Connect with us

ಮಂಗಳೂರು

Mangalore Dasara-ಮಂಗಳೂರು ದಸರಾ ಶೋಭಾಯಾತ್ರೆಗೆ ಕ್ಷಣಗಣನೆ: 50ಕ್ಕೂ ಅಧಿಕ ಸ್ತಬ್ಧಚಿತ್ರ, 20ಕ್ಕೂ ಹೆಚ್ಚು ಕಲಾತಂಡಗಳ ವೈಭವ..!

Published

on



Ad Widget

Ad Widget

Ad Widget

Ad Widget

ಕರಾವಳಿಯ ಪ್ರಸಿದ್ಧ ಮಂಗಳೂರು ದಸರಾ ಮಹೋತ್ಸವದ ಅದ್ಧೂರಿ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 21ರಂದು ನಡೆಯಲಿರುವ ಈ ವೈಭವದ ಮೆರವಣಿಗೆಗೆ 50ಕ್ಕೂ ಅಧಿಕ ಸ್ತಬ್ಧಚಿತ್ರಗಳು, ವಿವಿಧ ಜಿಲ್ಲೆಗಳ 20ಕ್ಕೂ ಹೆಚ್ಚು ಜಾನಪದ ಕಲಾತಂಡಗಳು, ಹುಲಿವೇಷ ತಂಡಗಳು ಹಾಗೂ ನಾಸಿಕ್ ಬ್ಯಾಂಡ್‌ಗಳು ಸಜ್ಜಾಗಿವೆ. ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ನಗರದಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ.

Ad Widget

Ad Widget

Ad Widget

Ad Widget

ಮಂಗಳೂರು, ಅ. 20: ಕರಾವಳಿಯ ಪ್ರಸಿದ್ಧ ಮಂಗಳೂರು ದಸರಾ ಮಹೋತ್ಸವದ ಅದ್ಧೂರಿ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 21ರಂದು ನಡೆಯಲಿರುವ ಈ ವೈಭವದ ಮೆರವಣಿಗೆಗೆ 50ಕ್ಕೂ ಅಧಿಕ ಸ್ತಬ್ಧಚಿತ್ರಗಳು, ವಿವಿಧ ಜಿಲ್ಲೆಗಳ 20ಕ್ಕೂ ಹೆಚ್ಚು ಜಾನಪದ ಕಲಾತಂಡಗಳು, ಹುಲಿವೇಷ ತಂಡಗಳು ಹಾಗೂ ನಾಸಿಕ್ ಬ್ಯಾಂಡ್‌ಗಳು ಸಜ್ಜಾಗಿವೆ. ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ನಗರದಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ.

Ad Widget

Ad Widget

Ad Widget alt="Ad Widget"/>

Ad Widget

ಮಂಗಳೂರು ದಸರಾ ಕೇವಲ ಧಾರ್ಮಿಕ ಉತ್ಸವವಲ್ಲ, ಕರಾವಳಿಯ ಸಾಂಸ್ಕೃತಿಕ ವೈಭವ, ಕಲಾಪರಂಪರೆ, ಭಕ್ತಿ ಮತ್ತು ಸೌಹಾರ್ದದ ಪ್ರತೀಕವಾಗಿದೆ. ವಿವಿಧ ಸಂಘ-ಸಂಸ್ಥೆಗಳು ತಿಂಗಳುಗಳ ಪರಿಶ್ರಮದಿಂದ ಸಿದ್ಧಪಡಿಸಿರುವ ಪೌರಾಣಿಕ, ಜಾನಪದ ಹಾಗೂ ವಿನೂತನ ಪರಿಕಲ್ಪನೆಗಳ ಸ್ತಬ್ಧಚಿತ್ರಗಳು ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಗಲಿವೆ.

Ad Widget

Ad Widget <> Ad Widget

ವೈವಿಧ್ಯಮಯ ಸ್ತಬ್ಧಚಿತ್ರಗಳ ಆಕರ್ಷಣೆ
ಮಂಗಳೂರು ದಸರಾ ಮಹೋತ್ಸವದಲ್ಲಿ ಮೊದಲ ಮರ್ಯಾದೆಯ ತಂಡವೆಂಬ ಹೆಗ್ಗಳಿಕೆ ಹೊಂದಿರುವ ಮಂಜಲ್ ಬೈಲ್ ಫ್ರೆಂಡ್ಸ್, ತನ್ನ 76ನೇ ವರ್ಷದ ಸಂಭ್ರಮದಲ್ಲಿ ಹುಲಿವೇಷದ ಸ್ತಬ್ಧಚಿತ್ರದೊಂದಿಗೆ ಭಾಗವಹಿಸಲಿದೆ. ಕಾಳಿಚರಣ್ ಫ್ರೆಂಡ್ಸ್ ಶಾರದಾ ದೇವಿ ಹಾಗೂ ಹುಲಿವೇಷದ ಸ್ತಬ್ಧಚಿತ್ರವನ್ನು ಪ್ರದರ್ಶಿಸಿದರೆ, ಬರ್ಕೆ ಫ್ರೆಂಡ್ಸ್ ಕೇರಳದ ಸಾಂಸ್ಕೃತಿಕ ನೃತ್ಯ, ಶಾರದಾ ಸ್ತಬ್ಧಚಿತ್ರ ಮತ್ತು ನಾಸಿಕ್ ಬ್ಯಾಂಡ್‌ನೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ.



Ad Widget

ಶಿವ ಫ್ರೆಂಡ್ಸ್ ದುರ್ಗಾದೇವಿಯ ದೃಶ್ಯರೂಪಕ, ಜೂನಿಯರ್ ಬಾಯ್ಸ್ ಗುಬ್ಬಿ ಕುಣಿತ ಹಾಗೂ ಯುವ ಸಂಗಮ್ ಶಾರದಾ ಮಾತೆ ಮತ್ತು ಹುಲಿವೇಷದ ಸ್ತಬ್ಧಚಿತ್ರದ ಮೂಲಕ ಗಮನ ಸೆಳೆಯಲಿವೆ. ಓಂ ಸಾಯಿ ಫ್ರೆಂಡ್ಸ್ ನಾಗಕನ್ನಿಕೆಯ ಸ್ತಬ್ಧಚಿತ್ರವನ್ನು, ಪದುವಾ ಫ್ರೆಂಡ್ಸ್ ರಾಘವೇಂದ್ರ ಸ್ವಾಮಿಯ ರೂಪಕದೊಂದಿಗೆ ದೇವಾಲಯಗಳ ಮಾಹಿತಿಯನ್ನು ಒಳಗೊಂಡ ಎಲ್‌ಇಡಿ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲಿದೆ.

Ad Widget

Ad Widget

ಬಿರುವೆರ್ ಕುಡ್ಲ ತಂಡದ ಕಾರ್ನಿವಲ್, ಜಂಗಲ್ ಸಫಾರಿ, ಶಾರದಾ ಮಾತೆ ಹಾಗೂ ಹುಲಿವೇಷವನ್ನು ಬಿಂಬಿಸುವ ನಾಲ್ಕು ಸ್ತಬ್ಧಚಿತ್ರಗಳು ವಿಶೇಷ ಆಕರ್ಷಣೆಯಾಗಲಿವೆ.

ಬಲ್ಲಾಳ್ ಭಾಗ್ ಫ್ರೆಂಡ್ಸ್, ಗ್ರೀನ್ ಪಾರ್ಕ್ ಫ್ರೆಂಡ್ಸ್, ಸತ್ಯಸಾರಾಮಣಿ ವಿವೇಕ್ ಟೈಗರ್ಸ್, ಬಲಿಪೆ ಫ್ರೆಂಡ್ಸ್, ತುಳುನಾಡ ಬಿರುವೆರ್, ಜವನೆರ್ ಕುಡ್ಲ, ಕುಡ್ಲ ಫ್ರೆಂಡ್ಸ್, ರೈಸಿಂಗ್ ಫ್ರೆಂಡ್ಸ್, ಟೀಮ್ ಅವತಾರ್ ಹಾಗೂ ಕಾಲಭೈರವ ಫ್ರೆಂಡ್ಸ್ ಸೇರಿದಂತೆ ಹಲವು ತಂಡಗಳು ವಿಭಿನ್ನ ವಿನ್ಯಾಸದ ಹುಲಿವೇಷದ ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ.

ಟೀಮ್ ತಾಂಡವದ ಶಿವನ ರೂಪಕ, ಕುಡ್ಲ ಕುಲಾಲೆರ್ ಚಾರಿಟೆಬಲ್ ಸೇವಾ ಟ್ರಸ್ಟ್‌ನ ಸ್ತಬ್ಧಚಿತ್ರ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಶಕ್ತಿಯ ದೇವರ ಮೂರ್ತಿಯ ಸ್ತಬ್ಧಚಿತ್ರವೂ ಮೆರವಣಿಗೆಯಲ್ಲಿ ಗಮನ ಸೆಳೆಯಲಿವೆ.

ಕುಡ್ಲ ಬ್ರದರ್ಸ್ ತಂಡವು ಕೃಷ್ಣಲೀಲೆಯನ್ನು ಬಿಂಬಿಸುವ ವಿನೂತನ ದೃಶ್ಯರೂಪಕದೊಂದಿಗೆ ಕೇರಳದ ವಯಲಿನ್ ಸಂಗೀತದ ವೈಶಿಷ್ಟ್ಯವನ್ನು ಪರಿಚಯಿಸುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಿದೆ. ಬಲಿಪೆ ಫ್ರೆಂಡ್ಸ್ ಹಾಗೂ ತುಳುನಾಡ ಬಿರುವೆರ್ ತಂಡಗಳು ಕೂಡ ಹುಲಿವೇಷದ ಸ್ತಬ್ಧಚಿತ್ರಗಳೊಂದಿಗೆ ಭಾಗವಹಿಸಲಿವೆ.

ಭಕ್ತಿ, ಕಲೆ ಮತ್ತು ಸಂಸ್ಕೃತಿಯ ಸಂಗಮ
ತಿಂಗಳುಗಳ ಪರಿಶ್ರಮದಲ್ಲಿ ಸಿದ್ಧಗೊಂಡಿರುವ ಸ್ತಬ್ಧಚಿತ್ರಗಳು, ಜಾನಪದ ನೃತ್ಯಗಳು, ಹುಲಿವೇಷಗಳು ಹಾಗೂ ವಿವಿಧ ವಾದ್ಯಗಳ ನಿನಾದದೊಂದಿಗೆ ಮಂಗಳೂರು ದಸರಾ ಶೋಭಾಯಾತ್ರೆ ಭಕ್ತಿ, ಪರಂಪರೆ ಮತ್ತು ಸೃಜನಶೀಲತೆಯ ಅದ್ಭುತ ಸಂಗಮವಾಗಿ ಮೂಡಿಬರಲಿದೆ. ಈ ವೈಭವವನ್ನು ಕಣ್ತುಂಬಿಕೊಳ್ಳಲು ಮಂಗಳೂರು ನಗರ ಸಜ್ಜಾಗಿದೆ.

ಈ ಕುರಿತು ಮಾತನಾಡಿದ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., “ಮಂಗಳೂರು ದಸರಾ ಮಹೋತ್ಸವದ ವೈಭವದ ಶೋಭಾಯಾತ್ರೆಯಲ್ಲಿ 50ಕ್ಕೂ ಅಧಿಕ ಸ್ತಬ್ಧಚಿತ್ರಗಳು, ವಿವಿಧ ಜಿಲ್ಲೆಗಳ 20ಕ್ಕೂ ಹೆಚ್ಚು ಕಲಾತಂಡಗಳು, ಬ್ಯಾಂಡ್ ಹಾಗೂ ಸಂಗೀತ ತಂಡಗಳು ಜನಮನಸೂರೆಗೊಳ್ಳಲಿವೆ. ಈ ಬಾರಿಯೂ ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ದಸರಾ ಮಹೋತ್ಸವಕ್ಕೆ ಆಗಮಿಸುವ ಸಾಧ್ಯತೆಯಿದೆ” ಎಂದು ತಿಳಿಸಿದ್ದಾರೆ.

Ad Widget
Click to comment

Leave a Reply

ಮಂಗಳೂರು

Mangalore-ಮಂಗಳೂರು ಜಿಲ್ಲಾ ಕುಸ್ತಿ ಸಂಘದ ಸಮಿತಿ ಪುನರ್ ರಚನೆ; ಅಧ್ಯಕ್ಷರಾಗಿ ಸುಜಿತ್ ರೈ ಪಾಲ್ತಾಡ್, ಉಪಾಧ್ಯಕ್ಷರಾಗಿ ರಾಮದಾಸ್ ಶೆಟ್ಟಿ ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ ದೇಲಂತಿಮಾರ್

Published

on



Ad Widget

Ad Widget

Ad Widget

Ad Widget

ರಾಜ್ಯದಲ್ಲಿ ಕುಸ್ತಿ ಕ್ರೀಡೆಯ ಅಭಿವೃದ್ಧಿ, ಪ್ರತಿಭಾವಂತ ಕುಸ್ತಿಪಟುಗಳಿಗೆ ಪ್ರೋತ್ಸಾಹ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಸಾಧನೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರು ಮತ್ತೊಮ್ಮೆ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಚುಕ್ಕಾಣಿ ಹಿಡಿದಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ರಾಜ್ಯದಲ್ಲಿ ಕುಸ್ತಿ ಕ್ರೀಡೆಯ ಅಭಿವೃದ್ಧಿ, ಪ್ರತಿಭಾವಂತ ಕುಸ್ತಿಪಟುಗಳಿಗೆ ಪ್ರೋತ್ಸಾಹ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಸಾಧನೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರು ಮತ್ತೊಮ್ಮೆ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಚುಕ್ಕಾಣಿ ಹಿಡಿದಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ರವರ ಮಾರ್ಗದರ್ಶನದಲ್ಲಿ ಮಂಗಳೂರು ಕುಸ್ತಿ ಸಂಘ( ರಿ.) 2026–2030ನೇ ಸಾಲಿನ ಜಿಲ್ಲಾ ಆಡಳಿತ ಮಂಡಳಿಯ ಸಮಿತಿಯನ್ನು ಪುನರ್ ರಚಿಸಲಾಗಿದೆ.

Ad Widget

Ad Widget <> Ad Widget

ಅಧ್ಯಕ್ಷರಾಗಿ ಸುಜಿತ್ ರೈ ಪಾಲ್ತಾಡ್, ಉಪಾಧ್ಯಕ್ಷರಾಗಿ ರಾಮದಾಸ್ ಶೆಟ್ಟಿ ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ, ಖಜಾಂಚಿಯಾಗಿ ವಿಕಾಸ್ ಶೆಟ್ಟಿ, ಜಂಟಿ ಕಾರ್ಯದರ್ಶಿಗಳಾಗಿ ಸಮರ್ಥ್ ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ದೀಪ್ತಿ ಶೆಟ್ಟಿ, ಗೋಕುಲ್ ದಾಸ್ ಭಂಡಾರಿ ಮತ್ತು ಇತರರು ಆಯ್ಕೆಯಾಗಿದ್ದಾರೆ.



Ad Widget

ವರ್ಷಂಪ್ರತಿ ಮಂಗಳೂರಿನಲ್ಲಿ ನಡೆಯುವ ತಪಸ್ಯ ಬೀಚ್ ಫೆಸ್ಟಿವಲ್‌ನಲ್ಲಿ ರಾಜ್ಯ ಮಟ್ಟದ ಬೀಚ್ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಿ ಯಶಸ್ವಿಗೊಳಿಸುವಲ್ಲಿ ಮಂಗಳೂರು ಕುಸ್ತಿ ಸಂಘದ ಪದಾಧಿಕಾರಿಗಳು ಪ್ರಮುಖ ಪಾತ್ರ ವಹಿಸಿದ್ದರು.

Ad Widget

Ad Widget

ಈ ಸಂದರ್ಭದಲ್ಲಿ ಮಂಗಳೂರು ಕುಸ್ತಿ ಸಂಘ( ರಿ.) ಇದರ ಅಧ್ಯಕ್ಷರಾಗಿ ಆಯ್ಕೆಯಾದ ಸುಜಿತ್ ರೈ ಮಾತನಾಡಿ ನಮ್ಮ ಜಿಲ್ಲಯ ಕುಸ್ತಿ ಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಅವರನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಳೆಸುವ ಆಶಯ ವ್ಯಕ್ತ ಪಡಿಸಿದರು.

Ad Widget
Continue Reading

ಮಂಗಳೂರು

Mogaveera Pattanna-ಉಳ್ಳಾಲ ಮೊಗವೀರ ಪಟ್ಟಣ್ಣ ಶಾರದೋತ್ಸವ: ಬಾಂಡ್ ನೀಡಲು ಸ್ತಬ್ಧಚಿತ್ರ ಸಂಘಟಕರ ಹಿಂದೇಟು; ಪೊಲೀಸರಿಂದ ಕಟ್ಟುನಿಟ್ಟಿನ ಎಚ್ಚರಿಕೆ..!

Published

on



Ad Widget

Ad Widget

Ad Widget

Ad Widget

ಉಳ್ಳಾಲದ ಮೊಗವೀರಪಟ್ನದಲ್ಲಿ ನಡೆಯಲಿರುವ ಶಾರದೋತ್ಸವದ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಕಳೆದ ವರ್ಷ ಮೆರವಣಿಗೆಯ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ, ಈ ಬಾರಿ ಸ್ತಬ್ಧಚಿತ್ರಗಳ ಸಂಘಟಕರು ಪೊಲೀಸ್ ಇಲಾಖೆಗೆ ಬಾಂಡ್ ಸಲ್ಲಿಸುವಂತೆ ಸೂಚಿಸಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು, ಅ. 20: ಉಳ್ಳಾಲದ ಮೊಗವೀರಪಟ್ನದಲ್ಲಿ ನಡೆಯಲಿರುವ ಶಾರದೋತ್ಸವದ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಕಳೆದ ವರ್ಷ ಮೆರವಣಿಗೆಯ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ, ಈ ಬಾರಿ ಸ್ತಬ್ಧಚಿತ್ರಗಳ ಸಂಘಟಕರು ಪೊಲೀಸ್ ಇಲಾಖೆಗೆ ಬಾಂಡ್ ಸಲ್ಲಿಸುವಂತೆ ಸೂಚಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ವಿವಿಧ ಸ್ತಬ್ಧಚಿತ್ರಗಳ ಸಂಘಟಕರಿಂದ ಪ್ರತ್ಯೇಕವಾಗಿ ಮುಚ್ಚಳಿಕೆ ಬರೆಸಿಕೊಳ್ಳಲು ಪೊಲೀಸರು ಆರಂಭದಲ್ಲಿ ಮನವಿ ಮಾಡಿದ್ದರು. ಬಳಿಕ ಸಂಘಟಕರು ಪೊಲೀಸ್ ಆಯುಕ್ತರ ಕಚೇರಿಯನ್ನು ಸಂಪರ್ಕಿಸಿ, ಎಲ್ಲ ಸಂಘಟಕರ ಪರವಾಗಿ ಒಂದೇ ಮುಚ್ಚಳಿಕೆಯನ್ನು ಸ್ವೀಕರಿಸುವಂತೆ ಕೋರಿದ್ದರು. ಇದಕ್ಕೆ ಪೊಲೀಸರು ಸಮ್ಮತಿಸಿ, ಒಂದೇ ಮುಚ್ಚಳಿಕೆ ಸಲ್ಲಿಸುವಂತೆ ಸೂಚಿಸಿದ್ದರು.

Ad Widget

Ad Widget <> Ad Widget

ಆದರೆ, ಬಳಿಕ ಸಂಘಟಕರು ಯಾವುದೇ ಮುಚ್ಚಳಿಕೆ ಸಲ್ಲಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ತಮ್ಮ ಇಚ್ಛೆಯಂತೆ ಮೆರವಣಿಗೆ ನಡೆಸುವುದಾಗಿ ತಿಳಿಸಿರುವುದು ಪೊಲೀಸ್ ಇಲಾಖೆಯೊಂದಿಗೆ ಸಂಘರ್ಷದ ವಾತಾವರಣ ನಿರ್ಮಾಣವಾಗುವ ಆತಂಕಕ್ಕೆ ಕಾರಣವಾಗಿದೆ.



Ad Widget

ಈ ಕುರಿತು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ಪೊಲೀಸರು ಇದುವರೆಗೆ ಅತ್ಯಂತ ಸಂಯಮದಿಂದ ವರ್ತಿಸಿದ್ದಾರೆ. ಸಂಘಟಕರ ಸಹಕಾರ ಪಡೆಯಲು ಸೌಹಾರ್ದಯುತ ಪ್ರಯತ್ನಗಳನ್ನೂ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

Ad Widget

Ad Widget

ಬಾಂಡ್ ಪಡೆಯುವ ಕ್ರಮವು ಯಾವುದೇ ಧಾರ್ಮಿಕ ಅಥವಾ ಸಾಂಸ್ಕೃತಿಕ ಮೆರವಣಿಗೆಗೆ ಅಡ್ಡಿಪಡಿಸುವ ಉದ್ದೇಶ ಹೊಂದಿಲ್ಲ. ಬದಲಾಗಿ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಖಚಿತಪಡಿಸುವುದೇ ಇದರ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಯಾವುದೇ ವ್ಯಕ್ತಿ ಅಥವಾ ಗುಂಪು ಕಾನೂನು ಉಲ್ಲಂಘಿಸುವ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ಮೆರವಣಿಗೆ ನಡೆಸಲು ಮುಂದಾದರೆ, ಪರಿಸ್ಥಿತಿಗೆ ಅನುಗುಣವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸಂಘಟಕರಿಗೂ ತಿಳಿಸಲಾಗಿದ್ದು, ಶಾರದಾ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಲು ಸಹಕರಿಸುವಂತೆ ಸೂಚಿಸಲಾಗಿದೆ.

Ad Widget
Continue Reading

ಮಂಗಳೂರು

Boliyaar-ಬೋಳಿಯಾರಿನಲ್ಲಿ ಇಬ್ಬರು ಯುವಕರ ಸಾವು ಪ್ರಕರಣಕ್ಕೆ ಟ್ವಿಸ್ಟ್‌ | ಸ್ಕೂಟರ್‌ ಬೆನ್ನಟ್ಟಿಕೊಂಡು ಬಂದು ಪಿಕಪ್‌ ಡಿಕ್ಕಿ ಹೊಡೆದು ಕೊಲೆ ದೂರು – ಪ್ರಕರಣ ದಾಖಲು

Published

on



Ad Widget

Ad Widget

Ad Widget

Ad Widget

ಉಳ್ಳಾಲ ತಾಲೂಕಿನ ಬೋಳಿಯಾರಿನ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್‌ ಸಮೀಪ ಸ್ಕೂಟರ್‌ಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು, ಅ. 20: ಉಳ್ಳಾಲ ತಾಲೂಕಿನ ಬೋಳಿಯಾರಿನ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್‌ ಸಮೀಪ ಸ್ಕೂಟರ್‌ಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

“ಘಟನೆಯ ಸಂದರ್ಭಗಳನ್ನು ಗಮನಿಸಿದರೆ ಇದು ಕೊಲೆಯಂತೆ ಕಾಣುತ್ತದೆ. ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ವಿವರವಾದ ತನಿಖೆಯಿಂದ ಎಲ್ಲ ಸತ್ಯಾಂಶಗಳು ಹೊರಬರಲಿವೆ” ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

Ad Widget

Ad Widget <> Ad Widget

ಮೃತರನ್ನು ಉಳ್ಳಾಲ ತಾಲೂಕಿನ ಕಿನ್ನಾ ಗ್ರಾಮದ ಮೊಹಮ್ಮದ್ ಝುನೈದ್ (23) ಮತ್ತು ಅವರ ಸ್ನೇಹಿತ ಮೊಹಮ್ಮದ್ ಅಫ್ರಾಝ್ (23) ಎಂದು ಗುರುತಿಸಲಾಗಿದೆ.



Ad Widget

ಮೃತ ಝುನೈದ್ ಅವರ ತಂದೆ ಇಸ್ಮಾಯಿಲ್ ನೀಡಿದ ದೂರಿನ ಪ್ರಕಾರ, ಅ. 19ರಂದು ಮಧ್ಯಾಹ್ನ 1.30ರ ಸುಮಾರಿಗೆ ಝುನೈದ್ ತನ್ನ ಸ್ನೇಹಿತ ಅಫ್ರಾಝ್ ಜತೆ ಸ್ಕೂಟರ್‌ನಲ್ಲಿ ಮನೆಯಿಂದ ಹೊರಟಿದ್ದರು. ಸಂಜೆ 5 ಗಂಟೆಯ ಸುಮಾರಿಗೆ ಬೋಳಿಯಾರಿನ ಪೆಟ್ರೋಲ್ ಪಂಪ್ ಬಳಿ ಅಪಘಾತ ಸಂಭವಿಸಿದ್ದು, ಝುನೈದ್ ಅವರನ್ನು ಕಣಚೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಸಂಜೆ 6.55ರ ವೇಳೆಗೆ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅಫ್ರಾಝ್ ಅವರು ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಕುಟುಂಬಕ್ಕೆ ಮಾಹಿತಿ ಲಭಿಸಿತ್ತು.

Ad Widget

Ad Widget

ಘಟನಾ ಸ್ಥಳಕ್ಕೆ ತೆರಳಿದಾಗ ಸ್ಕೂಟರ್ ಜಖಂಗೊಂಡ ಸ್ಥಿತಿಯಲ್ಲಿ ಬಿದ್ದಿದ್ದು, ಸಮೀಪದ ವಿದ್ಯುತ್ ಕಂಬ ಮುರಿದು ಬಿದ್ದಿತ್ತು. ಮತ್ತೊಂದು ಬದಿಯಲ್ಲಿ ನಿಂತಿದ್ದ ಪಿಕಪ್ ವಾಹನದ ಮುಂಭಾಗದ ಬಂಪರ್ ಮತ್ತು ಮಡ್‌ಗಾರ್ಡ್ ಹಾನಿಗೊಂಡಿದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಂತಡ್ಕ ಕ್ರಾಸ್‌ನಲ್ಲಿ ಜಗಳದ ಆರೋಪ
ದೂರಿನ ಪ್ರಕಾರ, ಅಪಘಾತಕ್ಕೂ ಮೊದಲು ರಂತಡ್ಕ ಕ್ರಾಸ್ ಬಳಿ ಝುನೈದ್ ಮತ್ತು ಅಫ್ರಾಝ್ ಹಾಗೂ ಸ್ಥಳೀಯ ನಿವಾಸಿ, ಪಿಕಪ್ ಚಾಲಕ ಹಫೀಜ್ ಅಲಿಯಾಸ್ ಅಪ್ಪಿ ನಡುವೆ ಯಾವುದೋ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಜಗಳವಾಗಿತ್ತು ಎಂದು ಸ್ಥಳೀಯರಿಂದ ತಿಳಿದುಬಂದಿದೆ.

ಬಳಿಕ ಇಬ್ಬರೂ ಸ್ಕೂಟರ್‌ನಲ್ಲಿ ಮುಡಿಪು ಕಡೆಗೆ ತೆರಳಿದಾಗ, ಹಫೀಜ್ ಪಿಕಪ್ ವಾಹನದಲ್ಲಿ ಅವರನ್ನು ಹಿಂಬಾಲಿಸಿಕೊಂಡು ಹೋಗಿ, ಬೋಳಿಯಾರಿನ ಪೆಟ್ರೋಲ್ ಪಂಪ್ ಬಳಿ ಉದ್ದೇಶಪೂರ್ವಕವಾಗಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಇಬ್ಬರೂ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಬಳಿಕ ಆರೋಪಿ ಪಿಕಪ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಮೃತನ ತಂದೆ ಆರೋಪಿಸಿದ್ದಾರೆ.

ಆರೋಪಿ ಹಫೀಜ್ ಅಲಿಯಾಸ್ ಅಪ್ಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಂದೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಘಟನೆಯ ನೈಜ ಕಾರಣ, ಜಗಳಕ್ಕೂ ಅಪಘಾತಕ್ಕೂ ಇರುವ ಸಂಬಂಧ ಹಾಗೂ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ. ಪೊಲೀಸ್ ತನಿಖೆಯ ಬಳಿಕವೇ ಪ್ರಕರಣದ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading