ಮೈಸೂರು
Mysuru-ಮೈಸೂರು ದಸರಾ ವೇಳೆ 10 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ
ಕಳೆದ ವರ್ಷದ ಮೈಸೂರು ದಸರಾ ಸಂದರ್ಭದಲ್ಲಿ ಬಲೂನ್ ಮಾರಾಟ ಮಾಡಲು ಉತ್ತರ ಕರ್ನಾಟಕದಿಂದ ಬಂದಿದ್ದ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಸಿದ್ಧಲಿಂಗಪುರದ ಕಾರ್ತಿಕ್ (31)ಗೆ ಮೈಸೂರು ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಮೈಸೂರು: ಕಳೆದ ವರ್ಷದ ಮೈಸೂರು ದಸರಾ ಸಂದರ್ಭದಲ್ಲಿ ಬಲೂನ್ ಮಾರಾಟ ಮಾಡಲು ಉತ್ತರ ಕರ್ನಾಟಕದಿಂದ ಬಂದಿದ್ದ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಸಿದ್ಧಲಿಂಗಪುರದ ಕಾರ್ತಿಕ್ (31)ಗೆ ಮೈಸೂರು ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆನಂದ್ ಪಿ. ಹೊಗಾಡೆ ಅವರು ಗುರುವಾರ ಕಾರ್ತಿಕ್ ದೋಷಿ ಎಂದು ತೀರ್ಪು ಪ್ರಕಟಿಸಿದ್ದರು. ಇದೀಗ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ಅಪರಾಧಿಗೆ ಮರಣದಂಡನೆ ವಿಧಿಸಿ ಆದೇಶಿಸಿದ್ದಾರೆ.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಕೆ.ಬಿ. ಜಯಂತಿ ವಾದ ಮಂಡಿಸಿದ್ದರು. ಜಿಲ್ಲಾ ಕಾನೂನು ಘಟಕದ ಮಾಚಂಗಡ ಎಸ್. ನವೀನ್ ಅವರು ಆರೋಪಿಯ ಪರ ವಕಾಲತ್ತು ವಹಿಸಿದ್ದರು.
ಏನಿದು ಪ್ರಕರಣ?
2025ರ ಮೈಸೂರು ದಸರಾ ಸಂದರ್ಭದಲ್ಲಿ ಬಲೂನ್ ಮಾರಾಟ ಮಾಡಲು ಕಲಬುರಗಿಯಿಂದ ಬಂದಿದ್ದ ಕುಟುಂಬವೊಂದು ನಗರದ ದೊಡ್ಡಕೆರೆ ಮೈದಾನದ ವಸ್ತುಪ್ರದರ್ಶನದ ಪಕ್ಕದಲ್ಲಿ ಟೆಂಟ್ ಹಾಕಿಕೊಂಡು ವಾಸವಿತ್ತು. ದಸರಾ ಮುಗಿದ ಬಳಿಕ ಚಾಮುಂಡಿ ಬೆಟ್ಟದಲ್ಲಿ ತೆಪ್ಪೋತ್ಸವ ಮುಗಿಸಿಕೊಂಡು ಊರಿಗೆ ಮರಳಲು ಕುಟುಂಬ ಸಿದ್ಧತೆ ನಡೆಸಿತ್ತು.
ಆದರೆ, ಅಕ್ಟೋಬರ್ 9ರ ಮುಂಜಾನೆ ಕುಟುಂಬದೊಂದಿಗೆ ಮಲಗಿದ್ದ 10 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಇರಿದು ಕೊಲೆ ಮಾಡಲಾಗಿತ್ತು. ಬೆಳಗ್ಗೆ ವಸ್ತುಪ್ರದರ್ಶನ ಮೈದಾನದ ವಾಹನ ನಿಲುಗಡೆ ಸ್ಥಳದ ಹಿಂಭಾಗದಲ್ಲಿದ್ದ ಚರಂಡಿ ಬಳಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಬಾಲಕಿಯ ಕಿವಿ, ಕೆನ್ನೆ ಹಾಗೂ ಗಲ್ಲದ ಭಾಗದಲ್ಲಿ ಗಾಯಗಳಾಗಿದ್ದವು ಎಂದು ಪೊಲೀಸರು ತಿಳಿಸಿದ್ದರು.
ಈ ಸಂಬಂಧ ನಜರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಬಸ್ ಕ್ಲೀನರ್ ಆಗಿದ್ದ ಆರೋಪಿ ಕಾರ್ತಿಕ್ನನ್ನು ಕೃತ್ಯ ನಡೆದ 24 ಗಂಟೆಗಳೊಳಗೆ ಕೊಳ್ಳೇಗಾಲದಲ್ಲಿ ಪತ್ತೆಹಚ್ಚಿ ಬಂಧಿಸಿದ್ದರು.
ನಂತರ ಮಹಜರು ಪ್ರಕ್ರಿಯೆಗಾಗಿ ಆರೋಪಿಯನ್ನು ಸಿದ್ದಲಿಂಗಪುರಕ್ಕೆ ಕರೆದೊಯ್ದು ವಾಪಸ್ ಕರೆತರುತ್ತಿದ್ದಾಗ, ಮೇಟಗಳ್ಳಿ ಬಳಿ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎನ್ನಲಾಗಿದೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಮತ್ತೆ ವಶಕ್ಕೆ ಪಡೆದಿದ್ದರು.
ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ಮಂಡಿಸಿ, ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಸರಕಾರಿ ಅಭಿಯೋಜಕಿ ಕೆ.ಬಿ. ಜಯಂತಿ ವಾದ ಮಂಡಿಸಿದ್ದರು. ಇದೀಗ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಸಿನೆಮಾ
Rajinikanth-ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ತಲೈವಾ: ರಜಿನಿಕಾಂತ್ ನೋಡಲು ಮುಗಿಬಿದ್ದ ಅಭಿಮಾನಿಗಳು
‘ಧರ್ಮನ್’ ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಆಗಮಿಸಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಬುಧವಾರ (ಸೆ.30) ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ.
ಮೈಸೂರು: ‘ಧರ್ಮನ್’ ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಆಗಮಿಸಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಬುಧವಾರ (ಸೆ.30) ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ.
ಮೈಸೂರಿನ ಸುತ್ತಮುತ್ತ ‘ಧರ್ಮನ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ರಜಿನಿಕಾಂತ್ ಅವರು ನಗರದಲ್ಲಿರುವ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ʻತಲೈವಾʼನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಶೂಟಿಂಗ್ ಸ್ಥಳಗಳು ಹಾಗೂ ಅವರು ಭೇಟಿ ನೀಡುವ ಪ್ರದೇಶಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ.
ಚಾಮುಂಡೇಶ್ವರಿ ದೇವಾಲಯಕ್ಕೆ ರಜಿನಿಕಾಂತ್ ಭೇಟಿ ನೀಡಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಅವರನ್ನು ನೋಡಲು ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳನ್ನು ಕಂಡ ರಜಿನಿಕಾಂತ್ ಅವರು ಪ್ರೀತಿಯಿಂದ ಕೈಬೀಸಿ ಅಭಿಮಾನಿಗಳ ಖುಷಿಗೆ ಕಾರಣರಾದರು.
ಇದಕ್ಕೂ ಮುನ್ನ ಮಂಗಳವಾರ (ಸೆ.29) ಸೋಮನಾಥಪುರದಲ್ಲಿ ‘ಧರ್ಮನ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ನಟ ವಿಷ್ಣುವರ್ಧನ್ ಅವರ ಕುಟುಂಬದ ಸದಸ್ಯರು ರಜಿನಿಕಾಂತ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಕೆಲಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದ್ದು, ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಕರ್ನಾಟಕದಲ್ಲಿ ರಜಿನಿಕಾಂತ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಅವರು ರಾಜ್ಯಕ್ಕೆ ಆಗಮಿಸಿದಾಗಲೆಲ್ಲ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ದೊರೆಯುತ್ತದೆ. ಇದೀಗ ಮೈಸೂರಿನಲ್ಲಿ ನಡೆಯುತ್ತಿರುವ ‘ಧರ್ಮನ್’ ಚಿತ್ರದ ಚಿತ್ರೀಕರಣದ ಹಿನ್ನೆಲೆಯಲ್ಲಿ ತಲೈವಾ ನಗರದಲ್ಲಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿದೆ.
ರಜಿನಿಕಾಂತ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ‘ಜೈಲರ್-2’ ಕೂಡ ಸದ್ಯ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಕನ್ನಡದ ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ. ‘ಜೈಲರ್-2’ ಅಕ್ಟೋಬರ್ 15ರಂದು ತೆರೆಗೆ ಬರಲಿದೆ.
ಅಪರಾಧ
Case filed-ಪ್ರತಾಪ್ ಸಿಂಹ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲು
ದಲಿತ ಸಮುದಾಯ ಹಾಗೂ ಅವರ ಸಾಂಸ್ಕೃತಿಕ ಅಸ್ಮಿತೆಯಾದ ನೀಲಿ ಶಾಲನ್ನು ಅವಮಾನಿಸಲಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ಮೈಸೂರು, ಸೆ. 23: ದಲಿತ ಸಮುದಾಯ ಹಾಗೂ ಅವರ ಸಾಂಸ್ಕೃತಿಕ ಅಸ್ಮಿತೆಯಾದ ನೀಲಿ ಶಾಲನ್ನು ಅವಮಾನಿಸಲಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾ ಕಲಾ ಸಂಘದ ಅಧ್ಯಕ್ಷ ಮಧು ಕೆ.ಟಿ. ಅವರು ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರತಾಪ್ ಸಿಂಹ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ದೂರಿನಲ್ಲಿ ತಿಳಿಸಿರುವಂತೆ, ಸೆಪ್ಟೆಂಬರ್ 18ರಂದು ಟಿ.ನರಸೀಪುರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಪ್ರತಾಪ್ ಸಿಂಹ ನೂರಾರು ಜನರ ಸಮ್ಮುಖದಲ್ಲಿ ಮತ್ತು ಮಾಧ್ಯಮಗಳ ಕ್ಯಾಮೆರಾ-ಮೈಕ್ಗಳ ಮುಂದೆ ನಿಂತು ದಲಿತ ಸಮುದಾಯವನ್ನು ಹೀಯಾಳಿಸುವ ಮತ್ತು ಕೀಳಾಗಿ ಚಿತ್ರಿಸುವ ಉದ್ದೇಶದಿಂದ ಅತ್ಯಂತ ಅವಹೇಳನಕಾರಿ ಹಾಗೂ ನಿಂದನಾತ್ಮಕ ಭಾಷಣ ಮಾಡಿದ್ದಾರೆ.
ತಮ್ಮ ಭಾಷಣದಲ್ಲಿ ದಲಿತ ಸಮುದಾಯದ ಕಾರ್ಯಕರ್ತರನ್ನು ನೇರವಾಗಿ ಗುರಿಯಾಗಿಸಿ, “ನೀವು ಕೇವಲ ನೀಲಿ ಶಾಲು ಹೊದ್ದು ನಾವು ಏನೇ ಮಾಡಿದರೂ ಅಡ್ಡ ಬಂದು ನಿಲ್ಲುತ್ತೀರಿ. ನಿಮಗೆ ಅಂಬೇಡ್ಕರ್ ಅವರ ಬಗ್ಗೆ ಏನೂ ಗೊತ್ತಿಲ್ಲ. ಮೊದಲು ಅಂಬೇಡ್ಕರ್ ಓದಿ” ಎಂದು ಸಾರ್ವಜನಿಕವಾಗಿ ನಿಂದಿಸಿದ್ದಾರೆ. ಈ ಮೂಲಕ ದಲಿತ ಸಮುದಾಯದ ಸಾಂಸ್ಕೃತಿಕ ಅಸ್ಮಿತೆಯಾದ ನೀಲಿ ಶಾಲಿನ ಗೌರವವನ್ನು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಸಾರ್ವಜನಿಕವಾಗಿ ಹೀಯಾಳಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಆರೋಪಿತರು ಕೇವಲ ಒಂದು ರಾಜಕೀಯ ಪಕ್ಷದ ವಿರುದ್ಧ ಮಾತನಾಡುತ್ತಿಲ್ಲ. ಬದಲಿಗೆ ಶೋಷಿತರ ಹಕ್ಕುಗಳಿಗಾಗಿ ಹೋರಾಡುವ ದಲಿತ ಸಂಘಟನೆಯ ಪದಾಧಿಕಾರಿಗಳನ್ನು “ಹಣದ ಆಸೆಗಾಗಿ ಅಥವಾ ವೈಯಕ್ತಿಕ ಲಾಭಕ್ಕಾಗಿ ಹೋರಾಟ ಮಾಡುವವರು” ಎಂದು ಸಾರಾಸಗಟಾಗಿ ಸುಳ್ಳು ಆರೋಪ ಮಾಡಿದ್ದಾರೆ. ಇದು ಸಂಘಟನೆಯ ನೈತಿಕತೆಯನ್ನು ಸಾರ್ವಜನಿಕವಾಗಿ ಹತ್ಯೆ ಮಾಡುವ ಉದ್ದೇಶಪೂರ್ವಕ ಜಾತಿ ನಿಂದನೆ ಎಂದು ದೂರುದಾರರು ತಿಳಿಸಿದ್ದಾರೆ.
ಇದಲ್ಲದೆ, ಅವರು ಒಬ್ಬ ಪೊಲೀಸ್ ಅಧಿಕಾರಿಯ ಜಾತಿಯನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿ, “ನಿಮ್ಮ ಜಾತಿಯ ಅಧಿಕಾರಿ ಎಂಬ ಒಂದೇ ಕಾರಣಕ್ಕೆ ನೀವು ಅವರನ್ನು ಬೆಂಬಲಿಸುತ್ತೀರಿ ಮತ್ತು ರಕ್ಷಣೆಗೆ ನಿಲ್ಲುತ್ತೀರಿ. ಆತ ಒಬ್ಬ ಕ್ಷುಲ್ಲಕ, ಕಳಪೆ ವ್ಯಕ್ತಿತ್ವದ ಇನ್ಸ್ಪೆಕ್ಟರ್” ಎಂದು ಹೇಳುವ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ ಧನಂಜಯರನ್ನು ಜಾತಿ ಹೆಸರಿನಲ್ಲಿ ನಿಂದಿಸಿ, ಬೆದರಿಕೆ ಹಾಗೂ ತುಚ್ಛವಾಗಿ ಮಾತನಾಡಿದ್ದಾರೆ. ಆ ಮೂಲಕ ಸಾರ್ವಜನಿಕವಾಗಿ ಅಪಮಾನಗೊಳಿಸಿ, ಜಾತಿ ವ್ಯವಸ್ಥೆಯನ್ನು ಕೆರಳಿಸುವ ಮತ್ತು ಸಮಾಜದಲ್ಲಿ ವಿವಿಧ ಜಾತಿಗಳ ನಡುವೆ ತಾರತಮ್ಯ, ದ್ವೇಷ ಹಾಗೂ ನಾಗರಿಕ ಸಂಘರ್ಷದ ವಾತಾವರಣವನ್ನು ಸೃಷ್ಟಿಸುವ ತೀವ್ರ ಪ್ರಯತ್ನ ಮಾಡಿದ್ದಾರೆ ಎಂದು ದೂರಲಾಗಿದೆ.
ಈ ಇಡೀ ಕೃತ್ಯವು ಆಕಸ್ಮಿಕವಾಗಿ ನಡೆದದ್ದಲ್ಲ. ಮುಖ್ಯ ಆರೋಪಿತರು ಹಾಗೂ ಶೋಭಾ ಯಾತ್ರೆಯ ಮುಖ್ಯ ಆಯೋಜಕರು (ಸಹ ಆರೋಪಿಗಳು) ಒಟ್ಟಾಗಿ ಸೇರಿ, ಪಟ್ಟಣದ ಸಾಮಾಜಿಕ ಶಾಂತಿ ಮತ್ತು ಸೌಹಾರ್ದ ಕೆಡಿಸುವ ಹಾಗೂ ದಲಿತ ಸಮುದಾಯವನ್ನು ಸಾರ್ವಜನಿಕವಾಗಿ ಅಪಮಾನಿಸುವ ಉದ್ದೇಶದಿಂದಲೇ ಮೊದಲೇ ಯೋಜಿತ ಸಂಚು ರೂಪಿಸಿ ಈ ವೇದಿಕೆಯನ್ನು ಬಳಸಿಕೊಂಡಿದ್ದಾರೆ. ಪ್ರಚೋದನಾತ್ಮಕ ಹೇಳಿಕೆ ನೀಡಲು ಮುಕ್ತವಾಗಿ ಅವಕಾಶ ಮಾಡಿಕೊಟ್ಟು, ಅದಕ್ಕೆ ಕುಮ್ಮಕ್ಕು ನೀಡಿ ಸಹಕರಿಸಿರುವ ಆಯೋಜಕರು ಸಹ ಈ ಅಪರಾಧದಲ್ಲಿ ಸಮಾನ ಭಾಗಿಗಳು ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೈಸೂರು
Pramodadevi-ದಸರಾ ವೇಳೆ ಕಂಬಳ ಆಯೋಜನೆ ಅಗತ್ಯವಿಲ್ಲ; ಕರಾವಳಿಯ ಕ್ರೀಡೆಗೆ ಪ್ರತ್ಯೇಕ ಮಹತ್ವ ಸಿಗಲಿ: ಪ್ರಮೋದಾದೇವಿ
ದಸರಾ ಉತ್ಸವದ ಭಾಗವಾಗಿ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳವನ್ನು ಆಯೋಜಿಸುವ ಅಗತ್ಯವಿರಲಿಲ್ಲ ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.
ಮೈಸೂರು: ದಸರಾ ಉತ್ಸವದ ಭಾಗವಾಗಿ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳವನ್ನು ಆಯೋಜಿಸುವ ಅಗತ್ಯವಿರಲಿಲ್ಲ ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.
ಕಂಬಳಕ್ಕೆ ಕರಾವಳಿ ಭಾಗದಲ್ಲಿ ತನ್ನದೇ ಆದ ವಿಶಿಷ್ಟ ಪರಂಪರೆ ಹಾಗೂ ಮಹತ್ವವಿದೆ. ಹೀಗಾಗಿ ದಸರಾ ಉತ್ಸವದೊಂದಿಗೆ ಕಂಬಳವನ್ನು ಸೇರಿಸುವುದು ಸೂಕ್ತವಲ್ಲ ಎಂಬುದು ತಮ್ಮ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ.
ಕಂಬಳವನ್ನು ಪ್ರತ್ಯೇಕವಾಗಿ ಆಯೋಜಿಸಿದರೆ ಕ್ರೀಡೆಗೆ ಇನ್ನಷ್ಟು ಮಹತ್ವ ಹಾಗೂ ಗಮನ ಸಿಗಲಿದೆ. ಆದರೆ ದಸರಾ ಉತ್ಸವದ ಭಾಗವಾಗಿ ಆಯೋಜಿಸಿದರೆ ಕಂಬಳಕ್ಕೆ ಸಿಗಬೇಕಾದ ಪ್ರತ್ಯೇಕ ಗಮನ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಪ್ರಮೋದಾದೇವಿ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.
-
ನಿಧನ ವಾರ್ತೆ7 hours agoPuttur-ಮುಕ್ರಂಪಾಡಿಯಲ್ಲಿ ಸ್ಕೂಟರ್–ರಿಕ್ಷಾ ಡಿಕ್ಕಿ: ಪುತ್ತೂರು ಅಂಚೆ ಇಲಾಖೆ ಮಹಿಳಾ ಸಿಬ್ಬಂದಿ ಮೃತ್ಯು
-
ಶಿಕ್ಷಣ23 hours agoVidyamata Academy-ವಿದ್ಯಾಮಾತಾ ಅಕಾಡೆಮಿಯಲ್ಲಿ ಮೂರು ದಿನಗಳ “ವಾಯ್ಸ್ ಅಂಡ್ ವಿಷನ್” ತರಬೇತಿ ಕಾರ್ಯಕ್ರಮ ಮತ್ತು ಶಾರದಾ ಪೂಜೆ
-
ಅಪರಾಧ7 hours agoHigh Court-ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ: ಭರತ್ ಕುಮ್ಡೇಲ್ ಸೇರಿ 8 ಆರೋಪಿಗಳ ಜಾಮೀನಿಗೆ ಹೈಕೋರ್ಟ್ ತಡೆ
-
ಸ್ಥಳೀಯ7 hours agoKumara Parvata-ಅ.18ರಿಂದ ಕುಮಾರ ಪರ್ವತ ಚಾರಣಕ್ಕೆ ಅನುಮತಿ
-
Uncategorized23 hours agoHYDGEN Innovation Day-HYDGEN ಇನ್ನೋವೇಶನ್ ಡೇ 2026 ಕಾರ್ಯಕ್ರಮ; ಮಂಗಳೂರಿನಲ್ಲಿ 20 ಮೆಗಾವ್ಯಾಟ್ (MW) ಸಾಮರ್ಥ್ಯದ ಎಲೆಕ್ಟ್ರೋಲೈಸರ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದ HYDGEN; 250 ಕಿಲೋವ್ಯಾಟ್ (kW) ಸಾಮರ್ಥ್ಯದ AEM ಮತ್ತು PEM ಎಲೆಕ್ಟ್ರೋಲೈಸರ್ಗಳ ಅನಾವರಣ
-
Uncategorized23 hours agoPhilomena-ವಿಶ್ವವಿದ್ಯಾನಿಲಯ ಮಟ್ಟದ ಯೂತ್ ರೆಡ್ಕ್ರಾಸ್ ಪ್ರೇರಣಾ ಶಿಬಿರ-2026: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಗರಿ
-
ಮಂಗಳೂರು2 hours agoMRPL explosion-Big Breaking: MRPL ಸ್ಫೋಟ : ತೀವ್ರ ಗಾಯಗೊಂಡಿದ್ದ ರಾಜೇಶ್ ನಿಧನ : ಮನೀಶ್ ಕರ್ಕಡ ಕುಟುಂಬಕ್ಕೆ ನೀಡಿದ ಪರಿಹಾರದಷ್ಟೇ ನೀಡುವಂತೆ ಒತ್ತಾಯ
-
ಶಿಕ್ಷಣ23 hours agoVivekananda-ವಿವೇಕಾನಂದ ಕಾಲೇಜಿನಲ್ಲಿ ವಂದೇ ಮಾತರಂ 150ನೇ ವರ್ಷದ ಆಚರಣೆ; ವಂದೇ ಮಾತರಂ ಗೀತೆ ನಮ್ಮ ಅಸ್ಮಿತೆಯ ಗುರುತು : ರಾಜೇಶ ಪದ್ಮಾರ್


















