೋಮವಾರ ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಯಿತು. ಈ ವೇಳೆ ಇಬ್ಬರನ್ನೂ ಮತ್ತೆ ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳದ ಸ್ಥಾನಮಾನವನ್ನು ಹಿಂಪಡೆದಿರುವುದನ್ನು ವಿರೋಧಿಸಿ ಅಕ್ಟೋಬರ್ 13ರಂದು ರಾಷ್ಟ್ರಧ್ವಜ ಹಿಡಿದು ದಾಸ್, ರಾಂಕಾ ಸೇರಿದಂತೆ ಸಿಜೆಪಿ ಕಾರ್ಯಕರ್ತರು ಜಂತರ್ ಮಂತರ್‌ಗೆ ಪ್ರವೇಶಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಬಳಿಕ ಇಬ್ಬರಿಗೂ ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೀಗ ಬಂಧನದ ಅವಧಿಯನ್ನು ಮತ್ತೆರಡು ದಿನ ವಿಸ್ತರಿಸಲಾಗಿದೆ.
ಇಬ್ಬರು ನಾಯಕರ ಬಿಡುಗಡೆಯನ್ನು ತಡೆಯುವ ಉದ್ದೇಶದಿಂದ ಜಾಮೀನು ಪ್ರಕ್ರಿಯೆಗಳನ್ನು ವಿಳಂಬಗೊಳಿಸಲಾಗುತ್ತಿದೆ ಎಂದು ಸಿಜೆಪಿ ಆರೋಪಿಸಿದೆ.
ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, “ನ್ಯಾಯಾಲಯದ ಪ್ರಕ್ರಿಯೆಗಳನ್ನು ವಿಳಂಬಗೊಳಿಸಿ ನಾಯಕರ ಬಿಡುಗಡೆ ತಡೆಯಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ದಾಸ್ ಮತ್ತು ರಾಂಕಾ ಅವರ ಬಂಧನವನ್ನು ಉದ್ದೇಶಪೂರ್ವಕವಾಗಿ ಮುಂದುವರಿಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ತಮ್ಮ ನಾಯಕರ ಬಿಡುಗಡೆಗಾಗಿ ಸಲ್ಲಿಸಲಾದ ಜಾಮೀನು ಖಾತರಿಗಳನ್ನು ಅಸ್ಪಷ್ಟ ಕಾರಣಗಳನ್ನು ನೀಡಿ ತಿರಸ್ಕರಿಸಲಾಗಿದೆ ಎಂದೂ ಪಕ್ಷ ಆರೋಪಿಸಿದೆ. ಇಬ್ಬರು ನಾಯಕರನ್ನು ಬುಧವಾರ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು
Mysuru-ಮೈಸೂರು ದಸರಾ ಕಂಬಳ ಸಂಪನ್ನ: ಫಲಿತಾಂಶ ಪ್ರಕಟ : ಪ್ರಥಮ ಬಹುಮಾನವಾಗಿ 16 ಗ್ರಾಂ ಚಿನ್ನ
ನಾಡಹಬ್ಬ ಮೈಸೂರು ದಸರಾದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ‘ವಿಜಯ ದಶಮಿ ಜೋಡುಕರೆ ಕಂಬಳ’ ಸೋಮವಾರ ರಾತ್ರಿ ರೋಚಕ ಓಟಗಳೊಂದಿಗೆ ಸಂಪನ್ನಗೊಂಡಿತು. ಕೋಣಗಳನ್ನು ಓಡಿಸಲು ಸಮಯ ಮಿತಿ ನಿಗದಿಪಡಿಸಿದ್ದರೂ, ನಿಗದಿತ ಸಮಯಕ್ಕಿಂತ ಸುಮಾರು ಐದು ಗಂಟೆ ತಡವಾಗಿ ಕಂಬಳ ಮುಕ್ತಾಯಗೊಂಡಿತು.
ಮೈಸೂರು: ನಾಡಹಬ್ಬ ಮೈಸೂರು ದಸರಾದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ‘ವಿಜಯ ದಶಮಿ ಜೋಡುಕರೆ ಕಂಬಳ’ ಸೋಮವಾರ ರಾತ್ರಿ ರೋಚಕ ಓಟಗಳೊಂದಿಗೆ ಸಂಪನ್ನಗೊಂಡಿತು.
ಕಂಬಳದ ಕ್ವಾರ್ಟರ್‌ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಹಂತದ ಸ್ಪರ್ಧೆಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಆಗಮಿಸಿದ್ದರು. ಕೋಣಗಳನ್ನು ಓಡಿಸಲು ಸಮಯ ಮಿತಿ ನಿಗದಿಪಡಿಸಿದ್ದರೂ, ನಿಗದಿತ ಸಮಯಕ್ಕಿಂತ ಸುಮಾರು ಐದು ಗಂಟೆ ತಡವಾಗಿ ಕಂಬಳ ಮುಕ್ತಾಯಗೊಂಡಿತು.
ಕಂಬಳದ ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಶಾಸಕ ಅಶೋಕ್ ಕುಮಾರ್ ರೈ ಹಾಗೂ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬಹುಮಾನ ವಿತರಿಸಿದರು. ಪ್ರಥಮ ಬಹುಮಾನವಾಗಿ 16 ಗ್ರಾಂ ಚಿನ್ನ, ದ್ವಿತೀಯ ಬಹುಮಾನವಾಗಿ 8 ಗ್ರಾಂ ಚಿನ್ನ ಹಾಗೂ ತೃತೀಯ ಮತ್ತು ಚತುರ್ಥ ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡಲಾಯಿತು.
ವಿವಿಧ ವಿಭಾಗಗಳ ವಿಜೇತರ ವಿವರ
ನೇಗಿಲು ಕಿರಿಯ ವಿಭಾಗ
ಪ್ರಥಮ: ಉಡುಪಿ ಕಕ್ಕುಂಜೆ ರಾಧಾ ನಿಲಯದ ಸಂತೋಷ್ ಶಿವರಾಜ್ ಪೂಜಾರಿ (ಕೋಣ ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ)
- ದ್ವಿತೀಯ: ಮುನಿಯಾಲ್ ಉದಯಕುಮಾರ್ ಶೆಟ್ಟಿ (ಕುಂದಬಾರಂದ ಮಾಸ್ತಿಕಟ್ಟೆ ಸ್ವರೂಪ್)
- ತೃತೀಯ: ಉಳೆಪಾಡಿ ಪುಲ್ಲೊಟ್ಟು ಬೀಡಿನ ಉದಯ ಶೆಟ್ಟಿ ‘ಬಿ’ (ಪಣಪೀಲು ಪ್ರವೀಣ್ ಕೋಟ್ಯಾನ್)
- ಚತುರ್ಥ: ಉಳೆಪಾಡಿ ಪುಲ್ಲೊಟ್ಟು ಬೀಡಿನ ಉದಯ ಶೆಟ್ಟಿ ‘ಎ’ (ಪುತ್ತಿಲ ಹೊಸಮನೆ ಚರಣ್ ಪೂಜಾರಿ)
ನೇಗಿಲು ಹಿರಿಯ ವಿಭಾಗ
- ಪ್ರಥಮ: ಎಂಬತ್ತು ಬಡಗುಬೆಟ್ಟು ಕಲ್ಲಪಾಪು ಶ್ರೀಕಾ ಸುದೀಪ್ ಶೆಟ್ಟಿ (ಕುಂದಬಾರಂದ ಮಾಸ್ತಿಕಟ್ಟೆ ಸ್ವರೂಪ್)
- ದ್ವಿತೀಯ: ಕಕ್ಕೆಪದವು ಪೆಂರ್ಗಾಲಿನ ಬಾಬು ತನಿಯಪ್ಪ ಗೌಡ (ಕಕ್ಕೆಪದವು ಹೃತಿಕ್ ಗೌಡ)
- ತೃತೀಯ: ಮಾಣಿಯ ನಾಗರಾಜ್ ಶೆಟ್ಟಿ (ಬಜೆಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ)
- ಚತುರ್ಥ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (ಬಂಬ್ರಾಣ ಬೈಲು ವಂದಿತ್ ಶೆಟ್ಟಿ)
ಹಗ್ಗ ಕಿರಿಯ ವಿಭಾಗ
- ಪ್ರಥಮ: ಪದವು ಕಾನಡ್ಕದ ಪ್ಲೇವಿ ಡಿಸೋಜ ‘ಬಿ’ (ಕಾವೂರು ದೋಟ ಸುದರ್ಶನ್)
- ದ್ವಿತೀಯ: ಎರ್ಮಾಳ್‌ನ ರೋಹಿತ್ ಹೆಗ್ಡೆ (ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ)
- ತೃತೀಯ: ಶಿಬರೂರು ಮುಟ್ಟಿಕಲ್ಲಿನ ಕೀರ್ತನ ರಾಜೇಶ್ ಪಾಣಾರ (ಕಡಂದಲೆ ಮೂಡಾಯಿಬೆಟ್ಟು ರೋಹಿತ್ ಪಾಣಾರ)
- ಚತುರ್ಥ: ಸುರತ್ಕಲ್ ಪಾಂಜಚನ್ಯದ ಯೋಗೀಶ್ ಕರಿಯ ಪೂಜಾರಿ (ಭಟ್ಕಳ ಶಂಕರ)
ಹಗ್ಗ ಹಿರಿಯ ವಿಭಾಗ
- ಪ್ರಥಮ: ಕೊಳಕೆ ಇರ್ವತ್ತೂರಿನ ಭಾಸ್ಕರ ಸುಬ್ಬಯ್ಯ ಕೋಟ್ಯಾನ್ (ಕಕ್ಕೆಪದವು ಪೆಂರ್ಗಾಲಿನ ಕೃತಿಕ್ ಗೌಡ)
- ದ್ವಿತೀಯ: ಎರ್ಮಾಳ್ ಪುಚೊಟ್ಟು ಬೀಡಿನ ಬಾಲಚಂದ್ರ ಲೋಕಯ್ಯ ಶೆಟ್ಟಿ (ಪಡು ಸಾಂತೂರಿನ ಪೃಥ್ವಿರಾಜ್ ಪೂಜಾರಿ)
- ತೃತೀಯ: ಮಾಳ ಆನಂದ ನಿಲಯದ ಶೇಖರ ಎ. ಶೆಟ್ಟಿ (ಉಜಿರೆಯ ಸ್ಪಂದನ್ ಶೆಟ್ಟಿ)
- ಚತುರ್ಥ: ನಂದಳಿಕೆಯ ಶ್ರೀಕಾಂತ್ ಭಟ್ (ಬಂಬ್ರಾಣ ಬೈಲಿನ ವಂದಿತ್)
ಅಡ್ಡಹಲಗೆ ವಿಭಾಗ
- ಪ್ರಥಮ: ಇರುವೈಲು ದೊಡ್ಡಗುತ್ತಿನ ಜಗದೀಶ್ ಎಂ. ಶೆಟ್ಟಿ ‘ಎ’ (ತೆಕ್ಕಟ್ಟೆ ಸುಧೀರ್ ದೇವಾಡಿಗ)
- ದ್ವಿತೀಯ: ವಿಟ್ಲ ಕುಂಡಡ್ಕ ಮರುವಾಲದ ಜಯಂತದಾಸ್ (ಉಲ್ಲೂರು ಕಂದಾವರ ಗಣೇಶ್)
- ತೃತೀಯ: ಬೋಳಾರದ ತ್ರಿಶಾಲ್ ಕೆ. ಪೂಜಾರಿ (ಭಟ್ಕಳ ಹರೀಶ್ ನಾಯಕ್)
- ಚತುರ್ಥ: ಇರುವೈಲು ದೊಡ್ಡಗುತ್ತಿನ ಜಗದೀಶ್ ಎಂ. ಶೆಟ್ಟಿ ‘ಬಿ’ (ತೆಕ್ಕಟ್ಟೆ ಸುಧೀರ್ ದೇವಾಡಿಗ)
ಕನೆಹಲಗೆ ವಿಭಾಗ
ಬೈಂದೂರು ಸಸಿಹಿತ್ತಿನ ವೆಂಕಟ ಪೂಜಾರಿ (ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ) ಹಾಗೂ ವಾಮಂಜೂರು ತಿರುವೈಲುಗುತ್ತಿನ ನವೀನ್‌ಚಂದ್ರ ಆಳ್ವ (ಬೈಂದೂರು ಭಾಸ್ಕರ ದೇವಾಡಿಗ) ಅವರ ಕೋಣಗಳು ಆರೂವರೆ ಕೋಲು ನಿಶಾನೆಗೆ ನೀರು ಹಾಯಿಸಿ ಪ್ರಥಮ ಸ್ಥಾನ ಗಳಿಸಿದವು.
-
ಬಿಗ್ ನ್ಯೂಸ್16 hours agoಬೋಳಿಯಾರ್ ಭೀಕರ ಅಪಘಾತ : ಸ್ಕೂಟರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪಿಕಪ್ – ಸವಾರ ಮೃತ್ಯು
-
ದಕ್ಷಿಣ ಕನ್ನಡ20 hours ago
ಉಪ್ಪಿನಂಗಡಿ : ಕುಡಿದ ಮತ್ತಿನಲ್ಲಿ ತಲವಾರು ಪ್ರದರ್ಶಿಸಿ ಬೆದರಿಕೆ: ಇಬ್ಬರು ವಶಕ್ಕೆ
-
ಮೈಸೂರು5 hours agoMysuru-ಮೈಸೂರು ದಸರಾ ಕಂಬಳ ಸಂಪನ್ನ: ಫಲಿತಾಂಶ ಪ್ರಕಟ : ಪ್ರಥಮ ಬಹುಮಾನವಾಗಿ 16 ಗ್ರಾಂ ಚಿನ್ನ
-
Uncategorized20 hours ago
ಸಿದ್ದಕಟ್ಟೆ : ಯುವಕನಿಗೆ ಚೂರಿಯಿಂದ ಇರಿತ: 6 ಮಂದಿ ವಿರುದ್ಧ ಕೇಸ್
-
Uncategorized20 hours ago
ಬೆಳ್ತಂಗಡಿ : ಕೋಳಿ ಅಂಕಕ್ಕೆ ಪೊಲೀಸರ ದಾಳಿ: ನಾಲ್ವರು ವಶಕ್ಕೆ, 7 ಕೋಳಿಗಳು ಜಪ್ತಿ
-
ನಿಧನ ವಾರ್ತೆ4 hours agoBolyar-ಬೋಳಿಯಾರ್: ಬೈಕ್ಗೆ ಹಿಂಬದಿಯಿಂದ ಪಿಕಪ್ ಢಿಕ್ಕಿ; ಗಂಭೀರವಾಗಿ ಗಾಯಗೊಂಡಿದ್ದ ಸಹಸವಾರ ಮೃತ್ಯು
-
ಬಿಗ್ ನ್ಯೂಸ್5 hours agoElon Musk-ಅಮೆರಿಕದ ಪ್ರತಿ ಮಗುವಿಗೂ ಸ್ಪೇಸ್ಎಕ್ಸ್ನ ತಲಾ ಒಂದು ಷೇರು..! ಎಲಾನ್ ಮಸ್ಕ್ ಘೋಷಣೆ
-
Uncategorized3 hours agoMangalore Dasara-ಮಂಗಳೂರು ದಸರಾ: ನಾಳೆ ಸಂಜೆ 4ರಿಂದ ಸಂಚಾರ ಬದಲಾವಣೆ; ಈ ರಸ್ತೆಗಳಲ್ಲಿ ವಾಹನ ಓಡಿಸುವ ಮುನ್ನ ಎಚ್ಚರ..!


















